Friday, April 10, 2026
Friday, April 10, 2026
Home Blog Page 658

Veerashaiva Mahasabha ಹೊಳಲೂರು ಸಾರ್ವಜನಿಕ ಆಸ್ಪತ್ರೆಯನ್ನ ಮೇಲ್ದರ್ಜೆಗೇರಿಸಲು ಒತ್ತಾಯ

0

Veerashaiva Mahasabha ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾ ಸಭಾದ ಪ್ರಮುಖರಾದ ಕೆ.ಜಿ.ನಿಂಗಪ್ಪ ದೂರಿದ್ದಾರೆ.

ಆರೋಗ್ಯ ಕೇಂದ್ರ ಶಿವಮೊಗ್ಗ- ದಾವಣಗೆರೆ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿದೆ. ಹೊಳಲೂರು ಬಳಿ ತುಂಗಾ-ಭದ್ರಾನದಿಗೆ ಸೇತುವೆ ನಿರ್ಮಾಣ ಆಗಿರುವುದರಿಂದ ಈ ಆಸ್ಪತ್ರೆಗೆ ಹೊನ್ನಾಳಿ, ಭದ್ರಾವತಿ, ಚನ್ನಗಿರಿ, ಈ ತಾಲ್ಲೂಕುಗಳ ಹಲವಾರು ಗ್ರಾಮಗಳ ರೋಗಿಗಳು ಆಗಮಿಸುತ್ತಿದ್ದಾರೆ. ಇಲ್ಲಿನ ಸಿಬ್ಬಂದಿ ವರ್ಗ ಇರುವ ಸೀಮಿತ ಸೌಲಭ್ಯಗಳಿಂದ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ದರಿಂದ, ಇದನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Veerashaiva Mahasabha 30 ಹಾಸಿಗೆ ಆಸ್ಪತ್ರೆಯಿಂದ 50 ಹಾಸಿಗೆಗೆ ಮೇಲ್ದರ್ಜೆಯನ್ನಾಗಿ ಏರಿಸಬೇಕು. ಟ್ಯೂಮಾಸೆಂಟರ್ ಮತ್ತು ಬ್ಲಡ್ ಬ್ಯಾಂಕ್ ನಿರ್ಮಾಣ ಮಾಡಬೇಕು. ಮಹಿಳಾ ಮತ್ತು ಮಕ್ಕಳ ತುರ್ತು ವಿಭಾಗ ಸ್ಥಾಪನೆ, ಆಸ್ಪತ್ರೆ ಸಿಬ್ಬಂದಿಗಳಿಗೆ ವಾಸಿಸಲು ಸುಸಜ್ಜಿತ ಗೃಹ (ಅಪಾರ್ಟುಮೆಂಟ್)ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರhiಸಿದ್ದಾರೆ.

Tungabhadra Dam ತುಂಗಾ ಬಲ & ಎಡ ದಂಡೆ ಕಾಲುವೆಗಳಲ್ಲಿ ನೀರು ಬಿಡುಗಡೆ. ಅಚ್ಚುಕಟ್ಟಿನ ಗ್ರಾಮಸ್ಥರಿಗೆ ಜಾಗ್ರತೆ ವಹಿಸಲು ಪ್ರಕಟಣೆ

0

Tungabhadra Dam ತುಂಗಾ ಬಲದಂಡೆ ಮತ್ತು ಎಡದಂಡೆ ಕಾಲುವೆಯಲ್ಲಿ 2024-25 ನೇ ಸಾಲಿನ ಮುಂಗಾರು ಬೆಳೆಗೆ ನೀರು ಹರಿಸಲಾಗುವುದು.

Tungabhadra Dam ಅಚ್ಚಕಟ್ಟು ರೈತರು ಹಾಗೂ ಸಾರ್ವಜನಿಕರು ಜನ, ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮುನ್ನೆಚ್ಚರಿಕೆ ನೀಡಿದ್ದಾರೆ.

Lok Sabha Constituency ಸಚಿವ ಸ್ಥಾನ ಸಿಗದ ಬೇಗುದಿ ಹೊರಹಾಕಿದ ಹಿರಿಯ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ

0

Lok Sabha Constituency ಬಿಜೆಪಿಯ ಹಿರಿಯ ನಾಯಕ, ಏಳು ಬಾರಿ ಸಂಸದರಾಗಿರುವ ರಮೇಶ್ ಜಿಗಜಿಣಗಿ ಅವರನ್ನು ಮೋದಿ ತನ್ನ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳದಿರುವ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹೈಕಮಾಂಡ್‌ ಮೇಲೆ ಬೇಸರಗೊಂಡಿರುವ ಬಿಜಾಪುರ ಮೀಸಲು ಲೋಕಸಭಾ ಕ್ಷೇತ್ರದ ಸಂಸದ, ರಾಜ್ಯದ ಹಿರಿಯ ದಲಿತ ರಾಜಕಾರಣಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “ನನಗೆ ಕ್ಯಾಬಿನೆಟ್ ಹುದ್ದೆ ಬೇಕಾಗಿಲ್ಲ; ನನಗೆ ಜನ ಬೇಕು. ನಾನು ಮತ್ತೆ (ಕ್ಷೇತ್ರಕ್ಕೆ) ಹಿಂತಿರುಗಿದಾಗ, ಅನೇಕ ಜನರು ನನಗೆ ಬೈದರು. ಈ ಹಿಂದೆ ಹಲವರು ಬಿಜೆಪಿ ದಲಿತ ವಿರೋಧಿ ಎಂದು ನನಗೆ ಎಚ್ಚರಿಕೆ ನೀಡಿದ್ದರು” ಎಂದು ಅವರು ಹೇಳಿದರು.

Lok Sabha Constituency “ನಾನು ಕೇಂದ್ರದಲ್ಲಿ ಸಚಿವನಾಗಬೇಕು ಎಂಬ ಬಗ್ಗೆ ಜನರಿಂದ ಒತ್ತಡವಿದೆ. ಇದು ನ್ಯಾಯವೋ ಅನ್ಯಾಯವೋ? ಇಡೀ ದಕ್ಷಿಣ ಭಾರತದಲ್ಲಿ, ಏಳು ಬಾರಿ (ಸಂಸತ್ತಿಗೆ) ಆಯ್ಕೆಯಾದ ಏಕೈಕ ದಲಿತ ಸಂಸದ ನಾನು. ಮೇಲ್ವರ್ಗದ ಎಲ್ಲರೂ ಕ್ಯಾಬಿನೆಟ್ ಮಂತ್ರಿಗಳಾದರು, ದಲಿತರು ಬಿಜೆಪಿಗೆ ಬೆಂಬಲ ನೀಡಿಲ್ಲವೇ? ನನಗೆ ತೀವ್ರ ನೋವಾಗಿದೆ” ಎಂದು ಜಿಗಜಿಣಗಿ ಅವರು ಪಕ್ಷದ ಹೈಕಮಾಂಡ್‌ಗೆ ಸಚಿವ ಸಂಪುಟದಲ್ಲಿ ದಲಿತರಿಗಿಂತ ಮೇಲ್ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಮೇಶ್ ಜಿಗಜಿಣಗಿ ಅವರು ಏಳು ಬಾರಿ ಸಂಸದರಾಗಿದ್ದು, ಚಿಕ್ಕೋಡಿ (ಎಸ್‌ಸಿ) ಕ್ಷೇತ್ರದಿಂದ ಸತತ ಮೂರು ಮತ್ತು ಬಿಜಾಪುರ (ಎಸ್‌ಸಿ) ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದಾರೆ.

ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಸಂಸತ್ ಚುನಾವಣೆಯಲ್ಲಿ ಸೋತಿಲ್ಲ.

Agniveer Scheme ಅಗ್ನಿವೀರ್ ಯೋಜನೆ ಬಗ್ಗೆ ಕೀರ್ತಿಶೇಷ ಕ್ಯಾ. ಅಂಶುಮಾನ್ ಪೋಷಕರ ಅಸಮಾಧಾನ

0

Agniveer Scheme ಕೀರ್ತಿ ಚಕ್ರ ವಿಜೇತ ಯೋಧ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಾಯಿ , ಭಾರತೀಯ ಸೇನೆಗೆ ತಾತ್ಕಾಲಿಕ ನೇಮಕಾತಿಗಳ ಅಗ್ನಿವೀರ್ ಯೋಜನೆಯನ್ನು ನಿಲ್ಲಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

“ಅಗ್ನಿವೀರ್ ಯೋಜನೆಯನ್ನು ನಿಲ್ಲಿಸುವಂತೆ ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ. ಇದು ನಾಲ್ಕು ವರ್ಷಗಳಾಗಿದ್ದು, ಇದು ಸರಿಯಾಗಿಲ್ಲ. ಪಿಂಚಣಿ, ಕ್ಯಾಂಟೀನ್ ಮತ್ತು ಸೈನಿಕನಿಗೆ ನೀಡಲಾದ ಎಲ್ಲಾ ಸೌಲಭ್ಯಗಳನ್ನು ಮುಂದುವರಿಸಬೇಕು” ಎಂದು ರಾಯ್ ಬರೇಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ಮಂಜು ಸಿಂಗ್ ಹೇಳಿದರು.

ಜುಲೈ 5 ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಂಜಾಬ್ ರೆಜಿಮೆಂಟ್‌ನ 26 ನೇ ಬೆಟಾಲಿಯನ್ ಆರ್ಮಿ ಮೆಡಿಕಲ್ ಕಾರ್ಪ್ಸ್‌ನ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ಪ್ರದಾನ ಮಾಡಿದರು, ಜುಲೈ 18-19 ರ ಮಧ್ಯರಾತ್ರಿಯಲ್ಲಿ ಸಿಯಾಚಿನ್‌ನ ಶಸ್ತ್ರಾಗಾರದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿತ್ತು.

Agniveer Scheme ಅಲ್ಲಿ ಗಾಯಗೊಂಡಿದ್ದ ಅವರು, ಅವರು ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಪಡೆಯಲು ಯತ್ನಿಸುತ್ತಿರುವಾಗಲೇ ಸುಟ್ಟ ಗಾಯಗಳಿಂದ ಸಾವನ್ನಪ್ಪಿದರು.
ಅವರು ವೈದ್ಯಕೀಯ ಸೌಲಭ್ಯದ ಕಡೆಗೆ ಗಮನ ಹರಿಸುವ ಮೊದಲು ಫೈಬರ್-ಬೆಂಕಿಯಲ್ಲಿ ಸಿಲುಕಿಕೊಂಡಿದ್ದ ಹಲವಾರು ವ್ಯಕ್ತಿಗಳನ್ನು ರಕ್ಷಿಸಿದ್ದರು.

ರಕ್ಷಣಾ ಸಚಿವಾಲಯವು ಅಂಶುಮಾನ್ ಅವರ ಪತ್ನಿ ಸ್ಮೃತಿ ಸಿಂಗ್ ಅವರ ವೀಡಿಯೊವನ್ನು ಬಿಡುಗಡೆ ಮಾಡಿತು, ಅವರು ಎಂಟು ವರ್ಷಗಳ ಕಾಲ ಪ್ರೀತಿ ನಂತರ, ಕಳೆದ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿದ್ದರು.

Sir M.V. Government Arts and Commerce College ಫಲಿತಾಂಶ ವಿಳಂಬ ಭದ್ರಾವತಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಆತ್ಮಹತ್ಯೆ ಯತ್ನ

0

Sir M.V. Government Arts and Commerce College ನ್ಯೂಟೌನ್ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಂತಿಮ ವರ್ಷದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ವರ್ಷದ ಫಲಿತಾಂಶಗಳು ಬರದೆ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಿದೆ ಎಂದು ಖಂಡಿಸಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಮತ್ತು ಕಾರ್ಯದರ್ಶಿ ಅಬ್ದುಲ್ ಆಸೀಬ್ ಖಾನ್ ಕಾಲೇಜು ಕಟ್ಟಡ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆಯಿತು.

ಇದರಿಂದ ವಿದ್ಯಾರ್ಥಿ ಮತ್ತು ಉಪನ್ಯಾಸಕರಲ್ಲಿ ಕೆಲಕಾಲ ಆತಂಕ ಹುಟ್ಟತ್ತು. ಅನೇಕ ಉಪನ್ಯಾಸಕರು ಕೆಳಗೆ ಬನ್ನಿ ಕುಳಿತು ಮಾತಾಡೋಣ ಎಂದರೂ ಏನೂ ಪ್ರಯೋಜನವಾಗಿಲ್ಲ.

ನ್ಯೂಟೌನ್ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬಂದು ಕೆಳಗಿಳಿಯುವಂತೆ ಮನವಿ ಮಾಡಿದರೂ ಜುಂ ಎನ್ನಲಿಲ್ಲ. ಪೊಲೀಸರು ಮತ್ತು ಉಪನ್ಯಾಸಕರು ಅನೇಕರು ಮಹಡಿ ಹತ್ತಿ ಇಳಿಸಲು
ಹೋದರೆ ಕೆಳಗೆ ಜಿಗಿಯುವುದಾಗಿ ಬೆದರಿಸಿದರು.

ಪ್ರಾಂಶುಪಾಲ ಡಾ: ಶೈಲಜ ಹೊಸಳ್ಳೇರ್ ಮೈಕ್ ಹಿಡಿದು ವಿವಿ ಅಧಿಕಾರಿಗಳ ಬಳಿ ಮಾತಾಡಿದ್ದೇನೆ. ಫೈಲ್ ತರಲು ಹೇಳಿದ್ದಾರೆ, ಎಲ್ಲಾ ಉಪನ್ಯಾಸಕರನ್ನೂ ಹಳೇಯ ಪ್ರಾಂಶುಪಾಲರನ್ನು ಕರೆಸಿ ಮಾತಾಡಿ ಸಮಸ್ಯೆ ಬಗೆಹರಿಸೋಣ ಎಂದರೂ ಇಳಿಯದೆ ಸುಮಾರು ಒಂದು ಗಂಟೆ ಕಾಲ ನಡುಕ ಹುಟ್ಟಿಸಿದ್ದರು.

ಫೋನಿನಲ್ಲಿ ರಿಜಿಸ್ಟ್ರಾರ್ ಗೋಪಿನಾಥ್ ಭರವಸೆ:
ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಮೌಲ್ಯಮಾಪನ ಕುಲ ಸಚಿವ ಗೋಪಿನಾಥ್ ಮೌಬೈಲ್‌ನಲ್ಲಿ ಮಾತನಾಡಿ ಕಳೆದ ವರ್ಷ ಇಂತಹ ದೋಷಗಳ ಫೈಲ್ ಬಂದಿದ್ದು ಸರಿಪಡಿಸಲಾಗಿದೆ. ಮತ್ತೆ ಇಂತಹ ದೋಷಗಳಿದ್ದರೆ ಪ್ರಾಂಶುಪಾಲರು ಐಎಂ ಮಾರ್ಕ್ಸ್‌ಗಳನ್ನು ಸರಿಪಡಿಸಿಕೊಂಡು ಫೈಲ್ ತಂದರೆ ಸರಿಪಡಿಸಿ ಕೊಡಲಾಗುವುದು. ಇದನ್ನು ಪ್ರಾಂಶುಪಾಲರು ಮಾಡಬೇಕು. ಇಲ್ಲದಿದ್ದರೆ ನೋಟೀಸ್ ಜಾರಿಗೊಳಿಸಲಾಗುವುದು ಎಂದರು.

ಇದರಿಂದ ಸಮಾದಾನಗೊಂಡು ವಿದ್ಯಾರ್ಥಿಗಳು ಕಟ್ಟಡದ ಮೇಲಿಂದ ಕೆಳಗಿಳಿದರು.

Sir M.V. Government Arts and Commerce College ವಿದ್ಯಾರ್ಥಿ ಮುಖಂಡರ ಅಳಲು:
ಕಾಲೇಜಿನ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಫಲಿತಾಂಶಗಳು ಬರುತ್ತಿಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ವರ್ಷದ ಫಲಿತಾಂಶಗಳು ಬಂದಿಲ್ಲ. ಬಂದರೂ ಕೆಲವರಿಗೆ ಪಾಸ್ ಎಂದು ಬಂದರೆ ಮತ್ತೆ ಕೆಲವರಿಗೆ ಫೇಲ್, ವಿಥಲ್ಡ್, ಆಬ್ಸೆಂಟ್ ಇತ್ಯಾದಿ ಬರುತ್ತಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ವರ್ಷಗಳ ಫಲಿತಾಂಶಗಳಲ್ಲಿ ಹಿನ್ನಡೆ ಸಾಧಿಸಿದ್ದರೆ ಅಥವಾ ಫೇಲ್ ಆಗಿದ್ದರೆ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಿದೆ. ದೋಷ ಸರಿಪಡಿಸುವಂತೆ ಕಳೆದೆರೆಡು ವರ್ಷಗಳಿಂದ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಆತ್ಮಹತ್ಯೆಯೇ ಕೊನೆ ಹೋರಾಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Klive News ಸುದ್ದಿ ಸಾಲು

0

ಲಂಚ ಪಡೆಯುತ್ತಿದ್ದ ಹರಿಹರ ನಗರಸಭೆ ಪೌರಾಯುಕ್ತ ಬಸವರಾಜಪ್ಪ ಲೋಕಾಯುಕ್ತರ ಬಲೆಗೆ.

ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರದಾನ.

ಜು.23: ಕೇಂದ್ರ ಬಜೆಟ್ ಮಂಡನೆ.

ತೆರೆಯದ ಬಿಜೆಪಿಯ ಬಾಗಿಲು, ರಾಯಣ್ಣ ಬ್ರಿಗೇಡ್ ಆರಂಭಿಸುವ ಯೋಚನೆ ಇದೆ: ಎಸ್ ಈಶ್ವರಪ್ಪ.

ವಾಲ್ಮೀಕಿ‌‌ ನಿಗಮದ ಹಗರಣ, ಸಚಿವರಿಗೂ ಗೊತ್ತಿತ್ತು. ಮತ್ತಷ್ಟು ಸಂಕಷ್ಟಕ್ಕೆ ಸಚಿನ ನಾಗೇಂದ್ರ

ಮನೆ ಊಟ ಬೇಕೆಂದು ದರ್ಶನ್ ಜೈಲು ಅಧಿಕಾರಿಗೆ ಮನವಿ

ಉತ್ತರ ಪ್ರದೇಶದ ಉನ್ನಾವ್ ಬಳಿ ಅಪಘಾತ: 18 ಜನ ಸಾವು

Dr. Parameshwar ಇನ್ನು ಮುಂದೆ ವರ್ಷಕ್ಕೆ ಮೂರು ಬಾರಿ ಸನ್ನಡತೆ ಆಧಾರದ ಮೇಲೆ ಖೈದಿಗಳ ಬಿಡುಗಡೆ- ಸಚಿವ ಡಾ.ಪರಮೇಶ್ವರ್

0

Dr. Parameshwar ರಾಜ್ಯದ ವಿವಿಧ ಜೈಲುಗಳಲ್ಲಿರುವ 77 ಕೈದಿಗಳನ್ನು ಮಂಗಳವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.

ಸನ್ನಡತೆ ಆಧಾರದ ವರ್ಷದಲ್ಲಿ ಮೂರು ಬಾರಿ ಜೈಲಿನ ಕೈದಿಗಳನ್ನು ಬಿಡುಗಡೆಗೊಳಿಸುವ ಆದೇಶದನ್ವಯ, ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ 77 ಕೈದಿಗಳನ್ನು ಅವಧಿಪೂರ್ವ ಬಿಡುಗಡೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಇನ್ನುಮುಂದೆ ಸನ್ನಡತೆ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ಬದಲು ಮೂರು ಬಾರಿ ಕೈದಿಗಳನ್ನು ಬಂಧಮುಕ್ತಗೊಳಿಸಲಾಗುವುದು ಎಂದರು. ಈಗ ವರ್ಷಕ್ಕೆ ಎರಡು ಬಾರಿ ಸ್ವಾತಂತ್ರ್ಯೋತ್ಸವದ ವೇಳೆ ಮತ್ತು ಗಣರಾಜ್ಯೋತ್ಸವದ ವೇಳೆ ಮಾತ್ರ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
Dr. Parameshwar ಹೈಕೋರ್ಟ್ ಆದೇಶದ ಮೇರೆಗೆ ಸನ್ನಡತೆ ತೋರಿದ ಬಂಧಿಗಳು ಬಿಡುಗಡೆಗೆ ಅವಕಾಶ ಇದೆ. ಇಂದು ಕಾರಾಗೃಹದಲ್ಲಿದ್ದ 77 ಜನರನ್ನು ಬಿಡುಗಡೆ ಮಾಡಲಾಗಿದೆ. 10, 15 ವರ್ಷ ಜೈಲಿನಲ್ಲೇ ಜೀವನ ಕಳೆದು ಸನ್ನಡತೆ ಕಂಡುಕೊಂಡಿದ್ದಾರೆ. ಒಂದೇ ದಿನದಲ್ಲಿ ಸನ್ನಡತೆ ಪರಿಗಣಿಸಲ್ಲ. ಅದಕ್ಕೆ ಆದ ಕೆಲ ಮಾನದಂಡಗಳು ಇವೆ. ಜೈಲಿನಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ?, ಪರಿವರ್ತನೆಯಾಗಿದ್ದಾರೆ?, ಸಮಾಜದ ನಡುವೆ ಯಾವ ರೀತಿ ಅವರು ಇರಲಿದ್ದಾರೆ ಎಂಬುವುದನ್ನು ಮನನ ಮಾಡಿಕೊಳ್ಳಲಾಗುತ್ತದೆ. ನಂತರ ಸಮಿತಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ.

ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಬಿಡುಗಡೆ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ರಾಜ್ಯಪಾಲರ ಅಂಕಿತ ಹಾಕಿದ ನಂತರ ಬಿಡುಗಡೆ ಮಾಡುವುದು ನಿಮಯ ಎಂದು ತಿಳಿಸಿದರು.

Natyatharanga Trust ಸಾಗರದ ನೃತ್ಯ ಭಾಸ್ಕರ ಟ್ರಸ್ಟ್ ನಿಂದ ಸಂಗೀತ ಪ್ರದರ್ಶನ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ಆರಂಭ

0

Natyatharanga Trust ಸಾಗರದ ಶ್ರೀನಗರ ನಾಟ್ಯತರಂಗ ಟ್ರಸ್ಟ್ ವತಿಯಿಂದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಜುಲೈ 15 ರಿಂದ ಸಂಗೀತ ಪ್ರದರ್ಶನ ಕಲೆಗಳ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್‌ನ್ನು ಆರಂಭಿಸಲಾಗುವುದು ಎಂದು ನಾಟ್ಯತರಂಗ ಟ್ರಸ್ಟ್ ಸಂಚಾಲಕ ವಿದ್ವಾನ್ ಜಿ.ಬಿ.ಜನಾರ್ದನ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನಗಳ ಕಲೆಗಳ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಯಾಗಿದೆ. ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಇರುವುದು ಭಾರತದಲ್ಲಿ ಎರಡು ಕಡೆ ಮಾತ್ರ. ಗುಜರಾತಿನಲ್ಲಿ ಹಾಗೂ ಕರ್ನಾಟಕದ ಮೈಸೂರಿನಲ್ಲಿ ಎಂದರು.

ನಮ್ಮ ಸಂಸ್ಥೆಯಿಂದ ಕಳೆದ ೩೦ ವರ್ಷಗಳಿಂದ ನೃತ್ಯ ತರಬೇತಿ, ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇವುಗಳ ಅವಧಿ ಮೂರು ವರ್ಷ ಅವಧಿಯದ್ದಾಗಿದೆ. ಜ್ಯೂನಿಯರ್ ಮತ್ತು ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಯನ್ನು ನಡೆಸುತ್ತಿದ್ದು, ಇವುಗಳ ಅವಧಿ ಪ್ರತಿ ಕೋರ್ಸ್‌ಗೂ ಮೂರು ವರ್ಷದಂತೆ ದೀರ್ಘ ಕಾಲ ಅಭ್ಯಾಸ ಮಾಡಬೇಕಾಗುತ್ತದೆ. ಆದರೆ ವಿಶ್ವವಿದ್ಯಾಲಯದಿಂದ ನೃತ್ಯ, ಸಂಗೀತದ ಸರ್ಟಿಫಿಕೇಟ್ ಕೋರ್ಸ್ ಆರು ತಿಂಗಳು ಹಾಗೂ ಡಿಪ್ಲೋಮಾ ಕೋರ್ಸ್ ಒಂದು ವರ್ಷ ಅಭ್ಯಾಸ ಮಾಡಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

Natyatharanga Trust ಪರೀಕ್ಷೆಯನ್ನೂ ಇಲ್ಲೇ ನಡೆಸಲಾಗುತ್ತದೆ ಎಂದರು.
ನಾಟ್ಯತರಂಗ ಟ್ರಸ್ಟ್‌ನ ವರದಾಂಬಿಕಾ ಜನಾರ್ದನ್ ಹಾಜರಿದ್ದರು.

ಸಂಗೀತ, ನೃತ್ಯಾಸಕ್ತರು ವಿದ್ವಾನ್ ಜಿ.ಬಿ.ಜನಾರ್ದನ್ ಮೊ. 9449808181 ನ್ನು ಸಂಪರ್ಕಿಸಬಹುದು.

Aditya Enterprises ಶ್ರೀಮತಿ ರಶ್ಮಿ ನಾಯಕ್ ನಿಧನ

0

Aditya Enterprises ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ರಶ್ಮಿ ನಾಯಕ್ ( 42 ) ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ರಿಪ್ಪನ್‌ಪೇಟೆಯ ರಾಘವೇಂದ್ರ ನಾಯ್ಕ್ ಅವರ ಪತ್ನಿ ರಶ್ಮಿ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದ್ದಾರೆ. ಪತಿ, ಇಬ್ಬರು ಪುತ್ರರು ಇದ್ದಾರೆ. ಆದಿತ್ಯ ಎಂಟರ್‌ಪ್ರೈಸಸ್‌ನ ಕೆ.ರಾಕೇಶ್, ಲೆಕ್ಕ ಪರಿಶೋಧಕ ಮಧುಸೂದನ್ Aditya Enterprises ಐತಾಳ್, ವರದಾ ಐತಾಳ್ ಮತ್ತು ಬಂಧುಗಳು ಸಂತಾಪ ಸೂಚಿಸಿದ್ದಾರೆ. ಬುಧವಾರ ರಿಪ್ಪನ್‌ಪೇಟೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

McGann District Hospital ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟ ತಂಡದಿಂದ ಡೆಂಗ್ಯು,ಚಿಕುನ್ ಗುನ್ಯಾ,ಝಿಕಾ ವೈರಸ್ ರೋಗಗಳ ನಿಯಂತ್ರಣದ ಬಗ್ಗೆ ಸಮೀಕ್ಷೆ

0

McGann District Hospital ಶಿವಮೊಗ್ಗ ಜಿಲ್ಲಾ ಬಿಜೆಪಿಯ ವೈದ್ಯಕೀಯ ಪ್ರಕೋಷ್ಟದ ವತಿಯಿಂದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಅವ್ಯಾಹತವಾಗಿ ಹರಡುತ್ತಿರುವ ಡೆಂಗ್ಯೂ, ಚಿಕೂನ್ ಗುನ್ಯಾ, ಜಿಕಾ ವೈರಸ್ ಜ್ವರದ ಬಗ್ಗೆ ವಿವರವಾಗಿ ಮಾಹಿತಿ ಪಡೆಯಲಾಯಿತು.

ಅವಶ್ಯಕವಿರುವ ತುರ್ತು ಕ್ರಮಗಳ ಬಗ್ಗೆ ಜಾರಿಗೆ ತರಲು ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕ ಡಾ|| ತಿಮ್ಮಪ್ಪ ಅವರಿಗೆ ಆಗ್ರಹಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು, ಆಸ್ಪತ್ರೆಯ ವಾರ್ಡಿನಲ್ಲಿ ಕಿಟಕಿಗಳಿಗೆ ಸೊಳ್ಳೆಪರದೆಗಳನ್ನ ಹಾಕಿಸುವುದು. ಆಸ್ಪತ್ರೆ ಆವರಣ ಹಾಗೂ ಸುತ್ತಮುತ್ತ ನೀರು ನಿಲ್ಲದೆ ಇರುವ ಹಾಗೆ ಕ್ರಮ ಕೈಗೊಳ್ಳುವುದು, ಕಾಂಗ್ರೆಸ್ ಗಿಡಗಳನ್ನು ತೆಗೆಸುವುದು, ಆಸ್ಪತ್ರೆ ಆವರಣದಲ್ಲಿ ಮತ್ತು ವಾರ್ಡಗಳಲ್ಲಿ ಕನಿಷ್ಠ ಐದು ಗಂಟೆಗಳಿಗೊಮ್ಮೆ ಫಾಗಿಂಗ್ ಮಾಡಿಸುವುದು (ಅಗತ್ಯ ಬಿದ್ದಲ್ಲಿ ಮಹಾನಗರ ಪಾಲಿಕೆ ಸಹಕಾರ ಪಡೆದು), ಮೆಗ್ಗಾನ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಗೆ ಭೇಟಿ ನೀಡಿ ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅವಶ್ಯಕತೆ ಇರುವ ವೈಟ್ ಪ್ಲೇಟ್‌ಲೆಟ್ಸ್ ಸಂಗ್ರಹದ ಬಗ್ಗೆ ಮಾಹಿತಿ ಪಡೆದು ಹಾಗೂ ಆಸ್ಪತ್ರೆಯ ಲ್ಯಾಬ್ ಗೂ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡುವ ಕಿಟ್ ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆಯಲಾಯಿತು.
McGann District Hospital ಈ ಸಂದರ್ಭದಲ್ಲಿ ಬಿಜೆಪಿಯ ಪ್ರಕೋಷ್ಟಗಳ ರಾಜ್ಯ ಸಂಯೋಜಕರಾದ ಎಸ್. ದತ್ತಾತ್ರಿ , ವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಡಾ|| ಸುರೇಶ್ , ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಡಾ|| ಹೇಮಂತ್‌ಕುಮಾರ್, ಪ್ರಕೋಷ್ಟಗಳ ಜಿಲ್ಲಾ ಸಂಯೋಜಕ ಹೃಷಿಕೇಶ್ ಪೈ, ಸಹ ಸಂಯೋಜ
ಡಾ|| ಶ್ರೀನಿವಾಸ್ ರೆಡ್ಡಿ , ಡಾ|| ಮರುಳಾರಾಧ್ಯ, ಡಾ|| ಗೌತಮ್ , ಡಾ|| ಸಂತೋಷ್ ಹಾಗೂ ಮುರಳೀಧರ್ ಉಪಸ್ಥಿತರಿದ್ದರು.