Friday, April 10, 2026
Friday, April 10, 2026
Home Blog Page 657

S.N. Chennabasappa ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರಿ ನೌಕರರ ಮನವಿ ಬಗ್ಗೆ ಚರ್ಚಿಸಲು ಸಿದ್ಧ- ಶಾಸಕ ಚೆನ್ನಿ

0

S.N. Chennabasappa ರಾಜ್ಯ ಸರ್ಕಾರಿ ನೌಕರರು ತಮ್ಮ ನ್ಯಾಯೋಚಿತ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಕುರಿತಂತೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಶಾಸಕರ ಭವನದಲ್ಲಿ ಭೇಟಿ ಮಾಡಿ ಸಲ್ಲಿಸಿದ ಮನವಿಯ ಕುರಿತು ಮಾತನಾಡುತ್ತಿದ್ದರು. ಕಾಲಕಾಲಿಕವಾಗಿ ಸರ್ಕಾರವು ನೌಕರರಿಗೆ ನೀಡುವ ವೇತನ ಭತ್ಯೆಗಳನ್ನು ಪರಿಷ್ಕರಿಸಿ ನೀಡಬೇಕು. ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನೌಕರರ ಪಾತ್ರ ಮಹತ್ವದ್ದಾಗಿದೆ ಎಂದರು.
ಎಲ್ಲಾ ಸಂದರ್ಭಗಳಲ್ಲಿಯೂ ಸರ್ಕಾರದ ಜೊತೆಗಿದ್ದು ಕಾರ್ಯನಿರ್ವಹಿಸುವ ನೌಕರರ ಹಿತಕಾಯುವಲ್ಲಿಯೂ ಸರ್ಕಾರವ ವಿಶೇಷ ಕಾಳಜಿ ವಹಿಸಬೇಕು ಎಂದ ಅವರು, ರಾಜ್ಯದಲ್ಲಿ ೨.೬೦ ಲಕ್ಷ ಹುದ್ದೆಗಳು ಖಾಲಿಯಿದ್ದರೂ ಸಹ ಸರ್ಕಾರವು ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್ ಅವರು ಮಾತನಾಡಿ, ರಾಜ್ಯ ೭ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಈಗಾಗಲೇ ಆಯೋಗವು ವರದಿ ನೀಡಿ ಅನೇಕ ತಿಂಗಳುಗಳೇ ಉರುಳಿವೆ. ಇನ್ನೂ ಕಾಲ ವಿಳಂಬವನ್ನು ನಾವು ಒಪ್ಪಿಕೊಳ್ಳಲಾಗುವುದಿಲ್ಲ ಎಂದರು.
ಸಂಪ್ರದಾಯದಂತೆ ರಾಜ್ಯ ೬ ನೇ ವೇತನ ಆಯೋಗದ ವರದಿಯು ಅನುಷ್ಟ್ಟಾನಗೊಂಡು ೫ ವರ್ಷಗಳ ಅವಧಿ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ದಿನಾಂಕ:೦೧-೦೭-೨೦೨೨ರಿಂದ ಪರಿಷ್ಕರಣೆಗೊಳಿಸಬೇಕಾಗಿತ್ತು ಎಂದ ಅವರು, ಸಂಘದ ಒತ್ತಡದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಕೆ.ಸುಧಾಕರ್‌ರಾವ್ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ೭ನೇ ವೇತನ ಆಯೋಗವನ್ನು ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು. ಆದರೆ, ಸರ್ಕಾರವು ಸಕಾಲದಲ್ಲಿ ವರದಿ ಪಡೆಯದೆ ಎರಡು ಬಾರಿ ಅವಧಿಯನ್ನು ವಿಸ್ತರಿಸಿರುವುದು ನೌಕರರಲ್ಲಿ ಅತೀವ ಬೇಸರವನ್ನುಂಟು ಮಾಡಿದೆ ಎಂದರು.
ವೇತನ ಆಯೋಗವು ಮಾರ್ಚ್ ಮಾಹೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವೇತನ ಆಯೋಗ ರಚನೆಯಾಗಿ ೧೯ ತಿಂಗಳುಗಳೇ ಕಳೆದಿವೆ. ವೇತನ ಆಯೋಗದ ಮುಂದೆ ಸಂಘವು ನೌಕರರ ವೇತನ-ಭತ್ಯೆಗಳ ಸಂಬಂಧ ಸಮಗ್ರ ವರದಿಯನ್ನು ಸಿದ್ದಪಡಿಸಿ ಶೇ.೪೦% ಫಿಟ್‌ಮೆಂಟ್ ಸೌಲಭ್ಯ ನೀಡಲು ಮನವಿಯನ್ನು ಸಲ್ಲಿಸಿತ್ತು. ಈ ಮಧ್ಯೆ ಸಂಘವು ೨೦೨೩ರ ಮಾರ್ಚ್ ತಿಂಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡ ಪರಿಣಾಮ ಸರ್ಕಾರವು ೨೦೨೩ರ ಏಪ್ರಿಲ್ ಮಾಹೆಯಿಂದ ಅನ್ವಯವಾಗುವಂತೆ ಶೇ. ೧೭% ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ರಾಜ್ಯ ೭ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬAಧ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದಾಗ್ಯೂ, ನೀತಿ ಸಂಹಿತೆ ಮುಗಿದ ನಂತರ ನೀಡುವ ಭರವಸೆಯನ್ನು ನೀಡಿದ್ದರು ಎಂದವರು ನುಡಿದರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ ೨.೬೦ ಲಕ್ಷ ಖಾಲಿ ಹುದ್ದೆಗಳಿದ್ದು, ಆ ಕಾರ್ಯವನ್ನು ಹಾಲಿ ಇರುವ ಸರ್ಕಾರಿ ನೌಕರರು ಒತ್ತಡದ ನಡುವೆ ಕಾರ್ಯನಿರ್ವಹಿಸುವ ಮೂಲಕ ಸರ್ಕಾರಕ್ಕೆ ಪ್ರತಿ ವರ್ಷ ವಾರ್ಷಿಕ ಅಂದಾಜು ೮೫೦೦ ಕೋಟಿ ಉಳಿತಾಯವಾಗುತ್ತಿದೆ. ರಾಜ್ಯ ೭ನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸಿ ನಾಲ್ಕು ತಿಂಗಳು ಪೂರ್ಣಗೊಂಡರೂ ಮಾನ್ಯ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೇ ಇರುವುದರಿಂದ ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಸಹಜವಾಗಿಯೇ ವೇತನ ಪರಿಷ್ಕರಣೆ ವಿಳಂಬವಾಗುವುದೆಂಬ ಆತಂಕಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರ ಹಾಗೂ ಸಂಘಟನೆಯ ವಿರುದ್ಧ ಅಸಮದಾನವನ್ನು ವ್ಯಕ್ತಪಡಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಎಂದರು.
ರಾಜ್ಯ ಸಂಘವು ೨೦೨೪ ಫೆಬ್ರವರಿಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿದ್ದ ಮುಖ್ಯಮಂತ್ರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದ ೨.೫೦ ಲಕ್ಷ ಸರ್ಕಾರಿ ನೌಕರರ ಸಮ್ಮುಖದಲ್ಲಿ ರಾಜ್ಯ ೭ನೇ ವೇತನ ಆಯೋಗವು ವರದಿ ನೀಡಿದ ನಂತರ ಅನುಷ್ಠಾನಗೊಳಿಸುವ ಸ್ಪಷ್ಟ ಭರವಸೆ ನೀಡಿದ್ದರು. ರಾಜ್ಯ ೭ನೇ ವೇತನ ಆಯೋಗವು ಅಂತಿಮವಾಗಿ ೨೦೨೪ರ ಮಾರ್ಚ್ನಲ್ಲಿ ಶೇ.೨೭.೫ ಫಿಟ್‌ಮೆಂಟ್ ಸೌಲಭ್ಯದೊಂದಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದರು.
ಸಂಘದ ಮತ್ತೊಂದು ಪ್ರಮುಖ ಬೇಡಿಕೆಯಾದ ನೂತನ ಪಿಂಚಣಿಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ೨೦೨೩ರ ಮಾರ್ಚ್ನಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಇದುವರೆವಿಗೂ ಒಂದೂ ಸಭೆಯನ್ನು ನಡೆಸಿಲ್ಲ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನವನ್ನು ಸಹ ನಡೆಸಿರುವುದಿಲ್ಲ. ಅಲ್ಲದೆ ಈ ಸಂಬAಧ ಸರ್ಕಾರಕ್ಕೆ ಯಾವುದೇ ವರದಿಯನ್ನು ಇಲ್ಲಿಯವರೆವಿಗೂ ನೀಡದಿರುವುದು ನೌಕರರಲ್ಲಿ ಅತೀವ ನೋವನ್ನುಂಟು ಮಾಡಿದೆ ಎಂದರು.
ಚುನಾವಣಾ ಪ್ರಣಾಳಿಕೆಯಲ್ಲಿಯೂ ಸರ್ಕಾರ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನು ನೀಡಿತ್ತು. ಕೆಲವು ನೆರೆಯ ಕೆಲವು ರಾಜ್ಯಗಳಲ್ಲಿ ಎನ್.ಪಿ.ಎಸ್. ರದ್ದುಪಡಿಸಿ ಓ.ಪಿ.ಎಸ್. ಜಾರಿಗೊಳಿಸಲು ಆದೇಶ ಹೊರಡಿಸಿವೆ. ಎನ್.ಪಿ.ಎಸ್. ಯೋಜನೆಯಲ್ಲಿ ನೇಮಕಗೊಂಡು ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ ಮಾಸಿಕ ಕೇವಲ ರೂ.೧೫೦೦ ಪಿಂಚಣಿ ಲಭ್ಯವಾಗುತ್ತಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨.೫೦ ಲಕ್ಷ ಎನ್.ಪಿ.ಎಸ್ ಯೋಜನೆ ವ್ಯಾಪ್ತಿಯ ನೌಕರರ ಸಂಧ್ಯಾಕಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ದುಸ್ತರಗೊಳ್ಳುತ್ತಿದ್ದು, ಸರ್ಕಾರ ಅಂತಹ ನೌಕರರ ಕುಟುಂಬದ ನೆರವಿಗೆ ಧಾವಿಸಬೇಕಾದ ತುರ್ತು ಅಗತ್ಯವಿದೆ ಎಂದರು.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಗೆ ಈ ಹಿಂದಿನ ರಾಜ್ಯ ಸರ್ಕಾರವು ೨೦೨೧-೨೨ರ ಆಯವ್ಯದಲ್ಲಿ ಘೋಷಿಸಿತ್ತು. ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ನಿರ್ವಹಣೆ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಜವಾಬ್ದಾರಿಯನ್ನು ನೀಡಿ ೨೦೨೨ರ ಸೆಪ್ಟಂಬರ್‌ನಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ಈ ಯೋಜನೆಯನ್ನು ೨೦೨೩ರ ಮಾರ್ಚ್ನಲ್ಲಿ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದ್ದರು ಎಂದ ಅವರು, ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗದು ಎಂದರು.
ರಾಜ್ಯದಲ್ಲಿ ೨.೬೦ ಲಕ್ಷ ಖಾಲಿ ಹುದ್ದೆಗಳಿದ್ದು, ಹಾಲಿ ನೌಕರರು ಖಾಲಿ ಹುದ್ದೆಗಳ ಕಾರ್ಯಭಾರವನ್ನೂ ಸಹ ನಿರ್ವಹಿಸುತ್ತಿರುವುದರಿಂದ ನೌಕರರು ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಅವಶ್ಯವಿರುವ ಚಿಕಿತ್ಸೆ ಪಡೆಯುವಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಡಿ.ಟಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ಎಸ್.ಆರ್.ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಡಾ|| ಸಿ.ಎ.ಹಿರೇಮಠ್, ಗೌರವಾಧ್ಯಕ್ಷ ಆರ್.ಪಾಪಣ್ಣ, ಹಿರಿಯ ಉಪಾಧ್ಯಕ್ಷ ಕೆ.ಪ್ರಸನ್ನ ಸೇರಿದಂತೆ ಸಹಸ್ರಾರು ಸಂಖ್ಯೆಯ ಉಪಸ್ಥಿತರಿದ್ದರು. ಶಾಸಕರಿಗೆ ಮನವಿ ನೀಡಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Government Ayurvedic Hospital ಸಾಗರ ತಾಲ್ಲೂಕಿನ ಪುರಪ್ಪೆಮನೆ ಆಯುರ್ವೇದ ಆಸ್ಪತ್ರೆಗೆ ‘ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ’ ಕೀರ್ತಿಗೆ ಭಾಜನ

0

Government Ayurvedic Hospital ಕುಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯೊಂದು ತನ್ನ ಗುಣಮಟ್ಟಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನ ಆಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಸಾಗರ ತಾಲೂಕಿನ ಪುರಪ್ಪೆಮನೆ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯು ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ ಎಂಬ ಪ್ರಶಸ್ತಿಗೆ ಭಾಜನವಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪತಾಂಜಲಿ ಅವರಿಗೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸಂಯುಕ್ತವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಗ್ರಾಮದ ಸಮಸ್ತ ನಾಗರೀಕರ ಪರವಾಗಿ ಡಾ|| ಪತಾಂಜಲಿ ಅವರನ್ನು ಶಾಸಕ ಬೇಳೂರು ಅಭಿನಂದಿಸಿದರು.

ಈ ವೇಳೆ ಅವರು ಮಾತನಾಡಿ, ಡಾ.ಪತಾಂಜಲಿ ಅವರ ಸೇವೆ ಸ್ವಾಗತರ್ಹ. ಉಳಿದಿರುವ ಅವರ ಮೂರು ವರ್ಷದ ಸೇವೆಯಲ್ಲಿ ಅವರು ಕನಸು ನನಸಾಗಿಸಲು ‘ಪಂಚಕರ್ಮ ಚಿಕಿತ್ಸೆ’ ನೂತನ ಘಟಕ ಆರಂಭಕ್ಕೆ ಅಗತ್ಯವಿರುವ ಅನುದಾನ ನೀಡುವ ಭರವಸೆ ನೀಡಿದರು.

ಗ್ರಾ.ಪಂ. ಮಾಜಿ ಸದಸ್ಯ, ಅಭಿನಂದನಾ ಸಮಾರಂಭದ ಅಯೋಜಕ ಎ.ಎನ್. ಮೃತ್ಯುಂಜಯ ಪ್ರಾಸ್ತಾವಿಕ ಮಾತನಾಡಿ, ಡಾ. ಪತಾಂಜಲಿ ಅವರ ತಂದೆ ಸಹ ಇದೇ ಊರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಜನಮನ್ನಣೆಗಳಿದ್ದರು. ಆ ಕಾಲಕ್ಕೆ ಒಂದು ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಬೇಕೆಂಬ ತುಡಿತ ಅವರಲ್ಲಿತ್ತು.

Government Ayurvedic Hospital ಅದು ಸಾಧ್ಯವಾಗಿರಲಿಲ್ಲ. ಆದರೆ, ಡಾ. ಪತಂಜಲಿ ವೈದ್ಯರಾಗಿ ಸೇವೆಗೆ ಸೇರಿ ಈ ಗ್ರಾಮಕ್ಕೆ ಬಂದ ಬಳಿಕ ಅಪ್ಪನ ಕನಸನ್ನು ಪೂರ್ಣಗೊಳಿಸಿದರು. ಈ ಆಯುರ್ವೇದ ಸರ್ಕಾರಿ ಆಸ್ಪತ್ರೆ ಜಿಲ್ಲೆಯಲ್ಲಿ ಹಲವು ಪ್ರಥಮಗಳ ಸೃಷ್ಠಿಗೆ ಸಾಕ್ಷಿಯಾಗಿ ನಿಂತಿದೆ. ಅಲ್ಲದೆ, ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ ಎಂಬ ಪ್ರಶಸ್ತಿಗೂ ಇಂದು ಭಾಜನವಾಗಿದೆ.

ಈ ಎಲ್ಲಾ ಕಾರ್ಯಕ್ಕೂ ಡಾ. ಪತಾಂಜಲಿ ಅವರ ನಿರಂತರ ಪರಿಶ್ರಮವೇ ಕಾರಣವೆಂದರು.

Shivamogga Police ಶಿವಮೊಗ್ಗದಲ್ಲಿ ಮನೆಯಯೊಂದರ ನಿಲ್ಲಿಸಿದ್ದ ಬೈಕ್ ಕಳವು ದೂರು ದಾಖಲು

0

Shivamogga Police ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳ್ಳನೋರ್ವ ನಕಲಿ ಕೀ ಬಳಸಿ ಕೊಂಡೊಯ್ದ ಘಟನೆ ಶಿವಮೊಗ್ಗ ನಗರದ ಬಸ್ ನಿಲ್ದಾಣ ಸಮೀಪದ ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ನಡೆದಿದೆ.

ಕಳುವಾದ ಬೈಕ್ ಕುಮಾರಸ್ವಾಮಿ ರಾಮಚಂದ್ರ ಎಂಬುವರಿಗೆ ಸೇರಿದ್ದಾಗಿದೆ. ಸದರಿ ಕಳ್ಳತನ ಕೃತ್ಯವು ಮನೆಯ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನು ಕಳವು ಮಾಡಲಾಗಿದೆ.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆನೆ ಎಂದು ಕುಮಾರಸ್ವಾಮಿ ರಾಮಚಂದ್ರ ಅವರು ತಿಳಿಸಿದ್ದಾರೆ.
ಮುಂಜಾನೆ ಸರಿಸಮಾರು 4 ಗಂಟೆ ವೇಳೆಗೆ ಕುಮಾರಸ್ವಾಮಿ ರಾಮಚಂದ್ರ ಅವರ ಮನೆ ಬಳಿ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ದ ಕಳ್ಳ ಆಗಮಿಸಿದ್ದು, ಕ್ಷಣ ಮಾತ್ರದಲ್ಲಿಯೇ ನಕಲಿ ಕೀ ಬಳಸಿ ಬೈಕ್ ನ ಹ್ಯಾಂಡ್ ಲಾಕ್ ತೆರೆದಿದ್ದಾನೆ. ನಂತರ ಶಬ್ದವಾಗದಂತೆ ಸ್ವಲ್ಪ ದೂರದವರೆಗೆ ಬೈಕ್ ತಳ್ಳಿಕೊಂಡು ಹೋಗಿದ ಕಳ್ಳ, ನಂತರ ಬೈಕ್ ಆನ್ ಮಾಡಿಕೊಂಡು ಪರಾರಿಯಾಗಿದ್ದಾನೆ.

Shivamogga Police ಕುಮಾರಸ್ವಾಮಿ ರಾಮಚಂದ್ರ ಅವರು ಬೆಳಿಗ್ಗೆ ಎದ್ದು ಮನೆ ಹೊರಭಾಗ ಆಗಮಿಸಿದಾಗ ಬೈಕ್ ಇಲ್ಲದಿರುವುದು ಗೊತ್ತಾಗಿದೆ. ನಂತರ ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿ ವೀಕ್ಷಿಸಿದಾಗ ಬೈಕ್ ಕಳುವಾಗಿರುವುದು ಬೆಳಕಿಗೆ ಬಂದಿದೆ.

B.K. Sangameshwar ರಾಜ್ಯದ ಗ್ಯಾರಂಟಿ ಯೋಜನೆಗಳು, ಮಾದರಿಯಾಗಿವೆ- ಶಾಸಕ ಬಿ.ಕೆ.ಸಂಗಮೇಶ್ವರ್

0

B.K. Sangameshwar ಭಾರತ ದೇಶಕ್ಕೆ ಮಾತ್ರವಲ್ಲದೆ ಪ್ರಪಂಚದ ಯಾವ ರಾಷ್ಟ್ರದಲ್ಲೂ ನೀಡದಂತಹ ಪಂಚ ಯೋಜನೆಗಳನ್ನು ಬಡವರಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ನೀಡಿ ಮಾದರಿ ಯಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಭದ್ರಾವತಿ ತಾಲೂಕು ಪಂಚಾಯತಿ ಕಚೇರಿ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ಹಳೇ ಕಟ್ಟಡದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಮತ್ತು ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿರುವ ಎಸ್.ಮಣಿಶೇಖರ್ ಅವರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರ ಕಾಳಜಿ ಹೊತ್ತ ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ಅಧಿಕಾರದ ಆಸೆಗಾಗಿ ಧರ್ಮದ ಹೆಸರಲ್ಲಿ ಶ್ರೀಮಂತರಿಗೆ ಮಣೆ ಹಾಕುವ ಬಿಜೆಪಿ ಕೋಮುವಾದಿ ಪಕ್ಷದಿಂದ ಬಡವರ ಕಲ್ಯಾಣ ಅಸಾಧ್ಯ. ಇವರೊಂದಿಗೆ ಕೈಜೋಡಿಸಿರುವ ಜೆಡಿಎಸ್‌ನ ದೇವೇಗೌಡರ ಕುಮಾರಸ್ವಾಮಿಯವರ ನಿಜ ಬಣ್ಣ ಬಯಲಾಗಿದೆ.

ಬಿಜೆಪಿ ಕೇವಲ ಬೋಗಸ್ ಆಶ್ವಾಸನೆ ನೀಡಿ ಬಡವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಗ್ಯಾರಂಟಿಗಳೆಂದಿಗೂ ನಿಲ್ಲುವುದಿಲ್ಲ. ಆರ್ಥಿಕ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ಗ್ಯಾಂಟಿಗಳನ್ನು ನೀಡಿ ಮಾದರಿಯಾಗಿದ್ದಾರೆ.

ಶೇ ೯೦ ರಷ್ಟು ಯಶಸ್ವಿಯಾಗಿದೆ. ಇನ್ನುಳಿದ ಶೇ ೧೦ ಜನರಿಗೆ ಗ್ಯಾರಂಟಿ ಸಮಿತಿ ಸದಸ್ಯರು ತಲುಪಿಸುವ ಕೆಲಸ ಮಾಡಬೇಕೆಂದರು.
ಅನುಷ್ಟಾನ ಸಮಿತಿ ಅಧ್ಯಕ್ಷ ಎಸ್.ಮಣಿಶೇಖರ್ ಮಾತನಾಡಿ, ಶಾಸಕರು ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವಂತೆ ಹಾಗೂ ಬಡ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ನಮ್ಮ ಮೇಲೆ ನಂಬಿಕೆಯಿಟ್ಟು ಸ್ಥಾನಮಾನ ನೀಡಿದ್ದಾರೆ.

ಶಾಸಕರ ಸಲಹೆ ಸೂಚನೆ ಮೇರೆಗೆ ಪ್ರಾಮಾಣಿಕವಾಗಿ ಜನರಿಗೆ ತಲುಪಿಸಲು ಶ್ರಮಿಸಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆಂದರು.

B.K. Sangameshwar ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು ಮತ್ತು ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಪ್ರವೀಣ್, ಮುರುಗೇಶ್, ನಾಗೇಶ್, ತಾಪಂ ಇಓ ಗಂಗಣ್ಣ, ಸಿಡಿಪಿಓ ಸುರೇಶ್, ನಗರಸಭಾ ಸದಸ್ಯರಾದ ಮಣಿ, ಶಬ್ಬೀರ್, ಬಷೀರ್ ಆಹಮ್ಮದ್, ಬಿ.ಟಿ.ನಾಗರಾಜ್ ಹಾಜರಿದ್ದರು.

BSNL Company ಜುಲೈ ನಲ್ಲಿ ಬಿಎಸ್ ಎನ್ ಎಲ್ ನಿಂದ ಗ್ರಾಹಕರನ್ನು ಸೆಳೆಯಲು ಮಾಸ್ಟರ್ ಪ್ಲಾನ್

0

BSNL Company ಟೆಲಿಕಾಂ ಕ್ಷೇತ್ರದ ದೈತ್ಯಗಳಲ್ಲಿ ಒಂದಾಗಿರುವ ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್‌ ಈಗ ಗ್ರಾಹಕರನ್ನು ತನ್ನತ್ತ ಸೆಳೆಯಲು ಭರ್ಜರಿ ಪ್ಲ್ಯಾನ್‌ ಮಾಡಿಕೊಂಡಿದೆ. ಆರಂಭದಲ್ಲಿ ಅಗ್ಗದ ರಿಚಾರ್ಜ್‌ ಪ್ಲ್ಯಾನ್‌ ನೀಡಿ ಬಳಕೆದಾರರನ್ನು ಸೆಳೆದ ಬಿಎಸ್‌ಎನ್‌ಎಲ್‌, ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಮತ್ತೊಂದು ವಲಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಗೊಳಿಸಿಕೊಳ್ಳಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.

ಜುಲೈನಲ್ಲಿ ಖಾಸಗಿ ಕಂಪನಿಗಳ ರಿಚಾರ್ಜ್‌ ದರಗಳಲ್ಲಿ ಏರಿಕೆ ಕಂಡಿದ್ದರಿಂದ ಬಳಕೆದಾರರ, ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಬಿಎಸ್‌ಎನ್‌ಎಲ್‌ ಹಲವು ರಾಜ್ಯಗಳಲ್ಲಿ 4ಜಿ ಸೇವೆಯನ್ನು ಆರಂಭಿಸಿದ್ದು, ಮತ್ತೊಮ್ಮೆ ಈ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಸಾಧಿಸಲು ಮಾಸ್ಟರ್‌ ಪ್ಲ್ಯಾನ್‌ ಮಾಡಿಕೊಂಡಿದೆ.

ಈ ಕಂಪನಿಯ ರಿಚಾರ್ಜ್‌ ಪ್ಲ್ಯಾನ್‌ಗಳು ಬೇರೆ ಕಂಪನಿಗಳ ಪ್ಲ್ಯಾನ್‌ಗಳಿಗಿಂತ ಅಗ್ಗವಾಗಿವೆ.
ಕೆಲವೇ ಕ್ಷಣಗಳಲ್ಲಿ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮುಂಗಾರು ಮಳೆ!
ಗ್ರಾಹಕರ ಮುಖದಲ್ಲಿ ಮಂದಹಾಸ
ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲು BSNL ಸಂಪೂರ್ಣ ತಯಾರಿ ನಡೆಸಿದೆ.

ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಉಚಿತ ಕರೆ ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್ ದೆಹಲಿ ಮತ್ತು ಮುಂಬೈ ಹೊರತುಪಡಿಸಿ ದೇಶದ ಮೂಲೆ ಮೂಲೆಗಳಲ್ಲಿ ತನ್ನ ವ್ಯಾಪ್ತಿಯನ್ನು ಪಸರಿಸಿದೆ.

BSNL Company ಕಂಪನಿಯು ದೇಶಾದ್ಯಂತ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡುತ್ತದೆ. ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ರೀಚಾರ್ಜ್ ಯೋಜನೆಗಳ ನಡುವೆ, BSNL ಅಂತಹ ಅನೇಕ ಯೋಜನೆಗಳನ್ನು ಹೊಂದಿದೆ, ಇದರಲ್ಲಿ ಬಳಕೆದಾರರಿಗೆ ಸೂಪರ್ಫಾಸ್ಟ್ ಇಂಟರ್ನೆಟ್ ಅನ್ನು ಸೌಲಭ್ಯವನ್ನು ಪಡೆಯಬಹುದು.

1000GB ಡೇಟಾ
ಸರ್ಕಾರಿ ಟೆಲಿಕಾಂ ಕಂಪನಿಯ ಭಾರತ್ ಫೈಬರ್‌ಗಾಗಿ, ಕಂಪನಿಯು ಅಂತಹ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಸೂಪರ್‌ಫಾಸ್ಟ್ ವೇಗದಲ್ಲಿ 1000GB ಡೇಟಾವನ್ನು ಬಳಸಬಹುದಾಗಿದೆ.

BSNL ನ ರೂ 329 ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ, ಬಳಕೆದಾರರಿಗೆ 25Mbps ವೇಗದಲ್ಲಿ 1000GB ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ ಒಂದು ತಿಂಗಳದ್ದಾಗಿದೆ.

ಖಾಸಗಿ ಕಂಪನಿಗಳ ರಿಚಾರ್ಜ್ ಪ್ಲ್ಯಾನ್‌ ದುಬಾರಿ: BSNLನತ್ತ ಮುಖ ಮಾಡಿರು ಗ್ರಾಹಕ
ಕಂಪನಿಯ 399 ರೂ. ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 30Mbps ವೇಗದಲ್ಲಿ 1400GB ಡೇಟಾವನ್ನು ನೀಡಲು ಮುಂದಾಗಿದೆ. ಈ ಎರಡೂ ಬ್ರಾಡ್‌ಬ್ಯಾಂಡ್ ಯೋಜನೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ತುಂಬ ಅನುಕೂಲವಾಗುತ್ತವೆ.

ಹಳೆಯ ಗ್ರಾಹಕರಿಗೂ ಭರ್ಜರಿ ಯೋಜನೆ
ಬಿಎಸ್‌ಎನ್‌ಎಲ್ ತನ್ನ ಹಳೆಯ ಗ್ರಾಹಕರ ಮುಖದಲ್ಲೂ ಮಂದಹಾಸ ಮೂಡಿಸಿದೆ. ಹಳೆಯ ಕಸ್ಟಮರ್‌ಗೆ ಎರಡು ಯೋಜನೆಗಳನ್ನು ಪರಿಚಯಿಸಿದೆ, ಇದು ರೂ 249 ಮತ್ತು ರೂ 299 ನಲ್ಲಿ ಬರುತ್ತದೆ. ರೂ 249 ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ, ಬಳಕೆದಾರರಿಗೆ 25Mbps ವೇಗದಲ್ಲಿ 10GB ಡೇಟಾವನ್ನು ನೀಡಲಾಗುತ್ತದೆ. ಇದರ ನಂತರ, ಬಳಕೆದಾರರಿಗೆ 2Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ಬಳಸಬಹುದಾಗಿದೆ. ಅದೇ ಸಮಯದಲ್ಲಿ, 299 ರೂಗಳ ಯೋಜನೆಯಲ್ಲಿ, 20GB ಡೇಟಾವನ್ನು 25Mbps ವೇಗದಲ್ಲಿ ನೀಡಲಾಗುತ್ತದೆ.

ಇದರ ಜೊತೆಗೆ ಈ ಎಲ್ಲ ಪ್ಲ್ಯಾನ್‌ಗಳ ಉಚಿತ ಕರೆಗಳನ್ನು ಸಹ ನೀಡಲು ಬಿಎಸ್‌ಎನ್‌ಎಲ್‌ ತೀರ್ಮಾನಿಸಿದೆ.

Klive News ಸುದ್ದಿ ಸಾಲು

0

ರಾಜ್ಯದ 56 ಕಡೆ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತರ ದಾಳಿ.

ರಾಜ್ಯದ ಎಲ್ಲಾ ಟ್ರೆಕ್ಕಿಂಗ್ ಸ್ಥಳಗಳಿಗೆ ಆನ್ ಲೈನ್ ಬುಕಿಂಗ್ ಕಡ್ಡಾಯ.

ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಮಾತು: ಮಂಗಳೂರು‌ ಶಾಸಕ ಭರತ್ ಶೆಟ್ಟಿ ವಿರುದ್ಧ ದೂರು ದಾಖಲು.

ಸಮಯ ಮೀರಿದ ಸೇವೆ, ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ವಿರಾಟ್ ಕೊಹ್ಲಿ ಪಬ್ ‘ಒನ್8’ ಮೇಲೆ ಕೇಸು.

ತ್ರಿಪುರಾದಲ್ಲಿ 849 ವಿದ್ಯಾರ್ಥಿಗಳಲ್ಲಿ ಹೆಚ್ ಐ ವಿ ಪಾಸಿಟಿವ್, 48 ವಿದ್ಯಾರ್ಥಿಗಳು ಸಾವು.

ಚಾರ್ಮಾಡಿ ಘಾಟ್ ನ ಫಾಲ್ಸ್‌ನ ಅಪಾಯಕಾರಿ ಸ್ಥಳದಲ್ಲಿ ಮೋಜು: ವಾಹನ, ಬಟ್ಟೆ ಸೀಜ್ ಮಾಡಿದ ಪೊಲೀಸರು.

MESCOM ಜುಲೈ 11 ರಂದು ಹಳೇ ಬೊಮ್ಮನಕಟ್ಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರ ಉಪವಿಭಾಗ-1 ಘಟಕ-3ರ ವ್ಯಾಪ್ತಿಯಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ಹಳೇ ಬೊಮ್ಮನಕಟ್ಟೆ, ಮಮತಾ ನಗರ, ದೇವಂಗಿ 2ನೇ ಹಂತದ ಬಡಾವಣೆ, ಪಾರ್ವತಮ್ಮ MESCOM ಬಡಾವಣೆ, ಮಹಾರಾಣಿ ಶಾಲಾ ಸುತ್ತಮುತ್ತಲಿನ ಪ್ರದೇಶದಲ್ಲಿ ಜು. 11 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನರಿಕ ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Bharathi Tirtha ಹೊಸಪೇಟೆಯಲ್ಲಿ ‘ಸುವರ್ಣ ಭಾರತೀ’ ಕಾರ್ಯಕ್ರಮ

0

Bharathi Tirtha ಶೃಂಗೇರಿ ಪೀಠಾಧಿಪತಿಗಳಾಗಿರುವ ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಸಂನ್ಯಾಸ ದೀಕ್ಷೆ ಸ್ವೀಕರಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಶೃಂಗೇರಿ ಮಠದಿಂದ “ಸುವರ್ಣ ಭಾರತೀ” ಎಂಬ ಶೀರ್ಷಿಕೆಯಡಿಯಲ್ಲಿ ಎಲ್ಲಾ ಊರುಗಳಲ್ಲಿ ಪ್ರವಚನಗಳನ್ನು ಆಯೋಜಿಸಲಾಗಿವೆ. ಅದರಂಗವಾಗಿ ಈ ಭಾಗದ ಪ್ರವಚನವನ್ನು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಸಾನಿಧ್ಯ – ಶ್ರೀ ಚಿಂತಾಮಣಿ ಮಠ, ಅಮರಾವತಿ ಹೊಸಪೇಟೆಯಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಪೂಜ್ಯ ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಗಮಿಸಿದ್ದರು.

ಶ್ರೀ ಮಠದ ಭಕ್ತಾದಿಗಳು ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳ ಪಾದ ತೊಳೆದು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಉಭಯಶ್ರೀಗಳು ಗೋ ಮಾತೆಗೆ ಗ್ರಾಸವನ್ನು ನೀಡಿ – ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರಿಗೆ ಮಂಗಳಾರತಿ ಮಾಡಿ – ದೀಪವನ್ನು ಪ್ರಜ್ವಲಿಸಿ – ವೇದಿಕೆಯಲ್ಲಿ ಆಸೀನರಾದರು. ಗಣೇಶ್ ಗೋಸಾವಿ ಮತ್ತು ಶ್ರೀನಿವಾಸ್ ರವರು ವೇದ ಘೋಷವನ್ನು ಮಾಡಿದರು – ಚಿಂತಾಮಣಿ ಮಠ ಭಕ್ತ ಮಂಡಳಿಯಿಂದ ಉಭಯಶ್ರೀಗಳಿಗೆ ಫಲ ಸಮರ್ಪಿಸಿದರು – ಪುಟ್ಟ ಮಕ್ಕಳು ಪ್ರಾರ್ಥನಾ ಗೀತೆಯನ್ನು ಹೇಳಿದರು – ಶ್ರೀಮತಿ ಲಕ್ಷ್ಮೀ ಕರಣಂರವರು ಶ್ರೀ ಚಿಂತಾಮಣಿ ಗುರುಗಳ ಬಗ್ಗೆ ಗೀತೆಯೊಂದನ್ನು ಹಾಡಿದರು – ಬಿಜಾಪುರದ ಸಂಜೀವ್ ಬಿಳಗಿಯವರು ಕಾರ್ಯಕ್ರಮದ ಉದ್ದೇಶವನ್ನು ಮುನ್ನುಡಿದರು – ಕು. ಶಿವಾನಿಯ ನಿರೂಪಿಣೆಯೊಂದಿಗೆ ಆರಂಭವಾದ ಕಾರ್ಯಕ್ರಮವು – ಉಭಯಶ್ರೀಗಳ ಪ್ರವಚನದ ನಂತರ – ಶ್ರೀ ಸತ್ಯನಾರಾಯಣ್ ಜ್ಯೋಶಿಯವರ ವಂದನಾರ್ಪಣೆಯೊಂದಿಗೆ ಸಮಾಪ್ತವಾಯಿತು.

ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಬಗ್ಗೆ ತಿಳಿಸಿಕೊಟ್ಟರು.

ಚಿಂತಾಮಣಿ ಸ್ವಾಮಿಗಳು ತಿಳಿಸಿಕೊಟ್ಟ ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಜೀವನ ಚರಿತ್ರೆ ಕೇಳಿ ಜನರು ಬಹಳ ಭಾವುಕರಾದರು. “ಚಲನಚಿತ್ರವನ್ನು ಕಂಡಂತೆ, ಕಣ್ಣಿಗೆ ಕಟ್ಟಿದಂತೆ ಕಥೆಯನ್ನು ಹೇಳಿದರು, ಆಲಿಸಿ ಆನಂದವಾಯಿತು” ಎಂದು ಭಕ್ತರು ಉದ್ಗರಿಸಿದರು.

ಹೊಸಪೇಟೆ ಚಿಂತಾಮಣಿ ಮಠದಲ್ಲಿ ನಿನ್ನೆ ನಡೆದ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವದಲ್ಲಿ ಪ. ಪೂ. ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು ಮಹಾ ಸನ್ನಿಧಾನಮ್ ಅವರ ಬಾಲ್ಯದ ಪ್ರಮುಖ ಘಟನೆಗಳ ಬಗ್ಗೆ ನೀಡಿದ ಪ್ರವಚನ ಅದ್ವಿತೀಯವಾಗಿದ್ದಿತು. ನಾವು ಚಲನಚಿತ್ರ ವೀಕ್ಷಣೆ ಮಾಡುವಾಗ ನಾವೇ ಪಾತ್ರಗಳಲ್ಲಿ ಲೀನವಾದಂತೆ, ಸೀತಾರಾಮಾಂಜನೇಯರ ಬಾಲ್ಯದ ಅವರ ಏಕ ಸಂಧಿ ಗ್ರಾಹಿತ್ವ, ಏಕಾಗ್ರತೆ, ಗುರುಗಳಲ್ಲಿ ಅಚಲ ವಿಶ್ವಾಸ, ನಾವು ನಮ್ಮೆದುರಿಗೆ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತಿತ್ತು. ಇಂತಹ ಮೇಧಾವಿ, ನಿರರ್ಗಳ ಪ್ರವಚನ ಅನುಗ್ರಹಿಸುವ ಶ್ರೀಪಾಂದಂಗಳವರನ್ನು ಪಡೆದ ನಾವೇ ಧನ್ಯರು ಎಂದು ಭಕ್ತಾದಿಗಳು
ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಜೀವನ ಚರಿತ್ರೆಯಲ್ಲಿ ಅವರ ಜನನ ಹೇಗಾಯ್ತು ? ಎನ್ನುವುದರ ಕುರಿತು ಒಂದು ಸಣ್ಣ ಕಥೆ ಮೂಲಕ ಚಿಂತಾಮಣಿ ಮಠದ ಶ್ರೀಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳವರ ಪ್ರವಚನದಲ್ಲಿ ತಿಳಿಸಿದರು.

Bharathi Tirtha ಕಾರ್ಯಕ್ರಮದ ನಂತರ ಶಂಕರಾಚಾರ್ಯರಿಗೆ ಮಹಾಮಂಗಳಾರತಿಯನ್ನು ನೆರವೇರಿಸಿ, ನೆರದಿದ್ದ ಎಲ್ಲಾ ಭಕ್ತರಿಗೆ ಸ್ವಾಮೀಜಿಗಳಿಂದ ಆಶೀರ್ವಾದ ಮೂಲಕ ಫಲವನ್ನ ನೀಡುವುದರ ಮೂಲಕ ಪ್ರಸಾದವನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಚಿಂತಾಮಣಿ ಮಠದ ಭಕ್ತರು ಹೊಸಪೇಟೆ ಮತ್ತು ಸುತ್ತಮುತ್ತಲಿನ ಬ್ರಾಹ್ಮಣ ಸಮಾಜದ ಸದಸ್ಯರು ಭಾಗವಹಿಸಿದ್ದರು. ವರ್ಣನ ಆರ್ಭಟಕ್ಕೆ ಕಾರ್ಯಕ್ರಮವನ್ನು ಮಠದ ಒಳಾಂಗಣದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.

ಮುರುಳಿಧರ ನಾಡಿಗೇರ್

Karnataka Sheep & Wool Development Corporation Ltd ಕುರಿ/ಮೇಕೆ ಸಾಕಾಣಿಕೆ ಮಾಡಲು‌ ನೋಂದಾಯಿತ ಸಂಘಟನೆಗಳಿಂದ ಅರ್ಜಿ ಆಹ್ವಾನ

0

Karnataka Sheep & Wool Development Corporation Ltd ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ/ಮೇಕೆ ಸಾಕಾಣಿಕೆ ಮಾಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಬೆಂಗಳೂರು ಇಲ್ಲಿ ನೊಂದಾಯಿಸಿಕೊಂಡಿರುವ ಜಿಲ್ಲೆಯ ಕುರಿ ಮತ್ತ ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಹಾಗೂ ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದೊಂದಿಗೆ ಷೇರುದಾರರಾಗಿ ಸಕ್ರಿಯ ಸಂಘಗಳ ಸದಸ್ಯರುಗಳಿಂದ ಅರ್ಜಿ ಆಹ್ವಾನಿಸಿದೆ.
Karnataka Sheep & Wool Development Corporation Ltd ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಕರ್ನಾಟಕ ಕುರಿ ಮತ್ತ ಉಣ್ಣೆ ಅಭಿವೃದ್ಧಿ ನಿಗಮ, ಸಿ.ಎಂ.ಸಿ.ಕಟ್ಟಡ, 2ನೇ ಮಹಡಿ, ನೆಹರೂ ರಸ್ತೆ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜು. 25 ರೊಳಗಾಗಿ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಆಯಾ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಅಥವಾ ಕುರಿಗಾರರ ಸಂಘದ ಕಚೇರಿಗಳನ್ನು ಸಂಪರ್ಕಿಸುವುದು.

Forest Department ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಶಿವಮೊಗ್ಗ ಭೇಟಿ ಮಾಹಿತಿ

0

Forest Department ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಇವರು ಜು. 11 ರಂದು ಬೆಳಗ್ಗೆ 12.40ಕ್ಕೆ ಶಿವಮೊಗ್ಗಕ್ಕೆ ಭೇಟಿನೀಡಲಿದ್ದು, ಮಧ್ಯಾಹ್ನ 2.00ಕ್ಕೆ ಅರಣ್ಯ ಭವನದಲ್ಲಿ ಆಯೋಜಿಸಿರುವ ಶಿವಮೊಗ್ಗ ಜಿಲ್ಲೆಯ ಅರಣ್ಯ ಅಧಿಕಾರಿಗಳೊಂದಿಗೆ ಪರಾಮರ್ಶನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.00ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸಂಜೆ 6.00ಕ್ಕೆ Forest Department ಶಿವಮೊಗ್ಗದಿಂದ ರಸ್ತೆ ಮೂಲಕ ಬೆಂಗಳೂರಿಗೆ ವಾಪಾಸ್ಸು ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ