Department Of Legal Metrology ಶಿವಮೊಗ್ಗ ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ ಏಪ್ರಿಲ್ -2024 ರಿಂದ ಜೂನ್-2024 ರವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸಾಧಿಸಲಾದ ಪ್ರಗತಿಯ ವಿವರವನ್ನು ಇಲಾಖೆಯ ಸಹಾಯಕ ನಿಯಂತ್ರಕರು ಈ ಕೆಳಗಿನಂತೆ ನೀಡಿರುತ್ತಾರೆ.
Department Of Legal Metrology ತೂಕ, ಅಳತೆ ಸಾಧನಗಳ ಸತ್ಯಾಪನೆ/ಮುದ್ರೆಯಿಂದ ಸಂಗ್ರಹಿಸಿದ ಶುಲ್ಕ ರೂ. 45,44,723/- ಆಗಿರುತ್ತದೆ. ತಪಾಸಣೆ ಮಾಡಿರುವ ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳ ಸಂಖ್ಯೆ 476. ತಪ್ಪಿತಸ್ಥರ ಮೇಲೆ ಹೂಡಿರುವ ಮೊಕದ್ದಮೆಗಳ ಸಂಖ್ಯೆ 92 ಆಗಿರುತ್ತದೆ. ರಾಜಿ ಅಭಿಸಂದಾನ ಮಾಡಿರುವ ಮೊಕದ್ದಮೆಗಳ ಸಂಖ್ಯೆ 87. ಮೊಕದ್ದಮೆಗಳನ್ನು ರಾಜಿ ಅಭಿಸಂಧಾನ ಮಾಡಿ ವಿಧಿಸಿದ ದಂಡ ರೂ.2,80,000/- ಆಗಿದ್ದು, 41 ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯ ನಿಯಂತ್ರಕ ಹೆಚ್.ಎಸ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Department Of Legal Metrology ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ತಪ್ಪಿತಸ್ಥರ ಮೇಲೆ ಹೂಡಿದ 92 ಮೊಕದ್ದಮೆಗಳಲ್ಲಿ 87 ರಾಜಿ ಅಭಿ ಸಂಧಾನವಾಗಿವೆ -ಎಚ್.ಎಸ್.ರಾಜು
Aparna Anchor ಖ್ಯಾತ ನಿರೂಪಕಿ ಇನ್ನಿಲ್ಲ
Aparna Anchor ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ (57) (ಜುಲೈ11) ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ಖಚಿತಪಡಿಸಿವೆ.
‘ಅಚ್ಚ ಕನ್ನಡದ ನಿರೂಪಕಿ’ ಎಂದೇ ಪ್ರಸಿದ್ದಿ ಪಡೆದಿದ್ದ ಅಪರ್ಣಾ ಅವರು, ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆ ಮಾತಾಗಿದ್ದರು.
ಸಿನಿಮಾ ಮತ್ತು ಧಾರಾವಾಹಿಗಳಲ್ಲಿಯೂ ನಟಿಸಿ ಅವರು ಖ್ಯಾತಿ ಪಡೆದಿದ್ದರು. ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಕೂಡ ಅಪರ್ಣಾ ನಡೆಸಿಕೊಟ್ಟಿದ್ದರು. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡ ಬರುವ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.
1984ರಲ್ಲಿ ತೆರೆಕಂಡಿದ್ದ ಪುಟ್ಟಣ್ಣ ಕಣಗಾಲ್ ಅವರ ‘ಮಸಣದ ಹೂವು’ಚಿತ್ರದಲ್ಲಿ ಖ್ಯಾತ ನಟ ದಿವಂಗತ ಅಂಬರೀಶ್ ಹಾಗೂ ಜಯಂತಿಯ ಅವರ ಜೊತೆಗೆ ನಟಿಸುವ ಮೂಲಕ ಅಪರ್ಣಾ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು. ಆ ಬಳಿಕ 1989ರಲ್ಲಿ ನಿರೂಪಕಿಯಾಗಿ ಟಿವಿ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದವರು ಅಪರ್ಣಾ. ನಂತರ ರೇಡಿಯೋ ಜಾಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು. 1998ರಲ್ಲೇ ದೀಪಾವಳಿ ಕಾರ್ಯಕ್ರಮದಲ್ಲಿ 8 ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
2013ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕೂಡ ಭಾಗವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮೀ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದರು.
ಸಿಎಂ ಸಂತಾಪ :
Aparna Anchor “ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆ ಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾ
S. Madhu Bangarappa ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಅವರ ಕಾರ್ಯಾಲಯ ಉದ್ಘಾಟನೆ
S. Madhu Bangarappa ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ಗುರುವಾರದಂದು ಶಿವಮೊಗ್ಗ ಎ.ಸಿ.ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ರವರ ಕಾರ್ಯಾಲಯದ ಉದ್ಘಾಟನೆ ನೆರವೇರಿಸಿದರು.
S. Madhu Bangarappa ಕಾಂಗ್ರೆಸ್ ಪಕ್ಷದ ಮುಖಂಡರಾದ ಆಯನೂರ್ ಮಂಜುನಾಥ್, ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲೆಯ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು
Red Cross Organization ರಕ್ತದಾನವು ಶ್ರೇಷ್ಠ ಮತ್ತು ಪವಿತ್ರ ದಾನವಾಗಿದೆ- ಡಾ.ಬಿ.ಜಿ.ಚನ್ನೇಶ್
Red Cross Organization ದಾನಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದಾನವು ರಕ್ತದಾನ ಆಗಿದ್ದು, ದಾನಿಗಳಿಂದ ಸಂಗ್ರಹಿಸಿದ ರಕ್ತವು ಇನ್ನೊಬ್ಬರ ಪ್ರಾಣ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಚನ್ನೇಶ್ ಬಿಜಿ ಅಭಿಮತ ವ್ಯಕ್ತಪಡಿಸಿದರು ಅವರು ಇಂದು ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರೆಡ್ ಕ್ರಾಸ್ ಸಂಸ್ಥೆ ಎನ್ಎಸ್ಎಸ್ ಘಟಕ ರೋವರ್ಸ್ ರೆಂಜರ್ಸ್ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು
ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಕ್ತದ ಗುಂಪು ಪರೀಕ್ಷೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ವಿಶ್ವಾದ್ಯಂತ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತದೆ. ಆರೋಗ್ಯವಂತ ಯುವಜನತೆ ರಕ್ತದಾನ ಮಾಡಬೇಕು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಎನ್ಎಸ್ಎಸ್ ನ ಸಂಚಾರಕರಾದ ಡಾಕ್ಟರ್ ರೇಷ್ಮಾ ಅವರು ಮಾತನಾಡುತ್ತಾ
ರಕ್ತದ ಕೊರತೆ ಇರುವುದನ್ನು ನೋಡುತ್ತಿದ್ದು, ಸಕಾಲದಲ್ಲಿ ರಕ್ತ ಸಿಗದೇ ಜೀವ ಕಳೆದುಕೊಳ್ಳುವ ಸ್ಥಿತಿ ಇರುತ್ತದೆ. ಇಂದು ಡೆಂಗ್ಯೂ ಹಾಗೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಆದರಿಂದ ರಕ್ತದ ಕೊರತೆ ತುಂಬಾ ಇದೆ ಈ ನಿಟ್ಟಿನಲ್ಲಿ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
Red Cross Organization ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಶ್ರೀ ಜಿ ವಿಜಯಕುಮಾರ್ ಮಾತನಾಡುತ್ತಾ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ವರದಿಗಳ ಪ್ರಕಾರ ರಕ್ತದಾನ ಮಾಡುವುದರಿಂದ ಶೇಕಡ 80% ಹೃದಯಘಾತ ಕಡಿಮೆಯಾಗುತ್ತದೆ ವಿದ್ಯಾರ್ಥಿಗಳು ಸದಾ ನವರೋವಿಕೆಯಿಂದ ಇರುತ್ತಾರೆ ಹಾಗೂ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಎಂದು ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು. ಎನ್ಎಸ್ಎಸ್ ಸಂಚಾಲಕರಾದ ಡಾಕ್ಟರ್ ಸೋಮಶೇಖರ್ ಡಾಕ್ಟರ್ ಸುಧಾಕರ್ ರೆಡ್ ಕ್ರಾಸ್ ಸಂಚಾಲಕರಾದ ಡಾಕ್ಟರ್ ಪ್ರಸನ್ನ ಎಸ್ ಹೆಚ್. ಜೈ ಕೀರ್ತಿ ಎಚ್ ಟಿ ರೋವರ್ಸ್ ಹಾಗೂ ರೇಂಜರ್ಸ್ ವಿಭಾಗದ ಡಾಕ್ಟರ್ ಬಿ ಎಂ ಚಂದ್ರಶೇಖರ್. ಪವಿತ್ರ ಕೆಪಿ. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಸಕ್ರಾ ನಾಯಕ. ಡಾಕ್ಟರ್ ಪೂರ್ಣಿಮಾ ರೆಡ್ ಕ್ರಾಸ್ ನಿರ್ದೇಶಕರಾದ ಆರ್ ಗಿರೀಶ್. ಧರಣೇಂದ್ರ ದಿನಕರ್. ರೆಡ್ ಕ್ರಾಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Supreme Court ಮುಸ್ಲೀಂ ಮಹಿಳೆಯರೂ ತಮ್ಮ ಪತಿಯಿಂದ ಜೀವನಾಂಶ ಪಡೆಯಬಹುದು- ಸುಪ್ರೀಂ ತೀರ್ಪು
Supreme Court ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ, ‘ಪತ್ನಿಯ ಜೀವನಾಂಶದ ಹಕ್ಕನ್ನು ವ್ಯವಹರಿಸುವ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಗಂಡನಿಂದ ಜೀವನಾಂಶವನ್ನು ಪಡೆಯಬಹುದು, ಇದು ಎಲ್ಲ ಧರ್ಮದ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ’ ಎಂದು ಹೇಳಿದೆ.
‘ಸೆಕ್ಷನ್ 125’ ಮುಸ್ಲಿಂ ಮಹಿಳೆಯರನ್ನೂ ಒಳಗೊಂಡಿದೆ
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠಗಳು ತನ್ನ ಏಕಕಾಲಿಕ ತೀರ್ಪಿನಲ್ಲಿ, “ಹಿಂದಿನ ಸಿಆರ್‌ಪಿಸಿಯ ಸೆಕ್ಷನ್ 125, ಜೀವನಾಂಶದ ಹೆಂಡತಿಯ ಕಾನೂನು ಹಕ್ಕನ್ನು ತಿಳಿಸುತ್ತದೆ, ಇದು ಮುಸ್ಲಿಂ ಮಹಿಳೆಯರಿಗೂ ಅನ್ವಯಿಸುತ್ತದೆ” ಎಂದು ಹೇಳಿದೆ. “ನಾವು ಈ ಮೂಲಕ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ ಮತ್ತು ಸೆಕ್ಷನ್ 125 ಎಲ್ಲ ಮಹಿಳೆಯರಿಗೆ ಅನ್ವಯಿಸುತ್ತದೆ ಮತ್ತು ವಿವಾಹಿತ ಮಹಿಳೆಯರಿಗೆ ಮಾತ್ರವಲ್ಲ” ಎಂದು ತೀರ್ಪು ಪ್ರಕಟಿಸುವಾಗ ನ್ಯಾಯಮೂರ್ತಿ ನಾಗರತ್ನ ಹೇಳಿದರು.
“ಜೀವನಾಂಶವು ದಾನವಲ್ಲ. ಆದರೆ, ವಿವಾಹಿತ ಮಹಿಳೆಯರ ಹಕ್ಕು, ಅವರ ಧರ್ಮವನ್ನು ಲೆಕ್ಕಿಸದೆ ಎಲ್ಲ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ” ಎಂದು ಪೀಠವು ಒತ್ತಿಹೇಳಿತು.
ಕೌಟುಂಬಿಕ ನ್ಯಾಯಾಲಯದ ಜೀವನಾಂಶ ಆದೇಶದಲ್ಲಿ ಮಧ್ಯಪ್ರವೇಶಿಸಬಾರದೆಂಬ ತೆಲಂಗಾಣ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ವಿಚ್ಛೇದಿತ ಮುಸ್ಲಿಂ ಮಹಿಳೆಯು ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶಕ್ಕೆ ಅರ್ಹರಲ್ಲ ಮತ್ತು ಬದಲಿಗೆ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 1986 ರ ಅಡಿಯಲ್ಲಿ ಪರಿಹಾರವನ್ನು ಪಡೆಯಬೇಕು” ಎಂದು ಸಮದ್ ವಾದಿಸಿದರು.
ವಿಚ್ಛೇದಿತ ಪತ್ನಿಗೆ ಮಾಸಿಕ ಭತ್ಯೆ ನೀಡುವಂತೆ ಕೌಟುಂಬಿಕ ನ್ಯಾಯಾಲಯವು ಸೂಚಿಸಿದ್ದ ಮೊಹಮ್ಮದ್ ಅಬ್ದುಲ್ ಸಮದ್ ಅವರ ಅರ್ಜಿಯ ಮೇಲೆ ಮಹತ್ವದ ತೀರ್ಪು ಬಂದಿದೆ. ಆದರೆ, ಸಮದ್ ನಿರ್ದೇಶನವನ್ನು ಪ್ರಶ್ನಿಸಿದ್ದು, ತೆಲಂಗಾಣ ಹೈಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿತು. ನಂತರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚ್ಛೇದಿತ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 1986 ಕಾಯಿದೆಯನ್ನು ಆಶ್ರಯಿಸಬಹುದು ಎಂದು ಅವರ ವಕೀಲರು ವಾದಿಸಿದರು. ಇದು ಸೆಕ್ಷನ್ 125 ಸಿಆರ್‌ಪಿಸಿ ಮಾಡುವುದಕ್ಕಿಂತ ಹೆಚ್ಚಿನದನ್ನು ಒದಗಿಸುತ್ತದೆ ಎಂದು ಒತ್ತಿ ಹೇಳಿದರು.
Supreme Court ಒಂದು ವಿಶೇಷ ಕಾನೂನನ್ನು ಉಲ್ಲೇಖಿಸಿಸಾಮಾನ್ಯ ಕಾನೂನಿನ ಮೇಲೆ ಮೇಲುಗೈ ಸಾಧಿಸುತ್ತದೆ ಎಂದು ಅವರು ವಾದಿಸಿದರು.
ಅಮಿಕಸ್ ಕ್ಯೂರಿ ಗೌರವ್ ಅಗರ್ವಾಲ್ ಅವರು, ವೈಯಕ್ತಿಕ ಕಾನೂನು ಲಿಂಗ-ತಟಸ್ಥ ಸಿಆರ್‌ಪಿಸಿ ಅಡಿಯಲ್ಲಿ ಮಹಿಳೆಯ ಪರಿಹಾರದ ಅರ್ಹತೆಯನ್ನು ಕಸಿದುಕೊಳ್ಳುವುದಿಲ್ಲ ಎಂದು ಪ್ರತಿವಾದಿಸಿದರು.
Ramalinga Reddy ರಾಮನಗರ & ಕನಕಪುರಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೊನೇ ಹಂತದಲ್ಲಿ ಅನುಮತಿ ನಿರಾಕರಣೆ
Ramalinga Reddy ಸಿಬ್ಬಂದಿ ನೇಮಕಾತಿ ಮತ್ತು ಸಮರ್ಪಕ ಮೂಲ ಸೌಕರ್ಯವನ್ನು ಇನ್ನೂ ಕಲ್ಪಿಸದಿರುವ ಕಾರಣ ರಾಮನಗರ ಮತ್ತು ಕನಕಪುರ ವೈದ್ಯಕೀಯ ಕಾಲೇಜುಗಳನ್ನು ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ಕೊನೇ ಹಂತದಲ್ಲಿ ಅನುಮತಿ ನೀಡಲು ನಿರಾಕರಿಸಿದೆ.
ವೈದ್ಯಕೀಯ ಕಾಲೇಜು ಮಂಜೂರಾತಿ ಮತ್ತು ಅನುಮೋದನೆ ಹಿಂದೆ ಕೇಂದ್ರ ಸರ್ಕಾರ ರಾಜಕೀಯ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿರಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕನಕಪುರ ಮತ್ತು ರಾಮನಗರದಂತಹ ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿದರೆ ಹಲವಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನ್ಯಾಯಯುತವಾಗಿಲ್ಲ ಏಕೆಂದರೆ ಒಕ್ಕೂಟದ ಅಧಿಕಾರಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗವು ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಅಗತ್ಯ ಅನುಮತಿಗಳನ್ನು ನಿರಾಕರಿಸಿದೆ ಎಂದು ಅವರು ಆರೋಪಿಸಿದರು.
ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳ ಅಗತ್ಯವನ್ನು ಒತ್ತಿ ಹೇಳಿದ ರಾಮಲಿಂಗಾ ರೆಡ್ಡಿ, ಹೆಚ್ಚಿನ ಗ್ರಾಮೀಣ ಪ್ರದೇಶಗಳಾಗಿದ್ದು, ಅಂತಹ ಸಂಸ್ಥೆಗಳು ಇಡೀ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತವೆ, ಹೀಗಾಗಿ ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಕೇಂದ್ರ ಸರ್ಕಾರ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಪ್ರದೇಶಗಳಿಗೆ ವೈದ್ಯಕೀಯ ಕಾಲೇಜುಗಳನ್ನು ತರಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ , ಹೀಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ಧಾರದಿಂದ ಬಹುಶಃ ಅಸಮಾಧಾನಗೊಂಡಿದ್ದಾರೆ.
Ramalinga Reddy ಸ್ವತಃ ವೈದ್ಯರಾಗಿರುವ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್.ಡಿ, ರಾಮನಗರ ಮತ್ತು ಕನಕಪುರವನ್ನು ಹೊರಗಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಕನಕಪುರದ ಹಾಲಿ ಉಪ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತ ನಿರ್ಧಾರ ಕೈಗೊಂಡಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ರಾಮನಗರದ ಕ್ಲಿನಿಕಲ್ ಪ್ರಾಕ್ಟೀಸ್ ಸೂಕ್ತತೆ ಬಗ್ಗೆ ಮಾತಾಡಿದ ಡಾ. ರಂಗನಾಥ್ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಾದ ಚೆನ್ನಪಟ್ಟಣ, ಮಳವಳ್ಳಿ ಮತ್ತು ಮಾಗಡಿಯ ವಿದ್ಯಾರ್ಥಿಗಳಿಗೆ ಅಲ್ಲಿನ ಕಾಲೇಜು ಸೇವೆ ಉಪಯೋಗಕ್ಕೆ ಬರುತ್ತಿತ್ತು, ಗ್ರಾಮೀಣ ವಿದ್ಯಾರ್ಥಿಗಳಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತಿತ್ತುೆ ಎಂದು ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು ಮೂರು ಸ್ಥಳಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಅನುಮೋದಿಸಿದೆ ಎಂದು ದೃಢಪಡಿಸಿದ್ದರು.ಬೆಂಗಳೂರು ಉತ್ತರದ ವ್ಯಾಪ್ತಿಯ ಬಿಜಿಎಸ್ ವೈದ್ಯಕೀಯ ಕಾಲೇಜು, ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ & ರಿಸರ್ಚ್ ಸೆಂಟರ್ ಹಾಗೂ ಬಾಗಲಕೋಟೆಯ ಎಸ್‌ಆರ್ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಒಪ್ಪಿಗೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಆದರೆ, ಅಪೂರ್ಣ ಮೂಲಸೌಕರ್ಯ ಕೊರತೆಯೇ ರಾಮನಗರ ಮತ್ತು ಕನಕಪುರದ ಅರ್ಜಿಗಳನ್ನು ತಿರಸ್ಕರಿಸಲು ಕಾರಣ ಎಂದು ಅವರು ಹೇಳಿದ್ದಾರೆ. ಕರ್ನಾಟಕವು ಪ್ರಸ್ತುತ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ, ಜೊತೆಗೆ 2 ESI ಕಾಲೇಜುಗಳು ಮತ್ತು 70 ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ.
ಕನಕಪುರ ಮತ್ತು ರಾಮನಗರ ಎರಡನ್ನೂ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ, ‘ರಾಮನಗರ ಮತ್ತು ಕನಕಪುರ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನಿರಾಕರಿಸಿರುವುದು ಅತ್ಯಂತ ಬೇಸರ ತಂದಿದೆ, ಇದರಿಂದ ಹಿಂದುಳಿದವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಕೇಂದ್ರದ ಈ ನಿರ್ಣಯದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನಾನುಕೂಲವಾಗತ್ತದೆ ಎಂದು ಹೇಳಿದ್ದಾರೆ.
Dengue ಡೆಂಗ್ಯು ನಿಯಂತ್ರಣ ಪರಿಣಾಮಕಾರಿಯಾಗಿ ಆಗಬೇಕು- ಶಾಸಕ ಚನ್ನಬಸಪ್ಪ
Dengue ಡೆಂಗ್ಯೂ ಪ್ರಕರಣಗಳು ಪ್ರತಿನಿತ್ಯ ಉಲ್ಬಣಗೊಳ್ಳುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ, ನಿಯಂತ್ರಿಸಲು ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಡೆಂಗ್ಯೂ ನಿಯಂತ್ರಣದ ಕುರಿತಾದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಮೊಗ್ಗ ನಗರ ಜಿಲ್ಲೆಯ ಮುಖ್ಯಕೇಂದ್ರವಾಗಿದ್ದು ನಗರದಲ್ಲಿ ಡೆಂಗ್ಯೂ ಪ್ರರಕಣಗಳು ಹೆಚ್ಚಾಗದಂತೆ ಕಟೆಚ್ಚರ ವಹಿಸಿ ನಿಯಂತ್ರಣಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಈ ವೇಳೆ ಡಿಹೆಚ್‍ಓ ಡಾ.ನಟರಾಜ್ ಅವರು ಮಾತನಾಡಿ ಶಿವಮೊಗ್ಗ ನಗರ ಪ್ರದೇಶದಲ್ಲಿ 471 ಜನರಿಗೆ ಡೆಂಗ್ಯೂ ಪರೀಕ್ಷೆ ಮಾಡಲಾಗಿದ್ದು 54 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪ್ರತಿ ವಾರ್ಡ್ ಗಳಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದ್ದು ಪ್ರತಿ ಶುಕ್ರವಾರ ಡ್ರೈಡೇ ಆಚರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆರು, ಸ್ಥಳೀಯರು, ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸರ್ವೆ ಕಾರ್ಯ ಮಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಎಲ್ಲಾ ಇಲಾಖೆಗಳನ್ನು ಬಳಸಿಕೊಳ್ಳಲಾಗಿದೆ. ಗಪ್ಪಿಮೀನು , ಪಾಸಿಟಿವ್ ಕೇಸ್ ಇರವ ಕಡೆಗಳಲ್ಲಿ ಸೊಳ್ಳೆಯನ್ನು ನಿಯಂತ್ರಿಸುವ ಹೊಗೆಗಳ ಸಿಂಪಣೆ ಮಾಡಲಾಗುತ್ತಿದ್ದು ಡೆಂಗ್ಯೂ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರು ಕಾಯಿಲೆಯ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಶಾಸಕರು ಪ್ರತಿಕ್ರಿಯಿಸಿ, ನÀಗರದ ಜನತೆಯ ಆರೋಗ್ಯ ಮತ್ತು ಜೀವವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ಡೆಂಗ್ಯೂ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಹೇಗೆ ಸಂಘಟಿತವಾಗಿ ಕೆಲಸ ಮಾಡಿಲಾಯಿತೊ ಅದೇ ರೀತಿಯಲ್ಲಿ ಡೆಂಗ್ಯೂ ನಿಯಂತ್ರಿಸುವಲ್ಲಿ ನಿಮ್ಮೆಲರ ಸೇವೆ, ಸಹಕಾರ ಅಗತ್ಯವಾಗಿದೆ.
Dengue ನಗರದ 35 ವಾರ್ಡ್‍ಗಳಲ್ಲಿ ಸೊಳ್ಳೆಯನ್ನು ನಿಯಂತ್ರಿಸುವ ಔಷಧಯುಕ್ತ ಹೊಗೆ ಸಿಂಪಣೆ ಮಾಡುತ್ತಿದ್ದು ಅತೀ ವೇಗವಾಗಿ ಈ ಕಾರ್ಯ ಪೂರ್ಣಗೊಳ್ಳಬೇಕಿದೆ. ಮಹಾನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ಆರೋಗ್ಯದ ವಿಷಯದಲ್ಲಿ ಖರ್ಚು ಮಾಡಲು ಹಿಂದೇಟು ಹಾಕಬಾರದು, ಸಾವು ನೋವುಗಳು ಆಗುತ್ತಿರುವ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾಗಿ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಮಾತ್ರ ಕಾಯಿಲೆ ನಿಯಂತ್ರಿಸಲು ಸಾಧ್ಯ ಎಲ್ಲಾ ಇಲಾಖೆಗಳ ಸಹಕಾರ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಮನೆಮನೆಗಳಿಗೆ ತೆರಳಿ ಲಾರ್ವಾ ಸರ್ವೆ ಮಾಡಲು ಸ್ವಯಂ ಸೇವಕರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸರ್ವೆ ಕಾರ್ಯ ನಡೆಸಲು ಆರೋಗ್ಯ ಇಲಾಖೆ ಚಿಂತನೆ ಮಾಡಿದ್ದು ಈ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವುದು. ಮಹಿಳಾ ಸಂಘ, ಕನ್ನಡ ಯುವಕ ಸಂಘ, ಗಣಪತಿ ಸಂಘಟನೆಗಳು, ಸಂಘಸಂಸ್ಥೆಗಳ ಸಭೆ ಕರೆದು ಸಹಕಾರ ಕೋರಿ ಈ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು. ಅಧಿಕಾರಿಗಳು ಪ್ರತಿ ವಾರ್ಡ್‍ಗಳಲ್ಲಿಯೂ ಸರಿಯಾದ ಪ್ರವಾಸ ಮಾಡಿ ಗಂಭೀರವಾಗಿ ತೆಗೆದುಕೊಂಡು ವ್ಯವಸ್ಥಿತವಾಗಿ ಕಾರ್ಯ ಮಾಡಿದ್ದಾರೆ ಡೆಂಗ್ಯೂ ತೊಲಗಿಸಲು ಸಾಧ್ಯ ಎಂದರು.
ಈ ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ.ಕವಿತ ಯೋಗಪ್ಪನವರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಸಿದ್ದನ ಗೌಡ ಪಾಟಿಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್,ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Lok Adalath ಜುಲೈ 13, ಶನಿವಾರ ಶಿವಮೊಗ್ಗ ಜಿಲ್ಲೆಯಲ್ಲಿ ಲೋಕ ಅದಾಲತ್- ನ್ಯಾ.ಮಂಜುನಾಥ ನಾಯಕ್
Lok Adalath ರಾಜೀಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸುವ ‘ಲೋಕ್ ಅದಾಲತ್’ ಕಾರ್ಯಕ್ರಮ ಜುಲೈ 13 ರ ಶನಿವಾರದಂದು ಜಿಲ್ಲೆಯಲ್ಲಿ ನಡೆಯಲಿದ್ದು ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಮನವಿ ಮಾಡಿದರು.
Lok Adalath ‘ಲೋಕ ಅದಾಲತ್’ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ವಿನೀತ ಶರ್ಮ ವಿರುದ್ಧ ರಾಕೇಶ್ ಶರ್ಮ ಮತ್ತು ಇತರರು ಪ್ರಕರಣದಲ್ಲಿ ದಿನಾಂಕ ೧೧.೦೮.೨೦೨೦ ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮ ಪಾಲಿಗೆ ಸಂಬಂಧಿಸಿದ್ದು, ವಿಭಜನಾ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ, ಸದರಿ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆಯ ಪ್ರಕಾರ ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು ಎಂದರು.
Valmiki Development Corporation ವಾಲ್ಮೀಕಿ ನಿಗಮ ಬಹುಕೋಟಿ ಹಗರಣ.ಮಾಜಿ ಸಚಿವ ನಾಗೇಂದ್ರ & ಶಾಸಕ ಬಸನಗೌಡ ದದ್ದಲ್ ನಿವಾಸದ ಮೇಲೆ “ಇಡಿ” ದಾಳಿ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ವಾರ್ಡ್ ಸಂಖ್ಯೆ 2, ಆರ್‌ಆರ್ (ರಾಮ್ ರಹೀಮ್) ಕಾಲೊನಿಯಲ್ಲಿರುವ ದದ್ದಲ್ ಮನೆಯ ಮೇಲೆ ದಾಳಿ ನಡೆಸಿರುವ ಮೂವರು ಅಧಿಕಾರಿಗಳ ತಂಡ, ಬೆಳಗ್ಗೆ 7 ಗಂಟೆಯಿಂದ ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಬಳ್ಳಾರಿಯ ನೆಹರು ಕಾಲೊನಿಯಲ್ಲಿರುವ ಬಿ.ನಾಗೇಂದ್ರ ಮನೆ ಮೇಲೂ ಬೆಳಗ್ಗೆ 3ರಿಂದ 4 ಅಧಿಕಾರಿಗಳಿದ್ದ ತಂಡ ದಾಳಿ ಮಾಡಿದೆ. ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ ಅಧಿಕಾರಿಗಳು, ನಾಗೇಂದ್ರರ ಮನೆಯಲ್ಲಿರುವ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ.
Valmiki Development Corporation ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ, ಸಿಆರ್ಪಿಎಫ್ ಯೋಧರ ಸಹಕಾರದಿಂದ ದಾಳಿ ನಡೆಸಿದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ರಾಮ್ಕ್ವ್ ಅಪಾರ್ಟ್ಮೆಂಟ್ನಲ್ಲಿರುವ ನಾಗೇಂದ್ರ ಅವರ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅದೇ ರೀತಿ ಬಸವನಗೌಡ ದದ್ದಲ್ ನಿವಾಸವಲ್ಲದೆ, ಬೆಂಗಳೂರು ನಗರದ ಯಲಹಂಕ, ಕೋರಮಂಗಲ ಸೇರಿದಂತೆ ಏಕಕಾಲದಲ್ಲಿ 18 ಕಡೆಗಳಲ್ಲಿ ದಾಳಿ ಮಾಡಿ ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
Department of Sainik Welfare & Resettlement ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
Department of Sainik Welfare & Resettlement ಶಿವಮೊಗ್ಗ ಜಿಲ್ಲಾ ಅರೆಸೇನಾ ಮಾಜಿ ಸೈನಿಕರ ಸಂಘದ ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಗೌರವಾಧ್ಯಕ್ಷರಾಗಿ ಎಸ್.ಕೆ.ರಾಮಮೂರ್ತಿ, ಕರಿಬಸಪ್ಪ ಟಿ ಹಾಗೂ ಅಧ್ಯಕ್ಷರಾಗಿ ಎನ್.ರುಕ್ಮಾ, ಉಪಾಧ್ಯಕ್ಷರಾಗಿ ಅಭಿಲಾಷ್ ಎನ್.ಎಂ., ಕೆ.ಕೆ.ರಾಮಣ್ಣ, ಕಾರ್ಯದರ್ಶಿಯಾಗಿ ರಾಘವೇಂದ್ರ, ಖಜಾಂಚಿಯಾಗಿ ಎನ್.ನರಸಿಂಹ ಪೈ, ಸಹ ಖಜಾಂಚಿಯಾಗಿ ಎಂ.ಪಿ.ಆನಂದ ಸ್ವಾಮಿ, ಸಂಚಾಲಕರಾಗಿ ನಾಗೇಂದ್ರಪ್ಪ, ಆಂಜನೇಯ ಡಿ, ಸತೀಶ್ ಎಂ.ಆರ್.ರಮೇಶ್ ಹೆಚ್.ಪಿ, ನಿರ್ದೇಶಕರುಗಳಾಗಿ ಶಿವಮೊಗ್ಗ ತಾಲೂಕಿನ ಹೆಚ್.ಕುಮಾರ್, ಹುಲ್ಲೇಶ್,ಶ್ರೀರಂಜನಿ ಪೈ, ಮಾಲತೇಶ್, ಭದ್ರಾವತಿ Department of Sainik Welfare & Resettlement ತಾಲೂಕಿನ ಪರಮೇಶ್ವರ್, ಸತೀಶ್ ಆರ್, ಸುರೇಶ್ ಕೆ.ಟಿ,ಶಿಕಾರಿಪುರ ತಾಲೂಕಿನ ಮಹಾಲಿಂಗಪ್ಪ, ಪಾಂಡುರಂಗ ಎ, ಸೊರಬ ತಾಲೂಕಿನ ದಶವಂತ, ಚಂದ್ರಶೇಖರ ಕೆ.ಸಿ, ಚಂದ್ರಹಾಸ, ಹೊಸನಗರ ತಾಲೂಕಿನ ಮಂಜುಳ ಎನ್. ಆರ್, ರವಿಕುಮಾರ್, ತೋಟಪ್ಪ ಕೆ.ವಿ, ಸಾಗರ ತಾಲೂಕಿನ ಮಹಾಬಲೇಶ್ವರ, ದಿನೇಶ್ ಕುಮಾರ್ ಎಸ್.ಎಂ.ಎನ್.ಆರ್.ವಿಜಯ್, ರಾಜಪ್ಪ, ಹಾಗೂ ತೀರ್ಥಹಳ್ಳಿ ತಾಲೂಕಿನ ಕೇಶವ ಎಂ.ಟಿ, ರೇವಣ್ಣ ಎನ್, ಗಿರಿರಾಜ ಆಯ್ಕೆಯಾಗಿದ್ದಾರೆ.
