Thursday, April 9, 2026
Thursday, April 9, 2026
Home Blog Page 655

Family Planning Association of India ಜನಸಂಖ್ಯೆಯ ಬಗ್ಗೆ ಚಿಂತೆ ಮಾಡಬೇಕಾ? ಇಲ್ಲಾ ಚಿಂತನೆ ಮಾಡಬೇಕಾ? : ವಿಶ್ವ ಜನಸಂಖ್ಯಾ ದಿನದ ಕಾರ್ಯಕ್ರಮದಲ್ಲಿ FPAI ಬಳ್ಳಾರಿಯ ಅಧ್ಯಕ್ಷ ಟಿ.ಜಿ.ವಿಠ್ಠಲ್

0

Family Planning Association of India ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಬಳ್ಳಾರಿ ಶಾಖೆ ಹಾಗೂ ಶ್ರೀಮತಿ ರಾಜರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು, ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜು ಬಳ್ಳಾರಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಂಯುಕ್ತಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಜನಸಂಖ್ಯಾ ದಿನದ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಶ್ರೀ ಯುತ ಟಿ.ಜಿ.ವಿಠ್ಠಲ್ ರವರು “ಜನಸಂಖ್ಯೆಯ ಬಗ್ಗೆ ಚಿಂತೆ ಮಾಡಬೇಕಾ? ಇಲ್ಲಾ ಚಿಂತನೆ ಮಾಡಬೇಕಾ?” ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡುತ್ತಾ ಮಾತನಾಡಿದರು. “ಜನಸಂಖ್ಯೆಯ ಬಗ್ಗೆ ಬಹಳ ಹಿಂದೆಯೇ ಚಿಂತನೆ ನಡೆಸಿ ಭಾರತದಾದ್ಯಂತ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ. ಜನಸಂಖ್ಯೆಯ ಹೆಚ್ಚಳದಿಂದ ನಗರೀಕರಣ ಹೆಚ್ಚಾಗಿದೆ. ಬೆಂಗಳೂರು ಈ ಹಿಂದೆ ಇದ್ದ ಹಾಗೆ ಈಗ ಇಲ್ಲ, ಹಾಗೆಯೇ ಬಳ್ಳಾರಿ ಸಹ ಈ ಹಿಂದೆ ಇದ್ದ ಹಾಗೆ ಈಗ ಇಲ್ಲ, ಗಾತ್ರದಲ್ಲಿ ಬೆಳೆಯುತ್ತಿದೆ. ಜನಸಂಖ್ಯೆಯು ಪರಿಸರದ ಮೇಲೆಯೂ ಪರಿಣಾಮ ಬೀರುತ್ತಿದೆ. ಹಾಗೆಯೇ ಭಾರತದಲ್ಲಿ 77% ನಷ್ಟು ಜನರಿಗೆ ಪೌಷ್ಟಿಕ ಆಹಾರವೇ ಸಿಗುತ್ತಿಲ್ಲ ಎಂದು ಅಂದಾಜು ಮಾಡಲಾಗಿದೆ. ಇವೆಲ್ಲಕ್ಕೂ ಮಿತಿಮೀರಿದ ಜನಸಂಖ್ಯೆಯೂ ಒಂದು ಕಾರಣವಾಗಿದೆ” ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ನ M & E ಆಫೀಸರ್ ಆದಂತಹ ಶ್ರೀಮತಿ ಸುಜಾತರವರು ಮಾತನಾಡಿ “ನಮ್ಮ ದೇಶದಲ್ಲಿ ಅತ್ಯಂತ ಬೇಗ ಮದುವೆ ಮಾಡುವುದರಿಂದ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ” ಎಂದು ಹೇಳುತ್ತಾ ಗರ್ಭಕಂಠದ ಕ್ಯಾನ್ಸರ್ ಹಾಗೂ ಅದರ ಲಸಿಕೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವಂತೆ ಮಾತನಾಡಿದರು.

ವಿಶ್ವ ಜನಸಂಖ್ಯಾ ದಿನಕ್ಕೆ ಸಂಬಂಧಿಸಿದಂತೆ ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ವಿದ್ಯಾರ್ಥಿನಿಯರಾದ ಕಾಂಚನ ಪ್ರಥಮ, ಸಂಜನಾ ದ್ವಿತೀಯ ಹಾಗೂ ಗೋದಾವರಿ ತೃತೀಯ ಬಹುಮಾನವನ್ನು ಪಡೆದರು. ಹಾಗೂ ಇಂಗ್ಲಿಷ್ ನಲ್ಲಿ ಭಾಷಣ ಮಾಡಿದ ವಿದ್ಯಾರ್ಥಿನಿಯರಾದ ಹಸೀನಾ ಪ್ರಥಮ, ಶಕೀರಾ ದ್ವಿತೀಯ ಹಾಗೂ ಅಮೃತವರ್ಷಿಣಿ ತೃತೀಯ ಬಹುಮಾನವನ್ನು ಪಡೆದರು. ವಿಜೇತರನ್ನು FPAI ಬಳ್ಳಾರಿ ಶಾಖೆಯ ಪ್ರೋಗ್ರಾಮ್ ಆಫೀಸರ್ ಆದಂತಹ ಬಸವರಾಜ್ ರವರು ಘೋಷಿಸಿ, ವೇಧಿಕೆಯ ಮೇಲಿರುವ ಗಣ್ಯರಿಂದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷಿಯ ನುಡಿಗಳನ್ನಾಡಿದ ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಗೌರಿಶಂಕರ್ ಹಿರೇಮಠ್ ರವರು ಜನಸಂಖ್ಯಾ ಸ್ಪೋಟದಿಂದ ಉಂಟಾಗುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡುತ್ತಾ “ವಿದ್ಯಾರ್ಥಿಗಳು ಈಗಿನಿಂದಲೇ ತಮಗೆ ಎಷ್ಟು ಸಂಬಳ ಬೇಕೆಂದು ನಿರ್ಧಾರ ಮಾಡಿ ಬಿಟ್ಟಿರುತ್ತಾರೆ. ಅದು ಅವರ ತಪ್ಪು ಕಲ್ಪನೆ, ಮೊದಲು ಚಿಕ್ಕ ಕೆಲಸಕ್ಕೆ ಯಾವ ರೀತಿಯ ಸಂಬಳವಿದೆ ಎಂದು ನೋಡದೆ ಇದ್ದ ಕೆಲಸವನ್ನೇ ಶ್ರದ್ದೆ ವಹಿಸಿ “ಕಾಯಕವೇ ಕೈಲಾಸ” ಎಂದು ಮಾಡುತ್ತಾ ಹೋದರೆ ಅನುಭವ ಮತ್ತು ಸಂಬಳವೂ ಹಿಂಬಾಲಿಸಿ ಬರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

Family Planning Association of India ಕಾರ್ಯಕ್ರಮದ ಆಯೋಜನೆಗೆ ಸಕಲ ಸಿದ್ಧತೆಗಳನ್ನು ಮಾಡಿಸಿಕೊಟ್ಟಂತಹ ಮೆಕಾನಿಕಲ್ ವಿಭಾಗದ ಬೋಧಕರು ಹಾಗೂ ಸಂಜಯಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಖ್ಯಸ್ಥರಾದ ಶ್ರೀ ಬಸವರಾಜ್ ರವರಿಗೆ FPAI ಸಂಸ್ಥೆಯು ತುಂಬುಹೃದಯದ ಧನ್ಯವಾದಗಳನ್ನು ತಿಳಿಸಿತು.

ಕಾರ್ಯಕ್ರಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ನ ಸಿಬ್ಬಂದಿ ವರ್ಗ, ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಬೋಧಕ ವರ್ಗ ಹಾಗೂ 300 ಕ್ಕೂ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಗೋದಾವರಿ ಮತ್ತು ತಂಡದವರು ಪ್ರಾರ್ಥಿಸಿ, ಹಸೀನಾ ನಿರೂಪಿಸಿ, ರಕ್ಷಿತ್ ಸ್ವಾಗತಿಸಿ, ನದಾ ಆಲಂ ವಂದಿಸಿದರು.

Madhu Bangarappa ಗುಣಮಟ್ಟದ ಶಿಕ್ಷಣ ಮತ್ತು ಪರೀಕ್ಷಾ ಪಾವಿತ್ರ್ಯೆಗೆ ಹೆಚ್ಚು ಹೊತ್ತು ನೀಡಲಾಗಿದೆ: ಮಧು ಬಂಗಾರಪ್ಪ

0

Madhu Bangarappa ಗುಣಮಟ್ಟದ ಶಿಕ್ಷಣ ಮತ್ತು ಪರೀಕ್ಷಾ ಪಾವಿತ್ರ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಅನುಕೂಲಕರವಾದ ಎಲ್ಲ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಎಸ್ ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ೨೦೨೩-೨೪ ನೇ ಸಾಲಿನಲ್ಲಿ ಎಸ್ ಎಸ್ ಎಲ್‌ಸಿಯಲ್ಲಿ ಶೇ.೧೦೦ ಫಲಿತಾಂಶ ಪಡೆದ ಶಾಲೆಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ೫೦ ಸಾವಿರ ಶಿಕ್ಷಕರ ಕೊರತೆ ಇತ್ತು. ಕಡಿಮೆ ಕಾಲಮಿತಿಯಲ್ಲಿ ೪೫ ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಪೌಷ್ಟಿಕಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ೮ನೇ ತರಗತಿವರೆಗೆ ಮಾತ್ರ ನೀಡಲಾಗುತ್ತಿದ್ದ ಮೊಟ್ಟೆಯನ್ನು ೧೦ ನೇ ತರಗತಿವರೆಗೆ ವಿಸ್ತರಿಸಲಾಗಿದೆ. ರಾಗಿ ಮಾಲ್ಟ್ ನೀಡಲಾಗುತ್ತಿದೆ. ಹಾಗೂ ವಾರದಲ್ಲಿ ಒಂದು ನೀಡುತ್ತಿದ್ದ ಮೊಟ್ಟೆಯನ್ನು ೨ ದಿನಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ವಾರದಲ್ಲಿ ೬ ದಿನವೂ ಮೊಟ್ಟೆ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

Madhu Bangarappa ಶಿಥಿಲಾವಸ್ಥೆಯಲ್ಲಿ ಇರುವ ಶಾಲಾ ಕಟ್ಟಡ ಮತ್ತು ಕೊಠಡಿಗಳನ್ನು ಹಂತ ಹಂತವಾಗಿ ರಿಪೇರಿ ಮಾಡಲಾಗುತ್ತಿದೆ. ೧೬೦೦ ಕೊಠಡಿ ರಿಪೇರಿ ಮತ್ತು ಅವಶ್ಯವಿರುವೆಡೆ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಮಂಜೂರಾತಿ ದೊರೆಯಲಿದೆ. ರಾಜ್ಯದಲ್ಲಿ ಹೊಸದಾಗಿ ೫೦೦ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು, ಉನ್ನತೀಕರಿಸಲಾಗುವುದು ಎಂದು ಹೇಳಿದ್ದ ಪ್ರಕಾರ ಹಂತ ಹಂತವಾಗಿ ಕೆಪಿಎಸ್ ಶಾಲೆ ಉನ್ನತೀಕರಣ ಆಗುತ್ತಿದೆ. ಕೆಪಿಎಸ್ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಮಾಧ್ಯಮ, ಎಲ್‌ಕೆಜಿ, ಯುಕೆಜಿ, ಲೈಬ್ರರಿ ಸೇರಿದಂತೆ ಉತ್ತಮ ಸೌಲಭ್ಯಗಳು ದೊರೆಯಲಿದ್ದು ೫೦೦ ರಿಂದ ೧ ಸಾವಿರ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದರು.

Department of Health ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಭವಿಷ್ಯಕ್ಕೆ ಸಮಸ್ಯೆ : ವೈ.ಜಿ. ಪುಟ್ಟಸ್ವಾಮಿ

0

Department of Health ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿಂದ ಆಹಾರ,ಶಿಕ್ಷಣ,ಸಾರಿಗೆ ಹಾಗೂ ವಸತಿ ಸಮಸ್ಯೆಗಳು ದೇಶದ ಭವಿಷ್ಯಕ್ಕೆ ಗಂಭೀರ ಸಮಸ್ಯೆಯಾಗಿ ಎದುರಾಗಲಿದೆ ಎಂದು ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಹೇಳಿದರು.

ಸೊರಬ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಉತ್ತಮ ಆಡಳಿತಶಾಹಿ ವ್ಯವಸ್ಥೆಗೆ ಜನಸಂಖ್ಯೆ ನಿಯಂತ್ರಣ ಮುಖ್ಯವಾಗಿದ್ದು, ಆಳುವ ಸರ್ಕಾರಗಳು ಅರಣ್ಯ ಸಂಪತ್ತಿನ ಉಳಿವಿಗೆ ದೃಢ ನಿರ್ಧಾರಗಳು ಕೈಗೊಂಡಾಗ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಜೊತೆಗೆ ಜನಸಾಮಾನ್ಯರ ಆರೋಗ್ಯವು ಸುಧಾರಿಸಲಿದೆ ಎಂದು ತಿಳಿಸಿದರು.

ಕುಟುಂಬದಲ್ಲಿ ಎರಡು ಮಕ್ಕಳನ್ನು ಹೊಂದುವ ಆಪೇಕ್ಷೆಯೊಂದಿಗೆ ಇಲಾಖೆ ಹೊರಡಿಸಿರುವ ಜನಸಂಖ್ಯೆ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯವಿದೆ ಈ ನಿಟ್ಟಿನಲ್ಲಿ ಯುವ ಸಮುದಾಯ ಪ್ರಜ್ಞಾವಂತಿಕೆಯಿಂದ ಜನಸಂಖ್ಯಾ ನಿಯಂತ್ರಣದ ಶೈಕ್ಷಣಿಕ ಪ್ರಜ್ಞೆಯಿಂದ ಆರೋಗ್ಯಯುತ ದೇಶ ಕಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ|| ಪ್ರಭು ಸಾಹುಕಾರ್ ತಿಳಿಸಿದರು.

Department of Health ಇದಕ್ಕೂ ಮೊದಲು ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಜನಸಂಖ್ಯಾ ನಿಯಂತ್ರಣದ ಕುರಿತು ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದರು.
ತಾಲೂಕ್ ಆರೋಗ್ಯ ಅಧಿಕಾರಿ ವಿನಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ತಹಶೀಲ್ದಾರ್ ಮಂಜುಳಾ ಹೆಗಡಾಳ್, ಆಡಳಿತ ವೈದ್ಯಾಧಿಕಾರಿ ಪ್ರಭು ಕೆ ಸಾಹುಕಾರ್,ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪದ್ಮಾವತಿ, ಶ್ರೀರಾಮ, ಯಶವಂತರಾಜ್, ಶಬ್ಬೀರ್ ಖಾನ್, ಆನಂದ,ಗಾಯತ್ರಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

Forest Department ಸೊರಬ ತಾಲೂಕಿನಲ್ಲಿ ಅಕ್ರಮ ಸಾಗುವಾನಿ ಮರ ಕಡಿತಲೆ ಇಬ್ಬರ ಬಂಧನ

0

Forest Department ಸೊರಬ ತಾಲೂಕಿನ ಕಾಸರಗುಪ್ಪೆ ಗ್ರಾಮ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗುವಾನಿ ಮರ ಕಡಿತಲೆ ಮಾಡಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಾಹನ ಸಮೇತ ಹಿಡಿದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಆರೋಪಿಗಳು ಕಾಸರಗುಪ್ಪೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡಿಸಾಗಿಸುವಾಗಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದಾಗ ನಿಸರಾಣಿಯ ರವೀಂದ್ರ ಸುಬ್ಬಪ್ಪ(೨೬) ಹಾರೆಕೊಪ್ಪದ ರಾಕೇಶ ರಘುಪತಿ (೧೮)ಎಂಬುವರನ್ನು ಸ್ಥಳದಲ್ಲಿ ಬಂಧಿಸಲಾಗಿದೆ, ಚೀಲನೂರಿನ ಪ್ರದೀಪ್ ಮಂಜಪ್ಪ(೩೦ )ಹಾರೆಕೊಪ್ಪದ ನಂದನ ಆನಂದ(೨೫) ಸಿದ್ದಾಪುರದ ನಾಗರಾಜ(೨೫) ಗೊಂಟನಾಳ ಎಂಬ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Forest Department ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ರಕ್ಷಣಾಧಿಕಾರಿ ಜಾವಿದ್ ಭಾಷಾ ಅಂಗಡಿ, ಅರಣ್ಯ ಸಂರಕ್ಷಕರಾದ ಪರಶುರಾಮ್, ಯೋಗರಾಜ್, ಸಿಬ್ಬಂದಿಗಳಾದ ಹರೀಶ್, ಆನಂದ್ ಪಾಲ್ಗೊಂಡಿದ್ದರು.

Actor Aniruddha ನಾವೆಲ್ಲಾ ಸೇರಿ ತುಂಗಾ ನದಿಯನ್ನು ಉಳಿಸಬೇಕಿದೆ : ನಟ ಅನಿರುದ್ಧ

0

Actor Aniruddha ನಾವೆಲ್ಲ ಸೇರಿ ತುಂಗಾ ನದಿ ಉಳಿಸಬೇಕಿದೆ. ಈ ಬಾರಿ ತುಂಗಾ ಆರತಿ ನಡೆಸಲಾಗುವುದು.. ಪ್ರತಿದಿನ ಸಂಜೆ ತುಂಗಾ ಆರತಿ ನಡೆಯಲಿ. ಇದು ಪ್ರವಾಸಿಗರನ್ನು ಸೆಳೆಯಬಹುದು. ಸ್ವಚ್ಛತೆ ಬಗ್ಗೆ ಪಟ್ಟಿಯನ್ನೇ ಮಾಡಿ ಚರ್ಚಿಸಲಾಗಿದೆ. ಮುಂದಿನ ಪೀಳಿಗೆಗೆ ಅನುಕೂಲವಾಗುವ ಕೆಲಸಗಳನ್ನು ಮಾಡಬೇಕೆಂದು ತುಂಗಾ ನದಿ ಸ್ಚಚ್ಛತೆಗೆ ಪಣ ತೊಟ್ಟಿರುವ ಚಿತ್ರ ನಟ ಅನಿರುದ್ಧ ಹೇಳಿದರು.

ತುಂಗಾ ನದಿ ಮಲೀನತೆ ನಿವಾರಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.
ಈ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ iತನಾಡಿ, ಮನೆಗಳ ಒಳಚರಂಡಿ ನೀರು ನದಿ ಸೇರದಂತೆ ಪಾಲಿಕೆ ತಡೆಯಬೇಕಿದೆ ಎಂದರು.

ಪಾಲಿಕೆ ಆಯುಕ್ತೆ ಡಾ|| ಕವಿತಾ ಯೋಗಪ್ಪನವರ್ ಮಾತನಾಡಿ, 36 ವಾರ್ಡ್ ನಲ್ಲಿ 6 ವಾರ್ಡ್ ಸ್ಮಾರ್ಟ್ ಸಿಟಿ ವಾರ್ಡ್ ಬರುತ್ತದೆ. ರಿವರ್ ಫ್ರಂಟ್ ನಿರ್ಮಿಸಲಾಗಿದೆ ಇದು ಪಾಲಿಕೆಗೆ ಹ್ಯಾಂಡ್ ಓವರ್ ಆಗುವ ಹಂತದಲ್ಲಿದೆ ಎಂದರು.
ಐಎನ್ ಡಿ (ಇಂಟರ್ ವೆನ್ಷನ್ ಅಙಡ್ ಡೈವರ್ಷನ್)ಯುಜಿಡಿ 7 ರನ್ನಿಂಗ್ ನಲ್ಲಿದೆ. ಯುಜಿಡಿ ಪೈಪ್‌ಲೈನ್ ನೀರು ನದಿ ಸೇರುತ್ತಿದೆ. ಟಾಯ್ಲೆಟ್, ಕಿಚನ್ ಮತ್ತು ಬಾತ್ ರೂಮ್‌ನ ನೀರು ನೇರವಾಗಿ ನದಿ ಸೇರುತ್ತಿದೆ.

ಹೊಸಮನೆ ಕಟಟುವವರಲ್ಲಿ ಬಲವಂತವಾಗಿ ಯುಜಿಡಿ ಸಂಪರ್ಕ ಪಡೆಯಲು ಒತ್ತಾಯಿಸಲಾಗುತ್ತಿದೆ. ಕೆಲವು ಹಳೆಯ ಮನೆಯಲ್ಲಿ ಯುಜಿಡಿ ಸಂಪರ್ಕವಿಲ್ಲ ಎಂದರು.
13 ಪೈಪ್ ಲೈನ್ ಮೂಲಕ ನದಿಗೆ ಮಲೀನತೆ ನೀರು ಫಿಲ್ಟರ್ ಆಗಿ ಸೇರಲಿದೆ. ಎರಡು ಯುಜಿಡಿಯಿಂದ 32 ಎಂಎಲ್‌ಡಿ ಮಲೀನತೆ ನದಿಗೆ ಸೇರುವುದನ್ನು ತಡೆಯಲಿದೆ.

Actor Aniruddha ಇದನ್ನು ಶುದ್ಧಿಕರಿಸಬೇಕಿದೆ. ಗ್ರೇ ವಾಟರ್ ಸಮಸ್ಯೆ ಇದೆ. ಟಾಯ್ಲೆಟ್‌ಗೆ ಯುಜಿಡಿ ಸಂಪರ್ಕ ಪಡೆದರೆ ಕಿಚನ್ ಮತ್ತು ಬಾತ್ ರೂಂನ ಸಂಪರ್ಕದ ನೀರು ನೇರವಾಗಿ ನದಿಗೆ ಸೇರಲಿದೆ. ಮುಂದಿನ ದಿನಗಳಲ್ಲಿ ನದಿ ಮಲೀನತೆ ತಡೆಯಲು ಹಲವು ಕ್ರಮ ಜರುಗಿಸುವುದಾಗಿ ಪಾಲಿಕೆ ಇಂಜಿನಿಯರ್ ತಿಳಿಸಿದರು.

ನದಿಗೆ ನೇರವಾಗಿ ಸೇರದಿರುವಂತೆ ಮತ್ತೊಂದು ಸರ್ವೆ ನಡೆಸಲು ಡಿಸಿ ಗುರುದತ್ ಹೆಗಡೆ ಸೂಚಿಸಿದರು. ಎಲ್ಲೆಲ್ಲಿ ನದಿಗೆ ಕೊಳಚೆ ಸೇರಲಿದೆ ಎನ್ನುವುದನ್ನು ಗುರುತಿಸಿ ಮತ್ತೆ ವರದಿ ನೀಡುವಂತೆ ಮಾಲಿನ್ಯ ನಿಯಂತ್ರಣಾಧಿಕಾರಿಗೆ ಸೂಚಿಸಲಾಯಿತು.

District Banjara Committee ಶಿವಮೊಗ್ಗ ಜಿಲ್ಲಾ ಬಂಜಾರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶ

0

District Banjara Committee ಶಿವಮೊಗ್ಗ ಜಿಲ್ಲಾ ಬಂಜಾರಾ ಸಮಿತಿಯವರು ಹಲವು ಸಂದರ್ಭಗಳಲ್ಲಿ ಬೈಲಾ ಮತ್ತು ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ಸಂಘದ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತ ಎಂದು ಹೇಳಿರುವ ಸಹಕಾರ ಇಲಾಖೆಯ ನಿಬಂಧಕ ಕ್ಯಾಪ್ಟನ್ ಕೆ. ರಾಜೇಂದ್ರ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಸೂಚನೆ ನೀಡಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ಬಂಜಾರಾ ಸಂಘದ ಮುಖಂಡದ ಉಮಾಮಹೇಶ್ವರ ನಾಯ್ಕ್ ಮತ್ತು ಶಶಿಕುಮಾರ್ ನಾಯ್ಕ, ಸಂಘ ನಡೆಸಿರುವ ಅಕ್ರಮಗಳ ಬಗ್ಗೆ ಸಹಕಾರ ಇಲಾಖೆಗೆ ದೂರು ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನಾಗಿ ಸಹಾಯಕ ನಿಬಂಧಕರನ್ನು ನೇಮಿಸಲಾಗಿತ್ತು. ಅವರು ನೀಡಿರುವ ವರದಿಯ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ ಎಂದರು.

ಸಂಘದ ಆಡಳಿತ ಮಂಡಳಿಯು ವಾರ್ಷಿಕ ಸಭೆಯಲ್ಲಿ ಒಪ್ಪಿಗೆ ಪಡೆದು ನಿಯಮಾನುಸಾರ ನೊಂದಣಾಧಿಕಾರಿಗಳಿಂದ ಬೈಲಾದಲ್ಲಿ ಸೂಕ್ತ ತಿದ್ದುಪಡಿ ಮಾಡಿಕೊಳ್ಳದೆ ಸದಸ್ಯತ್ವವವ್ವನು ೧೦೦ ರೂ. ನಿಂದ ೫೦೦ ರೂ. ಗೆ ಏರಿಸಿದೆ. ಇದರಿಂದ ಬಂದ ಹಣ೨, ೪೯, ೬೦೦ ರೂ. ಆಗಿದೆ.

District Banjara Committee ಶುಲ್ಕ ಹೆಚ್ಚಳ ಸಂಘದ ಬೈಲಾ ಉಲ್ಲಂಘನೆಯಾಗಿದೆ. ಆಡಳಿತ ಮಂಡಳಿಯ ಅವಧಿ ಮುಗಿದಿದ್ದರೂ ಹೊಸ ಮಂqಳಿ ರಚನೆ ಮಾಡದೆ ಕರ್ತವ್ಯಲೋಪ ಮಾಡಲಾಗಿದೆ. ಇದೂ ಸಹ ಬೈಲಾ ಉಲ್ಲಂಘನೆಯಾಗಿದೆ. ದೇಣಿಗೆ ನೀಡಿರುವವರ ವಿವರಕ್ಕೂ, ಸಂಘವು ನೀಡಿರುವ ದಾಖಲಾತಿಗಳ ವಿವರಕ್ಕೂ ವ್ಯತ್ಯಾಸವಿದೆ. ಹಣ ಜಮಾ ಆಗದೇ ಇದ್ದರೂ ತಾಂಡಾಗಳ ಹೆಸರನ್ನು ನಾಮಫಲಕದಲ್ಲಿ ಅಳವಡಿಸಲಾಗಿದೆ.

ಇದಕ್ಕೆ ಆಡಳಿತ ಮಂಡಳಿ ಹೊಣೆ ಎಂದು ಆದೇಶದಲ್ಲಿ ಹೇಳಲಾಗಿದೆ ಎಂದರು

Madhu Bangarappa ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ

0

Madhu Bangarappa ಶಿವಮೊಗ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕಚೇರಿ ಎದರು ಪ್ರತಿಭಟನೆ ನಡೆಸುತ್ತಿದ್ದ, ಎಬಿವಿಪಿ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ನಡೆಯಿತು.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ಸಂಘಟನೆಯ ಅಹವಾಲು ಆಲಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಮನವೊಲಿಸುವ ಕಾರ್ಯ ನಡೆಸಿದರು. ಆದರೆ ಪ್ರತಿಭಟನಾಕಾರರು ಧರಣಿ ಮುಂದುವರೆಸಿದ್ದರಿಂದ, ಪೊಲೀಸರು ಸುಮಾರು 20 ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕರೆದೊಯ್ದರು. ನಂತರ ಅವರನ್ನು ಬಿಡುಗಡೆಗೊಳಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣ ಹೊಂದಿಸಲು, ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ನ್ಯಾಯಬದ್ದ ಸೌಲಭ್ಯಗಳನ್ನು ಕಸಿದುಕೊಳ್ಳುವ ಕಾರ್ಯ ನಡೆಸುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿದ್ಯಾರ್ಥಿಗಳು ಬಸ್ ಪಾಸ್ ಸೌಲಭ್ಯ ಪಡೆಯಲು ಅಲೆದಾಡುವಂತಹ ದುಸ್ಥಿತಿ ಇದೆ. ಆರ್ಜಿ ಸಲ್ಲಿಸಿದ ನಂತರ ವಾರಗಟ್ಟಲೆ ಬಸ್ ಪಾಸ್ ಗೆ ಕಾಯುವಂತಾಗಿದೆ.

Madhu Bangarappa ಕಾಲಮಿತಿಯೊಳಗೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸುವ ಕಾರ್ಯ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಹೆಚ್ಚಿನ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಾಲಾ ಕಾಲೇಜು ಆರಂಭವಾಗಿ ತಿಂಗಳುಗಳೇ ಕಳೆದರೂ ಸರ್ಕಾರಿ ಹಾಸ್ಟೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಸೌಲಭ್ಯ ದೊರಕುತ್ತಿಲ್ಲ. ಇದರಿಂದ ಗ್ರಾಮೀಣ ಹಾಗೂ ಬಡ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಏಕರೂಪದ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು

Sahyadri Arts College ಜನಸಂಖ್ಯೆಯನ್ನು ಬಂಡವಾಳವನ್ನಾಗಿ ನೋಡಿ : ಡಾ.ಜಿ. ನಾರಾಯಣರಾವ್

0

Sahyadri Arts College ಇಂದು ಜನಸಂಖ್ಯೆಯು ಎಂಟು ಬಿಲಿಯನ್ ದಾಟಿದೆ. ಸ್ಫೋಟ ಎನ್ನುವ ವಿಚಾರವು 70ರ ದಶಕಕ್ಕೆ ಸೇರಿದ್ದು. ಇಂದು ಜನಸಂಖ್ಯೆಯನ್ನು ಬಂಡವಾಳವಾಗಿ, ಮಾನವ ಸಂಪನ್ಮೂಲವಾಗಿ ನೋಡಲಾಗುತ್ತಿದೆ. ದುಡಿಯುವ ಆಶಾಭಾವನೆಯೊಂದಿಗೆ ಮಾನವ ಸಂಪನ್ಮೂಲ ಮುನ್ನುಗ್ಗುತ್ತಿದೆ.

ದುಡಿಯುವ ಕೈಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನಸಂಖ್ಯಾ ಸ್ಫೋಟ ವಿಚಾರ ಗೌಣವಾಗಲಿದೆ ಎಂದು ಅರ್ಥಶಾಸ್ತ್ರಜ್ಞರಾದ ಡಾ ಜಿ. ನಾರಾಯಣರಾವ್ ಹೇಳಿದರು.
ಅವರು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಐಕ್ಯೂಎಸಿ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ವಿಭಾಗಗಳ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜನಸಂಖ್ಯಾ ಸ್ಫೋಟ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

Sahyadri Arts College ನಿವೃತ್ತ ಪ್ರಾಚಾರ್ಯ ಧನಂಜಯ ಕೆ.ಬಿ. ಉದ್ಘಾಟನೆ ನೆರವೆರಿಸಿ ಮಾತನಾಡಿ, ಮೂಲಸಂಪನ್ಮೂಲವು ಆರ್ಥಿಕತೆಯಿಂದಾಗಿ ಇಂದು ಜನರಿಂದಲೇ ಉತ್ಪಾದನೆಯಾಗಿ ಜನರನ್ನೇ ತಲುಪುತ್ತಿದೆ ಎಂದು ಅಭಿಪ್ರಾಯಪಟ್ಟರು.
ಧಾರವಾಡದ ಚಾಣಕ್ಯ ಅಕಾಡೆಮಿ ನಿರ್ದೇಶಕ ಪ್ರದೀಪ್ ಗುಡ್ಡದ , ಜನಸಂಖ್ಯೆಗೆ ಸಂಬಂಧಿಸಿದ ವಿಷಯಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅತ್ಯಗತ್ಯ ಎಂದು ನುಡಿದರು.
ಪ್ರಾಚಾರ್ಯ ಸೈಯದ್ ಸನಾವುಲ್ಲ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ. ಪೂರ್ವಾಚಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪ್ರೊ. ಮುದುಕಪ್ಪ ಸ್ವಾಗತಿಸಿದರು.

ಪ್ರೊ. ಹೆಚ್ ವಿ ನಾಗರಾಜ್ ನಿರೂಪಿಸಿ, ವಂದಿಸಿದರು. ಪ್ರಾಧ್ಯಾಪಕರಾದ ಕೃಪಾಲಿನಿ ಎಚ್. ಎಸ್., ಹಾಲಸ್ವಾಮಿ, ರಾಧಾ, ಆಶಾ, ಲಕ್ಷ್ಮಿಪುತ್ರ ಮತ್ತು ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿದ್ಯಾರ್ಥಿಗಳು ಹಾಜರಿದ್ದರು.

Kuvempu University ಕುವೆಂಪು ವಿವಿಯಲ್ಲಿ ಪ್ರತಿಭಟನೆ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ಒತ್ತಾಯ

0

Kuvempu University ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಆಡಳಿತ ಭವನದ ಮುಂಭಾಗ ಧರಣಿ ನಡೆಸಿದರು.
ಆತ್ಮಹತ್ಯೆ ಯತ್ನದ ಬೆನ್ನಿಗೆ ಹೋರಾಟ
ಕುವೆಂಪು ವಿವಿಯಲ್ಲಿನ ಹಗರಣಗಳಿಂದ ಮನನೊಂದು ವಿದ್ಯಾರ್ಥಿಯೊಬ್ಬ (ಕುಟುಂಬದವರ ಮನವಿ ಮೇರಗೆ ಹೆಸರು, ಊರು ಪ್ರಕಟಿಸುತ್ತಿಲ್ಲ) ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದ.

ಇದರ ಬೆನ್ನಿಗೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಇವತ್ತು ಬೆಳಗ್ಗೆ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಿದರು.

Kuvempu University ವಿದ್ಯಾರ್ಥಿಗಳ ಬೇಡಿಕೆ ಏನು?
ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ, ಫಲಿತಾಂಶ ವಿಳಂಬ ಮಾಡಲಾಗುತ್ತಿದೆ, ಸಹ್ಯಾದ್ರಿ ಉತ್ಸವ ಸೇರಿದಂತೆ ಯಾವುದೇ ಸಾಂಸ್ಕೃತಿಕ ಮತ್ತು ಕ್ರೀಡಾ ಚುಟುವಟಿಕೆ ನಡೆಸುತ್ತಿಲ್ಲ, ವಿವಿ ಹಾಸ್ಟೆಲ್‌ ಅವ್ಯವಸ್ಥೆ, ತರಗತಿ ಕೊಠಡಿಗಳು ಸೋರುತ್ತಿವೆ, ಅಂಕಪಟ್ಟಿ ಮತ್ತು ಪ್ರಮಾಣಪತ್ರ ನೀಡುವಲ್ಲಿ ವಿಳಂಬ, ಪರೀಕ್ಷಾ ಶುಲ್ಕ, ವಿವಿಯಲ್ಲಿ ಬೀದಿ ದೀಪಗಳ ಅವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕುವೆಂಪು ವಿವಿ ರಿಜಿಸ್ಟ್ರಾರ್‌ ಸೇರಿದಂತೆ ಅಧಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

MESCOM ಗಮನಿಸಿ, ಜುಲೈ 13 ,ಕುಂಸಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ತಾಲ್ಲೂಕು ಕುಂಸಿ ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿ ಇರುವುದರಿಂದ ಕುಂಸಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ ಹಳ್ಳಿಗಳಾದ ಕುಂಸಿ, ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣಿಹೂನೂರು, ಹೊರಬೈಲು ಮತ್ತು ಸುತ್ತಮುತ್ತಲ ಹಳ್ಳಿಗಳು ಹಾಗೂ ಹಾರಳ್ಳಿ, ರಾಮನಗರ, MESCOM ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ ಮತ್ತು ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ದಿನಾಂಕ : 13.07.2024 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.