KSRTC ಕೆಎಸ್ಆರ್ಟಿಸಿ ಜಿಲ್ಲಾ ವಿಭಾಗಕ್ಕೆ ನೂತನ ವಿಭಾಗೀಯ ಅಧಿಕಾರಿಯಾಗಿ ಟಿ.ಆರ್. ನವೀನ್ ಅಧಿಕಾರ ವಹಿಸಿ ಕೊಂಡಿದ್ದಾರೆ. ಇವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘ (ಸಿಐಟಿಯು) ವತಿಯಿಂದ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಂಘ ವತಿಯಿಂದ ಇಲ್ಲಿನ ವಿಭಾಗೀಯ ಕಚೇರಿ ಆವರಣದಲ್ಲಿ ಶುಕ್ರವಾರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇಲ್ಲಿ ಹೂ ಗುಚ್ಚ ನೀಡಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರನ್ನು ಸ್ವಾಗತಿಸಲಾಯಿತು.
KSRTC ಕಾರ್ಯಕ್ರಮದಲ್ಲಿ ಕೆಎಸ್ಆರ್ ಟಿಸಿ ಸಿಐಟಿಯು ಅಧ್ಯಕ್ಷ ರಾಜು ಚಿನ್ನಸ್ವಾಮಿ, ಕೆಎಸ್ಆರ್ಟಿಸಿ ಸಿಐಟಿಯು ಹಾಗೂ ಕೆ ಎಸ್ ಆರ್ ಟಿ ಸಿ ಪ. ಜಾ. ಪ. ಪಂ. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಹನುಮಂತಪ್ಪ, ಖಜಾಂಚಿ ಶಂಕರಮೂರ್ತಿ ಹಾಗೂ ಸಂಘದ ಇತರೆ ಮುಖಂಡರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.