Thursday, April 9, 2026
Thursday, April 9, 2026
Home Blog Page 645

Bigg Boss Kannada  ಬಿಗ್ ಬಾಸ್ 11 ಶುರುವಾಗುವ ಸಮಯ ಬರುತ್ತಿದೆ. ನಿರೀಕ್ಷಿಸಿ

0

Bigg Boss Kannada  ‘ಬಿಗ್ ಬಾಸ್ ಕನ್ನಡ ಸೀಸನ್ 10’ ಯಶಸ್ವಿಯಾಗಿ ಮುಗಿದಿದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶುರುವಾಗುವ ಸಮಯ ಹತ್ತಿರ ಬಂದಿದೆ. ಹೌದು, ಅಕ್ಟೋಬರ್ 3ನೇ ವಾರದಿಂದ ಹೊಸ ಸೀಸನ್ ಆರಂಭವಾಗಲಿದೆಯಂತೆ.
ತಯಾರಿ ಶುರು ಆಗಿದೆ!
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಅಕ್ಟೋಬರ್‌ನಲ್ಲಿ ಆರಂಭವಾಗುವುದು ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹಾಗೆಯೇ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಈಗಾಗಲೇ ವಾಹಿನಿಯು ಇದಕ್ಕೆ ಸಂಬಂಧಪಟ್ಟಂತೆ ತಯಾರಿಯನ್ನು ಶುರು ಮಾಡಿದೆ. ಈ ಮನೆಗೋಸ್ಕರ 300 ಜನರು ಕೆಲಸ ಮಾಡುತ್ತಿರುತ್ತಾರೆ. ದೊಡ್ಡ ಮನೆ, ಅದಕ್ಕೆ ಬೇಕಾದ ಸಾಮಗ್ರಿಗಳು, ಸ್ಪರ್ಧಿಗಳಿಗೋಸ್ಕರ ವ್ಯವಸ್ಥೆ ಹೀಗೆ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಲು ತಿಂಗಳಾನುಗಟ್ಟಲೇ ಸಮಯ ಬೇಕು.

ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ
ಸ್ಪರ್ಧಿಗಳ ಆಯ್ಕೆ ಮಾಡೋದು ಕೂಡ ದೊಡ್ಡ ಟಾಸ್ಕ್. ಇಲ್ಲಿ ವಿಭಿನ್ನ ಕಾರ್ಯಕ್ಷೇತ್ರಗಳಿಂದ ಬರುವ ಸ್ಪರ್ಧಿಗಳ ಹೊರತಾಗಿ, ವಿಭಿನ್ನ ಮನಸ್ಥಿತಿಯುಳ್ಳವರು ಬೇಕು. ಹಾಗಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ದೊಡ್ಡದು ಎನ್ನಬಹುದು.

Bigg Boss Kannada  ಸ್ಪರ್ಧಿಗಳು ಯಾರು ಯಾರು?
‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ಯುಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್, ‘ತುಕಾಲಿ ಸ್ಟಾರ್’ ಸಂತು ಪತ್ನಿ ಮಾನಸಾ, ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಹೀಗೆ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ‘ಬಿಗ್ ಬಾಸ್’ ಮನೆಗೆ ಹೋಗುವವರು ಯಾರೂ ಕೂಡ ತಾವು ದೊಡ್ಮನೆಗೆ ಹೋಗ್ತೀವಿ ಅಂತ ಹೇಳೋದಿಲ್ಲ. ‘ಬಿಗ್ ಬಾಸ್’ ಪ್ರಸಾರ ಆದಮೇಲೆ ಯಾರು ಸ್ಪರ್ಧಿಗಳು ಎನ್ನೋದು ಗೊತ್ತಾಗುವುದು.

Rain In Uttara Kannada ಮಳೆ ,ಗುಡ್ಡ ಕುಸಿತ ಸ್ಥಳಕ್ಕೆ ಸಾಗಲು ಕಾರು ಬಿಟ್ಟು ಲಾರಿ ಏರಿದ ಕಾರವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

0

Rain In Uttara Kannada ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಆರು ಜನರನ್ನು ಬಲಿ ತೆಗೆದುಕೊಂಡಿದ್ದ ಗುಡ್ಡ ಕುಸಿತದ ಜಾಗಕ್ಕೆ ರಕ್ಷಣಾ ತಂಡ ತಲುಪಲು ಕೂಡಾ ಸಾಧ್ಯವಾಗದ ರೀತಿಯಲ್ಲಿ ಮಳೆ ಸುರಿದಿತ್ತು. ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಸಣ್ಣ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.
Rain In Uttara Kannada ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ , ಜಿಲ್ಲಾ ಪಂಚಾಯತ್ ಸಿಸಿಒ ಈಶ್ವರ್‌ ಕಾಂದೂ ಹಾಗೂ ಎಸ್‌ಪಿ ಎಂ ನಾರಾಯಣ್ ಅವರು ಲಾರಿಯಲ್ಲಿ ಪ್ರಯಾಣಿಸಿ ಘಟನಾ ಸ್ಥಳವನ್ನು ತಲುಪಿದ್ದಾರೆ. ಶಿರೂರು ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐದು ಜನ ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಗ್ಯಾಸ್‌ ಟ್ಯಾಂಕರ್‌ಗಳು, ಮೂರು ಮನೆ ಮತ್ತು ಒಂದು ಕಾರು ಮಣ್ಣಿನೊಂದಿಗೆ ಕೊಚ್ಚಿ ಹೋಗಿ ನದಿ ಪಾಲಾಗಿತ್ತು. ಘೋರ ದುರಂತ ನಡೆದ ಸ್ಥಳಕ್ಕೆ ತೆರಳುತ್ತಿದ್ದ ಅಧಿಕಾರಿಗಳ ವಾಹನಗಳೂ ಕೂಡಾ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಲು ಆಗದೆ ನಿಂತಿತ್ತು. ಈ ವೇಳೆ ದುರ್ಘಟನೆ ನಡೆದ ಸ್ಥಳಕ್ಕೆ ತೆರಳಲು ಅಧಿಕಾರಿಗಳು ಲಾರಿಯೊಂದರ ಸಹಾಯ ಪಡೆದುಕೊಂಡಿದ್ದಾರೆ.

Jog Falls ಜೋಗ ಜಲಪಾತ ವೀಕ್ಷಿಸಲು, ಪ್ರವಾಸಿಗರಿಂದ ನೂಕು ನುಗ್ಗಲು ಪರಿಸ್ಥಿತಿ

0

Jog Falls ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಜಗತ್ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಪ್ರವಾಸಿಗರು ಆಗಮಿಸಿದ್ದರು.

ಜಗತ್ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಇಂದು ಜನ ಸಾಗರವೇ ಹರಿದು ಬಂದಿದೆ. ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜೋಗ ಜಲಪಾತದ ರಾಜ, ರಾಣಿ, ರೋರರ್ ಲೇಡಿ, ರಾಕೆಟ್​ಗಳು ದುಮ್ಮಿಕ್ಕಿ ಹರಿಯುತ್ತಿವೆ.
ಮಳೆಗಾಲದ ಹಿನ್ನೆಲೆಯಲ್ಲಿ ಜೋಗ ಜಲಪಾತದ ನಯನ ಮನೋಹರ ದೃಶ್ಯ ನೋಡಲು ಇಂದು ಪ್ರವಾಸಿಗರ ದಂಡೆ ಆಗಮಿಸುತ್ತಿದೆ. ಅದರಲ್ಲೂ ಇಂದು ಭಾನುವಾರ ಬೆಳಗ್ಗೆಯಿಂದಲೇ ಜೋಗ ಜಲಪಾತವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು
ಜೋಗ ಜಲಪಾತ ನೋಡಲು ಸೇರಿದ ಜನ ಸಾಗರ
Jog Falls ಇಂದು ಜೋಗ ಜಲಪಾತವನ್ನು ನೋಡಲು ಸುಮಾರು 50 ಸಾವಿರ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿಗರು ಒಮ್ಮೆಲೆ ಆಗಮಿಸಿದ ಕಾರಣಕ್ಕೆ ಜೋಗ ಜಲಪಾತದ ಗೇಟ್​ನಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಪ್ರವಾಸಿಗರು ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ, ಜೋಗ ಜಲಪಾತದ ಸೌಂದರ್ಯವನ್ನು ಸವಿದರು.
ಪ್ರವಾಸಿಗರು ತಮ್ಮ ವಾಹನವನ್ನು ಪಾರ್ಕಿಂಗ್ ಮಾಡಲು ಪರದಾಡುವಂತಾಯಿತು. ಜೋಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಸ್ವಲ್ಪ ಅಡಚಣೆ ಉಂಟಾಗಿತ್ತು.

R.M. Manjunath Gowda ತೀರ್ಥಹಳ್ಳಿಯ ಕೆಲ ಕಟ್ಟಡಗಳ ಕಳಪೆ ಕಾಮಗಾರಿ, ಶಾಸಕ ಆರಗ ಅವರು ನೈತಿಕ ಹೊಣೆ ಹೊರಬೇಕು- ಆರ್.ಎಂ.ಮಂಜುನಾಥ ಗೌಡ

0

R.M. Manjunath Gowda ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ತಾಲೂಕು ಪಂಚಾಯತಿ ನೂತನ ಕಟ್ಟಡ, ಪೋಲಿಸ್, ಅಗ್ನಿ ಶಾಮಕ ದಳ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಗಳು ಸೋರುತ್ತಿದ್ದು, ಕಳಪೆ ಕಾಮಗಾರಿ ಮತ್ತು ಭೃಷ್ಟಚಾರ ನಡೆದಿದೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಇದರ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ಮುಖಂಡ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ್ ಗೌಡ ಅವರು ಆಗ್ರಹಿಸಿದರು.
ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿ ಗಾಂಧಿ ಭವನದಲ್ಲಿ ಜು. 17 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ ಅವರು, ಕಳಪೆ ಕಾಮಗಾರಿಯಿಂದಾಗಿ ಕಟ್ಟಿದ ಕೆಲವೇ ದಿನಗಳಲ್ಲಿ ಸರ್ಕಾರಿ ಕಟ್ಟಡಗಳು ಸೋರಲಾರಂಭಿಸಿವೆ. ಬಿರುಸಾದ ಮಳೆ ಈಗ 2-3 ದಿನಗಳಿಂದ ಬರುತ್ತಿದೆಯಷ್ಟೆ. ಆದರೆ ಕೆಲವು ದಿನಗಳ ಹಿಂದೆಯೇ ಸಣ್ಣ ಮಳೆಗೂ ನೂತನ ತಾಲೂಕು ಪಂಚಾಯತಿ ಕಟ್ಟಡ ಸೋರುತ್ತಿದೆಯೆಂದರೆ ಏನರ್ಥ ಎಂದು ಪ್ರಶ್ನಿಸಿದರು.
R.M. Manjunath Gowda ತಾನಂತೂ ಯಾವುದೇ ಗುತ್ತಿಗೆದಾರನ ಬಳಿ ತನ್ನ ಜೀವಮಾನದಲ್ಲಿಯೇ ಕೈಯೊಡ್ಡಿಲ್ಲ. ರಾಜಕಾರಣದಲ್ಲೂ ಮುಂದೊಂದು ಹಿಂದೊಂದು ಮಾಡುವ ಅಭ್ಯಾಸ ತನ್ನದಲ್ಲ. ಮಾಧ್ಯಮದವರು ನೂತನ ಕಟ್ಟಡಗಳ ಕಳಪೆ ಕಾಮಗಾರಿಗಳ ಕುರಿತು ಬೆಳಕು ಚೆಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮಂಜುನಾಥ ಗೌಡರು ಶ್ಲಾಘಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಎಲ್ಲಾ ಸಮುದಾಯದವರ ಭವನಗಳಿಗೆ ಕರ್ನಾಟಕ ನೀರಾವರಿ ನಿಗಮದಿಂದ ಸಂಸದ ರಾಘವೇಂದ್ರ ಅವರು ಅನುದಾನವನ್ನು ನೀಡಿರುವುದು ಸಂಸದರ ನಿಧಿ ಹೇಗಾಗುತ್ತದೆ. ಇದು ಕೂಡ ರಾಜ್ಯ ಸರ್ಕಾರದ್ದೆ ಹಣ ಎಂದು ಮಂಜುನಾಥ ಗೌಡರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮಾಜಿ ಜಿ.ಪಂ.ಸದಸ್ಯ ಹಾರೋಗೊಳಿಗೆ ಪದ್ಮನಾಭ್ , ಮುಖಂಡರಾದ ಡಿ.ಎಸ್. ವಿಶ್ವನಾಥ ಶೆಟ್ಟಿ, ಎಲಪ್ಪ, ಬಿ.ಆರ್. ರಾಘವೇಂದ್ರ ಶೆಟ್ಟಿ, ನಾಬಳ ಶಚ್ಚೀಂದ್ರ ಹೆಗ್ಡೆ, ಪ.ಪಂ. ಸದಸ್ಯರಾದ ರಹಮತುಲ್ಲಾ ಅಸಾದಿ, ಗೀತಾ ರಮೇಶ್, ಸುಶೀಲಾ ಶೆಟ್ಟಿ, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ ಮುಂತಾದವರಿದ್ದರು.

Accident In Thirtahalli ತೀರ್ಥಹಳ್ಳಿಯ ಯಡೂರು ಬಳಿ ಲಾರಿ & ಕಾರು ಡಿಕ್ಕಿ

0

Accident In Thirtahalli ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಮಾಸ್ತಿಕಟ್ಟೆ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ನಡೆದ ಘಟನೆ ಯಡೂರು ಮುಖ್ಯರಸ್ತೆಯಲ್ಲಿ ನಡೆದಿದೆ.

ಕಾರಿನಲ್ಲಿ‌ ನಾಲ್ಕು ಜನರಿದ್ದು ಯಾವುದೇ ಅಪಾಯವಾಗಿಲ್ಲ. ಲಾರಿ 15 ಅಡಿ ಕೆಳಗೆ ಬಿದ್ದ ಕಾರಣ ಚಾಲಕನಿಗೆ ಸ್ವಲ್ಪ ಪೆಟ್ಟಾಗಿದ್ದು ಚಿಕಿತ್ಸೆಗೆ ಮಾಸ್ತಿಕಟ್ಟೆಗೆ ಕಳುಹಿಸಲಾಗಿದೆ.
ಶಿವಮೊಗ್ಗದವರು ಎನ್ನಲಾದ ನಾಲ್ವರು ಪ್ರವಾಸಕ್ಕೆಂದು ಬಂದು ಯಡೂರಿನ ಆಮಂತ್ರಣ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು.

Accident In Thirtahalli ಹುಲಿಕಲ್ ಫಾಲ್ಸ್ ನೋಡಿ ವಾಪಾಸಾಗುವ ವೇಳೆಗೆ ಈ ದುರ್ಘಟನೆ ನಡೆದಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

Klive Special ಆಷಾಢದಲ್ಲೊಂದು ಕವಿತೆ ಕವಿ: ಡಿ.ಸುದೀಪ್.ಹೂವಿನ ಹಡಗಲಿ.

0

Klive Special ಕವಿತೆ

ಸ್ನೇಹನಾ…..? ಪ್ರೀತಿನಾ…..?

ಸ್ನೇಹದ ಹೆಸರಲಿ ಬಂದು
ಸೇರಿದೆ ನೀನು…

ನನ್ನ ಕಷ್ಟ ಸುಖದಲ್ಲಿ ಭಾಗಿಯಾದೆ ನೀನು
ನನಗೆ ತಿಳಿಯದೇ ನನ್ನ ಹೃದಯ ಕದ್ದೆ ನೀನು….

ನಿನ್ನ ಕಣ್ಣ ನೋಟಕೆ ಮುಖನಾದೆ ನಾನು….
ನನ್ನ ಪ್ರೀತಿಯನು ಕೂಗಿಹೇಳಿದರೂ
ಕೇಳದೆ ನಿನ್ನಗಿನ್ನೂ….

Klive Special ಇನ್ನೂ ಗೊಂದಲದಲ್ಲಿದೆ ನನ್ನ ಜೀವಾ…..
ಸ್ನೇಹನಾ….? ಪ್ರೀತಿನಾ….? ಎಂಬ ಪ್ರಶ್ನೆಗೆ
ಉತ್ತರವ ಹುಡುಕುತಾ….

ನೀನೆ ತಿಳಿಸಿಬಿಡು ಇದು ಸ್ನೇಹನಾ….? ಪ್ರೀತಿನಾ….?
ನಿನ್ನ ಉತ್ತರಕ್ಕಾಗಿ ಕಾಯುತಿರುವೆ ನಾ….

ರಚನೆ : ಸುದೀಪ್.ಡಿ ಹವ್ಯಾಸಿ ಕವಿ, ಹೂವಿನ ಹಡಗಲಿ, ವಿಜಯನಗರ

Klive Special Article ಮರೆಯಲಾಗದ ಮನುಷ್ಯ, ನೆಲ್ಸನ್ ಮಂಡೇಲಾ

0

Klive Special Article ಮರೆಯಲಾದ ಮನುಷ್ಯ, ನೆಲ್ಸನ್ ಮಂಡೇಲಾ ಮರೆಯಲಾದ ಮನುಷ್ಯ, ನೆಲ್ಸನ್ ಮಂಡೇಲಾ
ಲೇ: ಎನ್.ಎನ್.ಕಬ್ಬೂರ್.
ಸವದತ್ತಿ.ಬೆಳಗಾಂ

ಜುಲೈ 18 ನೆಲ್ಸನ್ ಮಂಡೇಲಾ ಅವರ ಜನ್ಮದಿನ. ಮಂಡೇಲಾ ಅವರು ತಮ್ಮ 90 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಅಂತರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನದ ಕಲ್ಪನೆಯನ್ನು ಘೋಷಿಸಲಾಸಯಿತು, ಅವರ ಜನಪ್ರಿಯ ವಾಕ್ಯವಾದ “ಹೊಸ ಕೈಗಳು ಭಾರವನ್ನು ಎತ್ತುವ ಸಮಯ. ಅದು ಈಗ ನಿಮ್ಮ ಕೈಯಲ್ಲಿದೆ” ಎಂಬುದನ್ನು ಇಲ್ಲಿ ನೆನೆಯಬಹುದು.

● ಅಂತರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನದ ಇತಿಹಾಸ:- ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಜುಲೈ 18 ರಂದು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವಸಂಸ್ಥೆಯು 2009 ರಲ್ಲಿ ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯದ ಮೂಲಕ ಅಧಿಕೃತವಾಗಿ ಘೋಷಿಸಿತು ಮತ್ತು ಮೊದಲ UN ಮಂಡೇಲಾ ದಿನವನ್ನು ಜುಲೈ 18, 2010 ರಂದು ನಡೆಸಲಾಯಿತು. ಈ ದಿನವು ಸಾರ್ವಜನಿಕ ರಜಾದಿನವಲ್ಲ ಆದರೆ ಸ್ವಯಂಸೇವಕ ಮತ್ತು ಸಮುದಾಯ ಸೇವೆಯ ಮೂಲಕ ನೆಲ್ಸನ್ ಮಂಡೇಲಾ ಅವರ ಜೀವನ ಮತ್ತು ಕಾರ್ಯಗಳನ್ನು ಆಚರಿಸುತ್ತಾರೆ.

● ನೆಲ್ಸನ್ ಮಂಡೇಲಾ ಯಾರು?:-
1) ಇವರಪೂರ್ಣ ಹೆಸರು ನೆಲ್ಸನ್ ರೋಲಿಹ್ಲಾ ಮಂಡೇಲಾ, ಒಬ್ಬ ಕಪ್ಪು ರಾಷ್ಟ್ರೀಯತಾವಾದಿ ಮತ್ತು ದಕ್ಷಿಣ ಆಫ್ರಿಕಾದ ಮೊದಲ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಕಪ್ಪು ಅಧ್ಯಕ್ಷ.
2) 1990 ರ ದಶಕದ ಆರಂಭದಲ್ಲಿ ಅವರು ಜನಾಂಗೀಯ ಪ್ರತ್ಯೇಕತೆ ಮತ್ತು ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವದ ಆಡಳಿತವನ್ನು ತರಲು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಎಫ್‌ಡಬ್ಲ್ಯೂ ಡಿ ಕ್ಲರ್ಕ್ ಅವರೊಂದಿಗೆ ಮಾತುಕತೆ ನಡೆಸಿದರು.
3) ಇಬ್ಬರೂ ಅಧ್ಯಕ್ಷರುಗಳು ಜಂಟಿಯಾಗಿ 1993 ರಲ್ಲಿ ಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಅವರು 1994 ರಿಂದ 1999 ರವರೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
4) 1964 ರಿಂದ 1982 ರವರೆಗೆ ದೇಶದ್ರೋಹದ ಆಧಾರದ ಮೇಲೆ ದಕ್ಷಿಣ ಆಫ್ರಿಕಾದ ರಾಜ್ಯವು ಮಂಡೇಲಾ ಅವರನ್ನು ಬಂಧಿಸಿತು.
5) ಜೈಲಿನಲ್ಲಿದ್ದಾಗಲೂ ಅವರು ಕಪ್ಪು ಸಮುದಾಯದಿಂದ ವ್ಯಾಪಕ ಬೆಂಬಲವನ್ನು ಹೊಂದಿದ್ದರು. ಈ ಸಮಯದಲ್ಲಿ ಅವರು ತಮ್ಮ ಬಿಡುಗಡೆಗೆ ಮೂರು ಷರತ್ತುಬದ್ಧ ಕೊಡುಗೆಗಳನ್ನು ತಿರಸ್ಕರಿಸಿದರು ಎಂದು ವರದಿಯಾಗಿದೆ.
6) ಮಂಡೇಲಾ ಅವರು ಅಧ್ಯಕ್ಷರಾಗಿ ಎರಡನೇ ಅವಧಿಯನ್ನು ಬಯಸಲಿಲ್ಲ ಆದರೆ ಅತ್ಯಂತ ಬಲವಾದ ಅಂತರರಾಷ್ಟ್ರೀಯ ಉಪಸ್ಥಿತಿಯನ್ನು ಉಳಿಸಿಕೊಂಡರು.
7) ಇವರು ಶಾಂತಿ ಮತ್ತು ಸಾಮಾಜಿಕ ನ್ಯಾಯದ ಪ್ರಚಾರವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದರು.
8) ದೀರ್ಘಕಾಲದ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಮಂಡೇಲಾ 2013 ರಲ್ಲಿ 95 ನೇ ವಯಸ್ಸಿನಲ್ಲಿ ನಿಧನರಾದರು.

Klive Special Article ● ಮಂಡೇಲಾರಿಗೊಂದು ಸಲಾಂ:- ಸುಮಾರು 1960ರ ಸಮಯದಲ್ಲಿ ಅಹಿಂಸೆ ನಡೆಯುವುದಿಲ್ಲ ಎಂದು ಕಂಡುಕೊಂಡ ಮಂಡೇಲಾ ಕ್ರಾಂತಿಕಾರಿ ಹೋರಾಟ, ಗೆರಿಲ್ಲಾ ಹೋರಾಟಕ್ಕೆ ಇಳಿದ; ತಲೆ ಮರೆಸಿಕೊಂಡು ಬಿಳಿಯರ ವ್ಯವಸ್ಥೆಗೆ ಸಿಂಹಸ್ವಪ್ನನಾದ. ಆಗ ಮಂಡೇಲಾ ಎದುರಿಗಿದ್ದದ್ದು ಎರಡೇ ಸಾಧ್ಯತೆಗಳು; ಅಹಿಂಸಾತ್ಮಕ ಹೋರಾಟ ಪರಿಣಾಮಕಾರಿಯಲ್ಲ, ಹಿಂಸೆಯ ದಾರಿಯೇ ಸರಿ. ಆಗ “ದೇಶದ್ರೋಹ”ದ ಚಟುವಟಿಕೆಗಳಿಗಾಗಿ ದಕ್ಷಿಣ ಆಫ್ರಿಕಾದ ಸರ್ಕಾರ ಮಂಡೇಲಾನನ್ನು ದಸ್ತರಿಗಿ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿತು. ಜೈಲಿನಲ್ಲಿದ್ದ ಮಂಡೇಲಾ ಜೈಲಿನ ಹೊರಗಿನ ಮಂಡೇಲಾಗಿಂತ ಶಕ್ತಿವಂತನಾದ.

ಜೀವಾವಧಿ ಸೆರೆವಾಸವೆಂದರೆ ಸೆರೆಮನೆಯ ಹೊರಗಿರುವವರಿಗೆ ತಿಳಿಯುವುದಿಲ್ಲ. ವರ್ಣಭೇದದ ನೀತಿ ರೂಪಿಸಿ ಆಫ್ರಿಕಾದ ನಾಯಕರನ್ನು ಹತ್ತಿಕ್ಕಿ ನಿರಂತರವಾಗಿ ಅಧಿಕಾರ ನಡೆಸುವ ಹುನ್ನಾರ ಬಿಳಿಯರದು. ಇದೊಂದು ವಿಚಿತ್ರ ಸ್ಥಿತಿ. ಸೆರೆಯಲ್ಲಿಟ್ಟವನೂ ಸೆರೆಯಲ್ಲಿದ್ದವನೂ ಬಂಧಿಯಾಗಿರುವ ಸ್ಥಿತಿ. ಮಂಡೇಲಾ ಜಾಗದಲ್ಲಿ ನಿಂತು ನೋಡಿದರೆ ಈ ಸ್ಥಿತಿಯ ಜಟಿಲತೆ ಗೊತ್ತಾಗುತ್ತದೆ. ಜೀವನವೆಂದರೆ ನಲವತ್ತೋ ಐವತ್ತೋ ವರ್ಷ ನಿಜಕ್ಕೂ ಜೀವಂತವಾಗಿರುವ, ಕೈಕಾಲು ಗಟ್ಟಿಮುಟ್ಟಾಗಿದ್ದು ತ್ರಾಣ ಇರುವ ವಿಚಾರ. ಇಪ್ಪತ್ತು ವರ್ಷ ಕಠಿಣ ಸಜಾ; ಕಲ್ಲು ಒಡೆಯುವ, ಹೊರುವ ಕೆಲಸ. ಸ್ವಾಭಿಮಾನಕ್ಕಾಗಿ ನಿಶ್ಚಯ ಕರಗಿಸದೆ, ಉಳಿದಿರುವ ವರ್ಷಗಳಲ್ಲಿ ದೈಹಿಕ ನೆಮ್ಮದಿಗಾಗಿ ಆಸೆಪಡದೆ ಮುಂದುವರಿಯುವ ನಿರ್ಧಾರ; ದೈಹಿಕ ನೆಮ್ಮದಿಯ ಆಶೆ ಆತ್ಮದ ಶ್ರೇಯಸ್ಸನ್ನು ಹಾಳು ಮಾಡದಂತೆ ಕಾಪಾಡಿಕೊಳ್ಳುವ ಶ್ರದ್ಧೆ. ಬಿಡುಗಡೆಯ ಸಾಧ್ಯತೆ ಕೂಡ ಇಲ್ಲದೆ, ತನ್ನ ಛಲವೇ ತನ್ನ ಜನರ ಆದರ್ಶವಾಗುವುದೆಂಬ ಆಶೆಯಿಂದ, ತನ್ನೆಲ್ಲ ತ್ಯಾಗವೂ ವ್ಯರ್ಥ ಕೂಡ ಆಗಬಹುದೆಂಬ ಅನುಮಾನ ಹತ್ತಿಕ್ಕಲಾರದೆ, ತಾನೇ ತನ್ನ ಜನರ ತಿರುಳೆಂಬ ಅಹಂಕಾರವನ್ನು ವಿನಯವನ್ನಾಗಿಸಿಕೊಂಡು ಬದುಕಿದ ಮಂಡೇಲಾರು ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ದಂತಕಥೆಯಾಗಿದ್ದಾರೆ, ಅವರಿಗೊಂದು ಸಲಾಂ ಹೇಳೋಣವೇ.

● 18 ನೇ ನೆಲ್ಸನ್ ಮಂಡೇಲಾ ವಾರ್ಷಿಕ ಉಪನ್ಯಾಸ:- 18 ನೇ ನೆಲ್ಸನ್ ಮಂಡೇಲಾ ವಾರ್ಷಿಕ ಉಪನ್ಯಾಸವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು 2020 ರಲ್ಲಿ ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ದಿನದಂದು ನೀಡಿದರು. ಮೊದಲ ಬಾರಿಗೆ ಕರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉಪನ್ಯಾಸವನ್ನು ನಡೆಸಲಾಯಿತು. ಇಂದಿನ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಅಸಮಾನತೆಗಳು ಮತ್ತು ಜಗತ್ತು ಹೋರಾಟವನ್ನು ಮುಂದುವರೆಸಬೇಕಾದ ಅನ್ಯಾಯಗಳ ಬಗ್ಗೆ ಪ್ರಧಾನ ಕಾರ್ಯದರ್ಶಿ ಗಮನಸೆಳೆದರು.

● 67 ನಿಮಿಷಗಳ ಮಂಡೇಲಾ ದಿನ:- ಮಂಡೇಲಾ ದಿನವನ್ನು 67 ನಿಮಿಷಗಳ ಮಂಡೇಲಾ ದಿನ ಎಂದೂ ಕರೆಯಲಾಗುತ್ತದೆ. “67 ನಿಮಿಷಗಳು” ಎಂಬ ಪದಗುಚ್ಛವನ್ನು ಜನರು ಈ ದಿನದಂದು 67 ನಿಮಿಷಗಳ ಕಾಲ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂಬ ಸಂದೇಶವನ್ನು ರವಾನಿಸಲು ಬಳಸಲಾಗುತ್ತದೆ, ಮಂಡೇಲಾ ಅವರು ತಮ್ಮ ದೇಶಕ್ಕೆ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಒಂದು ನಿಮಿಷ.

● ಕೊನೆಯ ಮಾತು:- 2014 ರಲ್ಲಿ ಯು.ಎನ್ ಜನರಲ್ ಅಸೆಂಬ್ಲಿ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಸ್ಥಾಪಿಸಿತು, ಇದು ಮಾನವೀಯತೆಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಸಾಧನೆಗಳನ್ನು ಗುರುತಿಸುವ ಪಂಚವಾರ್ಷಿಕ ಪ್ರಶಸ್ತಿಯಾಗಿದೆ. ಮಂಡೇಲಾ ದಿನವು ಕಾರ್ಯಕ್ಕೆ ಜಾಗತಿಕ ಕರೆಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಜಗತ್ತನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾನೆ, ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಕಲ್ಪನೆಯನ್ನು ಆಚರಿಸುತ್ತದೆ.

ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com
○○○○○○○○○○○○○

Padma Shri Award “ಪದ್ಮ”ಪುರಸ್ಕಾರಕ್ಕೆ ಕ್ರೀಡಾಕ್ಷೇತ್ರದ ಸಾಧಕರಿಗೆ ವಿವರ ಸಲ್ಲಿಸಿ ,ಅರ್ಜಿ ನೀಡಲು ಪ್ರಕಟಣೆ

0

Padma Shri Award ಕೇಂದ್ರ ಸರ್ಕಾರದಿಂದ ಕ್ರೀಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2025ನೇ ಸಾಲಿನ ಪದ್ಮಶ್ರೇಣಿ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಹಿಂದಿನ ದಿನದಂದು ಪ್ರಕಟಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

Padma Shri Award ಆಸಕ್ತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಆಗಸ್ಟ್ 31ರೊಳಗಾಗಿ ಸಾಫ್ಟ್ ಪ್ರತಿಯನ್ನು ಇ-ಮೇಲ್ uspolitical-dpar@karnataka.gov.in ಗೆ ಕಳುಹಿಸಿ, ಒಂದು ಪ್ರತಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಶಿವಮೊಗ್ಗ ಕಚೇರಿಗೆ ನೀಡುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.:08182-223328 ನ್ನು ಸಂಪರ್ಕಿಸುವುದು.

Klive Special Article ಅಂತಾರಾಷ್ಟ್ರೀಯ ನ್ಯಾಯ ದಿನ : ಭಾರತದ ಹೊಸ ಕ್ರಿಮಿನಲ್ ಕಾನೂನುಗಳನ್ನು ಬಗ್ಗೆ ತಿಳಿಯೋಣ

0

Klive Special Article ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ರಚನೆಗೆ ಕಾರಣವಾದ ರೋಮ್ ಶಾಸನ ಒಪ್ಪಂದದ ಸವಿ ನೆನಪಿಗಾಗಿ ‘ಅಂತರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ’ ವನ್ನು ಪ್ರತಿವರ್ಷ ಜುಲೈ 17 ರಂದು ಆಚರಿಸಲಾಗುತ್ತದೆ. ಈ ದಿನಕ್ಕೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯ ದಿನ ಅಥವಾ ಅಂತಾರಾಷ್ಟ್ರೀಯ ನ್ಯಾಯ ದಿನ ಎಂದು ಕರೆಯಲಾಗುತ್ತದೆ.
ಆಧುನಿಕತೆಗೆ ಹೊಂದಿಕೊಳ್ಳುವಂತೆ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದ್ದು ಭಾರತ ದೇಶದ ಕಾನೂನುಗಳಲ್ಲೂ ಕೂಡ ಸಾಕಷ್ಟು ಬದಲಾವಣೆಯನ್ನು ಮಾಡಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಕಾನೂನು ಜಾರಿಗೆ ಬಂದಿದೆ. ಅಂತರಾಷ್ಟ್ರೀಯ ನ್ಯಾಯ ದಿನದ ಪ್ರಯುಕ್ತ ಹೊಸ ಕಾನೂನುಗಳ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದಿಕೊಳ್ಳುವುದು ಅವಶ್ಯಕವಾಗಿದೆ.
ಬ್ರಿಟಿμï ಕಾಲದಲ್ಲಿ ಜಾರಿಗೆ ಮಾಡಲಾಗಿದ್ದ ಕ್ರಿಮಿನಲ್ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಭಾರತೀಯ ದಂಡ ಸಂಹಿತೆ -1860, ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು -1872 ತಿದ್ದುಪಡಿಗೆ ಒಳಪಡಿಸಲಾಗಿದ್ದು ಮೂರು ಕ್ರಿಮಿನಲ್ ಕಾನೂನುಗಳನ್ನು 2023 ರ ಡಿಸೆಂಬರ್‍ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲಾಯಿತು. ಹೊಸ ಕಾನೂನುಗಳು 2024 ರ ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬಂದಿರುತ್ತದೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.
ಹೊಸ ಕ್ರಿಮಿನಲ್ ಕಾನೂನುಗಳು
ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆಯು ಜುಲೈ 1 ರಿಂದ ಜಾರಿಗೆ ತರಲಾಗಿದ್ದು ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ.
ಪೆÇಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್‍ಡಿ) ಈ ಹೊಸ ಕಾನೂನುಗಳಿಗೆ ತರಬೇತಿಯನ್ನು ನೀಡಿದೆ. ನ್ಯಾಯಾಂಗ ಅಕಾಡೆಮಿಗಳು, ನ್ಯಾಯಾಧೀಶರಿಗೂ ನ್ಯಾಯಾಂಗ ಇಲಾಖೆಯಿಂದ ತರಬೇತಿ ನೀಡುತ್ತಿದ್ದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು ಸಹ ತರಬೇತಿಯನ್ನು ನೀಡುತ್ತಿವೆ.
ಭಯೋತ್ಪಾದಕರ ಆಸ್ತಿ ಮುಟ್ಟುಗೋಲು:
Klive Special Article ಭಯೋತ್ಪಾದನೆಯನ್ನು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113(1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಾಮಾನ್ಯ ಸಾರ್ವಜನಿಕರನ್ನು ಅಥವಾ ಅದರ ಒಂದು ಭಾಗವನ್ನು ಬೆದರಿಸಲು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಈ ಕಾನೂನಿನ ಅಡಿಯಲ್ಲಿ ಇದೆ. ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳನ್ನು ಮರಣದಂಡನೆ ಅಥವಾ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿದೆ. ‘ಆಸ್ತಿಗೆ ಹಾನಿ, ಅಥವಾ ಕರೆನ್ಸಿಯ ತಯಾರಿಕೆ ಅಥವಾ ಕಳ್ಳಸಾಗಣೆಯನ್ನು ಇದು ಒಳಗೊಂಡಿದೆ.
ದೇಶದ್ರೋಹ ನಿಬಂಧನೆ ರದ್ದು:
ಭಾರತೀಯ ದಂಡ ಸಂಹಿತೆ 1860 ರ ದೇಶದ್ರೋಹದ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಕ್ಕೆ ಬದಲಾಯಿಸಲಾಗಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ವಿಭಾಗಗಳನ್ನು ಪರಿಚಯಿಸಲಾಗಿದೆ.
ಅತ್ಯಾಚಾರಿಗಳಿಗೆ ಮರಣ ದಂಡನೆ:
ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು ಪರಿಹರಿಸಲು ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು ಎಂಬ ಅಧ್ಯಾಯವನ್ನು ಪರಿಚಯಿಸಿದೆ. 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡಲಾಗಿದ್ದು ಅಪ್ರಾಪ್ತ ವಯಸ್ಸಿನ ಬಾಲಕಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೆÇೀಕ್ಸೊ)ಗೆ ಅನುಗುಣವಾಗಿ ಮಾಡಲಾಗಿದೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ.
ಅತ್ಯಾಚಾರ ಎಸಗುವವರಿಗೆ ಕಾನೂನಿನ ಪ್ರಕಾರ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇದು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೆ ಸಹ ಹೊಣೆಗಾರರಾಗಬೇಕಾಗುತ್ತದೆ. ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಯಾವುದೇ ಆಮಿಷದ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.
ಡಿಜಿಟಲ್ ಸಾಕ್ಷ್ಯ ಪರಿಗಣನೆ:
ಅನೇಕ ಪ್ರಕರಣಗಳಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನು ನ್ಯಾಯಾಲಯವು ಪರಿಗಣಿಸುತ್ತಿರಲಿಲ್ಲ ಬದಲಾದ ಕಾನೂನಿನಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನು ಕೂಡ ಪರಿಗಣಿಸುವ ನಿಯಮಗಳನ್ನು ರೂಪಿಸಲಾಗಿದೆ. ಸಿಸಿಟಿವಿ,ಕಾಲ್ ರೆಕಾರ್ಡ್, ವಿಡಿಯೋ ಹಾಗೂ ಸಾಮಾಜಿಕ ಜಾ¯ತಾಣಗಳಲ್ಲಿ ಪ್ರಕಟವಾದ ಮಾಹಿತಿಗಳು ಹೀಗೆ ಡಿಜಿಟಲ್ ಸಾಕ್ಷ್ಯಗಳಿಗೂ ಜೀವ ನೀಡಿಲಾಗಿದ್ದು ಸೈಬರ್ ಪ್ರಕರಣಗಳಿಗೆ ಇದು ಹೆಚ್ಚು ಸಹಕಾರಿಯಾಲಿದೆ.
ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ:
ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳಿಗೆ ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ. ಯಾರಾದರೂ ಉದ್ದೇಶಪೂರ್ವಕವಾಗಿ ಪದಗಳಲ್ಲಿ ಮಾತನಾಡುವ ಅಥವಾ ಬರೆಯುವ ಅಥವಾ ಚಿಹ್ನೆಗಳ ಮೂಲಕ, ಅಥವಾ ಗೋಚರ ಪ್ರಾತಿನಿಧ್ಯದಿಂದ, ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸಿನ ಅರ್ಥದ ಬಳಕೆಯಿಂದ ಅಥವಾ ಬೇರೆ ಬೇರೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕವನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ಕಾದಿದೆ. ಅಕ್ರಮ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪೆÇ್ರೀತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.
ಮೊದಲ ಬಾರಿಗೆ ಸಂಘಟಿತ ಅಪರಾಧದ ವ್ಯಾಖ್ಯಾನ:
ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ 111 (1) ಅಡಿಯಲ್ಲಿ ಪದವನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ. ಸಶಸ್ತ್ರ ದಂಗೆ, ವಿಧ್ವಂಸಕ ಕಾರ್ಯಾಚರಣೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಒಳಗೊಂಡಿದೆ. ಶಿಕ್ಷೆಯು ವಿವಿಧ ಅಪರಾಧಗಳಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ, ದಂಡ ಅಥವಾ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ.
ಗುಂಪು ಹತ್ಯೆಗೆ ಶಿಕ್ಷೆ ಹೆಚ್ಚಳ:
ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯಿದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆಯನ್ನು ನೀಡಲು ಬಯಸುತ್ತದೆ.
ತ್ವರಿತ ವಿಚಾರಣೆ ಮತ್ತು ನ್ಯಾಯ:
ಹೊಸ ಕಾನೂನುಗಳ ಪ್ರಕಾರ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಮತ್ತು ಪರಿಸ್ಥಿತಿಯನ್ನು ನೋಡಿ ನ್ಯಾಯಾಲಯವು ಇನ್ನೂ 90 ದಿನಗಳವರೆಗೆ ಅನುಮತಿ ನೀಡಬಹುದು. ತನಿಖೆಯನ್ನು 180 ದಿನಗಳಲ್ಲಿ ಮುಗಿಸಿ ವಿಚಾರಣೆಗೆ ಕಳುಹಿಸಬೇಕು.
ಪೆÇಲೀಸರು 90 ದಿನಗಳಲ್ಲಿ ಪ್ರಕರಣದ ಸ್ಥಿತಿಯನ್ನು ಅಪ್‍ಡೇಟ್ ಮಾಡಬೇಕಾಗುತ್ತದೆ. ವಿಚಾರಣೆಯ ಅನಂತರ 30 ದಿನಗಳಲ್ಲಿ ತೀರ್ಪು ನೀಡಬೇಕಾಗುತ್ತದೆ. ಒಂದು ವಾರದೊಳಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬೇಕು.
ಮೂರು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ ಸಾಮಾನ್ಯ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‍ಗಳಲ್ಲಿನ ಪ್ರಕರಣಗಳು ಶೇ. 40ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‍ಐಆರ್ ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಎಲ್ಲೇ ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‍ಐಆರ್ ದಾಖಲಿಸಬಹುದು.
ಸಂತ್ರಸ್ತರ ಮಾಹಿತಿ ಹಕ್ಕನ್ನು ಬಲಪಡಿಸಲಾಗಿದೆ. ಎಫ್‍ಐಆರ್‍ನ ಉಚಿತ ಪ್ರತಿಯನ್ನು ಪಡೆಯುವ ಹಕ್ಕು ಸಂತ್ರಸ್ತರಿಗೆ ಇದೆ. 90 ದಿನಗಳಲ್ಲಿ ತನಿಖೆಯ ಸ್ಥಿತಿಯನ್ನು ಸಂತ್ರಸ್ತರಿಗೆ ತಿಳಿಸಲು ಅವಕಾಶವಿದೆ. ಹೊಸ ಸಂಹಿತೆಯು ಕ್ರಿಮಿನಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ.
ಇತರ ನಿಬಂಧನೆಗಳು:
ಹೊಸ ಕಾನೂನಿನ ಪ್ರಕಾರ ಆರ್ಥಿಕ ಅಪರಾಧಗಳನ್ನು ಹೊರತುಪಡಿಸಿ ಘೋರ ಅಪರಾಧಿಗಳಿಗೆ ಮಾತ್ರ ಕೈಕೋಳವನ್ನು ಬಳಸಲಾಗುವುದು. ಅಂಗವೈಕಲ್ಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪರಾಧ ಕಾರ್ಯಗಳಿಗೆ ಕಠಿಣ ದಂಡವನ್ನು ಪರಿಚಯಿಸಲಾಗಿದೆ. ಶಿಕ್ಷೆ ಮನ್ನಾಗೊಳಿಸಲು ಕಾನೂನುಗಳಲ್ಲಿ ಹೊಸ ನಿಬಂಧನೆಯನ್ನು ಮಾಡಲಾಗಿದೆ. ಮರಣದಂಡನೆಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬಹುದು. ಏಳು ವರ್ಷಗಳ ಒಳಗಿನ ಸೆರೆವಾಸ ಮತ್ತು ಜೀವಾವಧಿ ಶಿಕ್ಷೆಯನ್ನು ಮಾತ್ರ ಕ್ಷಮಿಸಬಹುದು.

  • ರಘು ಆರ್, ಅಪ್ರೆಂಟಿಸ್
    ವಾರ್ತಾ ಇಲಾಖೆ, ಶಿವಮೊಗ್ಗ

Karnataka Sanga ಜುಲೈ 21, ಶಿವಮೊಗ್ಗದಲ್ಲಿ ಕಾವ್ಯ ಸಂಗೀತಯಾನ

0

Karnataka Sanga ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಜುಲೈ 21ರ ಭಾನುವಾರ ಸಂಜೆ 5.30ಕ್ಕೆ
ಕಾವ್ಯ ಸಂಗೀತಯಾನ ಎಂಬ ಕನ್ನಡ ಕವಿಗಳ ಕಾವ್ಯಲಹರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪ್ರಸಿದ್ಧ ಗಾಯಕ‌ಮತ್ತು ಈ ಕಾರ್ಯಕ್ರಮದ ಪರಿಕಲ್ಪನೆ ಮಾಡಿರುವ ಶಂಕರ ಶಾನುಭೋಗ್, ಕರ್ನಾಟಕ ಸಂಘ, ಚಿರಂತನ ಯೋಗ, ಸಂಗೀತ ಟ್ರಸ್ಟ್, ಬೆಂಗಳೂರಿನ ಸಾತ್ವಿಕ ಸಾಂಸ್ಕ್ರತಿಕ ಪ್ರತಿಷ್ಠಾನದ ಆಶ್ರಯ ದಲ್ಲಿ ನಡೆಯಲಿದೆ ಎಂದರು.
Karnataka Sanga ಎಂ.ಎನ್.ಸುಂದರರಾಜ್‌ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮವನ್ನು ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ., ಸ್ಥಾಪಕಿ ಶಾಂತಾ ಎಸ್ ಶೆಟ್ಟಿ, ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥ ಶಂಕರ್ ಶಾನುಭೋಗ ಮತ್ತು ಟ್ರಸ್ಟಿಗಳಾದ ಜಗದೀಶ ಚಂದ್ರ ಕಾಮತ್ ಮೊದಲಾದವರಿರುವರು ಎಂದರು.
ಕಾವ್ಯ ಸಂಗೀತ ಯಾನ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ‌ ನಡೆಸಲು ನಿರ್ಧರಿಸಲಾಗಿದೆ. ನಂತರ ಎಲ್ಕ ತಾಲೂಕು‌ ಮತ್ತು ಪ್ರತಿ ಗ್ರಾಮದಲ್ಲಿ‌ ನಡೆಸಲಾಗುವುದು. ಎಂದರು.
ಈಗಾಗಲೆ ಮೈಸೂರಿನಲ್ಲಿ ಇದನ್ನು‌ ನಡೆಸಲಾಗಿದೆ ಎಂದರು.