Thursday, April 9, 2026
Thursday, April 9, 2026
Home Blog Page 646

Bhadra dam ಪ್ರಸ್ತುತ ಭದ್ರಾ ಡ್ಯಾಂ ನೀರಿನ ಮಟ್ಡ 148.06ಅಡಿ‌ ( ಗರಿಷ್ಟ 186ಅಡಿ)

0

Bhadra dam ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾದ ಭದ್ರಾ ನೀರಿನ ಸಂಗ್ರಹದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರಲಾರಂಭಿಸಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಡ್ಯಾಂ ಒಳಹರಿವಿನಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ ಮೂರುವರೆ ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.
ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 34,544 ಕ್ಯೂಸೆಕ್ ಗೆ ಏರಿಕೆಯಾಗಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಕಂಡುಬಂದ ಅತ್ಯಧಿಕ ಒಳಹರಿವು ಇದಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ 3 ಅಡಿ 9 ಇಂಚು ನೀರು ಸಂಗ್ರಹವಾಗಿದೆ.
ಪ್ರಸ್ತುತ ಡ್ಯಾಂ ನೀರಿನ ಮಟ್ಟ 148 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. 169 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 141. 4 ಅಡಿ ನೀರು ಸಂಗ್ರಹವಾಗಿತ್ತು.

Bhadra dam ಡ್ಯಾಂ ಜಲಾನಯನ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಪ್ರಮಾಣದ ವರ್ಷಧಾರೆಯಾಗುತ್ತಿದೆ . ಇದರಿಂದ ಭದ್ರಾ ಡ್ಯಾಂ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.

ಮುಂದಿನ ಕೆಲ ದಿನಗಳವರೆಗೆ ಇದೇ ರೀತಿ ಒಳಹರಿವು ಕಂಡುಬಂದರೆ, ಪ್ರಸ್ತುತ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಡ್ಯಾಂ ಭರ್ತಿಯಾಗಲಿದೆ ಎಂದು ಡ್ಯಾಂ ವ್ಯಾಪ್ತಿಯ ಎಂಜಿನಿಯರ್ ಗಳು ಅಭಿಪ್ರಾಯಪಡುತ್ತಾರೆ.

Inner Wheel Club Shivamogga ಬೀದಿ ಬದಿಯ ವ್ಯಾಪಾರಸ್ಥರು ಸತತ ಪರಿಶ್ರಮದಿಂದ ಬದುಕನ್ನ ಕಟ್ಟಿಕೊಳ್ಳುತ್ತಿದ್ದಾರೆ- ಉಮಾ ವೆಂಕಟೇಶ್

0

Inner Wheel Club Shivamogga ಬೀದಿ ಬದಿಯ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಯಾವ ಸಮಯದಲ್ಲಿ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ತಮ್ಮ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷ ಉಮಾ ವೆಂಕಟೇಶ್ ನುಡಿದರು.

ಶಿವಮೊಗ್ಗದ ಗಾಂಧಿಬಜಾರ್ ನಲ್ಲಿ ಆರ್ಥಿಕವಾಗಿ ಹಿಂದುಳಿದ ಬೀದಿ ಬದಿಯ ತರಕಾರಿ ವ್ಯಾಪಾರಸ್ಥರಿಗೆ ಛತ್ರಿಗಳನ್ನ ವಿತರಣೆ ಮಾಡುತ್ತ ಮಾತನಾಡಿದರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬೀದಿ ಬದಿ ವ್ಯಾಪಾರಸ್ಥರು ಸತತ ಪರಿಶ್ರಮ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಇಂತಹವರಿಗೆ ನಾವುಗಳು ಸಹಾಯ ಹಸ್ತ ನೀಡಿದಾಗ ಅವರ ಬದುಕು ಹಸನವಾಗುತ್ತದೆ ಎಂದರು.

ನಮ್ಮ ಇನ್ನರ್ ವೀಲ್ ಸದಸ್ಯರು ತಮ್ಮ ತಮ್ಮ ಹುಟ್ಟು ಹಬ್ಬ ವಿವಾಹ ವಾರ್ಷಿಕೋತ್ಸವ ಇಂತಹ ಸಂದರ್ಭದಲ್ಲಿ ಸಮಾಜಮುಖಿಯಾಗಿ ಆಚರಿಸಿಕೊಂಡರೆ ಅರ್ಥಪೂರ್ಣವಾಗುತ್ತದೆ ನಾವು ಮಾಡುವ ಒಂದು ಸಣ್ಣ ಅಳಿಲು ಸೇವೆಯು ಸಹ ಅವರಿಗೆ ತುಂಬಾ ಅಗತ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ನನ್ನ 50ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ ಎಂದು ನುಡಿದರು.

Inner Wheel Club Shivamogga ಇದೇ ಸಂದರ್ಭದಲ್ಲಿ ಇನ್ನರ್ವಿಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಶ್ರೀಮತಿ ವಾಗ್ದೇವಿ ಡಾಕ್ಟರ್ ಬಸವರಾಜ್ ಮಾತನಾಡುತ್ತ ಹುಟ್ಟುಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕು ಹಾಗೂ ಸಮಾಜಮುಖಿಯಾಗಿ ಮಾಡಿಕೊಂಡರೆ ಅಂತಹ ಸೇವೆ ನಮ್ಮನ್ನು ಕಾಪಾಡುತ್ತದೆ ಅಗತ್ಯತೆ ಇರುವಲ್ಲಿ ಮಾತ್ರ ನಾವು ಸೇವೆ ಮಾಡಬೇಕು ಹಾಗೂ ನಾವು ಮಾಡಿದ ಸೇವೆ ಬಲಪ್ರದವಾಗಬೇಕು ಎಂದು ನುಡಿದರು ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್. ಕಾರ್ಯದರ್ಶಿ ಲತಾ ಸೋಮಶೇಖರ್ ಲಾವಣ್ಯ ಶಶಿಧರ್ ವಿಜಯಶ್ರೀ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.

CM Siddharamaih ಆಡಳಿತಾತ್ಮಕ ಹುದ್ದೆಗಳಿಗೆ ಶೇ 50 & ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ 75 ಮೀಸಲಾತಿ ವಿಧೇಯಕ ತರಲಿದ್ದೇವೆ- ಸಿದ್ಧರಾಮಯ್ಯ

0

CM Siddharamaih ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

CM Siddharamaih ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು‌
ತಮ್ಮ X ಖಾತೆಯ ಸಂದೇಶದಲ್ಲಿ ತಿಳಿಸಿದ್ದಾರೆ

Shivamogga Chitra Samaja ರಾಜ್ಯಮಟ್ಟದ “ಅಂಬೆಗಾಲು” ಕಿರುಚಿತ್ರ ಸ್ಪರ್ಧೆ ಪ್ರವೇಶಗಳಿಗೆ ಜುಲೈ 31 ವರೆಗೆ ಅವಧಿ ವಿಸ್ತರಣೆ

0

Shivamogga Chitra Samaja ಶಿವಮೊಗ್ಗ ನಗರದ ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ ಇದೀಗ ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ (ಶಾರ್ಟ್ ಫಿಲಂ) ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಜು. 31ರವರೆಗೆ ಅವಕಾಶವನ್ನು ವಿಸ್ತರಿಸಲಾಗಿದೆ ಎಂದು ಬೆಳ್ಳಿಮಂಡಲದ ಕಾರ್ಯಧ್ಯಕ್ಷರು ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕರೂ ಅದ ಡಿ. ಎಸ್. ಅರುಣ್ ತಿಳಿಸಿದರು.

ಈ ಸಂಬಂಧವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ವಿವಿಧೆಡೆಗಳಿಂದ ದಿನಾಂಕ ವಿಸ್ತರಣೆಗೆ ಮನವಿ ಬಂದಿದ್ದು, ಕಿರುಚಿತ್ರ ನಿರ್ಮಾಪಕರು, ನಿರ್ದೇಶಕರ ಆಶಯದಂತೆ ಅರ್ಜಿ ಸಲ್ಲಿಕೆಯ ಅವಽಯನ್ನು ಜು. 31ರವರೆಗೆ ವಿಸ್ತರಿಸಲಾಗಿದ್ದು, ಸಿದ್ಧ ಪಡಿಸಿದ ಕಿರುಚಿತ್ರಗಳನ್ನು ಆ.30ರ ಒಳಗಾಗಿ ಸಲ್ಲಿಸುವಂತೆ ಮನವಿ ಮಾಡಿದರು.

ಯುವಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೊತ್ಸಾಹಿಸುವ ದೃಷ್ಟಿಯಿಂದ ಈ ಕಿರುಚಿತ್ರ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು, ಶೀರ್ಷಿಕೆ ಹಾಗೂ ಟೈಟಲ್ ಕಾರ್ಡ್ ಸೇರಿ 05 ರಿಂದ 07 ನಿಮಿಷಗಳ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು ಎಂದಿರುವ ಅವರು, ಮೊಬೈಲ್ ಸೇರಿದಂತೆ ಯಾವುದೇ ಕ್ಯಾಮರಾವನ್ನು ಬಳಸಿ ಚಿತ್ರೀಕರಿಸಬಹುದಾಗಿದ್ದು, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಯಾವುದೇ ಮಾಧ್ಯಮಗಳಿಗಿಂದ ದೃಶ್ಯಗಳನ್ನು ಕಟ್ ಅಂಡ್ ಪೇಸ್ಟ್ ಆಗಲೀ, ಸಾಕ್ಷ್ಯಚಿತ್ರವನ್ನಾಗಲಿ ಅಥವಾ ಸಂಪೂರ್ಣ ಎನಿಮೇಷನ್ ಚಿತ್ರಗಳನ್ನಾಗಲಿ ಸ್ಪರ್ಧೆಗೆ ಕಳಿಸುವಂತಿಲ್ಲ.
ಸಂಪೂರ್ಣವಾಗಿ ಸ್ವಂತಿಕೆಯ ನಿರ್ದೇಶನದ ಯಾವುದೇ ವಿಷಯವನ್ನು ಕುರಿತು ಕಿರು ಚಿತ್ರ ನಿರ್ಮಿಸಬಹುದು. ಹಾಸ್ಯ ಕಥಾನಕವುಳ್ಳ ಕಿರುಚಿತ್ರಗಳಿಗೆ ವಿಶೇಷ ಆದ್ಯತೆಯಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು, ಕಲಾವಿದರು ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ. 50,000ರೂಗಳ ಪ್ರಥಮ ಬಹುಮಾನ, ರೂ. 30,000 ರೂ.ಗಳ ದ್ವಿತೀಯ ಬಹುಮಾನ ಜೊತೆಗೆ ಶ್ರೇಷ್ಟ ನಟ, ಶ್ರೇಷ್ಟ ನಟಿ, ಶ್ರೇಷ್ಟ ನಿರ್ದೇಶಕ, ಶ್ರೇಷ್ಟ ಕಥೆ-ಚಿತ್ರಕಥೆ, ಶ್ರೇಷ್ಟ ಛಾಯಾಗ್ರಹಣ, ಶ್ರೇಷ್ಟ ಸಂಗೀತ, ಶ್ರೇಷ್ಟ ಸಂಗೀತ ವಿಭಾಗಗಳಲ್ಲಿ ಹತ್ತು ಮಂದಿಗೆ ತಲಾ 5000 ನಗದು ಆಕರ್ಷಣೀಯ ಸ್ಮರಣಿಕೆಗಳಿವೆ. ಪ್ರಶಸ್ತಿ ಪುರಸ್ಕೃತರಿಗೆ ಅಕ್ಟೋಬರ್ ಮಾಸಾಂತ್ಯದಲ್ಲಿ, ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

Shivamogga Chitra Samaja ಕಿರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 1000 ರೂ.ಗಳ ಪ್ರವೇಶ ಶುಲ್ಕವಿದ್ದು, ಅರ್ಜಿಗಳನ್ನು ಬಿ.ಹೆಚ್. ರಸ್ತೆಯ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು, ಭರ್ತಿ ಮಾಡಿ ಜು. 31ರ ಒಳಗಾಗಿ ಸಲ್ಲಿಸಬಹುದು. ಕಿರು ಚಿತ್ರಗಳನ್ನು ನಾಲ್ಕು ಹೆಚ್‌ಡಿ ಶ್ರೇಣಿಯ ಡಿವಿಡಿ ಸಹಿತ ಆ. 30, 2024 ಒಳಗಾಗಿ ಸಲ್ಲಿಸಬಹುದು.

ಸ್ಪರ್ಧೆಯ ವಿವರಗಳಿಗೆ ವೈದ್ಯ ಸಂಚಾಲಕರು 9844456505), ಡಾ. ನಾಗಭೂಷಣ 9449284495 ಮಂಜುನಾಥ್ (9686559950)ರವರನ್ನು ಸಂಪರ್ಕಿಸಬಹುದು.

Shivamogga Rangayana ಶಿವಮೊಗ್ಗ ರಂಗಾಯಣದಲ್ಲಿ”ನಿರ್ದಿಗಂತ” ತಂಡದಿಂದ ವಿವಿಧ ಆಕರ್ಷಣೀಯ ಚಟುವಟಿಕೆಗಳು

0

Shivamogga Rangayana ಶಿವಮೊಗ್ಗ ರಂಗಾಯಣವು ಸುವರ್ಣ ಸಂಸ್ಕೃತಿ ಭವನದಲ್ಲಿ ಜು. ೨೧ ರಂದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೦೦ರವರೆಗೆ ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈರವರ ನಿರ್ದಿಗಂತ ತಂಡದ ಕಲಾವಿದರಿಂದ ಮಕ್ಕಳಿಗೆ ರಂಗಗೀತೆ, ಅಭಿನಯ ಗೀತೆಗಳು ಮತ್ತು ರಂಗಭೂಮಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಉಚಿತವಾಗಿ ಕಲಿಸಲಾಗುತ್ತದೆ.
ಆಸಕ್ತಿಯಿರುವ ೮ ರಿಂದ ೧೪ ವರ್ಷದ ಮಕ್ಕಳು ತಮ್ಮ ಹೆಸರನ್ನು ಮೊ. ಸಂ.:೭೯೭೫೨೨೯೧೬೬ ಕ್ಕೆ ವಾಟ್ಸಾಪ್ ಮೂಲಕ ಜು.೧೯ರೊಳಗಾಗಿ ನೊಂದಾಯಿಸಿಕೊಳ್ಳುವುದು. ಮೊದಲು ಬಂದ ೨೦೦ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಂದು ಸಂಜೆ Shivamogga Rangayana ೬.೩೦ಕ್ಕೆ ನಿರ್ದಿಗಂತ ತಂಡದಿಂದ ಮಕ್ಕಳಿಗಾಗಿ “ಬ್ಲಾಕ್ ಬಲೂನ್” ಎಂಬ ನಾಟಕ ಮತ್ತು ಪಪ್ಪೆಟ್ ಶೋಗಳನ್ನು ಪ್ರದರ್ಶಿಸಲಿದ್ದಾರೆ. ಪ್ರವೇಶ ಉಚಿತವಾಗಿರುತ್ತದೆ.
ಈ ಕಾರ್ಯಕ್ರಮಗಳಿಗೆ ಮಕ್ಕಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Hasanagara Panchayath ಹೊಸನಗರ ತಾಲ್ಲೂಕಿನ ಅರಗೋಡಿಯಲ್ಲಿ ಮಳೆಗೆ ಮನೆಯ ಮೇಲೆ ಬಿದ್ದ ತೆಂಗಿನ ಮರ

0

Hasanagara Panchayath ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಅರಗೋಡಿ ನಾಗರಾಜ್ ಎಂಬುವವರ ಮನೆ ಮೇಲೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ದೊಡ್ಡ ತೆಂಗಿನ ಮರವೊಂದು ಬಿದ್ದಿದೆ.
ಇಡೀ ಮರ ಮನೆಯ ಮೇಲೆಯೇ ಬಿದ್ದಿರುವುದರಿಂದ ಮನೆಯನ್ನ ಎರಡು ಭಾಗ ಮಾಡಿದಂತೆ ಹಾನಿಯಾಗಿದೆ. ಮನೆಯ ಹಂಚುಗಳು ಪೂರ್ಣ ಹಾಳಾಗಿದ್ದು, ಮಾಡು ಮರಿದುಬಿದ್ದಿದೆ ಗೋಡೆಗಳು ಜಖಂಗೊಂಡಿವೆ. ತೆಂಗಿನಮರ ಬುಡ ಸಮೇತವಾಗಿ ಬಿದ್ದಿದೆ.
ಕುಸಿದ ಛಾವಣಿ ಮನೆಯವರು ಬಚಾವ್ :
Hasanagara Panchayath ಇನ್ನೊಂದೆಡೆ ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಹೊಟ್ಯಾಳಪುರದಲ್ಲಿ ಮಳೆಗೆ ಮನೆಯ ಛಾವಣಿ ಹಾಗೂ ಗೋಡೆ ಕುಸಿದಿದೆ. ಅದೃಷ್ಟಕ್ಕೆ ಗೋಡೆ ಕುಸಿಯುವಾಗ ಶಬ್ದ ಬರುತ್ತಿದ್ದರಿಂದ ಮನೆಯವರೆಲ್ಲರೂ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಆನಂತರ ಮನೆಯ ಗೋಡೆ ಹಾಗೂ ಛಾವಣಿ ಕುಸಿದಿದೆ. ಹೊಟ್ಯಾಳಪುರ ಗ್ರಾಮದ ಪ್ರಭಾಕರ್ ಎಂಬುವವರ ಮನೆ ಇದಾಗಿದೆ. ಇದೀಗ ಮನೆ ಪೂರ್ಣ ಪ್ರಮಾಣದಲ್ಲಿ ಕುಸಿಯುವ ಹಂತದಲ್ಲಿದೆ.

Shivamogga Traffic Police ಚುರುಕಾದ ಸಂಚಾರಿ ಕ್ಯಾಮರಾ ಕಣ್ಣು: ಹಲವು ಬಾರಿ ನಿಯಮ ಉಲ್ಲಂಘಿಸಿದ್ದ ಈರ್ವರಿಗೆ ಭಾರೀ ದಂಡ

0

Shivamogga Traffic Policeಶಿವಮೊಗ್ಗ ನಗರದ KA 14EY 80 ದ್ವಿಚಕ್ರ ವಾಹನದ ಸವಾರ ಬರೋಬ್ಬರಿ 16 ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು ಮತ್ತು KA14EM 12* ವಾಹನದ ಸವಾರ ಬರೋಬ್ಬರಿ 08 ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು. ಈ ದಿನ‌ ಪೊಲೀಸರ ಕೈಗೆ ಸಿಕ್ಕುಬಿದ್ದು ಭಾರೀ ದಂಡ ತೆತ್ತಿದ್ದಾರೆ.
Shivamogga Traffic Police ಕ್ಯಾಮರಾಗಳಲ್ಲಿ ಇವರು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು ಸೆರೆಯಾಗಿತ್ತು. ಈ ದಿನ ಇಬ್ಬರೂ ವಾಹನ ಸವಾರರು ತಮ್ಮ ವಾಹನಗಳ ಮೇಲೆ ಬಾಕಿ ಇರುವ ದಂಡದ ಮೊತ್ತ ₹-15500/- ಮತ್ತು ₹-8000/- ರೂಪಾಯಿಗಳನ್ನು ಪಾವತಿಸಿದ್ದಾರೆ.

Bangalore- Joga Tour Package ಜನಪ್ರಿಯವಾಗುತ್ತಿರುವ ಸಾರಿಗೆ ಸಂಸ್ಥೆಯ ಬೆಂಗಳೂರು- ಜೋಗ ಪ್ರವಾಸ ಪ್ಯಾಕೇಜ್

0

Bangalore- Joga Tour Package ಮುಂಗಾರು ಮಳೆ ಎಲ್ಲೆಡೆ ಸಕ್ರಿಯವಾಗಿದೆ. ಮಲೆನಾಡು, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಇನ್ನಿಲ್ಲದಂತೆ ಮಳೆ ನಿರಂತರವಾಗಿ ಸುರಿದಿದೆ. ಪರಿಣಾಮ ಶಿವಮೊಗ್ಗದ ಜೋಗ ಜಲಪಾತ ಸೇರಿದಂತೆ ಅನೇಕ ಜಲಪಾತಿಗಳು ಮೈದುಂಬಿ ಹರಿಯುತ್ತಿವೆ. ಈ ಸಂಬಂಧ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು KSRTC ವಿಶೇಷ ಊಟ ಸಹಿತ ಟೂರ್ ಪ್ಯಾಕೇಜ್ ಘೋಷಿಸಿದೆ.
ರಾಜಧಾನಿಯಿಂದ ಮಲೆನಾಡಿನ ಹೆಬ್ಬಾಗಿಲ ಜಿಲ್ಲೆಯಾದ ಶಿವಮೊಗ್ಗಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ.
ಹಚ್ಚ ಹಸಿರ ಹೊದಿಕೆಯ ಮಧ್ಯೆ ಉಕ್ಕುವ ಹಾಲಿನಂತ ಪ್ರಪಾತಕ್ಕೆ ಧುಮ್ಮಿಕ್ಕುವ ಜೋಗ ಜಲಪಾತ, ಅದರ ಸೌಂದಯವನ್ನು ಈ ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಆನಂದದ ಸಂಗತಿ. ಶರಾವತಿ ನದಿ ನೀರೆ ಜೋಗದಲ್ಲಿ ಭೋರ್ಗರೆಯುತ್ತಿದೆ. ದೇಶದ ಎರಡನೇ ಅತೀ ದೊಡ್ಡ ಜಲಪಾತವನ್ನು ನೀವು ಈ ಮಾನ್ಸೂನ್ ವೇಳೆ ನೋಡಬಯಸಿದರೆ ನಿಮಗಾಗಿ ಕೆಎಸ್‌ಆರ್‌ಟಿಸಿ ನಿಗಮವು ಊಟ, ತಿಂಡಿ ಸಹಿತವಾಗಿ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ.
ಜೋಗಕ್ಕೆ ಹೊರಡುವ ದಿನಾಂಕ
ಮುಂದಿನ ವಾರಾಂತ್ಯಕ್ಕೆ ಶುಕ್ರವಾರ (ಜುಲೈ 19) ಮತ್ತು ಶನಿವಾರ (ಜುಲೈ 20) ಎರಡು ದಿನವು KSRTCಯಿಂದ ಬಸ್‌ಗಳು ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಮರಳಿ ಕರೆತರಲಿವೆ. ಒಬ್ಬರಿಗೆ ರೂ. 3000 ರೂಪಾಯಿ (6ರಿಂದ 12 ವರ್ಷದವರಿಗೆ ರೂ.2800) ನಿಗದಿ ಮಾಡಲಾಗಿದೆ.
ಒಟ್ಟಾರೆ ಟೂರ್ ಸಮಯದ ಪೂರ್ಣ ವಿವರ
KSRTC ಬಸ್ ಬೆಂಗಳೂರು ಮೆಜೆಸ್ಟಿಕ್ ನಿಂದ ಹೊರಡಲಿದೆ. ಬೆಂಗಳೂರಿನಿಂದ ರಾತ್ರಿ 22.30 ಗಂಟೆಗೆ ಹೊರಟು ಬೆಳಗ್ಗೆ 05.30ಕ್ಕೆ ಸಾಗರ ತಲುಪುತ್ತದೆ. ನಂತರ ಅಲ್ಲಿನ ಹೋಟೆಲ್‌ನಲ್ಲಿ ಫ್ರೆಶ್ ಅಪ್ ಹಾಗೂ ವಿಶ್ರಾಂತಿ ಪಡೆಯಲು ಬೆಳಗ್ಗೆ 07 ಗಂಟೆವರೆಗೆ ಅವಕಾಶ ಇರುತ್ತದೆ.
Bangalore- Joga Tour Package ನಂತರ ಬೆಳಗ್ಗೆ 7.15ರ ಹೊತ್ತಿಗೆ ತಿಂಡಿ ತಿಂದು ಅಲ್ಲಿಂದ (ಸಾಗರ) ವರದಹಳ್ಳಿಗೆ 0730 ತಲುಪುತ್ತದೆ. ನಂತರ ವರದಹಳ್ಳಿಯಿಂದ 8.30ಕ್ಕೆ ಹೊರಟು 9 ಗಂಟೆಗೆ ವರದಮೂಲ ತಲುಪಲಿದೆ. ನಂತರ ಅರ್ಧ ಗಂಟೆಯ ಆಸು ಪಾಸಿನಲ್ಲಿ ವರದಮೂಲದಿಂದ ಇಕ್ಕೇರಿ, ಇಕ್ಕೇರಿಯಿಂದ ಕೆಳದಿ, ಕೆಳದಿಯಿಂದ ಸಾಗರ ಬರಲಿದೆ.
ಮಧ್ಯಾಹ್ನ ಸಾಗರದಲ್ಲಿ 13.15 ಗಂಟೆವರೆಗೆ ಊಟಕ್ಕೆ ಸಮಯ ನೀಡಲಾಗುತ್ತದೆ. ಊಟದ ಬಳಿಕ ಸಾಗರದಿಂದ ಜೋಗಕ್ಕೆ ಮಧ್ಯಾಹ್ನ 14.15ರ ಹೊತ್ತಿಗೆ ತೆರಳಲಿದೆ. ನಂತರ ಸಂಜೆ ಜೋಗದಿಂದ 18.15 ಹೊರಟು 19 ಗಂಟೆಗೆ ಬಸ್ ಸಾಗರ ತಲುಪಲಿದೆ. ಅಲ್ಲಿ ಒಂದು ಗಂಟೆ ಶಾಪಿಂಗ್ ಗೆ ಸಮಯ ಇರುತ್ತದೆ. ನಂತರ ರಾತ್ರಿ ಊಟ ಮುಗಿಸಿ 22.00 ಗಂಟೆಗೆ ಸಾಗರದಿಂದ ಹೊರಟು ಮರುದಿನ ಬೆಳಗ್ಗೆ 05.00 ಗಂಟೆಗೆ ಬೆಂಗಳೂರು ಬಂದು ಸೇರಲಿದೆ.
ಹುಬ್ಬಳ್ಳಿಯಿಂದಲೂ ಜೋಗಕ್ಕೆ ವಿಶೇಷ ಬಸ್:
ಇದರೊಂದಿಗೆ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಜಲಾಪತಕ್ಕೂ ಟೂರ್ ಪ್ಯಾಕೇಜ್ ಘೋಷಿಸಿದೆ.

ಇದಷ್ಟೇ ಅಲ್ಲದೇ ಹುಬ್ಬಳ್ಳಿಯಿಂದ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕಳೆದ ಶನಿವಾರ ಮತ್ತು ಭಾನುವಾರ ಜೋಗ ಜಲಪಾತಕ್ಕೆ ಅತಿ ಕಡಿಮೆ ದರದಲ್ಲಿ ಬಸ್ ನಿಯೋಜಿಸಲಾಗಿತ್ತು. ಸಾಮಾನ್ಯ ಮತ್ತು ಎಸಿ ಬಸ್ ಸಹ ಬಿಡಲಾಗಿತ್ತು. ಇದೀಗ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಘೋಷಿಸಿದೆ.

Karnataka Working Journalists Association ಐದು ಸಾವಿರ ನಿವೇಶನ ವಿತರಿಸುವ ಗುರಿ ನನ್ನದು- ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್

0

Karnataka Working Journalists Association ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಜಿಲ್ಲಾಡಳಿತ ಮತ್ತು ಸೂಡಾ ಇವರ ಸಂಯುಕ್ತಾಶ್ರಯದಲ್ಲಿ ಸೋಮಿನಕೊಪ್ಪದ ನ್ಯಾಯಾಂಗ ಬಡಾವಣೆಯಲ್ಲಿ ಒಂದು ಸಾವಿರ ಸಸಿ ನಡುವ ಕಾರ್ಯಕ್ರಮಕ್ಕೆ ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರಲ್ಲಿ ಎರಡು ವರ್ಗವಿದೆ ಒಂದು ನಕಾರಾತ್ಮಕ ಮತ್ತೊಂದು ಸಕರಾತ್ಮಕ ಸುದ್ದಿ ಮಾಡುವವರಿದ್ದಾರೆ.

ಇವರೆಲ್ಲರೂ ಸುದ್ದಿ ಮಾಡುವ ಮೂಲಕ ನೊಂದವರ ಪರವಿದ್ದಾರೆ. ನಾನು ಅಧ್ಯಕ್ಷನಾಗಿ ಬಂದ ನಂತರ ಐದು ಸಾವಿರ ನಿವೇಶನ ಮಾಡುವ ಗುರಿ ಹೊಂದಿದ್ದೇನೆ. ಆದರೆ ರೈತರಿಗೆ ಮಾರುಕಟ್ಟೆಯ ದರದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ಹಾಗಾಗಿ ನಿವೇಶನ ಮಾಡುವುದೇ ಕಷ್ಟವಾಗಿದೆ ಎಂದರು.

ಗೋಪಿಶೆಟ್ಟಿಕೊಪ್ಪದಲ್ಲಿ ಡಿನೋಟಿಫೈ ಮಾಡುವ ಹುನ್ಬಾರ ನಡೆದಿದೆ. ಅದನ್ನ ಸೂಡ ತಡೆಹಿಡಿದು ಸರ್ಕಾರಕ್ಕೆ ಡಿನೋಟಿ ಫೈ ಮಾಡದಂತೆ ಪತ್ರ ಬರೆಯಲಾಗಿದೆ.. ಸೂಡ ನಿವೇಶನ ಹಂಚಿಕೆಯಲ್ಲಿಯೇ ಪತ್ರಕರ್ತರಿಗೆ ಕಡಿಮೆ ಪರ್ಸೆಂಟೇಜ್ ನಲ್ಲಿ ಹಂಚಲಾಗುವುದು ಎಂದರು.

ಸೂಡಾ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಕಾರ್ಯದರ್ಶಿ ಪಾರ್ವತಮ್ಮ, ಶಿವಮೊಗ್ಗ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೆರಿಗೆ, ಹಿರಿಯ ಪತ್ರಕರ್ತರಾದ ಗೋಪಾಲ ಯಡಗೆರೆ, ಶ್ರೀಕಾಂತ್ ಕಾಮತ್, ಮಾರ್ತಾಧಿಕಾರಿ ಮಾರುತಿ, ಸಂಘದ ಉಪಾಧ್ಯಕ್ಷರಾದ ವೈದ್ಯನಾಥ್, ಹಾಲಸ್ವಾಮಿ, ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಉಪಸ್ಥಿತರಿದ್ದರು.

Karnataka Working Journalists Association ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ಟಿ.ಅರುಣ್ ಸ್ವಾಗತಿಸಿದರು. ಉಪಾಧ್ಯಕ್ಷ ದೀಪಕ್ ಸಾಗರ್ ನಿರೂಪಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Shimoga Weather Forecast ತುಂಬಿದ ತುಂಗೆ. ತಗ್ಗಿನ ಪ್ರದೇಶದ ನಿವಾಸಿ ಜನಕ್ಕೆ ಮಹಾನಗರ ಪಾಲಿಕೆಯಿಂದ ಎಚ್ಚರಿಕೆ ಸಂದೇಶ

0

Shimoga Weather Forecast ಶಿವಮೊಗ್ಗ ನಗರದಲ್ಲಿ ಸೋಮವಾರ ರಾತ್ರಿಯಿಡಿ ಭಾರೀ ಮಳೆಯಾಯಿತು ಮಂಗಳವಾರ ಬೆಳಿಗ್ಗೆಯಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಮತ್ತೊಂದೆಡೆ, ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮತ್ತೆ ಮೈದುಂಬಿದೆ. ಜೊತೆಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಆಗುಂಬೆ , ತೀರ್ಥಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ ಇದರಿಂದ ತುಂಗಾ ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಹೆಚ್ಚಾದಂತೆ, ಶಿವಮೊಗ್ಗದಲ್ಲಿ ತುಂಗಾ ನದಿಯ ಹರಿವು ಕೂಡ ಹೆಚ್ಚಾಗುತ್ತದೆ. ಮಂಗಳವಾರ ಬೆಳಿಗ್ಗೆ ಅಪಾಯದ ಮಟ್ಟ ಸೂಚಿಸುವ ನಗರದ ಕೋರ್ಪಳಯ್ಯನ ಛತ್ರದ ಬಳಿ ನದಿಯಲ್ಲಿರುವ ಮಂಟಪ ಮುಳುಗಿತ್ತು. ಮಂಟಪದ ಮೇಲೆ ನೀರು ಹರಿಯುತ್ತಿದ್ದುದು ಕಂಡುಬಂದಿತು.

ಮತ್ತೊಂದೆಡೆ, ತುಂಗೆಯ ಹರಿವು ಹೆಚ್ಚಾಗಿರುವುದರಿಂದ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ ಜಲಾವೃತದ ಭೀತಿ ಎದುರಾಗಿದೆ. ಈಗಾಗಲೇ ಪಾಲಿಕೆ ಆಡಳಿತವು ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆಡಳಿತ ಮಾಡಿಕೊಂಡಿದೆ.

Shimoga Weather Forecast ಮಳೆ ವಿವರ :
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಅಕ್ಷರಶಃ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಣಿಯಲ್ಲಿ 240 ಮಿಲಿ ಮೀಟರ್ (ಮಿ.ಮೀ.), ಯಡೂರು 229 ಮಿ.ಮೀ., ಹುಲಿಕಲ್ಲು 245 ಮಿ.ಮೀ., ಮಾಸ್ತಿಕಟ್ಟೆ 247 ಮಿ.ಮೀ., ಸಾವೇಹಕ್ಲುವಿನಲ್ಲಿ 210 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ 52 ಮಿ.ಮೀ., ಭದ್ರಾವತಿ (26. 40 ಮಿ.ಮೀ., ತೀರ್ಥಹಳ್ಳಿ 120. 90 ಮಿ.ಮೀ., ಸಾಗರ (129. 10 ಮಿ.ಮೀ., ಶಿಕಾರಿಪುರ 57. 90 ಮಿ.ಮೀ., ಸೊರಬ (58. 50 ಮಿ.ಮೀ. ಹಾಗೂ ಹೊಸನಗರದಲ್ಲಿ 133. 60 ಮಿ.ಮೀ. ಮಳೆಯಾಗಿದೆ.