Thursday, April 9, 2026
Thursday, April 9, 2026
Home Blog Page 647

B.Y. Vijayendra ಮೂಡಾಹಗರಣ ದಾಖಲೆಗೆ ಒತ್ತಾಯಿಸಿ ಬಿ.ವೈ. ವಿಜಯೇಂದ್ರ ನಿವಾಸಕ್ಕೆ ಕಾಂಗ್ರೆಸ್ ಘೇರಾವ್ ಯತ್ನ,ತಡೆದ ಪೊಲೀಸ್

0

B.Y. Vijayendra ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬಕ್ಕೆ ಮುಡಾದಿಂದ 48 ಸೈಟ್‌ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದು, ಆದರೆ ರಸ್ತೆಯಲ್ಲೇ ತಡೆದ ಪೊಲೀಸರು ವಾಪಸ್ ಕಳಿಸಿದ್ದಾರೆ. 48 ಸೈಟ್‌ ಹಂಚಿಕೆ ಆರೋಪ್​ ಕೇಸ್​​ ಬಗ್ಗೆ ತನಿಖೆಗೆ ಕೋರಿ 2011ರಲ್ಲಿ ಸಭಾಪತಿಗೆ ಬಿಎಸ್​ ಯಡಿಯೂರಪ್ಪ ದಾಖಲೆ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಮುಖಂಡರು ಇದರ ಚರ್ಚೆಯನ್ನು ಮುಂದಿವರೆಸಲು ವಿಜಯೇಂದ್ರಗೆ ಆಗ್ರಹಿಸಿದ್ದರು. ಈ‌ ಹಿನ್ನೆಲೆಯಲ್ಲಿ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆ ಕೊಡಲು ವಿಜಯೇಂದ್ರ ನಿವಾಸಕ್ಕೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಮತ್ತು ಯುವ ಕಾಂಗ್ರೆಸ್ ಮುಖಂಡ ಮನೋಹರ್​​ ಆಗಮಿಸಿದ್ದರು. ಆದರೆ ನಿವಾಸದ ಬಳಿ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದಿದ್ದಾರೆ.
ಬಿಜೆಪಿಗೆ ರಮೇಶ್​ ಬಾಬು ಪ್ರಶ್ನೆ
B.Y. Vijayendra ಸುದ್ದಿಗೋಷ್ಠಿ ಮಾಡಿದ್ದ ವಿಧಾನಪರಿಷತ್​ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ರಮೇಶ್​ ಬಾಬು ಮುಡಾ ಸೈಟ್​ ಹಂಚಿಕೆಯಲ್ಲಿ, ಮಾಜಿ ಪ್ರಧಾನಿ ಹೆಚ್​ಡೆ ದೇವೆಗೌಡರು ತಮ್ಮ ಕುಟುಂಬ ಸದಸ್ಯರಿಗೆ 48 ನಿವೇಶನಗಳನ್ನು ಹಂಚಿಕೆ ಆರೋಪ ಮಾಡಿದ್ದು, ಬಿಜೆಪಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಬಿಎಸ್​ ಯಡಿಯೂರಪ್ಪ 2011ರಲ್ಲಿ ಸಭಾಪತಿಗೆ ಸಲ್ಲಿಸದ ದಾಖಲೆಗಳ ಪ್ರಕಾರ ಹೆಚ್​ಡಿ ಕುಮಾರಸ್ವಾಮಿ ಅವರಿಗೆ 300\200 ಹಂಚಿಕೆ ಬಗ್ಗೆ ತಿಳಿಸಿದ್ದಾರೆ. ಇದನ್ನು ಪರಿಷತ್ತಿನ ಕಲಾಪದಲ್ಲಿ ಕೂಡ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಬಿಜೆಪಿ ಅವರ ನಿಲುವೇನು ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗರಣದಲ್ಲಿ ಯಾರೆಲ್ಲಾ ಬಿಜೆಪಿ ನಾಯಕರು ಎಷ್ಟು ನಿವೇಶಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಲಿ. ಏಕೆಂದರೆ ಬಿಜೆಪಿ ಅಧಿಕಾರಿದಲ್ಲಿ ಇದ್ದಾಗಲೇ ಮೈಸೂರಿನ ಮುಡಾದಲ್ಲಿ ಹೆಚ್ಚು ಹೆಚ್ಚು ಹಗರಣಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

Kukke Subrahmanya Kumaradhara River ಭಾರಿ ಪ್ರವಾಹಕ್ಕೆ ಕುಮಾರಧಾರ ನದಿಯಲ್ಲಿ ಕೊಚ್ಚಿಬಂದ ಆನೆಯ ಶವ

0

Kukke Subrahmanya Kumaradhara River ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿಯಲ್ಲಿ ಆನೆಯ ಮೃತದೇಹವೊಂದು ತೇಲಿ ಬಂದ ಘಟನೆ (ಜು.15)ಸೋಮವಾರ ತಡರಾತ್ರಿ ನಡೆದಿದೆ. ಕುಮಾರಧಾರ ನದಿಯ ಪ್ರವಾಹಕ್ಕೆ ಸಿಲುಕಿ ಆನೆ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಮಾರಧಾರ ನದಿ ನೀರಿನ ಮಟ್ಟವನ್ನು ಪರೀಕ್ಷಿಸಲು ಮನ್ಮಥ ಮಟ್ಟೋಡಿ ಹಾಗೂ ಅವರ ತಂಡ ಭೇಟಿ ನೀಡಿದ್ದ ವೇಳೆ ಈ ದೃಶ್ಯ ಕಂಡುಬಂದಿದ್ದು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಆನೆ ಎಂಬುದಾಗಿ ಗೋಚರವಾಗಿದೆ.
ವಿದ್ಯುತ್ ತಂತಿಯಲ್ಲಿ ಜೀ*ವ ಕಳೆದುಕೊಂಡ ಹೆಬ್ಬಾವು..!
ಕಮಾರಧಾರ ನದಿಯಲ್ಲಿ ಕಣಿಸಿಕೊಂಡಿದ್ದ ಆನೆಯ ಮೃತದೇಹಕ್ಕೆ ಅರಣ್ಯ ಇಲಾಖೆಯವರು ಶೋಧ ನಡೆಸಿದ್ದಾರೆ.

BJP MLA Pannalal ಸಾಮಾನ್ಯ ಡಿಗ್ರಿಯಿಂದ ಪ್ರಯೋಜನವಿಲ್ಲ. ಪಂಕ್ಚರ್ ಅಂಗಡಿ ತೆರೆಯಿರಿ- ಬಿಜೆಪಿ ಶಾಸಕ ಪನ್ನಾಲಾಲ್ ಸಲಹೆ

0

BJP MLA Pannalal ಹಣ ಸಂಪಾದನೆಗೆ ವಿದ್ಯಾರ್ಥಿಗಳು ಮೋಟರ್ ಬೈಕ್ ಗಳ ಪಂಚರ್ ಅಂಗಡಿ ತೆರೆಯಬೇಕು ಎಂದು ಬಿಜೆಪಿ ಶಾಸಕ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಸಲಹೆ ನೀಡಿರುವುದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮಧ್ಯಪ್ರದೇಶದ ರಾಜಧಾನಿ ಇಂದೋರ್ ನಲ್ಲಿ ನಡೆದ 55 ಜಿಲ್ಲೆಗಳ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸಿ ಕಾರ್ಯಕ್ರಮದಲ್ಲಿ ಬಿಜೆಪಿಯ ಗುನಾ ಕ್ಶಾಸಕ ಪನ್ನಲಾಲ್ ಸಕ್ಯಾ ಹೇಳಿಕೆ ನೀಡಿದ್ದಾರೆ.
ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸಿ ಕಾರ್ಯಕ್ರಮವನ್ನು ಕೇಂದ್ರ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಬಿಜೆಪಿ ಶಾಸಕ ಪದವಿ ಪ್ರಮಾಣಪತ್ರ ಹಿಡಿದು ಉದ್ಯೋಗ ಹುಡುಕುವುದಕ್ಕಿಂತ ಪಂಚರ್ ಅಂಗಡಿ ತೆರೆದು ಆದಾಯದತ್ತ ಗಮನ ಹರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

BJP MLA Pannalal ನಾವು ಇವತ್ತು ಪಿಎಂ ಎಕ್ಸಲೆನ್ಸಿ ಕಾಲೇಜು ಉದ್ಘಾಟಿಸುತ್ತಿದ್ದೇವೆ. ಆದರೆ ನನ್ನ ಒಂದು ಮಾತು ನೆನಪಿಡಿ. ಈ ಪದವಿ ಪ್ರಮಾಣ ಪತ್ರದಿಂದ ಏನೂ ಆಗುವುದಿಲ್ಲ. ಅದರ ಬದಲು ಜೀವನ ನಡೆಸಲು ಪಂಚರ್ ಅಂಗಡಿ ತೆರೆಯುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಶಾಸಕರ ಮಾತಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿಯೊಬ್ಬ, ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಶಾಸಕರು ಹಾಗೂ ಸರ್ಕಾರದ ಅಭಿಪ್ರಾಯ ಏನು ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾನೆ.

Imran Khan ಪಾಕ್ ಮಾಜಿ ಪ್ರಧಾನಿ ಇಮ್ರಾನ್ ರಾಜಕೀಯ ಪಕ್ಷಕ್ಕೆ ನಡುವೆ ನಿಷೇಧ ಘೋಷಣೆ

0

Imran Khan ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವನ್ನು ನಿಷೇಧಿಸುವುದಾಗಿ ಪಾಕಿಸ್ತಾನ ಸರ್ಕಾರ ಸೋಮವಾರ ಘೋಷಿಸಿದೆ.

“ವಿದೇಶಿ ಧನಸಹಾಯ ಪ್ರಕರಣ, ಮೇ 9 ರ ಗಲಭೆ ಮತ್ತು ದೇಶದ ಗೌಪ್ಯತೆ ಸೋರಿಕೆ (ಸೈಫರ್) ಹಾಗೂ ಯುಎಸ್‌ನಲ್ಲಿ ಅಂಗೀಕರಿಸಿದ ನಿರ್ಣಯಗಳು ಖಾನ್ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ಯನ್ನು ನಿಷೇಧಿಸಲು ಪ್ರಮುಖ ಆಧಾರಗಳಾಗಿವೆ” ಎಂದು ಪಾಕಿಸ್ತಾನದ ವಾರ್ತಾ ಸಚಿವ ಅತ್ತಾವುಲ್ಲಾ ತರಾರ್ ಪತ್ರಿಕಾಗೋಷ್ಠಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

71 ವರ್ಷ ವಯಸ್ಸಿನ ಇಮ್ರಾನ್ ಖಾನ್, 2022ರ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಾಗಿನಿಂದ ಅನೇಕ ಪ್ರಕರಣಗಳ ಹಿನ್ನೆಲೆಯಲ್ಲಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇದ್ದಾರೆ.

ಪಿಟಿಐ ಪಕ್ಷದ ಸಮರ ಸಾರಿರುವ ಫೆಡರಲ್ ಸರ್ಕಾರ, ಮಾಜಿ ಆಡಳಿತ ಪಕ್ಷವನ್ನು ನಿಷೇಧಿಸಲು ನಿರ್ಧರಿಸಿದೆ. ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ ವಿರುದ್ಧ ದೇಶದ್ರೋಹದ 6 ನೇ ವಿಧಿಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲು ನಿರ್ಧರಿಸಿದೆ ಎಂದು ಜಿಯೋ ನ್ಯೂಸ್ ಹೇಳಿದೆ.

Imran Khan ಪಿಟಿಐ ಪಕ್ಷ ಅಸ್ತಿತ್ವದಲ್ಲಿದ್ದರೆ ದೇಶ ಅಭಿವೃದ್ದಿಯ ದಿಕ್ಕಿನಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ.
“ನಮ್ಮ ತಾಳ್ಮೆ ಮತ್ತು ಸಹನೆಯನ್ನು ದೌರ್ಬಲ್ಯಗಳೆಂದು ಪರಿಗಣಿಸಲಾಗುತ್ತಿದೆ. ನಮ್ಮ ಸರ್ಕಾರ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಪಿಟಿಐ ಮತ್ತು ಪಾಕಿಸ್ತಾನ ಒಟ್ಟಿಗೆ ಮುನ್ನಡೆಯಲು ಸಾಧ್ಯವಿಲ್ಲ. ಪಿಟಿಐ ಪಕ್ಷವನ್ನು ನಿಷೇಧಿಸುವಂತೆ ಕೋರಿ ಫೆಡರಲ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ ಎಂದಿದ್ದಾರೆ.

Rain In Shivamogga ಜಿಲ್ಲೆಯಾದ್ಯಂತ ಭಾರೀಮಳೆ ಅರಳ ಸುರಳಿ ಬಳಿಯ ಹೊಸಗದ್ದೆಯಲ್ಲಿ ಮನೆ ಕುಸಿತ

0

Rain In Shivamogga ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ರಾಯನ ಆರ್ಭಟ ದಿನೇ ದಿನೇ ಹೆಚ್ಚಾಗುತ್ತಿದೆ.
ತೀರ್ಥಹಳ್ಳಿ ಅರಳಸುರಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಂಕರಪುರ ಗ್ರಾಮದ ಹೊಸಗದ್ದೆಯಲ್ಲಿ ಭಾರಿ ಮಳೆಗೆ ಮನೆಯೊಂದು ಕುಸಿದಿದೆ.

ಅದೃಷ್ಟವಶಾತ ಮನೆ ಕುಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ ಆದ ಕಾರಣ ಯಾವುದೇ ಜೀವ ಹಾನಿಯಾಗಿಲ್ಲ.
ಆದರೆ ಮನೆಯಲ್ಲಿ ಇಲ್ಲಿಯತನಕ ವಾಸವಾಗಿದ್ದವರು ವಯೋವೃದ್ಧ ದಂಪತಿಗಳಾದ ಗುತ್ಯಪ್ಪ (75 ) ಹಾಗು ಅವರ 65 ವರ್ಷದ ಪತ್ನಿ ಇಬ್ಬರೇ ವಾಸವಾಗಿದ್ದರು.

Rain In Shivamogga ಕುಸಿದ ಮನೆ ಪರಿಣಾಮ ವಾಸ ಮಾಡಲು ಬೇರೆ ಅವಕಾಶ ಇಲ್ಲದೆ ಕುಸಿದಿರುವ ಮನೆಯ ಹಿಂಭಾಗದ ಕಡುಮಾಡಿನಲ್ಲಿ ದಂಪತಿಗಳಿಬ್ಬರು ಟಾರ್ಪಲ್ ನಂತಹ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ಕಡುಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಜಿಲ್ಲಾಡಳಿತ ಈ‌ ವಯೋವೃದ್ಧ ದಂಪತಿಗಳ ನೆರವಿಗೆ ಧಾವಿಸಿ ಅವರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡಿದ್ದಲ್ಲಿ ವೃದ್ಧ ದಂಪತಿಗಳು ಕೊನೆಗಾಲದ ಬದುಕನ್ನು ಕೊಂಚ ನೆಮ್ಮದ್ದಿಯಿಂದ ಕಳೆಯಬಹುದು.

Klive News ಸುದ್ದಿ ಸಾಲು

0

Klive News ಪ್ರಮುಖ ಸುದ್ದಿಗಳು

ಶಿರೂರು ಗುಡ್ಡ ಕುಸಿತದಲ್ಲಿ ಸಿಕ್ಕಿ ಬಿದ್ದಿದ್ದ ಕುಟುಂಬದ ಐವರ ಶವ ನದಿಯಲ್ಲಿ ತೇಲಿಬಂದು ಗೋಕರ್ಣ ಬಳಿ ಪತ್ತೆ.

ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರಕಾರ

ಬಾಳೆಹೊನ್ನೂರಿನಲ್ಲಿ ಚಲಿಸುತ್ತಿದ್ದಾಗ ಕಳಚಿ ಬಿದ್ದ ಬಸ್ ಎರಡು ಟಯರ್ ಗಳು.

ಕನ್ನಡದ ಹೆಸರಾಂತ ಚಲನಚಿತ್ರ ನಿರ್ಮಾಪಕ ಮೂಲ್ಕಿಯ ಸದಾನಂದ ಸುವರ್ಣ ನಿಧನ.

Klive News ಔಷಧ ತಯಾರಿಕೆಯ ಕಂಪನಿ ಸಿಪ್ಲಾ ಇಂದ 773 ಕೋಟಿ ತೆರಿಗೆ ಬಾಕಿ.

ವಿವಾದಿತ ಐಎಎಸ್ ಪ್ರೊಬೆಶನರಿ ಅಧಿಕಾರಿ ಪೂಜಾ ಖೇಡ್ಕರ್ ಮಸ್ಸೂರಿಯ ನಾಗರಿಕ ಸೇವಾ ತರಬೇತಿ ಕೇಂದ್ರಕ್ಕೆ ಹಾಜರಾಗಲು ಸೂಚನೆ.

Shivamogga Police ಪಾದಾಚಾರಿ ಮಹಿಳೆಗೆ ವಾಹನ ಡಿಕ್ಕಿ ಸಾವಿನಲ್ಲಿ ಅಂತ್ಯ

0

Shivamogga Police ಅಪಘಾತವೊಂದರಲ್ಲಿ ಪಾದಚಾರಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ತುಂಗಾನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತರು ಭದ್ರಾವತಿ ಮೂಲದವರು
ಶಿವಮೊಗ್ಗ ನಗರದ ಶಾಹಿ ಗಾರ್ಮೆಂಟ್ಸ್ ಬಳಿಪಾದಾಚಾರಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರಿಗೆ Shivamogga Police ನಾಲ್ಕು ಚಕ್ರದ ವಾಹನವೊಂದು ಡಿಕ್ಕಿಹೊಡೆದಿದೆ. ಪರಿಣಾಮವಾಗಿ ಭದ್ರಾವತಿಯ ಮಹಾಲಕ್ಷ್ಮಿ ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.

Bhavasara Vision India Prerana Institute ಪೌರ ಕಾರ್ಮಿಕರಿಂದ ಉತ್ತಮ ವಾತಾವರಣ ಸೃಷ್ಟಿ – ಅನಿತಾ ರವಿಶಂಕರ್

0

Bhavasara Vision India Prerana Institute ಪೌರ ಕಾರ್ಮಿಕರು ಸ್ವಚ್ಛತೆಯ ಹರಿಕಾರರು. ಒಂದು ದಿನ ನಗರದಲ್ಲಿ ಪೌರ ಕಾರ್ಮಿಕರು ಕಾರ್ಯನಿರ್ವಹಿಸಿದಿದ್ದರೆ ಇಡೀ ನಗರ ಗಾಲೀಜಿನಿಂದ ಕೂಡಿರುತ್ತದೆ ಎಂದು ಮಾಜಿ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ಅಭಿಮತ ವ್ಯಕ್ತಪಡಿಸಿದರು.

ಕಾಶೀಪುರದ ಉದ್ಯಾನವನದಲ್ಲಿ ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಶಿವಮೊಗ್ಗ ಸಂಸ್ಥೆ ವತಿಯಿಂದ ಪೌರ ಕಾರ್ಮಿಕರಿಗೆ ಉಡಿ ತುಂಬಿ ಸೀರೆ ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪೌರ ಕಾರ್ಮಿಕರಿಂದ ನಗರ ಸ್ವಚ್ಛತೆಯಿಂದ ಕೂಡಿದ್ದು, ಅವರ ಕಾರ್ಯಕ್ಕೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕು. ಉತ್ತಮ ವಾತಾವರಣ ಸೃಷ್ಟಿಯಾಗಲು ಅವರ ಪಾತ್ರ ಪ್ರಮುಖವಾಗಿ ಸಹಕಾರಿಯಾಗಿದೆ.

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದ್ದು, ಪೌರ ಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Bhavasara Vision India Prerana Institute ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಉಮಾ ವೆಂಕಟೇಶ್ ಮಾತನಾಡಿ, ಪೌರ ಕಾರ್ಮಿಕರು ನಗರದಲ್ಲಿ ಯಾವುದೇ ಸ್ವಚ್ಛತೆ ಕಾರ್ಯದಲ್ಲಿ ಬೇಸರ ಇಲ್ಲದೆ ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಅವರ ಆರೋಗ್ಯವೂ ಸಹ ಮುಖ್ಯ. ಬರುವ ದಿನದಲ್ಲಿ ಪೌರ ಕಾರ್ಮಿಕರಿಗೆ ನಮ್ಮ ಸಂಸ್ಥೆ ವತಿಯಿಂದ ಆರೋಗ್ಯ ತಪಾಸಣೆ ಹಮ್ಮಿಕೊಳ್ಳುವುದಾಗಿ ನುಡಿದ ಅವರು, ಎಲ್ಲ ಪೌರ ಕಾರ್ಮಿಕರಿಗೂ ಉಡಿ ತುಂಬಿ, ಫಲಪುಷ್ಪ ನೀಡಿ, ಗೌರವಿಸಿದರು.

ಕಾರ್ಯಕ್ರಮದಲ್ಲಿ ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆಯ ಕಾರ್ಯದರ್ಶಿ ಕವಿತಾ ಹರೀಶ್, ಉಮೆನ್ ವೆಲ್ ಫೇರ್ ಸಂಸ್ಥೆಯ ಸ್ನೇಹಾಪ್ರಶಾಂತ್, ವೀಣಾ, ನಂಜುಂಡ, ಸಹಕಾರ್ಯದರ್ಶಿ ಸುಮಾನವಲೆ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Institute of Management Studies ಕೃತಕ ಬುದ್ಧಿಮತ್ತೆ ಎಷ್ಟೇ ಪ್ರಬಲವಿರಲಿ ಸಾಂಪ್ರದಾಯಿಕ ಕೌಶಲಕ್ಕೆ ಸಾಟಿಯಿಲ್ಲ- ಡಾ. ಶಶಿಧರ್

0

Institute of Management Studies ಕೃತಕ ಬುದ್ಧಿಮತ್ತೆಯು ನಮ್ಮ ಹಾದಿಯಲ್ಲಿ ಎಷ್ಟೇ ಪ್ರಬಲವಾಗಿ ಬಂದರೂ ನಮ್ಮ ಸಾಂಪ್ರದಾಯಿಕ ಕೌಶಲ್ಯಗಳಿಗೆ ಅವು ಸಾಟಿಯಲ್ಲ, ಸಾಮಾಜಿಕ ಸಂಪರ್ಕ ಹಾಗೂ ನಿರಂತರ ಅಧ್ಯಯನದಿಂದ ಸಾಂಪ್ರದಾಯಿಕ ಕೌಶಲ್ಯ ಬರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಧ್ಯಕ್ಷ ಡಾ. ಶಶಿಧರ್ ಆರ್ ಹೇಳಿದರು.

ಅವರಿಂದು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ವಾಣಿಜ್ಯ ವಿಭಾಗದ ವತಿಯಿಂದ ಅಂತಿಮ ಬಿಕಾಂ ವಿದ್ಯಾರ್ಥಿಗಳಿಗೆ ವಿದಾಯ ಹೇಳುವ ‘ಬೀ ಐ ಹ್ಯಾವ್ 2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ತೊಂದರೆ ತೆಗೆದುಕೊಳ್ಳದೆ ಸಾಧನೆ ಸಾಧ್ಯವಿಲ್ಲ, ಜೇನುಹುಳುಗಳ ನಿರಂತರ ಕ್ರಿಯಾಶೀಲತೆ ಹಾಗೂ ತಾಳ್ಮೆ ಇದಕ್ಕೆ ಸಂಕೇತವಾಗಿದೆ, ಎಷ್ಟು ಚಟುವಟಿಕೆಯಿಂದ ಇರುತ್ತೇವೋ ಅಷ್ಟು ಸಮೃದ್ಧಿಯೂ ಜೀವನದಲ್ಲಿ ಸಾಧ್ಯ ಎಂದರು. ಸೆಮಿಕಂಡಕ್ಟರ್ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆ ವಿಶ್ವವನ್ನೇ ಬೆರಗುಗೊಳಿಸುತ್ತಿದ್ದು 2030ರ ವೇಳೆಗೆ ಭಾರತವು 10 ಟ್ರಿಲಿಯನ್ ಡಾಲರ್ ಗಳ ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ, ವಾಣಿಜ್ಯ ಪದವೀಧರರಿಗೆ ಅವಕಾಶಗಳು ವಿಫುಲವಾಗಿವೆ, ಪೈಪೋಟಿ ದಟ್ಟಣೆಯ ವಿಶ್ವದಲ್ಲಿ ಸಾಮಾಜಿಕ ಸಂಪರ್ಕವೇ ಪರಿಹಾರವಾಗಬಲ್ಲದು ಎಂದರು.

Institute of Management Studies ಅಧ್ಯಕ್ಷ ಸ್ಥಾನದಿಂದ ಮಾತಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಅತ್ಯುತ್ತಮ ಗುಣಮಟ್ಟದ ಬಿಕಾಂ ಶಿಕ್ಷಣವನ್ನು ಕೊಡಬೇಕೆಂಬ ಸದುದ್ದೇಶದಿಂದ ಕಾಲೇಜಲ್ಲಿ ವಾಣಿಜ್ಯ ವಿಭಾಗವನ್ನು ಆರಂಭಿಸಲಾಯಿತು, ಇದಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೋತ್ಸಾಹವೂ ಸ್ಮರಣೀಯವಾಗಿದೆ ಎಂದರಲ್ಲದೆ ಜೀವನ ಕಟ್ಟಿಕೊಳ್ಳಲು ಕಾಲೇಜು ಶಿಕ್ಷಣ ಶಿಕ್ಷಣ ಮುಖ್ಯವಲ್ಲ ಎಂಬ ಕಾಲ ಹೋಯಿತು, ಶಿಕ್ಷಣವೂ ಮುಖ್ಯವಾಗಿದೆ, ಶಿಕ್ಷಣದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಾಮರಸ್ಯ ಅವಶ್ಯ ಎಂದರು. ಅಧ್ಯಾಪಕ ಜ್ಞಾನೇಶ್ವರ ಮುಂತಾದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಶೈಕ್ಷಣಿಕ ಸಾಧಕರಿಗೆ ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು.

ಅದಿಲ್ ಮತ್ತು ಅಲ್ಫೀಸಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ಪೂರ್ತಿ ಮತ್ತು ಪ್ರಜ್ಞಾ ಪ್ರಾರ್ಥನೆಯನ್ನು ಹಾಡಿದರೆ ನಿತ್ಯಶ್ರೀ ಸ್ವಾಗತ ಕೋರಿದರು,ಪ್ರೊ.ಶ್ವೇತಾ ಬಿ ವಿ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಅಖಿಲ್ ಮಾಡಿದರೆ ಮಮತಾ, ಮೆಹ್ತಾ ವಂದನೆಗಳನ್ನು ಸಮರ್ಪಿಸಿದರು.

-ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ-

Shimoga Weather Forecast ಶಿವಮೊಗ್ಗ & ತೀರ್ಥಹಳ್ಳಿಯಲ್ಲಿ ತುಂಗೆ ತುಂಬಿದ ನೋಟ

0

Shimoga Weather Forecast ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯ ಹೆಚ್ಚಳ ಹೆಚ್ಚಾಗಿದ್ದು, ತುಂಗಾ ಡ್ಯಾಂನಲ್ಲಿ ಒಳ ಹರಿವು ಹೆಚ್ಚಳವಾಗಿರುವುದರಿಂದ ಗಾಜನೂರಿನ ತುಂಗಾ ಅಣೆಕಟ್ಟಿನ 14 ಗೇಟ್‌ಗಳನ್ನು ತೆರೆಯಲಾಗಿದೆ.

ತುಂಗಾ ನದಿಯಲ್ಲಿ ನೀರಿನ ಹೊರ ಹರಿವಿನಲ್ಲಿ ಹೆಚ್ಚಳವಾಗಿದೆ. ನಗರದ ತುಂಗಾ ಮಂಟಪ ತುಂಬಲು ಕೇವಲ 2 ಅಡಿ ಬಾಕಿಯಿದ್ದು, ತುಂಬಿದ ತುಂಗೆ ಸಾರ್ವಜನಿಕರ ಗಮನ ಸೆಳೆದಿದೆ.

ತುಂಗೆಯ ಒಳಹರಿವು 18442ಕ್ಯೂಸೆಕ್‌ಯಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ.

Shimoga Weather Forecast ತುಂಗಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆ ಶಿವಮೊಗ್ಗ ನಗರದ ಅಯ್ಯಪ್ಪ ದೇವಸ್ಥಾನದ ಬಳಿ ಇರುವ ತುಂಗಾ ಮಂಟಪ ಮುಳುಗಡೆ ಹಂತಕ್ಕೆ ತಲುಪಿದೆ.
ಭಾರಿ ಮಳೆ ಹಿನ್ನಲೆ ತೀರ್ಥಹಳ್ಳಿ ಮತ್ತು ಶಿವಮೊಗ್ಗ ಭಾಗದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ.