Thursday, April 9, 2026
Thursday, April 9, 2026
Home Blog Page 648

ರಾತ್ರಿ ಸುರಿದ ಮಳೆಗೆಮನೆ ಛಾವಣಿ ಕುಸಿತ ಅದೃಷ್ಟವಶಾತ್ ಪ್ರಾಣಾಪಾಯವಿಲ್ಲ

0

Forecastಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಹೊಟ್ಯಾಳಪುರದಲ್ಲಿ
ಭಾರಿ ಮಳೆಗೆ ಮನೆ ಕುಸಿದು ಕೂದಲೆಳೆ ಅಂತರದಲ್ಲಿ ಕುಟುಂಬ ಪಾರಾದ ಘಟನೆ ನಡೆದಿದೆ.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದಿದ್ದು,
ಹೊಟ್ಯಾಳಪುರ ಗ್ರಾಮದ ಪ್ರಭಾಕರ್ ಎಂಬುವವರ ಮನೆಯ ಗೋಡೆ ಮತ್ತು ಛಾವಣಿ ಕುಸಿದಿದೆ.

ಮಳೆಯ ರಭಸಕ್ಕೆ ಮನೆಯೊಳಗಿನ ಅಡುಗೆ ಮನೆ ಪಕ್ಕದ ಗೋಡೆ ಕುಸಿದಿದ್ದು , ಸಂಪೂರ್ಣ ಮನೆ ಕುಸಿಯುವ ಹಂತಕ್ಕೆ ತಲುಪಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ

DVS College of Arts, Science and Commerce ನಿರಂತರ ಪರಿಶ್ರಮ ವಹಿಸಿದರೆ ಜೀವನದಲ್ಲಿ ಯಶಸ್ಸು-ಡಾ.ಡಿ.ಪಿ.ನಾಗರಾಜಪ್ಪ

0

DVS College of Arts, Science and Commerce ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಹಂತದಿಂದಲೇ ಪರಿಶ್ರಮ ವಹಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ದಾವಣಗೆರೆ ಯುಬಿಡಿಟಿಸಿಇ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ.ನಾಗರಾಜಪ್ಪ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಘಟಕದಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಡಿವಿಎಸ್ ಸಾರಂಗ್ 2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಣ್ಣ ಸಣ್ಣ ಹುದ್ದೆ ಅಲಂಕರಿಸಿದರೂ ಸಂಪೂರ್ಣ ಮನಸ್ಸಿನಿಂದ ಕೆಲಸ ಮಾಡಿದಾಗ ಜೀವನದಲ್ಲಿ ಉನ್ನತ ಹಂತಕ್ಕೇರಲು ಸಾಧ್ಯವಿದೆ ಎಂದು ತಿಳಿಸಿದರು.

ಸಾಧಿಸುವ ಮನಸ್ಸಿದ್ದರೆ ಯಾವುದೇ ಸಮಸ್ಯೆಗಳು ಅಡ್ಡಿ ಎನಿಸುವುದಿಲ್ಲ. ನೀವು ಗುರಿ ಸಾಧಿಸಲು ಕಡೆಗೆ ಗಮನ ಇರಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದರು.

ದಾವಣಗೆರೆ ಯುಬಿಡಿಟಿಸಿಇ ಕಾಲೇಜಿನ ಡೀನ್ ಡಾ. ಎಸ್.ಮಂಜಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯು ಅಪಾರ ಸೇವೆ ಸಲ್ಲಿಸಿದ್ದು, ಇಲ್ಲಿ ಶಿಕ್ಷಣ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ಅಧ್ಯಯನ ಹೊರತುಪಡಿಸಿ ಬೇರೆ ವಿಷಯಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಮೊಬೈಲ್‌ನಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬಾರದು. ಶಿಕ್ಷಣದಲ್ಲಿ ಪರಿಶ್ರಮ ಪಟ್ಟರೆ ಜೀವನದಲ್ಲಿ ಫಲ ಸಿಗುತ್ತದೆ ಎಂದು ತಿಳಿಸಿದರು.

DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಸಹಕಾರಿಯಾಗುತ್ತದೆ. ತಮ್ಮಲ್ಲಿರುವ ವಿಶೇಷ ಸಾಮಾರ್ಥ್ಯವನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಖಜಾಂಚಿ ಬಿ.ಗೋಪಿನಾಥ್, ಐಕ್ಯೂಎಸಿ ಸಂಯೋಜಕ ಪ್ರೊ.ಎನ್.ಕುಮಾರಸ್ವಾಮಿ, ಸಾಂಸ್ಕೃತಿಕ ಸಂಯೋಜಕಿ ಎನ್.ಕೇತನಾ ಆರ್ತಿ, ರಾಜೇಶ್ವರಿ ಉಪಸ್ಥಿತರಿದ್ದರು.

Karnataka Sugama Sangeeta Parishath ಸುಗಮ ಸಂಗೀತ ಕ್ಷೇತ್ರದಲ್ಲಿ ಡಾ.ಹೆಚ್.ಎಸ್.ವಿ. ಕೊಡುಗೆ ಅಪಾರ: ಎನ್. ಗೋಪಿನಾಥ್

0

Karnataka Sugama Sangeeta Parishath ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನ ದಿಗ್ಗಜರು ಇದ್ದು ಅದರಲ್ಲಿ ಡಾಕ್ಟರ್ ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರ ಕೊಡುಗೆ ಅಪಾರ ಅವರ ಸಂಗೀತ ಸೇವೆ ಸಾಧನೆ ಇಂದಿಗೂ ಹಾಡುಗಾರರಿಗೆ ಸ್ಪೂರ್ತಿ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಡಾ. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ 80ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ‘ಹಾಡ ಬನ್ನಿ ಗೀತೆಯ’ ಹೆಚ್.ಎಸ್.ವಿ ಅವರ ಗೀತೆಗಳ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಸುಗಮ ಸಂಗೀತ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್ ಫೇಸ್ ಬುಕ್ ಹಾಗೂ ಟಿವಿಗಳ ಹವ್ಯಾಸ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳು ಸಂಗೀತಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸಂಗೀತಾಸಕ್ತಿ ಬೆಳೆಸಿಕೊಂಡಲ್ಲಿ ಮಕ್ಕಳ ಕಂಠ ಮಧುರವಾಗುವ ಜೊತೆಗೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷೆ ಶಾಂತ ಶೆಟ್ಟಿ, ಹೆಚ್.ಎಸ್.ವಿ ಅವರು ಅನೇಕ ಚಲನಚಿತ್ರಗಳಿಗೆ ಸಾಹಿತ್ಯ ನೀಡಿ ಅಪಾರ ಜನ ಮೆಚ್ಚುಗೆ ಪಡೆದಿದ್ದಾರೆ. ಅದರಲ್ಲೂ ಚಿನ್ನಾರಿ ಮುತ್ತ ದಾಖಲೆ ಮಾಡಿ ವಿಶೇಷ ಗೌರವ ಸಂದಿದೆ. ಭಾವಗೀತೆ ಪ್ರಪಂಚದಲ್ಲಿ ಇವರ ಗೀತೆಗಳು ಇಂದಿಗೂ ಅವಿಸ್ಮರಣೀಯ ಎಂದ ಅವರು, ಸುಗಮ ಸಂಗೀತ ಅಭ್ಯಾಸ ಮಾಡಿದರೆ ಯಾವ ಗೀತೆಗಳನ್ನು ಸಹ ಸುಲಭವಾಗಿ ಹಾಡಬಹುದು ಎಂದರು.

Karnataka Sugama Sangeeta Parishath ಮತ್ತೋರ್ವ ಹಿರಿಯ ಕಲಾವಿದ ಭದ್ರಾವತಿ ವಾಸು ಮಾತನಾಡಿ, ಸುಗಮ ಸಂಗೀತ ತಾಯಿಬೇರು, ಸಂಗೀತ ಸಾಧಕನ ಸ್ವತ್ತು. ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಸಂಗೀತ ಒಲಿಯುತ್ತದೆ ಎಂದರು.

ಕಾರ್ಯದರ್ಶಿ ಮಂಜುನಾಥ್ ಸ್ಪರ್ಧೆಯ ನಿಯಮಗಳನ್ನು ತಿಳಿಸಿದರು. ವೇದಿಕೆಯಲ್ಲಿ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಖಜಾಂಚಿ ಜಿ.ವಿಜಯಕುಮಾರ್, ಸಂಚಾಲಕರಾದ ಶೋಭಾ ಸತೀಶ್, ಮಥುರಾ ನಾಗರಾಜ್, ಸುಶೀಲ.ಜಿ, ತೀರ್ಪುಗಾರರಾದ ದಿನೇಶ್, ದನ್ ಪಾಲ್ ಸಿಂಗ್, ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಐವತ್ತಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿದ್ದರು.

B.Y.Raghavendra ಕೃಷಿ-ಶಿಕ್ಷಣ ವಲಯ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ಸಾಧನೆ ತೋರಿಸಿ- ಸಂಸದ ರಾಘವೇಂದ್ರ ಕರೆ

0
B.Y.Raghavendra ಕೃಷಿ-ಶಿಕ್ಷಣ ವಲಯ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ಸಾಧನೆ ತೋರಿಸಿ- ಸಂಸದ ರಾಘವೇಂದ್ರ ಕರೆ ಬ್ಯಾಂಕುಗಳು ಆದ್ಯತಾ ವಲಯಗಳಾದ ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಡಿ ಉತ್ತಮ ಸಾಧನೆ ತೋರಬೇಕು. ಸಿಡಿ ಅನುಪಾತವನ್ನು ಹೆಚ್ಚಿಸಬೇಕು ಹಾಗೂ ಫಲಾನುಭವಿಗಳಿಗೆ ಅನುಕೂಲಕರವಾಗಿ ವರ್ತಿಸಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜು.15 ರಂದು ಏರ್ಪಡಿಸಲಾಗಿದ್ದ ಬ್ಯಾಂಕುಗಳ ಡಿಸಿಸಿ ಮತ್ತು ಡಿಎಲ್‍ಆರ್‍ಸಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

B.Y.Raghavendra ಕೃಷಿ-ಶಿಕ್ಷಣ ವಲಯ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ಸಾಧನೆ ತೋರಿಸಿ- ಸಂಸದ ರಾಘವೇಂದ್ರ ಕರೆ ಪಿಎಂ ಸ್ವನಿಧಿ ಯೋಜನೆಯ ಮೊದಲ ಕಂತಿನಲ್ಲಿ ಶೇ.91 ಜನರಿಗೆ ಅಂದರೆ 9925 ಫಲಾನುಭವಿಗಳಿಗೆ ರೂ.10 ಸಾವಿರ ಸಾಲ ಸೌಲಭ್ಯ, ಈ 10 ಸಾವಿರ ತೀರಿಸಿದ ಫಲಾನುಭವಿಗಳಿಗೆ ಎರಡನೇ ಕಂತಿನಲ್ಲಿ 3408 ಜನರಿಗೆ ರೂ.20 ಸಾವಿರ ಮತ್ತು ಮೂರನೇ ಕಂತಿನಲ್ಲಿ 937 ಫಲಾನುಭವಿಗಳಿಗೆ 50 ಸಾವಿರ ಸಾಲ ಸೌಲಭ್ಯ ವಿತರಣೆಯಾಗಿದೆ. ಮೊದಲ, ಎರಡನೇ ಮತ್ತು ಮೂರನೇ ಕಂತಿನಲ್ಲಿ ಫಲಾನುಭವಿಗಳ ಸಂಖ್ಯೆ ತೀರಾ ಕಡಿತವಾಗುತ್ತಾ ಬಂದಿದೆ. ಇದರಿಂದ ಯೋಜನೆಯ ಉದ್ದೇಶ ಸಾಕಾರವಾಗುವುದಿಲ್ಲ. ಇದಕ್ಕೆ ಸಕಾರಣ ನೀಡಿ, ಮುಂದಿನ ದಿನಗಳಲ್ಲಿ ಎರಡನೇ ಮತ್ತು ಮೂರನೇ ಕಂತಿನಲ್ಲೂ ಸಹ ಹೆಚ್ಚಿನ ಫಲಾನುಭವಿಗಳು ಸಾಲ ಸೌಲಭ್ಯ ಪಡೆಯುವಂತೆ ಬ್ಯಾಂಕುಗಳು ಕ್ರಮ ವಹಿಸಬೇಕಂದು ಸಂಸದರು ಸೂಚನೆ ನೀಡಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ಮಾತನಾಡಿ, ಪಿಎಂ ಸ್ವನಿಧಿ ಯೋಜನೆಯಡಿ ಬಡ್ಡಿದರ ಶೇ.11 ರಲ್ಲಿ ಶೇ.7 ಫಲಾನುಭವಿಗಳು ನೀಡಬೇಕು ಮತ್ತು ಶೇ.4 ಸಬ್ಸಿಡಿ ಮೊತ್ತವಾಗಿರುತ್ತದೆ. ಎರಡನ್ನೂ ಫಲಾನುಭವಿಗಳಿಂದ ಪಡೆದು ಅವರು ನಿರಂತರವಾಗಿ ಮರುಪಾವತಿಸಿದಲ್ಲಿ ಮಾತ್ರ ಅವರ ಸಬ್ಸಿಡಿ ವಾಪಸ್ ಬರುತ್ತದೆ. ಆದ್ದರಿಂದ ಫಲಾನುಭವಿಗಳು ಎರಡು ಮತ್ತು ಮೂರನೇ ಕಂತಿನ ಸಾಲ ಪಡೆಯಲು ಆಸಕ್ತಿ ತೋರುತ್ತಿಲ್ಲ. ಪಿಎಂ ಸ್ವನಿಧಿ ಯೋಜನೆಯಲ್ಲಿ ಜಿಲ್ಲೆ 9 ನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.
ಸಂಸದರು ಪ್ರತಿಕ್ರಿಯಿಸಿ, ಬ್ಯಾಂಕುಗಳು ಫಲಾನುಭವಿಗಳ ಸಬ್ಸಿಡಿ ದೊರೆಯುವಂತೆ ಕ್ರಮ ವಹಿಸಬೇಕು. ಹಾಗೂ ಪಿಎಂ ಸ್ವನಿಧಿ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಿ ಸೌಲಭ್ಯ ನೀಡಬೇಕು ಎಂದರು.
ಮುದ್ರಾ ಯೋಜನೆಯಡಿ ಶಿಶು, ಕಿಶೋರ್ ಮತ್ತು ತರುಣ್ ಘಟಕದಡಿ ಒಟ್ಟು 107038 ಖಾತೆಗಳಿದ್ದು ರೂ.113379 ಲಕ್ಷ ಸಾಲ ಸೌಲಭ್ಯ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಪ್ರಗತಿಯೇ ಕಡಿಮೆ ಇದ್ದು ನಿಯಮಗಳನ್ನು ಕೊಂಚ ಸಡಿಲಗೊಳಿಸಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಿ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು. ಹಾಗೆಯೇ ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಎಪಿವೈ ಯೋಜನೆಯಡಿ ಸಹ ಉತ್ತಮ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.
ಕೃಷಿ ಮೂಲಭೂತ ನಿಧಿಯಡಿ ಹೆಚ್ಚಿನ ಪ್ರಗತಿ ಆಗಬೇಕು. ನಮ್ಮದು ಕೃಷಿ ಆಧಾರಿತ ಜಿಲ್ಲೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಾಗಿಯೇ ಗುರಿ ತೆಗೆದುಕೊಂಡು ಸಾಧಿಸಬೇಕು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಪಿಎಂ ವಿಶ್ವಕರ್ಮ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು ಕುಶಲಕರ್ಮಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಬ್ಯಾಂಕುಗಳು ಸಹಕರಿಸಬೇಕು. ಈ ಯೋಜನೆಯಡಿ ಬರುವ ಕುಶಲಕರ್ಮಿಗಳಿಗೆ ತರಬೇತಿ, ಭತ್ಯೆ ಹಾಗೂ ಸಾಲ ಸೌಲಭ್ಯ ನೀಡಲಾಗುವುದು. ಗ್ರಾಮೀಣ ಮತ್ತು ನಗರ ಸೇರಿದಂತೆ ಮೊದಲ ಹಂತದಲ್ಲಿ 69,370 ಅರ್ಜಿಗಳು ಬಂದಿದ್ದು, 52,782 ಅರ್ಜಿಗಳನ್ನು ಶಿಫಾರಸು ಮಾಡಲಾಗಿದೆ. ಎರಡನೇ ಹಂತದಲ್ಲಿ 24,094 ಮತ್ತು ಮೂರನೇ ಹಂತದಲ್ಲಿ 3582 ಅರ್ಜಿಗಳು ಬಂದಿವೆ. ಎರಡನೇ ಮತ್ತು ಮೂರನೇ ಹಂತದಲ್ಲೂ ಅರ್ಜಿಗಳ ಸಂಖ್ಯೆ ಹೆಚ್ಚುವಂತೆ ಕ್ರಮ ವಹಿಸಬೇಕೆಂದರು.
2023-24 ನೇ ಸಾಲಿನಲ್ಲಿ ಬ್ಯಾಂಕುಗಳು ಕೃಷಿ ವಲಯಕ್ಕೆ ಶೇ.73.87 ಸಾಲ ವಿತರಣೆ ಮಾಡಿದ್ದು ಇನ್ನು ಹೆಚ್ಚಿನ ಪ್ರಗತಿ ಆಗಬೇಕು. ಆದ್ಯತಾ ಶಿಕ್ಷಣ ಮತ್ತು ವಸತಿ ವಲಯದಲ್ಲೂ ಪ್ರಗತಿ ಕುಂಠಿತವಾಗಿದ್ದು ಇದನ್ನು ಹೆಚ್ಚಿಸಬೇಕು. ಪೋಷಕರ ಸಿಬಿಲ್ ಅಂಕಗಳನ್ನು ನೋಡಿ ಮಕ್ಕಳಿಗೆ ಶೈಕ್ಷಣಿಕ ಸಾಲ ನೀಡಲು ಹಿಂಜರಿಯಬಾರದು. ಶಿಕ್ಷಣ ಸಾಲಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಿಡಿ ಅನುಪಾತ ಜಿಲ್ಲೆ ರಾಜ್ಯದಲ್ಲಿ 26 ನೇ ಸ್ಥಾನದಲ್ಲಿದ್ದು, ಇದರ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ, ಎಂಎಸ್‍ಎಂಇ ಮತ್ತು ಒಟ್ಟಾರೆ ಆದ್ಯತಾ ವಲಯದಲ್ಲಿ ಶೇ.60 ಕ್ಕಿಂತ ಕಡಿಮೆ ಸಾಧನೆ ಮಾಡಿದ ಬ್ಯಾಂಕುಗಳು ಮುಂದಿನ ತ್ರೈಮಾಸಿಕ ಸಭೆ ಒಳಗೆ ಸುಧಾರಣೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಕೆನರಾ ಬ್ಯಾಂಕ್ ಡಿಜಿಎಂ ದೇವರಾಜ್ ಆರ್ ಮಾತನಾಡಿ, 2023-24 ನೇ ಸಾಲಿನಲ್ಲಿ ಎಂಎಸ್‍ಎಂಇ ವಲಯದಲ್ಲಿ ಶೇ.137.30 ಪ್ರಗತಿ ಸಾಧಿಸುವ ಮೂಲಕ ಉತ್ತಮ ಸಾಧನೆ ಆಗಿದೆ. ಆದರೆ ಕೃಷಿ ವಲಯಕ್ಕೆ ಸಾಲ ನೀಡುವಲ್ಲಿ ಶೇ.73.87 ಪ್ರಗತಿ ಹಾಗೂ ಆದ್ಯತಾ ಶಿಕ್ಷಣ ಮತ್ತು ವಸತಿ ಯಲ್ಲಿ ಕ್ರಮವಾಗಿ ಶೇ.14.54 ಮತ್ತು ಶೇ.19.09 ಪ್ರಗತಿ ಸಾಧಿಸಲಾಗಿದೆ. ಈ ಪ್ರಗತಿ ಇನ್ನೂ ಹೆಚ್ಚಬೇಕು. ಸಿಡಿ ಅನುಪಾತ ಸಹ ಕಡಿಮೆ ಆಗಿದ್ದು ಶೇ.9.4 ಕಡಿತಗೊಂಡಿದೆ. ಇನ್ನೂ ಮೂರು ತ್ರೈಮಾಸಿಕಗಳು ಇದ್ದು ಬ್ಯಾಂಕುಗಳು ಸಿಡಿ ಅನುಪಾತವನ್ನು ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಮಾತನಾಡಿ, ಮುಂದಿನ ತ್ರೈಮಾಸಿಕ ಸಭೆಯಲ್ಲಿ ಬ್ಯಾಂಕುಗಳು ಶೇ.100 ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು. ಸಭೆಗೆ ಕೂಲಂಕುಷವಾದ ವರದಿಯನ್ನು ಸಿದ್ದಪಡಿಸಿ ತರಬೇಕು. ನಿಗದಿತ ಪ್ರಗತಿ ಸಾಧಿಸದೇ ಇದ್ದಲ್ಲಿ ಅದಕ್ಕೆ ಕಾರಣಗಳನ್ನು ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಆರ್‍ಬಿಐ ಎಲ್‍ಡಿಓ ಬಬಲ್ ಬೊರ್ಡ್, ನಬಾರ್ಡ್ ಡಿಡಿಎಂ ಶರತ್ ಗೌಡ, ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಚಂದ್ರಶೇಖರ, ಬ್ಯಾಂಕುಗಳ ವಿಭಾಗೀಯ ಮ್ಯಾನೇಜರ್‍ಗಳು, ಅಧಿಕಾರಿಗಳು ಹಾಜರಿದ್ದರು.

(

Karnataka Arya Vaishya Development Corporation ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

0

Karnataka Arya Vaishya Development Corporation ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮವು 2024-25 ಸೇ ಸಾಲಿನ ಸ್ವಯಂ ಉದ್ಯೋಗ ನೇರ ಸಾಲ, ಬ್ಯಾಕ್‍ಗಳ ಸಹಯೋಗದೊಂದಿಗೆ ಆರ್ಯವೈಶ್ಯ ಆಹಾರ ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ, ಅರಿವು ಶೈಕ್ಷಣಿಕ ಸಾಲಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಲು ಆರ್ಯವೈಶ್ಯ ಸಮಾಜದ ಅರ್ಹ ಫಲಾನುಭವಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿಯನ್ನು ಸಲ್ಲಿಸಲು ಸಾಮಾನ್ಯ ವರ್ಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿರಬೇಕು, ಚಾಲ್ತಿಯಲ್ಲಿರುವ ಜಾತಿ ಆದಾಯ ಪ್ರಮಾಣ ಪತ್ರ ನಮೂನೆ-ಜಿ ರಲ್ಲಿ ಪಡೆದಿರಬೇಕು, ಕರ್ನಾಟಕ ರಾಜ್ಯದಲ್ಲಿ ವಾಸವಾಗಿರಬೇಕು, ಆಧಾರ್ ಕಾರ್ಡ್‍ಗೆ ಮೊಬೈಲ್ ಸಂಖ್ಯೆ ಜೋಡಣೆ ಆಗಿರಬೇಕು, ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಆಗಿರಬೇಕು, ಆಯ್ಕೆಯಾಗುವಾಗ ಮಹಿಳೆಯರಿಗೆ ಶೇ.33% ವಿಶೇಷಚೇತನರಿಗೆ Karnataka Arya Vaishya Development Corporation 5% ಹಾಗೂ ತೃತೀಯ ಲಿಂಗಗಳಿಗೆ 5% ಮೀಸಲಾತಿ ನೀಡಲಾಗಿದೆ.
ಆಸಕ್ತರು ಅರ್ಜಿಯನ್ನು kacdc.karnataka.gov.in ವೆಬ್‍ಸೈಟ್ ಮೂಲಕ ದಿ:31/08/2024 ರೊಳಗಾಗಿ ಸಲ್ಲಿಸುವಂತೆ ಹಾಗೂ ಇಲ್ಲಿ ನೀಡಿರುವ ಕ್ಯೂಆರ್ ಕೋಡ್ ಮೂಲಕ ಯೋಜನೆಗಳ ಮಾರ್ಗಸೂಚಿ, ಅರ್ಹತೆಗಳ ಸಂಕ್ಷಿಪ್ತ ವಿವರಗಳನ್ನು ಪಡೆದುಕೊಳ್ಳುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಭಾಗ್ಯ ನಿಲಯ, ಭಂಡಾರಿ ಗ್ಯಾಸ್ ,ಏಜೆನ್ಸಿ ಹತ್ತಿರ, 1ನೇ ಪ್ಯಾರಲಲ್ ರಸ್ತೆ, ಗಾಂಧಿನಗರ ಶಿವಮೊಗ್ಗ, ನಿಗಮದ ಸಹಾಯವಾಣಿ 9448451111 ಹಾಗೂ ವೆಬ್‍ಸೈಟ್ ಮೂಲಕ ಪಡೆಯಬಹುದಾಗಿದೆ.

CM Siddharamaih ಆಗಸ್ಟ್ 1 ರಿಂದ ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ- ಸಿದ್ಧರಾಮಯ್ಯ

0

CM Siddharamaih ಆಗಸ್ಟ್ ಒಂದರಿಂದ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ಕೊಡಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಂಗತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು
ತಮ್ಮ X ಖಾತೆಯಲ್ಲಿ
ಹಂಚಿಕೊಂಡಿದ್ದಾರೆ.

CM Siddharamaih ಸ್ಥಳೀಯ ಸಮಸ್ಯೆಗಳನ್ನ ಎದುರಿಸುತ್ತಿದ್ದೀರ? ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ X ಖಾತೆಗೆ ತಿಳಿಸಿ, ಪರಿಹಾರ ಪಡೆಯಿರಿ

0

CM Siddharamaih ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಒದಗಿಸಿದರೂ ಕೂಡ ಕೆಲವು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಗಣಕಯಂತ್ರ ನಿರ್ವಾಹಕರು ವಿವಿಧ ಸೇವೆಗಳನ್ನು ಖಾಸಗಿ ಇಂಟರ್‌ನೆಟ್‌ ಕೇಂದ್ರಗಳಲ್ಲಿ ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳಿಗೆ ದೂರು ನೀಡಿರುತ್ತಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಲು ಯಡ್ರಾಮಿ ತಾಲೂಕು ಪಂಚಾಯತ್‌ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ.

CM Siddharamaih ಅದರಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಸಾರ್ವಜನಿಕರ ಸೇವೆಗಳನ್ನು ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಮಾತ್ರ ನೀಡತಕ್ಕದ್ದು. ಒಂದು ವೇಳೆ ಇಂತಹ ಸೇವೆಗಳನ್ನು ಖಾಸಗಿ ಕೇಂದ್ರಗಳಲ್ಲಿ ನೀಡಿ ಹಣ ವಸೂಲಾತಿ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಯಡ್ರಾಮಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯವಾಗಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳ ಸಿಎಂ ಸಿದ್ದರಾಮಯ್ಯ `ಎಕ್ಸ್‌ʼ ಖಾತೆಗೆ ಟ್ಯಾಗ್‌ ಮಾಡಿ.

National Highway of Tirthahalli ತೀರ್ಥಹಳ್ಳಿಯ ಕುರುವಳ್ಳಿ-ಬಾಳೆಬೈಲು ಎನ್.ಎಚ್ ‌ರಸ್ತೆ ನೆಲ ಕುಸಿತ ವಾಹನ ಸಂಚಾರಕ್ಕೆ ಸಂಕಷ್ಟ

0

National Highway of Tirthahalli ತೀರ್ಥಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕುರುವಳ್ಳಿ – ಬಾಳೆಬೈಲು ಬೈಪಾಸ್ ರಸ್ತೆಯ ಧರೆ ಕುಸಿದಿದ್ದು ವಾಹನಗಳಿಗೆ ಓಡಾಡಲು ಸಂಚಾರಕ್ಕೆ ಅನಾನುಕೂಲವಾಗಿದೆ.

ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಮಳೆಯಾಗುತ್ತಿದ್ದು ಮತ್ತಷ್ಟು ಮಣ್ಣು ಕುಸಿಯುವ ಭೀತಿ ಎದುರಾಗಿದೆ.

National Highway of Tirthahalli ಜಿಲ್ಲೆಯಲ್ಲಿ ಜುಲೈ ತಿಂಗಳ ವಾಡಿಕೆ ಮಳೆ ಅರ್ಧದಷ್ಟು ಬಿದ್ದಿದೆ. 603.54 ಮಿಮಿ ರಷ್ಟು ಮಳೆಯಾಗಬೇಕಿದ್ದು ಇಲ್ಲಿಯ ವರೆಗೆ 346.ಮಿಮಿ ಮಳೆಯಾಗಿದೆ.‌ ತೀರ್ಥಹಳ್ಳಿಯಲ್ಲಿ ಕಳೆದ 24 ಗಂಟೆಯಲ್ಲಿ 56.20 ಮಿಮಿ ಮಳೆ ಸುರಿದಿದೆ.
ಆಗುಂಬೆಯ 5 ನೇ ತಿರುವಿನಲ್ಲಿ ಶನಿವಾರ ಧರೆ ಕುಸಿದಿತ್ತು. ಇಂದು ಕುರುವಳ್ಳಿ -ಬಾಳೆಬೈಲಿನಲ್ಲಿ ಧರೆ ಕುಸಿದಿದೆ.

Shivamogga Police ಜಿಲ್ಲೆಯ ವಿವಿಧೆಡೆ ಅಂದರ್ ಬಾಹರ್ ಇಸ್ಪೀಟಾಟ ಪೊಲೀಸ್ ದಾಳಿ

0

Shivamogga Police ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನವಿಲೆ ಗ್ರಾಮದಲ್ಲಿ ಕೆಲವು ಜನರು ಸೇರಿಕೊಂಡು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ 6 ಜನರನ್ನು ದಸ್ತಗಿರಿ ಮಾಡಿ, ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 11,250 ನಗದು ಹಣ ಮತ್ತು ಇಸ್ಪೀಟು ಎಲೆಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.

ಇನ್ಸ್‌ಪೆಕ್ಟರ್ ಸತ್ಯನಾರಾಯಣ, ಎಸ್ ಐ ವಗ್ಗಣ್ಣನವರ್ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ. ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0204/2024 ಕಲಂ 87 ಕೆ ಪಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಕಿ ತಾಂಡಾದಲ್ಲಿ ಕೆಲವು ಜನರು ಸೇರಿಕೊಂಡು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಪಿಐ ಜಗದೀಶ್ ಹಂಚಿನಾಳ್ ಮತ್ತು ಎಸ್ ಐ ಶಿಲ್ಪಾ ಎನ್ ನೇತೃತ್ವದ ಸಿಬ್ಬಂಧಿಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.

Shivamogga Police ಇಸ್ಪೀಟು ಜೂಜಾಟ ಆಡುತ್ತಿದ್ದ 8 ಜನರನ್ನು ದಸ್ತಗಿರಿ ಮಾಡಿ, ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 6,600 ನಗದು ಹಣ ಮತ್ತು ಇಸ್ಪೀಟು ಎಲೆಗಳನ್ನು ಅಮಾನತು ಪಡಿಸಿಕೊಂಡು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0138/2024 ಕಲಂ 87 ಕೆ ಪಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ

Kadamba Kannada Vedike ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಬಿ ಬ್ಲಾಕ್ ಮೂಲ ಸೌಕರ್ಯ ವಂಚಿತ ಸರಿಪಡಿಸಲು ಮನವಿ

0

Kadamba Kannada Vedike ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವೆಡೆಯ ಮುಖ್ಯ ಸಮಸ್ಯ್ಸೆಗಳ ಈಡೇರಿಕೆಗೆ ಆಗ್ರಹಿಸಿ ಕದಂಬ ಕನ್ನಡ ವೇದಿಕೆ ಪ್ರತಿಭಟಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕದಂಬ ವೇದಿಕೆ ಮುಖಂಡರು, ಶಿವಮೊಗ್ಗ ನಗರ ಅಭಿವೃದ್ಧಿ ಹೊಂದಿದ ನಗರವೆಂದು ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ. ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ, ನಗರೋತ್ಪನ್ನ-,೯ ಹಣಕಾಸು ಯೋಜನೆ ಸೇರಿದಂತೆ ನಾನಾ ಕಡೆಯಿಂದ ಹಣ ಬಂದರೂ ಜನಪ್ರತಿನಿಧಿಗಳು ಬೇಜಾವಾಬ್ದಾರಿತನ ಮಾಡುತ್ತಿದ್ದಾರೆ ಎಂದರು.

ಅಧಿಕಾರಿಗಳ ತಾತ್ಸಾರದಿಂದ ವಾರ್ಡ್ ನಂಬರ್-1ರ ಬೊಮ್ಮನಕಟ್ಟೆ “ಬಿ” ಬ್ಲಾಕ್ ಮೈಲಮ್ಮ ದೇವಸ್ಥಾನದ ಎದುರು ರಸ್ತೆಗಳು, ತಿರುವುಗಳು ಇಂದಿಗೂ ಡ್ರೈನೇಜ್, ರಸ್ತೆಗಳಿಲ್ಲ. ಈ ಪ್ರದೇಶದಲ್ಲಿ ಮಾತ್ರವಲ್ಲ ನಗರದ ಅನೇಕ ಕಡೆ ಇದೇ ಪರಿಸ್ಥಿತಿ ಆಗಿರುವುದು ಪಾಲಿಕೆಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

Kadamba Kannada Vedike ಮೂಲ ಸೌಲಭ್ಯವಿಲ್ಲದೆ ಇಲ್ಲಿನ ನಾಗರೀಕರು, ವೃದ್ಧರು, ಶಾಲಾ ಮಕ್ಕಳಿಗೆ ಅನಾನುಕೂಲವಾಗಿದೆ. ವಾಸಿಗಳು ವಿಪರೀತ ಸೊಳ್ಳೆ ಕಾಟಗಳಿಂದ ಕಂಗಾಲಾಗಿ ಹೋಗಿದ್ದಾರೆ. ಆದ್ದರಿಂದ ಡೆಂಗ್ಯು ಜ್ವರಕ್ಕೆ ತುತ್ತಾಗುವ ಮುನ್ನ ನೂತನ ಪಾಲಿಕೆ ಆಯುಕ್ತರು ಪರಿಶೀಲಿಸಿ ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕನ್ನಡ ಕದಂಬ ವೇದಿಕೆ ರಾಜ್ಯ ಅಧ್ಯಕ್ಷ ವಿಶ್ವನಾಥ್ ಪಾಲಿಕೆಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರು, ಬೊಮ್ಮನಕಟ್ಟೆ ಗ್ರಾಮಸ್ಥರು ಉಪಸ್ಥಿತರಿದ್ದರು.