Friday, June 19, 2026
Friday, June 19, 2026

Shivamogga Police ಟಿಟಿ ವಾಹನ ಬಾಡಿಗೆಗೆ ಕರೆದು ಚಾಲಕನ ಮೇಲೆ ಹಲ್ಲೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Date:

Shivamogga Police ಟೆಂಪೋ ಟ್ರಾವಲರ್ ಬಾಡಿಗೆಗೆ ಬೇಕೆಂದು ಕರೆಯಿಸಿಕೊಂಡು ನಂತರ ಪ್ರಯಾಣಿಸುವಾಗ ಚಾಲಕ ದರ್ಶನ್‌ನನ್ನು ಹೆದರಿಸಿ ಮಾಲಕನನ್ನು ಕರೆಯಿಸು ಎಂದು ಬೆದರಿಸಿ ಆತನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ವಾಹನವನ್ನು ಹಾನಿಗೊಳಿಸಿದ ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಜುಲೈ 10ರ ರಾತ್ರಿ ಈ ಘಟನೆ ಸಂಭವಿಸಿದೆ. ಕೆಎ ೦೫ ಎಎಫ್ ೧೪೩೧ರ ಟಿಟಿ ಬಾಡಿಗೆ ಇದೆ ಹೋಗು ಎಂದು ಮಾಲೀಕ ಕಾರ್ತಿಕ್ ಚಾಲಕನಿಗೆ ತಿಳಿಸಿದ್ದಾರೆ. ಅದರಂತೆ ಬೊಮ್ಮನಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ನಿಂದ ಬಾಡಿಗೆಯವರನ್ನು ಹತ್ತಿಸಿಕೊಂಡ ಚಾಲಕ ಬಸವಗಂಗೂರಿನ ಮೂಲಕ ಕುಂಸಿ ಕಡೆ ಹೊರಟಿದ್ದನು. ಈ ವೇಳೆ ಟಿಟಿಯಲ್ಲಿದ್ದ ತಂಡ ವಾಹನದ ಮಾಲೀಕನನ್ನು ಕರೆಯಿಸು ಎಂದು ಸೂಚಿಸಿದ್ದಾರೆ.

ಯಾಕೆ ಎಂದು ಪ್ರಶ್ನಿಸಿದ ಟಿಟಿ ಚಾಲಕನಿಗೆ ವೀಲ್ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಚಾಲಕನನ್ನು ಸೀಟಿನಿಂದ ಎಳೆದುಹಾಕಿದ್ದಾರೆ.
ಬಸವನಗಂಗೂರಿನಿಂದ ಕುಂಸಿಗೆ ಹೋಗುವ ದಾರಿ ಮಧ್ಯದಲ್ಲಿ ಬರುವ ಬಾರ್ ಎದುರು ಗಾಡಿ ನಿಲ್ಲಿಸಿ ವಾಹನವನ್ನು ಹಾಳು ಮಾಡಿದ್ದಾರೆ.

ಎಲ್ಲರೂ ಬಾರ್ ಗೆ ಇಳಿದು ಹೋದ ವೇಳೆ ಟಿಟಿ ಚಾಲಕ ಉಪಾಯದಿಂದ ತಪ್ಪಿಸಿಕೊಂಡು ಬಂದು ಮಾಲೀಕನಿಗೆ ವಿಷಯ ತಿಳಿಸಿದ್ದಾರೆ.

Shivamogga Police ಆಗ ಮಾಲೀಕರು ಯಾರು ಬಾಡಿಗೆಗೆ ಕರೆದಿದ್ದರೋ ಅವರಿಗೆ ಕರೆ ಮಾಡಿದಾಗ ಸ್ಚಿಚ್ ಆಫ್ ಬಂದಿದೆ. ವೀಲ್ ರಾಡಿನಿಂದ ನಂತರ ಯುವಕನ ಮೇಲೆ ಹಲ್ಲೆ ನಡೆಸಿದ ೧೦-೧೨ ಜನ ಅಪರಿಚಿತ ಯುವಕರ ವಿರುದ್ಧ ಚಾಲಕ ದರ್ಶನ್ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...