Thursday, April 9, 2026
Thursday, April 9, 2026
Home Blog Page 644

Rain In Shivamogga ಸುರಿದ ಮಳೆಗೆ ಶಿವಮೊಗ್ಗ 3ನೇ ವಾರ್ಡಿನಲ್ಲಿ ರಾತ್ರಿ ಮನೆಗೋಡೆ ಕುಸಿತ

0

Rain In Shivamogga ನಿನ್ನೆ ಇಡೀ ದಿನ ಎಡೆಬಿಡದೆ ಸುರಿದ ಮಳೆಗೆ ಇಲ್ಲಿನ ಶಿವಮೊಗ್ಗ ರಸ್ತೆ ಶಿವಮಂದಿರ ಎದುರಿನ ರತ್ನಮ್ಮ ಎನ್ನುವವರ ಮನೆ ಗೋಡೆ ರಾತ್ರಿ 10 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ.

ಬರುವೆ ವಾರ್ಡ್‌ ನಂಬರ್‌ 3ರ ವ್ಯಾಪ್ತಿಯಲ್ಲಿರುವ ಈ ಮನೆಯಲ್ಲಿ ರತ್ನಮ್ಮನವರು ಮಲಗಿದ್ದ ಕೋಣೆಯ ಒಂದು ಭಾಗದ ಗೋಡೆ ಭಾರೀ ಸದ್ದಿನೊಂದಿಗೆ ಕುಸಿದು ಬಿದ್ದಿದ್ದು, ಗೋಡೆ ಹೊರಭಾಗಕ್ಕೆ ಬಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

Rain In Shivamogga ತಕ್ಷಣವೇ ಸ್ಥಳೀಯರು ಆಗಮಿಸಿ ಮನೆಯವರ ನೆರವಿಗೆ ನಿಂತಿದ್ದಾರೆ.
ಈ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದು ಕುಟುಂಬ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದೆ

S.N. Chennabasappa ತುಂಗಾ ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಅನುದಾನಕ್ಕೆ ಶಾಸಕ ‘ಚೆನ್ನಿ’ ಮನವಿ

0

S.N. Chennabasappa ಶಿವಮೊಗ್ಗ ನಗರದ ಮದರಿಪಾಳ್ಯದ ಕಲ್ಲೇಶ್ವರ ದೇವಸ್ಥಾನದ ಪಕ್ಕ ಹಾದು ಹೋಗುವ ತುಂಗಾ ನದಿಯ ಪ್ರವಾಹದಿಂದ ನಾಗರೀಕರ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದ್ದು, ಇದರ ರಕ್ಷಣೆಗಾಗಿ ತುಂಗಾ ನದಿಯ ಬಲದಂಡೆಗೆ ಸುಮಾರು ೧೦೦ ಮೀಟರ್ ಉದ್ದಕ್ಕೆ ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಲು ಕರ್ನಾಟಕ ನೀರಾವರಿ ನಿಗಮ ನಿಯಮಿತ ಶಿವಮೊಗ್ಗ ಇವರಿಗೆ ಅನುದಾನವನ್ನು ಬಿಡುಗಡೆ ಮಾಡಲು ಶಾಸಕ ಎಸ್ ಎನ್. ಚನ್ನಬಸಪ್ಪ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಅವರು ಮನವಿ ಸಲ್ಲಿಸಿದರು.

S.N. Chennabasappa ಭದ್ರಾ ಜಲಯಾನ ಪ್ರದೇಶದಲ್ಲಿ ಮಳೆಯ ನೀರುಕೆರೆ ಕಟ್ಟಿ ತುಂಬಿ ಭದ್ರಾ ಎಡದಂಡೆ ಕಾಲುವೆ ಮುಖಾಂತರ ಹರಿದು ಶಿವಮೊಗ್ಗ ನಗರದ ಅನೇಕ ಬಡಾವಣೆಗಳಲ್ಲಿ ನೀರು ನುಗ್ಗಿ ಪ್ರವಾಹ ಉಂಟಾಗಿ ಅನೇಕ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದೆ. ಹೆಚ್ಚುವರಿ ನೀರನ್ನು ಹೊರಗೆ ಹರಿದು ಬಿಡಲು ಬೀಡುಗುಂಡಿಗಳು ಲಭ್ಯವಿರದ ಕಾರಣ, ಭದ್ರಾ ಎಡದಂಡೆ ಕಾಲುವೆಯಲ್ಲಿ ಬೀಡುಗುಂಡಿಗಳನ್ನು ನಿರ್ಮಾಣಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಲು ಕೋರಿದರು.

ತುಂಗಾ ಮೇಲ್ದಂಡೆ ಯೋಜನೆಯಲ್ಲಿ ನಿಗಮದ ಜಾಗವನ್ನು ಒತ್ತುವರಿ ಮಾಡುವುದಲ್ಲದೆ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿರುವುದರಿಂದ ಸರದಿ ಕಾಲುವೆಯ ಎರಡು ಬದಿಗಳಲ್ಲಿ ಚೈನೇಜ್ ೧೦,೦೦೦ ಕಿಲೋಮೀಟರ್ ರಿಂದ ಚೈನೇಜ್ ೨೧,೦೦೦ ಕಿಲೋಮೀಟರ್ ವರೆಗೆ (ಒಟ್ಟು ೨೨ ಕಿಲೋಮೀಟರ್) ವೈರ್ ಫೆನ್ಸಿಂಗ್ ಮತ್ತು ಚೈನ್ ಲಿಂಕ್ ಫೆನ್ಸಿಂಗ್ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಕೋರಿದರು.

Shivappanayak Agricultural University ಶಿವಪ್ಪನಾಯಕ ಕೃಷಿ ವಿವಿಯಿಂದ ಪ್ರಗತಿ ಪರ ರೈತ & ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

0

Shivappanayak Agricultural University ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಪ್ರತಿ ವರ್ಷದಂತೆ ಈ ವರ್ಷವೂ ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿಯನ್ನು ಕೃಷಿ ಮತ್ತು ತೋಟಗಾರಿಕಾ ಮೇಳ-2024 ರಲ್ಲಿ ನೀಡಿ ಸನ್ಮಾನಿಸಲು ತೀರ್ಮಾನಿಸಲಾಗಿದೆ.

ವಿಶ್ವವಿದ್ಯಾಲಯದ ವ್ಯಾಪ್ತಿಯ ಏಳು ಜಿಲ್ಲೆಗಳಾದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಪ್ರಗತಿ ಪರ ರೈತ, ರೈತ ಮಹಿಳೆಯರು ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿ ಸಲ್ಲಿಸಿದ ರೈತ, ರೈತ ಮಹಿಳೆಯರಲ್ಲಿ ಪ್ರತಿ ಜಿಲ್ಲೆಯಿಂದ ಒಬ್ಬ ರೈತ ಮತ್ತು ಒಬ್ಬ ರೈತ ಮಹಿಳೆಯನ್ನು ಆಯ್ಕೆ ಮಾಡಿ, ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು, ಈ ಪ್ರಶಸ್ತಿಯನ್ನು ದಿನಾಂಕ: 18-21 ಅಕ್ಟೋಬರ್-2024 ರಲ್ಲಿ ಜರುಗುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

Shivappanayak Agricultural University ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಯಶಸ್ವಿ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ಕೃಷಿ ವಿಜ್ಞಾನ ಕೇಂದ್ರಗಳು ಅಥವಾ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ಅರ್ಜಿ ಪಡೆಯಬಹುದು, ಅರ್ಜಿ ತೆಗೆದುಕೊಂಡು ಭರ್ತಿ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 15 ನೇ ಆಗಸ್ಟ್-2024 ರ ಒಳಗೆ ತಲುಪುವಂತೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಜಂಟಿ ನಿರ್ದೇಶಕರು ಅಥವಾ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರುಗಳು, ಕೃಷಿ ವಿಜ್ಞಾನ ಕೇಂದ್ರ ಇವರನ್ನು ಸಂಪರ್ಕಿಸಬೇಕಾದ ಸಂಖ್ಯೆಗಳು: ಶಿವಮೊಗ್ಗ- 94808 38976, 8277932600,ದಾವಣಗೆರೆ-9480838209, ಚಿಕ್ಕಮಗಳೂರು- 9480838203, 8277930890,, ಉಡುಪಿ- 9480838202, 8277932500, ಚಿತ್ರದುರ್ಗ-9480838201, ದಕ್ಷಿಣ ಕನ್ನಡ- 8794706468, 8277931060, ಮಡಿಕೇರಿ-94808 38210, 725905540

Department of Women and Child Development ಲಿಂಗತ್ವ ಅಲ್ಪಸಂಖ್ಯಾತರೂ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದು

0

Department of Women and Child Development ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಸಹ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರು ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ, ಪಾಸ್‍ಪೋರ್ಟ್ ಸೈಜ್ ಫೋಟೋ ಮತ್ತು ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Department of Women and Child Development ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ದೂ.ಸಂ.: 08182-295514 ನ್ನು ಸಂಪರ್ಕಿಸುವುದು.

Arasalu Railway ಅರಸಾಳು ಸಮೀಪ ರೈಲ್ವೆ ಹಳಿಯ ಮೇಲೆ ಮರವುರುಳಿ “ಕೈಮರ” ವಾಗಿ ರೈಲಿಗೆ ಬ್ರೇಕ್ : ಸಿಬ್ಬಂದಿ ಕಾರ್ಯಾಚರಣೆ

0

Arasalu Railway ಅರಸಾಳು ಸಮೀಪ ರೈಲ್ವೆ ಹಳಿಯ ಮೇಲೆ ಉರುಳಿದ ಪರಿಣಾಮ ಬೃಹತ್ ಮರವೊಂದು ನೆಲಕ್ಕುರುಳಿ ವಿದ್ಯುತ್ ಕಂಬಗಳನ್ನ ಹಾನಿ ಉಂಟು ಮಾಡಿದೆ.

ರೈಲ್ವೆ ಹಳಿಯ ಮೇಲೆ ಉರುಳಿ ಬಿದ್ದ ಬೃಹದಾಕಾರದ ಮರ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ರೈಲ್ವೆ ಸ್ಟೇಷನ್ ಬಳಿ ಭಾರಿ ಮಳೆಗೆ ಮರ ಉರುಳಿದೆ. ರೈಲ್ವೆ ಹಳಿಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿವೆ.

ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಿಂದ ಒಂದು ಕಿಮೀ ಅಂತರದ ಬಟಾಣಿಜೆಡ್ಡು ಗ್ರಾಮದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ತೆರಳಿದ್ದ ರೈಲ್ವೆ ಇಲಾಖೆಯ ಸಿಬ್ಬಂದಿಗಳ ಮರ ತೆರವು ಕಾರ್ಯಚರಣೆ ನಡೆಸಿದ್ದಾರೆ.

Arasalu Railway ಬೆಳಿಗ್ಗೆ ಬೆಂಗಳೂರು-ತಾಳಗುಪ್ಪ ರೈಲು ಸಂಚಾರಕ್ಕೆ ಈ ಮರ ಅಡಚಣೆ ಉಂಟು ಮಾಡಿತ್ತು. ರೈಲಿನಲ್ಲಿದ್ದ ಪ್ರಯಾಣಿಕರ ತಂಡವೊಂದು ರೆಸ್ಕ್ಯೂ ಮಾಡಿತ್ತು.

ಬೆಳಿಗ್ಗೆ ತೆರಳಿದ್ದ ರೈಲಿಗೆ ಮತ್ತು ಇತರೆ ರೈಲಿಗೆ ಈ ಮರ ಮತ್ತೆ ತೊಂದರೆ ಉಂಟು ಮಾಡಿತ್ತು. ಈಗ ಸಿಬ್ಬಂದಿಗಳೆ ಬಂದು ತೆರವು ಕಾರ್ಯ ನಡೆಸಿದ್ದಾರೆ.

Gajanur Dam ಎಡಬಿಡದ ಮಳೆಯಿಂದಾಗಿ ಗಾಜನೂರು ಜಲಾಶಯಕ್ಕೆ ಹೆಚ್ಚುತ್ತಿರುವ ನೀರಿನ ಒಳಹರಿವು

0

Gajanur Dam ನಾಡಿನ ಜೀವ ನದಿಗಳಲ್ಲೊಂದಾದ ತುಂಗಾ ನದಿ ಪ್ರಸ್ತುತ ಮೈದುಂಬಿ ಹರಿಯುತ್ತಿದೆ. ಜೊತೆಗೆ ಪ್ರವಾಹದ ಭೀತಿ (ಸೃಷ್ಟಿಸಿದೆ. ಕೆಲವೆಡೆ ನದಿಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಈ ನಡುವೆ ತೀರ್ಥಹಳ್ಳಿ ಆಗುಂಬೆ , ಶೃಂಗೇರಿ ಸುತ್ತಮುತ್ತ ಭಾರೀ ಮಳೆ ಮುಂದುವರಿದಿದೆ. ಇದರಿಂದ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ ಒಳಹರಿವಿನಲ್ಲಿ ನಿರಂತರ ಹೆಚ್ಚಳ ಕಂಡುಬರಲಾರಂಭಿಸಿದೆ.
ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ ತುಂಗಾ ಜಲಾಶಯಕ್ಕೆ 71,484 ಕ್ಯೂಸೆಕ್ ಒಳಹರಿವಿದೆ ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ
Gajanur Dam ಡ್ಯಾಂನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಕಳೆದ ಮೂರು ದಿನಗಳಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಡ್ಯಾಂನಿಂದ ಬಿಡುವ ನೀರಿನಲ್ಲಿ ಹೆಚ್ಚಳವಾದರೆ, ನಗರದ ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.

Chamber Of Commerce ವಿತರಕರಿಗಾಗಿ ಟ್ರೇಡ್ ಲೈಸನ್ಸ್ , ಫುಡ್ ಲೈಸನ್ಸ್ ಇತ್ಯಾದಿ ಮಾದರಿ ಮೇಳ ವ್ಯವಸ್ಥೆ ನಮ್ಮ ಗುರಿ- ಎಂ.ಸಿ.ದೇವರಾಜ್

0

Chamber Of Commerce ವಿತರಕರ ಹಿತಕ್ಕಾಗಿ ಕೆಲವು ಕೆಲಸಗಳನ್ನು ಮಾಡಲು ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ. ಕಂಪನಿ ಮತ್ತು ವಿತರಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶಯಗಳಿಗೆ ಸ್ಪಂದಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಹೊಸ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ದೇವರಾಜ್.ಎಂ.ಸಿ ಭರವಸೆ ನೀಡಿದರು.

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಹೊಸ ಆಡಳಿತ ಮಂಡಳಿಗೆ ಆಯ್ಕೆ ಆದ ನಿರ್ದೇಶಕರುಗಳು ಸಭೆ ಸೇರಿದ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಮಾತನಾಡಿದ ಅವರು, ಟ್ರೇಡ್ ಲೈಸನ್ಸ್ ಮೇಳ, ಫುಡ್ ಲೈಸನ್ಸ್ ಮೇಳ, ಎಪಿಎಂಸಿ ಮಾದರಿ ನಮ್ಮ ಎಲ್ಲಾ ವಿತರಕರಿಗೂ ನಗರದಲ್ಲಿ ಒಂದೇ ಕಡೆ ವಿಶಾಲವಾದ ಜಾಗ ಪಡೆಯಲು ಪ್ರಯತ್ನಿಸಲಾಗುವುದು ಎಂದರು.

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಹೊಸ ಆಡಳಿತ ಮಂಡಳಿಗೆ ಆಯ್ಕೆ ಆದ ನಿರ್ದೇಶಕರುಗಳು ಸಭೆ ಸೇರಿ, ಅಧ್ಯಕ್ಷ ಸ್ಥಾನವನ್ನು ದೇವರಾಜ್.ಎಂ.ಸಿ, ಉಪಾಧ್ಯಕ್ಷ ಸ್ಥಾನವನ್ನು ಬದರಿನಾಥ್.ಬಿ.ಆರ್,
ಕಾರ್ಯದರ್ಶಿ ಸ್ಥಾನವನ್ನು ಗಿರೀಶ್ ಒಡೆಯರ್, ಸಹಕಾರ್ಯದರ್ಶಿ ಸ್ಥಾನವನ್ನು ಅರವಿಂದ್ ರಾವ್.ಎಸ್.ವಿ, ಖಜಾಂಚಿ ಸ್ಥಾನವನ್ನು ಚಂದ್ರಶೇಖರ್.ಕೆ.ಕೆ, ನಿರ್ದೇಶಕರ ಸ್ಥಾನಗಳಿಗೆ ಮೋಹನ್ ಕುಮಾರ್, ಮೊಹಮ್ಮದ್ ಇಕ್ಬಾಲ್, ರಾಘವೇಂದ್ರ.ವೈ.ಎಂ, ಕುಮಾರ್.ಎ.ಎಂ, ಮಹಾರುದ್ರ.ಕೆ.ವಿ ಇವರು ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಜಿಲ್ಲಾ ವಿತರಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಹಾಗೂ ನೂತನ ಕಾರ್ಯ ಮಾಡಲು ಅಭಿನಂದಿಸಲಾಯಿತು.

Chamber Of Commerce ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಶಿವರಾಜ್ ಉಡುಗಣಿ, ಮಾಜಿ ಕಾರ್ಯದರ್ಶಿ ಮೋಹನ್.ಕೆ.ಎಸ್, ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ವಿತರಕರ ಸಂಘದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Karnataka Sangha Shivamogga ಅಗಲಿದ ವಿವಿಧ ಕ್ಷೇತ್ರಗಳ ವಿದ್ವಾಂಸರಿಗೆ ಕರ್ನಾಟಕ ಸಂಘದಲ್ಲಿ “ನುಡಿ ನಮನ”

0

Karnataka Sangha Shivamogga ದಿನಾಂಕ 20 ಜುಲೈ 2024ರ ಶನಿವಾರ, ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಅಧ್ಯಕ್ಷರಾದ ಶ್ರೀ ಎಂ.ಎನ್. ಸುಂದರ ರಾಜ್‌ರವರ ಅಧ್ಯಕ್ಷತೆಯಲ್ಲಿ ಖ್ಯಾತ ಸರೋದ್ ವಾದಕರಾದ ದಿವಂಗತ ಶ್ರೀ ರಾಜೀವ್ ತಾರಾನಾಥ್, ಖ್ಯಾತ ಇತಿಹಾಸ ತಜ್ಞರಾದ ದಿವಂಗತ ಡಾ. ಗುಂಡಾ ಜೋಯಿಸ್ ಮತ್ತು ಖ್ಯಾತ ಸಾಹಿತಿಗಳಾದ ದಿವಂಗತ ಡಾ. ಕಮಲಾ ಹಂಪನಾರವರ ಕುರಿತು ‘ಸಂಸ್ಮರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಟಿ.ವಿ. ಹೆಗಡೆ, ನಗರದ ಇತಿಹಾಸ ತಜ್ಞರಾದ ಶ್ರೀ ಅಂಬ್ರಯ್ಯ ಮಠ, ತೀರ್ಥಹಳ್ಳಿಯ ಕವಯತ್ರಿ ಹಾಗೂ ಸಾಹಿತಿಗಳಾದ ಡಾ. ಎಲ್.ಸಿ. ಸುಮಿತ್ರಾ ರವರು ನುಡಿನಮನ ಸಲ್ಲಿಸಲಿದ್ದಾರೆ.

ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

Supreme Court ವಿಚ್ಛೇದನ ಘೋಷಣೆಯಾಗುವ ಮುನ್ನವೇ ಬೇರೆ ಮದುವೆ ಆದರೆ ಶಿಕ್ಷಾರ್ಹರಾಗುತ್ತಾರೆ

0

Supreme Court ಮೊದಲ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರು, ಆ ಅರ್ಜಿಯ ವಿಚಾರಣೆ ಮುಗಿದು ತೀರ್ಪು ಬೀಳುವುದಕ್ಕೂ ಮುಂಚೆಯೇ ಮತ್ತೊಬ್ಬರೊಂದಿಗೆ ಸಹಜೀವನ ನಡೆಸುತ್ತಿದ್ದನ್ನು ಸುಪ್ರೀಂ ಕೋರ್ಟ್ ಬಲವಾಗಿ ಆಕ್ಷೇಪಿಸಿದೆ. ಅದೇ ಕಾರಣಕ್ಕಾಗಿ, ಮಹಿಳೆಗೆ ಹಾಗೂ ಆಕೆಯ 2ನೇ ಪತಿಗೆ ತಲಾ 6 ತಿಂಗಳು ಶಿಕ್ಷೆ ವಿಧಿಸಿದೆ.
Supreme Court ಶಿಕ್ಷೆಯನ್ನು ಇಬ್ಬರೂ ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂದರೆ, ಮಹಿಳೆಯ ಜೊತೆಗೆ ಮಗುವೊಂದು ಇರುವುದರಿಂದ ಆ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ ಮೊದಲು 2ನೇ ಪತಿಯು ಆರು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕು, ಆನಂತರ, ಮಹಿಳೆಯು ಜೈಲಿಗೆ ಶರಣಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.

Dubai princess Shaikha Mahra  ಇನ್ಷ್ಟಾಗ್ರಾಮ್ ನಲ್ಲೇ ತಲಾಖ್ ಹೇಳಿದ ದುಬೈ ರಾಜಕುಮಾರಿ ಶೈಖಾ

0

Dubai princess Shaikha Mahra  ಮೊದಲ ಮಗುವಿಗೆ ಜನ್ಮ ನೀಡಿದ ಎರಡೇ ತಿಂಗಳಿನಲ್ಲಿ ದುಬೈ ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್‌ ಮಕ್ತೂಮ್‌ ತನ್ನ ಪತಿಗೆ ತಲಾಕ್ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಲಾಕ್‌ ಪೋಸ್ಟ್‌ ಮಾಡಿರುವ ರಾಜಕುಮಾರಿ ಪತಿ ಶೇಖ್‌ ಮನ ಬಿನ್‌ ಮೊಹಮ್ಮದ್‌ ಬಿನ್‌ ರಶೀದ್ ಬಿನ್ ಮನಾ ಅಲ್‌ ಮಕ್ತೌಮ್‌ಗೆ ತಲಾಕ್ ನೀಡಿದ್ದಾರೆ.

Dubai princess Shaikha Mahra  ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತನ್ನ ಪತಿ ನನಗೆ ದ್ರೋಹ ಎಸಗಿದ ಕಾರಣ ವಿಚ್ಛೇದನ ನೀಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. “ಪ್ರೀತಿ ಗಂಡ, ನೀವು ಇತರ ಸಂಗಾತಿಯೊಂದಿಗೆ ನಿರತರಾಗಿರುವ ಹೊತ್ತಿನಲ್ಲಿ ನಾನು ಈ ಮೂಲಕ ನಮ್ಮ ವಿಚ್ಛೇದನ ಘೋಷಿಸುತ್ತಿದ್ದೇನೆ” ಎಂದು ಬರೆದ ಅವರು, ನಾನು ವಿಚ್ಛೇದನ ನೀಡುತ್ತಿದ್ದೇನೆ ಎಂದು ಮೂರು ಬಾರಿ ಬರೆದಿದ್ದಾರೆ.
ಇಸ್ಲಾಮಿಕ್ ಕಾನೂನಿನಲ್ಲಿ ಪತಿಗೆ ಮಾತ್ರ ‘ತ್ರಿವಳಿ ತಲಾಕ್’ ಹೇಳಲು ಅವಕಾಶ ಇದ್ದು, ಮಹಿಳೆಯರು ‘ಖುಲಾ’ ಎಂಬ ನಿಯಮ ಪಾಲಿಸಬೇಕಾಗುತ್ತದೆ. ಆದ್ರೆ ಇಲ್ಲಿ ರಾಜಕುಮಾರಿ ತನ್ನ ಪತಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ಘೋಷಿಸಿದ್ದಾರೆ.
ಶೈಖಾ ಮಹ್ರಾ ಅವರು ಕೈಗಾರಿಕೋದ್ಯಮಿ ಶೇಖ್‌ ಮನ್‌ ಬಿನ್‌ ಮೊಹಮ್ಮದ್‌ ಬಿನ್ ರಶೀದ್ ಬಿನ್ ಮನ ಅಲ್‌ ಮಕ್ತೌಮ್‌ ಅವರನ್ನು ಮೇ 2023 ರಲ್ಲಿ ಮದುವೆಯಾಗಿದ್ದರು. ಕಳೆದ ತಿಂಗಳು ಮಗುವಿನ ಜೊತೆ ಫೋಟೋ ಶೇರ್ ಮಾಡಿದ್ದ ಶೈಖಾ ಮಹ್ರಾ “ನಾವಿಬ್ಬರು ಮಾತ್ರ” ಎಂದು ಬರೆದುಕೊಂಡಿದ್ದರು.