Wednesday, April 8, 2026
Wednesday, April 8, 2026
Home Blog Page 643

Gram Panchayat of Hosanagara ಹೊಸನಗರ ತಾಲ್ಲೂಕಿನಲ್ಲಿ ಮಳೆ ಸೋನಲೆಯಲ್ಲಿ ರಸ್ತೆ ಧರೆ ಕುಸಿತ: ಸಂಪರ್ಕ ಕಡಿತ

0

Gram Panchayat of Hosanagara ಹೊಸನಗರ ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಿಕೊಪ್ಪ ಗ್ರಾಮದ ಮುಖ್ಯ ಸಂಪರ್ಕ ರಸ್ತೆಯಲ್ಲಿ ಧರೆ ಕುಸಿತ ಸಂಭವಿಸಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಈ ಭಾಗದ ಸುಮಾರು 25ಕ್ಕೂ ಹೆಚ್ಚು ಕೃಷಿ ಕುಟುಂಬಗಳು ಈ ರಸ್ತೆಯನ್ನೇ ನಿತ್ಯ ಬಳಕೆಗೆ ಆಶ್ರಯಿಸಿವೆ. ಒಂದೊಮ್ಮೆ ಧರೆ ಕುಸಿತ ಮುಂದುವರಿದು ರಸ್ತೆ ಸಂಪರ್ಕ ಕಡಿತಗೊಂಡರೆ ಸಂಪರ್ಕ ಅಸಾಧ್ಯವಾಗುತ್ತದೆ. ಧರೆ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತದ

Gram Panchayat of Hosanagara ಅಪಾಯದ ಮುನ್ಸೂಚನೆ ಪಡೆದ ಗ್ರಾಮ ಪಂಚಾಯಿತಿ ಸದಸ್ಯ ಕೊಳಗಿ ಸತೀಶ್, ಬೋರಿಕೊಪ್ಪ ರಾಘವೇಂದ್ರ, ಪಿಡಿಓ ಕಾವೇರಿ, ಗ್ರಾಮ ಸಹಾಯಕ ಸಿದ್ದಪ್ಪ, ಗ್ರಾಮಸ್ಥರಾದ ಪಾಂಡು, ಈಶ್ವರಪ್ಪ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಧರೆ ಕುಸಿತದಿಂದ ಸಂಪರ್ಕ ರಸ್ತೆಗೆ ತೊಂದರೆಯಾಗದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.

Department of Fisheries ಪ್ರಧಾನ ಮಂತ್ರಿ ಮತ್ಸ್ಯ ಸಂಪದ & ನೀಲಿಕ್ರಾಂತಿ ಯೋಜನೆ‌ ಲಾಭ ಪಡೆಯಲು ಆಸಕ್ತ ರಿಂದ ಅರ್ಜಿ ಆಹ್ವಾನ

0

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ ಸಾಲಿಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೀನು ಕೃಷಿ ಕೊಳಗಳ ನಿರ್ಮಾಣ ಒಟ್ಟು 12.00 ಹೆಕ್ಟೇರ್‍ಗಳು. ಇದರಲ್ಲಿ ಸಾಮಾನ್ಯ 02, ಮಹಿಳೆ 05, ಪರಿಶಿಷ್ಟ ಜಾತಿ 05 ಮತ್ತು ಪರಿಶಿಷ್ಟ ಪಂಗಡ 01 ಹೆಕ್ಷೇರ್ ಪ್ರದೇಶಕ್ಕೆ ಸೌಲಭ್ಯ ನೀಡುವ ಗುರಿ ನೀಡಲಾಗಿದೆ.
ಮೀನು ಕೃಷಿಕೊಳಗಳ ನಿರ್ಮಾಣ ಮಾಡಿಕೊಂಡು ಮೀನು ಕೃಷಿ ಕೈಗೊಂಡವರಿಗೆ ಹೂಡಿಕೆ ವೆಚ್ಚದ ಮೇಲೆ ಸಹಾಯ 10 ಹೆಕ್ಟೇರ್‍ಗೆ ನೀಡಲಾಗುವುದು. ಇದರಲ್ಲಿ ಸಾಮಾನ್ಯ 05, ಮಹಿಳೆ 03, ಪರಿಶಿಷ್ಟ ಜಾತಿ 01 ಮತ್ತು ಪರಿಶಿಷ್ಡ ಪಂಗಡ 01 ಹೆಕ್ಷೇರ್. ಮೀನು ಕೃಷಿಗಾಗಿ ಬಯೋಪ್ಲಾಕ್ ಘಟಕ ನಿರ್ಮಾಣಕ್ಕೆ ಸಹಾಯ ಹೂಡಿಕೆ ವೆಚ್ಚ ಸೇರಿಸಿದಂತೆ ಪ್ರತಿ ಘಟಕ ವೆಚ್ಚ ರೂ.4.00 ಲಕ್ಷ ನೀಡಲಾಗುವುದು. ಸಾಮಾನ್ಯ 01 ಗುರಿ ನೀಡಲಾಗಿದೆ.
ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ ಸಾಂಪ್ರದಾಯಿಕ ಮೀನುಗಾರಿಕೆಗೆ ಎಫ್‍ಆರ್‍ಪಿ ದೋಣಿ ನಿರ್ಮಾಣಕ್ಕಾಗಿ ಸಹಾಯ ಘಟಕಕ-02 ಸಾಮಾನ್ಯ 01, ಮಹಿಳೆ 01. ಮೀನು ಮರಿ ಪಾಲನಾ ಘಟಕ ನಿರ್ಮಾಣದ ಸಹಾಯ ಒಟ್ಟು 6.50 ಹೆಕ್ಟೇರ್ ಗುರಿ ಇದ್ದು ಸಾಮಾನ್ಯ 03, ಮಹಿಳೆ 02, ಮತ್ತು ಪರಿಶಿಷ್ಡ ಪಂಗಡ 1.70 ಹೆಕ್ಷೇರ್, ಮೋಟಾರ್ ಸೈಕಲ್ ವಿತ್ ಐಸ್ ಬಾಕ್ಸ್ ಪರಿಶಿಷ್ಟ ಜಾತಿ 02 ಗುರಿ ಹಾಗೂ ಹೊಸದಾದ ಮೀನುಮಾರಾಟ ಕಿಯೋಸ್ಕ್ ನಿರ್ಮಾಣಕ್ಕಾಗಿ ಅಲಂಕಾರಿಕ ಮೀನು ಮಾರಾಟ ಮಳಿಗೆ ಪರಿಶಿಷ್ಟ ಜಾತಿ 01 ಗುರಿ ನೀಡಲಾಗಿದೆ.
Department of Fisheries ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಡ ಪಂಗಡ, ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 9 ರೊಳಗಾಗಿ ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Department Of Post ಗ್ರಾಮೀಣ ಅಂಚೆಪಾಲಕರ- ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

0

Department Of Post ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವೆಬ್‍ಸೈಟ್ www.indiapostgdsonline.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಆಗಸ್ಟ್ 5 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಈ ಎಲ್ಲ ಹುದ್ದೆಗಳಿಗೆ 10 ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು ಇಂಗ್ಲಿಷ್‍ನಲ್ಲಿ ಕನಿಷ್ಟ ತೇರ್ಗಡೆ ಅಂಕ ಹೊಂದಿರಬೇಕು.

Department Of Post ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಅಭ್ಯರ್ಥಿಯ ವಯೋಮಿತಿ 18 ರಿಂದ 40 ವರ್ಷ. ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯುವುದು. ಶಿವಮೊಗ್ಗ ಅಂಚೆ ವಿಭಾಗದಲ್ಲಿ 89 ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ ಅಂಚೆ ವಿಭಾಗದ ಸಂಪರ್ಕ ಸಂಖ್ಯೆ : 08182-222516 ಹಾಗೂ ಆಯಾ ವಿಭಾಗದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

MESCOM Shivamogga ಜುಲೈ 22 ರಂದು ಕುಂಸಿ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

0

MESCOM Shivamogga ಶಿವಮೊಗ್ಗ ತಾಲ್ಲೂಕು ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜು. 22 ರ ಸೋಮವಾರ ಬೆಳಗ್ಗೆ 11.00 ಗಂಟೆಗೆ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಲಿದ್ದು, ಈ ಉಪವಿಭಾಗ ವ್ಯಾಪ್ತಿಯ ಗ್ರಾಹಕರು/ಸಾರ್ವಜನಿಕರು, ಕುಂದು ಕೊರತೆಗಳಿದ್ದಲ್ಲಿ ತಮ್ಮ ಅಹವಾಲುಗಳೊಂದಿಗೆ ಸದರಿ ಸಭೆಗೆ ಹಾಜರಾಗಿ ಪರಿಹರಿಸಿಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

Youth Hostels Association ಮಥುರ ಪ್ಯಾರಡೈಸ್ – 25, ಆಚರಣೆ ನಿಮಿತ್ತ ಮಳೆಗಾಲದ ಚಾರಣಕ್ಕೆ ಚಾಲನೆ

0

Youth Hostels Association ಹವಾಗುಣ ಬದಲಾಗಿ ಬೇಸಿಗೆಯಿಂದ ಮಳೆಗಾಲ ಪ್ರಾರಂಭವಾಗಿದೆ. ಪ್ರಕೃತಿಯ ಈ ಬದಲಾವಣೆಯನ್ನು ಆಸ್ವಾದಿಸುವ ಸಲುವಾಗಿ ನಮ್ಮ ತರುಣೋದಯ ಘಟಕದ ಸದಸ್ಯರನ್ನು ಬೀಳ್ಕೊಡುತ್ತಿರುವುದಾಗಿ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದರು.

ಪ್ರತಿ ವರ್ಷವೂ ಗೋವಾ ಯೂತ್ ಹಾಸ್ಟೇಲ್ಸ್ ಮಾನ್ಸೂನ್ ಚಾರಣ ಏರ್ಪಡಿಸಲಾಗುತ್ತಿದ್ದು, ನಮ್ಮ ಘಟಕದ ನೂರಾರು ಸದಸ್ಯರು ಪ್ರತಿ ವರ್ಷವೂ ಹೋಗಿ ಭಾಗವಹಿಸುತ್ತಾರೆ. ಈ ಸಾರಿಯು ಮುವತ್ತಮೂರು ಸದಸ್ಯರ ಪ್ರಥಮ ತಂಡ ಹೊರಟಿರುವುದಾಗಿ ತಿಳಿಸಿದ ಅವರು, ಚಾರಣದ ನೇತ್ರತ್ವ ವಹಿಸಿದ್ದ ಆ.ನ.ವಿಜಯೇಂದ್ರ ರಾವ್ ಮಥುರಾ ಪ್ಯಾರಡೈಸ್ ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ತರುಣೋದಯ ಘಟಕ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹಲವಾರು ಸಂಘ ಸಂಸ್ಥೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನಗರದ ಹಲವಾರು ಕಡೆ ಆಯೋಜಿಸಲು ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ 2024-25 ತೀರ್ಮಾನಿಸಿದೆ. ಆ ಪ್ರಯುಕ್ತ ಪ್ರಥಮ ಕಾರ್ಯಕ್ರಮ ಇದಾಗಿದೆ ಎಂದರು.

ಯೂತ್ ಹಾಸ್ಟೆಲ್ಸ್ ನ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಚಾರಣ ನಮ್ಮ ಮನಸ್ಸಿಗೆ ದೇಹಕ್ಕೆ ಸದೃಢತೆ ಕೊಡುವುದರ ಜೊತೆಗೆ ಚಾರಣ ಮಾಡುವಾಗ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಚಾರಣದಿಂದ ಪರಸ್ಪರರಲ್ಲಿ ಒಡನಾಟ ಸಂಪರ್ಕ ಹಾಗೂ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ಸುರಕ್ಷಿತವಾಗಿ ಚಾರಣ ಮಾಡಲು ಯೂತ್ ಹಾಸ್ಟೆಲ್ ಅತ್ಯಂತ ಸಹಕಾರಿಯಾಗಿದೆ ಎಂದು ನುಡಿದರು.

Youth Hostels Association ತಂಡದ ನೇತೃತ್ವವನ್ನು ವಹಿಸಿದ್ದ ಸಾಹಸಿ ಆ.ನಾ.ವಿಜಯೇಂದ್ರ ರಾವ್ ಮಾತನಾಡಿ, ಈಗಾಗಲೇ ನಮ್ಮ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಅಂಡಮಾನ್ ಹಾಗೂ ಬೇರೆ ಬೇರೆ ಸ್ಥಳಗಳಿಗೆ ನಿರಂತರವಾಗಿ ಪ್ರವಾಸ ಹಾಗೂ ಚಾರಣವನ್ನು ಏರ್ಪಡಿಸಿದ್ದು ಯಶಸ್ವಿಯಾಗಿದೆ. ಆದ್ದರಿಂದ ಹೆಚ್ಚು ಹೆಚ್ಚು ಜನ ಸದಸ್ಯರು ಯೂಥ್ ಹಾಸ್ಟೆಲ್ ನ ಸದಸ್ಯತ್ವವನ್ನು ಪಡೆದುಕೊಂಡು ಚಾರಣಗಳಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂತೇಶ್ ಕದರಮಂಡರಗಿ, ಡಾ. ಧನಂಜಯ್, ಪ್ರೊ. ನಾಗಭೂಷಣ್, ಕೆ.ಜಿ.ವೆಂಕಟೇಶ್, ವ್ಯದ್ಯಹವಾಲ್ದಾರ್, ಸವಿತಾನಾಗಭೂಷಣ್, ಶೇಖರ್ ಗೌಳೇರ್ ಮುಂತಾದವರು ಭಾವಹಿಸಿದ್ದರು.

DVS College of Arts, Science and Commerce ಜನಪ್ರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಿ.ನಾರಾಯಣ ರಾವ್ ನಿಧನ

0

DVS College of Arts, Science and Commerce ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಿ.ನಾರಾಯಣ ರಾವ್ ನಿಧನಕ್ಕೆ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಸೇರಿದಂತೆ ಡಿವಿಎಸ್ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.

ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಿ.ನಾರಾಯಣ ರಾವ್(69) ಶಿವಮೊಗ್ಗದ ಶರಾವತಿ ನಗರದ ನಿವಾಸದಲ್ಲಿ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.

ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಪ್ರೊ. ಜಿ.ನಾರಾಯಣ ರಾವ್ ಅವರು ಭದ್ರಾವತಿ ನ್ಯೂಟೌನ್ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 28 ವರ್ಷ ಹಾಗೂ ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಪ್ರಾಧ್ಯಾಪಕ ವೃತ್ತಿಯ ನಂತರ ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳಿಗೆ ಆರ್ಥಿಕ ವಿಷಯಗಳ ಸಲಹೆಗಾರರಾಗಿ, ದೂರಶಿಕ್ಷಣ ಪಡೆಯುವವರಿಗೆ ಮಾರ್ಗದರ್ಶಕರಾಗಿ ಹಾಗೂ ಸಭೆ ಸಮಾರಂಭಗಳಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.

ರಾಜ್ಯ ಆರ್ಥಿಕ ಪರಿಷತ್ ಉಪಾಧ್ಯಕ್ಷರಾಗಿ, ಕರ್ನಾಟಕ ಅರ್ಥಶಾಸ್ತ್ರ ಸಂಘದ ನಿರ್ದೇಶಕ, ಶಿವಮೊಗ್ಗ ಎಕಾನಾಮಿಕ್ಸ್ ಫೋರಂ ಗೌರವಾಧ್ಯಕ್ಷ, ರಾಷ್ಟ್ರೀಯ ಮಟ್ಟದ ಆರ್ಥಿಕ ಸಂಘದ ಅಜೀವ ಸದಸ್ಯರಾಗಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ಮಾಡಿದ್ದಾರೆ.

DVS College of Arts, Science and Commerce ಶೈಕ್ಷಣಿಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿಯೂ ಕೆಲಸ ಮಾಡಿದ್ದಾರೆ. ವಿದ್ವತ್ ಪ್ರಬಂಧಗಳನ್ನು ಮಂಡಿಸಿರುವ ಪ್ರೊ. ಜಿ.ನಾರಾಯಣ ರಾವ್ ನಿಧನ ತುಂಬಲಾರದ ನಷ್ಟ ಎಂದಿದ್ದಾರೆ.

ಶನಿವಾರ ಬೆಳಗ್ಗೆ ಶಿವಮೊಗ್ಗದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಿ.ನಾರಾಯಣ ರಾವ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ನಿಧನಕ್ಕೆ ಡಿವಿಎಸ್ ಕಲಾ, ವಿಜ್ಞಾನ ಮತ್ತು ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಹಾಗೂ ಡಿವಿಎಸ್ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.

Newspaper Distributors ನಿರ್ಲಕ್ಷ್ಯಕ್ಕೀಡಾಗಿರುವ ಪತ್ರಿಕಾ ವಿತರಕರ ಗೋಳು ಕೇಳುವವರಿಲ್ಲ-ರಾಧಾ ಎನ್.ಮಾಲತೇಶ್

0

Newspaper Distributors ಪತ್ರಿಕೋದ್ಯಮದ ಬೆಳವಣಿಗೆಗೆ ಸಂಪಾದಕರು ಮುದ್ರಕರು ಪ್ರತಿಯೊಂದು ಕೆಲಸ ಮಾಡುವವರು ಹೇಗೆ ಮುಖ್ಯವೋ. ಅದಕ್ಕಿಂತ ಮಿಗಿಲಾದವರು ಪತ್ರಿಕಾ ವಿತರಕರು.
ಒಂದು ಪತ್ರಿಕೆ ಬೆಳೆಯಲು ಅಭಿವೃದ್ಧಿ ಹೊಂದಲು ಸಮಾಜದಲ್ಲಿ ಹೆಸರು ಮಾಡಲು ಮನೆ ಮನೆ ತಲುಪಿಸಲು ಪತ್ರಿಕ ವಿತರಕರೇ ಪ್ರಮುಖವಾದವರು.
ಅಂತಹ ಪತ್ರಿಕಾ ವಿತರಕರನ್ನು ರಾಜ್ಯ ಪತ್ರಿಕೆಗಳ ಸಂಪಾದಕರು ನಿರ್ಲಕ್ಷ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರಾಧಾ ಎನ್, ಮಾಲತೇಶ್ ರವರು ಸ್ನೇಹಿತ ವರದಿಗಾರರೊಂದಿಗೆ ತಮ್ಮ ನೋವಿನ ಆಕ್ರೋಶವನ್ನು ವಿತರಕರು ಅನುಭವಿಸುತ್ತಿರುವ ನೋವಿನ ಜಂಜಾಟದ ಮಾಹಿತಿಯನ್ನ ನೀಡಿದರು.

ಆರ್ಥಿಕ ಭದ್ರತೆ. ಸಾಮಾಜಿಕ ಭದ್ರತೆ ಇಲ್ಲದೆ ಮಳೆ ಗಾಳಿ ಚಳಿ ಎನ್ನದೇ ವರ್ಷದ 361. ದಿನಗಳು ಓದುಗರನ್ನ ತೃಪ್ತಿಪಡಿಸಲು ಮನೆಮನೆಗೂ ಹೋಗಿ ಪತ್ರಿಕೆಗಳನ್ನು ವಿತರಿಸುತ್ತಿರುವುದು ಸತ್ಯದ ಸಂಗತಿ. ಸಂಪಾದಕರುಗಳು ಪತ್ರಿಕೆ ಮನೆ ಮಾತಾಗಿ ಪ್ರಜ್ವಲ್ ಸಲೂ ಈ ಪತ್ರಿಕ ವಿತರಕರೇ ಕಾರಣ ಎಂಬುದನ್ನ ರಾಜ್ಯ ಪತ್ರಿಕೆಯ ಸಂಪಾದಕರು ಮರೆತಂತಿದೆ .

ಕನಿಷ್ಠ ಓಡಾಡಲು ಸೈಕಲ್. ಮಳೆಗಾಲದಲ್ಲಿ ನೂರಾರು ಜ್ವರಗಳನ್ನ ಎದುರಿಸುವ ಸಂದರ್ಭ ಬಂದರು ಆಶ್ಚರ್ಯವಿಲ್ಲ ಅದಕ್ಕಾಗಿ ಪತ್ರಿಕಾ ವಿತರಿಕರಿಗೆ ಕನಿಷ್ಠ ರೈನ್ ಕೋಟ್ ವಿ ತರಿಸಬೇಕೆಂದು ತಮ್ಮ ಆಕ್ರೋಶದ ನುಡಿಗಳನ್ನು ಹೊರ ಹಾಕಿದರು.

Newspaper Distributors ಈ ಕೂಡಲೇ ಸಂಪಾದಕ ಮಂಡಳಿಯವರು ಪತ್ರಿಕ ವಿತರಕರ ನೋವುಗಳಿಗೆ ಸ್ಪಂದಿಸಿ ಈ ಕೂಡಲೇ ರೈನ್ ಕೋರ್ಟ್ ಅನ್ನು ವಿತರಿಸಲು ಮುಂದಾಗ ಬೇಕೆಂದು ಪತ್ರಿಕಾ ವಿತರಕರ ಒಕ್ಕೊರಲ ಧ್ವನಿಯಾಗಿ ಈ ಬೇಡಿಕೆಯನ್ನ ಮುಂದಿಟ್ಟಿದ್ದಾರೆ ಒಂದು ಪತ್ರಿಕೆಯ ಭವಿಷ್ಯ ಪತ್ರಿಕಾ ವಿತರಕರ ಸೇವೆಯ ಮೇಲೆ ಅವಲಂಬನೆಯಾಗಿದೆ ಸುದ್ದಿಗಳನ್ನು ಲೇಖನಗಳನ್ನು ಓದುಗರ ಮನೆಗೂ ತಲುಪಿಸಿ ವಿಷಯ ಹಂಚುವುದರ ಜೊತೆಗೆ ಪತ್ರಿಕೆಯು ಉನ್ನತ ಮಟ್ಟಕ್ಕೆ ಹೋಗಲು ಕಾರಣಿ ಭೂತರೆ ಈ ಪತ್ರಿಕಾ ವಿತರಕರು.

ಪತ್ರಿಕೆ ಹಂಚುವವರಿಲ್ಲದಿದ್ದರೆ ಪತ್ರಿಕಾ ರಂಗವೇ ಕ್ಷೀಣಿಸುತ್ತದೆ. ಅದರಲ್ಲೂ ಪೈಪೋಟಿಗಾಗಿ ದೃಶ್ಯ ಮಾಧ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಪತ್ರಿಕೆಯ ರಕ್ಷಣೆ ಆಗಬೇಕಾದರೆ ಸಂಪಾದಕರು ಪತ್ರಕರ್ತರು ಪತ್ರಿಕ ವಿತರಕರ ಒಂದುಗೂಡಿ ಶ್ರಮಿಸಿದರೆ ಮಾತ್ರ ಸಾಧ್ಯ ಈ ಕೂಡಲೇ ವಿತರಕರ ನೋವುಗಳಿಗೆ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಪತ್ರಿಕಾ ವಿತರಕರ ಒಕ್ಕೂಟನೆ ಈ ಮೂಲಕ ಒತ್ತಾಯಿಸುತ್ತಿದೆ ಪತ್ರಿಕಾ ದಿನಾಚರಣೆಯ ಈ ಸುಸಂದರ್ಭದಲ್ಲಿ ವಿತರಕರ ನೋವನ್ನು ಆಲಿಸಿ ಅವರೊಂದಿಗೆ ಸ್ಪಂದಿಸಬೇಕೆಂಬುದು ಪತ್ರಿಕಾ ದಿನಾಚರಣೆಯ ವಿಶೇಷ ಆಗಬೇಕೆಂಬುದು ಹಗಲಿರುಳು ಮಳೆ ಬಿಸಿಲು ಚಳಿ ಎನ್ನದೆ ಮನೆ ಮನೆ ತಿರುಗಿ ಮನೆಯಲ್ಲಿರುವ ಓದುಗರ ಮನಸ್ಸನ್ನ ಪತ್ರಿಕೆಯ ಕಡೆಗೆ ಒಲಿಸಿಕೊಳ್ಳುವ ಪತ್ರಿಕಾ ವಿತರಕರಶ್ರಮ ಅನನ್ಯ ಅವರಿಗೆ ಸಹಕರಿಸುವುದು ಸಂಪಾದಕ ಮಂಡಳಿಯ ಕರ್ತವ್ಯವೆಂದು ಈ ಸಂದರ್ಭದಲ್ಲಿ ತಿಳಿಸಿದರು

Rotary Shivamogga ಎಲ್ಲಾ ಸದಸ್ಯರನ್ನ ಒಳಗೊಂಡು ಕೆಲಸ ಮಾಡುವುದು ನಾಯಕನ ಜವಾಬ್ದಾರಿ-ಕಿರಣ್ ಕುಮಾರ್

0

Rotary Shivamogga ಸೇವಾಮನೋಭಾವದ ಜೊತೆಯಲ್ಲಿ ಒಬ್ಬ ನಾಯಕನಲ್ಲಿ ಮಾನವತೆ, ಸಹನೆ ಹಾಗೂ ಗುರಿ ಬಹಳ ಪ್ರಮುಖವಾಗಿರುತ್ತದೆ. ಅದನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಿ ತಂಡದೊಂದಿಗೆ ಮುಂದೆ ಸಾಗುವುದು ಒಬ್ಬ ನಾಯಕನ ಜವಾಬ್ದಾರಿ ಆಗಿರುತ್ತದೆ ಎಂದು ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಸಲಹೆ ನೀಡಿದರು.

ಶಿವಮೊಗ್ಗ ನಗರದ ಪ್ರತಿಷ್ಠಿತ ಸಂಸ್ಥೆಯಾದ ರೋಟರಿ ಶಿವಮೊಗ್ಗ ಸೆಂಟ್ರಲ್ 2024-25 ನೇ ಸಾಲಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ನಗರದ, ವಿಶಾಲ್ ಮಾರ್ಟ್ ಎದುರು, ರೋಟರಿ ಭವನದಲ್ಲಿ ಅತಿ ವಿಜೃಂಭಣೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನಾಧಿಕಾರಿಯಾಗಿ ಆಗಮಿಸಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಒಂದು ಸಂಸ್ಥೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಎಲ್ಲಾ ಸದಸ್ಯರನ್ನು ಒಳಗೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುವುದು ಒಬ್ಬ ನಾಯಕನ ಜವಾಬ್ದಾರಿ ಆಗಿರುತ್ತದೆ ಆ ಜವಾಬ್ದಾರಿಯನ್ನು ಈ ವರ್ಷ ಅಧ್ಯಕ್ಷರಾಗಿರುವ ರೋಟರಿನ್ ಕಿರಣ್ ಕುಮಾರ್ ರವರದಾಗಿದೆ ಎಂದರು.

ಈ ವರ್ಷ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಪ್ರಮುಖವಾಗಿ ರಸ್ತೆ ಸುರಕ್ಷತೆ, ಆರೋಗ್ಯ ಸ್ವಚ್ಛತೆ, ಎಜುಕೇಶನ್ ಜಾಗೃತಿ, ಹಸಿರು ಮತ್ತು ನೀರಿನ ಬಗ್ಗೆ ಜಾಗೃತಿ ಬಗ್ಗೆ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಅಧ್ಯಕ್ಷರು ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಇದರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರಿ ಎಂದು ಸಲಹೆ ನೀಡಿದರು.

ನೂತನವಾಗಿ ಅಧಿಕಾರ ಸ್ವೀಕರಿಸಿದ ರೋಟರಿ ಶಿವಮೊಗ್ಗ ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲ ರೋಟರಿ ಸಂಸ್ಥೆಯರಿಗೂ ಧನ್ಯವಾದಗಳನ್ನು ತಿಳಿಸಿದ ಅವರು, ಈ ವರ್ಷ ನೀಡುವ ಜವಾಬ್ದಾರಿಯನ್ನು ಎಲ್ಲಾ ಮಾದರಿ ಸದಸ್ಯರನ್ನು ಒಳಗೊಂಡು ಜಿಲ್ಲಾ ಪ್ರಾಜೆಕ್ಟ್ ಗಳನ್ನು ಮಾಡುವಲ್ಲಿ ಯಶಸ್ವಿಯಾಗೋಣ ಎಂದರು.

ವಲಯ 11ರ ಅಸಿಸ್ಟೆಂಟ್ ಗವರ್ನರ್ ಸುರೇಶ್.ಹೆಚ್.ಎಂ, ನೂತನ ಅಧ್ಯಕ್ಷರಿಗೂ ಹಾಗೂ ಕಾರ್ಯದರ್ಶಿಗಳಿಗೂ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸಿ, ರೋಟರಿ ಜಿಲ್ಲೆ 3182 ಗವರ್ನರ್ ದೇವಾನಂದ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಪ್ರಾಜೆಕ್ಟ್ ಗಳು ಇರುವುದರಿಂದ ಅದರ ನಿಟ್ಟಿನಲ್ಲಿ ಅಧ್ಯಕ್ಷರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದು ಅತ್ಯಮೂಲ್ಯವಾಗಿದೆ. ಹಾಗೆ ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ದಿನೇ ದಿನೇ ಇನ್ನೂ ಹೆಚ್ಚಿನ ಜವಾಬ್ದಾರಿಗಳನ್ನು ಹಾಗೂ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದು ತಿಳಿಸಿದರು.

Rotary Shivamogga ಜೋನಲ್ ಲಿಪ್ಟಿನೆಂಟ್ ಮಂಜುನಾಥ್ ರಾವ್ ಕದಂ ಮಾತನಾಡಿ, ನೂತನ ತಂಡಕ್ಕೆ ಶುಭಾಶಯ ಕೋರಿ, ಜಿಲ್ಲೆಯಲ್ಲಿ ನಮ್ಮ ಕ್ಲಬ್ ಗಳು ಗುರುತಿಸಿಕೊಳ್ಳುವಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಲು ಸದಾ ನಿಮ್ಮೆಲ್ಲರ ಜೊತೆ ನಾವಿರುತ್ತೇವೆ ಎಂದು ಅಭಿನಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಚಂದ್ರು.ಜೆ.ಪಿ,
ಮಾಜಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್, ಮಾಜಿ ಅಸಿಸ್ಟೆಂಟ್ ಗವರ್ನರ್ ಕೊಟೋಜಿ ರವಿ, ಚೂಡಾಮಣಿ ಪವಾರ್, ಗುರುರಾಜ್, ಧರ್ಮೇಂದ್ರ ಸಿಂಗ್, ಬಸವರಾಜ್, ಜಗದೀಶ್, ರಾಜ ಸಿಂಗ್ ಎಲ್ಲಾ ರೋಟರಿ ಶಿವಮೊಗ್ಗ ಸೆಂಟ್ರಲ್ ಹಾಗೂ ನಗರದ ಎಲ್ಲಾ ರೋಟರಿ ಸದಸ್ಯರು, ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್ ಹಾಗೂ ಕಾರ್ಯದರ್ಶಿ ಶುಭ ಚಿದಾನಂದ್ ಹಾಗೂ ಸದಸ್ಯರು ಉಪಸಿತರಿದ್ದರು. ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ಈಶ್ವರ್ ವಂದನಾರ್ಪಣೆ ಮಾಡಿದರು.

Radio Shivamogga “ಕಾರ್ಗಿಲ್ ವಿಜಯ್ ದಿವಸ್” ,ರೇಡಿಯೊ‌ ಶಿವಮೊಗ್ಗ ದಿಂದ ನವೀನ ಕಾರ್ಯಕ್ರಮ

0

Radio Shivamogga ಕಾರ್ಗಿಲ್ ವಿಜಯೋತ್ಸವಕ್ಕೆ ಜುಲೈ 26ಕ್ಕೆ ರಜತ ಸಂಭ್ರಮ. ಈ ಹಿನ್ನೆಲೆಯಲ್ಲಿ ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ (ಕಿಡ್ಸ್) ಹಾಗೂ ರೇಡಿಯೋ ಶಿವಮೊಗ್ಗ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಯೇ ದಿಲ್ ಮಾಂಗೇ ಮೋರ್ ರೂಪಿಸಿದೆ.

ಜುಲೈ 21ರ ಭಾನುವಾರ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ 12 ತಾಸುಗಳ ನೇರಪ್ರಸಾರದ ಕಾರ್ಯಕ್ರಮ ಇದಾಗಿರುತ್ತದೆ. ಯೇ ದಿಲ್ ಮಾಂಗೇ ಮೋರ್ ಶೀರ್ಷಿಕೆಯ ಈ ನೇರಪ್ರಸಾರವನ್ನು ಚೇತನ್ ಸಿ ರಾಯನಹಳ್ಳಿ ಹಾಗೂ ಕೆ.ವಿ. ಅಜೇಯ ಸಿಂಹ ನಡೆಸಿಕೊಡಲಿದ್ದಾರೆ.

ಇದರಲ್ಲಿ ಭಾರತೀಯ ಸೇನೆ, ಕಾರ್ಗಿಲ್ ಯುದ್ಧ, ಯುದ್ಧ ನೀತಿಗಳು, ವೀರಯೋಧರ ಕುರಿತಾಗಿ ಮಾತುಗಳು, ವೀರ ಯೋಧರೊಂದಿಗೆ ಸಂವಾದ ಹಾಗೂ ದೇಶಭಕ್ತಿ ಗೀತೆಗಳು, ಚಲನಚಿತ್ರದ ಹಾಡುಗಳು ಇರುತ್ತವೆ.

Radio Shivamogga ಈ ಕಾರ್ಯಕ್ರಮಕ್ಕೆ ತಾವೂ ಕರೆ ಮಾಡಿ ಮಾತನಾಡಬಹುದು. ತಾವು (ಮೊ: 96 860 96 279)ಗೆ ಕರೆ ಮಾಡಬಹುದು.

ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡು ದಿನದ 24 ಗಂಟೆಯೂ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಆಲಿಸಬಹುದೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ತಿಳಿಸಿದ್ದಾರೆ.

Klive Special Article ಆನೆಗಳಿಗೂ ಮನಸ್ಸುಂಟು

0

ಅಪರೂಪದ ಕೃತಿಗಳು…
” ಒಂದು ಆನೆಯ ಸುತ್ತ”
ಲೇ; ಗಿರಿಮನೆ ಶಾಮರಾವ್.
ಪರಿಚಯ: ಪ್ರಭಾಕರ ಕಾರಂತ.
ಹೊಸಕೊಪ್ಪ- ಶೃಂಗೇರಿ.

Klive Special Article “ಒಂದು ಆನೆಯ ಸುತ್ತ” ಗಿರಿಮನೆ ಶ್ಯಾಮರಾಯರ ಮತ್ತೊಂದು ಕಾದಂಬರಿ.ಹೆಸರೇ ಸೂಚಿಸುವಂತೆ ಇದು ಆನೆಯ ಸುತ್ತಲೇ ರಚಿಸಿದ ಕತೆಯಾದರೂ ಅದರೊಳಗೆ ಆನೆಯ ಕಾಡಿದೆ. ಅದನ್ನು ನಾಶಮಾಡಿದ ಮನುಷ್ಯನಿದ್ದಾನೆ. ವನ್ಯ ಜೀವಿ ಮತ್ತು ಮನುಷ್ಯ ಸಂಘರ್ಷದಲ್ಲಿ ಕಳನಾಯಕ ಯಾರು ಎಂಬ ಜಿಜ್ಞಾಸೆ ಇದೆ.ಪಶ್ಚಿಮ ಘಟ್ಟದ ದಟ್ಟ ಕಾನನದ ಕರಾಳ ಅಧ್ಯಾಯ ಇದೆ.ಮಾಫಿಯಾ ಮತ್ತು ಮರಿ ಮಾಫಿಯಾ ಕತೆ ಇದೆ.ಅರಣ್ಯ ಇಲಾಖೆಯ ಗುಟ್ಟಿದೆ.ಭ್ರಷ್ಟರ ಹುನ್ನಾರ ಇದೆ.ಅಪರೂಪವಾದರೂ ನೈಜ ವನ್ಯ ಜೀವಿ ಪ್ರೇಮಿಗಳಿದ್ದಾರೆ. ಧಕ್ಷ ನಿಯಮ ಕರ್ತವ್ಯ ನಿಷ್ಠೆಯ ಅಧಿಕಾರಿಗಳಿದ್ದಾರೆ. ಹಳ್ಳಿಗಾಡಿನ ಬದುಕಿನ ನೈಜ ಚಿತ್ರಣ ಇದೆ.ರೆಸಾರ್ಟ್ ಸಂಸ್ಕೃತಿಯ ಅನಾವರಣ ಇದೆ.ಒಂದು ಪುಟ್ಟ ಕಾದಂಬರಿಯಲ್ಲಿ ಇಷ್ಠೆಲ್ಲಾ ಸಂಗತಿ ತುರುಕಿದಂತೆ ಇರದೇ ಸಹಜವಾಗೇ ಒಂದಕ್ಕೊಂದು ಬೆಸೆದ ಕತನ ಆಗಿರುವುದೇ ಇದರ ವಿಶೇಷ.

ನನ್ನ ಬಾಲ್ಯ ಆನೆ ಸದಾ ಕಣ್ಣಿಗೆ ಬೀಳುತ್ತಲೇ ಇದ್ದ ಕಾಲ.ಅವು ಕಾಡಾನೆಗಳಲ್ಲ. ಸಾಕಿದ ಆನೆ.ಹುಲಿಕಲ್ ನಲ್ಲಿ ಅರಣ್ಯ ಕಡಿತಲೆ 1963-64 ರ ಹಾಗೇ ಆರಂಭವಾಗಿತ್ತು. ಕಾಡಿನ ಕಮರಿಯಲ್ಲಿ ಉರುಳಿದ ಮರ ಆಗ ಎತ್ತಲು ಆನೆ ಬರುತ್ತಿದ್ದವು.ಅವು ಹೋಗುತ್ತಿದ್ದಾಗ ಪ್ರತಿ ಬಾರಿಯೂ ಅದರ ಹಿಂದೆ ನಮ್ಮ ಮಕ್ಕಳ ಸೈನ್ಯ ಸಾಕಷ್ಟು ದೂರ ಅದನ್ನು ಹಿಂಬಾಲಿಸುತ್ತಿತ್ತು. ಅದೆಷ್ಟು ಬಾರಿ ಆ ದೈತ್ಯ ಪ್ರಾಣಿಯನ್ನು ನೋಡಿದರೂ ನಮಗೆ ಬೇಜಾರು ಬಂದಿದ್ದೇ ಇಲ್ಲ. ಮುಂದೆ ನಮ್ಮ ಮುಳುಗಡೆಯ ಊರಿಗೂ ಅರಣ್ಯ ಬೋಳಿಸಿ ಸಾಗಿಸುವಾಗ ಆನೆ ಬಂದಿತ್ತು. ಆಗ ಯುವಕನಾಗಿದ್ದರೂ ಆನೆ ಬೇಜಾರು ಬಂದಿರಲಿಲ್ಲ.ಅದೇ ಕುತೂಹಲದಿಂದ ಆನೆ ನೋಡುವುದಿತ್ತು. ಈಗ ಶೃಂಗೇರಿಯ ಹತ್ತಿರವೇ ನೆಲೆಸಿರುವ ನನಗೆ ಮಠಕ್ಕೆ ಹೋದಾಗ ಆನೆ ಜೋಡಿ ಬಂದರೆ ಅವುಗಳನ್ನು ಅದೇ ಅಚ್ಚರಿಯಿಂದಲೇ ನೋಡುವ ಅಭ್ಯಾಸ ಉಳಿದಿದೆ.
ಸಕ್ರೆಬೈಲಿನ ಆನೆ ಬಿಡಾರದ ಕುರಿತು ಲೇಖನ ಮಾಡಿಕೊಡಲು ತರಂಗ ಸಂಪಾದಕರಾದ ರಾಜಲಕ್ಷ್ಮಿಯವರು ಕೋರಿದಾಗ ನಾನು ವಾರ್ಷಿಕ ಆನೆ ಹಬ್ಬದ ದಿನ ಆನೆ ಬಿಡಾರಕ್ಕೆ ತೆರಳಿದ್ದೆ.ಅಂದು ಲೇಖನಕ್ಕಾಗಿ ಆನೆ ಮಾವುತರು, ಆನೆ ಡಾಕ್ಟರ್, ಅರಣ್ಯ ಇಲಾಖೆಯ ಸಿಸಿಎಫ್ ಸೇರಿದಂತೆ ಅನೇಕರನ್ನು ಸಂದರ್ಶಿಸಿದ್ದೆ. ನನ್ನ ಗುರುತಿನ ಎಸಿಎಫ್ ಚಂದ್ರಶೇಖರ್ ಎಂಬುವವರು ನನಗೆ ಶಿವಮೊಗ್ಗದಿಂದ ಅಲ್ಲಿಗೆ ಕರೆದೊಯ್ದು ಎಲ್ಲಾ ಸಹಕಾರ ನೀಡಿದ್ದರು. ಆನೆ ಬಂತೊಂದಾನೆ ಲೇಖನ ತರಂಗದ ಮುಖಪುಟ ಲೇಖನವಾಗಿ ಪ್ರಕಟವಾಗಿ ವ್ಯಾಪಕ ಓದುಗರ ಮೆಚ್ಚಿಗೆ ಗಳಿಸಿತು. ಆದಿನ ಅರಣ್ಯ ಇಲಾಖೆಯವರು ನನಗೆ ಆನೆ ಚಿತ್ರದ ನೆನಪು ಕಾಣಿಕೆ ಕೊಟ್ಟಿದ್ದರು.
Klive Special Article ಸಾಕಿದ ಆನೆಗಳೂ ಮರಿ ಹಾಕುತ್ತವೆ.ಅವುಗಳ ಆಟ ಪಾಟ ನೋಡುವುದೇ ಒಂದು ಸಂಭ್ರಮ.ಆದರೆ ಕಾಡಾನೆಗಳಿಗೆ ಇರುವಂತೆ ಈ ಸಾಕಿದಾನೆ ಮರಿಗಳಿಗೆ ತಾಯಿಯ ಜೊತೆಗೇ ಬೆಳೆದು ದೊಡ್ಡ ಆಗುವ ಭಾಗ್ಯ ಇಲ್ಲ.ಅವುಗಳನ್ನು ಆನೆ ಶಾಲೆಗೆ ಸೇರಿಸುವಾಗ ಬೇರ್ಪಡಿಸಿ ಪರಸ್ಪರ ಮರೆಸುವ ಕ್ರೂರ ಪದ್ದತಿ ಅನುಸರಿಸಲಾಗುತ್ತದೆ.ತನ್ನ ಮರಿಗಾಗಿ ತಾಯಾನೆ ಮತ್ತು ತಾಯಿಗಾಗಿ ಮರಿಯ ಹಂಬಲ ಕಣ್ಣೀರು ತರಿಸುತ್ತದೆ. ಕಡೆಗೂ ಶಾಲಾ ಜೀವನ ಮುಗಿಸಿ ಅವೆರಡು ಒಂದಾಗುವಾಗ ಅವುಗಳಿಗೆ ಪರಸ್ಪರ ಪರಿಚಯವೇ ಇರುವುದಿಲ್ಲ!.
ಗಿರಿಮನೆಯವರ ಕಾದಂಬರಿ ಇದನ್ನೆಲ್ಲಾ ನೆನಪಿಗೆ ತಂದಿತು. ಆನೆಯನ್ನಿಟ್ಟುಕೊಂಡೇ ಒಂದು ಕಾದಂಬರಿ ಬರೆಯುತ್ತಲೇ ಒಂದು ಪ್ರಭಲ ಸಂದೇಶ ನೀಡುವ ಲೇಖಕರ ಯಶಸ್ಸು ನನ್ನ ಮೆಚ್ಚಿಗೆಗೆ ಪಾತ್ರವಾಯಿತು. ಊರಿಗೆ ನುಗ್ಗಿ ಬೆಳೆ ನಾಶ,ಕಿರಿಕಿರಿ ಮಾಡಿದ ಕೆಲವರ ಹತ್ಯೆ,ಸೊಂಟ ಮುರಿತ, ಹೀಗೆ ಸಾಕಷ್ಟು ಅನಾಹುತ ಮಾಡಿದ ಆನೆಯ ವರ್ತನೆಗೆ ಲೇಖಕರು ಸಕಾರಣವನ್ನು ಒಪ್ಪುವಂತೆ ಕೊಟ್ಟಿದ್ದಾರೆ. ಕಾದಂಬರಿ ಪುಟ್ಟದಾದರೂ ಲೇಖಕರು ಸಾಕಷ್ಟು ಪೂರ್ವ ತಯಾರಿ ಅಧ್ಯಯನ ನಡೆಸಿದ್ದಾರೆ.ಆನೆಗಳ ಒಂದು ಮನಸ್ಸುಂಟು ಎಂದು ಸಾಬೀತು ಮಾಡಿದ್ದಾರೆ.
ಈ ಒಂಟಿ ಸಲಗವನ್ನು ಹಿಡಿಯುವ ಸಾಹಸ ,ಅದನ್ನು ಹುಡುಕುವ ಸಾಹಸದಲ್ಲಿ ಅಚಾನಕ್ ಎದುರಾಗುವ ಕಾಡುಗಳ್ಳರ ಕೃತ್ಯಗಳ ಪರಿಚಯ,ಮಂತ್ರಿಗಳ ಪ್ರವೇಶದಿಂದ ಆನೆ ಹತ್ಯೆಯ ಆದೇಶ,ಅದನ್ನು ರಕ್ಷಿಸುವ ಪ್ರಯತ್ನ ಹೀಗೆ ಕುತೂಹಲಭರಿತವಾಗಿ ಕತೆ ಸಾಗುತ್ತದೆ.ಎಲ್ಲೂ ಅಸಹಜತೆ ಇಣುಕದಂತೆ ಲೇಖಕರು ಎಚ್ಚರ ವಹಿಸಿದ್ದಾರೆ. ಕಡೆಗೆ ಓದುಗರು ಹೇಗಾದರೂ ಸರಿ ಈ ಆನೆ ಸಾಯಲೇ ಬಾರದು ಎಂದಂದುಕೊಳ್ಳುವಂತೆ ಮಾಡುವಲ್ಲಿ ಲೇಖಕರು ಯಶಸ್ವಿ ಆಗಿದ್ದಾರೆ. ತೇಜಸ್ವಿಯವರ ಕಾಡ ಕತೆ ಓದುತ್ತಿದ್ದ ನನಗೆ ಗಿರಿಮನೆ ಕತೆ ಅದರಂತೆ ಇಷ್ಟವಾಯಿತು. ತೇಜಸ್ವಿ ಕೈಬಿಟ್ಟ ಭಾಗ ಇವರು ಮುಂದುವರೆಸಿದ ತೃಪ್ತಿ ಆಯಿತು. ಒಂದು ರೀತಿ ಕಾದಂಬರಿಯಲ್ಲಿ ಆಸಕ್ತಿಯೇ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಕಾದಂಬರಿಯ ಓದಿನಿಂದಲೂ ಪ್ರಯೋಜನ ಇದೆ ಎಂದು ನಂಬುವಂತೆ ಮಾಡಿದ ಬರಹ ಇದು.
ಓದ ಬಯಸುವವರು 9739525514 ಸಂಪರ್ಕಿಸಬಹುದು. ಕರ್ಮವೀರದಲ್ಲಿ ದಾರವಾಹಿಯಾಗಿ ಪ್ರಕಟವಾದ ಈ ಕೃತಿ ಒಂಬತ್ತು ಮುದ್ರಣ ಕಂಡಿದೆ.