Monday, April 21, 2025
Monday, April 21, 2025

Shivamogga Chamber of Commerce ಬೆಳ್ಳಿಹಬ್ಬದ ಸಡಗರದಲ್ಲಿ ಹೋಟೆಲ್ ಮಥುರಾ ಪ್ಯಾರಡೈಸ್

Date:

Shivamogga Chamber of Commerce 25 ವರ್ಷಗಳ ಸುಧೀರ್ಘ ಯಶಸ್ವಿ ಹೊಟೇಲ್ ಉದ್ಯಮ ನಡೆಸಿದಂತಹ ಮುಥುರಾ ಪ್ಯಾರಾಡೈಸ್‌ನ ಮಾಲಿಕರಾದ ಶ್ರೀ ಎನ್ ಗೋಪಿನಾಥ್‌ರವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ೨೫ವರ್ಷಗಳ ಹಿಂದೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಉದ್ಯಮವನ್ನು ಆರಂಭಿಸಿ ಹಲವಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಜೊತೆಗೆ ಸಂಘ-ಸಂಸ್ಥೆ ಮತ್ತು ಸಭೆ-ಸಮಾರಂಭಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಹಕರಿಸುತ್ತಾ ಬಂದಿದ್ದೇವೆ ಹಾಗೂ ಈ ಎಲ್ಲಾ ಬೆಳವಣಿಗೆಗಳಿಗೆ ನಮ್ಮಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ನೌಕರರು ಹಾಗೂ ನಮ್ಮ ಕುಟುಂಬದವರ ನಿರಂತರ ಸಹಕಾರ ಎಂದೂ ಮರೆಯಲು ಸಾದ್ಯವಿಲ್ಲ ಹಾಗೆ ಗ್ರಾಹಕರು ಮಾದ್ಯಮ ಮಿತ್ರರು ಸಂಘ-ಸಂಸ್ಥೆಯವರು ಸದಾ ನಿರಂತರವಾಗಿ ಸಹಕರಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿಯವರು ಮಾತನಾಡುತ್ತಾ ಗೋಪಿನಾಥ್‌ರವರು ತಮ್ಮ ವೃತ್ತಿಯ ಜೊತೆಗೆ ಸಮಾಜಮುಖಿಯಾಗಿ ಹಲವಾರು ಗುರುತರ ಸೇವೆಗಳನ್ನು ಮಾಡುತ್ತಾ ಬಂದಿರುವುದು ತುಂಬಾ ಗಣನೀಯವಾಗಿದೆ ಒಂದು ಸಂಸ್ಥೆಯನ್ನು ಪ್ರಾರಂಭಿಸಿ ಅದನ್ನು ಉಳಿಸಿ ಬೆಳಸುವುದರ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ತುಂಬಾ ಕಠಿಣವಾದ ಸವಾಲು ಈ ನಿಟ್ಟಿನಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ದೇವಿಗೋಪಿನಾಥ್‌ರವರ ಸಹಕಾರ ಮಹತ್ವದ್ದಾಗಿದೆ.

Shivamogga Chamber of Commerce ಇದರ ಜೊತೆಗೆ ಹಲವಾರು ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಅವರಿಗೆ ಬದುಕನ್ನು ಕಟ್ಟಿ ಕೊಟ್ಟಿರುವುದು ಅವರ ಮಾನವೀಯ ದೊಡ್ಡಗುಣವಾಗಿದೆ. ಇದೇ ಸಂದರ್ಭದಲ್ಲಿ ಮಥುರಾ ಪ್ಯಾರಡೈಸ್‌ನ ಏಳಿಗೆಗೆ ಪ್ರಾರಂಭದಿಂದಲೂ ಶ್ರಮಿಸಿದ ಕಾರ್ಮಿಕರು, ಸಿಬ್ಬಂದಿ ವರ್ಗದವರು ಸದಾ ಸ್ಮರಣಿಯರು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮೀದೇವಿ ಗೋಪಿನಾಥ್‌ರವರು ಮಾತನಾಡಿ ಹೋಟೇಲ್ ಹಾಗೂ ವಸತಿ ಗೃಹ ನಡೆಸುವುದು ತುಂಬಾ ಕಷ್ಟಕರ ಅದರಲ್ಲೂ ಮಹಿಳೆಯರು ಉದ್ಯೋಗಿಗಳಾಗಿ ಸಹಕಾರ ನೀಡುತ್ತಿರುವುದು ತುಂಬಾ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಂಸ್ಥೆಯ ಪರವಾಗಿ ಅರ್ಪಿಸುತ್ತಿದ್ದೇವೆ.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರಾದ ಕೆ.ಎಸ್. ಸುಕುಮಾರ್, ಮಾಜಿ ಅಧ್ಯಕ್ಷರಾದ ಟಿ.ಆರ್. ಆಶ್ವಥ್ ನಾರಾಯಣ ಶೆಟ್ಟಿ, ಜನಾರ್ಧನ್ ಪೈ, ಚನ್ನವೀರಪ್ಪ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...