Thursday, April 24, 2025
Thursday, April 24, 2025

JCI Shivamogga Royals ಮೇ 24 ರಂದು”ಅನವರತ” ವಿಶ್ವ ದಾಖಲೆಯ24 ಗಂಟೆಗಳ ನಿರಂತರ ತರಬೇತಿ ಕಾರ್ಯಕ್ರಮ

Date:

JCI Shivamogga Royals ಜೆಸಿಐ ಶಿವಮೊಗ್ಗ ರಾಯಲ್ಸ್ ನೇತೃತ್ವದಲ್ಲಿ ಶಿವಮೊಗ್ಗದ ಎಲ್ಲಾ ಜೆಸಿಐ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ತಿಂಗಳ 24 ನೇ ತಾರೀಖು “ಅನವರತ-24” ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವ ದಾಖಲೆಯ 24 ಗಂಟೆಗಳ ನಿರಂತರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿರುವ ಜೆಎಫ್ಎಸ್ ಸುದರ್ಶನ್ ತಾಯಿಮನೆ ಅವರು ತಿಳಿಸಿರುತ್ತಾರೆ.
ಮುಂದುವರೆದು ಮಾತನಾಡುತ್ತಾ ಈ ತರಬೇತಿ ವಿಶೇಷತೆ ಎಂದರೆ 24 ತರಬೇತುದಾರರು 24 ವಿವಿಧ ವಿಷಯಗಳನ್ನು ಒಳಗೊಂಡ 24ಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿರುತ್ತಾರೆ.
ತರಬೇತುದಾರರಾದ ಜೆಎಫ್ಎಮ್ ಮೋಹನ್ ಕಲ್ಪತರು ಅವರು ಈ ತರಬೇತಿಯನ್ನು ಪ್ರತಿ ವರ್ಷ ಜೆಸಿಐ ಭಾರತದಿಂದ ಆಚರಿಸುವ ರಾಷ್ಟ್ರೀಯ ತರಬೇತಿ ದಿನದ ಪ್ರಯುಕ್ತ ಅನೇಕ ಸಂಸ್ಥೆಗಳ ಸಹಕಾರದಿಂದ ನಡೆಸಲಾಗುತ್ತಿದೆ, ಇದು “ನೊಬೆಲ್ ವರ್ಲ್ಡ್ ರೆಕಾರ್ಡ್” , “ಲಿಮ್ಕಾ ಬುಕ್ ಆಫ್ ರೆಕಾರ್ಡ್” ಅನ್ನು ಸೇರಲಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತಿ ಇರುತ್ತಾರೆ ಎಂದು ತಿಳಿಸಿದ್ದಾರೆ.
JCI Shivamogga Royals ಮತ್ತೊಬ್ಬ ತರಬೇತುದಾರರಾದ ಜೆಸಿ ಪ್ರಮೋದ್ ಶಾಸ್ತ್ರಿ ರವರು ಮಾತನಾಡಿ ಎಲ್ಲಾ 24 ವಿಷಯಗಳ ತರಬೇತಿಯನ್ನು ವಿವಿಧ ವರ್ಗದ ಶಿಬಿರಾರ್ಥಿಗಳಿಗೆ ಉಪಯೋಗವಾಗುವಂತೆ ಸಿದ್ಧಪಡಿಸಲಾಗಿದ್ದು. ಕ್ರಿಯಾತ್ಮಕ ಶೈಲಿಯಲ್ಲಿ ಜೆಸಿಐ ಭಾರತದಿಂದ ಪ್ರಮಾಣಿಕೃತಗೊಂಡ ರಾಷ್ಟ್ರೀಯ ಮತ್ತು ವಲಯ ತರಬೇತುದಾರರಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಸಿ ಸ್ಮಿತಾ ಮೋಹನ್, ಜೆಸಿ ದಿವ್ಯ ಪ್ರವೀಣ್, ಜೆಸಿ ಮಧು, ಜೆಸಿ ನವೀನ್ ತಲಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...