Wednesday, April 8, 2026
Wednesday, April 8, 2026
Home Blog Page 642

Sapta Swara Music Academy ಜುಲೈ 21. ಬಳ್ಳಾರಿಯಲ್ಲಿ ಸಪ್ತಸ್ವರ ಕಲಾ ಸಮೂಹದಿಂದ ಸಂಗೀತ ಕಾರ್ಯಕ್ರಮ

0

Sapta Swara Music Academy ಸಪ್ತ ಸ್ವರ ಕಲಾ ಸಮೂಹದಿಂದ ಸುಮಾರು ತಿಂಗಳುಗಳಿಂದ ಸ್ಥಳೀಯ ಸಂಗೀತ ಕಲಾವಿದರಿಗೆ ಪ್ರೋತ್ಸಾಹಿಸಲೆಂದು ಮೀನಾಕ್ಷಿ ನಿಲಯ ಬೈಠಕ್ ಎನ್ನುವ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಜುಲೈ ತಿಂಗಳಿನ ಸಂಗೀತ ಕಾರ್ಯಕ್ರಮವನ್ನು ಜುಲೈ 21 ಭಾನುವಾರದಂದು ಸಂಜೆ 6.30 ಕ್ಕೆ ಬಳ್ಳಾರಿಯ ಗಾಂಧಿನಗರದ 3 ನೇ ಅಡ್ಡ ರಸ್ತೆ, ಬಾಲ ಭಾರತಿ ಶಾಲೆಯ ಹತ್ತಿರ ಮೀನಾಕ್ಷಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

Sapta Swara Music Academy ಕಾರ್ಯಕ್ರಮವನ್ನು ಶ್ರೀ ಅನಿಲ್ ಶಾಖಾಪೂರ್ ಹಾಗೂ ಬಳ್ಳಾರಿಯ ಹಿರಿಯ ಕಲಾವಿದರಾದ ದೊಡ್ಡ ಬಸವ ಗವಾಯಿಗಳು ನಡೆಸಿಕೊಡಲಿದ್ದಾರೆ. ಇವರಿಗೆ ತಬಲಾ ಸಾಥ್ ನಲ್ಲಿ ಬಳ್ಳಾರಿಯ ಜನಪ್ರಿಯ ಕಲಾವಿದರಾದ ಶ್ರೀ ಪವಮಾನ್ ಅರಳಿ ಕಟ್ಟೆ ಮತ್ತು ಉದಯೋನ್ಮುಖ ಕಲಾವಿದರಾದ ಯೋಗೇಶ್ ಹಾಗೂ ಹಾರ್ಮೋನಿಯಂ ಸಾಥ್ ನಲ್ಲಿ ಪುಟ್ಟರಾಜು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಸಂಗೀತದ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

DC Shivamogga ಉಣ್ಣೆ ನಿಯಂತ್ರಣ & ಡೆಂಗ್ಯು ರೋಗ ತಡೆಗಟ್ಟಲು ತೀವ್ರ ಕ್ರಮಕ್ಕೆ ಜಿಲ್ಲಾಧಿಕಾರಿ‌ ಗುರುದತ್ತ ಹೆಗಡೆ ಸೂಚನೆ

0

DC Shivamogga ಉಣ್ಣಿಗಳು ಈಗ ವಯಸ್ಕ ಅವಸ್ಥೆಯಲಿದ್ದು ದನ ಮತ್ತು ಎಮ್ಮೆಗಳ ಮೂಲಕ ಮನೆಗಳಿಗೆ ತಲುಪುವುದನ್ನು ತಪ್ಪಿಸಲು ಜಾನುವಾರುಗಳ ಮೈಮೇಲೆ ನಿವಾರಕಗಳ ಲೇಪನ ಮತ್ತು ಲಸಿಕೆ ನೀಡುವ ಮೂಲಕ ಉಣ್ಣಿ ನಿಯಂತ್ರಣ ಮಾಡಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೆರಿಯಲ್ಲಿ ಕೆಎಫ್‍ಡಿ ಮತ್ತು ಡೆಂಗಿ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಎಫ್‍ಡಿ ನಿಯಂತ್ರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಮೇಯಲು ಹೋದ ಹಸು-ಎಮ್ಮೆಗಳ ಮೈಮೇಲೆ ಉಣ್ಣಿಗಳು ಅಂಟಿಕೊಂಡು ಮನೆ-ಕೊಟ್ಟಿಗೆ ತಲುಪುವುದನ್ನು ತಪ್ಪಿಸಲು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಜಾನುವಾರುಗಳಿಗೆ ನಿವಾರಕಗಳ ಲೇಪನ ಹಾಗೂ ಅಗತ್ಯ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದರು.

ಜಿ.ಪಂ ಸಿಇಓ ಎನ್.ಹೇಮಂತ್ ಮಾತನಾಡಿ, ಕೆಎಫ್‍ಡಿ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳಲ್ಲಿ ಉಣ್ಣಿಗಳನ್ನು ನಿಯಂತ್ರಿಸಲು ಕೆಎಂಎಫ್ ಸಂಪರ್ಕಿಸಿ ಎಂಪಿಸಿಎಸ್ ಸೊಸೈಟಿ ಹಾಗೂ ಪಶುಪಾಲನಾ ಇಲಾಖೆಯಡಿ ನೋಂದಣಿಯಾದ ಜಾನುವಾರುಗಳ ಸಂಖ್ಯೆಯ ವರದಿಯನ್ನು ಪಡೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಜಾನುವಾರುಗಳು ಹೊರಗಡೆ ಮೇಯುವುದನ್ನು ತಪ್ಪಿಸಬೇಕು ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 360 ಡೆಂಗಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 02 ಸಾವು ದೃಢಪಟ್ಟಿದೆ. ಡೆಂಗಿ ನಿಯಂತ್ರಿಸಲು ಪ್ರತಿ ವಾರ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಫಾಗಿಂಗ್ ಮಾಡಲಾಗುತ್ತಿದೆ. ಈಗ ಶುಕ್ರವಾರಗಳಂದು ನೀರು ಸಂಗ್ರಹಿಸುವ ಪರಿಕರ ಸ್ವಚ್ಚಗೊಳಿಸುವ ಶುಷ್ಕ ದಿನ ಆಚರಿಸಲಾಗುತ್ತಿದೆ. ಜಿಲ್ಲೆಯ 17 ಕಡೆ ಫಿವರ್ ಕ್ಲಿನಿಕ್ ತೆರೆಯಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ 5 ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳನ್ನು ಡೆಂಗಿ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳು, ಮಳೆ ಕಡಿಮೆ ಆದ ಮೇಲೆ ಡೆಂಗಿ ಹೆಚ್ಚುವ ಸಂಭವ ಇದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಡೆಂಗಿ ಲಕ್ಷಣಗಳಿರುವವರನ್ನು ಫಿವರ್ ಕ್ಲಿನಿಕ್‍ಗೆ ಕರೆ ತರಬೇತಕು. ಹಾಟ್‍ಸ್ಟಾಪ್ ಪ್ರದೇಶಗಳಲ್ಲಿ ಸೊಳ್ಳೆ ನಿವಾರಕಗಳನ್ನು ನೀಡಲು ಕ್ರಮ ವಹಿಸಬೇಕು. ಪ್ರತಿ ವಾರ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಬೇಕು. ನಗರ ಭಾಗದಲ್ಲಿ ಆಶಾ, ಅಂಗನವಾಡಿ ಕೊರತೆ ಇರುವ ಕಾರಣ ನರ್ಸಿಂಗ್ ವಿದ್ಯಾರ್ಥಿಗಳನ್ನು ನಿಯೋಜಿಸಬೇಕು ಎಂದರು.

ಮೆಡಿಕಲ್ ಕಾಲೇಜುಗಳ ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನ್ನು ಡೆಂಗಿ ಸಮಸ್ಯಾತ್ಮಕ ಗ್ರಾಮ/ವಾರ್ಡ್‍ಗಳಿಗೆ ವಿಸ್ತರಿಸುವಂತೆ ತಿಳಿಸಿದ ಅವರು ಡೆಂಗಿ ನಿಯಂತ್ರಣದಲ್ಲಿ ಸಹಕರಿಸಿದ ನರ್ಸಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಇತರೆ ಸ್ವಯಂ ಸೇವಕರಿಗೆ ದೃಢೀಕರಣ ಪತ್ರ ನೀಡುವಂತೆ ತಿಳಿಸಿದರು.

DC Shivamogga ಸಿಮ್ಸ್ ಕಾಲೇಜಿನ ಡಾ.ಪ್ರವೀಣ್ ಮಾತನಾಡಿ, ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಗಳು ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನಲ್ಲಿ ಗ್ರಾಮಗಳಲ್ಲಿ 3 ರಿಂದ 4 ಕುಟುಂಬಗಳನ್ನು ಅಡಾಪ್ಟ್ ಮಾಡಿಕೊಂಡಿದ್ದು, 2 ರಿಂದ 3 ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಶಿಬಿರಗಳನ್ನು ಮಾಡುತ್ತಿದ್ದಾರೆ. ಇಲ್ಲಿ ಡೆಂಗಿ ಕುರಿತು ಅರಿವು ಮೂಡಿಸಲಾಗುವುದು ಎಂದರು.

ಸುಬ್ಬಯ್ಯ ಮೆಡಿಕಲ್ ಕಾಲಜಿನ ಡಾ.ಬಾಲು ಮಾನತಾಡಿ ಮುಂದಿನ ವಾರದಿಂದ ಹಾರ್ನಹಳ್ಳಿಯಲ್ಲಿ ಫ್ಯಾಮಿಲಿ ಅಡಾಪ್ಶನ್ ಕಾರ್ಯಕ್ರಮದಡಿ ಡೆಂಗಿ ಅರಿವು ಮೂಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿಗಳು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಡೆಂಗಿ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಟಿಹೆಚ್‍ಓ ಮತ್ತು ವೈದ್ಯಾಧಿಕಾರಿಗಳು ತಾಲ್ಲೂಕುಗಳಲ್ಲಿ ಮೇಲ್ವಿಚಾರಣೆ ಕೈಗೊಳ್ಳಬೇಕು. ಪ್ರತಿವಾರ ಲಾರ್ವಾ ಸರ್ವೆ, ಫಾಗಿಂಗ್, ಜ್ವರ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪಾಲಿಕೆ ಸಿಎಓ ಮೋಹನ್ ಕುಮಾರ್, ಡಿಎಸ್‍ಓ ಡಾ.ಮಲ್ಲಪ್ಪ, ಡಾ.ಕಿರಣ್, ಡಾ.ಹರ್ಷವರ್ದನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಐಎಂಎ ಅಧ್ಯಕ್ಷ ಡಾ.ರಮೇಶ್, ಟಿಹೆಚ್‍ಓ ಗಳು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

Malnad Development Foundation ಕಾಲೇಜು ಹಂತದಲ್ಲಿನ ಸ್ನೇಹ,ಕ್ರೀಡೆ &‌ ಮಾನವೀಯ ಸಂಬಂಧಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ- ಡಾ.ಯತೀಶ್

0

Malnad Development Foundation ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ರಿ.) ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ, ಸಾಗರ
ಇದರ 2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ಬಿ.ಇಡಿ. ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಸಮಾರಂಭದ ಉದ್ಘಾಟಕರಾಗಿ ಶ್ರೀ ಡಾ.ಯತೀಶ ಆರ್, ಉಪವಿಭಾಗಾಧಿಕಾರಿಗಳು, ಸಾಗರಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ “ಕಾಲೇಜು ಹಂತದಲ್ಲಿ ಸ್ನೇಹಿತರಕೂಟ,ಕ್ರೀಡೆ, ಮಾನವಿಯ ಸಂಭಂಧಗಳು ಬೆಳಸಿಕೋಂಡಗ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತೆದೆ. ನನ್ನ ಶೈಕ್ಷಣಿಕಜೀವನದ ಮೇಲೆ ಪ್ರಭಾವ ಬೀರಿದ ಐದು ಜನ ಶಿಕ್ಷಕರ ವ್ಯಕ್ತಿತ್ವದ ಸ್ಮರಣೆಯೊಂದೆ ನನ್ನ ಜಿವನ ದಿಕ್ಕು ಬದಲಿಸಿತ್ತು ನಿವೊ ಜ್ಞಾನವಂತರಾದರೆ ಪ್ರಪಂಚದ ಮೂಲೆಮೂಲೆಗಳಲ್ಲೂ ಗೌರವಕ್ಕೆ ಪಾತ್ರರಾಗುವಿರಿ, ಸುಖ ಸಂತೋಷ ನಿಮ್ಮದಾಗಲ್ಲಿ ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದಬಿ.ಆರ್. ಜಯಂತರವರು ಯುವಜನತೆ ಮತ್ತುದೇಶದಅಭಿವೃದ್ಧಿಕುರಿತುಮಹಾತ್ಮಗಾಂಧಿಜಿಯವರ ಹೋರಾಟವನ್ನು ಉಲ್ಲೇಖಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿಅತಿ ಹೆಚ್ಚು ಅಂಕಗಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Malnad Development Foundation ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಂ. ಹರನಾಥರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ.ಡಿ.ಎಫ್.ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ಹೆಚ್.ಎಂ. ಶಿವಕುಮಾರ್, ಸಹಕಾರ್ಯದರ್ಶಿಗಳಾದ ಶ್ರೀ ಸತ್ಯನಾರಾಯಣ ಎಂ. ಆರ್. ಹಾಗೂ ಪ್ರಾಂಶುಪಾಲರಾದ ಡಾ. ಶಿಲ್ಪ ವಿ.ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೇಘ ಹೆಚ್.ಎಂ. ಮತ್ತು ವಿದ್ಯಾಈಶ್ವರ ನಾಯಕ್ ನಿರೂಪಿಸಿದರು. ಅಕ್ಷತಾ ಬಿ.ಎನ್.ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಬಿ.ಇಡಿ., ಪ್ರಶಿಕ್ಷಣಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

Government Women’s Residential Polytechnic Shimoga ಶಿವಮೊಗ್ಗ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ಅರೆಕಾಲಿಕ ಉಪನ್ಯಾಸಕರ ಹುದ್ಧೆಗೆ ಅರ್ಜಿ‌ ಆಹ್ವಾನ

0

Government Women’s Residential Polytechnic Shimoga ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಶಿವಮೊಗ್ಗದಲ್ಲಿ ಅರೆ ಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಬಿ.ಎಸ್ಸಿ. (B.Sc) ಮತ್ತು ಎಂ.ಎಸ್ಸಿ (M.Sc) ಫ್ಯಾಷನ್ ಟೆಕ್ನಾಲಜಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಪ್ರಾಂಶುಪಾಲರು, ಸರರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಶಿವಮೊಗ್ಗ ಇವರಿಂದ ಪಡೆದು, ಭರ್ತಿ ಮಾಡಿ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ:31/07/2024 ರೊಳಗಾಗಿ ಸಲ್ಲಿಸುವಂತೆ ಪ್ರಾಂಶುಪಾಲರು ತಿಳಿಸಿದ್ದಾರೆ.

Government Women’s Residential Polytechnic Shimoga ಹೆಚ್ಚಿನ ಮಾಹಿತಿಗಾಗಿ ವಿಭಾಗಾಧಿಕಾರಿಗಳು, ಎ.ಡಿ.ಎಫ್ ಟಿ ವಿಭಾಗ ಇವರ ಮೊ.ಸಂ.: 9448822570 / 9731781405, ಪ್ರಾಂಶುಪಾಲರು ರವಿ ನಾಯಾಕ ಡಿ. 7975155925 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

National Indian Military College Dehradun ಡೆಹ್ರಾಡೂನ್ ರಾಷ್ಟ್ರೀಯ ಮಿಲಿಟರಿ ಶಾಲೆಯ 8 ನೇ ತರಗತಿ ಪ್ರವೇಶಾತಿ ಪ್ರಕ್ರಿಯೆ

0

National Indian Military College, Dehradun ಜುಲೈ 2025 ನೇ ಸಾಲಿನ ಅಧಿವೇಶನಕ್ಕಾಗಿ ಡೆಹರಾಡೂನ್ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನಲ್ಲಿ 8ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ 11.5 ರಿಂದ 13 ವರ್ಷದೊಳಗಿರುವ ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಬಾಲಕ /ಬಾಲಕಿಯರಿಗೆ ಅರ್ಹತಾ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಿದೆ.

National Indian Military College, Dehradun ಬೆಂಗಳೂರು ಕೇಂದ್ರದಲ್ಲಿ ದಿ:01/12/2024ರಂದು ನಡೆಯುವ ಅರ್ಹತಾ ಪರೀಕ್ಷೆಗೆ ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ದಿ:30/09/2024 ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಇವರಿಗೆ ಸಲ್ಲಿಸುವಂತೆ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.:080-25589459 ಹಾಗೂ ಜಾಲತಾಣ; www.rimc.gov.in ನ್ನು ಸಂಪರ್ಕಿಸಬಹುದು.

Bharat Cinemas ಎಸ್ಕಲೇಟರ್ ನಿಂದ ಬಿದ್ದ ಮಹಿಳೆಯನ್ನ ರಕ್ಷಿಸಿದ ಬೆರ್ರೀಸ್ ಮಾಲ್ ಸಿಬ್ಬಂದಿಗೆ ಜನ ಮೆಚ್ಚುಗೆ

0

Bharat Cinemas ಇತ್ತೀಚಿಗೆ ಸಿಟಿ ಸೆಂಟರ್ ನ ಭಾರತ್ ಸಿನೆಮಾಸ್ ಕನ್ನಡ ಚಲನಚಿತ್ರ ವೀಕ್ಷಣೆಗೆ ಸ್ವಯಂಚಾಲಿತ ಯಂತ್ರ ಮೆಟ್ಟಿಲುಗಳಲ್ಲಿ ಸಾಗುತ್ತಿದ್ದ ಮಹಿಳೆಯೋರ್ವರು ಆಯ ತಪ್ಪಿ ಬಿದ್ದಾಗ ತಕ್ಷಣವೇ ಸ್ವಿಚ್ ಆಫ್ ಮಾಡಿ ಹೆಚ್ಚಿನ ಅನಾಹುತವನ್ನು ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ ಅಲ್ಲಿನ ಸಿಬ್ಬಂದಿ ಸುಮಾರವರನ್ನು ಸನ್ಮಾನಿಸುವುದರ ಮೂಲಕ ಕೃತಜ್ಞತೆ ವ್ಯಕ್ತಪಡಿಸಲಾಯಿತು.

ಎಸ್ಕ್ಯೂ ಲೇಟರ್ ನಲ್ಲಿ ಹತ್ತುವಾಗ ಇಳಿಯುವಾಗ ಬಹಳ ಜಾಗರೂಕರಾಗಿ ಇರುವುದು ಒಳ್ಳೆಯದು. ಪರಸ್ಪರ ಕೈ ಕೈ ಹಿಡಿದು, ಹೆಗಲ ಮೇಲೆ ಕೈ ಹಾಕಿಕೊಂಡು ತೆರಳುವುದು ಅನಾಹುತಕ್ಕೆ ಕಾರಣವಾಗಬಹುದು. ಒಂದು ವೇಳೆ ಬೀಳುವ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ತಮ್ಮ ಸೇವೆ ನಿರ್ವಹಿಸಲು ತತ್ ಕ್ಷಣ ಲಭ್ಯವಿಲ್ಲದಲ್ಲಿ ಅವಘಡದ ಪರಿಣಾಮ ಊಹಿಸಲೂ ಸಾಧ್ಯವಿಲ್ಲ.

Bharath Cinemas ಸಿಬ್ಬಂದಿ ಸುಮಾ ಮಾತನಾಡಿ, ಇದೇ ರೀತಿ ಆಗಾಗ್ಗೆ ಆಗುತ್ತಿರುತ್ತದೆ. ಆದರೆ ಈ ಇತ್ತೀಚಿಗೆ ನಡೆದ ಘಟನೆಯ ಸಂದರ್ಭದಲ್ಲಿ ಡ್ಯೂಟಿಯಲ್ಲಿ ನಾನಿದ್ದೆ. ಅಪಾಯದ ಅರಿವಿನ ಸೂಚನೆ ದೊರಕಿದ ಕೂಡಲೇ ಸ್ವಿಚ್ ಆಫ್ ಮಾಡಿದೆ. ದೊಡ್ಡ ಅಪಾಯ ಸಣ್ಣದರಲ್ಲಿ ಮುಗಿಯಿತು. ಹಾಗಾಗಿ ಎಲ್ಲರಿಗೂ ನಾನು ಹೇಳಬಯಸುವುದು ಇಂತಹ ಯಂತ್ರಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ನಮ್ಮ ಕರ್ತವ್ಯವನ್ನು ನಾವು ಮಾಡೇ ಮಾಡುತ್ತೇವೆ. ನಮ್ಮ ಕರ್ತವ್ಯವನ್ನು ಮೆಚ್ಚಿ ಗೌರವ ನೀಡಿದ್ದಾರೆ, ಅದಕ್ಕಾಗಿ ಶಾಂತಾ ಮೇಡಮ್ ರವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಾಂತಾ ಎಸ್ ಶೆಟ್ಟಿ ಹಾಗೂ ಶೋಭಸತೀಶ್, ಜಿ.ವಿಜಯಕುಮಾರ್, ಭದ್ರಾವತಿ ವಾಸು, ಕೆ.ಎಸ್.ಮಂಜುನಾಥ್, ತ್ರಿವೇಣಿ, ಸುಶೀಲ, ರವಿ, ಮಂಜುನಾಥ್, ಶಶಿಕಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Shivamogga Weather Forecast ಭಾರಿಮಳೆ, ಸಾಗರ, ಶಿಕಾರಿಪುರಗಳಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್

0

Shivamogga Weather Forecast ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ನದಿ ಮತ್ತು ಹಳ್ಳಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಸ್ ಪಿ ಮಿಥುನ್‌ಕುಮಾರ್ ನೆರೆಪೀಡಿತ ಪ್ರದೇಶಗಳಾದ ಶಿಕಾರಿಪುರದ ಅಂಜನಾಪುರ, ಕೊಟ್ಟ, ಕೊಡಸೂರು, ಸೊರಬದ ಅಂದವಳ್ಳಿ, ತಟ್ಟಿಗೆರೆ ಮತ್ತು ಸಾಗರದ ಸೈದೂರು, ಕೆಲವೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ನೆರೆ ಸಂಬಂಧ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದರು.

ನೆರೆ ಪೀಡಿತ ಪ್ರದೇಶಗಳಲ್ಲಿ ನದಿ ನೀರಿಗೆ ಇಳಿಯುವುದು, ಈಜಾಡುವುದು, ಅಪಾಯಕಾರಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದು, ಫೋಟೋ , ಸೆಲ್ಫಿ ತೆಗೆದುಕೊಳ್ಳುವುದು ಅಪಾಯಕಾರಿಯಾಗಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ವತಿಯಿಂದ ಬ್ಯಾರಿಕೇಡ್ ಗಳನ್ನು ಹಾಕಿ, ಫ್ಲೆಕ್ಸ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ, ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ.

Shivamogga Weather Forecast ಅಪಾಯದ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಲಾಗುತ್ತಿದೆ ಎಂದಿದ್ದಾರೆ.

ಸಾರ್ವಜನಿಕರು ಮತ್ತು ಹೊರ ಜಿಲ್ಲೆಯ ಪ್ರವಾಸಿಗರು ನೀರಿನ ಹರಿವು ಕಡಿಮೆಯಾಗುವವರೆಗೆ ಈ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಾರದು. ನೆರೆ ಸಂಬಂಧ ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ೧೧೨ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದಿದ್ದಾರೆ.

Vishveshvaraya Iron and Steel Plant ನಿಷೇಧಿತ ಮಾನ್ಯುಯಲ್ ಸ್ಕ್ಯಾವೆಂಜರ್ ವೃತ್ತಿ ಉತ್ತೇಜಿಸಿದರೆ ತೀವ್ರಕ್ರಮ- ಗುರುದತ್ತ ಹೆಗಡೆ

0

Vishveshvaraya Iron and Steel Plant ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆ ಹಾಗೂ ಕೆಲವು ಸ್ಥಳಗಳಲ್ಲಿ ಪೌರ ಕಾರ್ಮಿಕರನ್ನು ಬಳಸಿಕೊಂಡು ಮ್ಯಾನ್‌ಹೋಲ್ ಒಳಗಡೆ ಇಳಿದು ಕೆಲಸ ಮಾಡಿಸಿಕೊಳ್ಳುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ನಗರ ಯೋಜನಾ ಅಧಿಕಾರಿ ಅವರಿಗೆ ಸೂಚಿಸಿದರು.
ಅವರು ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ವೃತ್ತಿನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Vishveshvaraya Iron and Steel Plant ಮುಂದಿನ ದಿನಗಳಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ. ಭದ್ರಾವತಿಯ ಪೇಪರ್‌ಟೌನ್, ಹೊಸಮನೆ, ರಂಗಪ್ಪ ಸರ್ಕಲ್ ಮತ್ತು ಕೆಲವು ಪ್ರದೇಶಗಳ ನಿವಾಸಿಗಳು ಹಾಗೂ ನಗರದ ಕೆಲವು ಹೋಟೆಲ್ ಸೇರಿದಂತೆ ಕೆಲವು ವಾಣಿಜ್ಯ ಸಂಸ್ಥೆಗಳು ಮಲ-ಮೂತ್ರವನ್ನು ನೇರವಾಗಿ ಚರಂಡಿಗೆ ಬಿಟ್ಟು ವಾತಾವರಣ ಕಲುಷಿತ ಮಾಡುತ್ತಿರುವವರ ವಿರುದ್ಧ ಈಗಾಗಲೇ ಎಚ್ಚರಿಕೆಯ ನೋಟೀಸ್ ನೀಡುವಂತೆ ಸೂಚಿಸಲಾಗಿದೆ. ಮನೆಯ ಮಲಮೂತ್ರವನ್ನು ಚರಂಡಿಗೆ ಬಿಡದಂತೆ ನಿಯಂತ್ರಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಾಧ್ಯವಿರುವ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಭದ್ರಾವತಿ ನಗರಸಭೆಯ ಅಭಿಯಂತರರಿಗೆ ಸೂಚಿಸಿದರು.

Shringeri Sharadambe Devi ಇನ್ನುಮುಂದೆ ಶೃಂಗೇರಿ ಶಾರದೆ ದರ್ಶನಕ್ಕೆ ಹೋಗುವ ಭಕ್ತಾದಿಗಳು ವಸ್ತ್ರಸಂಹಿತೆ ಪಾಲಿಸಬೇಕು

0

Shringeri Sharadambe Devi ಇನ್ನುಮುಂದೆ ಶೃಂಗೇರಿ ಶಾರದೆ ದರ್ಶನಕ್ಕೆ ಹೋಗುವ ಭಕ್ತಾದಿಗಳು ವಸ್ತ್ರಸಂಹಿತೆ ಪಾಲಿಸಬೇಕು ಮಲೆನಾಡಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾ ಪೀಠಕ್ಕೆ ಆಗಮಿಸುವ ಭಕ್ತರು ಶ್ರೀಮಠದ ಗುರುಗಳ ದರ್ಶನಕ್ಕೆ ವಸ್ತ್ರ ಸಂಹಿತೆಯನ್ನುಆಗಸ್ಟ್ 15 ರಿಂದ ಭಾರತೀಯ ಸಂಪ್ರದಾಯದಂತೆ ವಸ್ತ್ರ ಧರಿಸಿ ಶ್ರೀಗಳ ದರ್ಶನ ಪಡೆಯಬೇಕು. ಪುರುಷರು ಧೋತಿ Shringeri Sharadambe Devi ಇನ್ನುಮುಂದೆ ಶೃಂಗೇರಿ ಶಾರದೆ ದರ್ಶನಕ್ಕೆ ಹೋಗುವ ಭಕ್ತಾದಿಗಳು ವಸ್ತ್ರಸಂಹಿತೆ ಪಾಲಿಸಬೇಕು ಮತ್ತು ಶಲ್ಯ ಹಾಗೂ ಉತ್ತರೀಯವನ್ನು ಧರಿಸಬೇಕು. ಮಹಿಳೆಯರು ಸೀರೆ, ರವಿಕೆ, ಸಲ್ವಾರ್ ಜತೆಗೆ ದುಪ್ಪಟ ಅಥವಾ ಲಂಗ ದಾವಣಿ ಧರಿಸಿ ಶ್ರೀಗಳ ದರ್ಶನ ಪಡೆಯಬಹುದಾಗಿದೆ.ಉಲ್ಲಂಘಿಸಿದ್ದಲ್ಲಿ ಹೊರಗಡೆಯಿಂದಲೇ ದರ್ಶನ ಮಾಡಬಹುದಾಗಿದೆ.

VISL Township of Bhadravati ಪೌರಕಾರ್ಮಿಕನನ್ನ ಮ್ಯಾನ್ ಹೋಲ್ ನಲ್ಲಿ ಇಳಿಸಿ ಕೆಲಸ, ವಿಐಎಸ್ಎಲ್ ಟೌನ್ ಶಿಪ್ ವಿರುದ್ಧ ಕ್ರಮಕ್ಕೆ ಒತ್ತಾಯ

0

VISL Township of Bhadravati ಭದ್ರಾವತಿಯ ವಿಐಎಸ್‍ಎಲ್ ಟೌನ್ ಶಿಪ್‍ನ ಯು.ಜಿ.ಡಿ. ಮ್ಯಾನ್‍ಹೋಲ್‍ನಲ್ಲಿ ಪೌರಕಾರ್ಮಿಕನನ್ನು ಇಳಿಸಿ ಪೌರಕಾರ್ಮಿಕರನ್ನು ಅಪಮಾನಗೊಳಿಸಿರುವ ಕಾಖಾನೆಯ ವಿಐಎಸ್‍ಎಲ್ ಟೌನ್‍ಶಿಪ್‍ನ ಡಿಜಿಎಂ ಮೋಹನ್ ಶೆಟ್ಟಿ ಹಾಗೂ ಸೂಪರ್ ವೈಸರ್ ಓಂಕಾರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭದ್ರಾವತಿ ಹಾಗೂ ಶಿವಮೊಗ್ಗದ ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ.

ಭದ್ರಾವತಿ ವಾರ್ಡ್ ನಂ. 26ರ ವಿಐಎಸ್‍ಎಲ್ ಟೌನ್‍ಶಿಪ್‍ನಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಬ್ರಮಣಿ ಬಿನ್ ಜಯರಾಮ್, ಕುಮಾರ ಜಿ. ಬಿನ್ ಗೋವಿಂದ, ಆರ್. ಮಹದೇವ ಬಿನ್ ರಾಮಯ್ಯ ಇವರುಗಳು ಮ್ಯಾನ್ ಹೋಲ್‍ನಲ್ಲಿ ಇಳಿದು ಸ್ವಚ್ಛಗೊಳಿಸುವಂತೆ ಡಿಜಿಎಂ ಮೋಹನ್ ಶೆಟ್ಟಿ ಹಾಗೂ ಸೂಪರ್‍ವೈಸರ್ ಓಂಕಾರಪ್ಪ ತಿಳಿಸಿದ್ದರಿಂದ ಈ ಅಮಾನವೀಯ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

VISL Township of Bhadravati ಮ್ಯಾನ್ ಹೋಲ್ ನಲ್ಲಿ ಯಾವುದೇ ಮಾನವ ಶಕ್ತಿಯನ್ನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಬಳಸಿಕೊಳ್ಳುವಂತಿಲ್ಲ ಎಂಬ ಆದೇಶವಿದ್ದರೂ ಅದನ್ನು ಧಿಕ್ಕರಿಸಿ ಈ ಇಬ್ಬರು ಅಧಿಕಾರಿಗಳು ದರ್ಪ ಮೆರೆದಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಪೌರಕಾರ್ಮಿಕರನ್ನು ಯುಜಿಡಿ ಮ್ಯಾನ್ ಹೋಲ್ ನಲ್ಲಿ ಇಳಿಸುವ ಮೂಲಕ ಇಡೀ ಪೌರಕಾರ್ಮಿಕ ಸಮುದಾಯಕ್ಕೇ ಅಪಮಾನವೆಸಗಿದ್ದಾರೆ.
ಕೂಡಲೇ ಪೌರಕಾರ್ಮಿಕ ವಿರೋಧಿಗಳಾದ ಈ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ, ಬಂಧಿಸಬೇಕು. ಅಪಮಾನಕ್ಕೊಳಗಾದ ಪೌರಕಾರ್ಮಿಕರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಭದ್ರಾವತಿ ಪೌರಾಯುಕ್ತರಿಂದ ನ್ಯೂಟೌನ್ ಪೊಲೀಣ್ ಠಾಣೆಗೆ ದೂರು ದಾಖಲಿಸುವಂತೆ ಪತ್ರ ಬರೆದಿದ್ದಾರೆ.