Wednesday, April 8, 2026
Wednesday, April 8, 2026
Home Blog Page 641

Guru Purnima ಗುರುವಿನ ಮಹಿಮೆಯ ಅರಿಯಿರಿ

0

ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

Guru Purnima “ಗುರುಬ್ರಹ್ಮ ಗುರುವಿಷ್ಣು ಗುರುದೇವೋ
ಮಹೇಶ್ವರ/
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ
ಶ್ರೀಗುರುವೇ ನಮಃ//

ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣ
ವಾಗಿದೆ.
ನಾವು ಯಾವುದೇ ಶ್ಲೋಕಗಳನ್ನು ಪಠಣಮಾಡಲು ಆರಂಭಿಸುವಾಗ ‘ಶ್ರೀಗುರುಭ್ಯೋನಮಃ ಹರಿಃ ಓಂ”
ಎಂದು ಭಕ್ತಿಯಿಂದ ಹೇಳುವುದನ್ನು ಕೇಳಿದ್ದೇವೆ.
ಗುರುವಿನ ಸ್ಥಾನ ಅಂತಹದು.
ಸಂಗೀತ ಪಿತಾಮಹ ಶ್ರೀಪುರಂದರದಾಸರು
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಬಣ್ಣಿಸಿದ್ದಾರೆ.
“ಗು” ಎಂದರೆ ನೆರಳು “ರು” ಎಂದರೆ ಚದುರಿಸುವುದು ಎಂದರ್ಥ.ಯಾರು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುತ್ತಾರೋ ಅವರೇ
ನಿಜವಾದ ಗುರುಗಳು.
ಶಿಷ್ಯರಿಗೆ ಕಲಿಸಿಕೊಡುವ ಗುರುಗಳು ಸಾಮಾನ್ಯವಾಗಿ ಶಿಷ್ಯರಿಗೆ ಸರಿಯಾದ ಮಾರ್ಗದರ್ಶಕರಾಗಿರುತ್ತಾರೆ.
ಗುರುಪೂರ್ಣಿಮೆಯ ದಿನ ನಮಗೆ ವಿದ್ಯೆಕಲಿಸಿದ
ಗುರುಗಳನ್ನು ಅಭಿವಂದಿಸುವ ದಿನವಾಗಿದೆ.
ಈಗೆಷ್ಟು ಕಲಿತಿದ್ದೇವೆ,ಮುಂದೆ ಏನು ಕಲಿಯಬೇಕು
ಮತ್ತು ಮುಂದಿನ ಜೀವನದ ದಾರಿಯನ್ನು ನಿರ್ಧಾರಮಾಡಿ ಅದರ ಬಗ್ಗೆ ಸಂಪೂರ್ಣ ಗಮನ
ವಿಡುವುದು ಈ ಶುಭ ದಿನದ ಉದ್ದೇಶ.
ತಂದೆಯು ಮಗನಿಗೆ ಜನ್ಮದಾತನಾದರೆ,ಗುರುಗಳು
ಆತನನ್ನು ಜನನ ಮರಣಗಳ ಸಂಕೋಲೆಯಿಂದ
ಮುಕ್ತ ಗೊಳಿಸಲು ಸಹಕರಿಸುತ್ತಾರೆ.ಪೂಜನೀಯ
ಸ್ಥಾನದಲ್ಲಿ ಗುರುಗಳನ್ನು ನೋಡಬೇಕು
ತಂದೆತಾಯಿಗಳ ನಂತರ ಪ್ರಮುಖ ಸ್ಥಾನ ನೀಡಿ
Guru Purnima ಆಚಾರ್ಯ ದೇವೋ ಭವ ಎಂದೇ ಗುರುಗಳನ್ನು ಪೂಜಿಸಿ,ಗೌರವಿಸುವ ಭವ್ಯ ಪರಂಪರೆ ನಮ್ಮದು.
ಪೂಜ್ಯ ವ್ಯಾಸ ಮಹರ್ಷಿಗಳು ಹಾಗೂ ಎಲ್ಲ ಗುರು ಪರಂಪರೆಯನ್ನೂ ವಂದಿಸಿ,ಗೌರವಿಸುವ ಗುರುಪೂರ್ಣಿಮಾ ಮಹಾ ಪರ್ವವನ್ನು ಆಷಾಢ
ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.
ಗುರು ಪೂರ್ಣಿಮೆಯು ಕೇವಲ ವೇದ ಪಾಠಶಾಲೆ
ಗಳಿಗೆ ಮಾತ್ರ ಸೀಮಿತವಾಗಿಲ್ಲ.ಹಿಂದೂಗಳು ಈದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ
ಜೈನ,ಬೌದ್ಧ ಧರ್ಮೀಯರು ಸಹ ಗುರುಪೂರ್ಣಿ
ಮೆಯನ್ನು ಆಚರಿಸುವುದು ರೂಢಿಯಲ್ಲಿದೆ.
ಸಿದ್ಧಾರ್ಥ ಗೌತಮ ಬುದ್ಧನಾಗಿ ಮೊದಲ ಧರ್ಮ ಪ್ರವಚನವನ್ನು ಮಾಡಿದಂತಹ ದಿನ ಗುರುಪೂರ್ಣಿಮೆ.ಇಂದು ಶ್ರೇಷ್ಠ ಗ್ರಂಥವಾದ ಮಹಾಭಾರತವನ್ನು ರಚಿಸಿದ ಶ್ರೀವೇದವ್ಯಾಸ ಗುರುಗಳ ಜನ್ಮದಿನವೂ ಆಗಿದೆ.ಹಾಗಾಗಿ ಈ ದಿನವನ್ನು ಶ್ರೀವ್ಯಾಸಪೂರ್ಣಿಮೆ ಎಂದೂ ಕರೆಯುತ್ತಾರೆ.
ಈ ದಿನ ಶಂಕರನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಉಪದೇಶಿಸಿ ಪ್ರಥಮ ಗುರು ಎಂದೆನಿಸಿಕೊಂಡ ದಿನ ಗುರು ಪೂರ್ಣಿಮ.
ಈ ದಿನ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ
ಗುರುವೃಂದಕ್ಕೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವೂ ನಡೆದುಬಂದಿರುತ್ತೆ.ಗುರುಗಳು ತಮ್ಮ ಶಿಷ್ಯರಿಗೆ ಸಹಾಯ ಮಾಡಿದ ಒಂದು ಪ್ರಸಂಗ ನೆನಪಿಗೆ ಬರುತ್ತೆ.ಒಮ್ಮೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ತನ್ನ ಪಿ.ಯು.ಸಿ ಪರೀಕ್ಷೆಗೆ ಹಣ ಕಟ್ಟಲು ಪರದಾಡುತ್ತಿದ್ದಾಗ ಅವನಿಗೆ
ಪಾಠ ಹೇಳಿಕೊಡುತ್ತಿದ್ದ ಗುರುಗಳು ಶಿಷ್ಯನಿಗೆ ಪರೀಕ್ಷೆಯ ಫೀಸನ್ನು ಕಟ್ಟಲು ತಾವೇ ಸಹಾಯ ಮಾಡುತ್ತಾರೆ.ಪರೀಕ್ಷೆಯ ಫಲಿತಾಂಶ ಹೊರಬಂದಾಗ ಆ ವಿದ್ಯಾರ್ಥಿ ಆ ಶಾಲೆಗೇ ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾನೆ.
ಇದನ್ನು ಕೇಳಿದ ಗುರುಗಳಿಗೆ ಬಹಳ ಸಂತೋಷವಾಗುತ್ತದೆ ಮತ್ತು ಆ ವಿದ್ಯಾರ್ಥಿ ಗುರುಗಳಿಗೆ ತನ್ನ ಕೃತಜ್ಞತೆಗಳನ್ನು ವ್ಯಕ್ತ ಪಡಿಸುತ್ತಾನೆ.ಹೀಗೆ ಗುರುಗಳು ಪಾಠ ಹೇಳಿಕೊಡುವುದು ಮಾತ್ರವಲ್ಲದೆ ಪರೀಕ್ಷೆಗೆ ಕೂಡಲು ಹಣದ ಸಹಾಯವನ್ನು ಸಹ ತಮ್ಮ ಕೈಯಲ್ಲಾಗುವ ಸಹಾಯವೆಂತ ಮಾಡುವ ಗುರುವೃಂದವೂ ಇದೆ..
ಇಂದು ಸೂಕ್ತ ಮಾರ್ಗದರ್ಶನದ ಕೊರತೆ ಕಂಡು ಬರುತ್ತಿದೆ.ಹಾಗಾಗಿ ಸತ್ಯ,ಧರ್ಮ ಮಾರ್ಗದಲ್ಲಿ ನಡೆ
ಯುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ.
ಸರಿಯಾದ ಮಾರ್ಗ ದರ್ಶನ ಸಿಕ್ಕು ಜನತೆ ಧರ್ಮ ಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು
ಮೈಗೂಡಿಸಿಕೊಂಡು ಸೌಹಾರ್ದತೆಯಿಂದ ಬಾಳಿದಾಗ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ.
ಈ ಬಾರಿ ಬಂದಿರುವ ಗುರುಪೂರ್ಣಿಮೆಯ
ಶುಭ ಸಂದರ್ಭದಲ್ಲಿ ಜಗತ್ತಿನ ಎಲ್ಲಾ ಗುರು ಶ್ರೇಷ್ಠರಿಗೂ ನಮ್ಮ ಅನಂತ ನಮಸ್ಕಾರಗಳನ್ನು
ಅರ್ಪಿಸೋಣ.


Pooja Khedkar ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಶೋಕಾಸ್ ನೋಟೀಸ್ ಜಾರಿ

0

Pooja Khedkar ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಎಫ್‌ಐಆರ್ ದಾಖಲು ಮಾಡಿದೆ. ಅಷ್ಟೇ ಅಲ್ಲ, ಪೂಜಾ ಖೇಡ್ಕರ್ ಅವರ ಐಎಎಸ್ ನೇಮಕಾತಿ ರದ್ದು ಮಾಡುವ ಹಾಗೂ ಮುಂದಿನ ದಿನಗಳಲ್ಲಿ ಅವರಿಗೆ ಯುಪಿಎಸ್‌ಸಿ ಪರೀಕ್ಷೆಗೆ ಅವಕಾಶ ನೀಡದೆ ಡಿಬಾರ್ ಮಾಡುವ ಕುರಿತಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಈ ಮೂಲಕ ಪೂಜಾ ಖೇಡ್ಕರ್‌ ಅವರ ಐಎಎಸ್ ಹುದ್ದೆಗೇ ಕಂಟಕ ಎದುರಾಗಿದೆ.
2022ರಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಪರ ಖೇಡ್ಕರ್, ಈ ಪರೀಕ್ಷೆಯಲ್ಲಿ ಆಯ್ಕೆಯಾಗಿ ಐಎಎಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಪೂರ್ಣಗೊಳಿಸಿ ಪ್ರೊಬೆಷನರಿ ಅಧಿಕಾರಿಯಾಗಿ ನಿಯುಕ್ತರಾಗಿದ್ದರು.

ಆದರೆ, ಅವರ ವಿರುದ್ಧ ಅಕ್ರಮ ದಾಖಲೆ ಸಲ್ಲಿಕೆ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿದ ಯುಪಿಎಸ್‌ಸಿ, ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಅಭ್ಯರ್ಥಿತನ ರದ್ದು ಮಾಡಲು ಮುಂದಾಗಿದೆ.

ಪೂಜಾ ಖೇಡ್ಕರ್ ಅವರು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಹಲವು ಅಕ್ರಮ ಮಾರ್ಗಗಳನ್ನು ಅನುಸರಿಸಿರೋದು ದೃಢಪಟ್ಟಿದೆ. ಅವರ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಫೋಟೋ, ಸಹಿ, ಇ ಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಮನೆ ವಿಳಾಸದ ನಕಲಿ ದಾಖಲೆ ನೀಡಿರೋದು ಸಾಬೀತಾಗಿದೆ.

ಅಷ್ಟೇ ಅಲ್ಲ, ನಿಗದಿತ ಮಿತಿಗಿಂತ ಹೆಚ್ಚು ಬಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿರೋದೂ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪೂಜಾ ಖೇಡ್ಕರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಯುಪಿಎಸ್‌ಸಿ, ಅವರ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಿದೆ.

2022ರಲ್ಲಿ ಆಯ್ಕೆಯಾದ ಅವರ ಅಭ್ಯರ್ಥಿತನವನ್ನು ರದ್ದು ಮಾಡುವ ಕುರಿತಾಗಿ ಶೋಕಾಸ್ ನೋಟಿಸ್ (ಕಾರಣ ಕೇಳಿ ನೋಟಿಸ್) ಕೂಡಾ ಜಾರಿ ಮಾಡಿದೆ. ಜೊತೆಯಲ್ಲೇ ಭವಿಷ್ಯದಲ್ಲಿ ಪೂಜಾ ಖೇಡ್ಕರ್ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳೋದಕ್ಕೆ, ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗಿಯಾಗೋದಕ್ಕೆ ನಿರ್ಬಂಧ ಹೇರೋದಕ್ಕೂ ತೀರ್ಮಾನಿಸಿದೆ.

Pooja Khedkar ಇದೇ ವೇಳೆ ಯುಪಿಎಸ್‌ಸಿ ತನ್ನ ಪರೀಕ್ಷಾ ನಿಯಮಗಳನ್ನು ಯಾವುದೇ ಕಾರಣಕ್ಕೂ ಸಡಿಲ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಎಲ್ಲ ರೀತಿಯ ಪ್ರಕ್ರಿಯೆಗಳನ್ನೂ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿದ್ದು, ಎಲ್ಲಿಯೂ ಲೋಪದೋಷಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಲೋಕಸೇವಾ ಆಯೋಗವು ತನ್ನ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಲು ಹಾಗೂ ನ್ಯಾಯಸಮ್ಮತ ಹಾಗೂ ಶಿಸ್ತಿನಿಂದ ಪರೀಕ್ಷಾ ನಿಯಮಗಳನ್ನ ಜಾರಿಗೆ ತಂದಿರೋದಾಗಿ ಹೇಳಿದೆ. ಸಾರ್ವಜನಿಕ ವಲಯದಲ್ಲಿ ತನ್ನ ಮೇಲೆ ಇರುವ ನಂಬಿಕೆ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಲು, ಎಲ್ಲಕ್ಕಿಂತಾ ಹೆಚ್ಚಾಗಿ ಅಭ್ಯರ್ಥಿಗಳ ವಿಶ್ವಾಸ ಗಳಿಸಲು ಬದ್ಧವಾಗಿದೆ ಎಂದು ಯುಪಿಎಸ್‌ಸಿ ಹೇಳಿದೆ.

ಇದಕ್ಕೂ ಮುನ್ನ ಜುಲೈ 18 ರಂದು ಮಹಾರಾಷ್ಟ್ರ ಸರ್ಕಾರದ ಪ್ರಧಾನ ಆಡಳಿತ ವಿಭಾಗವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿತಿನ್ ಗಡ್ರೆ ಅವರ ಸಾರಥ್ಯದಲ್ಲಿ ಸಮಗ್ರ ತನಿಖೆ ನಡೆಸಿ ಕೇಂದ್ರ ಸರ್ಕಾರದ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ವರದಿ ನೀಡಿತ್ತು. ಈ ವರದಿಯಲ್ಲಿ ಪೂಜಾ ಖೇಡ್ಕರ್ ವಿರುದ್ಧ ಹಲವು ರೀತಿಯ ಆರೋಪಗಳನ್ನ ಮಾಡಿತ್ತು.
ಈ ವರದಿಯನ್ನು ಕೇಂದ್ರ ಸರ್ಕಾರದ ಏಕ ಸದಸ್ಯ ಸಮಿತಿಗೆ ರವಾನೆ ಮಾಡಲಾಗಿತ್ತು. ಹೆಚ್ಚುವರಿ ಕಾರ್ಯದರ್ಶಿ ಮನೋಜ್ ದ್ವಿವೇದಿ ಅವರು ಈ ಕುರಿತಾಗಿ ತನಿಖೆ ನಡೆಸಿದರು.
ಪುಣೆ ಟ್ರೈನಿ ಐಎಎಸ್ ಅಧಿಕಾರಿಯ ಆಡಿ ಕಾರು ಜಪ್ತಿ
ಪೂಜಾ ಖೇಡ್ಕರ್‌ಗೆ ಮುಳುವಾಯ್ತು ಕೆಂಪು ದೀಪ!
ತಮ್ಮ ಐಷಾರಾಮಿ ಆಡಿ ಕಾರ್‌ಗೆ ಪೂಜಾ ಖೇಡ್ಕರ್ ಕೆಂಪು ದೀಪ ಅಳವಡಿಕೆ ಮಾಡಿಕೊಂಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಪೂಜಾ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಆಕೆಯ ವಿರುದ್ಧ ಹಲವು ಆರೋಪಗಳು ಒಂದೊಂದಾಗಿ ಬಹಿರಂಗ ಆಗತೊಡಗಿದವು. ಹಿರಿಯ ಐಎಎಸ್ ಅಧಿಕಾರಿಗಳ ಚೇಂಬರ್ ದುರ್ಬಳಕೆ, ನಕಲಿ ಕೋಟಾ ಅಡಿ ಮೀಸಲಾತಿಗೆ ಅರ್ಜಿ, ಹಲವು ಬಾರಿ ಪರೀಕ್ಷೆ ಎದುರಿಸಲು ನಕಲಿ ದಾಖಲೆ ನೀಡಿದ ಆರೋಪ ಸೇರಿದಂತೆ ಹಲವು ಆರೋಪಗಳು ಒಂದೊಂದಾಗಿ ಪೂಜಾ ಖೇಡ್ಕರ್ ವಿರುದ್ಧ ಸುತ್ತಿಕೊಂಡವು.

Thirtahalli Poultry farm ತೀರ್ಥಹಳ್ಳಿ ತಾಲ್ಲೂಕಿನ ನಂಟೂರಿನಲ್ಲಿ ಮಳೆಗೆ ಷೆಡ್ ಬಿದ್ದು 50 ಕೋಳಿ ಸಾವು

0

Thirtahalli Poultry farm ತೀರ್ಥಹಳ್ಳಿ ತಾಲೂಕು ನಂಟೂರು ಗ್ರಾಮದ ಶ್ರೀಕಾಂತ್ ಎಂಬುವವರ ಕೋಳಿ ಫಾರಂ ಮೇಲೆ ಮಳೆ ಗಾಳಿಗೆ ಬೃಹದಾಕಾರದ ಮರ ಬಿದ್ದಿದ್ದು ಸುಮಾರು 50 ಕೋಳಿಗಳು ಸತ್ತು ಹೋಗಿವೆ.

ಫಾರಂನ ಶೀಟ್‌ಗಳು ಜಖಂ ಆಗಿದ್ದು, ಈ ಮರ ತೆರವುಗೊಳಿಸುವ ಸಂದರ್ಭದಲ್ಲಿ ಇಬ್ಬರು ಶೆಡ್ ನಿಂದ ಕೆಳಗೆ ಬಿದ್ದು ತುಂಬಾ ಗಾಯಗಳಾಗಿವೆ.

ಇನ್ನೊಂದು ಘಟನೆಯಲ್ಲಿ ಆಗುಂಬೆ ಹೋಬಳಿ ಚಂಗಾರು ಗ್ರಾಮದ ಹುಂಚಿಕೊಪ್ಪದಲ್ಲಿ ಸುರೇಶ್ ಎಂಬುವರ ಮನೆ ಪಕ್ಕದಲ್ಲಿ ರಾತ್ರಿ 1:15 ರ ಸಮಯದಲ್ಲಿ ಬೃಹತ್ ತೆಂಗಿನಮರ ಧರೆಗುರುಳಿದ್ದು , ಜೊತೆಗೆ ಕರೆಂಟ್ ಕಂಬ ಕೂಡ ಬಿದ್ದಿದ್ದು ತಂತಿ ಕಟ್ ಆಗಿದೆ. ಇನ್ನೂ ತೆಂಗಿನ ಮರ ಸ್ವಲ್ಪ ಚದುರಿ ಬಿದ್ದಿದ್ದು ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.

ಮರ ಬಿದ್ದು ಅಪಾರ ಹಾನಿ:
ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ಕೀರ್ತಿನಗರದ ಮನೆಯೊಂದರ ಮೇಲೆ ಬೃಹದಾಕಾರದ ಮರದ ಕೊಂಬೆಯೊAದು ಬಿದ್ದಿದೆ.
ಹಳೆಯ ಜೈಲ್ ಕಾಂಪೌಡಿನಲ್ಲಿರುವ ಈ ಮರವನ್ನು ತೆರವುಗೊಳಿಸುವಂತೆ ಮನೆಯ ಮಾಲಿಕ ಹರೀಶ್ ಹಲವು ಬಾರಿ ಸಂಬಧಪಟ್ಟ ಇಲಾಖೆಗಳಿಗೆ ಮಾನವಿ ಮಾಡಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸಿಲ್ಲ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.

Thirtahalli Poultry farm ಮರದ ಕೊಂಬೆ ಮನೆಯಮೇಲೆ ಬಿದ್ದಿದೆ. ಅದೃಷ್ಟವಶಾತ್ ಮನೆಯ ಮುಂಭಾಗದಲ್ಲಿ ಕೊಂಬೆ ಬಿದ್ದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಹಳೆ ಜೈಲಿನ ಕಾಂಪೌಂಡ್ ಕೂಡ ಮನೆಯ ಕಡೆ ಬಾಗಿದೆ. ಈ ವಿಚಾರವಾಗಿಯೂ ಮನೆಯ ಮಾಲಿಕರು ಜಿಲ್ಲಾಡಳಿತ, ಅರಣ್ಯ ಇಲಾಖೆ, ಪಾಲಿಕೆ ಹಾಗೂ ಜೈಲಿನ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದರು.

Araga Jnanendra ನಾವು ಭ್ರಷ್ಟಾಚಾರ ನಡೆಸಿದ್ದರೆ ತನಿಖೆ ನಡೆಸಲಿ ಆರಗ ಜ್ಞಾನೇಂದ್ರರಿಂದ ಸರ್ಕಾರಕ್ಕೆ ಸವಾಲು

0

Araga Jnanendra ಭಾರಿ ಚರ್ಚೆಗೆ ಗ್ರಾಸವಾಗಿದ್ದ ತೀರ್ಥಹಳ್ಳಿಯ ಸರ್ಕಾರಿ ಕಟ್ಟಡ ಮತ್ತು ತಡೆಗೋಡೆ ಕುಸಿತದ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿ, ನಾನೊಬ್ಬ ಶಾಸಕ, ಮೇಸ್ತ್ರಿ ಅಲ್ಲ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬರಬಾರದು ಎಂದು. ಆದರೆ ಗುಡ್ಡವೇ ಕುಸಿದರೆ ಯಾರು ತಡೆಯಲು ಸಾಧ್ಯ. ಎಲ್ಲಾ ಕಟ್ಟಡ ಸುರಕ್ಷಿತವಾಗಿದೆ. ತಾಲೂಕು ಪಂಚಾಯಿತಿ ಕಟ್ಟಡ ಎಲೆಕ್ಟ್ರಿಕಲ್ ವಯರ್ ನಿರ್ಮಾಣದಲ್ಲಿ ಹೋಲ್ ಆಗಿ ಲೀಕೇಜ್ ಆಗಿದೆ. ಗುತ್ತಿಗೆದಾರರು ಇನ್ನೂ ಕಟ್ಟಡ ಬಳಕೆಗೆ ಹಸ್ತಾಂತರಿಸಿಲ್ಲ. ಕಟ್ಟಡ ಸರಿಪಡಿಸುವ ಭರವಸೆಯಿದೆ. ಆದರೆ ನಾನೇ ಕಟ್ಟಡವನ್ನು ಹಾಳು ಮಾಡಿದ ರೀತಿ ಆರೋಪಿಸಲಾಗುತ್ತಿದೆ ಎಂದು ಹೇಳಿದರು.

ತುಂಗಾ ಜಲಾಶಯದಲ್ಲಿ ಹೂಳು ತುಂಬಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಮೂರು ಇಲಾಖೆಯ ಅಧಿಕಾರಿಗಳು ಸೇರಿ ಹೂಳೆತ್ತಬೇಕಿದೆ. ಸರ್ಕಾರ ಯೋಚಿಸಿ ಹೂಳೆತ್ತಬೇಕಿದೆ. ಹೂಳೆತ್ತದಿದ್ದರೆ ನೀರು ಬಳಕೆಯಾಗುವುದಿಲ್ಲ ಎಂದರಲ್ಲದೆ, ನನ್ನ ಕ್ಷೇತ್ರದ ತುಂಗ ತಾಯಿಗೆ ಬಾಗಿನ ಅರ್ಪಿಸಲಾಗಿದೆ. ಜೀವನದಿ ಹೀಗೆ ಹರಿಯಲಿ, ನಾಡು ಸಂಮೃದ್ಧಿಯಾಗಲಿ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಬಿಜೆಪಿ ಕಾಲದ ಭ್ರಷ್ಠಚಾರದ ತನಿಖೆ ಮಾಡುವುದಾಗಿ ಆಡಳಿತ ಪಕ್ಷದ ನಾಯಕರು ಹೇಳಿಕೆ ನೀಡುತ್ತಿದ್ದಾರೆ.ನೀನು ಕಳ್ಳ ಎಂದರೆ ಅಲ್ಲ ನೀನು ಕಳ್ಳ ಎಂಬ ರೀತಿ ವರ್ತಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಠಾಚಾರದಲ್ಲಿ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಕಿಸಿಲ್ಲ ಎಂದು ಸಿಎಂ ಹೇಳುತ್ತಾರೆ.

Araga Jnanendra ಮೃತ ಚಂದ್ರಶೇಖರ್ ಪತ್ನಿಯಿಂದ ಮೂರು ಸ್ಟೇಟ್ ಮೆಂಟ್ ಪಡೆದು ಆರೋಪಿಗಳು ಸೇರಿ ಕೃತ್ಯ ನಡೆಸಿದ್ದಾರೆ ಎಂದರೂ ಹೆಸರು ಉಲ್ಲೇಖಿಸಲಿಲ್ಲ ಎಂದರು.
ಡಿವೈಎಸ್ಪಿ ಮೂಲಕ ಮತ್ತೊಂದು ಹೇಳಿಕೆ ಪಡೆದುಕೊಳ್ಳಲಾಗಿದೆ. ಆದರೂ ಆರೋಪಿ ಸ್ಥಾನದಲ್ಲಿ ಸಚಿವರ ಹೆಸರು ಉಲ್ಲೇಖಿಸಿದರೂ ದಾಖಲಾಗಿಲ್ಲ. ಸಚಿವರ ಆರೋಪಿಗಳ ಹೆಸರು ಇದೆ. ಆದರೆ ಮುಚ್ಚಿಹಾಕುವ ಕೆಲಸ ನಡೆಸಲಾಗುತ್ತಿದೆ. ವಾಲ್ಮೀಕಿ ಹಗರಣದ ಹಣ ತೆಲಂಗಾಣದ ಚುನಾವಣೆಯಲ್ಲಿ ಬಳಕೆಯಾಗಿರುವುದು ಸ್ಪಷ್ಟವಾಗುತ್ತಿದೆ. ಇದನ್ನ ಇಡಿ ಉಲ್ಲೇಖಿಸಿದೆ. ವಿಧಾನ ಸಭೆಯಲ್ಲಿ ಡೆತ್ ನೋಟ್‌ನ್ನು ಸಿಎಂ ಪೂರ್ಣ ಓದಿಲ್ಲ. ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಮಯದಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ.

ನಾವು ಭ್ರಷ್ಠಾಚಾರ ನಡೆಸಿದ್ದರೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ನನ್ನ ಕ್ಷೇತ್ರದಲ್ಲಿ ಬರುವ ತುಂಗ ನದಿ ಜಲಾಶಯಕ್ಕೆ ಇಂದು ಬಾಗಿನ ಅರ್ಪಿಸಲಾಗಿದೆ. ಜೀವನದಿ ತುಂಗೆ ಭರ್ತಿಯಾದರೂ, ತೀರ್ಥಹಳ್ಳಿಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಆಗಿದೆ. ಮಳೆ ಇನ್ನೂ ಮಳೆ ಆಗಬೇಕಿದೆ ಎಂದರು.

Karnataka Government ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ

0

Karnataka Government ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು ಯುವಕರ ಆಶಾಕಿರಣ, ಅಹಿಂದ ನಾಯಕ ಬೈರತಿ ಸುರೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಶನಿವಾರ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ “ರಕ್ತದಾನ ಶಿಬಿರ”ವನ್ನು ನಗರದ ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಹಮ್ಮಿಕೊಳ್ಳಲಾಗಿತ್ತು.

ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಸದಸ್ಯರು ರಕ್ತದಾನ ಮಾಡಿದರು.

Karnataka Government ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರಿಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ಗ್ಯಾರೆಂಟಿ ಪ್ರಾಧಿಕಾರ ಅನುಷ್ಠಾನದ ಸದಸ್ಯರುಗಳಾದ ಎಮ್ ರಾಹುಲ್, ಎಸ್ ಕುಮರೇಶ್, ಬಸವರಾಜ್ ಯುವ ಕಾಂಗ್ರೆಸ್ ನ ರಾಜ್ಯ ಪದಾಧಿಕಾರಿಗಳಾದ ಆರ್ ಕಿರಣ್, ಟಿ ವಿ ರಂಜಿತ್ ಜಿಲ್ಲಾ ಯುವ ಕಾಂಗ್ರೆಸ್ನ ಪದಾಧಿಕಾರಿಗಳಾದ ನದೀಮ್, ಎಂ ರಾಕೇಶ್, ಪವನ್, ಗುರುಪ್ರಸಾದ್, ಎನ್ಹೊಶ್, ಆರ್‌ಎಂ ಓಂ,ಭರತ್, ಕಾರ್ತಿಕ್, ಭವಿತ್, ವಿಠಲ್, ವಸಂತ ಬೊಮ್ಮನಕಟ್ಟೆ, ರಾಜೇಶ್ ಮಂದಾರ, ಮಾಲ್ತೇಶ್ ಬೊಮ್ಮನಕಟ್ಟೆ, ಮಾಲ್ತೇಶ್ ದೊಡ್ಡಪ್ಪ ಆಕಾಶ್ ,ಹಾಗೂ ಯುವ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು.

Madhu Bangarappa ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜಿಲ್ಲಾ ಪ್ರವಾಸದ ಮಾಹಿತಿ

0

Madhu Bangarappa ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜುಲೈ 20 ಮತ್ತು 21 ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಜು.20 ರಂದು ಸಂಜೆ 5.00ಕ್ಕೆ ಸೊರಬಕ್ಕೆ ಆಗಮಿಸಲಿರುವ ಸಚಿವರು ಕಡಸೂರು, ವರದಾ ನದಿ ಚೋಳದಗುಡ್ಡೆ ಮತ್ತು ಬಂಕಸಾಣ ಹೊಳೆ ಹತ್ತಿರ ಪ್ರವಾಹ ವೀಕ್ಷಣೆ ಮಾಡುವರು. ರಾ. 9.00ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.ಜು. 21 ರಂದು ಬೆ.9.00ಕ್ಕೆ ತಾಳಗುಪ್ಪ ಹೋ., ಹಿರೇನೆಲ್ಲೂರು ಗ್ರಾಮದ ಮುಳಗಡೆ ಪ್ರದೇಶಕ್ಕೆ ಭೇಟಿ, ಬೆ. 9.50ಕ್ಕೆ ಸೈದೂರು ಕನ್ನಹೊಳೆ ಮುಳುಗಡೆ Madhu Bangarappa ಪ್ರದೇಶದ ವೀಕ್ಷಣೆ, ಬೆ.10.30ಕ್ಕೆ ಮಂಡಗಳಲೆ ಕಾಳಜಿ ಕೇಂದ್ರಕ್ಕೆ ಭೇಟಿ, ಬೆ.11.15ಕ್ಕೆ ಸಾಗರ ನಗರದಲ್ಲಿ ಮಳೆಯಿಂದ ಹಾನಿಯಾದ ಮನೆ ವೀಕ್ಷಣೆ, ಮ.12.20ಕ್ಕೆ ಮಾರುತಿಪುರ ಗ್ರಾಮದಲ್ಲಿ ಎನ್.ಹೆಚ್-766ಸಿ ರಸ್ತೆ ಹಾನಿ ವೀಕ್ಷಣೆ, ಮ.1.20ಕ್ಕೆ ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಹಾಗೂ ಪತ್ರಿಕಾ ಗೋಷ್ಠಿ ನಡೆಸಲಿರುವರು. ಮ. 3.30ಕ್ಕೆ ತೀರ್ಥಹಳ್ಳಿ ತಾಲುಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾದ ಪ್ರವೇಶ ವೀಕ್ಷಸಲಿದ್ದಾರೆ. ಸಂ. 5.00ಕ್ಕೆ ತೀರ್ಥಹಳ್ಳಿಯಿಂದ ರಸ್ತೆ ಮುಖಾಂತರ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.,

Shine Institute ಜುಲೈ 28 ರಂದು ಶಿವಮೊಗ್ಗದಲ್ಲಿ ಮಹಾನಟ- ನಟಿ ಸ್ಪರ್ಧೆ

0

Shine Institute ಪ್ರತಿಭೆಗಳನ್ನು ಹೊರತೆಗೆದು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅವಕಾಶ ಕಲ್ಪಿಸುವ ಹಿನ್ನಲೆಯಲ್ಲಿ ಶೈನ್ ಕ್ರಿಯೇಟಿವ್ ಗ್ರೂಪ್ ಸಂಸ್ಥೆ ವತಿಯಿಂದ ಜು.೨೮ರಂದು ಬೆಳಿಗ್ಗೆ ೧೦ರಿಂದ ಸಂಜೆ ೬ರವರೆಗೆ ಕೋಟೆ ರಸ್ತೆಯ ಶ್ರೀಕೋಟೆ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಮಲೆನಾಡಿನ ಮಹಾನಟಿ-ಮಹಾನಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಶೈನ್ ಸಂಸ್ಥೆಯ ಮುಖ್ಯಸ್ಥೆ ಶೃತಿ ಶೇಟ್ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಪ್ರತಿಯೊಬ್ಬರಲ್ಲೂ ಪ್ರತಿಭೆಯಿರುತ್ತದೆ. ಆದರೆ ಹಲವು ಕಾರಣಗಳಿಂದ ಅದು ಹೊರಜಗತ್ತಿಗೆ ಬರಲು ಆಗಿರುವುದಿಲ್ಲ. ಈ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯೂ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ೬ರಿಂದ ೬೦ ವರ್ಷದೊಳಗಿನ ಮಕ್ಕಳು, ವಯಸ್ಕರು, ಮಹಿಳೆಯರು ಮತ್ತು ಪುರುಷರು ಭಾಗವಹಿಸಬಹುದಾಗಿದೆ ಎಂದರು.
Shine Institute ಪ್ರತಿಸ್ಪರ್ಧಿಗೂ ೫ ನಿಮಿಷಗಳ ಕಾಲ ಅವಕಾಶ ನೀಡಲಾಗುವುದು. ಹೆಸರು ನೋಂದಾಯಿಸಲು ಜು.೨೬ ಕೊನೆಯ ದಿನವಾಗಿದೆ. ಭಾಗವಹಿಸುವರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.೨೫೦ ರೂ. ಶುಲ್ಕ ವಿಧಿಸಲಾಗಿದೆ. ಆದರೆ ಬಡ ಮಕ್ಕಳಿಗೆ ಸರ್ಕಾರಿ ಶಾಲೆಯ ಮಕ್ಕಳು ಶುಲ್ಕ ನೀಡಬೇಕಾಗಿಲ್ಲ ಎಂದರು. ಇದರಲ್ಲಿ ಆಯ್ಕೆಯಾದವರಿಗೆ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಸಿಗಬಹುದಾಗಿದೆ. ಸಿಗುವ ನಿಟ್ಟಿನಲ್ಲಿ ನಮ್ಮ ಶೈನ್ ಸಂಸ್ಥೆ ಸಹಕರಿಸುತ್ತದೆ. ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರತಿಭಾವಂತರು ತಮ್ಮ ಮುಂದಿನ ಬೆಳವಣಿಗೆಗೆ ಈ ಸ್ಪರ್ಧೆ ಅನುಕೂಲವಾಗಲಿದೆ ಎಂದರು.ಹೆಚ್ಚಿನ ವಿವರಕ್ಕೆ ೯೮೪೫೯೫೮೩೧೩, ೯೯೮೬೫೦೬೧೬, ೭೨೫೯೫೭೨೨೩೨ನ್ನು ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪರಮೇಶ್ವರ್, ಅಶ್ವಿನಿ ಗೌಡ ಇದ್ದರು.

Karnataka Examination Authority ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ವಿಳಂಬಅಭ್ಯರ್ಥಿಗಳಿಂದ ಸತ್ಯಾಗ್ರಹ

0

Karnataka Examination Authority ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ 11 ತಿಂಗಳು ಕಳೆದರೂ ನೇಮಕಾತಿ ಆದೇಶ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಅಭ್ಯರ್ಥಿಗಳು ಅನಿರ್ಧಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ಇಂದಿನಿಂದ (ಜುಲೈ 19, 2024) ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಸತ್ಯಾಗ್ರಹ ಆರಂಭವಾಗಿದ್ದು, ‘ನೇಮಕಾತಿ ಆದೇಶಗಳು, ನೇಮಕಾತಿ ಪತ್ರಗಳು ಮತ್ತು ಸಹಾಯಕ ಪ್ರಾಧ್ಯಾಪಕರ ಕೌನ್ಸೆಲಿಂಗ್ ವೇಳಾಪಟ್ಟಿಯ ಗೆಜೆಟ್ ಹೊರಡಿಸುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾದ್ಯಾಪಕರಾಗಿ 26 ವಿಷಯಗಳ 1242 ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿದ್ದು, ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯ ನಂತರ 1208 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು 02-02-2023ರಂದು ಕೆಇಎ ಪ್ರಕಟಿಸಿದೆ.

Karnataka Examination Authority ಈ ಅಂತಿಮ ಆಯ್ಕೆಪಟ್ಟಿಯನ್ನು ರಾಜ್ಯ ಸರ್ಕಾರವು ತನ್ನ ರಾಜ್ಯ ಪತ್ರದಲ್ಲಿ ದಿನಾಂಕ:03-11-2023 ರಂದು ಪ್ರಕಟಿಸಿದೆ. ಅದರಂತೆ 1208 ಅಭ್ಯರ್ಥಿಗಳಲ್ಲಿ 1000 ಕ್ಕಿಂತ ಹೆಚ್ಚು ಅಭ್ಯರ್ಥಿಗಳ ಎಲ್ಲ ರೀತಿಯ ನೈಜ ಪರೀಶೀಲನೆ ಮುಕ್ತಾಯವಾಗಿದ್ದು ಇಲಾಖೆಗೆ ಸಲ್ಲಿಕೆಯಾಗಿದೆ. ಅಂತಿಮ ಆಯ್ಕೆಪಟ್ಟಿ ಪ್ರಕಟವಾಗಿ 11 ತಿಂಗಳಾದರೂ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸರ್ಕಾರವು ನೇಮಕಾತಿ ಆದೇಶ ನೀಡುವಲ್ಲಿ ವಿಳಂಬ ಮಾಡಿದೆ.
ಆಯ್ಕೆಯಾಗಿರುವ ಬಹುತೇಕ ಅಭ್ಯರ್ಥಿಗಳು ಗ್ರಾಮೀಣ ಭಾಗದ ಬಡವರ್ಗದ ನಿರುದ್ಯೋಗಿಗಳಾಗಿದ್ದು, ನೇಮಕಾತಿ ಆದೇಶ ನೀಡುವಲ್ಲಿ ವಿಳಂಬವಾಗಿರುವುದರಿಂದಾಗಿ, ನಾವು ಯಾವುದೇ ಕೆಲಸವಿಲ್ಲದೇ ಮಾನಸಿಕವಾಗಿ ಕುಗ್ಗಿಹೋಗಿದ್ದೇವೆ ಎಂದು ಅಭ್ಯರ್ಥಿಗಳು ಅಸಹಾಯಕತೆ ಹೊರಹಾಕಿದ್ದಾರೆ.
ಇದೀಗ, ನೇಮಕಾತಿ ಆದೇಶ ನೀಡುವಂತೆ ಆಯ್ಕೆಯಾಗಿರುವ ಸಹಾಯಕ ಪ್ರಾಧ್ಯಾಪಕರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ, ಅಹಿಂಸಾತ್ಮಕ ಸತ್ಯಾಗ್ರಹ ಆರಂಭಿಸಿದ್ದಾರೆ. ಆ ಮೂಲಕ, ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

DC Laxmipriya ನದಿಯಲ್ಲೇ ತೇಲುತ್ತಿರುವ ಟ್ಯಾಂಕರ್. ನೀರಿನಲ್ಲೇ ಅನಿಲ ಸೇರಿಸುವ ಪ್ರಕ್ರಿಯೆ – ಕಾರವಾರ ಡೀಸಿ ಲಕ್ಷ್ಮೀಪ್ರಿಯಾ

0

DC Laxmipriya ಅಂಕೋಲಾ ಸಮೀಪದ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತದ ವೇಳೆ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್‌ನಿಂದ ನದಿಯಲ್ಲೇ ಅಡುಗೆ ಅನಿಲ ಖಾಲಿ ಮಾಡಲು ನಿರ್ಧರಿಸಲಾಗಿದೆ. 19 ಲಕ್ಷ ರೂ. ಮೌಲ್ಯದ ಅಡುಗೆ ಅನಿಲ ನೀರು ಪಾಲಾಗಲಿದೆ
ಸುಮಾರು 30 ಟನ್‌ ಅನಿಲ ಹೊಂದಿರುವ ಈ ಟ್ಯಾಂಕರ್‌ ದುರಂತ ಸ್ಥಳದಿಂದ 7 ಕಿ.ಮೀ. ದೂರದ ಸಗಡಗೇರಿ ಗ್ರಾಮದ ಬಳಿ ನದಿಯಲ್ಲಿ ತೇಲುತ್ತಿದೆ. ಗುರುವಾರವೇ ಟ್ಯಾಂಕರ್‌ನಿಂದ ಅನಿಲವನ್ನು ವೈಜ್ಞಾನಿಕವಾಗಿ ನೀರಿಗೆ ಸೇರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.
DC Laxmipriya ಮಂಗಳೂರಿನಿಂದ ಆಗಮಿಸಿರುವ ಎಂಆರ್‌ಪಿಎಲ್‌ ಹಾಗೂ ಎಚ್‌ಪಿಸಿಎಲ್‌ನ ತಜ್ಞರು, ನದಿಯಿಂದ ಟ್ಯಾಂಕರ್‌ ತೆರವುಗೊಳಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಆರಂಭದಲ್ಲಿ ನದಿಯಲ್ಲೇ ಅನಿಲವನ್ನು ವಿಲೀನ ಮಾಡಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸದಿದ್ದರೂ ಟ್ಯಾಂಕರನ್ನು ಬದಿಗೆ ತಂದು ಖಾಲಿ ಮಾಡುವುದು ಅಪಾಯಕಾರಿ ಎಂದು ತಜ್ಞರ ತಂಡ ಮನವರಿಕೆ ಮಾಡಿಕೊಟ್ಟ ಬಳಿಕ ಇದಕ್ಕೆ ಅನುಮತಿ ನೀಡಲಾಗಿದೆ.
ಈ ನಡುವೆ ಬುಧವಾರ ಎನ್‌ಡಿಆರ್‌ಎಫ್‌ ತಂಡದವರು ಟ್ಯಾಂಕರ್‌ ಮತ್ತಷ್ಟು ತೇಲಿ ಹೋಗದಂತೆ ಹಗ್ಗ ಹಾಕಿ ಕಟ್ಟಿದ್ದಾರೆ.

Shatabdi Train ಬಸ್ ಚಾಲಕ ಶತಾಬ್ದಿ ರೈಲಿಗೆ ಸಿಕ್ಕು ದುರ್ಮರಣ

0

Shatabdi Train ಜನಶತಾಬ್ದಿ ರೈಲಿಗೆ ಸಿಲುಕಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಲವಗೊಪ್ಪದ ರೈಲ್ವೆ ಟ್ರ‍್ಯಾಕ್ ಬಳಿ ಸಂಭವಿಸಿದೆ.
೧೨೦೯೦ ಕ್ರಮ ಸಂಖ್ಯೆಯ ಜನಶತಾಬ್ದಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ಗುರುವಾರ ಮುಂಜಾನೆ ಬೆಳಿಗ್ಗೆ ೫-೧೫ ಕ್ಕೆ ಬಿಟ್ಟು ಮಲವಗೊಪ್ಪದ ಬಳಿ ಬಂದಾಗ ಬಸ್ ಚಾಲಕ ರೈಲಿಗೆ ಸಿಲುಕಿ ಸಾವು ಕಂಡಿದ್ದಾನೆ.
Shatabdi Train ಚಾಲಕನ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಸಾವುಕಂಡಿದ್ದಾನೋ ಗೊತ್ತಾಗಬೇಕಿದೆ. ಮೃತÀ ಕೆಎಸ್ ಆರ್ ಟಿಸಿ ಚಾಲಕನನ್ನು ಗಣೇಶ್ ವಿ ಎಂದು ಗುರುತಿಸಲಾಗಿದೆ.
ಗಣೇಶ್ ವಿ (೪೦) ಭದ್ರಾವತಿ ಡಿಪೋದ ಚಾಲಕನಾಗಿದ್ದು ಕಳೆದ ಮೂರು ವರ್ಷದ ಹಿಂದೆ ಸಂಸ್ಥೆಗೆ ಚಾಲಕನಾಗಿ ಸೇರ್ಪಡೆಗೊಂಡಿದ್ದರು. ಇವರ ತಂದೆಯೂ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದು ಇವರ ಅಕಾಲಿಕ ಮರಣದಿಂದ ಗಣೇಶ್ ಗೆ ಕೆಲಸ ಲಭಿಸಿತ್ತು. ಗಣೇಶ್ ಶಿವಮೊಗ್ಗದ ಹರಕೆರೆ ನಿವಾಸಿಯಾಗಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.