Wednesday, April 8, 2026
Wednesday, April 8, 2026
Home Blog Page 640

Rotary Shivamogga ಪೋಷಕರ ನಡೆವಳಿಕೆ& ಜೀವನ ಶೈಲಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ- ಡಾ.ವಿದ್ಯಾ ರಘುದತ್

0

Rotary Shivamogga ಪೋಷಕರು ನಡೆದುಕೊಳ್ಳುವ ರೀತಿ ಹಾಗೂ ಜೀವನಶೈಲಿಯು ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಮಾನಸ ನರ್ಸಿಂಗ್ ಹೋಂ ಹಿರಿಯ ಸಲಹೆಗಾರ್ತಿ ಡಾ. ವಿದ್ಯಾ ರಘುದತ್ ಜವಳಿ ಹೇಳಿದರು.

ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಪೋಷಕರ ಪ್ರಭಾವ ಕುರಿತು ಮಾತನಾಡಿ, ಮಕ್ಕಳು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಹೊರಗಿನ ಪ್ರಪಂಚ ಹಾಗೂ ತಾಯಿಯ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಬೆಳೆದು ನಂತರ ಮೂರನೇ ಒಂದು ಭಾಗದಷ್ಟು ಅನುವಂಶೀಯ ನಡೆ ನಡಾವಳಿ ಹಾಗೂ ಮೂರನೇ ಒಂದು ಭಾಗದಷ್ಟು ಪೋಷಕರ ನಡೆ ನುಡಿಗಳು ಹಾಗೂ ಮಕ್ಕಳ ಅಂದಿನ ಒಡನಾಟ ಮತ್ತು ಸಂಬಂಧಗಳ ಬಗ್ಗೆ ಪೂರಕವಾಗಿ ವಿಕಸಿತ ಹೊಂದುತ್ತವೆ ಎಂದು ತಿಳಿಸಿದರು.

ಸುತ್ತಮುತ್ತಲ ಪರಿಸರ, ಜ್ಞಾನ, ಗೆಳೆಯರು ಹಾಗೂ ನೆರಯವರಿಯವರಿಂದ ಇನ್ನುಳಿದ ಮೂರನೇ ಒಂದು ಭಾಗದಷ್ಟು ವಿಕಸಿತ ಮನಸ್ಥಿತಿ ಹೊಂದುತ್ತಾರೆ. ಜೀವನದ ವಿವಿಧ ಸ್ತರಗಳಲ್ಲಿ ವಿವಿಧ ರೀತಿಯ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂಪೂರ್ಣ ಮಾನಸಿಕ ಹಾಗೂ ದೈಹಿಕ ಅಭಿವೃದ್ಧಿ ಸಾಧ್ಯ ಎಂದರು.

ಉತ್ತಮ ಪರಿಸರ ಮಕ್ಕಳ ಉತ್ತಮ ಮನಸ್ಥಿತಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಉತ್ತಮ ನಡವಳಿಕೆಗೆ ದಾರಿ ಮಾಡಿಕೊಡುತ್ತದೆ. ಕಾಲಕ್ಕೆ ತಕ್ಕಂತೆ ಬದಲಾದ ತಂತ್ರಜ್ಞಾನಗಳು ಮಕ್ಕಳ ದಿನಚರಿ ಬದಲಿಸಿ ಪೋಷಕರೊಂದಿಗೆ ಒಡನಾಟಗಳು ಕಡಿಮೆಯಾಗಿ ಮಾನಸಿಕ ಅಸ್ವಸ್ಥತೆ ಉಂಟಾಗುತ್ತಿದ್ದು, ಅವರನ್ನು ಉತ್ತಮ ದಾರಿಗೆ ತರಲು ಪೋಷಕರ ಜವಾಬ್ದಾರಿ ಹೆಚ್ಚು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಅತಿಯಾದ ಮುದ್ದಿನಿಂದ ಮಕ್ಕಳು ನಿಜವಾದ ಜೀವನದ ಕಷ್ಟ ಸುಖಗಳನ್ನ ತಿಳಿದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಪೋಷಕರು ಮಕ್ಕಳಿಗೆ ಸ್ವತಂತ್ರ ಜೀವನ ನಡೆಸುವುದನ್ನು ಕಲಿಸಲು ವಿಫಲರಾಗಿದ್ದಾರೆ. ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಮಾನಸಿಕತೆಯನ್ನು ಬೆಳೆಸುವಲ್ಲಿ ವಿಫಲರಾಗಿ ಮಕ್ಕಳಲ್ಲಿ ಖಿನ್ನತೆ ಆತ್ಮಹತ್ಯೆಯಂತಹ ಮಾನಸಿಕತೆಗಳು ಹೆಚ್ಚುತ್ತಿರುವುದು ಇದಕ್ಕೆ ನಿದರ್ಶನ ಎಂದು ತಿಳಿಸಿದರು.

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಕಿಶೋರ್ ಕುಮಾರ್, ವಸಂತ ಹೋಬಳಿದಾರ್, ಮಂಜುನಾಥ ರಾವ್ ಕದಂ ಮತ್ತಿತರರು ಉಪಸ್ಥಿತರಿದ್ದರು.

Holehonur Nripatunga circle ಹೊಳೆಹೊನ್ನೂರಿನಲ್ಲಿ ಹಿಟ್& ರನ್ ಕೇಸ್

0

Holehonur Nripatunga circle ಹೊಳೆಹೊನ್ನೂರಿನಲ್ಲಿ ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಪಾದಾಚಾರಿಗೆ ಹೊಡೆತಬಿದ್ದಿದ್ದು, ಆತನ ಮೂಳೆ ಮುರಿದಿದೆ.‌ ಬಸ್ ಅಪಘಾತ ಪಡಿಸಿ ಮುಂದೆ ಸಾಗಿದೆ.‌
ಅಗಸನಹಳ್ಳಿ ಗ್ರಾಮದ ನಿವಾಸಿ ಬಸವರಾಜ್ ಹೊಳೆಹೊನ್ನೂರು ನೃಪತುಂಗ ವೃತ್ತದ ಬಳಿ ಕೆನರಾ ಬ್ಯಾಂಕ್ ಮುಂದೆ ನಡೆದುಕೊಂಡು ಬರುತ್ತಿದ್ದು, ಶಿವಮೊಗ್ಗದ ಕಡೆಯಿಂದ ಬಂದ ಬಸ್ ದಿಡೀರ್ ಎಂದು ರಸ್ತೆ ಕೆಳೆಗೆ ಇಳಿಸಿ ಅಪಘಾತಪಡಿಸಿದ್ದಾನೆ.‌
Holehonur Nripatunga circle ಬಸವರಾಜ್ ಗೆ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಆತನನ್ನ ಉಪಚರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್ ಚಾಲಕ ಹಿಟ್ ಡ್ ರನ್‌ ಮಾಡಿದ್ದಾನೆ. ಬಸವರಾಜ್‌ ಅವರು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ
ವೈದ್ಯಕೀಯ ವರದಿಯಲ್ಲಿ ಬಸವರಾಜ್ ಗೆ ಎದೆಗೆ ಬಲವಾಗಿ ಪೆಟ್ಟಾಗಿದ್ದು ಮೂಳೆ ಮುರಿದಿರುವುದಾಗಿ ತಿಳಿದು ಬಂದಿದೆ. ಉಸಿರಾಟಕ್ಕೆ ತೊಂದರೆ ಉಂಟುಮಾಡಿ ಅಪಘಾತ ಸ್ಥಳದಲ್ಲಿ ಬಸ್ ನಿಲ್ಲಿಸದೆ ಹೋಗಿರುವ ಖಾಸಗಿ ಬಸ್ ನ್ನು ಪತ್ತೆ ಮಾಡಿಕೊಡುವಂತೆ ಪತ್ನಿ‌ ಹೊಳೆಹೊನ್ನೂರಿನಲ್ಲಿ ದೂರು ದಾಖಲಿಸಿದ್ದಾರೆ.

Joga Falls ಜೋಗ ಜಲಪಾತ ನೋಡಲು ಬಂದ ಯುವಕ‌ ಕಣ್ಮರೆ. ಪೊಲೀಸ್ ಸಿಬ್ಬಂದಿಯಿಂದ ಶೋಧಕಾರ್ಯ

0

Joga Falls ಜೋಗ ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ಕಣ್ಮರೆಯಾಗಿರುವ ಘಟನೆ ನಡೆದಿದ್ದು, ಯುವಕನಿಗಾಗಿ ಕಾರ್ಗಲ್ ಠಾಣೆ ಪೊಲೀಸರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೂಲತಃ ಗದಗ ಜಿಲ್ಲೆಯ ನಿವಾಸಿಯಾದ, ಪ್ರಸ್ತುತ ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಆನಂದ್ (24) ಜಲಪಾತದ ಬಳಿ ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಯುವಕನಿಗಾಗಿ ಜಲಪಾತದ ಬಳಿ ಶೋಧ ನಡೆಸುತ್ತಿದ್ದಾರೆ.

ಜು . 15 ರಂದು ಯುವಕ ಆನಂದ್ ಜೋಗ ಜಲಪಾತಕ್ಕೆ ಆಗಮಿಸಿದ್ದ. ಯಾತ್ರಿ ನಿವಾಸದದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ನಂತರ ಆತನ ಸುಳಿವು ಲಭ್ಯವಾಗಿಲ್ಲ.

ಯುವಕ ತಂದಿದ್ದ ಬ್ಯಾಗ್ ಸಿಕ್ಕಿದೆ. ಕಳೆದ 6 ದಿನಗಳಿಂದಲೂ ಯುವಕನಿಗಾಗಿ ಕಾರ್ಗಲ್ ಠಾಣೆ ಸಬ್ ಇನ್ಸ್’ಪೆಕ್ಟರ್ ಹೊಳೆಬಸಪ್ಪ ಹೋಳಿ ನೇತೃತ್ವದ ಪೊಲೀಸ್ ತಂಡ ಶೋಧ ಕಾರ್ಯ ನಡೆಸುತ್ತಿದೆ. ಆದರೆ ಸುಳಿವು ಲಭ್ಯವಾಗಿಲ್ಲ.

Joga Falls ಜೋಗ್ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಿಂದ , ಯುವಕನ ಶೋಧ ಕಾರ್ಯವು ಪೊಲೀಸರಿಗೆ ಕಷ್ಟಕರವಾಗಿ ಪರಿಣಮಿಸಿದೆ. ಜಲಪಾತದ ಬಳಿ ಯುವಕ ನಾಪತ್ತೆಯಾಗಿದ್ದ ಹೇಗೆ ಎಂಬುವ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Bhadra Dam ಕಳೆದ ವರ್ಷಕ್ಕಿಂತ ಭದ್ರಾ ಡ್ಯಾಂ ನಲ್ಲಿ ಈ ವರ್ಷ ನೀರಿನ ಮಟ್ಟ ಏರಿಕೆ. ರೈತರ ಮುಖದಲ್ಲಿ ಸಂತಸ

0

Bhadra Dam ಮಧ್ಯ ಕರ್ನಾಟಕದ ಪ್ರಮುಖ ಜಲಾಶಯ, ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ.

ಇದರಿಂದ ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂನ ಒಳಹರಿವು 23,674 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಶನಿವಾರ ಈ ಪ್ರಮಾಣ 46,876 ಕ್ಯೂಸೆಕ್ ಇತ್ತು. ಉಳಿದಂತೆ ಡ್ಯಾಂನಿಂದ 191 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.

Bhadra Dam ಪ್ರಸ್ತುತ ಡ್ಯಾಂ ನೀರಿನ ಮಟ್ಟ 164. 3 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 143 ಅಡಿಯಿತ್ತು.
ಕಳೆದ ಒಂದು ವಾರದಿಂದ ಭದ್ರಾ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಡೆಬಿಡದೆ ಬಿದ್ದ ಮಳೆಯಿಂದ ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿತ್ತು.

ಇದು ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

Shimoga City Centre ಶಿವಮೊಗ್ಗ ಸಿಟಿ ಸೆಂಟರ್‌ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ

0

Shimoga City Centre ಶಿವಮೊಗ್ಗ ಸಿಟಿ ಸೆಂಟರ್‌ ಪಕ್ಕದಲ್ಲಿ ನೆಹರು ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿದೆ. ಹೊನ್ನಾಳಿಯ ಹಾಲೇಶ್‌ ಎಂಬುವವರು ತಮ್ಮ ಸ್ಪ್ಲೆಂಡರ್‌ ಬೈಕ್‌ ಅನ್ನು ಸಿಟಿ ಬಸ್‌ ಸ್ಟಾಪ್‌ ಪಕ್ಕದ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದರು. ಸಂಜೆ 5.30ರ ಹೊತ್ತಿಗೆ ಸಿಟಿ ಸೆಂಟರ್‌ ಮಾಲ್‌ಗೆ ಹೋಗಿ ಸಂಜೆ 6 ಗಂಟೆಗೆ ಹಿಂತಿರುಗಿದಾಗ ಪಾರ್ಕಿಂಗ್‌ ಸ್ಥಳದಲ್ಲಿ ಬೈಕ್‌ ಇರಲಿಲ್ಲ. ಎಲ್ಲೆಡೆ

Shimoga City Centre ಹುಡುಕಿದರೂ ಬೈಕ್‌ ಸಿಕ್ಕಿರಲಿಲ್ಲ. ಏಪ್ರಿಲ್‌ 2ರಂದು ಘಟನೆ ಸಂಭವಿಸಿದೆ. ವೈಯಕ್ತಿಕ ಕಾರಣಕ್ಕೆ ತಡವಾಗಿ ದೂರು ನೀಡುತ್ತಿರುವುದಾಗಿ ಹಾಲೇಶ್‌ ಉಲ್ಲೇಖಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

D.K. Shivakumar ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ‌ ಪಾರದರ್ಶಕತೆ ತರುವ ಬಗ್ಗೆ ಅಧ್ಯಕ್ಷರಿಗೆ ಹೇಳಿದ್ದೇವೆ : ಡಿಸಿಎಂ ಡಿಕೆ ಶಿವಕುಮಾರ್

0

D.K. Shivakumar ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ‌ ಪಾರದರ್ಶಕತೆ ತರುವ ಬಗ್ಗೆ ನಿಗಮ ಮಂಡಳಿಯ ಅಧ್ಯಕ್ಷರಿಗೆ ನಾವು ಈಗಾಗಲೇ ಹೇಳಿದ್ದೇವೆ. ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ. ಅಲ್ಲಿದ್ದ ಖದೀಮರು ಈಗ ಇಲ್ಲಿಗೂ ಬಂದು ಸೇರಿಕೊಂಡಿದ್ದಾರೆ. ಅಲ್ಲಿ 300-400 ಕೋಟಿ‌ ತಿಂದ‌ ಅದೇ ಅಧಿಕಾರಿಗಳು ಇಲ್ಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಖಜಾನೆಯಲ್ಲಿ ನಿಯಂತ್ರಣ ಇಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು. ಹಾಗೆಯೇ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ‌ ಸಿಎಂ, ಡಿಸಿಎಂ ಹೆಸರು ಹೇಳುವಂತೆ ತನಿಖಾಧಿಕಾರಿಗಳ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರರ, ನಮ್ಮ ಹೆಸರು ಹೇಳಲಿ ಬಿಡಿ, ಬೇಡ ಎಂದವರು ಯಾರು ಎಂದರು.
D.K. Shivakumar ರಾಜ್ಯದಲ್ಲಿ ದೇವರ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ತಮಿಳನಾಡಿಗೆ ನೀರು ಬಿಡುವಂತೆ ಕೋರ್ಟ್ ಆದೇಶ ನೀಡಿತ್ತು. ಅದನ್ನ ಪಾಲನೆ ಮಾಡುವ ಸೂಚನೆಗಳು ತಮಗೆಲ್ಲ ಕಾಣುತ್ತಿದೆ. ಮುಂಜಾಗ್ರತೆಯಾಗಿ ಕೆಲವು ಕಡೆ ನೀರು ಬಿಡಬೇಕಾಗುತ್ತದೆ. ಹೆಚ್ಚು ಕಡಿಮೆ ಆಗಬಾರದು ಅಂತಾ ಪಕ್ಷಿಧಾಮ ಕಡೆ ದೋಣಿ ಎಲ್ಲವನ್ನೂ ನಿಲ್ಲಿಸಿದ್ದೀವಿ. ಎಲ್ಲೆಡೆ ಭಾರಿ ಮಳೆಯಾಗ್ತಿದೆ ಈ ಹಿನ್ನೆಲೆ ನದಿ ಪಕ್ಕದ ಮನೆಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.

Ripponpet Police ಸುರಳಿಕೊಪ್ಪದಲ್ಲಿ ಕಂದಕಕ್ಕೆ ಉರುಳಿದ ಕಾರು: ಇಬ್ಬರಿಗೆ ಗಾಯ

0

Ripponpet Police ಹೊಸನಗರ ತಾಲ್ಲೂಕು ಸುರಳಿಕೊಪ್ಪದ ಬಳಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಕಂದಕಕ್ಕೆ ಉರುಳಿದ ಬಗ್ಗೆ ವರದಿಯಾಗಿದೆ.
ರಿಪ್ಪನ್‌ಪೇಟೆ ಪೇಟೆ ಸಮೀಪ ಕೋಡೂರು ಬಳಿ ಸಿಗುವ ಸುರುಳಿಕೊಪ್ಪದಲ್ಲಿ ಈ ಘಟನೆ ನಡೆದಿದೆ.ರಿಪ್ಪನ್‌ಪೇಟೆ ಕಡೆಯಿಂದ Ripponpet Police ಹೊಸನಗರಕ್ಕೆ ತೆರಳುತಿದ್ದ ಕಾರು ಸುರುಳಿಕೊಪ್ಪ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಆ ಬಳಿಕ ಪಲ್ಟಿಯಾಗಿ 50 ಅಡಿ ಆಳದ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಚಾಲಕ ಗಿರೀಶ್ ಮತ್ತು ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜೀವಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಕಾರು ಪೂರ್ತಿಯಾಗಿ ಜಖಂಗೊಂಡಿದ್ದು ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ಪರಿಶೀಲನೆ ನಡೆಸಿದ್ದಾರೆ.

Rain In Thirtahalli ಮುತ್ತೂಳ್ಳಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆಯ ಗೋಡೆ

0

Rain In Thirtahalli ತೀರ್ಥಹಳ್ಳಿ ತಾಲೂಕಿನ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು ಹಲವು ಕಡೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಕುಸಿತಗೊಂಡಿವೆ.
ಆಗುಂಬೆ ಹೋಬಳಿ ತೀರ್ಥಮೂತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂಳ್ಳಿ ಗ್ರಾಮದ ಹಗಲಗೋಡು ಕೆ ಆರ್ ಗಣೇಶ್ ಬಿನ್ ರಾಮಪ್ಪಗೌಡ ಅವರ ಮನೆಯ ಅಡುಗೆಮನೆಯ ಗೋಡೆ ಕುಸಿತಗೊಂಡಿದ್ದು ಮನೆಯ ಹಂಚುಗಳು ಪುಡಿ ಪುಡಿಯಾಗಿದೆ ಇನ್ನೂಂದು ಭಾಗದ ಗೋಡೆಯು ಕುಸಿಯುವ ಹಂತದಲ್ಲಿದ್ದು ಪೂರ್ಣ ಮನೆ ಶಿಥಿಲಗೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ
Rain In Thirtahalli ಈಗಾಗಲೇ ಘಟಾನ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಗ್ರಾಮ.ಪಂಚಾಯಿತಿ ಅಧಿಕಾರಿಗಳು,ನೊಡಲ್ ಅಧೀಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾರ್ ಬೈಲು ಸತೀಶ್ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಮನೆ ಕುಸಿತ ಗೊಂಡವರ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Meteorological Department ಮಳೆ ಜಾಸ್ತಿ. ಕೃಷಿಕರಿಗೆ ಕೆಲವು ತಕ್ಷಣದ ಸಲಹೆಗಳು-ಎಸ್.ಟಿ.ರಮೇಶ್. ಸಹಾಯಕ ಕೃಷಿ ನಿರ್ದೇಶಕ

0

India Meteorological Department ಶಿವಮೊಗ್ಗ ತಾಲ್ಲೂಕಿನಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣ ಮಳೆಯಾಗುತ್ತಿದೆ. ಜುಲೈ ಒಂದರಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಸರಾಸರಿ 134 ಮಿ.ಮೀ.ಗೆ 286 ಮಿ.ಮೀ. ಮಳೆ ಆಗಿದ್ದು ಇಲ್ಲಿಯವರೆಗೆ ವಾಡಿಕೆಗಿಂತ ಶೇಕಡಾ 113 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಿರುತ್ತದೆ.

ಹವಾಮಾನ ಇಲಾಖೆಯ ಪ್ರಕಾರ ಇನ್ನು ಒಂದು ವಾರದವರೆಗೆ ಇದೇ ರೀತಿ ಮಳೆ ಮುಂದುವರೆಯುವ ಮುನ್ಸೂಚನೆಯಿದ್ದು, ಸಹಾಯಕ ಕೃಷಿ ನಿರ್ದೇಶಕರು ಜಿಲ್ಲೆಯ ಹಾನಿಗೊಳಗಾದ ರೈತರುಗಳಿಗೆ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನ ಪ್ರಮುಖ ಕೃಷಿ ಬೆಳೆಯಾಗಿರುವ ಮೆಕ್ಕೆಜೋಳ ಈಗಾಗಲೇ ಸುಮಾರು 13582 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು 30 ರಿಂದ 50 ದಿನಗಳ ಹಂತದಲ್ಲಿರುತ್ತದೆ. ಕಾಲುವೆ ಹಾಗೂ ಕೆರೆಯ ಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿ ನೀರು ನಿಂತಿರುವುದು ಕಂಡುಬಂದಿದ್ದು, ಇತರೆ ರೈತರ ಜಮೀನುಗಳಲ್ಲಿ ಪ್ರಸ್ತುತ ಯಾವುದೇ ಹಾನಿ ಆಗಿರುವುದು ಕಂಡುಬಂದಿರುವುದಿಲ್ಲ.

ಒಂದು ವೇಳೆ ರೈತರ ಜಮೀನಿನಲ್ಲಿ ನೀರು ನಿಂತಿದ್ದರೆ ಬಸಿಗಾಲುವೆ ಮಾಡಿ ಹೊರಹಾಕಬೇಕು.

ಹೆಚ್ಚಿನ ತೇವಾಂಶದಿಂದಾಗಿ ಬೆಳೆಯಲ್ಲಿ ಪೋಷಕಾಂಶ ಕೊರತೆಯು ಉಂಟಾಗುವುದರಿಂದ ಮಳೆ ನಿಂತ ನಂತರ ಒಂದು ವೇಳೆ ಬೆಳೆಯು ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದರೆ ನ್ಯಾನೊ ಯೂರಿಯಾ ಅಥವಾ ನ್ಯಾನೊ ಡಿಎಪಿ (2.5m ಪ್ರತಿ ಲೀಟರ್ ನೀರಿಗೆ) ಅಥವಾ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (2.5 ಗ್ರಾಂ ಪ್ರತಿ ಲೀಟರ್ ನೀರಿಗೆ)ವನ್ನು ಸಿಂಪರಣೆ ಮಾಡಿ. ಬೆಳೆಯು ತಿಳಿ ಹಸಿರು ಬಣ್ಣದಲ್ಲಿದ್ದರೆ ಎಕರೆಗೆ 20 ಕೆಜಿ ಯಷ್ಟು ಯೂರಿಯಾ ಮತ್ತು 10 ಕೆಜಿ ಪೊಟ್ಯಾಶ್ ಅನ್ನು ಹಾಕಿ. ಕೇದಿಗೆ ಮತ್ತು ಎಲೆ ಚುಕ್ಕೆ ರೋಗದ ಬಾಧೆ ಕಂಡುಬರುವ ಸಾಧ್ಯತೆ ಇರುವುದರಿಂದ ಮೆಟಾಲಾಕ್ಸಿಲ್+ಮ್ಯಾಂಕೊಜೆಬ್ ಶಿಲೀಂದ್ರನಾಶಕ (2 ಗ್ರಾಂ ಪ್ರತಿ ಲೀಟರ್ ನೀರಿಗೆ) ವನ್ನು ಮುಂಜಾಗ್ರತಾ ಕ್ರಮವಾಗಿ ಸಿಂಪಡಿಸಬೇಕು.

India Meteorological Department ಮೆಕ್ಕೆಜೋಳ ಬೆಳೆಗೆ ದಿನಾಂಕ 31-07-2024 ರವರೆಗೆ ಹಾಗೂ ಭತ್ತದ ಬೆಳೆಗೆ 16-08-2024 ರವರೆಗೆ ಫ್ರದಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಲು ಅವಕಾಶವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಿಮಾ ಕಂತು ಪಾವತಿಸಿ ನೊಂದಾಯಿಕೊಳ್ಳಿ. ಅತಿಯಾದ ಮಳೆಯಿಂದಾಗಿ ಬೆಳೆಯು ಸಂಪೂರ್ಣವಾಗಿ ಹಾಳಾಗಿದ್ದಲ್ಲಿ ವೈಯಕ್ತಿಕವಾಗಿ ಪರಿಹಾರ ನೀಡಲು ವಿಮಾ ಯೋಜನೆಯಡಿ ಅವಕಾಶವಿರುವುದರಿಂದ, ಮೆಕ್ಕೆಜೋಳ ಬೆಳೆಗೆ ವಿಮಾ ಯೋಜನೆಯಡಿ ನೊಂದಾಯಿಸಿಕೊಂಡಿರುವ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದಲ್ಲಿ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ವಿಮಾ ನೊಂದಣಿ ಪತ್ರ ಮತ್ತು ಆಧಾರ್ ಕಾರ್ಡ್ ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ರಮೇಶ್ ಎಸ್.ಟಿ ರವರು ರೈತರಲ್ಲಿ ಮನವಿಯನ್ನು ಮಾಡಿದ್ದಾರೆ.

Job Reservation ಬಾಂಗ್ಲಾದೇಶವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರದಿಂದ ಸಲಹಾ ಸೂಚಿ ಬಿಡುಗಡೆ

0

Job Reservation ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿಗಾಗಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಲಹಾ ಸೂಚಿ ಬಿಡುಗಡೆ ಮಾಡಿರುವ ಭಾರತ, ತಾವು ವಾಸಿಸುತ್ತಿರುವ ಮನೆಗಳಿಂದ ಹೊರ ಬರಬೇಡಿ ಹಾಗೂ ಪ್ರವಾಸಗಳನ್ನು ತಡೆ ಹಿಡಿಯಿರಿ ಎಂದು ಸಲಹೆ ನೀಡಿದೆ.

ಇದರೊಂದಿಗೆ ಕೆಲವು 24 ಗಂಟೆಗಳ ತುರ್ತು ಸಹಾಯವಾಣಿಯನ್ನೂ ಭಾರತ ಬಿಡುಗಡೆ ಮಾಡಿದೆ.

“ಒಂದು ವೇಳೆ ಏನಾದರೂ ತುರ್ತಿದ್ದರೆ ಅಥವಾ ನೆರವಿನ ಅಗತ್ಯವಿದ್ದರೆ, ದಯವಿಟ್ಟು ನಮ್ಮ ಹೈಕಮಿಷನ್ ಹಾಗೂ ಸಹಾಯಕ ಹೈಕಮಿಷನ್ ಕಚೇರಿಗಳನ್ನು ಸಂಪರ್ಕಿಸಿ”” ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

Job Reservation ಸರಕಾರಿ ಉದ್ಯೋಗ ನೇಮಕಾತಿ ವ್ಯವಸ್ಥೆಯಲ್ಲಿ ತರಲು ಬಯಸಿರುವ ಮೀಸಲಾತಿಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ಹಾಗೂ ಭದ್ರತಾ ಪಡೆಗಳ ಕ್ರಮವನ್ನು ಖಂಡಿಸಿ ಬುಧವಾರ ಪ್ರತಿಭಟನಾನಿರತ ವಿದ್ಯಾರ್ಥಿಗಳು ಗುರುವಾರ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದರು. ಈ ಮುಷ್ಕರದ ಸಂದರ್ಭದಲ್ಲಿ ಹಿಂಸಾಚಾರದ ಘಟನೆಗಳು ಭುಗಿಲೆದ್ದಿವೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರವು ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳಿಗೆ ಗುರುವಾರ ಸಲಹಾ ಸೂಚಿ ಬಿಡುಗಡೆ ಮಾಡಿದೆ.