Wednesday, April 8, 2026
Wednesday, April 8, 2026
Home Blog Page 639

Shivamogga Police ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಓರ್ವನ ಪತ್ತೆ

0

Shivamogga Police ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗದ ಸೋಗಾನೆಯಲ್ಲಿಯಲ್ಲಿ ಕೇಂದ್ರ ಕಾರಾಗೃಹದ ಮೇಲೆ ರೇಡ್‌ ನಡೆಸಿದ್ದಾರೆ. ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಸೂಚನೆ ಅನ್ವಯ ಈ ದಾಳಿ ನಡೆದಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ನೇತೃತ್ವದಲ್ಲಿ ರೇಡ್‌ ನಡೆದಿದೆ.

ಬಾಬು ಆಂಜನಪ್ಪ, ಡಿವೈಎಸ್.ಪಿ, ಶಿವಮೊಗ್ಗ –ಎ ಉಪವಿಭಾಗ, ಕೃಷ್ಣ ಮೂರ್ತಿ, ಡಿವೈಎಸ್ಪಿ, ಡಿ.ಎ.ಆರ್ ಹಾಗೂ ಸಿದ್ದೇಗೌಡ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ, ಭರತ್, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ, ಅಶ್ವಥ್ ಗೌಡ, ಪೊಲೀಸ್ ನಿರೀಕ್ಷಕರು, ತುಂಗಾ ನಗರ ಪೊಲೀಸ್ ಠಾಣೆ ಪ್ರಭಾರ, ಹರೀಶ್ ಕೆ ಪಾಟೀಲ್, ಪೊಲೀಸ್ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆ ಮತ್ತು ಚಂದ್ರಕಲಾ, ಪೊಲೀಸ್ ನಿರೀಕ್ಷಕರು, ವಿನೋಬಾನಗರ ಪೊಲೀಸ್ ಠಾಣೆ ರವರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.

Shivamogga Police ಇನ್ನೂ ಒಟ್ಟು 10 ಜನ ಪಿಎಸ್ಐ ಮತ್ತು 50 ಜನ ಪೊಲೀಸ್ ಸಿಬ್ಬಂಧಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಮಹಿಳಾ ಬ್ಯಾರಾಕ್ ಗಳನ್ನು ಸೇರಿದಂತೆ ಕೇಂದ್ರ ಕಾರಾಗೃಹವನ್ನು ಪರಿಶೀಲನೆ ನಡೆಸಿದರು. ಈ ದಾಳಿ ವೇಳೆ ಏನೇನು ಪತ್ತೆಯಾದವು ಎಂಬುದರ ಬಗ್ಗೆ ಇನ್ನಷ್ಟೆ ಗೊತ್ತಾಗಬೇಕಿದೆ.

Rain In Shivamogga ನಿಂತ ನೀರಿನಲ್ಲೇ ಈಜಿ ವಿದ್ಯುತ್ ಕಂಬದ ರಿಪೇರಿ ಮಾಡಿದ ಸಾಹಸಿ ಪವರ್ ಮ್ಯಾನ್ ಸಂತೋಷ್

0

Rain In Shivamogga ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್ ಮ್ಯಾನ್ ಸಾಹಸ ಪಡುವ ವಿಡಿಯೋ ಆಗುಂಬೆ ಸಮೀಪ ಸೆರೆಯಾಗಿದೆ.

ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ. ಪಂ ವ್ಯಾಪ್ತಿಯಲ್ಲಿ ನೀರಿನ ಮಧ್ಯೆ ಇದ್ದ ವಿದ್ಯುತ್ ತಂತಿ ತುಂಡಾದ ಹಿನ್ನೆಲೆ ನೀರಿಗೆ ಇಳಿದ ಸಿಬ್ಬಂದಿ ನೀರಿಗೆ ಜಿಗಿದು ಸಂಪರ್ಕ ಸರಿಪಡಿಸಿದ್ದಾರೆ. ಕಲಬುರ್ಗಿ ಮೂಲದ ಸಂತೋಷ ಎಂಬ ವ್ಯಕ್ತಿ ತನ್ನ ಜೀವವನ್ನು ಲೆಕ್ಕಿಸದೆ ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾರೆ.

Rain In Shivamogga ಆಗುಂಬೆ ಭಾಗಕ್ಕೆ ಕಮ್ಮರಡಿಯ ಸಬ್ ಡಿವಿಜನಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಸಂಪರ್ಕವು ಸರಿ ಮಾಡದೆ ಇದ್ದರೆ ಮೂರು ಪಂಚಾಯಿತಿ ವಿದ್ಯುತ್ ಸಂಪರ್ಕ ಇಲ್ಲದಂತಾಗುತ್ತಿತ್ತು. ಇದನ್ನ ಮನಗಂಡು ನೀರಿಗೆ ಧುಮುಕಿ ಸಂತೋಷ್ ದುರಸ್ತಿ ಮಾಡಿದ್ದಾರೆ.

Sri Shivaganga Yoga Centre ನಿಜವಾದ ಧರ್ಮಸಾಧನೆಗೆ ಶರೀರ ಸಿದ್ಧವಾಗಿರಬೇಕು-ಡಾ.ಗುರುಸಿದ್ಧರಾಜ ಯೋಗೀಂದ್ರಶ್ರೀ

0

Sri Shivaganga Yoga Centre ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂಬಂತೆ ಶರೀರವನ್ನು ಮಾಧ್ಯಮವನ್ನಾಗಿಟ್ಟುಕೊಂಡು ಧರ್ಮ ಸಾಧನೆ ಮಾಡಬೇಕಾಗಿರುವುದರಿಂದ ಶರೀರದ ಸಧೃಡತೆ ಬಹು ಅಗತ್ಯವಾಗಿರುತ್ತದೆ ಎಂದು ಹುಬ್ಬಳ್ಳಿ ಜಗದ್ಗುರು ಮೂರು ಸಾವಿರ ಮಠ ಮಹಾಸಂಸ್ಥಾನದ ಶ್ರೀ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಹೇಳಿದರು.

ಭಾನುವಾರ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯರವರಿಗೆ ಅಭಿಮಾನಿಗಳು ಮತ್ತು ಶಿಷ್ಯವೃಂದ , ಅಧ್ಯಕ್ಷರು, ಸದಸ್ಯರು, ವಿಶ್ವಸ್ಥ ಮಂಡಳಿ, ಶ್ರೀ ಶಿವಗಂಗಾ ಯೋಗಾ ಕೇಂದ್ರ (ರಿ) ಶಿವಮೊಗ್ಗ ಇವರ ವತಿಯಿಂದ ಆಯೋಜಿಸಿದ್ದ ಗುರುಪೂರ್ಣಿಮೆ ಹಾಗೂ ಶಿವಯೋಗ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗ ಪೂಜೆ ಸಲ್ಲಿಸುವಾಗ ಒಮ್ಮೊಮ್ಮೆ ಪಂಚಾಮೃತ ಅಭಿಷೇಕವಾಗಿರುತ್ತದೆ ಅಲಂಕಾರ ಮಾಡಲು ಆಗುವುದಿಲ್ಲ, ಕೆಲವೊಮ್ಮೆ ಅಲಂಕಾರ ಪೂಜೆ ಆಗಿರುತ್ತದೆ ಮಂಗಳಾರತಿ ಮಾಡಲಿಕ್ಕೆ ಆಗುವುದಿಲ್ಲ, ಒಂದು ಬಾರಿ ಅಂತೂ ಇಷ್ಟೆಲ್ಲಾ ಹಂತಗಳು ಮುಗಿದರೂ ಪ್ರಣಾಮಗಳನ್ನು ಸಲ್ಲಿಸಲು ಆಗುವುದಿಲ್ಲ. ಪೂಜಾಫಲ ಪ್ರಾಪ್ತಿಯಾಗಬೇಕಾದರೆ ಮೊದಲು ದೇಹ ಪೂಜೆ ಪೂರ್ತಿಯಾಗಬೇಕು. ನಿಜವಾದ ಧರ್ಮ ಸಾಧನೆಗೆ ನಮ್ಮ ಶರೀರ ಸಿದ್ದವಾಗಿರಬೇಕು. ಇದನ್ನು ಮನಗಂಡ ನಮ್ಮ ಋಷಿ ಮುನಿಗಳು ಶರೀರವನ್ನು ಪರಿಪೂರ್ಣವಾಗಿಡುವಂತಹ ಯೋಗವನ್ನು ಪರಿಚಯಿಸಿದರು ಎಂದರು.

ಹೊರಾಂಗಣ ಕ್ರೀಡೆಗಳು ದೇಹ ದಣಿಸುತ್ತವೆ ಆದರೆ ಮನಸ್ಸಿನ ಏಕಾಗ್ರತೆ ಅದರಿಂದ ಸಾಧ್ಯವಾಗುವುದಿಲ್ಲ. ಯೋಗ ಶರೀರಕ್ಕೆ ದಣಿವನ್ನು ನೀಡದೆ ಮನಸ್ಸನ್ನು ಚೈತನ್ಯಗೊಳಿಸಿ ಆಧ್ಯಾತ್ಮದ ಲೋಕಕ್ಕೆ ನಮ್ಮನ್ನು ತಲುಪಿಸುತ್ತದೆ. ಯೋಗ ಚಿತ್ತದ ಹಲವಾರು ವೃತ್ತಿಗಳನ್ನು ನಿಲ್ಲಿಸಿ ಮನಸ್ಸನ್ನು ಸಮಾಧಿ ಸ್ಥಿತಿಗೆ ತರುತ್ತದೆ. ಯೋಗ ಅನುಷ್ಠಾನವಾಗಬೇಕಾದರೆ ಹಲವಾರು ನಿಯಮಗಳಿವೆ ವ್ರತಗಳಿವೆ. ಅದರಲ್ಲಿ ಬಹಳ ಪ್ರಮುಖವಾದುದು ಅಹಿಂಸೆ. ಎಲ್ಲಿ ಅಹಿಂಸಾ ಪ್ರತಿಷ್ಟಾಪನೆಯಾಗಿರುತ್ತದೆಯೋ ಅಲ್ಲಿ ಹಿಂಸೆ ತನ್ನ ಕ್ರೌರ್ಯವನ್ನು ವಿಜೃಂಭಿಸುವುದಿಲ್ಲ. ನಿಜವಾದ ಯೋಗಿಯನ್ನು ನೋಡಿದ ಭೋರ್ಗರೆಯುವ ಹಾವುಗಳು ಶಾಂತವಾಗುತ್ತವೆ. ಹುಲಿ ಸಿಂಹಗಳು ತಮ್ಮ ಕ್ರೂರತನ ಮರೆಯುತ್ತವೆ. ಈ ಯೋಗ ವೈಜ್ಞಾನಿಕವಾಗಿ ರೂಪಿಸಲ್ಪಟ್ಟ ಸತ್ಯವಾದ ದರ್ಶನ. ಇದನ್ನು ಜನ ಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದ ರುದ್ರಾರಧ್ಯರಿಗೆ ಶಿವಗಂಗಾ ಯೋಗಕೇಂದ್ರದ ಎಲ್ಲಾ ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ನುಡಿದರು.

ಮೂರು ಗಂಟೆಗಳ ಕಾಲ ನೆಲದ ಮೇಲೆ ಕುಳಿತು ಶಾಂತಚಿತ್ತದಿಂದ ಕಾರ್ಯಕ್ರಮ ಆಲಿಸಿದ ಯೋಗಾರ್ಥಿಗಳಿಗೆ ಯೋಗ ಸಹಾಯ ಮಾಡಿದೆ. ಅಭಿನಂದನಾ ಗ್ರಂಥದಲ್ಲಿ ಯೋಗದ ಬಗ್ಗೆ ಲೇಖನಗಳನ್ನು ಸಂಗ್ರಹಿಸಿ ಬಹಳ ಗುರುತರ ಕೆಲಸ ಕೇಂದ್ರದಿಂದ ಆಗಿದೆ ಎಂದ ಅವರು, ಯೋಗಗುರುಗಳಿಗೆ, ಯೋಗಶಿಕ್ಷಕರಿಗೆ ಹಾಗೂ ಯೋಗ ಶಿಬಿರಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.

Sri Shivaganga Yoga Centre ವೇದಿಕೆಯಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ, ಬೆಕ್ಕಿನ ಕಲ್ಮಠ ಮಹಾ ಪೋಷಕ ಪರಮಪೂಜ್ಯ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯಾಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗ ಆಚಾರ್ಯ ಶ್ರೀ ರುದ್ರಾರಾಧ್ಯ, ಅನ್ನಪೂರ್ಣ, ಟ್ರಸ್ಟಿ ಎಸ್.ರುದ್ರೇಗೌಡರು, ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕಲಗೋಡು ರತ್ನಾಕರ್, ಹೊಸತೋಟ ಸೂರ್ಯನಾರಾಯಣ, ಬಿ.ವೈ.ಅರುಣದೇವಿ, ಪಿ.ಎಂ.ಸ್ವಾಮಿ, ಹಾಲಪ್ಪ, ಜಿ.ವಿಜಯ್ ಕುಮಾರ್, ಜಿ.ಎಸ್.ಓಂಕಾರ್, ಕಾಟನ್ ಜಗದೀಶ್, ಚಂದ್ರಶೇಖರಯ್ಯ ಸೇರಿದಂತೆ ಇನ್ನಿತರರು ಇದ್ದರು.

Yuva Nidhi Scheme Karnataka ಯುವನಿಧಿ ಯೋಜನೆಗೆ ಅರ್ಹರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನೋಂದಣಿಗೆ ಆಹ್ವಾನ

0

Yuva Nidhi Scheme Karnataka ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣೆ ಚಾಲ್ತಿಯಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‍ಲೈನ್ ನೋಂದಣಿ ಆಹ್ವಾನಿಸಿದೆ.
2022-23ನೇ ಹಾಗೂ ನಂತರದ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೊಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂ. 3000/- (ಪದವೀಧರ ನಿರುದ್ಯೋಗಿಗಳು) ಹಾಗೂ ರೂ. 1500/- (ಡಿಪ್ಲೋಮಾ ಪಡೆದ ನಿರುದ್ಯೋಗಿಗಳು) ನೇರ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
Yuva Nidhi Scheme Karnataka ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಗ್ರಾಮ ಒನ್, ಶಿವಮೊಗ್ಗ ಒನ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು. ಸ್ವಯಂ ಘೋಷಣೆ ನೀಡದಿದ್ದಲ್ಲಿ ಆ ತಿಂಗಳು ನೇರ ನಗದು ಖಾತಗೆ ಜಮಾ ಆಗುವುದಿಲ್ಲ. ಆದ್ದರಿಂದ ಫಲಾನುಭವಿಗಳು ತಪ್ಪದೇ ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸಾಗರ ರಸ್ತೆ, 2ನೇ ತಿರುವು, ಗುತ್ಯಪ್ಪ ಕಾಲೋನಿ ಶಿವಮೊಗ್ಗ. ದೂ.ಸಂ.:08182-255293 ನ್ನು ಸಂಪರ್ಕಿಸುವುದು.

Backward Classes Welfare Department ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಜುಲೈ 23 ಕೊನೆಯ ದಿನಾಂಕ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024-25ನೇ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲು ಆನ್‍ಲೈನ್ ಅಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜು.23ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Madhu Bangarappa ಕಳಪೆ ಕಾಮಗಾರಿ ಯಾರ ಸರ್ಕಾರದ ಕಾಲದಲ್ಲೇ ಆಗಿರಲಿ ಅದಕ್ಕೆ ಸೂಕ್ತ ಕ್ರಮ- ಸಚಿವ ಮಧು ಬಂಗಾರಪ್ಪ

0

Madhu Bangarappa ಮಲೆನಾಡಿನಲ್ಲಿ ಸೋರುವುದು ಸಹಜವಾಗಿರುತ್ತದೆ. ಆದರೆ ತಂಡಿ ಬಾರದ ರೀತಿಯಲ್ಲಿ ಮಾಡಿ ಎಂದು ಹೇಳಿದ್ದೆ, ಕಳಪೆ ಕಾಮಗಾರಿಗೆ ಸುಮ್ಮನಿರುತ್ತೀನಿ ಎಂದು ನಾನು ಯಾವತ್ತು ಹೇಳಿಲ್ಲ ಎಂದು ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತೀರ್ಥಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕುರುವಳ್ಳಿ – ಬಾಳೆಬೈಲು ಬೈಪಾಸ್ ರಸ್ತೆ ತಡೆಗೋಡೆ ಕುಸಿತ , ತಾಲೂಕು ಪಂಚಾಯತ್ ಕಟ್ಟಡ ಇರಲಿ ಅದರ ರಿಪೋರ್ಟ್ ತರಿಸಲು ಜಿಲ್ಲಾಧಿಕಾರಿಗಳ ಬಳಿ ಹೇಳಿದ್ದೇನೆ. ಕಳಪೆ ಕಾಮಗಾರಿ ಯಾರದ್ದೇ ಇದ್ದರು ಕೂಡ ಯಾರೇ ಮಾಡಿದ್ದರು ಕೂಡ, ಯಾರ ಸರ್ಕಾರದ್ದೆ ಆಗಿದ್ದರೂ ಕೂಡ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡಿ ಕಳಪೆ ಕಾಮಗಾರಿ ಮಾಡಿದ್ದರೆ ಅದಕ್ಕೆ ಏನು ಮಾಡಬೇಕೊ ಮಾಡುತ್ತೇವೆ ಎಂದರು.

ಯಾರೇ ಆಗಿರಲಿ ಬೆಳಗ್ಗೆ ಮೇಕಪ್ ಮಾಡಿದರೆ ರಾತ್ರಿ ತೆಗೆಯಲೇ ಬೇಕು, ಪರ್ಮನೆಂಟ್ ಇಟ್ಟುಕೊಂಡು ಓಡಾಡಲು ಆಗುವುದಿಲ್ಲ, ನಮ್ಮ ಕೆಲಸ ನಾವು ಮಾಡುತ್ತೇವೆ, ನಮ್ಮ ಹಾಗೂ ನಿಮ್ಮ (ಪತ್ರಕರ್ತರು ) ಕಂಡರೆ ಹೊಟ್ಟೆಕಿಚ್ಚು ಇರಬೇಕು ಸ್ವಲ್ಪ ಹುಷಾರಾಗಿರಿ, ಬರೆಯಬೇಕಾದರೆ ಅವರ ಬಗ್ಗೆ ಬರಿಯಬೇಕಾ? ಅಥವಾ ನಮ್ಮ ಬಗ್ಗೆ ಬರಿಯಬೇಕಾ ಎಂದು ಯೋಚಿಸಿ ಬರೆಯಿರಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

Madhu Bangarappa ಇನ್ನು ತೀರ್ಥಹಳ್ಳಿ ತಾಲೂಕಿನಲ್ಲಿ ಕೆಲವೊಂದು ಮನೆಗಳು ಹಾನಿಯಾಗಿದ್ದಾವೆ ಹೊರತು ಬೇರೆ ಅನಾಹುತ ಆಗಿಲ್ಲ. ಹಾಗೇನಾದರು ಆದರೆ ಇನ್ನು ಮುಂದೆ ಜಿಲ್ಲಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಮನೆ ಹಾನಿಯಾದವರಿಗೆ 5 ಲಕ್ಷ ಹಣ ಸರ್ಕಾರ ಕೊಡುತ್ತದೆ. ಆದರೆ ಅವರಿಗೆ ಹಕ್ಕುಪತ್ರ ಇರಬೇಕು. ಹಕ್ಕುಪತ್ರ ಇಲ್ಲ ಎಂದರೆ 1 ಲಕ್ಷ ಹಣ ಸಿಗುತ್ತದೆ.

ಹಕ್ಕುಪತ್ರ ಇಲ್ಲದವರಿಗೂ ಹಣ ಕೊಡುವ ಕೆಲಸ ಮಾಡಲು ಮನವಿ ಮಾಡುತ್ತೇವೆ. ಇಲ್ಲಿ ಅನಧಿಕೃತ ಮನೆಗಳು ಜಾಸ್ತಿ ಇದ್ದಾವೆ ಕಟ್ಟಿಕೊಂಡವರಿಗೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇವೆ ಈ ವಿಚಾರವಾಗಿ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದರು.

ಜಿಲ್ಲೆಯಲ್ಲಿ ಇನ್ನು ಮೂರು ದಿನ ಬಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಎಲ್ಲಾ ಕಡೆ ಹೊಗಲಿದ್ದಾರೆ.

ಶಾಲಾ ಕಟ್ಟಡ ಕೂಡ ಕೆಲವು ಕಡೆ ಬಿದ್ದಿವೆ. ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಂದ ಮೂರು ಸಾವು ಆಗಿದೆ. ಜನರು ಜವಾಬ್ದಾರಿಯಿಂದ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ಕಳೆದ ಬಾರಿ ಆಗಸ್ಟ್ ನಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಆಗಿತ್ತು. ಈ ಬಾರಿ ಸ್ವಲ್ಪ ಜಾಸ್ತಿ ಮಳೆಯಾಗುತ್ತಿದೆ. ಕುಸಿತ ಆಗಿದ್ದನ್ನು ವೀಕ್ಷಣೆ ಮಾಡಿದ್ದೇವೆ. ಸರಿಪಡಿಸುವ ಕೆಲಸವೂ ಆಗುತ್ತಿದೆ ಎಂದರು.

ತೀರ್ಥಹಳ್ಳಿಯಲ್ಲಿ ಬಿಇಒ ಅವರಿಗೆ ವಾಹನ ಇಲ್ಲ ಎಂಬ ಪತ್ರಕರ್ತರ ಪ್ರೆಶ್ನೆಗೆ ಹಲವು ಕಡೆ ಈ ಸಮಸ್ಯೆ ಇದೆ. ಅದನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಅದಕ್ಕೂ ಮೊದಲು ಶಾಲೆಗಳಿಗೆ ಶಿಕ್ಷಕರ ಅವಶ್ಯಕತೆ ಇದೆ. ಶಿಕ್ಷಣ ಬೇಕು ಎಂಬ ಕಾರಣಕ್ಕೆ ಅತಿಥಿ ಶಿಕ್ಷಕರನ್ನು ತಂದಿದ್ದೇವೆ.ಅನುದಾನಿತ ಶಾಲೆಗೆ ಶಿಕ್ಷಕರ ಆಯ್ಕೆ ಆಗುತ್ತದೆ.ಹತ್ತು ಸಾವಿರ ಶಿಕ್ಷಕರ ಪಾಠ ಮಾಡಲಿದ್ದಾರೆ.ಶಿಕ್ಷಕರಿಗೆ ಒತ್ತು ಕೊಡುವ ಕೆಲಸ ಆಗುತ್ತಿದೆ.

ಮಕ್ಕಳಿಗೆ ರಸ್ತೆಯಲ್ಲಿ ಪಾಠ ಮಾಡಿದರು ಶಿಕ್ಷಕರ ಅವಶ್ಯಕತೆ ಬಹಳ ಇದೆ ಅದನ್ನು ಸರಿಪಡಿಸುವ ಕೆಲಸ ಆಗುತ್ತಿದೆ.ಇನ್ನು ಪೌಷ್ಟಿಕತೆ ಬೇಕು ಎಂಬ ಕಾರಣಕ್ಕೆ ಮಕ್ಕಳಿಗೆ ಮೊಟ್ಟೆ ಹಾಲು ಕೊಡುವ ಕೆಲಸ ಆಗುತ್ತಿದೆ ಎಂದರು.ಪತ್ರಿಕಾಗೋಷ್ಠಿಗೂ ಮೊದಲು ಬೈಪಾಸ್ ರಸ್ತೆಯಲ್ಲಿ ತಡೆಗೋಡೆ ಕುಸಿದು ಬಿದ್ದ ಸ್ಥಳವನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ತಹಸೀಲ್ದಾರ್ ಜಕ್ಕಣ್ಣ ಗೌಡರ್ ಸೇರಿ ಹಲವರು ಉಪಸ್ಥಿತರಿದ್ದರು.

Nipah virus ಕೇರಳದಲ್ಲಿ ನೀಪಾ ವೈರಸ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ನಿಧನ

0

ಕೇರಳದ ಕೋಝಿಕ್ಕೋಡ್‌ನಲ್ಲಿ ನಿಪಾ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.

ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಬಾಲಕನ ಮಾದರಿಯನ್ನು ವಿಶ್ಲೇಷಿಸಿದ ನಂತರ ನಿಪಾ ಸೋಂಕನ್ನು ದೃಢಪಡಿಸಿದೆ.

Nipah virus ಭಾನುವಾರ ಬೆಳಿಗ್ಗೆ 10:50 ಕ್ಕೆ ಪಾಂಡಿಕ್ಕಾಡ್‌ನ ಬಾಲಕನಿಗೆ ತೀವ್ರ ಹೃದಯ ಸ್ತಂಭನ ಸಂಭವಿಸಿದೆ; ಆತನನ್ನು ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ವೀಣಾ ಹೇಳಿದರು.

“ಆತ ವೆಂಟಿಲೇಟರ್ ಬೆಂಬಲದಲ್ಲಿದ್ದ; ಇಂದು ಬೆಳಿಗ್ಗೆ ಮೂತ್ರದ ಉತ್ಪಾದನೆಯು ಕಡಿಮೆಯಾಗಿದೆ. ಭಾರೀ ಹೃದಯ ಸ್ತಂಭನದ ನಂತರ, ಆತನನ್ನು ಉಳಿಸುವ ಪ್ರಯತ್ನಗಳು ವಿಫಲವಾದವು. ಅವಬು 11.30ಕ್ಕೆ ನಿಧನನಾಗಿದ್ದಾನೆ” ಎಂದು ಸಚಿವರು ಹೇಳಿದರು.

ಅಂತಾರಾಷ್ಟ್ರೀಯ ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರವೇ ಅಂತ್ಯಕ್ರಿಯೆಯ ಕುರಿತು ಹೆಚ್ಚಿನ ವಿಷಯಗಳನ್ನು ನಿರ್ಧರಿಸಲಾಗುತ್ತದೆ” ಎಂದರು.

Shivamogga Karnataka Association ಭಾರತೀಯ ಸಂಸ್ಕೃತಿಯನ್ನ ಎತ್ತಿ ಹಿಡಿಯುವ ಮಾಧ್ಯಮಗಳೆಂದರೆ ನಮ್ಮ ಸಂಗೀತ & ಸಾಹಿತ್ಯ- ಕೆ.ಎಸ್.ಈಶ್ವರಪ್ಪ

0

Shivamogga Karnataka Association ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಒಂದು ಮಾಧ್ಯಮವಿದೆಯೆಂದರೆ, ಅದು ಸಂಗೀತ ಮತ್ತು ಸಾಹಿತ್ಯ. ಇವೆರಡನ್ನೂ ಸಮೀಕರಿಸಿ ಇಂದು ಹೆಮ್ಮೆಯ ಗಾಯಕ ಶಂಕರ ಶಾನುಭೋಗ ಅವರು ನಾಡಿನಾದ್ಯಂತ “ಕಾವ್ಯ ಸಂಗೀತ” ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

ಅದರ ಅಂಗವಾಗಿ ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸಹಯೋಗದೊಡನೆ ಈ ಅದ್ಭುತ ನಡೆಯುತ್ತಿರುವುದು ಶ್ಲಾಘನೀಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಅವರು ಕರ್ನಾಟಕ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಖ್ಯಾತ ಸುಗಮ ಸಂಗೀತಗಾರ ಶಂಕರ ಶಾನುಭೋಗ ಮಾತನಾಡಿ ಸಂಗೀತ ಮನರಂಜನೆಗೆ ಸಂಗೀತ ಕೇಳದೆ ಅದನ್ನು ಅರ್ಥಮಾಡಿಕೊಂಡು ಕೇಳಿದರೆ ಮಾತ್ರ ಸಂಗೀತಕ್ಕೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ತಿಳಿಸಿದರು. ತಮ್ಮ ಉದ್ದೇಶ ಮನರಂಜನೆ ಜೊತೆಗೆ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿಯುವುದೇ ಆಗಿದೆ ಎಂದು ತಿಳಿಸಿದರು.

Shivamogga Karnataka Association ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅವರು ಮಾತನಾಡಿ, ಕಾವ್ಯ ಸಂಗೀತ ಎಂಬ ಪರಿಕಲ್ಪನೆಯೇ ಆಕ್ಷಕವಾಗಿರುವಂತಹದ್ದು. ಉತ್ತಮ ಸಾಹಿತ್ಯ ಮತ್ತು ಒಳ್ಲೆಯ ಸಾಹಿತ್ಯಸೇರಿದರೆ ಅದುಅಧ್ಯಾತ್ಮ ಪ್ರಜ್ಞೆ ಯನ್ನು ಬಡಿದೆಬ್ಬಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಿಕ್ಕಿರಿದು ಸೇರಿದ್ದ ಸಂಗೀತಪ್ರಿಯರು ಶಂಕರ್ ಶಾನುಭೋಗ್ ಹಾಡಿದ ವಚನಗಳು, ದಾಸರ ಪದಗಳು, ಶರೀಫರ ಮತ್ತು ಅನೇಕ ಕವಿಗಳ ಕವಿತೆಗಳನ್ನು ಅರ್ಥ ಸಹಿತ ತಿಳಿಸಿ ಸುಶ್ರಾವ್ಯವಾಗಿ ಹಾಡಿದರು.

ಚಿರಂತನ ಯೋಗ ಟ್ರಸ್ಟ್ ನ ಅಧ್ಯಕ್ಷರಾದ ಶಾಂತಾ ಶೆಟ್ಟಿಯವರು ಪ್ರಸ್ತಾವಿಕವಾಗಿ ಮಾತನಾಡಿದರು. ವಿನಯ್ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಸಂಘ ಮತ್ತು ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಶಂಕರ್ ಶಾನುಭೋಗ್ ಅವರನ್ನು ಆತ್ಮಿಯವಾಗಿ ಸನ್ಮಾನಿಸಲಾಯಿತು.

International Council for Human Development ಜಿ.ಮಂಜುನಾಥ್ ಅವರಿಗೆ ಗೋವಾ ವಿವಿಯಿಂದ ಗೌ.ಡಾಕ್ಟರೇಟ್ ಪದವಿ

0

International Council for Human Development ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಟರ್ ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಕೌನ್ಸಿಲ್ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಗುರುತಿಸಿ
ಗೋವಾ ವಿವಿಯೊಂದು ಅಬ್ಬಲಗೆರೆ ಗ್ರಾ.ಪಂ. ಸದಸ್ಯ ಹಾಗೂ ಗ್ರಾ.ಪಂ. ಸದಸ್ಯರ ಒಕ್ಕೂಟ ಶಿವಮೊಗ್ಗ ಅಧ್ಯಕ್ಷರಾದ ಚನ್ನಮುಂಭಾಪುರ ಮಂಜುನಾಥ.ಜಿ ರವರಿಗೆ
ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈ ಹಿಂದೆ ಇವರಿಗೆ ಸಮಾಜ ಸೇವೆಗಾಗಿ 2014 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ International Council for Human Development ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್
ರಾಜ್ಯ ಪ್ರಶಸ್ತಿ ,ಹಾಗೂ 2018 ರಲ್ಲಿ ದೆಹಲಿಯಲ್ಲಿ ಜ್ಯೋತಿ ಬಾ ಪುಲೆ ಫೆಲೋಶಿಪ್ ಅವಾರ್ಡ್‌ಅನ್ನು ಪಡೆದ ಇವರು ಇದೀಗ ಗೋವಾ ವಿವಿ ನೀಡುವ ಗೌರವ ಡಾಕ್ಟರೇಟ್ ಪದವಿ ಪಡೆಯುವ ಮೂಲಕ ಇವರ ಮುಖಪುಟಕ್ಕೆ ಮತ್ತೋಂದು ಗರಿ ಲಭಿಸಿದೆ

Guru Purnima ದಾವಣಗೆರೆ ಆಧ್ಯಾತ್ಮ ಮಂದಿರದ 38 ನೇ ವಾರ್ಷಿಕೋತ್ಸವ

0

Guru Purnima ದಾವಣಗೆರೆ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದ ಶ್ರೀ ಗುರು ದತ್ತಾತ್ರೇಯ ಪ್ರತಿಷ್ಠಾಪನೆಯ 38ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮೆ ನಿಮಿತ್ತ 108 ಶ್ರೀ ಸತ್ಯದತ್ತ ವೃತ ಮಹೋತ್ಸವವು ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ಶ್ರೀಮತಿ ರಾಜನಹಳ್ಳಿ ಕಾಂತ ಲಕ್ಷ್ಮಮ್ಮ ಆರ್ ವಿ ಗೋಪಾಲಕೃಷ್ಣ ಶ್ರೇಷ್ಟಿ ವ್ಯವಸ್ಥಾಪನೆಯಲ್ಲಿ ಅಧ್ಯಾತ್ಮ ಮಂದಿರದ ಪ್ರಮುಖರುಗಳಾದ ಆರ್ ಎಸ್ ನಾರಾಯಣಸ್ವಾಮಿ, ಆರ್ Guru Purnima ಜಿ. ನಾಗೇಂದ್ರ ಪ್ರಸಾದ್, ಶ್ರೀಧರ ಶ್ರೇಷ್ಠಿ, ಆರ್ ಜಿ ಶ್ರೀನಿವಾಸ್ ಮೂರ್ತಿ, ಬದರಿ ಪ್ರಸಾದ್, ದತ್ತಮೂರ್ತಿ, ಸೌಖ್ಯಾ ಸಾಗರ್, ಗೀತಾ ಶ್ರೀಧರ್ ಮುಂತಾದವರು ಭಾಗವಹಿಸಿದ್ದರು. ವೇದಮೂರ್ತಿ ಶಿವರಾಮ ಶಾಸ್ತ್ರಿ ಮುಂತಾದವರ ಪೌರೋಹಿತ್ಯದಲ್ಲಿ ಹೂವಿನ ಅಲಂಕಾರ ಸೇವೆಯನ್ನು ಶ್ರೀ ಶಿರಡಿ ಸಾಯಿಬಾಬಾ ಭಜನಾ ಮಂಡಳಿ ನೆರವೇರಿಸಿದ್ದರು. ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ್ ವಿಶೇಷ ಆಹ್ವಾನಿತರಾಗಿದ್ದರು. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ದಕ್ಷಿಣದ ವತಿಯಿಂದ ಗುರುಪೂರ್ಣಿಮಾ ಪ್ರಸಾದ ವಿತರಣೆ ನೆರವೇರಿತು,ಡಾ.ಎಸ್ ಹೆಚ್ ಸುಜಿತ್ ಕುಮಾರ್ ಮುಂತಾದವರು ಅಲ್ಲಿದ್ದರು.