Wednesday, April 8, 2026
Wednesday, April 8, 2026
Home Blog Page 638

Sri Rama Chandra Murthy ಶಿವಮೊಗ್ಗದ ಹೆಸರಾಂತ ಲೆಕ್ಕ ಪರಿಶೋಧಕ ಎಂ.ಜಿ.ರಾಮಚಂದ್ರ ಮೂರ್ತಿ ನಿಧನ

0


Sri Rama Chandra Murthy ಶಿವಮೊಗ್ಗ ನಗರದ ಖ್ಯಾತ ರಾಜಸನ್ನದ್ದು ಲೆಕ್ಕಪರಿಶೋಧಕ, ಜೇಸಿ ಮಾಜಿ ವಲಯಾಧ್ಯಕ್ಷ, ರೋಟರಿ ಜಿಲ್ಲೆ 3182 ರ ಮಾಜಿ ಜಿಲ್ಲಾ ರಾಜ್ಯಪಾಲ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ನಿರ್ದೇಶಕರಾಗಿಯೂ ಸಹ ಸೇವೆಸಲ್ಲಿಸಿದ್ದ ಹಾಗೂ ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಸಲಹೆಗಾರರಾಗಿ, ರೋಟರಿ ಜೀವವೈವಿಧ್ಯ ವನದ ರೂವಾರಿಗಳಾಗಿದ್ದ ಹಾಗೂ ಲೆಕ್ಕಪರಿಶೋಧಕರ ಸಂಘದ ನಿರ್ದೇಶಕರಾಗಿ, ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಎಂ.ಜಿ.ರಾಮಚಂದ್ರ ಮೂರ್ತಿ (ಎಂಜಿಆರ್) ತಮ್ಮ 68ನೇ ವಯಸ್ಸಿನಲ್ಲಿ ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Sri Rama Chandra Murthy ಶ್ರೀಯುತರ ಪಾರ್ಥಿವ ಶರೀರವನ್ನು ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಸಿ ಇವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು, ಶಿವಮೊಗ್ಗದ ಎಲ್ಲಾ ರೋಟರಿ ಕ್ಲಬ್‍ಗಳು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.

ಎಂ.ಜಿ.ರಾಮಚಂದ್ರಮೂರ್ತಿ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗ, ಕುಟುಂಬವನ್ನು ಆಗಲಿದ್ದಾರೆ.

Rain In Shivamogga ಎಡಬಿಡದೆ ಸುರಿವ ಮಳೆ . ಶಿಕಾರಿಪುರದ ಮಾಡರವಳ್ಳಿಯಲ್ಲಿ ಮಳೆಯಿಂದ ಮನೆ ಕುಸಿತ

0

Rain In Shivamogga ಕಳೆದ ವಾರ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗಳು ನೆಲಸಮವಾಗುತ್ತಿರುವುದು ಮುಂದುವರೆದಿದೆ. ಮಳೆ ಬಿಡುವು ನೀಡಿದೆ.

ಆದರೆ ಗ್ರಾಮಾಂತರ ಭಾಗದಲ್ಲಿ ಮಳೆ ಬೀಳುತ್ತಿದೆ. ಇದರಿಂದಾಗಿ ಮಳೆಯ ಅವಾಂತರಗಳು ಮುಂದುವರೆದಿದೆ.

Rain In Shivamogga ಶಿಕಾರಿಪುರ ತಾಲೂಕಿನ ಮಾಡರವಳ್ಳಿ ಗ್ರಾಮದಲ್ಲಿ ಮಳೆಗೆ ಹೆಂಚಿನ ಮನೆ ಕುಸಿದು ಬಿದ್ದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಮನೆಯಲ್ಲಿದ್ದ ಭಾರತಿ (೪೫) ಎಂಬ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಕ್ಕಪಕ್ಕದ ಮನೆಯವರಿಂದ ಮಹಿಳೆಯ ರಕ್ಷಣೆಯಾಗಿದೆ. ಗಾಯಗೊಂಡ ಮಹಿಳೆ ಶಿಕಾರಿಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Rain In Shivamogga ರಾಮಚಂದ್ರಾಪುರದಲ್ಲಿ ವರುಣನಾರ್ಭಟ. ಕಾರಿನ ಮೇಲೆ ಬಿದ್ದ ಮನೆಯ ಗೋಡೆ

0

Rain In Shivamogga ಹೊಸನಗರ ತಾಲೂಕಿನಲ್ಲಿ ಮಳೆ ಮುಂದುವರೆದಿದೆ. ಮಳೆಗೆ ಅಂಗಡಿಯ ಗೋಡೆ ಉರುಳಿದೆ. ಮಳಿಗೆ ಗೋಡೆ ಉರುಳಿ ಅಂಗಡಿ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದೆ. ರಾಮಚಂದ್ರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಗ್ರಾಮದ ಗೋವಿಂದಪ್ಪ ಎಂಬುವರಿಗೆ ಅಂಗಡಿಯಾಗಿದ್ದು ಹಾನಿಗೊಳಗಾದ ಕಾರಿನ ಮಾಲೀಕರಾಗಿದ್ದಾರೆ.

Suraj Revanna ಶಾಸಕ ಸೂರಜ್ ರೇವಣ್ಣಗೆ ಷರತ್ತು ಬದ್ಧ ಜಾಮೀನು

0

Suraj Revanna ಇಬ್ಬರು ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಷರತ್ತುಬದ್ದ ಜಾಮೀನು ನೀಡಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಕೋರಿ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಆದೇಶ ಕಾಯ್ದಿರಿಸಿತ್ತು.
ಎರಡೂ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

Suraj Revanna ಆರೋಪಿ ಸೂರಜ್ ರೇವಣ್ಣ ಯಾವುದೇ ರೀತಿಯಲ್ಲೂ ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು. ತನಿಖಾಧಿಕಾರಿ ಮುಂದೆ ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.

Supreme Court ಕನ್ವರ್ ಯಾತ್ರೆಯ ಮಾರ್ಗದಲ್ಲಿನ ಮಳಿಗೆ,ಹೋಟೆಲ್ ಗಳಿಗೆ ಮಾಹಿತಿ ಪ್ರದರ್ಶಿಸಲು ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

0

Supreme Court ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಅಂಗಡಿ, ಹೋಟೆಲ್‌ಗಳು ತಮ್ಮ ಮಾಲೀಕರು, ಸಿಬ್ಬಂದಿಯ ಹೆಸರು ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ಆದೇಶವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಸರ್ಕಾರದ ನಿರ್ದೇಶನಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡುವಾಗ ಮಧ್ಯಂತರ ಆದೇಶ ನೀಡಿದೆ.

ಆದಾಗ್ಯೂ, ಅಂಗಡಿ, ಹೋಟೆಲ್‌ಗಳು ಆಹಾರದ ಪ್ರಕಾರವನ್ನು ಪ್ರದರ್ಶಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

ಕನ್ವರ್ ಯಾತ್ರೆಯ ಮಾರ್ಗದಲ್ಲಿ ಬರುವ ಆಹಾರ ಮತ್ತು ಪಾನೀಯ ಅಂಗಡಿಗಳು ತಮ್ಮ ಸಂಸ್ಥೆಗಳ ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವುದನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕಡ್ಡಾಯಗೊಳಿಸಿತ್ತು.

Supreme Court ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

ಆದರೆ, ಈ ಆದೇಶ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಹೊರಡಿಸಲಾಗಿದೆ. ಅಲ್ಲದೆ, ಇದು ಸಮಾಜದೊಳಗೆ ತಾರತಮ್ಯ ಉಂಟುಮಾಡುತ್ತದೆ ಎಂಬ ಟೀಕೆ ವ್ಯಕ್ತವಾಗಿತ್ತು. ಉತ್ತರ ಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Klive Special Article ಎತ್ತರೆತ್ತರೆತ್ತರಕ್ಕೆ ಹಾರಲೆಮ್ಮ ಬಾವುಟ

0

Klive Special Article ಒಂದು ದೇಶಕ್ಕೆ ಅದರ ಇತಿಹಾಸ, ಸಂಪನ್ಮೂಲಗಳು, ಜನಸಂಖ್ಯೆ, ಸರ್ಕಾರ, ಸೈನ್ಯಗಳು ಎಷ್ಟು ಮುಖ್ಯವೂ, ಅದೇ ರೀತಿಯಲ್ಲಿ ರಾಷ್ಟ್ರದ ಗುರು ರಾಷ್ಟ್ರ ಧ್ವಜವು ಅಷ್ಟೇ ಪ್ರಮುಖವಾಗಿರುತ್ತದೆ.

ಜನರಲ್ಲಿ ದೇಶಾಭಿಮಾನ ಸೃಷ್ಠಿಸುವುದು, ಐತಿಹಾಸಿಕ ಸ್ಮರಣಾರ್ಥವಾಗಿ, ಏಕತೆ ಮತ್ತು ಗುರುತಿನ ಸಂಕೇತಕ್ಕೆ, ಶೈಕ್ಷಣಿಕ ಮೌಲ್ಯ, ದೇಶ ಭಕ್ತಿಯ ಹಾಗೂ ನಾವೆಲ್ಲರು ಒಂದೇ ಎಂಬ ಭಾವನೆ ಮೂಡಿಸುವುದಕ್ಕೆ ರಾಷ್ಡ್ರ ಧ್ವಜವು ಸಂಕೇತವಾಗಿರುತ್ತದೆ.
ಜುಲೈ22 ರಾಷ್ಟ್ರೀಯ ಧ್ವಜ ದಿನ.

ಭಾರತೀಯರ ಇತಿಹಾಸದಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಸ್ವಾತಂತ್ರ್ಯ ಪಡೆಯಲು ಅನೇಕ ವಿಷಯಗಳು ಪ್ರೇರಣೆಯನ್ನು ನೀಡಿದ್ದು ಅದರಲ್ಲಿ ರಾಷ್ಟ್ರೀಯ ಧ್ವಜ ಎಂಬ ಪರಿಕಲ್ಪನೆಯು ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ 1947 ರಂದು ನಡೆದ ಸಂವಿಧಾನ ಸಭೆಯಲ್ಲಿ ತ್ರಿವರ್ಣ ಧ್ವಜವನ್ನು ಪರಿಚಯಸಲಾಗುತ್ತದೆ.

ಈ ಕಾರಣದಿಂದ ದೇಶದ ಧಜವನ್ನು ಗೌರವಿಸುವ ಉದ್ಧೇಶದಿಂದ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವಾಗಿ ಆಚರಣೆಯನ್ನು ಮಾಡಲಾಗುತ್ತದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯ ಗೀತೆಗಳು, ಘೋಷಣೆಗಳು, ಧ್ಯೇಯವಾಕ್ಯಗಳು, ಜೊತೆಗೆ ಹಲವಾರು ಮಾದರಿಗಳ ಜೊತೆಗೆ ದೇಶದಲ್ಲಿ ಬಾವುಟಗಳ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ.

ನಮ್ಮ ರಾಷ್ಡ್ರ ಧ್ವಜವು ಬೆಳೆದು ಬಂದ ಹಾದಿಯನ್ನು ನೋಡುವುದಾದರೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಭಾರತೀಯರಾದ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುತ್ತದೆ, ಅಲ್ಲಿಂದ ಭಾರತೀಯ ಧ್ವಜದ ಕಲ್ಪನೆ ರೂಪುಗೊಳ್ಳುತ್ತದೆ.

ನಂತರದ ದಿನಗಳಲ್ಲಿ 1907 ರ ಆಗಸ್ಟ್ 22 ರಂದು ಜರ್ಮನಿಯ ಸ್ಟನ್‍ಗಾರ್ಡ್‍ನಲ್ಲಿ ನಡೆದ ಅಂತರ್‍ರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಿಕಾಜಿ ಕಾಮಾ ಅವರು ಗಮನ ಸೆಳೆಯಲು ಹೊಸ ಧ್ವಜವನ್ನು ಹಾರಿಸಿದರು. ಆದರೆ ಅದು ವಿಫಲವಾಯಿತು. 1916 ರಲ್ಲಿ ಪಿಂಗಲಿ ವೆಂಕಯ್ಯ ಅವರು ಮೂವತ್ತು ಹೊಸ ವಿನ್ಯಾಸಗಳನ್ನು ಮದ್ರಾಸ್ ಹೈ ಕೋರ್ಟಿಗೆ ಸಲ್ಲಿಸಿದರು.

Klive Special Article ಅದೇ ವರ್ಷ ಆನಿ ಬೆಸೆಂಟ್ ಮತ್ತು ಬಾಲಗಂಗಾಧರ ತಿಲಕ್ ಅವರು ಹೋಮ್ ರೂಲ್ ಚಳುವಳಿಯ ಭಾಗವಾಗಿ ಹೊಸ ಧ್ವಜವನ್ನು ಅಳವಡಿಸಿಕೊಂಡರು. ಏಪ್ರಿಲ್ 1921 ರಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಜರ್ನಲ್ ಇಂಡಿಯಾದಲ್ಲಿ ಭಾರತೀಯ ಧ್ವಜದ ಅಗತ್ಯತೆಯ ಬಗ್ಗೆ ಬರೆದರು.

ಗಾಂಧಿಜಿಯವರು ಪಿಂಗಳಿ ವೆಂಕಯ್ಯ ಅವರಿಗೆ ಕೆಂಪು ಮತ್ತು ಹಸಿರು ಬಣ್ಣದಲ್ಲಿ ನೂಲುವ ಚಕ್ರ ಹೊಂದಿದ ಧ್ವಜವನ್ನು ಪ್ರಸ್ತಾಪಿಸಿದರು. ಆದರೆ ಕಾಂಗ್ರೆಸ್ ಅಧಿವೇಶನದಲ್ಲಿ ಬೇರೆ ಬಣ್ಣದ ಧ್ವಜದ ಪ್ರಸ್ತಾಪವಾದ ಕಾರಣ ಗಾಂಧಿಯವರ ಧ್ವಜ ಜಾರಿಗೆ ಬರಲಿಲ್ಲ. 1923 ರ ಏಪ್ರಿಲ್ 13 ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಮರಣಾರ್ಥವಾಗಿ ನಾಗ್ಪುರದ ಸ್ಥಳೀಯ ಕಾಂಗ್ರೆಸ್ ಸ್ವಯಂ ಸೇವಕರುಗಳು ನಡೆಸಿದ ಮೆರವಣಿಗೆಯಲ್ಲಿ, ಪಿಂಗಳಿ ವೆಂಕಯ್ಯ ವಿನ್ಯಾಸಗೊಳಿಸಿದ ನೂಲುವ ಚಕ್ರದ ಸ್ವರಾಜ್ ಧ್ವಜವನ್ನು ಹಾರಿಸಲಾಯಿತು. ಈ ಘಟನೆ ಅಂದು ಪೊಲೀಸರ ಮತ್ತು ಕಾಂಗ್ರೆಸಿಗರ ಘರ್ಷಣೆಗೆ ಕಾರಣವಾಯಿತು.

1923ರಲ್ಲಿ ಸಾರ್ವಜನಿಕ ಮೆರವಣಿಗೆಗಳು ಮತ್ತು ಸಾಮಾನ್ಯ ಜನರ ಪ್ರದರ್ಶನದ ಕಲ್ಪನೆಯೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಧ್ವಜ ಚಳುವಳಿಯನ್ನು ಪ್ರಾರಂಭಿಸಿದರು. 1931ರ ಸಭೆಯಲ್ಲಿ ಸ್ವರಾಜ್ ಧ್ವಜವು ಅಧಿಕೃತ ಧ್ವಜವಾಯಿತು. ಆ ವೇಳೆಗಾಗಲೇ ಧ್ವಜವು ಸ್ವಾತಂತ್ರ್ಯ ಚಳುವಳಿಯ ಸಂಕೇತವಾಯಿತು.

ಅಂತಿಮವಾಗಿ ಭಾರತ ದೇಶ ಸ್ವಾತಂತ್ರ್ಯ ಪಡೆಯುವ ಕೆಲವು ದಿನಗಳ ಮೊದಲು ಅಂದರೆ 1947 ರ 22 ಜುಲೈ ರಂದು ನಡೆದ ಸಂವಿಧಾನ ಸಭೆಯಲ್ಲಿ ಆಳವಾದ ಕೇಸರಿ, ಬಿಳಿ ಮತ್ತು ಗಾಢ ಹಸಿರು ಸಮ ಪ್ರಮಾಣದ ತ್ರಿವರ್ಣ ಹಾಗೂ ಬಳಿ ಬಣ್ಣದ ಮಧ್ಯದಲ್ಲಿ ನೀಲಿ ಅಶೋಕ ಚಕ್ರವನ್ನು ಹೊಂದಿದ ಧ್ವಜವನ್ನು ಪ್ರಸ್ತಾಪಿಸಿದರು. ಈ ಧ್ವಜವು 1947 ರ ಆಗಸ್ಟ್ 15 ರಂದು ಭಾರತೀಯ ರಾಷ್ಟ್ರೀಯ ಧ್ವಜವಾಗಿ ಹಾರಿಸಲಾಯಿತು.

ರಾಷ್ಟ್ರಧ್ವಜವನ್ನು ಗೌರವಿಸುವುದರಿಂದ ನಾಗರಿಕರಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಮನೋಭಾವ ಹೆಚ್ಚುತ್ತದೆ. ನಮ್ಮ ಧ್ವಜದ ಇತಿಹಾಸ, ಮಹತ್ವ ಮತ್ತು ಸಾಂಕೇತಿಕತೆಯ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಬೇಕು.

ರಾಷ್ಟ್ರ ಧ್ವಜವು ಪ್ರತಿನಿಧಿಸುವ ಸ್ವಾತಂತ್ರ್ಯ, ಸಾರ್ವಭೌಮತ್ವ. ದೇಶಭಕ್ತಿ ಮತ್ತು ಗೌರವ ಭಾವವನ್ನು ಹುಟ್ಟು ಹಾಕಲು ಕಾರಣರಾದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರುಗಳು ಮಾಡಿದ ತ್ಯಾಗಗಳನ್ನು ಪ್ರತಿಬಿಂಬಿಸುವ ಸಲುವಾಗಿ. ರಾಷ್ಟ್ರ ಧ್ವಜ ಪ್ರತಿನಿಧಿಸುವ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಮೌಲ್ಯಗಳನ್ನು ಮುಂದಿನ ಪೀಳೀಗೆಗಳಿಗೆ ಪ್ರೇರೆಪಿಸಲು ಹೀಗೆ ಅನೇಕ ಉದ್ಧೇಶದ ಕಾರಣಕ್ಕೆ ಆಚರಣೆ ಮಾಡುವುದು ಅಗತ್ಯವಾಗಿದೆ.

ಸಾರ್ವಜನಿಕರು ತಮ್ಮ ದೇಶಕ್ಕಾಗಿ ಎಷ್ಟು ಗೌರವ ಮತ್ತು ಭಕ್ತಿಯನ್ನು ಹೊಂದಿದ್ದಾರೋ ಅಷ್ಟೇ ಪ್ರಮಾಣದಲ್ಲಿ ರಾಷ್ಟ್ರೀಯ ಧ್ವಜಕ್ಕೂ ಗೌರವನ್ನು ನಿಡಬೇಕು. ಧ್ವಜಕ್ಕೆ ಅಗೌರವನ್ನು ಎಂದಿಗೂ ತೊರಿಸದೆ ಇತತರಿಗೆ ಮಾದರಿಯಾಗಿ ಇರಬೇಕು. ಬೇರೆಯಾದರು ಧ್ವಜಕ್ಕೆ ಚ್ಯುತಿ ಬರುವಂತಹ ಕೆಲಸ ಮಾಡಿದರೆ ಅವರಿಗೆ ಅರಿವು ಮೂಡಿಸೋಣ, ಎಲ್ಲರೂ ರಾಷ್ಟ್ರ ಧ್ವಜವನ್ನು ಗೌರವಿಸೋಣ.

Gopal Krishna Belur ಸಾಗರ- ಹೊಸನಗರ ಕ್ಷೇತ್ರದ ಮಳೆಹಾನಿ ಸಮಸ್ಯೆಗೆ ಸ್ಪಂದಿಸಿ ಆನ್ ಲೈನ್ ಮೀಟೀಂಗ್ ನಡೆಸಿದ ಶಾಸಕ ಬೇಳೂರು ಗೋಪಾಲಕೃಷ್ಷ

0

Gopal Krishna Belur ಸಾಗರ-ಹೊಸನಗರ ಕ್ಷೇತ್ರದಲ್ಲಿ ಮಳೆಹಾನಿ ಕುರಿತು ಬೆಲ್ಜಿಯಂ ದೇಶದಿಂದ ಸಾಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಆನ್’ಲೈನ್ ಮೀಟಿಂಗ್ ನಡೆಸಿದರು.

ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಮಳೆಹಾನಿ ಪರಿಹಾರ ನೀಡಲು ವಿದೇಶದಲ್ಲಿದ್ದರೂ 24*7 ಜನರ ಮೇಲಿನ ಕಾಳಜಿಗೆ ಜನತೆಯು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆಯಿಂದ ಕ್ಷೇತ್ರದ ಜನತೆಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ ನೀಡಿದರು.

ಹಾನಿಗೊಳಗಾದ ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಲಾಗಿದೆ ಎಂದ ಸಾಗರ ತಹಶಿಲ್ದಾರರಾದ ಚಂದ್ರಶೇಖರ ನಾಯ್ಕ ಮತ್ತು ಸಾಗರ ನಗರಸಭಾ ಕಮೀಷನರ್ ಎಚ್.ಕೆ. ನಾಗಪ್ಪ ತಿಳಿಸಿದರು

ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಕಡೆ ಹೆಚ್ಚಿನ ಗಮನ ನೀಡಲಾಗಿದ್ದು, ಹಾನಿಗೊಳಗಾದ ಪ್ರತಿಯೊಂದು ಕಡೆ ನಿಗಾ ವಹಿಸಲು ಪಿಡಿಓಗಳಿಗೆ ಹೇಳಲಾಗಿದೆ-ಇಓ ಗುರುಕೃಷ್ಣ ಶೆಣೈ

ಗ್ರಾಮೀಣ ಭಾಗದ ಕುಡಿಯುವ ನೀರು ಮತ್ತು ನೈರ್ನಲ್ಯದ ಬಗ್ಗೆ ಗಮನವಿಟ್ಡು ಜನತೆಗೆ ತೊಂದರೆ ಆಗದಂತೆ ಕೆಲಸ ಮಾಡಲಾಗಿದೆ-ಇಂಜಿನಿಯರ್ ಭರತ್

ರಸ್ತೆಗಳು ಮಳೆಯಿಂದ ಹಾನಿಗೊಳಗಾದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮತ್ತು ಸಾಗರ ತಾಲ್ಲೂಕು ಕಚೇರಿ ಮೇಲ್ಚಾವಣಿಗೆ ಟೆಂಡರ್ ಕತೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಮಂಜುನಾಥ ಮಾಹಿತಿ ನೀಡಿದರು.

Gopal Krishna Belur ಮಳೆಯಿಂದ ಶಾಲೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ ಪಾಠ ಮಾಡಲು ಸಾಧ್ಯವಾಗದೇ ಇದ್ದರೆ ಅಂತಹ ಸ್ಥಳದಲ್ಲಿ ಮುಖ್ಯಶಿಕ್ಷಕರು ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಬಿಇಓ ಪರಶುರಾಮ್ ತಿಳಸಿದರು.

ಮೆಸ್ಕಾಂ ಲೈನ್’ಮನ್ ‘ಗಳ ಪರಿಶ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಮೆಚ್ಚುಗೆ ವ್ಯಕ್ತಪಡಿಸಿದರು.

Lokayukta Police ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ. ಲೋಕಾಯುಕ್ತ ಬಲೆಗೆ ಬಿದ್ದ ಅಂತರಗಂಗೆ ಗ್ರಾಪಂ ಅಧ್ಯಕ್ಷ

0

Lokayukta Police ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಪಂ ಅಧ್ಯಕ್ಷ ನಾಗೇಶ್ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ ೧೩(೧)(ಬಿ) ಸಹಿತ ೧೩(೨) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ ಕಾಯ್ದೆ-೨೦೧೮) ರೀತ್ಯಾ ಪ್ರಕರಣ ದಾಖಲಾಗಿದೆ.
ನಾಗೇಶ್ ಅಕ್ರಮ ಆಸ್ತಿಗಳಿಸಿರುವ ಪ್ರಕರಣದ ತನಿಖೆ ಕೈಗೊಂಡು ಇವರಿಗೆ ಸಂಬಂಧಿಸಿದ ೫ ಸ್ಥಳಗಳಲಿ ಜುಲೈ ೧೯ರಂದು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಶೋಧನೆ ಮಾಡಿದ್ದು, ನಾಗೇಶ್ ಬಿ. ರವರಿಗೆ ಸಂಬಂದಿಸಿದಂತೆ ೨ ಖಾಲಿ ನಿವೇಶನಗಳು, ೨ ಮನೆಗಳು, ೫.೧೪ ಎಕರೆ ಕೃಷಿ ಜಮೀನು , ಅಂದಾಜು ರೂ ೧೨,೮೦,೦೦೦ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು ೧,೭೬,೦೦೦ ಮೌಲ್ಯದ ವಾಹನಗಳು, ಅಂದಾಜು ೭,೦೦,೦೦೦ ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ ೫,೭೧,೬೪೦ ಗಳು ನಗದು ಹಣ ಪತ್ತೆಯಾಗಿದ್ದು ಅಂದಾಜು ರೂ ೧,೩೩,೮೭,೮೨೬ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.

Lokayukta Police ಹಾಗೂ ಅವರ ಮನೆಯಲ್ಲಿ ಪತ್ತೆಯಾದ ನಗದು ರೂ ೫,೦೦,೦೦೦ ಗಳನ್ನು ತನಿಖೆ ಸಂಬಂಧ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್. ರವರು ದಾಖಲಿಸಿದ್ದು, ವೀರಬಸಪ್ಪ ಎಲ್ ಕುಸಲಾಪುರ ಪೊಲೀಸ್ ನಿರೀಕ್ಷಕರು, ಕ.ಲೋ ಶಿವಮೊಗ್ಗ ಇವರು ತನಿಖೆಯನ್ನು ಮುಂದುವರೆಸಿದ್ದಾರೆ.

ಈ ದಾಳಿ ಸಮಯಕ್ಕೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಹಾಗೂ ಚಿತ್ರದುರ್ಗ, ಉಡುಪಿ ಮತ್ತು ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸ್ ಇಲಾಖೆ ತಿಳಿಸಿದೆ.

Klive News ಸುದ್ದಿ ಸಾಲು

0

ಪ್ರಮುಖ ಸುದ್ದಿಗಳು

Klive News ಮಾಗಡಿಯಲ್ಲಿ ಬಾತ್ ರೂಮಿನಲ್ಲಿ ಗೀಸರ್ ನಿಂದ ವಿಷಾನಿಲ: ತಾಯಿ ಮಗು ಸಾವು.

ಶಿರೂರು ಗುಡ್ಡ ಕುಸಿತ; ಸೇನೆಯಿಂದ ಕಾರ್ಯಾಚರಣೆ ಆರಂಭ.

ಮುಡಾ ಹಗರಣದ ವರದಿ ಕೇಳಿದ ರಾಜ್ಯಪಾಲ.

ನೇತ್ರಾವತಿ ಸೀರಿಯಲ್ ನಟ ಮಹಿಪಾಲ್ ವಿರುದ್ಧ ದೂರು. ಒಬ್ಬಳ ಜೊತೆ ಮದುವೆ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ.

Klive News ಇಂದು ಕೆಂದ್ರ ಸರಕಾರದಿಂದ ಬಜೆಟ್ ಮಂಡನೆ .

7ನೆಯ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ .

ಚೆನ್ನೈನಲ್ಲಿ ಕಾಲೇಜು ಕಾರ್ಯಕ್ರಮಕ್ಕೆ ತುಂಡುಡುಗೆ ಉಟ್ಟುಬಂದ ನಟಿ ಅಮಲಾ ಪೌಲ್ : ಎಲ್ಲೆಡೆ ಟೀಕೆ

Sakrebyle ಸಕ್ರೆಬೈಲ್ ಬಳಿ ಕೆಸರಿನಲ್ಲಿ ಹೂತು ವಾಲಿ ನಿಂತ ಲೋಡ್ ಲಾರಿ

0

Sakrebyle ಕಲ್ಲಿದ್ದಲು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ವಾಲಿಕೊಂಡ ಸಕ್ರೇಬೈಲ್‌ನಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಘಟನೆಯಲ್ಲಿ ಯಾರಿಗೂ ಏನೂ ಸಹ ಆಗಿಲ್ಲ ಮಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದ ಕಲ್ಲಿದ್ದಲು ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಭಾಗಕ್ಕೆ ವಾಲಿಕೊಂಡಿದೆ.

Sakrebyle ಲಾರಿಯ ಟೈರ್‌ಗಳು ಮಣ್ಣಿನಲ್ಲಿ ಹುಗಿದು ಹೋಗಿದ್ದರಿಂದ ಈ ಘಟನೆ ಸಂಭವಿಸಿದೆ.

ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಹೊಗಿ ಪರಿಶೀಲನೆ ನಡೆಸಿದ್ದಾರೆ.