Wednesday, August 12, 2026
Wednesday, August 12, 2026

Radio Shivamogga  ರೇಡಿಯೋ ಶಿವಮೊಗ್ಗ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯ ಫಲಿತಾಂಶ

Date:

Radio Shivamogga  ರೇಡಿಯೋ ಶಿವಮೊಗ್ಗ ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಕನ್ನಡ ರಸಪ್ರಶ್ನೆ 2023ರ ಅಂತಿಮ ಸುತ್ತು ಶಿವಮೊಗ್ಗ ಬಾನುಲಿ ಕೇಂದ್ರದ ನೇರಪ್ರಸಾರದಲ್ಲಿ ಯಶಸ್ವಿಯಾಗಿ ಜರುಗಿತು.

ಸಾರ್ವಜನಿಕರ ವಿಭಾಗ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ಪ್ರತ್ಯೇಕವಾಗಿ ಸುತ್ತು ನಡೆಯಿತು. ರಸಪ್ರಶ್ನೆಯನ್ನು ಚೇತನ್ ಸಿ ರಾಯನಹಳ್ಳಿ ನಡೆಸಿಕೊಟ್ಟರು. ಇವರೊಂದಿಗೆ ನಿಲಯದ ಸಂಯೋಜಕ ಗುರುಪ್ರಸಾದ್, ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ತಾಂತ್ರಿಕ ಸಂಯೋಜಕ ಶ್ರೀಕಾಂತ್, ಕ್ಷೇತ್ರ ಸಂಯೋಜಕ ದಿನೇಶ್ ಹೊಸನಗರ, ಆರ್ ಜೆಗಳಾದ ಶ್ರೀಧರ್, ಮಹಾಲಕ್ಷ್ಮೀ, ಅಶ್ವಿನಿ, ಅರ್ಪಿತಾ, ರಕ್ಷಿತಾ ಹೊಳ್ಳ, ಶ್ವೇತಾ, ಪವಿತ್ರಾ ದಿನೇಶ್ ಸಹಕರಿಸಿದರು. ಪುಟಾಣಿಗಳಾದ ತನುಷ್ ನಾಚಪ್ಪ, ಇಶಾನ್ ಇದ್ದರು.

ಸಾರ್ವಜನಿಕರ ವಿಭಾಗ: ಪ್ರಥಮ ಬಹುಮಾನ – ಯಶೋಧಾ ಶೇಖರ್ ಹಾಗೂ ಬಿ.ಜಿ. ಗೀತಾ (ಅಂಬರೀಶ್ ತಂಡ), ದ್ವಿತೀಯ ಬಹುಮಾನ- ಬಿ.ವಿ. ನಂದಿನಿ ಹಾಗೂ ಹೆಚ್. ಕಿರಣ್ ಕುಮಾರ್ (ರಾಜಕುಮಾರ್ ತಂಡ), ತೃತೀಯ ಬಹುಮಾನ ಶೈಲಜಾ ಹಾಗೂ ಭಾರತಿ ಎನ್. ರಾವ್ (ವಿಷ್ಣುವರ್ಧನ್ ತಂಡ)

ವಿದ್ಯಾರ್ಥಿ ವಿಭಾಗ: ಪ್ರಥಮ ಬಹುಮಾನ – ಎನ್. ನಿಸರ್ಗ ಹಾಗೂ ಬಿ.ವೈ. ಅಕ್ಷತಾ, ಕಸ್ತೂರ ಬಾ ಪಿಯು ಕಾಲೇಜು (ಗಂಗರು ತಂಡ), ದ್ವಿತೀಯ ಬಹುಮಾನ ಚಿಂತನ್ ಎ. ಕಲ್ಲಜ್ಜಿ ಹಾಗೂ ರಜತ್ ಕೃಷ್ಣ ಆರ್ ಹತ್ವಾರ್ – ಸಾಂದೀಪನಿ ಶಾಲೆ (ಹೊಯ್ಸಳ ತಂಡ), ತೃತೀಯ ಬಹುಮಾನ – ಶರಣ್ಯಾ ಶರ್ಮ ಹಾಗೂ ಎಸ್.ಎಸ್. ಸುಮೇಧಾ ರಾವ್ – ಮಹಾವೀರ ಶಾಲೆ ( ವಿಜಯ ನಗರ ತಂಡ)

Radio Shivamogga  ವಿಜೇತರು ಹಾಗೂ ಭಾಗವಹಿಸಿದ ಎಲ್ಲರನ್ನುಅಭಿನಂದಿಸಿರುವ ನಿಲಯದ ನಿರ್ದೇಶಕ ಜಿ.ಎಲ್. ಜನಾರ್ದನ್ ಹಾಗೂ ಪರಿಸರ ಅಧ್ಯಯನ ಕೇಂದ್ರದ ಖಜಾಂಚಿ ಚಂದ್ರಶೇಖರ್ ಇಂತಹ ವಿಶೇಷ ಕಾರ್ಯಕ್ರಮ ರೇಡಿಯೋ ಶಿವಮೊಗ್ಗದಲ್ಲಿ ಸದಾ ಬಿತ್ತರವಾಗುತ್ತಿರುತ್ತದೆ. ಗೂಗಲ್ ಪ್ಲೇ ಸ್ಟೋರ್, ಆಪಲ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ಕೇಳಿ, ಸಕ್ರಿಯವಾಗಿ ಭಾಗವಹಿಸಿ ಎಂದು ಕೋರಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...