Monday, April 6, 2026
Monday, April 6, 2026
Home Blog Page 606

Kote Sri Seetharamanjaneya Temple ಶ್ರಾವಣ ಶನಿವಾರ ಕೋಟೆ ಆಂಜನೇಯ ದೇಗುಲದಲ್ಲಿ ವಿಶೇಷ ಭಕ್ತಿಸಂಗೀತ ಕಾರ್ಯಕ್ರಮ

0

Kote Sri Seetharamanjaneya Temple ಶಿವಮೊಗ್ಗ ನಗರದ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಎರಡನೇ ಶ್ರಾವಣ ಶನಿವಾರದ ಪ್ರಯುಕ್ತ, ಆ. 17ರಂದು ಸಂಜೆ 6 ಗಂಟೆಗೆ ಕೆನಡಾದ ಸೂಕ್ತ ಪಟ್ಟಾಭಿರಾಮನ್‌ರವರಿಂದ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇವರೊಂದಿಗೆ ಸಹಗಾಯನದಲ್ಲಿ ನಿಶ್ಚಯ್ ಜೈನ್ ಪಾಲ್ಗೊಳ್ಳಲಿದ್ದಾರೆ. ಪಕ್ಕ ವಾದ್ಯದಲ್ಲಿ ಮೆಲ್ವಿನ್‌ರವರಿಂದ ಕೀಬೋರ್ಡ್, ತುಕಾರಾಮ್ ರಂಗಧೋಳ್‌ರವರಿಂದ ತಬಲಾ ಹಾಗೂ ವಿಠಲ್ ರಂಗಧೋಳ್‌ರಿಂದ ರಿಧಂ ಪ್ಯಾಡ್ ಸಹಕಾರವಿದೆ.

Kote Sri Seetharamanjaneya Temple ಭಕ್ತಾದಿಗಳು ಈ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

Rotary Shivamogga ವಿದ್ಯಾರ್ಥಿಗಳು ಸಮಾಜಮುಖಿಯಾಗಲು ಇಂಟರ್ಯಾಕ್ಟ್ ಕ್ಲಬ್ ಸಹಕಾರಿ- ಅರುಣ್ ದೀಕ್ಷಿತ್

0

Rotary Shivamogga ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಹಾಗೂ ಸಮಾಜಮುಖಿಯಾಗಿ ಜೀವನಶೈಲಿ ರೂಪಿಸಿಕೊಳ್ಳಲು ಇಂಟರ‍್ಯಾಕ್ಟ್ ಕ್ಲಬ್ ತುಂಬಾ ಸಹಕಾರಿ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಇಂಟರ‍್ಯಾಕ್ಟ್ ಕ್ಲಬ್‌ನ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ಟಿವಿ ನೋಡಲು ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಒಳ್ಳೆ ಒಳ್ಳೆಯ ಪುಸ್ತಕಗಳನ್ನು ಓದುವ ಮುಖಾಂತರ ಹಾಗೂ ಸಮಾಜದಲ್ಲಿ ಸಣ್ಣ ಸಣ್ಣ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅವಿಭಾಜ್ಯ ಅಂಗ ಇಂಟರ‍್ಯಾಕ್ಟ್ ಕ್ಲಬ್ ಮುಖಾಂತರ ಬೇರೆ ಬೇರೆ ದೇಶದಲ್ಲಿರುವ ಮಕ್ಕಳ ಜೊತೆಗೆ ಸಂಪರ್ಕ ಸಾಧನೆ ಮಾಡಿ ಅವರ ಪ್ರತಿಭೆಗಳನ್ನು ಅನಾವರಣಗೊಳಿಸಿಕೊಳ್ಳಬಹುದು. ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಉತ್ತಮವಾದ ವೇದಿಕೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮಾತನಾಡಿ, ತಂದೆ ತಾಯಿಗಳಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವಿಸಬೇಕು. ವಿದ್ಯಾಭ್ಯಾಸ ಜತೆಗೆ ಸಂಸ್ಕಾರ ಮುಖ್ಯ. ನಾವು ವಿದ್ಯೆ ಕಲಿಸಿಕೊಟ್ಟ ಗುರುಗಳು ಹಾಗೂ ಓದಿದ ಶಾಲೆಯನ್ನು ಮರೆಯಬಾರದು ಎಂದು ತಿಳಿಸಿದರು.

ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಬ್ಧಕೋಶಗಳನ್ನು ನೀಡಿ ಸನ್ಮಾನಿಸಲಾಯಿತು. ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಚೈತನ್ಯ, ಕಾರ್ಯದರ್ಶಿಯಾಗಿ ನಂದಿನಿ ತಮ್ಮ ತಂಡದೊಂದಿಗೆ ಅಧಿಕಾರ ವಹಿಸಿಕೊಂಡರು.

Rotary Shivamogga ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕ ಮುರಳೀಧರ್ ಮಾತನಾಡಿ, ನಮಗೆ ರೋಟರಿ ಸಂಸ್ಥೆಯಿಂದ ಸಾಕಷ್ಟು ಸಹಾಯವಾಗಿದೆ. ಬರುವ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಅದಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

ಶಿಕ್ಷಕರಾದ ಶ್ವೇತಾ, ಸವಿತಾ ಹಾಗೂ ಶಿಕ್ಷಕರು, ಕಿಶೋರ್, ಧನಂಜಯ ರಾಂಪುರ ಉಪಸ್ಥಿತರಿದ್ದರು.

Shimul Election ಶಿಮುಲ್ ಚುನಾವಣೆ ಫಲಿತಾಂಶ ಪ್ರಕಟಣೆ

0

Shimul Election ಶಿಮುಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಹಳೇ ಮುಖಗಳ ಜತೆ ಹೊಸಮುಖಗಳು ಸಹ ಈ ಬಾರಿ ಗೆಲುವು ಸಾಧಿಸಿದ್ದಾರೆ.
12 ಸ್ಥಾನಕ್ಕೆ ಪೈಕಿ 31 ಜನ ಸ್ಪರ್ಧಿಸಿದ್ದರು. ಇದರಲ್ಲಿ ಇಬ್ವರು ಅವಿರೋಧ ಆಯ್ಕೆಯಾಗಿತ್ತು. ಪಟ್ಟಿ ಹೀಗಿದೆ. ಶಿವಮೊಗ್ಗವಿಭಾಗದಿಂದ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದು, ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಬಿ.ದಿನೇಶ್ ಬಹುಮತ ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ.
Shimul Election ಸಾಗರ ವಿಭಾಗದಿಂದ ವಿದ್ಯಾಧರ್ ಅವಿರೋಧ ಆಯ್ಕೆಯಾಗಿದ್ದು, ಅವರದ್ದೆ ಸಿಂಡಿಕೇಟ್‌ನಲ್ಲಿದ್ದ ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದ ಗೌಡ್ರು ಜಯಭೇರಿ ಭಾರಿಸಿದ್ದಾರೆ.
ದಾವಣಗೆರೆ ವಿಭಾಗದಿಂದ ಶಿಮುಲ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಚೇತನ್ ಎಸ್.ನಾಡಿಗೇರ್, ಬಿ.ಜಿ.ಬಸವರಾಜಪ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ವಿಭಾಗದಿಂದ ಜಿ.ಪಿ.ರೇವಣಸಿದ್ದಪ್ಪ, ಶೇಖರಪ್ಪ.ಜಿ.ಬಿ, ಸಂಜೀವಮೂರ್ತಿ, ಬಿ.ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ.

Agumbe Police ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಚಾಲಕನಿಗೆ₹ 10.000 ದಂಡ

0

Agumbe Police ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ಮದ್ಯಪಾನ ಸೇವನೆ ಮಾಡಿ ವಾಹನ ಚಾಲನೆ ಮಾಡಿದ ಸಂಬಂಧ ಪೊಲೀಸರು ವಾಹನ ತಡೆದು ಪ್ರಕರಣ ದಾಖಲಿಸಿದ್ದಾರೆ.
ಆಗುಂಬೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಂಗನಾಥ್ ಅಂತರಗಟ್ಟಿ ಮತ್ತು ತಂಡದವರಿಂದ ವಾಹನ ತಪಾಸಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುತಿದ್ದ ಉತ್ತರ ಪ್ರದೇಶದ ಆಕಾಶ್ (30) ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ರೂ.೧೦,೦೦೦ ದಂಡ ವಿಧಿಸಲಾಗಿದೆ.
Agumbe Police ಎಸ್ ಐ ನಾಗೇಶ್, ದಿವಾಕರ್, ಅನಿಲ್ ರವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಹೆಚ್ ಆರ್ ಎ ಕೆ 2783 ಕ್ಯಾಂಟರ್ ವಾಹನವನ್ನು ಚಾಲನೆ ಮಾಡುತ್ತಿದ್ದ ಆಕಾಶ್ ಎಂಬಾತ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವುದಾಗಿ ಪ್ರಕರಣ ದಾಖಲಿಸಿ ನ್ಯಾಯಲಯಕ್ಕೆ ವರದಿ ಮಾಡಿದ್ದು ದಿನಾಂಕ ೧೩.೦೮.೨೦೨೪ ರಂದು ಪ್ರಥಮ ದರ್ಜೆ ವ್ಯವಹಾರಗಳ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ತೀರ್ಥಹಳ್ಳಿ ನ್ಯಾಯಲಯ ನ್ಯಾಯಾಧೀಶರು ೧೦.೦೦೦ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.

Forest Department ಕರಡಿಗೇ ಸೆಡ್ಡು ಹೊಡೆದು ಓಡಿಸಿದ ವೀರನಿಗೆ ಪರಚಿದ ಗಾಯಗಳಾಗಿ ಜೀವದುಳಿವು

0

Forest Department ಭದ್ರಾವತಿ ತಾಲ್ಲೂಕುನ ಸಮೀಪದ ಕೂಡ್ಲಿಗೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ಅವರಿಗೆ ಪರಚಿದ ಗಾಯಗಳಾಗಿರುವ ಘಟನೆ ನಡೆದಿದೆ. ಗಾಯಾಳು ಗ್ರಾಮದ ಮೋಹನ್(36) ಕೃಷಿ ಸಾಮಾನು ಸರಂಜಾಮು ಸಂಗ್ರಹ ಮಾಡಿರುವ ಹೊಸ ಮನೆಯಲ್ಲಿ ರಾತ್ರಿ ವೇಳೆ ಆದರೆ, ಈ ಮುನ್ನವೇ ಮನೆಯೊಳಗೆ ಸೇರಿಕೊಂಡಿದ್ದ ಕರಡಿ ಏಕಾಏಕಿ ಮೋಹನ್ ಮೇಲೆ ದಾಳಿ ನಡೆಸಿದೆ.
Forest Department ಕರಡಿ ದಾಳಿಯಿಂದ ಗಾಬರಿಯಾದರೂ ಹೆದರದ ಮೋಹನ್, ಅದರೊಂದಿಗೆ ಸೆಣೆಸಾಡಿದ್ದಾರೆ. ಛಲಬಿಡದೇ ಕರಡಿಯೊಂದಿಗೆ ಹೋರಾಡಿದ್ದು, ಅದನ್ನು ಎತ್ತಿ ಬಿಸಾಡಿದ್ದಾರೆ. ಇದರಿಂದ ಹೆದರಿದ ಕರಡಿ ಅರಣ್ಯ ಪ್ರದೇಶದ ಕಡೆ ಓಡಿಹೋಗಿದೆ.
ಕರಡಿಯೊಂದಿಗೆ ಹೋರಾಡುವ ವೇಳೆ ಮೋಹನ್ ಅವರ ಬೆನ್ನು ಹಾಗೂ ಕೈಗೆ ಪರಚಿದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

Guarantee scheme ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಗೊಂದಲಗಳಿದ್ದರೂ ಕಚೇರಿಯಲ್ಲಿ ಪರಿಹಾರ- ಶಾಸಕಿ ಬಲ್ಕೀಷ್ ಬಾನು

0

Guarantee scheme ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಛೇರಿಯ ಉದ್ಘಾಟನೆಯನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಭಾನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಬಡವರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಕಲ್ಪಿಸಲು ಬದ್ಧವಾಗಿದೆ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ ಮೇಲ್ವೀಚಾರಣೆಗಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ಸರ್ಕಾರ ರಚನೆ ಮಾಡಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಕೂಡ ತೆರೆಯಲಾಗಿದೆ. ಶಿವಮೊಗ್ಗ ತಾಲ್ಲೂಕಿನ ಕಛೇರಿಯನ್ನು ಇಂದು ಉದ್ಘಾಟಿಸಿದ್ದು, ಗ್ಯಾರಂಟಿ ಯೋಜನೆಯ ಯಾವುದೇ ಗೊಂದಲವಿದ್ದರೂ ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
Guarantee scheme ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಹೆಚ್.ಸಿ.ಯೋಗೀಶ್, ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಮಧು ಹೆಚ್.ಎಂ., ಹಾಗೂ ಸದಸ್ಯರುಗಳಾದ ದೇವಿಕುಮಾರ್, ನಿಖಿಲ್‍ಮೂರ್ತಿ, ಕುಮರೇಶ್, ಮಹೇಶ್ವರಪ್ಪ, ಭಾರತಿ ನಾಗರಾಜ್, ಶೇಷಾದ್ರಿ, ಮಲ್ಲಿಕಾರ್ಜುನ್, ಮೋಹನ್ ಕೆ.ಎಸ್., ಎಲಿಜೆಬೆತ್ ಗ್ಲ್ಯಾಡಿಸ್, ಅಜೀಜ್ ಉಲ್ಲಾಖಾನ್, ವಾಗೀಶ್ ಬಿ.ಆರ್. ಜಗದೀಶ್ವರ್, ಬಸವರಾಜ್, ಇರ್ಫಾನ್, ಚಾಂದ್‍ಪಾಶ, ಸ್ಟೆಲ್ಲಾ ಮಾರ್ಟಿನ್, ಅರ್ಚನಾ,ಖಲೀಂ ಪಾಶಾ, ಬಸವರಾಜ್, ಜಗದೀಶ್ ಮತ್ತಿತರರಿದ್ದರು.

Kateel Ashok pai College ಶಿಕ್ಷಣ ಎರಡನೇ ಹುಟ್ಟು.ವಿಶೇಷ ಜ್ಞಾನದೊಂದಿಗೆ ಪ್ರಪಂಚ ಜ್ಞಾನವನ್ನು ಪಡೆದುಕೊಳ್ಳಿ- ಕೆ.ವಿ.ಅಕ್ಷರ

0

Kateel Ashok pai College ಕಾಲೇಜುಗಳು ರಸ್ತೆಗೆ ಒಂದೊಂದು ಆಗಿದೆ. ಆದರೆ ಕ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,ರಂಗಭೂಮಿ, ಸಾಹಿತ್ಯ ಕ್ರೀಡೆ, ವಿದ್ಯೆ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಕಾಲೇಜು ವಿಶ್ವ ವಿದ್ಯಾಲಯದ ಹಾಗೆ ರೂಪಾಂತರ ಗೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಹಿರಿಯ ಸಾಹಿತಿಗಳು, ರಂಗಕರ್ಮಿಗಳಾದ ಕೆ.ವಿ. ಅಕ್ಷರ ಅವರು ಅಭಿಪ್ರಾಯಪಟ್ಟರು.

ಅವರು ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಸಂಸ್ಥೆಗಳು ಐಕ್ಯೂ ಎಸಿ ಐ ರಾಷ್ಟ್ರೀಯ ಸೇವಾ ಯೋಜನೆ ರಾಷ್ಟ್ರೀಯ ಸೇವಾ ಯೋಜನೆ ಯೋಜನೆ , ಯುವ ರೆಡ್ ಕ್ರಾಸ್ ಘಟಕ ಹಾಗೂ ಕಾಲೇಜಿನ ಎಲ್ಲಾ ವೇದಿಕೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನುದೇಶಿಸಿ ಮಾತನಾಡಿ, ಕಾಲೇಜು ಇರುವುದು ನಾನಾ ವರ್ಗ ಜಾತಿಗಳಿರುವ ವೃಕ್ತಿಗಳು ತಮ್ಮ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳಲು ಸೂಕ್ತ ಜಾಗ. ಜಿವನೋಪಾನಕ್ಕೆ ಕಾಲೇಜು ಅಗತ್ಯ. ಶಿಕ್ಷಣ ಪ್ರಪಂಚದ ಬಗ್ಗೆ ತಿಳಿಸುತ್ತದೆ. ಶಿಕ್ಷಣ ಎರಡನೇ ಹುಟ್ಟು. ಎಲ್ಲಾ ವಿದ್ಯೆಗಳನ್ನು ತಿಳಿದುಕೊಂಡು ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅಗತ್ಯ. ವಿಶೇಷ ಜ್ಞಾನದೊಂದಿಗೆ ಪ್ರಪಂಚ ಜ್ಞಾನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ರಂಗಕರ್ಮಿಗಳಾದ ವಿದ್ಯಾ ಹೆಗಡೆಯವರು ಮಾತನಾಡಿ , ರಂಗಭೂಮಿ ಜನರೊಂದಿಗೆ ಒಡನಾಟವನ್ನು ಕಲಿಸಿದೆ. ಈ ಸಮಾಜದಲ್ಲಿ ಸಾಮಾಜಿಕ ತಾರತಮ್ಯವಿದೆ ಎಂದು ತಿಳಿದುಕೊಳ್ಳಲು ರಂಗಭೂಮಿ ಸಹಕಾರಿಯಾಯಿತು. ಹೊರಗಿನ ಪ್ರಪಂಚವನ್ನು ನೋಡುತ್ತಾ, ನೋಡುತ್ತಾ ನಮ್ಮನ್ನು ನಾವು ಕಂಡುಕೊಳ್ಳಬೇಕಿದೆ. ಕಾಲೇಜು ಜೀವನ ಮುಗಿದ ನಂತರವೂ ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾಗಿ ಕಲಿತ ವಿದ್ಯೆಯನ್ನು ಸಾಮಾಜಿಕವಾಗಿ ರೂಢಿಸಿಕೊಳ್ಳಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ.ರವಿಂದ್ರ ಗೌಡ ಎಸ್.ಎಂ ಅವರು ಮಾತನಾಡಿ, ಕಟೀಲ್ ಅಶೋಕ್ ಪೈ ಸಂಸ್ಕೃತಿಯನ್ನ ಬೆಳೆಸುವ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಸದಾ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಡಾ. ಪುಷ್ಪಲತಾ ಅವರು ಮಾತನಾಡಿ, ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವುವವರು ಮಾತ್ರ ಸಾಧಕರಲ್ಲ. ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿಯೂ ಭಾಗವಹಿಸುವವರು ಕೂಡಾ ಸಾಧಕರು. ವಿದ್ಯಾರ್ಥಿಗಳ ಜೀವನದಲ್ಲಿ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅಭಿವೃದ್ಧಿ ಕಾಣಬೇಕು ಎಂದು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ಮಾತನಾಡಿ, ಪಠ್ಯೇತರವಾಗಿ ವಿಧ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಬಿಳ್ಕೊಡುವ ಸಂದರ್ಭವಿದು. ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂದು ಆಶಿಸಿದರು.

Kateel Ashok pai College ಮಾನಸ ಟ್ರಸ್ಟ್ ನ ನಿರ್ದೇಶಕರಾದ ರಜನಿ ಪೈ ಅವರು ಮಾತನಾಡಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಮಾರ್ಗದರ್ಶಕರ ಸಹಕಾರದೊಂದಿಗೆ ಕಾಲೇಜು ವಿವಿಧ ಆಯಾಮಗಳಲ್ಲಿ ಮೈಲಿಗಲ್ಲನ್ನು ದಾಟಿದೆ. ಕಾಲೇಜು ಕಳೆದ ಆರು ವರ್ಷಗಳಲ್ಲಿ ಹಲವಾರು ಸಾಧನೆಗಳನ್ನು ಸಾಧಿಸಿದೆ‌. ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಒಳ್ಳೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ರ್ಯಾಂಕ್ ವಿಜೇತರಿಗೆ, ಕಾಲೇಜಿನ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿಧ್ಯಾರ್ಥಿಗಳಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ ವಿ ಶಾನಭಾಗ್, ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಪ್ರೋ. ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿ ಪ್ರೋ.ರಾಮಚಂದ್ರ ಬಾಳಿಗ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ಸುಕೀರ್ತಿ, ರಾಬರ್ಟ್ ರಾಯಪ್ಪ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಐ ಕ್ಯೂ ಎಸಿ ಸಂಯೋಜಕರಾದ ಡಾ. ಅರ್ಚನಾ ಭಟ್, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಮಂಜುನಾಥ ಸ್ವಾಮಿ, ಉಪನ್ಯಾಸಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Department of Minority Welfare ಮೆಟ್ರಿಕ್ ನಂತರದ ಹಾಸ್ಟೆಲ್ ಗಳ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಆಹ್ವಾನ

0

Department of Minority Welfare ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25 ಸಾಲಿನಲ್ಲಿ ಮೆಟ್ರಿಕ್ ನಂತರದ (ಸಾಮಾನ್ಯ ಪದವಿ ಮಟ್ಟದ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಮಾತ್ರ) ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅರ್ಜಿಯನ್ನು ರಾಜ್ಯ ವಿದ್ಯಾರ್ಥಿ ನಿಲಯದ ತಂತ್ರಾಂಶ https://shp.karnataka.gov.in ರಲ್ಲಿ ಸೆ.12 ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Department of Minority Welfare ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಶಿವಮೊಗ್ಗ – 08182-220206, ಶಿವಮೊಗ್ಗ ವಿಸ್ತರಣಾಧಿಕಾರಿಗಳು- 9731979131, ಸಾಗರ ವಿಸ್ತರಣಾಧಿಕಾರಿಗಳು-9110278031, ಶಿವಮೊಗ್ಗ ಜಿಲ್ಲಾ ಮಾಹಿತಿ ಕೇಂದ್ರ-7676888388, ತಾಲೂಕು ಮಾಹಿತಿ ಕೇಂದ್ರಗಳಾದ ಭದ್ರಾವತಿ-9538853680, ತೀರ್ಥಹಳ್ಳಿ-8861982835, ಶಿಕಾರಿಪುರ-7829136724, ಸಾಗರ-7338222907, ಸೊರಬ-9513815513, ಹೊಸನಗರ-9008447029 ಗಳನ್ನು ಸಂಪರ್ಕಿಸುವುದು.

Independence Day “ನಶಾ ಮುಕ್ತ ಭಾರತ” ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ

0

Independence Day ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಿಂದ ಇಂದು ಏರ್ಪಡಿಸಿದ್ದ ಮ್ಯಾರಾಥಾನ್ ಓಟದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್., ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ
Independence Day ಶ್ರೀಮತಿ ಶಶಿರೇಖಾ, ಆದಿಚುಂಚನಗಿರಿ‌ ಶಾಖಾ ಮಠದ ಮುಖ್ಯಸ್ಥರು, ಸಿಬ್ಬಂದಿಗಳು, ಕ್ರೀಡಾಳುಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ “ನಶಾ ಮುಕ್ತ ಭಾರತ” ದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Karnataka Land Grab Prohibition Special Court ಶಿಕಾರಿಪುರ ತಾಲ್ಲೂಕಿನ ಭದ್ರಾಪುರದಲ್ಲಿ ಸರ್ಕಾರದ ಭೂಕಬಳಿಕೆ ಮಾಡಿದವರಿಗೆ ಶಿಕ್ಷೆ ಪ್ರಕಟ

0

Karnataka Land Grab Prohibition Special Court ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲವು 2024ರ ಜುಲೈ ತಿಂಗಳಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆ ಮತ್ತು ಭೂ ಕಬಳಿಕೆಯಾದ ಜಮೀನನ್ನು ಸರ್ಕಾರಕ್ಕೆ ವಾಪಸ್ಸು ಪಡೆಯಲು ಅದೇಶ ನೀಡಿರುತ್ತದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಭದ್ರಾಪುರ ಗ್ರಾಮದ ಸರ್ವೆ ನಂ. 19ರ ಸರ್ಕಾರಿ ಜಮೀನಿನನ್ನು ಅದೇ ಗ್ರಾಮದ ಚನ್ನಯ್ಯ ಬಿನ್ ವೀರಯ್ಯ ಎಂಬುವವರು 25 ಗುಂಟೆ ಜಮೀನು ಹಾಗೂ ಬಸಪ್ಪ ಬಿನ್ ಲೇಟ್ ಅಯ್ಯಣ್ಣ ಎಂಬುವವರು 36 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ ಎಂಬ ಗ್ರಾಮಸ್ಥರ ದೂರಿನನ್ವಯ ಶಿಕಾರಿಪುರ ತಹಶೀಲ್ದಾರ್ ನೀಡಿ ದೂರನ್ನು ಪರಿಗಣಿಸಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕ.ಭೂ.ಕಂ. ಅಧಿನಿಯಮದಡಿ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

Karnataka Land Grab Prohibition Special Court ಈ ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವೀಕರಿಸಿ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿತರು ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/-ರೂ. ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು 2ನೇ ವಿಶೇಷ ನ್ಯಾಯಾಲಯದ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ಪೀಠವು ಜು.25 ರಂದು ತೀರ್ಪು ನೀಡಿದೆ.

ಆರೋಪಿತರು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಶಿಕಾರಿಪುರ ತಹಶೀಲ್ದಾರ್‌ರವರಿಗೆ ನೀರ್ದೇಶಿಸಿ ತೀರ್ಪು ನೀಡಿದೆ.