Friday, June 13, 2025
Friday, June 13, 2025

Kateel Ashok pai College ಶಿಕ್ಷಣ ಎರಡನೇ ಹುಟ್ಟು.ವಿಶೇಷ ಜ್ಞಾನದೊಂದಿಗೆ ಪ್ರಪಂಚ ಜ್ಞಾನವನ್ನು ಪಡೆದುಕೊಳ್ಳಿ- ಕೆ.ವಿ.ಅಕ್ಷರ

Date:

Kateel Ashok pai College ಕಾಲೇಜುಗಳು ರಸ್ತೆಗೆ ಒಂದೊಂದು ಆಗಿದೆ. ಆದರೆ ಕ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,ರಂಗಭೂಮಿ, ಸಾಹಿತ್ಯ ಕ್ರೀಡೆ, ವಿದ್ಯೆ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಕಾಲೇಜು ವಿಶ್ವ ವಿದ್ಯಾಲಯದ ಹಾಗೆ ರೂಪಾಂತರ ಗೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಹಿರಿಯ ಸಾಹಿತಿಗಳು, ರಂಗಕರ್ಮಿಗಳಾದ ಕೆ.ವಿ. ಅಕ್ಷರ ಅವರು ಅಭಿಪ್ರಾಯಪಟ್ಟರು.

ಅವರು ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಸಂಸ್ಥೆಗಳು ಐಕ್ಯೂ ಎಸಿ ಐ ರಾಷ್ಟ್ರೀಯ ಸೇವಾ ಯೋಜನೆ ರಾಷ್ಟ್ರೀಯ ಸೇವಾ ಯೋಜನೆ ಯೋಜನೆ , ಯುವ ರೆಡ್ ಕ್ರಾಸ್ ಘಟಕ ಹಾಗೂ ಕಾಲೇಜಿನ ಎಲ್ಲಾ ವೇದಿಕೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನುದೇಶಿಸಿ ಮಾತನಾಡಿ, ಕಾಲೇಜು ಇರುವುದು ನಾನಾ ವರ್ಗ ಜಾತಿಗಳಿರುವ ವೃಕ್ತಿಗಳು ತಮ್ಮ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳಲು ಸೂಕ್ತ ಜಾಗ. ಜಿವನೋಪಾನಕ್ಕೆ ಕಾಲೇಜು ಅಗತ್ಯ. ಶಿಕ್ಷಣ ಪ್ರಪಂಚದ ಬಗ್ಗೆ ತಿಳಿಸುತ್ತದೆ. ಶಿಕ್ಷಣ ಎರಡನೇ ಹುಟ್ಟು. ಎಲ್ಲಾ ವಿದ್ಯೆಗಳನ್ನು ತಿಳಿದುಕೊಂಡು ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅಗತ್ಯ. ವಿಶೇಷ ಜ್ಞಾನದೊಂದಿಗೆ ಪ್ರಪಂಚ ಜ್ಞಾನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ರಂಗಕರ್ಮಿಗಳಾದ ವಿದ್ಯಾ ಹೆಗಡೆಯವರು ಮಾತನಾಡಿ , ರಂಗಭೂಮಿ ಜನರೊಂದಿಗೆ ಒಡನಾಟವನ್ನು ಕಲಿಸಿದೆ. ಈ ಸಮಾಜದಲ್ಲಿ ಸಾಮಾಜಿಕ ತಾರತಮ್ಯವಿದೆ ಎಂದು ತಿಳಿದುಕೊಳ್ಳಲು ರಂಗಭೂಮಿ ಸಹಕಾರಿಯಾಯಿತು. ಹೊರಗಿನ ಪ್ರಪಂಚವನ್ನು ನೋಡುತ್ತಾ, ನೋಡುತ್ತಾ ನಮ್ಮನ್ನು ನಾವು ಕಂಡುಕೊಳ್ಳಬೇಕಿದೆ. ಕಾಲೇಜು ಜೀವನ ಮುಗಿದ ನಂತರವೂ ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾಗಿ ಕಲಿತ ವಿದ್ಯೆಯನ್ನು ಸಾಮಾಜಿಕವಾಗಿ ರೂಢಿಸಿಕೊಳ್ಳಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ.ರವಿಂದ್ರ ಗೌಡ ಎಸ್.ಎಂ ಅವರು ಮಾತನಾಡಿ, ಕಟೀಲ್ ಅಶೋಕ್ ಪೈ ಸಂಸ್ಕೃತಿಯನ್ನ ಬೆಳೆಸುವ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಸದಾ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಡಾ. ಪುಷ್ಪಲತಾ ಅವರು ಮಾತನಾಡಿ, ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವುವವರು ಮಾತ್ರ ಸಾಧಕರಲ್ಲ. ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿಯೂ ಭಾಗವಹಿಸುವವರು ಕೂಡಾ ಸಾಧಕರು. ವಿದ್ಯಾರ್ಥಿಗಳ ಜೀವನದಲ್ಲಿ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅಭಿವೃದ್ಧಿ ಕಾಣಬೇಕು ಎಂದು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ಮಾತನಾಡಿ, ಪಠ್ಯೇತರವಾಗಿ ವಿಧ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಬಿಳ್ಕೊಡುವ ಸಂದರ್ಭವಿದು. ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂದು ಆಶಿಸಿದರು.

Kateel Ashok pai College ಮಾನಸ ಟ್ರಸ್ಟ್ ನ ನಿರ್ದೇಶಕರಾದ ರಜನಿ ಪೈ ಅವರು ಮಾತನಾಡಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಮಾರ್ಗದರ್ಶಕರ ಸಹಕಾರದೊಂದಿಗೆ ಕಾಲೇಜು ವಿವಿಧ ಆಯಾಮಗಳಲ್ಲಿ ಮೈಲಿಗಲ್ಲನ್ನು ದಾಟಿದೆ. ಕಾಲೇಜು ಕಳೆದ ಆರು ವರ್ಷಗಳಲ್ಲಿ ಹಲವಾರು ಸಾಧನೆಗಳನ್ನು ಸಾಧಿಸಿದೆ‌. ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಒಳ್ಳೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ರ್ಯಾಂಕ್ ವಿಜೇತರಿಗೆ, ಕಾಲೇಜಿನ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿಧ್ಯಾರ್ಥಿಗಳಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ ವಿ ಶಾನಭಾಗ್, ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಪ್ರೋ. ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿ ಪ್ರೋ.ರಾಮಚಂದ್ರ ಬಾಳಿಗ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ಸುಕೀರ್ತಿ, ರಾಬರ್ಟ್ ರಾಯಪ್ಪ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಐ ಕ್ಯೂ ಎಸಿ ಸಂಯೋಜಕರಾದ ಡಾ. ಅರ್ಚನಾ ಭಟ್, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಮಂಜುನಾಥ ಸ್ವಾಮಿ, ಉಪನ್ಯಾಸಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...