Monday, April 6, 2026
Monday, April 6, 2026
Home Blog Page 607

International Youth Day ವಿದ್ಯಾರ್ಥಿಗಳಲ್ಲಿ ಎಚ್ ಐವಿ/ಏಡ್ಸ್ ,ರಕ್ತದಾನದ ಬಗ್ಗೆ ಜಾಗೃತಿಗೆ ಮ್ಯಾರಥಾನ್ ಸ್ಪರ್ಧೆ

0

International Youth Day ಅಂತರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದಲ್ಲಿ ಹೆಚ್.ವೈ.ವಿ/ಏಡ್ಸ್ ಕುರಿತು ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು, ಹೆಚ್‌ಐವಿ/ಏಡ್ಸ್(ತಡೆ) ಕಾಯ್ದೆ 2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್‌ಟಿಐ ಇತ್ಯಾದಿ ಬಗ್ಗೆ ಅರಿವು ಮೂಡಿಸಲು ಮ್ಯಾರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ಹೆಚ್‌ಐವಿ/ಏಡ್ಸ್ ಮತ್ತು ರಕ್ತದಾನ ಮಹತ್ವವನ್ನು ತಿಳಿಸುವ ಉದ್ದೇಶದಿಮದ ಜಿಲ್ಲೆಯ ರೆಡ್ ರಿಬ್ಬನ್ ಕ್ಲಬ್(ಆರ್‌ಆರ್‌ಸಿ) ಹೊಂದಿರುವ ಕಾಲೇಜುಗಳ ಎನ್‌ಎಸ್‌ಎಸ್ ಅಧಿಕಾರಿಗಳ ಸಹಯೋಗದೊಂದಿಗೆ ಆ.16 ರ ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಲಾಗಿದೆ.

ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಕಾರ್ಯಕ್ರಮಾಧಿಕಾರಿಗಳ ಉಪಸ್ಥಿತಿಯಲ್ಲಿ ಮ್ಯಾರಥಾನ್ ನಡೆಯಲಿದೆ.

International Youth Day ಮ್ಯಾರಥಾನ್ ಮಾರ್ಗ: ನೆಹರು ಕ್ರೀಡಾಂಗಣದಿಂದ ಪ್ರಾರಂಭವಾಗಿ ಜೈಲ್ ಸರ್ಕಲ್, ಗೋಪಿ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್‌ನಿಂದ ಮುಂದುವರೆದು ವೀರಭದ್ರೇಶ್ವರ ಟಾಕೀಸ್ ಮುಖಾಂತರ ನೆಹರು ಕ್ರೀಡಾಂಗಣದಲ್ಲಿ ಕೊನೆಗೊಳ್ಳುವುದು ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ.ದಿನೇಶ್ ತಿಳಿಸಿದ್ದಾರೆ.

Shivamogga Forest Department ಹೊಳಲೂರು ಹೋಬಳಿ ಬಿಕ್ಕೋನಹಳ್ಳಿ ಮೀಸಲು ಅರಣ್ಯ ಒತ್ತುವರಿ ಅಪರಾಧಕ್ಕೆ ಶಿಕ್ಷೆ ಪ್ರಕಟ

0

Shivamogga Forest Department ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಹೋಬಳಿಯ ಬಿಕ್ಕೋನಹಳ್ಳಿ ಗ್ರಾಮದ ಸರ್ವೇ ನಂ 09 ರ ಕುಂಚೇನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅದೇ ಗ್ರಾಮದ ಚಂದ್ರಪ್ಪ, 50 ವರ್ಷ ಇವರು 01 ಎಕರೆ 20 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದ ಕಾರಣ ಆರೋಪಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶಿಸಿದೆ.
ದೂರುದಾರರಾದ ಉಪ ವಲಯ ಅರಣ್ಯಾಧಿಕಾರಿ, ಗೆಜ್ಜೇನಹಳ್ಳಿ ಶಾಖೆ, ಶಂಕರ ವಲಯ, ಶಿವಮೊಗ್ಗ ಇವರು ದೂರು ನೀಡಿದ ಅನ್ವಯ Shivamogga Forest Department ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಎಲ್‌ಜಿಸಿ(ಸಿ) ಸಂಖ್ಯೆ 1726/2019 ಎಂದು ದಾಖಲಿಸಿಕೊಂಡು ಸಂಪೂರ್ಣ ಸಾಕ್ಷö್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿಯು ಅರಣ್ಯ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10,000/- ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್.ಅಶ್ವತ್ಥ ನಾರಾಯಣಗೌಡ ಇವರು ಇದ್ದ ಪೀಠವು ದಿ: 11-07-2024 ರಂದು ತೀರ್ಪು ನೀಡಿರುತ್ತದೆ.
ಆರೋಪಿತರು ಒತ್ತುವರಿ ಮಾಡಿಕೊಂಡ ಅರಣ್ಯ ಜಮೀನನ್ನು ಕೂಡಲೇ ತೆರವುಗೊಳಿಸುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಉಪ ವಲಯ ಅರಣ್ಯಾಧಿಕಾರಿ, ಗೆಜ್ಜೇನಹಳ್ಳಿ, ಶಾಖೆ, ಶಂಕರ ವಲಯ ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.

MESCOM ಆಗಸ್ಟ್ 16 ರಿಂದ 18 ರವರೆಗೆ ಹಾಡೋನಹಳ್ಳಿ, ಹಳೆ/ ಹೊಸ ಮಡಿಕೆ ಚೀಲೂರು ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ಹೊಳಲೂರು 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ಲಿಂಕ್‌ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 16 ರಿಂದ 18 ರವರೆಗೆ 3 ದಿನಗಳ ಕಾಲ ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು, ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Acharya Tulsi National College of Commerce ಮಾಹಿತಿ & ತಂತ್ರಜ್ಞಾನದ ಸದ್ಬಳಕೆ ಮೂಲಕ‌ ಅಭಿವೃದ್ಧಿ-ಎಂ.ಎಸ್.ಸುಪ್ರೀತ್

0

Acharya Tulsi National College of Commerce ಶಿವಮೊಗ್ಗ, ಆ.13, (ಕರ್ನಾಟಕ ವಾರ್ತೆ):
ಪ್ರಸ್ತುತ ಅಗಾಧವಾದ ಮಾಹಿತಿ ಮತ್ತು ತಂತ್ರಜ್ಞಾನ ನಮಗೆ ಲಭ್ಯವಿದ್ದು ಯುವಜನತೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ದಿ ಹೊಂದಬಹುದು ಎಂದು ಮೈಸೂರಿನ ಪರಂಪರೆ-ಪರಿಸರ ಪಾಠಶಾಲಾ ಸಂಸ್ಥೆಯ ಸ್ಥಾಪಕರಾದ ಸುಪ್ರೀತ್ ಎಂ ಎಸ್ ಹೇಳಿದರು.
ರಾಷ್ಟಿçÃಯ ಶಿಕ್ಷಣ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಸೇಯೋ, ಬೆಂಗಳೂರು, ಕುವೆಂಪು ವಿಶ್ವವಿದ್ಯಾಲಯ, ಆಚಾರ್ಯ ತುಳಸಿ ರಾಷ್ಟಿçÃಯ ವಾಣಿಜ್ಯ ಕಾಲೇಜು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಗಾಂಧಿತತ್ವ ಪ್ರಣೀತ ಯುವಜನ ಶಿಬಿರದ 4 ನೇ ದಿನದಂದು(ಆ.12) ‘ಸೇವಾಸ್ಪಂದನ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
3 ‘ಟಿ’ ಕೌಶಲ್ಯಗಳಾದ ಟೂಲ್ಸ್, ಟೆಕ್ನಿಕ್ ಮತ್ತು ಟ್ಯಾಲೆಂಟ್ ಅಂದರೆ ಸಾಧನಗಳು, ತಾಂತ್ರಿಕತೆ ಮತ್ತು ಪ್ರತಿಭೆಯು ಬಹುಮುಖ್ಯವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಇವನ್ನು ಬಳಸಿಕೊಂಡು ಮುಂದೆ ಬರಬಹುದು.
ಭಾರತೀಯರಾದ ನಾವು ನಮ್ಮಲ್ಲೇ ತಯಾರಿಸಲಾದ ದೇಸೀ ಉತ್ಪನ್ನಗಳನ್ನು ಬಳಸುವ ಕಡೆ ಹೆಚ್ಚು ಗಮನ ಹರಿಸಬೇಕು ಹಾಗೂ ಈ ಮೂಲಕ ದೇಶದ ಆರ್ಥಿಕಾಭಿವೃದ್ದಿಗೆ ನಮ್ಮದೇ ಕೊಡುಗೆಗಳನ್ನು ನೀಡಲು ಮುಂದಾಗಬೇಕೆAದು ಇದೇ ವೇಳೆ ಕರೆ ನೀಡಿದ ಅವರು ಅಂತರಾಷ್ಟಿçÃಯ ಯುವ ದಿನಾಚರಣೆಯ ಶುಭ ಕೋರಿದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭ ಮರವಂತೆ ಮಾತನಾಡಿ, ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಬಾಳ್ವೆ, ಸಂಯಮ ಮತ್ತು ಮಾತನಾಡುವ ಕೌಶಲ್ಯವನ್ನು ಅಭಿವೃದ್ದಿಪಡಿಸಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆಯ ಸರಿಯಾದ ಉಚ್ಚಾರಣೆ, ಸಮನ್ವಯತೆಯನ್ನು ಅರ್ಥ ಮಾಡಿಕೊಂಡು ಬಳಸಬೇಕು. ಶಿಬಿರವು ಒಂದು ಶಿಸ್ತಿನ ವಾತಾವರಣವನ್ನು ಹೊಂದಿದ್ದು ಬೆಳಗಿನಿಂದ ರಾತ್ರಿವರೆಗೆ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುತ್ತಾರೆ. ವಿಶೇಷವಾಗಿ ಬೆಳಗಿನ ಸೌಂದರ್ಯ ಮತ್ತು ಉತ್ತಮ ಪರಿಸರವನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದರು.
Acharya Tulsi National College of Commerce ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಭಾಗ್ಯ ಎಂ ಟಿ ಶಿಬಿರದ 4ನೇ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇದೇ ವೇಳೆ ಎನ್‌ಎಸ್‌ಎಸ್ ಶ್ರಮದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎಟಿಎನ್‌ಸಿಸಿ ಪ್ರಾಂಶುಪಾಲರಾದ ಪ್ರೊ ಮಮತ ಪಿ ಆರ್, ಎಟಿಎನ್‌ಸಿಸಿ ಕಾಲೇಜಿನ ಸಂಚಾಲಕ ಪ್ರೊ ಕೆ.ಎಂ.ನಾಗರಾಜ, ಶಿಬಿರಾಧಿಕಾರಿಗಳು, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
(ಫೋಟೊ ಇದೆ)

Radio Shivamogga ರೇಡಿಯೊ ಶಿವಮೊಗ್ಗದಿಂದ ಸಲ್ಯೂಟ್ ಇಂಡಿಯಾ ಕಾರ್ಯಕ್ರಮ

0

Radio Shivamogga ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಕೇಳುಗರೊಂದಿಗೆ ಆಚರಿಸುತ್ತಿದೆ. ಆ.15ರಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವವರೆಗೆ ಅವಿರತ ನೇರಪ್ರಸಾರ ಸಲ್ಯೂಟ್ ಇಂಡಿಯಾ ಕಾರ್ಯಕ್ರಮವಿದ್ದು, ಇದರಲ್ಲಿ ಕೇಳುಗರೂ ಭಾಗವಹಿಸಲು ಅವಕಾಶವಿದೆ.

ಸಲ್ಯೂಟ್ ಇಂಡಿಯಾ ನೇರಪ್ರಸಾರದಲ್ಲಿ, ಆರ್ ಜೆ ಗಳಾದ ಶ್ವೇತಾ, ರಕ್ಷಿತಾ ಹೊಳ್ಳ, ಅರ್ಪಿತಾ, ಮಹಾಲಕ್ಷ್ಮೀ. ಪವಿತ್ರಾ ದಿನೇಶ್, ಶ್ರೀಧರ್ ಇದರಲ್ಲಿ ಭಾಗವಹಿಸಲಿದ್ದಾರೆ. ತಾಂತ್ರಿಕ ಸಂಯೋಜಕ ಶ್ರೀಕಾಂತ್ ಸಹಕಾರ ನೀಡಲಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಥನ, ಇದರಲ್ಲಿ ಸಾಹಿತ್ಯದ ಕೊಡುಗೆ. ರೈತರು, ವಿದ್ಯಾರ್ಥಿಗಳು, ಜನಸಾಮಾನ್ಯರ ಪಾತ್ರ ಇತ್ಯಾದಿ ವಿಶೇಷತೆಗಳನ್ನು ಇದು ಒಳಗೊಂಡಿರುತ್ತದೆ. ಇದರ ಜೊತೆಯಲ್ಲಿ ಕೇಳುಗರು ನೀಡಿದಂತಹ ದೇಶಭಕ್ತಿ ಗೀತ ಗಾಯನ, ಮಾತುಗಳೂ ಇರುತ್ತವೆ.

ನೇರಪ್ರಸಾರದಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಬಗ್ಗೆಯೂ ಮಾಹಿತಿ ಇರುತ್ತದೆ. ಕಾರ್ಯಕ್ರಮದ ನಡುವೆ ದೇಶಭಕ್ತಿ ಗೀತೆಗಳನ್ನೂ ಕೇಳಬಹುದಾಗಿದೆ.

ಕೇಳುಗರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬಹುದಾಗಿದೆ. ನೇರಪ್ರಸಾರ ಸಮಯದಲ್ಲಿ (ಮೊ: 96 860 96 279) ಗೆ ಕರೆ ಮಾಡಿ ಮಾತನಾಡಬಹುದು. ನಿಮ್ಮ ಸ್ವಾತಂತ್ರ್ಯೋತ್ಸವದ ನೆನಪುಗಳು, ಮರೆಯಲಾರದ ಮಹನೀಯರ ಕುರಿತು ಮಾತನಾಡಬಹುದು, ದೇಶಭಕ್ತಿ ಗೀತೆಗಳನ್ನೂ ಕೂಡಾ ಹಾಡಬಹುದಾಗಿದೆ.

ಈ ನೇರಪ್ರಸಾರದ ಆಯೋಜನೆಯಲ್ಲಿ ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರವು ಸಹಭಾಗಿಗಳಾಗಿವೆ. ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡು ದಿನದ 24 ಗಂಟೆಯೂ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಆಲಿಸಬಹುದೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.

ನಿಮ್ಮೊಂದಿಗೆ…
ಆರ್ ಜೆ ಶ್ವೇತಾ ಪ್ರದೀಪ್

ರೇಡಿಯೋ ಶಿವಮೊಗ್ಗದ ಆರಂಭದ ದಿನದಿಂದಲೂ ಜೊತೆಯಾಗಿರುವ ಇವರು ಪ್ರಸ್ತುತ ವಿಜ್ಞಾನ, ತಂತ್ರಜ್ಞಾನದ ಕುತೂಹಲಕಾರಿ ವಿಷಯಗಳನ್ನು ತಿಳಿಸುವ ಕೌತುಕ ಕಾರ್ಯಕ್ರಮವನ್ನು ಪ್ರತಿದಿನ ಬೆಳಗ್ಗೆ 8:30ಕ್ಕೆ ನಡೆಸುತ್ತಾರೆ. ವಿದ್ಯಾರ್ಥಿಗಳು, ವಿಜ್ಞಾನ ಕುತೂಹಲಿಗಳ ಕೇಳುಗ ಬಳಗ ಇದಕ್ಕಿದೆ. ಇದರ ಜೊತೆಗೆ ಈ ಮೊದಲು ಸಿಟಿ ಸ್ಟೋರೀಸ್, ಕಲರವ, ಲರ್ನಿಂಗ್ ಕಾರ್ನರ್ ಇತ್ಯಾದಿ ಕಾರ್ಯಕ್ರಮಗಳನ್ನೂ ನಿರ್ವಹಿಸಿ, ಜನರ ಪ್ರಶಂಸೆ ಗಳಿಸಿರುತ್ತಾರೆ.

ಆರ್ ಜೆ ಶ್ರೀಧರ್

ಕಳೆದ ಎರಡೂವರೆ ವರ್ಷಗಳಿಂದಲೂ ಬಾನುಲಿಯ ಜೊತೆಯಾಗಿರುವ ಇವರು ಪ್ರಸ್ತುತ ಆಹಾರದ ಕುರಿತಾಗಿ ಕಾಳಜಿ ಮಾತುಗಳ ಊಟದ ತಾಟು ಕಾರ್ಯಕ್ರಮವನ್ನು ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ನಡೆಸುತ್ತಾರೆ. ಇದರ ಜೊತೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳತ್ತ ಗಮನ ನೀಡುವ ಆಗಬೇಡಿ ಆಲಸಿ, ನಮ್ಮನ್ನೂ ಆಲಿಸಿ ಕಾರ್ಯಕ್ರಮ ಪ್ರತಿದಿನ ಸಂಜೆ 5:30ಕ್ಕೆ ನಿರ್ವಹಿಸುತ್ತಾರೆ. ಈ ಎರಡೂಕಾರ್ಯಕ್ರಮವೂ ತನ್ನದೇ ಆದ ಕೇಳುಗ ವಲಯ ಹೊಂದಿದ್ದು, ಜನಪ್ರಿಯತೆ ಪಡೆದಿದೆ.

ಆರ್ ಜೆ ರಕ್ಷಿತಾ ಹೊಳ್ಳ

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಗ್ರಾಮದವರಾದ ಇವರು, ಬಾನುಲಿಯಲ್ಲಿ ಎರಡು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಾಹಿತ್ಯ ಲೋಕದ ಅನಾವರಣವಾದ ಒಂದು ಅಧ್ಯಾಯ ಕಾರ್ಯಕ್ರಮ ಪ್ರತಿದಿನ ಬೆಳಗ್ಗೆ 9:30ಕ್ಕೆ ಪ್ರಸಾರವಾಗುತ್ತಿದೆ. ಪ್ರಾಣಿ, ಪಕ್ಷಿಗಳ ಜೀವನಶೈಲಿಯ ಕುರಿತಾದ ಕಲವರ ಕಾರ್ಯಕ್ರಮವನ್ನು ಪ್ರತಿದಿನ ಸಂಜೆ 6 ಗಂಟೆಗೆ ನಡೆಸುತ್ತಿದ್ದಾರೆ. ಎರಡೂ ವಿಭಿನ್ನ ಶೈಲಿಯ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ, ಉತ್ತಮ ಕೇಳುಗ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ.

ಆರ್ ಜೆ ಅರ್ಪಿತ ವಿ.ಎನ್.

ಬಾನುಲಿಯಲ್ಲಿ ನಡೆದ ತರಬೇತಿಯಿಂದಲೂ ಜೊತೆಗಿರುವ ಇವರು, ಮುಂಜಾನೆಯ ಸುಮಧುರ ಮಾತುಗಳೊಂದಿಗೆ ಕೇಳುಗರಿಗೆ ಜೊತೆಯಾಗಲಿದ್ದು, ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮುಂಗೋಳಿ ಕೂಗ್ಯಾವೋ ಕಾರ್ಯಕ್ರಮ ನಡೆಸುತ್ತಾರೆ. ಶಿವಮೊಗ್ಗದ ಯಶಸ್ವಿ ಉದ್ಯಮಿಗಳನ್ನು , ಉದ್ಯಮಗಳನ್ನು ಪರಿಚಯಿಸುವ ಬ್ಯುಸಿನೆಸ್ ಬಝ್ ಕಾರ್ಯಕ್ರಮವನ್ನು ಸಂಜೆ 6:30ಕ್ಕೆ ನಿರ್ವಹಿಸುತ್ತಾರೆ. ಈ ಎರಡೂ ಕಾರ್ಯಕ್ರಮಗಳನ್ನೂ ನಿರ್ವಹಿಸುತ್ತಾ, ಕೇಳುಗರ ವಲಯದಲ್ಲಿ ಉತ್ತಮ ಹೆಸರು ಪಡೆದುಕೊಂಡಿರುತ್ತಾರೆ.

ಆರ್ ಜೆ ಮಹಾಲಕ್ಷ್ಮೀ

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದವರಾದ ಇವರು ಪ್ರಸ್ತುತ ಶಿವಮೊಗ್ಗದಲ್ಲೇ ನೆಲೆಸಿರುತ್ತಾರೆ. ಬಾನುಲಿ ಆರಂಭದಿಂದಲೂ ರೈತಾಪಿ ಬದುಕನ್ನು ಹಸನಗೊಳಿಸುವ ಕಾರ್ಯಕ್ರಮ ಒಕ್ಕಲುತನ ಪ್ರತಿದಿನ ಸಂಜೆ 7 ಗಂಟೆಗೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಪ್ರಸಾರವಾಗುವ ನಿಮ್ಮ ಜರ್ನಿ ನಮ್ಮ ಜೊತೆ ಕಾರ್ಯಕ್ರಮ ನಡೆಸುವ ಮುಖಾಂತರ ಪ್ರವಾಸಿ ಸ್ಥಳಗಳನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಈ ಎರಡೂ ವಿಭಿನ್ನ ನೆಲೆಯ ಕಾರ್ಯಕ್ರಮಗಳ ಮುಖಾಂತರ ಜನಪ್ರಿಯತೆ ಗಳಿಸಿರುತ್ತಾರೆ.

ಆರ್ ಜೆ ಪವಿತ್ರಾ ದಿನೇಶ್

ಮೂಲತಃ ಸಾಗರ ಸಮೀಪದ ಗೌತಮಪುರದವರು. ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಜನಪದ ಕಾರ್ಯಕ್ರಮವನ್ನು ಆರಂಭದಿಂದಲೂ ನಡೆಸಿಕೊಂಡು ಬಂದವರು, ಪ್ರಸ್ತುತ ವಚನ ವಿಹಾರ ಕಾರ್ಯಕ್ರಮವನ್ನು ಪ್ರತಿದಿನ ಬೆಳಗ್ಗೆ 7 ಗಂಟೆಗೆ ನಡೆಸುತ್ತಿದ್ದಾರೆ. ಇದರ ಮುಖಾಂತರ ಜನಪ್ರಿಯ ವಚನಕಾರರ ಜೊತೆಗೆ ಗೌಪ್ಯ ವಚನಕಾರರನ್ನು, ವಚನಗಳ ಭಾವಾರ್ಥವನ್ನು ತಿಳಿಸುತ್ತಾ, ಮನ್ನಣೆ ಪಡೆದುಕೊಂಡಿದ್ದಾರೆ.

Dr. HC Manjunath ವಿದ್ಯಾರ್ಥಿಗಳಲ್ಲಿ ಪರಂಪರೆಯ ಮೌಲ್ಯಗಳ ಅರಿವಿನಿಂದ ಸಮಾಜಮುಖಿ ಕಾರ್ಯ ಸಾಧ್ಯ- ಡಾ.ಎಚ್.ಬಿ.ಮಂಜುನಾಥ್

0

Dr. HC Manjunath ಯುವ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆಯ ಮೌಲ್ಯಗಳ ಅರಿವು ಮಾಡಿದಲ್ಲಿ ಅವರಿಂದ ಸಮಾಜಮುಖಿಯಾದ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಬಹುದು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.

ಮಲ್ಲಿ ಮಲ್ಲಿಕಾರ್ಜುನಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಜ್ಞಾನ ಪದವಿಯ ನೂತನ ವಿದ್ಯಾರ್ಥಿಗಳ ‘ಪೀಠಿಕಾ’ (ಇಂಡಕ್ಷನ್) ಕಾರ್ಯಕ್ರಮದಲ್ಲಿ ‘ಭಾರತೀಯ ಪರಂಪರೆ ಹಾಗೂ ಸಂಸ್ಕೃತಿ’ ಕುರಿತಾದ ವಿಷಯವಾಗಿ ಮಾತನಾಡುತ್ತಾ ಅತಿಥಿ ಅಭ್ಯಾಗತರನ್ನು ಆದರಿಸುವುದರಿಂದ ಮೊದಲುಗೊಂಡು ಎಲ್ಲ ಸದಾಚಾರಗಳೂ ನಮ್ಮ ದೇಶದಲ್ಲಿ ಎಲ್ಲ ಮತೀಯರಲ್ಲೂ ಪರಂಪರೆಯಾಗಿ ಮುಂದುವರೆದಿದ್ದು ಕಾಲಕಾಲಕ್ಕೆ ಇದನ್ನು ಸುಧಾರಿಸಿಕೊಳ್ಳುತ್ತಾ ಮತ್ತಷ್ಟು ಸಮಾಜಮುಖಿಯಾಗಿಸುವುದೇ ಸಂಸ್ಕೃತಿಯಾಗಿದೆ, ಈ ಮೌಲ್ಯಗಳು ನಮ್ಮ ಭಾರತದ ಎಲ್ಲ ಮತೀಯರಲ್ಲೂ ರೂಢಿಯಲ್ಲಿದ್ದು ವಿಶ್ವದ ಇನ್ನಾವುದೇ ರಾಷ್ಟ್ರಗಳಲ್ಲೂ ಇದನ್ನು ನಿರೀಕ್ಷಿಸಲಾಗದು, ಇಂತಹ ಪ್ರಕೃತಿ ಪರಿಸರ ಹಾಗೂ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ಬದುಕುವುದು ನಮ್ಮ ಪರಂಪರೆಯಾಗಿದ್ದು ಕಾಲಕಾಲದ ಅಗತ್ಯಕ್ಕೆ ಅನುಗುಣವಾಗಿ ಇದರಲ್ಲಿ ಬದಲಾವಣೆಗಳನ್ನು ಮಾಡಿ ಮತ್ತಷ್ಟು ಉತ್ತಮವಾಗಿಸುವುದು ಸಂಸ್ಕೃತಿ ಹಾಗೂ ಇದನ್ನು ಸಂವಿಧಾನಬದ್ಧವಾಗಿ ಎಲ್ಲರ ಹಿತಕ್ಕಾಗಿ ನಡೆಸುವುದು ಧರ್ಮ ಎಂದರು.

Dr. HC Manjunath ಇದರ ಅರಿವನ್ನು ವಿದ್ಯಾರ್ಥಿಗಳಲ್ಲಿ ಉಂಟುಮಾಡಿದಲ್ಲಿ ನಮ್ಮ ಮತೀಯ ಸಾಮರಸ್ಯ ಹಾಗೂ ಐಕ್ಯತೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಡಾ.ಎಚ್ ಬಿ ಮಂಜುನಾಥ್ ಹೇಳಿದರು. ಅಧ್ಯಾಪಕಿ ಡಾ.ಅರುಣಾ ಚರಂತಿಮಠ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಧ್ಯಾಪಕ ವರ್ಗದ ಓಂಕಾರಪ್ಪ, ವೀರೇಶ್ ಶರ್ಮಾ, ರೇಖಾ ಸಿ ಎನ್, ಸವಿತಾ, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.

District Child Protection Officer DR Gayatri ದೆಹಲಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲುಮಕ್ಕಳ ರಕ್ಷಣಾಧಿಕಾರಿ ಡಿ.ಎಸ್.ಗಾಯತ್ರಿ ಅವರಿಗೆ ಆಹ್ವಾನ

0

District Child Protection Officer DR Gayatri ಶಿವಮೊಗ್ಗ ಆ.14:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಹಾಗೂ ಕೇಂದ್ರ ಪುರಸ್ಕೃತ ಮಿಷನ್ ವಾತ್ಸಲ್ಯ ಯೋಜನೆ ಅಡಿಯಲ್ಲಿ ಮಕ್ಕಳ ರಕ್ಷಣಾಧಿಕಾರಿ ಸಾಂಸ್ಥಿಕ ಸೇವೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾಂಸ್ಥಿಕ ಸೇವೆ ಮಕ್ಕಳ ರಕ್ಷಣಾಧಿಕಾರಿ ಡಿ. ಎಸ್. ಗಾಯತ್ರಿ ಅವರನ್ನು ಈ ವರ್ಷ ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ನಾಳೆ ನಡೆಯಲಿರುವ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ನೇರವಾಗಿ ವೀಕ್ಷಿಸಲು ವಿಶೇಷ ವ್ಯಕ್ತಿಯಾಗಿ ಗಾಯತ್ರಿ ಅವರನ್ನು ಆಯ್ಕೆ ಮಾಡಿದ್ದು ಅವರು ನಿರಂತರವಾಗಿ ಮಕ್ಕಳ ರಕ್ಷಣೆಗೆ ಸಂಬಂಧಪಟ್ಟಂತೆ ಸಂಬಂಧಿಸಿದ ಕಾಯಿದೆ ಕಾನೂನುಗಳು ಇಲಾಖಾ ಕಾರ್ಯಕ್ರಮಗಳ ಕುರಿತು ಟಿ ಓ ಟಿ ತರಬೇತುದಾರರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಅವಿರತವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಮೂಲಕ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದಿರುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.
District Child Protection Officer DR Gayatri ಮಕ್ಕಳ ರಕ್ಷಣೆಗೆ ಸಂಬಂಧಪಟ್ಟಂತೆ ವಿವಿಧ ಯೋಜನೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ಇಂತಹ ಅವಕಾಶ ದೊರೆತಿದ್ದು, ಇದಕ್ಕೆ ಕಾರಣರಾದ ಭಾರತ ಸರ್ಕಾರ, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಗಾಯತ್ರಿ ಅವರು ಧನ್ಯವಾದ ತಿಳಿಸಿದ್ದಾರೆ.

Krishibhagya Yojana ಕೃಷಿಭಾಗ್ಯ ಯೋಜನೆಯಡಿ ಅರ್ಹರು ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

0

Krishibhagya Yojana ಕೃಷಿ ಯಂತ್ರೋಪಕರಣ ಮತ್ತು ಜೆಟ್ ಪೈಪ್ ಪಡೆಯಲು ಇ-ಆಡಳಿತ ಮುಖಾಂತರ 8 ಸಾವಿರ ರೈತರಿಗೆ ದೂರವಾಣಿ ನೇರ ಕರೆ
ಶಿವಮೊಗ್ಗ, ಆಗಸ್ಟ್ 14 (ಕರ್ನಾಟಕ ವಾರ್ತೆ): ಕೃಷಿ ಇಲಾಖೆ ಶಿವಮೊಗ್ಗ ಹಾಗೂ ಇ-ಆಡಳಿತ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಆ.12 ರ ಸೋಮವಾರ ದಂದು ತಾಲ್ಲೂಕಿನ ಸುಮಾರು 8 ಸಾವಿರ ರೈತರಿಗೆ ದೂರವಾಣಿ ಕರೆ ಮುಖಾಂತರ ಕೃಷಿ ಯಾಂತ್ರಿಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಯಡಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಕಾರ್ಯಗಾರವನ್ನು ಆಯೋಜಿಸಲಾಯಿತು.
ಮದ್ಯಾಹ್ನ 3.00 ಗಂಟೆಗೆ ಪ್ರಾರಂಭವಾದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕು ಕೃಷಿ ಇಲಾಖೆ, ಸಹಾಯಕ ಕೃಷಿ ನಿರ್ದೇಶಕ ರಮೇಶ್.ಎಸ್.ಟಿ. ರವರು ಕೃಷಿ ಯಾಂತ್ರಿಕರಣ ಯೋಜನೆಯಡಿ ಪವರ್ ಟಿಲ್ಲರ್, ಟ್ರಾಕ್ಟರ್ ಚಾಲಿತ ಉಪಕರಣಗಳಾದ ಬಲರಾಮ ನೇಗಿಲು, ಬಿತ್ತನೆ ಕೂರಿಗೆ, ಕಲ್ಟಿವೇಟರ್‌ಗಳು, ಡಿಸ್ಕ್ ಹ್ಯಾರೋ, ರೋಟವೇಟರ್, ಸ್ಲಾಷರ್, ಲೇವಲರ್, ಬೇಲರ್, ಒಕ್ಕಣೆ ಯಂತ್ರ, ಭತ್ತದ ನಾಟಿ ಯಂತ್ರ, ಕಳೆಕೊಚ್ಚುವ ಯಂತ್ರ, ಪವರ್ ಸ್ಪೆçÃಯರ್, ರೋಟರಿ ವೀಡರ್ ಇನ್ನಿತರ ಉಪಕರಣಗಳಿಗೆ ಸಾಮಾನ್ಯ ವರ್ಗ ರೈತರಿಗೆ 50% ಸಹಾಯಧನದಲ್ಲಿ ವಿತರಿಸಲಾಗುತ್ತಿದೆಯೆಂದು ತಿಳಿಸಿದರು.
ಸೂಕ್ಷ್ಮ ನೀರಾವರಿ ಯೋಜನೆಯಡಿ ನೀರಾವರಿ ಉಪಕರಣಗಳಾದ ಜೆಟ್ ಪೈಪ್‌ಗಳು/ ಕಪ್ಪು ಪೈಪ್‌ಗಳನ್ನು ಎಲ್ಲಾ ವರ್ಗದ ರೈತರಿಗೆ 90% ಸಹಾಯಧನದಲ್ಲಿ ವಿತರಿಸಲಾಗುತ್ತಿದೆಯೆಂದು ತಿಳಿಸಿದರು.ರೈತರು ಕೇವಲ ಶೇಕಡಾ 10 ರಷ್ಟು ರೈತರ ವಂತಿಕೆಯನ್ನು ಪಾವತಿ ಮಾಡಿ ಸೌಲಭ್ಯ ಪಡೆಯಬಹುದು.
Krishibhagya Yojana ಅದೇ ರೀತಿ ಕೃಷಿ ಸಂಸ್ಕರಣೆ ಯೋಜನೆಯಡಿ ಸ್ವತಃ ಮನೆ ಬಳಕೆಗೆ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಉದ್ಯೋಗ ಮಾಡಲು ಅನುಕೂಲವಾಗವಂತೆ ಹಿಟ್ಟಿನ ಗಿರಣಿ, ರಾಗಿ ಕ್ಲಿನಿಂಗ್ ಮಿಷನ್, ಮಿನಿ ರೈಸ್ ಮಿಲ್, ಖಾರ ಪುಡಿಮಾಡುವ ಯಂತ್ರ ಇವುಗಳನ್ನು ಸಾಮಾನ್ಯ ವರ್ಗ ರೈತರಿಗೆ 50% ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ 90% ಸಹಾಯಧನದಲ್ಲಿ ವಿತರಿಸಲಾಗುತ್ತಿದೆಯೆಂದು ತಿಳಿಸಿದರು.
ಮೇಲ್ಕಂಡ ಯೋಜನೆಗಳಲ್ಲಿ ಪ್ರಸ್ತುತ ಅನುದಾನ ಲಭ್ಯವಿದ್ದು ಎಲ್ಲಾ ರೈತಭಾಂದವರು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಬೇಟಿ ಮಾಡಿ ಆದಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಲು ಮನವಿ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ರಮೇಶ್.ಎಸ್.ಟಿ. ರವರು ರೈತರೊಂದಿಗೆ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು.

Rotary Club Shimoga ಗಿಡಮರಗಳಿಂದ ಜೀವಸಂಕುಲಕ್ಕೆ ಆಶ್ರಯ- ಡಾ.ಶಿವರಾಮಕೃಷ್ಣ

0

ರೋಟರಿ ಜೀವ ವೈವಿಧ್ಯ ಉದ್ಯಾನದಲ್ಲಿ ವನಮಹೋತ್ಸವ ಕಾರ್ಯಕ್ರಮ
ವೃಕ್ಷಗಳು ಜೀವಸಂಕುಲಕ್ಕೆ ಆಶ್ರಯ : ಡಾ. ಶಿವರಾಮಕೃಷ್ಣ

Rotary Club Shimoga ಈಗಾಗಲೇ ಜೀವ ವೈವಿಧ್ಯ ಉದ್ಯಾನದಲ್ಲಿ ವಿವಿಧ ಹಂತದಲ್ಲಿ ಹಲವಾರು ಗಿಡ ಮರಗಳನ್ನು ನೆಟ್ಟು ಪೆÇೀಷಿಸಲಾಗುತ್ತಿದ್ದು, ಇಲ್ಲಿ ಬೆಳೆಯುತ್ತಿರುವ ವೃಕ್ಷಗಳು ಹಲವಾರು ಜೀವಸಂಕುಲಗಳಿಗೆ ಆಶ್ರಯ ನೀಡುತ್ತಿವೆ ಎಂದು ಅಭಿರುಚಿ ವೇದಿಕೆಯ ಅಧ್ಯಕ್ಷ ಖ್ಯಾತ ವೈದ್ಯ ಡಾ. ಶಿವರಾಮಕೃಷ್ಣ ತಿಳಿಸಿದರು.

ಶಿವಮೊಗ್ಗದ ಅಭಿರುಚಿ ಸಾಂಸ್ಕøತಿಕ ವೇದಿಕೆಯ ಸಹಯೋಗದೊಂದಿಗೆ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ ಸದಸ್ಯರು ಅನುಪಿನಕಟ್ಟೆಯಲ್ಲಿರುವ ರೋಟರಿ ಜೀವವೈವಿಧ್ಯ ಉದ್ಯಾನದಲ್ಲಿ ವನಮಹೋತ್ಸವ ಆಚರಿಸಿ ವಿವಿಧ ಜಾತಿಯ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಈ ವೇಳೆ ಮಾತನಾಡಿದ ಅವರು, ಈ ವಿಶಾಲವಾದ ಜಾಗದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಉದ್ಯಾನವು ಶಿವಮೊಗ್ಗದ ಹಲವು ರೋಟರಿ ಕ್ಲಬ್‍ಗಳ ಕನಸಿನ ಯೋಜನೆ ಆಗಿದ್ದು, ಈ ಕಾರ್ಯಕ್ಕೆ ನಗರದ ಇತರೆ ಸಂಘ ಸಂಸ್ಥೆಗಳು ಸಹ ಕೈಜೋಡಿಸುತ್ತಿವೆ ಎಂದರು.

Rotary Club Shimoga ವನಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷರಾದ ರೊ. ಮುಸ್ತಾಕ್ ಅಲಿಶಾ, ತಮ್ಮ ಗೊಬ್ಬರ ಉತ್ಪಾದನಾ ಸಂಸ್ಥೆಯಾದ ಅಗ್ರೀನಿಯಾ ವತಿಯಿಂದ ಉದ್ಯಾನದಲ್ಲಿನ ಗಿಡ ಮರಗಳಿಗಾಗಿ ಸಂಪೂರ್ಣ ಸಾವಯವ ಗೊಬ್ಬರವನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ತಮ್ಮ ಸಂಸ್ಥೆಯಿಂದ ಈಗಾಗಲೇ ಜಿಲ್ಲೆಯ ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ ಉಚಿತವಾಗಿ ಸಾವಯವ ಗೊಬ್ಬರವನ್ನು ವಿತರಿಸುತ್ತಿದ್ದು, ರೋಟರಿ ಕ್ಲಬ್‍ನ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅಭಿರುಚಿ ವೇದಿಕೆಯ ಕಾರ್ಯದರ್ಶಿ ಕುಮಾರ ಶಾಸ್ತ್ರಿ, ಎಂ.ಪ್ರಕಾಶ್ ಬಾಬು, ಶ್ರೀನಾಥ್ ಅಯ್ಯರ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಕಾಂತ್ ಹಾಗೂ ಸದಸ್ಯರಾದ ರಾಜು.ಸಿ, ಪ್ರಕಾಶ್ ಮೂರ್ತಿ, ಬಸವರಾಜ್ ಅಣಜಿ ಹಾಗೂ ಡಾ. ಸಿದ್ದಲಿಂಗ ಮೂರ್ತಿರವರು ಉಪಸ್ಥಿತರಿದ್ದರು.

78th Independence day ಕೇಸರಿ,ಬಿಳಿ,ಹಸಿರು.ಹೋರಾಟದ ನೆನಪು ನೂರು

0

78th Independence day ಈ ವರ್ಷ ಇಡೀ ಭಾರತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಪ್ರತಿಯೊಬ್ಬ ಭಾರತೀಯನಿಗೂ ಆಂಗ್ಲರಿ0ದ ಮುಕ್ತಿಯನ್ನು ಪಡೆದುಕೊಂಡ ಐತಿಹಾಸಿಕ ದಿನವಿದು. ಕೋಟಿ ಕೋಟಿ ದೇಶ ಪ್ರೇಮಿಗಳ ಕನಸು ನನಸಾದ ಒಂದು ನೆನಪು. ಅದೆಷ್ಟೋ ದೇಶ ಭಕ್ತರು ಮತ್ತುಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಸಾಹಸ, ವೀರತೆಯನ್ನು ನೆನಪಿಸಿಕೊಳ್ಳುವ ಹಾಗೂ ಗೌರವಿಸುವ ಸಮಯ ಇದಾಗಿದೆ.
ಸ್ವಾತಂತ್ರ್ಯ ದಿನಾಚರಣೆಯು ದೇಶದ ಘತಕಾಲವನ್ನು ಆಚರಿಸುವುದು ಅಷ್ಟೇ ಅಲ್ಲದೆ, ನಾಗರಿಕರಾಗಿ ನಮ್ಮ ಕರ್ತವ್ಯವನ್ನು ನೆನಪಿಸುತ್ತದೆ. ನಾವು ಅನುಭವಿಸುತ್ತಿರುವ ಸ್ವಾತಂತ್ರ‍್ಯವು ನಮ್ಮ ದೇಶದ ಬೆಳವಣಿಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡುವ ಕರ್ತವ್ಯದೊಂದಿಗೆ ಬರುತ್ತದೆ ಎಂಬುದನ್ನು ನೆನಪಿಡುವ ದಿನವಾಗಿದೆ. ಪ್ರಜೆಗಳಾದ ನಾವು ನಮ್ಮ ಜೀವನದಲ್ಲಿ ಉತ್ಕೃಷ್ಟರಾಗುವ ಮೂಲಕ, ಜವಾಬ್ದಾರಿಯುತ ನಾಗರಿಕರಾಗಿ ಪ್ರಜಾಪ್ರಭುತ್ವ ಮತ್ತು ಏಕತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ದೇಶಕ್ಕೆ ಗೌರವ ನೀಡಬೇಕು.
ಪ್ರತಿಯೊಬ್ಬ ಭಾರತೀಯನಿಗೂ ಸ್ವಾತಂತ್ರ‍್ಯ ದಿನಾಚರಣೆ ಮೌಲ್ಯಯುತವಾದದ್ದು. ಯಾಕೆಂದರೆ ಸ್ವಾತಂತ್ರ್ಯ ಹೊರಾಟಗಾರರು ನಿಸ್ವಾರ್ಥ ಸೇವೆ, ತ್ಯಾಗ ಮತ್ತು ಸಾಟಿಯಿಲ್ಲದ ಕೊಡುಗೆಗಳನ್ನು ನೀಡಿ ನಮಗೆ ಸ್ವಾತಂತ್ರ‍್ಯವನ್ನು ತಂದುಕೊಟ್ಟಿದ್ದಾರೆ. ಅತಂಹ ಮಹಾನ್ ಪುರುಷರು ಮತ್ತು ಮಹಿಳೆಯರನ್ನು ನೆನಪಿಸಿಕೊಳ್ಳಲು ಮತ್ತು ಕೃತಜ್ಞತೆಯನ್ನು ಸಲ್ಲಿಸುವ ಅವಕಾಶ ಇದಾಗಿದೆ.
ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲಾ ಲಜಪತ್ ರಾಯ್, ರಾಣಿ ಲಕ್ಷ್ಮಿಬಾಯಿ, ರಾಣಿ ಅಬ್ಬಕ್ಕ, ಕಿತ್ತೂರ್ ರಾಣಿ ಚೆನ್ನಮ್ಮ, ಬಾಲಗಂಗಾಧರ ತಿಲಕ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸರ್ದಾರ್‌ವಲ್ಲಭಾಯ್ ಪಟೇಲ್, ಖುದಿರಾಮ್ ಬೋಸ್, ಡಾ. ರಾಜೇಂದ್ರ ಪ್ರಸಾದ್, ಭಗತ್ ಸಿಂಗ್, ಸುಖ್‌ದೇವ, ಬಿಪಿನ್ ಚಂದ್ರಪಾಲ್ ಮತ್ತು ಅನೇಕ ಪ್ರಮುಖ ನಾಯಕರುಗಳು ಸ್ವಾತಂತ್ರö್ಯಕ್ಕಾಗಿ ಹೋರಾಡಿದ್ದಾರೆ, ಅವರು ದೇಶವನ್ನು ಪ್ರೀತಿಸುತ್ತಿದ್ದರು ಮತ್ತು ಜನರ ಬಗ್ಗೆ ಕಾಳಜಿ ವಹಿಸಿದ್ದರಿಂದ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆಯಲು ಅವರು ಸಾಕಷ್ಟು ತ್ಯಾಗ ಮಾಡಬೇಕಾಯಿತು. ತಮ್ಮ ಸ್ವಂತ ಭೂಮಿಯಲ್ಲಿ ಗುಲಾಮರಂತೆ ದುಡಿಯಲು ಜನರನ್ನು ದಬ್ಬಾಳಿಕೆಗೆ ಒಳಪಡಿಸುವ ಮತ್ತು ಹಿಂಸಿಸುವ ದೃಶ್ಯವನ್ನು ಅವರಿಗೆ ಸಹಿಸಲಾಗಲಿಲ್ಲ. ಇದು ಸ್ವಾತಂತ್ರ‍್ಯ ಹೋರಾಟಗಾರರ ಧೈರ್ಯವನ್ನು ಒಟ್ಟುಗೂಡಿಸಲು ಮತ್ತು ಅವರು ನಂಬಿರುವ ಮತ್ತು ಅರ್ಹತೆಗಾಗಿ ನಿಲ್ಲುವಂತೆ ಉತ್ತೇಜಿಸಿತು.
78th Independence day 1600 ರಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಬ್ರಟಿಷರು, 1611 ರಲ್ಲಿ ಸೂರತ್‌ನಲ್ಲಿ ಮೊದಲ ತಾತ್ಕಾಲಿಕ ಫ್ಯಾಕ್ಟರಿಯನ್ನು ಪ್ರಾರಂಭಿಸುತ್ತಾರೆ, 1857ರ ಸಿಪಾಯಿ ದಂಗೆ ನಡೆದ ನಂತರ ಭಾರತೀಯರಲ್ಲಿ ಸ್ವಾತಂತ್ರö್ಯದ ಕಿಚ್ಚು ಪ್ರಾರಂಭವಾಗುತ್ತದೆ. ಇದನ್ನು ಗಮನಿಸಿದ ಕಂಪನಿ ಸರಕಾರ 1858ರಲ್ಲಿ ಬ್ರಿಟನ್ ರಾಣಿ ನೇರ ಆಡಳಿತ ಪ್ರಾರಂಭಿಸಿ, ಲಾರ್ಡ್ ಕ್ಯಾನಿಂಗ್‌ನ್ನು ಭಾರತದಲ್ಲಿನ ಮೊದಲ ವೈಸರಾಯ್ ಆಗಿ ನೇಮಕ ಮಾಡಿಕೊಂಡರು. 1905ರ ಬಂಗಾಳದ ವಿಭಜನೆಯ ನಂತರ ದೇಶದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂಬ ಬಣಗಳು ಹೋರಾಟವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಾರಂಭಿಸುತ್ತದೆ. ಅಲ್ಲಿಂದ 1947 ರ ಆಗಸ್ಟ್ 15 ರಂದು ಮಹಾತ್ಮಾ ಗಾಂಧಿಯವರ ನೇತೃತ್ವದ ಸ್ವಾತಂತ್ರ‍್ಯ ಚಳವಳಿ ಮತ್ತು ಅವರ ಅಹಿಂಸಾತ್ಮಕ ಪ್ರತಿರೋಧದ ಸಂದೇಶದ ನಂತರ ಭಾರತವು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವತಂತ್ರವಾಯಿತು. ಅಧಿಕಾರದ ಹಸ್ತಾಂತರವನ್ನು ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ನೋಡಿಕೊಳ್ಳುತ್ತಿದ್ದರು. ರಾಜೇಂದ್ರ ಪ್ರಸಾದ್ ಮೊದಲ ರಾಷ್ಟçಪತಿ ಹಾಗೂ ಜವಾಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನ ಮಂತ್ರಿಯಾದರು ಮತ್ತು ಆಚರಣೆಯ ಗೌರವಾರ್ಥವಾಗಿ ದೆಹಲಿಯ ಕೆಂಪು ಕೋಟೆಯ ಲಾಹೋರಿ ಗೇಟ್ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.
ಪ್ರಕಾಶಮಾನ ಮತ್ತು ಬಲಿಷ್ಠ ಭಾರತಕ್ಕಾಗಿ ಕೆಲಸ ಮಾಡಲು ನಾವು ಪ್ರತಿಜ್ಞೆ ಮಾಡೋಣ.ಸ್ವಾತಂತ್ರ್ಯ ಪಡೆದು 78 ವರ್ಷನೇ ವರ್ಷಕ್ಕೆ ಕಾಲಿಟ್ಟರು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ನಮ್ಮಲ್ಲಿ ಇರುವ ಅಗಾಧ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿನ್ನು ಹೊಂದಬಹುದಾಗಿದೆ. ಈ ಬಾರಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯರ ಸಾಧನೆ ತುಸು ಹೆಚ್ಚಬೇಕಿತ್ತು. ಮುಂದಿನ ದಿನಗಳಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿ ಬರುವ ಗುರಿ ಹೊಂದಬೇಕಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ತಾಂತ್ರಿಕ, ರಾಜಕೀಯವಾಗಿ ಅಂತರರಾಷ್ಟಿçÃಯ ಮಟ್ಟದಲ್ಲಿ ದೇಶದ ಪ್ರಗತಿಯನ್ನು ಸಾಧಿಸುವ ಮಹತ್ತರ ಯೋಜನೆಯನ್ನು ಭಾರತೀಯರು ಹೊಂದವ ರೀತಿ ಯೋಚಿಸ ಬೇಕು. ನಮಗೆ ಲಭಿಸಿದ ಸ್ವಾತಂತ್ರ್ಯವನ್ನು ಸದುಪಯೋಗ ಮಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೂಳ್ಳಬೇಕು. ಇದು ಸ್ವಾತಂತ್ರö್ಯ ಹೋರಾಟಗಾರರಿಗೆ ಮತ್ತು ದೇಶಕ್ಕೆ ಕೊಡುವ ಗೌರವ ಆಗಿರುತ್ತದೆ.