Monday, April 6, 2026
Monday, April 6, 2026
Home Blog Page 608

Kadidal Gopal ಒಕ್ಕಲಿಗರ ಸಂಘಟನೆಯಲ್ಲಿ ಉನ್ನತ ಸೇವೆ ಸಲ್ಲಿಸುವೆ- ಕಡಿದಾಳ್ ಗೋಪಾಲ್

0

ಡಾ. ಕಡಿದಾಳ್ ಗೋಪಾಲ್ ಅವರಿಗೆ ಸನ್ಮಾನ

Kadidal Gopal ಯಾವುದೇ ಪ್ರಚಾರ ಇಲ್ಲದೆ ಹೆಚ್ಚು ಮತ ಗಳಿಸಿದ ಕಡಿದಾಳ ಗೋಪಾಲರಿಗೆ ಶ್ರೀನಿಧಿ ಎಜುಕೇಶನ್ ಟ್ರಸ್ಟ್ ಹಾಗೂ ಸಹ್ಯಾದ್ರಿ ಪ್ರೌಢಶಾಲೆಯ ಶಿಕ್ಷಕರ ವತಿಯಿಂದ ಹಾಗೂ ಇಂಟರ್ ಆಕ್ಟ್ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹತ್ತು ವರ್ಷಗಳ ನಂತರ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೆಡದ ಚುನಾವಣೆಯಲ್ಲಿ ಕಡಿದಾಳ್ ಗೋಪಾಲರ ಸಿಂಡಿಕೇಟಿಗೆ ಬಹುಮತ ಲಭಿಸಿ ಎಲ್ಲರೂ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಡಾ. ಕಡಿದಾಳ ಗೋಪಾಲ್ ಮಾತನಾಡಿ, ಜನರು ನಮ್ಮ ತಂಡದ ಮೇಲೆ ಇಟ್ಟ ಭರವಸೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಹಾಗೂ ಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ಸಂಘದ ಸೇವೆ ಮಾಡುತ್ತಾ ಸಂಘವನ್ನು ಇನ್ನೂ ಅತಿ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ನುಡಿದರು.

Kadidal Gopal ಈ ವೇಳೆ ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಡಾ. ಕಡಿದಾಳ್ ಗೋಪಾಲ್ ಅವರು ರೋಟರಿಯ ಮಹಾದಾನಿ. ಅವರು ಹಲವಾರು ಸಂಘಟನೆಗಳಲ್ಲಿ ಸಮಾಜಮುಖಿಯಾಗಿ ದೊಡ್ಡ ಮಟ್ಟದ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ ಎಂದು ನುಡಿದರು.

ಸಮಾರಂಭದಲ್ಲಿ ಟ್ರಸ್ಟಿನ ನಿರ್ದೇಶಕ ಕೋಳಿಗೆ ವಾಸಪ್ಪ ಗೌಡ, ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ಮತ್ತು ರೋಟರಿ ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಸಲ್ಮಾ, ಶಶಿಗಿರಿಗೌಡ, ಡಾ. ಧನಂಜಯ ರಾಂಪುರ ಉಪಸ್ಥಿತರಿದ್ದರು.

Agnipath Scheme ಅಗ್ನಿಪಥ್ ಯೋಜನೆಯ ವಿವಿಧ ಹುದ್ದೆಗಳ ದೈಹಿಕ & ವೈದ್ಯಕೀಯ ಪರೀಕ್ಷೆ ನೇಮಕಾತಿ ಪ್ರಕ್ರಿಯೆ ಆಗಸ್ಟ್ 22 ರಿಂದ 31 ವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ.

0

Agnipath Scheme 2024ನೇ ಸಾಲಿನಲ್ಲಿ ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಿಗಾಗಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಆಗಸ್ಟ್ 22 ರಿಂದ ಆಗಸ್ಟ್ 31 ರವರೆಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ನಿರ್ದೇಶಕರು, ಮಂಗಳೂರು ಇವರು ಆಯೋಜಿಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳ ಇಮೇಲ್ ಮೂಲಕ ರವಾನಿಸಲಾಗಿದೆ.

Agnipath Scheme ಈ ರ‍್ಯಾಲಿಯು ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿರುತ್ತದೆ ಎಂಬುದನ್ನು ನೇಮಕಾತಿ ನಿರ್ದೇಶಕರು, ಮಂಗಳೂರು ಇವರ ಕೋರಿಕೆಯ ಮೇರೆಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kote Police Shivamogga ನಾಪತ್ತೆ ಪ್ರಕರಣ ಪೊಲೀಸ್ ಪ್ರಕಟಣೆ

0

Kote Police Shivamogga ಶಿವಾನಂದ್, 48 ವರ್ಷಗಳು, ಬಳೆ ವ್ಯಾಪಾರಿ, ಶೇಷಾದ್ರಿಪುರ, ಶಿವಮೊಗ್ಗ ಇವರು ಜುಲೈ 27 ರಂದು ಬಳೆ ವ್ಯಾಪಾರಕ್ಕೆಂದು ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ.

ಶಿವಾನಂದ್‌ಗೆ ಮಾನಸಿಕ ತೊಂದರೆ ಇದ್ದು ಆಗಾಗ ಹೀಗೆ ಮನೆ ಬಿಟ್ಟು ಹೋಗಿದ್ದು ವಾಪಸ್ ಬರುತ್ತಿದ್ದರು. ಆದರೆ ಈ ಬಾರಿ ಮನೆಗೆ ವಾಪಸ್ ಬಂದಿರುವುದಿಲ್ಲ. ಶಿವಾನಂದ್ ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು ಕನ್ನಡ ಮತ್ತು ಹಿಂದಿ ಭಾಷೆ ಬರುತ್ತದೆ. ಮನೆ ಬಿಟ್ಟು ಹೋದಾಗ ಅರ್ಧ ತೋಳಿನ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

Kote Police Shivamogga ಕಾಣೆಯಾದ ಶಿವಾನಂದರ ಮಾಹಿತಿ ದೊರೆತಲ್ಲಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ದೂರವಾಣಿ ಸಂಖ್ಯೆ 08182-261400, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ ದೂರವಾಣಿ ಸಂಖ್ಯೆ 08182-261404, ಅಥವಾ ಕೋಟೆ ಪೊಲೀಸ್ ಠಾಣೆ ಶಿವಮೊಗ್ಗ ದೂರವಾಣಿ ಸಂಖ್ಯೆ 08182-261415 ರವರಿಗೆ ತಿಳಿಸುವಂತೆ ಕೋಟೆ ಪೊಲೀಸ್ ಠಾಣೆ ತಿಳಿಸಿದೆ

Shivamogga Police ಮನೆಯ ಸುರಕ್ಷೆ & ಭದ್ರತೆ ಬಗ್ಗೆ ಜಿಲ್ಲಾ ಪೊಲೀಸ್ ಸಲಹಾ ಸೂಚಿ

0

Shivamogga Police ಶಿವಮೊಗ್ಗ ಜಿಲ್ಲಾ ಪೋಲೀಸ್ ಇಲಾಖೆಯು ಶಿವಮೊಗ್ಗ ಜಿಲ್ಲೆಯ ಜನತೆಯ ಸುರಕ್ಷತೆಗಾಗಿ ಕೆಲವು ಸೂಚನೆಗಳನ್ನು ಹೊರಡಿಸಿದೆ.

ಮನೆಯಲ್ಲಿರುವಾಗ ಪಾಲಿಸಬೇಕಾದ *ಸಲಹೆಗಳು

  1. ಮನೆಯಲ್ಲಿ ಅನ್ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದನ್ನು ಮರೆಯಬೇಡಿ
  2. ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಸಮಾನ ಪ್ರಾಮುಖ್ಯತೆ ನೀಡಿ

3.ಆದಷ್ಟು ಮುಂಬಾಗಿಲು ಮತ್ತು ಹಿಂಬಾಗಿಲುಗಳಿಗೆ ಕಂಪ್ಯೂಟರೈಸ್ಡ್ ಲಾಕ್ಗಳನ್ನು ಅಳವಡಿಸಲು ಪ್ರಯತ್ನಿಸಿ .

  1. ಮನೆಯ ಬಾಗಿಲು ತಟ್ಟಿದಾಗ ,ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸಿ.

5.ಅಪರಿಚಿತರು ಮನೆ ಬಳಿ ಬಂದು ನೀರು ವಿಳಾಸ ಇತ್ಯಾದಿ ಕೇಳಲು ಬಂದಾಗ ಅವರಲ್ಲಿ ಜಾಗೃತೆಯಿಂದ ವ್ಯವಹರಿಸುವುದು.

6.ನೆರೆಹೊರೆಯವರೊಂದಿಗೆ ಸಂಬಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ

  1. ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೊವೃದ್ದರನ್ನು ಬಿಟ್ಟು ಹೋಗುವುದನ್ನು ತಪ್ಪಿಸಿ

8.ಅಂಚೆ ಕೊರಿಯರ್ ಪಾರ್ಸೆಲ್ ಉಡುಗೊರೆಗಳನ್ನು ಪಡೆದು ಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿಕೊಳ್ಳುವುದು.

Shivamogga Police 9.ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡುವುದು ತಪ್ಪಿಸಿ

  1. ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದು ಉತ್ತಮ.
  2. ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್ ಗಳಂತಹ ಸುರಕ್ಷಾ ಸಾಮಾಗ್ರಿಗಳ ಬಗ್ಗೆ ಒತ್ತು ಕೊಡಿ
  3. ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ ಬಾಗಿಲು , ಕಿಟಕಿ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನ; ಖಚಿತ ಪಡಿಸಿಕೊಳ್ಳುವುದು.
  4. ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
  5. ಹೊಸದಾಗಿ ಬಾಡಿಗೆ ಬರುವ ವ್ಯಕ್ತಿಗಳ ಬಗ್ಗೆ ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವ ಚಿತ್ರವನ್ನು ಅದಾರ್ ಕಾರ್ಡ್ ,ಅವರ ರಕ್ತ ಸಂಬಂದಿಗಳ ಮೊಬೈಲ್ ನಂ ಪಡೆಯಲು ಮರೆಯಬೇಡಿ
  6. ಅನುಮಾನಾಸ್ಪದ ವ್ಯಕ್ತಿ ವಸ್ತು ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
  7. ಚಿನ್ನದ ಒಡವೆಗಳನ್ನು ಪಾಲೀಸ್ ಮಾಡುತ್ತೆನೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ
  1. ಜನರಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸುವುದು.
  2. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು,ಮಾತನಾಡಿಸುವುದು ಪ್ರಯತ್ನ ಮಾಡಿದಾಗ ಎಚ್ಚರದಿಂದ ವ್ಯವಹರಿಸುವುದು.

19.ಬ್ಯಾಂಕ್ ಅಂಗಡಿ ಪೊಸ್ಟ್ ಆಫಿಸ್ಗಳ ಬಳಿ ಅಪರಿಚಿತರು ನಿಮ್ಮ ಹಣ ಕೆಲಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಬಳಿಯಿರುವ ಹಣ ಸುಬದ್ರವಾಗಿದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

20.ಮೋಹಕ್ಕೆ ಬಲಿಯಾಗಿ ಸುಲಿಗೆಗೆ ಒಳಗಾಗಬೇಡಿ, ಒಂಟಿಯಾಗಿ ಓಡಾಡಿವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರದ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈ ಗೆಟುಕುವ ಅಂತರದಲ್ಲಿ ನಿಲ್ಲಬೇಡಿ.

  1. ಜನನಿಬಿಡ ಪ್ರದೇಶದಲ್ಲಿ ಪಾರ್ಕ್ , ಕತ್ತಲೆಯಲ್ಲಿ ಕುಳಿತುಕೊಳ್ಳುವ ಹವ್ಯಾಸ ತಪ್ಪಿಸಿ
  2. ಅಪರಿಚಿತರು ನಂಬಿಸುವ ಅತೀಂದ್ರ ಶಕ್ತಿಗಳು , ಮಹಾನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಅವರ ನಿಯಂತ್ರಣಕ್ಕೆ ಒಳಗಾಗಿ ಮೋಸ ಹೋಗಬೇಡಿ.
  3. ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ.
  4. ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.
  5. ಅನಾವಶ್ಯವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ ಕಳ್ಳರನ್ನು ಆಕರ್ಶಿಸಬೇಡಿ
  6. ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಿ.
  7. ಅಗತ್ಯ ಸಮಯದಲ್ಲಿ 112 ಗೆ ಕರೆ ಮಾಡಿ ನಿಮ್ಮ ವಿಳಾಸ ,ಲ್ಯಾಂಡ್ ಮಾರ್ಕ್ ,ಪೊಲೀಸ್ ಠಾಣಾ ವ್ಯಾಪ್ತಿಯನ್ನು ಹೇಳಿ ಸಮಸ್ಯೆ ಯನ್ನು ತಿಳಿಸಿ.
    ಈ ಮೇಲ್ಕಂಡ ಎಲ್ಲಾ ಸೂಚನೆ ಗಳನ್ನು ಸಾರ್ವಜನಿಕ ಮಹಾಶಯ ಬಂಧುಗಳು ಪಾಲನೆ ಮಾಡಿದರೆ ಅಪರಾಧ ತಡೆಗಟ್ಟುವಲ್ಲಿ ಸಹಕಾರ ಆಗಬಹುದು ಎಂದು ಇಲಾಖೆ ತಿಳಿಸಿದೆ.

Bharat Scouts and Guides ಮಲ್ನಾಡ್ ಓಪನ್ ಗ್ರೂಪ್ ಉತ್ತಮ ಕೆಲಸ ಮಾಡುತ್ತಿದೆ- ಪಿ.ಜಿ.ಆರ್.ಸಿಂಧ್ಯಾ

0

Bharat Scouts and Guides ಗೀತ ಭಾರತಿ ಇಡೀ ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಕಾರ್ಗಿಲ್ ಯುದ್ಧದ 25ನೇ ವಾರ್ಷಿಕೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಗೀತ ಭಾರತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ರಾಜ್ಯಾದಾದ್ಯಂತ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಮಲ್ನಾಡ್ ಓಪನ್ ಗ್ರೂಪ್ ಉತ್ತಮ ಕೆಲಸ ಮಾಡುತ್ತಿದೆ. ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಮಾಜಿ ಶಾಸಕ ಎಸ್.ರುದ್ರೇಗೌಡ ಮಾತನಾಡಿ, ದೇಶಭಕ್ತಿಯನ್ನು ಪ್ರಜ್ವಲಿಸುವ ಗೀತ ಭಾರತಿ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯಬೇಕು. ಇಂದಿನ ಯುವಜನಾಂಗ ಇಂತಹ ವೀರಯೋಧರ ಸ್ಫೂರ್ತಿ ದಾಯಕ ಮಾತುಗಳನ್ನು ಕೇಳಿ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ ಮಾತನಾಡಿ, ಅತ್ಯಂತ ವ್ಯವಸ್ಥಿತವಾಗಿ ಆಯೋಜನೆಗೊಂಡಿರುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಇದೇ ರೀತಿ ಹೆಚ್ಚಿನ ಶಾಲೆಗಳು ಭಾಗವಹಿಸಬೇಕು. ನಮ್ಮ ಕೈಗಾರಿಕಾ ಸಮೂಹದಿಂದ ಕೈಲಾದ ಸಹಕಾರ ಸದಾ ಇರುತ್ತದೆ ಎಂದರು.

Bharat Scouts and Guides ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಇದು ಅಭೂತಪೂರ್ವ, ಅನುಕರಣೀಯ ಕಾರ್ಯಕ್ರಮ. ಶಿವಮೊಗ್ಗ ಜಿಲ್ಲಾ ಸಂಸ್ಥೆಯಿಂದ ಕಾರ್ಯಕ್ರಮಕ್ಕೆ ಸದಾ ಪ್ರೋತ್ಸಾಹ ಇರುತ್ತದೆ ಎಂದು ತಿಳಿಸಿದರು.
ನಗರದ ಶ್ರೀ ರಾಗರಂಜಿನಿ ಸಂಗೀತ ಶಾಲೆ, ಮೇರಿ ಇಮ್ಯಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ, ಪಿಇಎಸ್ ಶಾಲೆ, ಭಾರತೀಯ ವಿದ್ಯಾ ಭವನ, ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ, ಶ್ರೀ ಶಾರದಾ ದೇವಿ ಅಂಧರ ವಸತಿ ಶಾಲೆ, ಡೆಲ್ಲಿ ವರ್ಲ್ಡ್ ಸ್ಕೂಲ್, ಕಸ್ತೂರಬಾ ಪ್ರೌಢಶಾಲೆ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಗೀತ ಭಾರತಿ ಕಾರ್ಯಕ್ರಮದಲ್ಲಿ ನಗರದ 8 ಶಾಲೆಯ 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಮುಖರಾದ ಎಚ್.ಪರಮೇಶ್ವರ್, ರಾಜೇಶ್ ವಿ ಅವಲಕ್ಕಿ, ಜಿ.ವಿಜಯ್ ಕುಮಾರ್, ರಾಜು, ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಹಾಗೂ ಮಲ್ನಾಡ್ ಓಪನ್ ಗ್ರೂಪ್ ಹಿರಿಯ ಸದಸ್ಯ ಗಿರೀಶ್, ಚಂದ್ರಹಾಸ್, ಚೇತನ್ ರಾಯನಹಳ್ಳಿ, ಶ್ರೀನಿವಾಸ್ ವರ್ಮಾ, ಟಿ.ಎನ್.ಸುಜಯ್, ಸತ್ಯನಾರಾಯಣ ಹೊಳ್ಳ, ರೂಪ ಹೊಳ್ಳ, ರಾಘವೇಂದ್ರ ಆರ್., ಕೀರ್ತಿ ಕುಮಾರ್, ಅಜಯ್, ಶ್ರೇಯಾಂಕಾ, ರಕ್ಷಾ, ಘನಶ್ಯಾಮ್ ಗಿರಿಮಾಜಿ, ಪೃಥ್ವಿರಾಜ್ ಗಿರಿಮಾಜಿ, ದೊರೈ ಸಿ, ಮಂಜುನಾಥ್, ರಾಜು, ಶಾಂತಮ್ಮ, ಅಶ್ವಿನಿ ದೊರೈ, ಹೇಮಲತಾ, ಸುನಂದಮ್ಮ, ಚಂದನ್, ಲೋಹಿತ್ ಪ್ರಸಾದ್, ಕೇಶವ, ಕಿರಣ ಕುಮಾರ್, ರೇಣುಕಯ್ಯ ಉಪಸ್ಥಿತರಿದ್ದರು.

Department of School Education and Literacy ಆಗಸ್ಟ್ 15, ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಜಿಲ್ಲಾಡಳಿತ ಸಜ್ಜು

0

Department of School Education and Literacy ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಗಸ್ಟ್ 15 ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಸಾಗರ ರಸ್ತೆಯ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಧ್ವಜಾರೋಹಣ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿಧಿನಿಗಳು ಪಾಲ್ಗೊಳ್ಳುವರು.

Department of School Education and Literacy ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ, ಪಾಲಿಕೆ ಆಯುಕ್ತರು, ಸರ್ಕಾರಿ ಅಧಿಕಾರಿ/ನೌಕರರು, ಸಾರ್ವಜನಿಕರು ಪಾಲ್ಗೊಳ್ಳುವರು. ಅಂದು ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಪೊಲೀಸ್ ಬ್ಯಾಂಡ್ ಮತ್ತು ನಗರದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Adichunchanagiri Education Trust Shivamogga ಮಲೆನಾಡಿನ ಭಾಗದಲ್ಲಿ ಶ್ರೀಪ್ರಸನ್ನನಾಥಶ್ರೀಗಳು ಕ್ರೀಡಾಸ್ಫೂರ್ತಿ ತುಂಬುವ ಕಾರ್ಯಮಾಡುತ್ತಿದ್ದಾರೆ- ಸಂಸದ ರಾಘವೇಂದ್ರ

0

Adichunchanagiri Education Trust Shivamogga ಮಲೆನಾಡ ಭಾಗದಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬಿದ ಶ್ರೀಗಳೆಂದರೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಎಂದರೆ ತಪ್ಪಾಗಲಿಕ್ಕಿಲ್ಲ, ಅವರು ಇಲ್ಲಿಯವರೆಗೆ ಓದಿನ ಜೊತೆ ಜೊತೆಗೆ ಕ್ರೀಡೆಗೂ ಅಷ್ಟೇ ಆದ್ಯತೆ ನೀಡಿ ರಾಜ್ಯ,ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನು ರೂಪಿಸುವಂತಹ ಕೀರ್ತಿ ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ನೆಹರು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ,ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿ, ಇಂತಹ ಕ್ರೀಡಾಸ್ಪೂರ್ತಿ ಚುಂಚಾದ್ರಿ ಕಪ್ ನಂತಹ ಕ್ರೀಡಾಕೂಟಗಳಲ್ಲಿ ಕ್ರೀಡಾ ಪ್ರತಿಭಾನ್ವಿತರನ್ನು ಹೊರಹೊಮ್ಮಿಸಲು ಸಾಧ್ಯ ಎಂದು ಹೇಳಿದರು.

ವಿದ್ಯೆಗಷ್ಟೇ ಸೀಮಿತವಾಗದೆ ಕ್ರೀಡೆ ಮುಖಾಂತರ ಯುವಶಕ್ತಿಯನ್ನು ಬೆಳೆಸುವಂತಹ ಒಂದು ಕಾರ್ಯ ಸುಮಾರಿ 22 ವರ್ಷಗಳಿಂದ ಚುಂಚಾದ್ರಿ ಕಪ್ ಮುಖಾಂತರ ಈ ಒಂದು ಪವಿತ್ರವಾದ ಕ್ರೀಡೆಗೆ ಆದ್ಯತೆಯನ್ನು ಕೊಡುವಂತಹ ಕಾರ್ಯ ಶ್ರೀಮಠದಿಂದ ಆಗುತ್ತ ಇರುವುದು ಹೆಮ್ಮೆಯ ಸಂಗತಿ.

ಶಿವಮೊಗ್ಗದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡೆಗೆ ಹೆಚ್ಚು ಒತ್ತು ನೀಡಿ,ಆದಿಚುಂನಗಿರಿ ಸಂಸ್ಥೆಯ ಕನಸಿನಂತೆ, ಸರ್ಕಾರವು ಕೆಲಸ ಮಾಡಿದೆ. ಅಂತಹ ಸಾಕಷ್ಟು ಯೋಜನೆಯ ಸದುಪಯೋಗ ಪಡೆಯುವಂತ ಅವಕಾಶ ಕ್ರೀಡಾಪಟುಗಳಿಗೆ ದೊರಕುತ್ತಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ ಕ್ರೀಡಾಪಟುಗಳಲ್ಲಿ ಗೆದ್ದೇಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಯನ್ನು ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.

ಜಿಲ್ಲೆಯಲ್ಲಿ ಇವತ್ತು ವಾಲಿಬಾಲ್ ಆಟ ರಾಜ ರಾಷ್ಟ್ರ ಮಟ್ಟದಲ್ಲಿ ಪ್ರಮುಖವಾಗಿ ಆಡುತ್ತಾ ಇದ್ದಾರೆ. ಒಲಂಪಿಕ್ಸ್ ನಲ್ಲಿ ಇವತ್ತು ಚಿನ್ನದ ಪದಕ ಮಾತ್ರ ಇಲ್ಲದೇ, ಬೆಳ್ಳಿ ಮತ್ತು ಕಂಚಿನ ಪದಕ್ಕೆ ಮಾತ್ರ ಸೀಮಿತವಾಗಿದ್ದೇವೆ.ಇಷ್ಟೊಂದು ಜನಸಂಖ್ಯೆ ಇರುವ ಭಾರತದಲ್ಲಿ 5 ಕಂಚು ಮತ್ತು ಒಂದು ಬೆಳ್ಳಿ ಬಂತು ಎಂದರೆ ಇದಕ್ಕೆ ಕಾರಣವನ್ನು ಹುಡುಕುವ ಕೆಲಸವಾಗಬೇಕಾಗಿದೆ. ಆಗಿದ್ದಾಗ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು, ಯುವಕರು ಮುಂದಿನ ದಿನಗಳಲ್ಲಿ ಚಿನ್ನದ ಪದಕ ಪಡೆಯಲು ದಾಪುಗಾಲು ಹಾಕುತ್ತಾರೆ ಎಂಬುದಂತೂ ಸತ್ಯ, ಎಲ್ಲಾ ಕಡೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಾಗಿದೆ,ಆಗಿದ್ದಾಗ ಮಾತ್ರ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.

ಮುಂದೆ ನೀವು ಸಹ ಆಟವನ್ನು ಆಡಿ ಒಲಂಪಿಕ್ನಲ್ಲಿ ದೇಶದ ಧ್ವಜ ಹಾರಿಸುವಂತರಾಗಿ ಎಂದು ಆಶೀರ್ವದಿಸಿದರು.

Adichunchanagiri Education Trust Shivamogga ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿಯವರು, ಚಿತ್ರದುರ್ಗ ಮಾದರ ಚೆನ್ನಯ್ಯ ಗುರುಪೀಠದ ಪೂಜ್ಯ ಶ್ರೀ ಶ್ರೀ ಮಾದರ ಚೆನ್ನಯ್ಯ ಬಸವಮೂರ್ತಿ ಸ್ವಾಮೀಜಿಯವರು, ಶಿವಮೊಗ್ಗ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ , ಶಿವಮೊಗ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಜಿ.ಕಾಮತ್, ಕಾರ್ಯದರ್ಶಿ ಶಶಿ ಕೆ. ಎಸ್., ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗವದವರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

Kote Sri Marikamba Temple ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಮ್.ಮಂಜುನಾಥಗೌಡರಿಗೆ ಸನ್ಮಾನ

0

Kote Sri Marikamba Temple ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಾಲಯದ ಸಮುದಾಯ ಭವನದಲ್ಲಿ ನಡೆದ ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ 112ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ನೂತನವಾಗಿ ಡಿಸಿಸಿ ಬ್ಯಾಂಕಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಆರ್ .ಮಂಜುನಾಥ್ ಗೌಡ ರವರನ್ನು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಸ್ ಕೆ ಮರಿಯಪ್ಪನವರನ್ನು ಸಿಟಿ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

Kote Sri Marikamba Temple ಈ ಸಂದರ್ಭದಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಎಂ ಕೆ ಸುರೇಶ್ ಕುಮಾರ್ , ಉಪಾಧ್ಯಕ್ಷರಾದ ಕೆ ರಂಗನಾಥ್, ಖಜಾಂಚಿ ರುಕ್ಮಿಣಿ ವೇದ ವ್ಯಾಸ್, ನಿರ್ದೇಶಕರುಗಳಾದ ಉಮಾಶಂಕರ ಉಪಾಧ್ಯ, ಎಸ್.ಪಿ. ಶೇಷಾದ್ರಿ, ಸಿ ಹೊನ್ನಪ್ಪ, ಚಂದ್ರಶೇಖರ್, ರಾಜು, ಘನಶಾಮ್, ರಾಕೇಶ್, ಉಮೇಶ್,ರೇಖಾ ಚಂದ್ರಶೇಖರ್, ಸೀತಾರಾಮ್ ನಾಯಕ್, ರಘು ಸಿಂಗ್ , ನವೀನ್ ದಳವಾಯಿ, ಸಿ.ಡಿ ದಿನೇಶ್, ಕೃಷ್ಣಮೂರ್ತಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಮನೋಜ್ ಕುಮಾರ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಮತ್ತು ಷೆರುದಾರ ಬಂಧುಗಳು ಉಪಸ್ಥಿತರಿದ್ದರು

Acharya Tulsi National College of Commerce ಜಗತ್ತು ಬದಲಾಯಿಸಬೇಕೆಂಬ ಹಂಬಲ ಗಾಂಧೀಜಿಯಲ್ಲಿತ್ತು. ಅವರದ್ದು ಪ್ರಯೋಗಶೀಲ ಜೀವನ- ಲಕ್ಷ್ಮೀಶ ತೋಳ್ಪಾಡಿ

0

Acharya Tulsi National College of Commerce ಮಹಾತ್ಮ ಗಾಂಧೀಜಿ ವಿಚಾರಧಾರೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳದೇ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ ಮತ್ತು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರದಲ್ಲಿ ಮಾತನಾಡಿದರು.

ಗಾಂಧೀಜಿ ತತ್ವಗಳನ್ನು ಎಲ್ಲರೂ ಅವರ ಅನುಕೂಲಕ್ಕೆ ತಕ್ಕಂತೆ ಕೇಳುತ್ತಿದ್ದಾರೆ. ಇಂತಹ ಮನಃಸ್ಥಿತಿ ಬದಲಾವಣೆ ಆಗುವ ಅಗತ್ಯವಿದೆ. ಈ ಮೂಲಕ ಸದೃಢ ಸಮಾಜ ಕಟ್ಟಲು ಸಾಧ್ಯ.ವಾಗುತ್ತದೆ. ವಿಶೇಷವಾಗಿ ಯುವ ಜನತೆ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಜಗತ್ತು ಬದಲಾಯಿಸಬೇಕೆಂಬ ಹಂಬಲ ಗಾಂಧೀಜಿ ಅವರಲ್ಲಿತ್ತು. ಗಾಂಧೀಜಿ ಅವರ ಜೀವನ ಪ್ರಯೋಗಶೀಲತೆಯಿಂದ ಕೂಡಿತ್ತು. ಅಂದರೆ ಅದು ತಪ್ಪಾಗುವುದಿಲ್ಲ ಎಂದರು.

ಯುವಜನತೆ ಗಾಂಧೀಜಿಯ ತತ್ವ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಎಲ್ಲರೂ ಸತ್ಯದ ಕಡೆಗೆ ನಡೆಯಬೇಕು ಆಗ ಮಾತ್ರ ಬದಲಾವಣೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಗಾಂಧೀಜಿ ಜೀವನದ ಆದರ್ಶಗಳನ್ನು ಜನರು ಸರಿಯಾಗಿ ಗ್ರಹಿಸಬೇಕು. ಇದರಿಂದ ತುಂಬಾ ಅನುಕೂಲವಾಗುತ್ತದೆ. ಹೊಸ ಬದಲಾವಣೆಗೂ ಮುನ್ನುಡಿ ಬರೆಯಬಹುದು ಎಂದು ಹೇಳಿದರು.

Acharya Tulsi National College of Commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸರ್ವ ಕಾಲಕ್ಕೂ ಗಾಂಧೀಜಿ ಅವರ ಜೀವನದ ಪ್ರಮುಖ ತತ್ವ ಆದರ್ಶಗಳು ಪ್ರಸ್ತುತ ಆಗಿರುತ್ತವೆ ಎಂದು ತಿಳಿಸಿದರು.

ಎಂ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ, ಶಿಬಿರದ ಸಂಚಾಲಕ ಪ್ರೊ. ಕೆ.ಎಂ.ನಾಗರಾಜ ಇತರರಿದ್ದರು.

MESCOM ಆಗಸ್ಟ್ 14 . ಮಂಡ್ಲಿ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

MESCOM ಶಿವಮೊಗ್ಗ ನಗರ ಉಪವಿಭಾಗ-2ರ ಮಂಡ್ಲಿ ವಿ ವಿ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ 11 ಕೆವಿ ಕಾಮಗಾರಿ ಇರುವುದರಿಂದ ಆ. 14ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಇಲಿಯಾಜ್‌ನಗರ 1 ರಿಂದ 13ನೇ ಕ್ರಾಸ್‌ವರೆಗೆ, ಸಿದ್ದೇಶ್ವರ ಸರ್ಕಲ್, ಫಾರೂಕ್ಯ ಶಾದಿಮಹಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಮಂಡಕ್ಕಿ ಭಟ್ಟಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿನಗರ 80 ಅಡಿರಸ್ತೆ, ಕಾಮತ್ ಲೇಔಟ್, ಹಳೇ ಗೋಪಿಶೆಟ್ಟಿಕೊಪ್ಪ, ಅಣ್ಣಾನಗರ, ಮಲ್ಲಿಕಾರ್ಜುನ MESCOM ಬಡಾವಣೆ, ಮಂಜುನಾಥ ಬಡಾವಣೆ, ಮಿಳಘಟ್ಟ, ಆನಂದರಾವ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಭಾರತಿಕಾಲೋನಿ, ಪಂಚವಟಿ ಕಾಲೋನಿ, ಅಮೀರ್ ಅಹ್ಮದ್ ಸರ್ಕಲ್, ಕೃಷಿ ಕಚೇರಿ, ಮಾಕಮ್ಮ ಬೀದಿ, ಕೆರೆದುರ್ಗಮ್ಮನಕೇರಿ, ಪುಟ್ಟನಂಜಪ್ಪ ಕೇರಿ, ಅಜಾದ್‌ನಗರ, ಕಲಾರ್ ಪೇಟೆ, ಸಿದ್ದಯ್ಯ ರಸ್ತೆ, ಇಮಾಮ್ ಬಡಾ, ಮುರಾದ್‌ನಗರ, ಕ್ರೌನ್ ಪ್ಯಾಲೇಸ್ ಶಾದಿ ಮಹಲ್, ತಾಹಾ ಶಾದಿಮಹಲ್, ಮಂಡಕ್ಕಿಭಟ್ಟಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.