Monday, April 6, 2026
Monday, April 6, 2026
Home Blog Page 609

Goodluck Organisation ಗುಡ್ ಲಕ್ ಕೇಂದ್ರದ ಸೇವೆ ಶ್ಲಾಘನೀಯ- ಈಶ್ವರಪ್ಪ.ಮಕ್ಕಳು ಹೆತ್ತವರನ್ನಸ್ವತಃ ಪೋಷಿಸಬೇಕು- ಡಿ.ಎಸ್.ಅರುಣ್

0

Goodluck Organisation ಪ್ರಾರಂಭದಿಂದಲೂ ಗುಡ್‌ಲಕ್ ಆರೈಕೆ ಕೇಂದ್ರದ ಸೇವೆಯು ಶ್ಲಾಘನೀಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗ ನಗರದ ಆಲ್ಕೋಳದ ಗಜಾನನ ಲೇಔಟ್ ನಲ್ಲಿ ನಿರ್ಮಿಸಿರುವ ಗುಡ್‌ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಯಿಂದ ನಿರಂತರವಾಗಿ ಸೇವಾ ಕಾರ್ಯ ಮುಂದುವರೆಯಲಿ ಎಂದು ಆಶಿಸಿದರು.

ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಉತ್ತಮ ಸಂಸ್ಕಾರವನ್ನು ಹೊಂದಿ ಬೆಳೆಯುವ ಮಕ್ಕಳು ತಮ್ಮ ತಂದೆ ತಾಯಿಯರನ್ನು ಇಂತಹ ಕೇಂದ್ರಗಳಿಗೆ ತಂದು ಬಿಡದೆ ತಾವೇ ಅವರ ಪೋಷಣೆ ಮಾಡಬೇಕು. ಇಂತಹ ಕೇಂದ್ರಗಳ ಸಂಖ್ಯೆ ಕಡಿಮೆಯಾಗಬೇಕು. ಇಲ್ಲಿ ದಾಖಲಾಗುವವರ ಸಂಖ್ಯೆಯು ಕಡಿಮೆಯಾಗಲಿ ಎಂದು ತಿಳಿಸಿದರು.

ವಾಗ್ಮಿ ಜಿ.ಎಸ್.ನಟೇಶ್ ಮಾತನಾಡಿ, ನಾವು ದುಡಿಯುವ ನೂರು ರೂಪಾಯಿಯಲ್ಲಿ ಸ್ವಲ್ಪ ಹಣವನ್ನು ಸಮಾಜಸೇವೆಗಾಗಿ ಎತ್ತಿಡಬೇಕು. ಇದರಿಂದ ಪುಣ್ಯದ ಕೆಲಸ ಮಾಡಿದ ಸಾರ್ಥಕ ಭಾವನೆ, ಸಂತೃಪ್ತಿ ನಮಗೆ ದೊರೆಯುತ್ತದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಮಾತನಾಡಿ, ಗುಡ್ ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡಕ್ಕೆ ಇನ್ನು ಹೆಚ್ಚಿನ ಸವಲತ್ತುಗಳ ಅವಶ್ಯಕತೆ ಇದ್ದು, ಎಲ್ಲರೂ ಇದಕ್ಕೆ ಒಳ್ಳೆಯ ಮನಸ್ಸಿನಿಂದ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ್ ಐತಾಳ್ ಮಾತನಾಡಿ, ಗುಡ್ ಲಕ್ ಆರೈಕೆ ಕೇಂದ್ರ ನಡೆದು ಬಂದ ದಾರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.

Goodluck Organisation ಗುಡ್ ಲಕ್ ಆರೈಕೆ ಕೇಂದ್ರಕ್ಕೆ ವಿವಿಧ ರೂಪದಲ್ಲಿ ದಾನ ನೀಡಿದಂತಹ ದಾನಿಗಳನ್ನು ಸನ್ಮಾನಿಸಲಾಯಿತು.
ಗುಡ್ ಲಕ್ ಆರೈಕೆ ಕೇಂದ್ರದ ಬೈರಾಪುರದ ಶಿವಪ್ಪಗೌಡ, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ಟಿ.ಶ್ರೀನಿವಾಸ್, ಎಂ.ಎ.ಕೃಷ್ಣಪ್ಪ, ಎಚ್.ರಾಮಲಿಂಗಪ್ಪ, ವಸಂತ ಹೋಬಳಿದಾರ್, ಗಜಾನನ ಗೌಡ, ಜಿ.ವಿಜಯಮಾರ್, ಆನಂದರಾವ್, ಅನುಪಮಾ ಹೆಗಡೆ, ವಿ.ಜಿ.ಲಕ್ಷ್ಮೀನಾರಾಯಣ, ಗಾಯತ್ರಿ ಹೆಗಡೆ, ಜೆ.ಕೆ.ಶರವಣ, ಸರ್ಜಾ ಜಗದೀಶ್, ವಿನಯ್ ಕುಮಾರ್, ಕೆ.ಇ.ಕಾಂತೇಶ್, ನಾರಾಯಣ ಉಪಸ್ಥಿತರಿದ್ದರು.

Shimoga Breaking News ರೌಡಿಶೀಟರ್ ಮೇಲೆ ಪೊಲೀಸ್ ಫೈರಿಂಗ್

0

Shimoga Breaking News ರೌಡಿ ಆಸಾಮಿ ಮೇಲೆ ಪೊಲೀಸ್ ಫೈರಿಂಗ್ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ರೌಡಿಶೀಟರ್ ಭಾವಿತ ಕಾಲಿಗೆ ಗುಂಡು ಹೊಡೆದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಕೊಲೆ ಕೊಲೆ ಯತ್ನ, ದರೋಡೆ ಸೇರಿದಂತೆ ವಿವಿಧ ರೌಡಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಆರೋಪಿ ಆರೋಪಿ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಏಳು ಪ್ರಕರಣ ಕೆಲ ಸಮಯ ಶಿವಮೊಗ್ಗ ಜಿಲ್ಲೆಯಿಂದ ಹೊರಗಿದ್ದ ಆರೋಪಿ ನಿನ್ನೆ ರಾತ್ರಿ ತನ್ನ ಇಬ್ಬರು ಸ್ನೇಹಿತರೊಂದಿಗೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದ ಆರೋಪಿ ಇಂದು ಆರೋಪಿಯ ಇರುವಿಕೆ ತಿಳಿದು ಬಂಧಿಸಲು ತೆರಳಿದ್ದ ಪಿಎಸ್ಐ ಸುನೀಲ್ ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ತಪ್ಪಿಸಿಕೊಳ್ಳದಂತೆ ಆರೋಪಿಗೆ ಎಚ್ಚರಿಕೆ ನೀಡಿದ ಪೊಲೀಸರು ಸೂಚನೆಯ Shimoga Breaking News ಹೊರತಾಗಿಯೂ ಅಲ್ಲಿಗೆ ಮುಂದಾದ ಆರೋಪಿ ಆತ್ಮ ರಕ್ಷಣೆಗಾಗಿ ಆರೋಪಿಯ ಎಡಗಾಲಿಗೆ ಗುಂಡಿಟ್ಟ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಾಯಾಳು ಆರೋಪಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು

Madhu Bangarappa ಭದ್ರಾವತಿಯ ವಿಐಎಸ್ಎಲ್ & ಎಂಪಿಎಂ ಕಾರ್ಖಾನೆಗಳನ್ನ ಸರ್ಕಾರದಿಂದಲೇ ಪುನಶ್ಚೇತನಕ್ಕೆ ಪ್ರಯತ್ನ ಮಾಡಲಾಗುವುದು- ಮಧು ಬಂಗಾರಪ್ಪ

0

Madhu Bangarappa ಭದ್ರಾವತಿಯ ಎರಡು ಕಣ್ಣುಗಳಂತಿರುವ ಹಾಗೂ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಾಗಿರುವ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಸರ್ಕಾರದ ವತಿಯಿಂದಲೇ ಪುನಶ್ಚೇತನಗೊಳಿಸಲು ಸರ್ಕಾರದ ವತಿಯಿಂದಲೇ ಕ್ರಮ ವಹಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಈ ಅವಳಿ ಸಂಸ್ಥೆಗಳನೆ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಸುಮಾರು 15 ಸಾವಿರ ಕುಟುಂಬಗಳು ಈ ಸಂಸ್ಥೆಯ ಉದ್ಯೋಗಾವಕಾಶ ಕಳೆದುಕೊಂಡು ಅತಂತ್ರ ಆಗಲಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣದಲ್ಲಿ ಬಾಕಿ ಇರುವ ನೈಟ್ ಲ್ಯಾಂಡಿಂಗ್ ಸೇರಿ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಿದೆ ನೈಟ್ ಲ್ಯಾಂಡಿಂಗ್ ಗೆ ಸಂಬಂಧಪಟ್ಟಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದವರು ನುಡಿದರು.

ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಾಲೆಗಳಲ್ಲಿನ ಕೊರತೆ ಇರುವ ಶಿಕ್ಷಕರ ಹುದ್ದೆಯನ್ನು ಶೀಘ್ರದಲ್ಲಿ ಭರ್ತಿ ಮಾಡಲು ಸರ್ಕಾರ ಉದ್ದೇಶಿಸಿದೆ. ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ರೂಪಿಸಿರುವ ಯೋಜನೆಗಳಂತೆ ಮುಂದಿನ ಒಂದು ಅಥವಾ ಒಂದೂವರೆ ವರ್ಷಗಳ ಅವಧಿಯಲ್ಲಿ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದವರು ನುಡಿದರು.

Madhu Bangarappa ಜಿಲ್ಲೆಯಲ್ಲಿನ ಬಹುತೇಕ ಎಲ್ಲಾ ಜಲಾಶಯಗಳು ಸುಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳ ಸ್ಥಿತಿಗತಿಗಳ ಕುರಿತು ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸಲಾಗುವುದು ಎಂದವರು ನುಡಿದರು.

Renukadevi Temple Chandragutti ಚಂದ್ರಗುತ್ತಿ ದೇವಿಯ ದೇಗುಲ ಅಭಿವೃದ್ಧಿಗೆ ಶೀಘ್ರ ಯೋಜನೆ. ಯಾತ್ರಾರ್ಥಿಗಳಿಗೆ ಸೌಲಭ್ಯಗಳ ವ್ಯವಸ್ಥೆ- ಮಧು ಬಂಗಾರಪ್ಪ

0

Renukadevi Temple Chandragutti ಮಲೆನಾಡಿನ ಜನರ ಪ್ರತಿ ಮನೆಯ ಅಧಿದೇವತೆಯಾಗಿರುವ ಚಂದ್ರಗುತ್ತಿಯ ಪ್ರಸಿದ್ಧ ಶ್ರೀ ರೇಣುಕಾ ರೇಣುಕಾ ದೇವಿ ಶ್ರೀ ಕ್ಷೇತ್ರ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರು ಹೇಳಿದರು.

ಸೊರಬ ಸಮೀಪದ ಚಂದ್ರಗುತ್ತಿಯ ಶ್ರೀ ರೇಣುಕಾದೇವಿಯ ದರ್ಶನ ಪಡೆದ ನಂತರ ಅವರು ಶ್ರೀ ಕ್ಷೇತ್ರದ ಆಡಳಿತಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದರು.

ಶ್ರೀ ಕ್ಷೇತ್ರದಲ್ಲಿನ ಸ್ವಚ್ಛತೆ, ಶೌಚಾಲಯ, ಶುದ್ಧ ಕುಡಿಯುವ ನೀರು, ವಸತಿ ಮತ್ತಿತರ ವಿಷಯಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದ ಅವರು ಯತ್ರಾರ್ತಿಗಳ ಅನುಕೂಲಕ್ಕಾಗಿ ತುರ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ ಸಂದರ್ಭದಲ್ಲಿ ಸ್ಥಿತವಾಗಿರುವ ಹಾಗೂ ಪಾರಂಪರಿಕವಾಗಿರುವ ಮೂಲ ಕಟ್ಟಡವು ಶಿಥಿಲಗೊಂಡಿದೆ ಮಾತ್ರವಲ್ಲದೆ ಮಳೆಯಿಂದ ಸೋರುತ್ತಿದೆ. ದೇವಸ್ಥಾನದ ಬಾಗಿಲುಗಳು ಸಡಿಲಗೊಂಡಿವೆ. ಅದರ ತುರ್ತು ಕಾರ್ಯವನ್ನು ಕೈಗೊಳ್ಳಲು ಭಾರತೀಯ ಪರಂಪರಿಕ ಕಟ್ಟಡಗಳ ನಿರ್ವಹಣಾ ಸಮಿತಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಲ್ಲದೆ ಕೈಗೊಳ್ಳಬಹುದಾದ ತುರ್ತು ಕಾಮಗಾರಿಗಳಿಗೆ ಆರ್ಥಿಕ ನೆರವನ್ನು ಸರ್ಕಾರ ಅಥವಾ ಸ್ಥಳೀಯ ಆಡಳಿತ ಅಧಿಕಾರಿಗಳ ಕಚೇರಿಯಿಂದ ಒದಗಿಸಿಕೊಡಲಾಗುವುದು ಎಂದವರು ನುಡಿದರು.

ಪ್ರಸ್ತುತ ದೇವಸ್ಥಾನದ ಮೂಲ ಕಟ್ಟಡದ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೊಳ ಪಟ್ಟಿದೆ. ಅದಕ್ಕಾಗಿ ನಿಯಮಾನುಸಾರ ಇಲಾಖೆಯ ಅನುಮತಿ ಪಡೆದು ಕಟ್ಟಡದ ಜೀರ್ಣೋದ್ದಾರಕ್ಕೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ದೇವಸ್ಥಾನದ ಸುತ್ತಮುತ್ತಲ 10 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ ಈ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ನೆರಳು, ವಿದ್ಯುತ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸೂಚಿಸಲಾಗಿದೆ ಎಂದರು.

ದೇವಸ್ಥಾನದ ಸುತ್ತಮುತ್ತಲ ಹತ್ತು ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಪಡೆದುಕೊಂಡ ನಂತರ ಅದಕ್ಕೆ ಪರ್ಯಾಯವಾಗಿ 20 ಎಕರೆ ಭೂಪ್ರದೇಶವನ್ನು ಅರಣ್ಯ ಇಲಾಖೆಗೆ ವಹಿಸಿಕೊಡಲಾಗುವುದು ಎಂದರು.

ಪ್ರಸ್ತುತ ಈ ಪಾರಂಪರಿಕ ಕಟ್ಟಡದಲ್ಲಿ ಗುರುತಿಸಲಾಗಿರುವ ತುರ್ತು ಕಾಮಗಾರಿಗಳನ್ನು ರಾಷ್ಟ್ರೀಯ ಪ್ರಾಚ್ಯ ವಸ್ತು ಇಲಾಖೆಯಿಂದ ಹಾಗೂ ಉಳಿದಂತೆ
ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿನ ಮೆಟ್ಟಿಲುಗಳ ದುರಸ್ತಿ, ನೆರಳು ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಾಮಗಾರಿಗಳನ್ನು ಆಡಳಿತಾಧಿಕಾರಿಗಳ ಕಚೇರಿಯಿಂದ ನಿರ್ವಹಿಸಲಾಗುವುದು ಎಂದ ಅವರು ನೆರಳಿಗಾಗಿ ನಿರ್ಮಿಸುವ ಶೆಲ್ಟರ್ ಗಳನ್ನು ಕಾಲಮಾನ ಕನುಗುಣವಾಗಿ ಅಳವಡಿಸಲು ಹಾಗೂ ತೆರವುಗೊಳಿಸಲು ಅನುಕೂಲವಾಗುವಂತೆ ನಿರ್ಮಿಸಲಾಗುವುದು ಎಂದರು.

Renukadevi Temple Chandragutti ಈ ದೇಶದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಿರಂತರವಾಗಿರುವಂತೆ ನೋಡಿಕೊಳ್ಳಲು ಯಾಗ ಶಾಲೆಯನ್ನು ಸಾಂಪ್ರದಾಯಿಕ ಹಾಗೂ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲು ಸೂಚಿಸಲಾಗಿದೆ ಎಂದವರು ನುಡಿದರು.

ದೇವಸ್ಥಾನಕ್ಕೆ ಬರುವ ಯಾತ್ರೆ ಗಳ ಅನುಕೂಲಕ್ಕೆ ಅಲ್ಲಲ್ಲಿ ಮಾರ್ಗಸೂಚಿಗಳನ್ನು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡುವ ಭಕ್ತಾದಿಗಳ ಪಾದರಕ್ಷಗಳನ್ನು ಕೌಂಟರ್ ಗಳನ್ನು ತೆರೆಯಲು ಸೂಚಿಸಿದ ಅವರು ಹಾಲುಣಿಸುವ ತಾಯಂದಿರ ಅನುಕೂಲಕ್ಕಾಗಿ ಪ್ರತ್ಯೇಕ ಕೊಠಡಿಯೊಂದನ್ನು ನಿರ್ಮಿಸಲು ಸೂಚಿಸಿದರು.

ಪ್ರಸ್ತುತ ಈಗಿರುವ ಶೌಚಾಲಯಗಳ ಸಂಖ್ಯೆ ಅತ್ಯಂತ ಕನಿಷ್ಠ ವಾಗಿದ್ದು ಮಹಿಳೆಯರು ಹಾಗೂ ಪುರುಷರ ಅನುಕೂಲಕ್ಕಾಗಿ ಪ್ರತ್ಯೇಕವಾಗಿ 25 ಶೌಚ ಹಾಗೂ ಸ್ನಾನ ಗ್ರಹಗಳನ್ನು ನಿರ್ಮಿಸಲು ಸೂಚಿಸಿದರು.

ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಆಡಳಿತಾಧಿಕಾರಿಗಳ ಕಾರ್ಯಾಲಯದಿಂದ ಕೇವಲ ಆದಾಯ ನಿರೀಕ್ಷೆಕ್ಕೆ ಗಮನ ಹರಿಸಿದೆ ಜನರಿಗೆ ಸೌಲಭ್ಯ ಕಲ್ಪಿಸಿಕೊಡಲು ಹಣಕಾಸಿನ ಅಗತ್ಯವಿದ್ದಲ್ಲಿ ಸರ್ಕಾರದ ನೆರವನ್ನು ಒದಗಿಸಲಾಗುವುದು ಎಂದರು.

ದೇವರ ದರ್ಶನಕ್ಕಾಗಿ ಬರುವ ಯಾತ್ರಾತಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ವಾಹನಗಳ ನಿಲುಗಡೆಗೆ, ಜನರ ವಸತಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲು ಆಡಳಿತ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಗಮನಹರಿಸುವಂತೆ ಸೂಚಿಸಿದ ಅವರು ಪರಸ್ಪರರಲ್ಲಿ ಸಮನ್ವಯತೆ ಇರಬೇಕು ಎಂದವರು ನುಡಿದರು.

ಈ ಪುಣ್ಯ ಭೂಮಿಗೆ ಬಂದು ದೇವರ ದರ್ಶನ ಪಡೆಯುವ ಯತ್ರಾರ್ತಿಗಳಿಗೆ ಧನ್ಯತಾಭಾವ ಮೂಡಬೇಕು ಅಂತಹ ವಾತಾವರಣ ಇಲ್ಲಿ ನಿರ್ಮಾಣಗೊಳ್ಳಬೇಕು ಎಂದು ಅವರು ಮುಂದಿನ ದಿನಗಳಲ್ಲಿ ಸರ್ಕಾರದಿಂದಲೇ ಪ್ರಾಧಿಕಾರ ರಚಿಸಿ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯಿಂದಾಗಿ ಕೆರೆಕಟ್ಟೆ ಕಾಲ್ವೆಗಳು ಅಲ್ಲಲ್ಲಿ ಹಾಳಾಗಿದ್ದು ಅವುಗಳನ್ನು ದುರಸ್ತಿಗೊಳಿಸಲು ತುರ್ತು ಕ್ರಮ ಕೈಗೊಳ್ಳಲಾಗುವುದು. ಸೊರಬ, ಜಡೆ ಹಾಗೂ ಆನವಟ್ಟಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶೀಘ್ರದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಹಾಗೆಯೇ ಕೊರತೆ ಇರುವ ಎಲ್ಲ ತಜ್ಞ ವೈದ್ಯರುಗಳು ಹಾಗೂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರನ್ನು ಮುಂದಿನ ಒಂದು ತಿಂಗಳೊಳಗಾಗಿ ನೇಮಿಸಲಾಗುವುದು ಎಂದವರು ನುಡಿದರು.

ಸಭೆಯಲ್ಲಿ ಸಾಗರದ ಒಬ್ಬ ವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ಶ್ರೀಮತಿ ಮಂಜುಳಾ ಹೆಗಡಾಳ, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರದೀಪ್ ಕುಮಾರ್, ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ಪ್ರಮೀಳಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಸರಿತಾ, ಉಪಾಧ್ಯಕ್ಷ ರೇಣುಕಾ ಪ್ರಸಾದ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಮೀಸಲಾತಿ ವರ್ಗಗಳಿಂದ ಅರ್ಜಿ ಆಹ್ವಾನ

0

Backward Classes Welfare Department 2024-25ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ಸಾಮಾನ್ಯ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ,2ಬಿ,3ಬಿ ಮತ್ತು ಪ.ಜಾ/ಪ.ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1,ಎಸ್‌ಸಿ/ಎಸ್‌ಟಿಯವರಿಗೆ ರೂ. 2.50 ಲಕ್ಷ ಹಾಗೂ ಪ್ರವರ್ಗ-2ಎ,2ಬಿ,3ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆ ವಿದ್ಯಾರ್ಥಿಗಳಿಗೆ ರೂ. 1.00 ಲಕ್ಷದೊಳಗಿರಬೇಕು.
ಆಸಕ್ತರು ವೆಬ್‌ಸೈಟ್ https://shp.karnataka.gov.in ರಲ್ಲಿ ಸೆ. 04 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

Backward Classes Welfare Department ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://bcwd.karnataka.gov.in ಪಡೆಯುವುದು ಮತ್ತು ತಾಂತ್ರಿಕ ತೊಂದರೆಗಳಾದಲ್ಲಿ bcwdhelpline@gmail.com ಇಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲೂಕು ಅಧಿಕಾರಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಹಾಗೂ ಮೊ.ಸಂ.: 8050770005 / 08182-222129 ಗಳನ್ನು ಸಂಪರ್ಕಿಸುವುದು.

Akhila Bharatiya Sahitya Parishad 2024 ರಲ್ಲಿ ಹಿಂದುತ್ವಕ್ಕೆ ನಾನಾ ಸವಾಲುಗಳು. ಹಿಂದುಗಳೆಲ್ಲರೂ ಎದೆಸೆಟೆದು ಎದುರಿಸಬೇಕು- ಡಾ.ರಾಘವೇಂದ್ರ ವೈಲಾಯ

0

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ,ಶಿವಮೊಗ್ಗ ಘಟಕದಿಂದ
ಮೊದಲ ಶ್ರಾವಣ ಸಂಜೆ ಕಾರ್ಯಕ್ರಮ ನಡೆಯಿತು.

ಲೇಖಕ ,ಅಂಕಣಕಾರ ಮತ್ತು ಜನಪ್ರಿಯ ಶಿಶುವೈದ್ಯ ಜನನಿ ಆಸ್ಪತ್ರೆಯ
ಡಾ.ಸಿ.ಜಿ.ರಾಘವೇಂದ್ರ ವೈಲಾಯ ಅವರ ನುಡಿದೀಪದಿಂದ ಚಾಲನೆಗೊಂಡಿತು.

ದೇಶದ ಸಮಕಾಲೀನ ರಾಜಕೀಯ ಸ್ಥಿತ್ಯಂತರ ಮತ್ತು ಹಿಂದುತ್ವಕ್ಕೆ ಒದಗಿರುವ ಸವಾಲುಗಳ ಬಗ್ಗೆ
ಪ್ರಖರವಾಗಿ ಡಾ.ವೈಲಾಯ ವಿಷಯ ಮಂಡಿಸಿದರು.
ಹಿಂದುವಾಗಿ ವರ್ತಮಾನದಲ್ಲಿ ಅನ್ಯದಾಳಿಕೋರರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದು ಕೇಂದ್ರೀಕರಿಸಿ ಮಾತನಾಡಿದರು.
ಪರ್ಯಾಯ ಮತ್ತು ಖಡಕ್ ಪರಿಹಾರಗಳ ಬಗ್ಗೆ ಸ್ಪಷ್ಟ,ನೇರ ಮಾತುಗಳಿಂದ ಇಡೀ
ಇಂದಿನ ವಿಷಮ ಸ್ಥಿತಿಯಲ್ಲಿ ಸಿಲುಕಿರುವ ಹಿಂದುತ್ವ ಮತ್ತು ಅದರ ಉಜ್ವಲನೆ ಬಗ್ಗೆ ಸೋದಾಹರಣ ತಿಳಿಸಿದರು.

ಡಾ.ರಾಘವೇಂದ್ರ ವೈಲಾಯರು ತಮ್ಮ ಸ್ವಗೃಹ
“ಸಾಕೇತ” ದಲ್ಲಿ‌ ವ್ಯವಸ್ಥೆಗೊಳಿಸಲು ಅವರ ಕುಟುಂಬ ವರ್ಗದವರೊಂದಿಗೆ ಆತ್ಮೀಯವಾಗಿ ಸಹಕರಿಸಿದರು.

ಶ್ರೀಮತಿ ಡೋಂಗ್ರೆ ಅವರ
ಶಾರದಾ ಸ್ತುತಿಯಿಂದ
ಕಾರ್ಯಕ್ರಮ ಆರಂಭವಾಯಿತು.
ಶ್ರೀ ಎಚ್.ಎನ್.ಸತ್ಯನಾರಾಯಣ ಅವರು ಪ್ರಸ್ತಾವನೆ‌ಮಾಡಿ ಎಲ್ಲರಿಗೂ ಸ್ವಾಗತ ಕೋರಿದರು.

ಸುದೀರ್ಘ ಎನಿಸಬಹುದಾದ ಆದರೆ ಎಲ್ಲಿಯೂ ಏಕತಾನತೆ ಕಾಡದೇ ವಿಚಾರ ವೈವಿಧ್ಯದಿಂದ ಡಾ.ವೈಲಾಯರು ಶೋತೃಗಳ ಮನ ನಾಟುವಂತೆ ತಮ್ಮದೇ ಶೈಲಿಯಲ್ಲಿ ಸಂಗತಿಗಳನ್ನ ಚರ್ಚಿಸಿದರು.
ವಿಶೇಷವೆಂದರೆ
ಭಾಗವಹಿಸಿದ್ದ ಶ್ರೋತೃಗಳೆಲ್ಲ ಅಂದಿನ ವಿಚಾರದ ಬಗ್ಗೆ ಅರ್ಥಪೂರ್ಣ ಸಂವಾದವನ್ನೂ ನಡೆಸಿದರು.

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಶಿವಮೊಗ್ಗ ಘಟಕದ ಅಧ್ಯಕ್ಷರಾದ ಡಾ.ಸುಧೀಂದ್ರ ಅವರು
ನುಡಿದೀಪದ ವಿಷಯಗಳನ್ನೇ ಹೆಕ್ಕಿ ಮಾತಾಡಿದರು.
ವರ್ತಮಾನದಲ್ಲಿ ಹಿಂದುತ್ವ,ಭಾರತೀಯತೆ
ಸಂಕಷ್ಟಕ್ಕೆ ಸಿಲುಕಿದೆ. ಆದರೆ ಇದರಿಂದ ಪಾರಾಗಲು ರಾಜಕೀಯ
ವಾತಾವರಣ ಪಲ್ಲಟ ಮತ್ತು ಸಂಕರಗೊಂಡಿದೆ.
ಯಾವುದೇ ವ್ಯಕ್ತಿ ಮತ್ತು ವಿಚಾರಗಳನ್ನ ಪಕ್ಷ ಮತ್ತು
ಜಾತಿ ಹಿನ್ನೆಲೆಯಲ್ಲಿ ತೀರ್ಮಾನಿಸಿಬಿಡುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ
ಸಾಮಾನ್ಯ ಕುಟುಂಬಗಳನ್ನ ಜಾಗೃತಿ ಗೊಳಿಸುವ ನಾಯಕತ್ವ ಅಥವಾ ಮಾರ್ಗದರ್ಶನ
ನೀಡುವ ” ಮುಖ್ಯಪೀಠ” ಗಳು ಮೌನವಾಗಿವೆ.
ಹೀಗಾಗಿ ಇವತ್ತಿನ ಪೋಷಕ ಬಂಧುಗಳು
” ತ್ರಿಶಂಕು” ಗಳಾಗಿದ್ದಾರೆ.
ಪರಿಹಾರ ಸೂಚಿಸುವ
ಗುರುಪೀಠಗಳು ಇನ್ನಷ್ಟೂ
ಗಂಭೀರ ಮತ್ತು‌ ಸೂಕ್ತ ಮಾರ್ಗೋಪಾಯದಿಂದ
ಸಮಾಜಕ್ಕೆ ಬರಬೇಕಿದೆ.
ಎಂದರು.

ಸುಂದರ ಶ್ರಾವಣ ಸಂಜೆಯನ್ನ ಒಪ್ಪಮಾಡಿಕೊಟ್ಟ ಎಲ್ಲರಿಗೂ ಮತ್ತು‌ ವಿಶೇಷವಾಗಿ‌ ಸ್ವಗೃಹದ
ಸಭಾಭವನದಲ್ಲಿ
ಕಾರ್ಯಕ್ರಮ ನಡೆಸಲು ಅನುವು‌ ಮಾಡಿಕೊಟ್ಟ
ಡಾ.ರಾಘವೇಂದ್ರ ವೈಲಾಯ ದಂಪತಿಗಳಿಗೆ
ಆಭಾರ ಮನ್ನಣೆ ಮಾಡಲಾಯಿತು.

Rotary Inner wheel Shivamogga ವೈಯಕ್ತಿಕ ಜನ್ಮದಿನ & ವಿವಾಹ ವಾರ್ಷಿಕೋತ್ಸವ ಆಚರಣೆ ಸಮಾಜ‌ಮುಖಿಯಾಗಲಿ- ವೀಣಾ ನರಹರಿ

0

Rotary Inner wheel Shivamogga ನಮ್ಮ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟು ಹಬ್ಬಗಳನ್ನು ಸಮಾಜಮುಖಿಯಾಗಿ ಆಚರಿಸಿಕೊಳ್ಳೋಣ. ಸಮಾಜದ ಋಣ ಹಾಗೂ ಹೆತ್ತವರ ಋಣವನ್ನು ತೀರಿಸಲು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥಾಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಜೊತೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡರೆ ಅದು ಫಲಪ್ರದವಾಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಇನ್ನರ್ ವೀಲ್ ಸದಸ್ಯರಾದ ವೀಣಾ ನರಹರಿ ಅವರು ಅಭಿಪ್ರಾಯ ಪಟ್ಟರು.

ಅವರು ತಾಯಿ ಮನೆ ಮಕ್ಕಳ ಅನಾಥಾಶ್ರಮದಲ್ಲಿ ತಮ್ಮ 35ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆಯ ವೇಳೆ ತಾಯಿ ಮನೆ ಆಶ್ರಮಕ್ಕೆ ಐದು ಚೀಲ ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡುತ್ತ ಮಾತನಾಡಿದ ಅವರು, ತಾಯಿ ಮನೆ ಆಶ್ರಮದಲ್ಲಿ ಇರುವ ಮಕ್ಕಳು ತುಂಬಾ ಪ್ರತಿಭಾವಂತರಿದ್ದು, ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ತುಂಬಾ ಸಬಲರಾಗಿದ್ದಾರೆ. ಇಂತಹ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಸಹಾಯ ಹಸ್ತ ಅಗತ್ಯ. ಯಾವುದೋ ಕಾರಣಕ್ಕಾಗಿ ಆಶ್ರಮ ಸೇರಿದ ಇಂತಹ ಮಕ್ಕಳು ಸಮಾಜದ ಮುಖ್ಯ ವಾಹಿನಿಯಲ್ಲಿ ಇರಬೇಕು. ಇವರಿಗೂ ಎಲ್ಲಾ ರೀತಿಯ ಸೌಲಭ್ಯಗಳು ದೊರಕುವಂತಾಗಬೇಕು ಎಂದ ಅವರು, ಇಂತಹ ಆಶ್ರಮಗಳಿಗೆ ಸಂಘ ಸಂಸ್ಥೆಗಳ ನೆರವು ಅತ್ಯಗತ್ಯ ಎಂದು ಹೇಳಿದರು.

ಇನ್ನರ್ವಿಲ್ ಶಿವಮೊಗ್ಗ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಮಾತನಾಡಿ, ಅನಾಥ ಮಕ್ಕಳಿಗೆ ನೀಡಿದ ಸಹಾಯ ಒಂದು ನಿಜವಾದ ಮನುಕುಲದ ಸೇವೆ. ಈಗಾಗಲೇ ನಮ್ಮ ಇನ್ನರ್ವೀಲ್ ಸಂಸ್ಥೆಯಿಂದ ಸಾಕಷ್ಟು ಈ ತರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

Rotary Inner wheel Shivamogga ಇನ್ನರ್ ವಿನ್ನ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಮಾತನಾಡಿ, ತಾಯಿ ಮನೆ ಆಶ್ರಮದಲ್ಲಿ ಸ್ವಚ್ಛತೆ ಹಾಗೂ ಒಳ್ಳೆಯ ವ್ಯವಸ್ಥೆ ಇದ್ದು ಸುದರ್ಶನ್ ಅವರು ನಿಜವಾಗಿಯೂ ಸಹ ತುಂಬಾ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಎಲ್ಲಾ ಸೇವೆಗಳಿಗಿಂತ ಇಂತಹ ಮಾನವೀಯ ಸೇವೆ ಅತಿ ಮುಖ್ಯ ಎಂದು ತಾಯಿ ಮನೆ ಸುದರ್ಶನ್ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಮಾಜಿ ಅಧ್ಯಕ್ಷರಾದ ಶ್ವೇತಾ ಆಶಿತ್ ಮಾತನಾಡಿ, ಮಕ್ಕಳನ್ನು ಹುರಿದುಂಬಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನೆರವೇರಿದವು

Rotary Club Shivamogga ಸದ್ದಿಲ್ಲದೇ ನಮ್ಮ ಕಣ್ಣನ್ನ ಕಿತ್ತುಕೊಳ್ಳುವ ಗ್ಲುಕೋಮ ಕಾಯಿಲೆ ಬಗ್ಗೆ ಜಾಗೃತರಾಗಿರಬೇಕು- ಡಾ.ಕಮಲಾ

0

Rotary Club Shivamogga ಕಣ್ಣುಗಳು ಮನುಷ್ಯನ ದೇಹದ ಪ್ರಮುಖ ಅಂಗವಾಗಿದೆ. ಕಣ್ಣುಗಳು ಕಾಣದಿದ್ದರೆ ಪ್ರಪಂಚವೇ ಶೂನ್ಯವಾಗಿರುತ್ತದೆ. ಹಾಗೆ ಕಣ್ಣಿಗೆ ಹಲವಾರು ಸಮಸ್ಯೆಗಳು ಇರುತ್ತವೆ ಸಕಾಲದಲ್ಲಿ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕು. ಆರು ತಿಂಗಳಿಗೊಮ್ಮೆಯಾದರೂ ಸಹ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಗ್ಲುಕೋಮ ತಜ್ಞ ವೈದ್ಯೆ ಡಾ. ಕಮಲ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದ ರಾಜೇಂದ್ರ ನಗರ ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಸದಸ್ಯರು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಣ್ಣಿನ ಜಾಗೃತಿ ಹಾಗೂ ಗ್ಲೋಕೋಮಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ದಿನವಿಡೀ ಕಂಪ್ಯೂಟರ್ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳನ್ನು ಬಳಸುವುದರಿಂದ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಆರಂಭದಲ್ಲಿ ಗ್ಲುಕೋಮ ಯಾವುದೇ ತರಹದ ರೋಗಲಕ್ಷಣಗಳನ್ನು ತೋರುವುದಿಲ್ಲ. ಸದ್ದಿಲ್ಲದೆ ತನ್ನ ಪಾಡಿಗೆ ತಾನು ಬೆಳವಣಿಗೆ ಆಗುತ್ತದೆ. ವಯಸ್ಸಾದಂತೆ ಕಣ್ಣಿನೊಳಗೆ ಹೆಚ್ಚಿನ ಒತ್ತಡವು ಆಪ್ಟಿಕ್ ನರದ ಅಂಗಾಂಶಕ್ಕೆ ಹಾನಿ ಮಾಡುತ್ತದೆ. ಇದರಿಂದ ದೃಷ್ಟಿ ದುರ್ಬಲವಾಗುತ್ತದೆ, ಹಾಗೆಯೇ ಕುರುಡುತನ ಉಂಟಾಗುತ್ತದೆ. ಇದರಿಂದ ನಾವು ದೂರವಿರಬೇಕಾದರೆ ಆಗಾಗ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಇದಕ್ಕಿರುವ ಒಂದೇ ಉತ್ತಮ ಮಾರ್ಗ ಎಂದರು.

ಗ್ಲುಕೋಮ ಎಂಬುದು ಒಂದು ರೀತಿಯ ಕಣ್ಣಿನ ಕಾಯಿಲೆಯಾಗಿದ್ದು, ಈ ಸ್ಥಿತಿಯಲ್ಲಿ ಕಣ್ಣಿನ ದೃಷ್ಟಿ ನರ ನಿಧಾನವಾಗಿ ಘಾಸಿಗೊಳ್ಳುತ್ತಾ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಒಳಭಾಗದ ಒತ್ತಡ, ವಾಸ್ತವದಲ್ಲಿ ಕಣ್ಣುಗುಡ್ಡೆಯ ಪಾತ್ರವೇನಿದ್ದರೂ ಇದರಿಂದ ಬಿಂಬವನ್ನು ಕಣ್ಣು ಗುಡ್ಡೆಯ ಒಳಬದಿಯ ಹಿಂಭಾಗದಲ್ಲಿ ಬೀಳುವಂತೆ ಮಾಡುವುದು. ಹಾಗಾಗಿ ಸದ್ದಿಲ್ಲದೆ ನಮ್ಮ ಕಣ್ಣನ್ನು ಕಿತ್ತುಕೊಳ್ಳುವ ಗ್ಲುಕೋಮ ಕಾಯಿಲೆ ಬಗ್ಗೆ ನಾವು ಸದಾ ಜಾಗೃತರಾಗಿರಬೇಕು. 40 ವರ್ಷದ ನಂತರ ಪ್ರತಿಯೊಬ್ಬರೂ ಸಹ ಆಗಾಗ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಉತ್ತಮ ಆರೋಗ್ಯವಂತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಗ್ಲುಕೋಮ ಕಾಯಿಲೆ ಹೆಚ್ಚುತ್ತಿದ್ದು ಮಧುಮೇಹ ಹಾಗೂ ಅಧಿಕ ರಕ್ತದ ಒತ್ತಡ ಇವೆಲ್ಲವೂ ಕಾರಣವಾಗುತ್ತದೆ ಎಂದು ಹೇಳಿದರು.

Rotary Club Shivamogga ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಇನ್ನರ್ ವೀಲ್ ಪೂರ್ವ ಕ್ಲಬ್ ನ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಮಾತನಾಡಿ, ಮಹಿಳೆಯರು ತಮ್ಮ ಮನೆ ಕೆಲಸದ ಜೊತೆಗೆ ಒತ್ತಡವನ್ನು ನಿರ್ಣಯಿಸುವಲ್ಲಿ ಜಾಗೃತರಾಗಬೇಕು. ಜೊತೆಗೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಹರಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ನಮ್ಮ ಇನ್ನರ್ ವೀಲ್ ಕ್ಲಬ್ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಸಾಕಷ್ಟು ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ನ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಕಾರ್ಯದರ್ಶಿ ಸೋಮಣ್ಣ, ವೀಣಾಹರ್ಷ, ಜಯಂತಿ ವಾಲಿ,
ಜ್ಯೋತಿ ಸೊಬ್ಬೆಗೌಡ, ವೇದಾ ನಾಗರಾಜ್, ರಾಜೇಶ್ವರಿ ಪ್ರತಾಪ್, ವಿಜಯ ರಾಯ್ಕರ್ ವಾಣಿ, ಪ್ರವೀಣ್, ಶ್ವೇತಾ ಅಶಿತ್, ಪೂರ್ಣಿಮಾ ನರೇಂದ್ರ, ನಮಿತಾ ಸೂರ್ಯ ನಾರಾಯಣ್, ಮಧುರ ಮಹೇಶ್, ಆಶಾ ಶ್ರೀಕಾಂತ್ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.

Tungabhadra Dam ತುಂಗಭದ್ರಾ ಡ್ಯಾಂ 19 ನೇ ಕ್ರೆಸ್ಟ್ ಗೇಟ್ ಶೀಘ್ರ ರಿಪೇರಿಗೆ ಸರ್ವ ಪ್ರಯತ್ನ- ಸಚಿವ ಶಿವರಾಜ ತಂಗಡಗಿ

0

Tungabhadra Dam

ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಿಂಕ್ ಚೈನ್ ತುಂಡಾಗಿರುವುದರಿಂದ, 19ನೇ ಕ್ರಸ್ಟ್ ಗೇಟ್ ಕಿತ್ತುಹೋಗಿರುವುದು ಮನಸ್ಸಿಗೆ ನೋವುಂಟು ಮಾಡಿದೆ‌.
ಅನ್ನದಾತರ ನೋವನಲ್ಲಿ ಭಾಗಿಯಾಗಿ, ಅವರೆಲ್ಲರ ಪರವಾಗಿ, ದುರಸ್ಥಿ ಕಾರ್ಯವನ್ನು ಬೇಗನೆ ಮುಗಿಸಿ, ಅವರೆಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಲು ಹಗಲು ರಾತ್ರಿ ಪ್ರಯತ್ನಿಸುವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ‌ ತಂಗಡಗಿ ಹೇಳಿಕೆ ನೀಡಿದ್ದಾರೆ.

Tungabhadra Dam ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಪ್ರಕರಣ ಸಂಬಂಧಿಸಿದಂತೆ ಜಲಾಶಯ ಕ್ಕೆ ಬೇಟಿ ನೀಡಿದೆನು.
ಡ್ಯಾಂ ಗೆ ಬಂದು ವೀಕ್ಷಣೆ ಮಾಡಿದ್ದು, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.
ಸದ್ಯದ ಮಟ್ಟಿಗೆ 60 ರಿಂದ 65 ಟಿಎಂಸಿ ಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ, 20 ಪೀಟ್ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಗೊತ್ತಾಗಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ‌ ತಂಗಡಗಿ ಹೇಳಿಕೆ ನೀಡಿದ್ದಾರೆ.

Kuvempu University ಅಂಗನವಾಡಿಗಳ ಸೂಕ್ತ ನಿರ್ವಹಿಸಿ & ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಸಿ- ಸಚಿವೆ ಲಕ್ಷ್ಮೀಹೆಬ್ಬಾಳ್ಕರ್

0

Kuvempu University ದಿನಾಂಕ. 11.08.2024 ರಂದು ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರೀಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಂಗನವಾಡಿಗಳ ಕೇಂದ್ರಗಳ ನಿರ್ವಹಣೆ ಮತ್ತು ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಸರ್ಕಾರಿ ಮಾಂಟೇಸರಿಗಳನ್ನು ಜಿಲ್ಲೆಯಲ್ಲಿ ಆರಂಭಿಸಿದರೆ ಹೇಗೆ ಕಾರ್ಯನಿರ್ವಹಣೆ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

Kuvempu University ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಿ. ಎಚ್. ಕೃಷ್ಣಪ್ಪ, ಜಿಲ್ಲಾ ನಿರೂಪಣಾಧಿಕಾರಿ ಡಾ. ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಸೇರಿದಂತೆ ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.