Monday, April 6, 2026
Monday, April 6, 2026
Home Blog Page 610

Tungabhadra Dam ತುಂಗಭದ್ರಾ ಡ್ಯಾಂ 19 ನೇ ಕ್ರೆಸ್ಟ್ ಗೇಟ್ ಶೀಘ್ರ ರಿಪೇರಿಗೆ ಸರ್ವ ಪ್ರಯತ್ನ- ಸಚಿವ ಶಿವರಾಜ ತಂಗಡಗಿ

0

Tungabhadra Dam

ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಿಂಕ್ ಚೈನ್ ತುಂಡಾಗಿರುವುದರಿಂದ, 19ನೇ ಕ್ರಸ್ಟ್ ಗೇಟ್ ಕಿತ್ತುಹೋಗಿರುವುದು ಮನಸ್ಸಿಗೆ ನೋವುಂಟು ಮಾಡಿದೆ‌.
ಅನ್ನದಾತರ ನೋವನಲ್ಲಿ ಭಾಗಿಯಾಗಿ, ಅವರೆಲ್ಲರ ಪರವಾಗಿ, ದುರಸ್ಥಿ ಕಾರ್ಯವನ್ನು ಬೇಗನೆ ಮುಗಿಸಿ, ಅವರೆಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಲು ಹಗಲು ರಾತ್ರಿ ಪ್ರಯತ್ನಿಸುವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ‌ ತಂಗಡಗಿ ಹೇಳಿಕೆ ನೀಡಿದ್ದಾರೆ.

Tungabhadra Dam ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಪ್ರಕರಣ ಸಂಬಂಧಿಸಿದಂತೆ ಜಲಾಶಯ ಕ್ಕೆ ಬೇಟಿ ನೀಡಿದೆನು.
ಡ್ಯಾಂ ಗೆ ಬಂದು ವೀಕ್ಷಣೆ ಮಾಡಿದ್ದು, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.
ಸದ್ಯದ ಮಟ್ಟಿಗೆ 60 ರಿಂದ 65 ಟಿಎಂಸಿ ಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ, 20 ಪೀಟ್ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಗೊತ್ತಾಗಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ‌ ತಂಗಡಗಿ ಹೇಳಿಕೆ ನೀಡಿದ್ದಾರೆ.

Kuvempu University ಅಂಗನವಾಡಿಗಳ ಸೂಕ್ತ ನಿರ್ವಹಿಸಿ & ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಸಿ- ಸಚಿವೆ ಲಕ್ಷ್ಮೀಹೆಬ್ಬಾಳ್ಕರ್

0

Kuvempu University ದಿನಾಂಕ. 11.08.2024 ರಂದು ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರೀಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಂಗನವಾಡಿಗಳ ಕೇಂದ್ರಗಳ ನಿರ್ವಹಣೆ ಮತ್ತು ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಸರ್ಕಾರಿ ಮಾಂಟೇಸರಿಗಳನ್ನು ಜಿಲ್ಲೆಯಲ್ಲಿ ಆರಂಭಿಸಿದರೆ ಹೇಗೆ ಕಾರ್ಯನಿರ್ವಹಣೆ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

Kuvempu University ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಿ. ಎಚ್. ಕೃಷ್ಣಪ್ಪ, ಜಿಲ್ಲಾ ನಿರೂಪಣಾಧಿಕಾರಿ ಡಾ. ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಸೇರಿದಂತೆ ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Vishwa Hindu Parishad ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಸಾಧ್ಯವಿರುವ ಕ್ರಮ ಕೈಗೊಳ್ಳಲು “ವಿಹಿಂಪ” ಒತ್ತಾಯ

0

Vishwa Hindu Parishad ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವ ಹಿಂದೂ ಪರಿಷತ್‌ ಭಾರತ ಸರ್ಕಾರವನ್ನು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವಿಹಿಂಪ ಜಿಲ್ಲಾಧ್ಯಕ್ಷ ಜೆ ಆರ್ ವಾಸುದೇವ, ಭೀಕರ ಪರಿಸ್ಥಿತಿಯ
ಲಾಭವನ್ನು ಪಡೆದುಕೊಂಡು, ಗಡಿಯಾಚೆಯಿಂದ ಭಾರತಕ್ಕೆ ಒಳನುಸುಳುವಿಕೆ ಪ್ರಯತ್ನವನ್ನು ಮಾಡಬಹುದು. ಇದನ್ನು ಭಾರತ ಸರಕಾರ ಗಂಭೀರವಾಗಿ ಪರಿಗಣಿಸಿ ಭದ್ರತಾ ಪಡೆಗಳ ಮೂಲಕ ಭಾರತ ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ರೀತಿಯ ಅತಿಕ್ರಮಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

Vishwa Hindu Parishad ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಬಾಂಗ್ಲಾದ ಹೊಸ ಸರ್ಕಾರ ಅಲ್ಲಿನ ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಕೊಡಬೇಕು ಹಾಗೂ ದಾಳಿಯಿಂದ ನಾಶಗೊಂಡಿರುವ ಹಿಂದೂ ಮನೆಗಳು ಹಾಗೂ ದೇವಾಲಯಗಳನ್ನು ಪುನರ್ ನಿರ್ಮಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸರಕಾರ ಸಹಿತ ವಿಶ್ವ ಸಮುದಾಯ ಬಾಂಗ್ಲಾದೇಶದ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ವಿಶ್ವ ಹಿಂದೂ ಪರಿಷದ್
ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದೆ.

ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗೃಹ ಸಚಿವರು ವ್ಯಕ್ತಪಡಿಸಿದ್ದಾರೆ. ಮತ್ತು ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಕೂಡ ತುರ್ತು ಸಹಾಯವಾಣಿ ಸ್ಥಾಪಿಸಲು ನಿರ್ಧರಿಸಿದೆ. ಅದರ ಸಂಖ್ಯೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.

Guarantee Schemes ಆಗಸ್ಟ್ 14 ರಂದು ಶಿವಮೊಗ್ಗ ತಾಲ್ಲೂಕು ಸಮಿತಿ ಕಚೇರಿ ಉದ್ಘಾಟನೆ

0

Guarantee Schemes ಗ್ಯಾರಂಟಿ ಯೋಜನೆಗಳ ಸಪರ್ಪಕ ಅನುಷ್ಠಾನಕ್ಕಾಗಿ ಶಿವಮೊಗ್ಗ ತಾಲೂಕು ಸಮಿತಿಯ ಕಚೇರಿಯನ್ನು‌ ಆ. 14ರಂದು ಉದ್ಘಾಟಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ಅಧ್ಯಕ್ಷ ಎಚ್ ಎಂ ಮಧು,
ತಾಲೂಕು ಕಚೇರಿ ಕಟ್ಟಡದಲ್ಲಿ ಈ ಕಚೇರಿ ಇರಲಿದ್ದು ಉದ್ಘಾಟನೆಯನ್ನು ಎಂ ಎಲ್ಸಿ ಬಲ್ಕೀಶ್ ಬಾನು ಬೆಳಗ್ಗೆ 1೦ಕ್ಕೆ ನೆರವೇರಿಸುವರು. Guarantee Schemes ಜಿಲ್ಲಾ ಅನುಷ್ಟಾನ ಸಮಿತಿ ಅಧ್ಯಕ್ಷ ಸಿ ಎಸ್ ಚಂದ್ರ ಭೂಪಾಲ್ , ಡಿಸಿ ಸಿ ಅಧ್ಯಕ್ಷ ಆರ್ ಪ್ರಸನ್ನಕುಮಾರ್, ಆಯನೂರು ಮಂಜುನಾಥ, ಎಚ್ ಎಂ ಚಂದ್ರಶೇಖರಪ್ಪ, ಮಾಜಿ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಎಚ್ ಸಿ ಯೋಗೀಶ್, ಆರ್ ಎಂ ಮಂಜುನಾಥ ಗೌಡ ಮೊದಲಾದವರು ಪಾಳ್ಗೊಳ್ಳುವರು ಎಂದರು.

Department of Women and Child Development ಮಕ್ಕಳ ತಟ್ಟೆಗೆ ಮೊಟ್ಟೆ ಇಟ್ಟು ವಾಪಸ್ ಕಸಿಯುತ್ತಿದ್ದ ಕೊಪ್ಪಳ ಜಿಲ್ಲೆ ಗುಂಡೂರಿನ ಅಂಗನವಾಡಿ ಕಾರ್ಯಕರ್ತೆ ಅಮಾನತು

0

Department of Women and Child Development ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ ಬಳಿಕ ವಾಪಸ್ ಕಸಿದುಕೊಂಡ ಆರೋಪದ ಮೇಲೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರ 2ರ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಸೇವೆಯಿಂದ (ಗೌರವಧನದ ಸೇವೆ) ಅಮಾನತು ಮಾಡಲಾಗಿದೆ.

ಮಧ್ಯಾಹ್ನ ಊಟಕ್ಕೆ ಕುಳಿತಿದ್ದ ಮಕ್ಕಳ ತಟ್ಟೆಗೆ ಅಂಗನವಾಡಿ ಸಹಾಯಕಿ ಮೊದಲು ಮೊಟ್ಟೆ ಹಾಕಿದ್ದರು. ಮಕ್ಕಳು ಅದನ್ನು ತಿನ್ನಬೇಕು ಎನ್ನುವಷ್ಟರಲ್ಲಿ ವಾಪಸ್ ಕಸಿದುಕೊಂಡಿದ್ದರು. ಈ ಕುರಿತು ಕನ್ನಡ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು.

Department of Women and Child Development ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಗಮನಿಸಿದ ಸಾರ್ವಜನಿಕರು ತಪ್ಪಿತಸ್ಥ ಅಂಗನವಾಡಿ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.
ಈ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರು ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಜೆ ಮತ್ತು ಸಹಾಯಕಿ ಶೈನಜಾ ಬೇಗಂ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

‘ಗುಂಡೂರು-2ನೇ ಅಂಗನವಾಡಿ ಕೇಂದ್ರಕ್ಕೆ ಪೂರೈಕೆಯಾಗಿರುವ ಮೊಟ್ಟೆಗಳನ್ನು ಫಲಾನುಭವಿಗಳಿಗೆ ವಿತರಿಸದೆ, ಅವರು ಸೇವಿಸುವ ಸಮಯದಲ್ಲಿ ವಾಪಸ್ ಪಡೆದು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Shivamogga Police ಎಲೆಮರೆಯಲ್ಲಿ ಸಮಾಜ ಸೇವೆಗೈದ ತಂದೆ ಮಗಳಿಗೆ ಪೊಲೀಸ್ ಇಲಾಖೆಯಿಂದ ಸನ್ಮಾನ

0

Shivamogga Police ಶಿವಮೊಗ್ಗ ನಗರದ ಗಾಡಿಕೊಪ್ಪದ ವಾಸಿಗಳಾದ ರವಿ ಎಸ್ ಮತ್ತು ಇವರ ಮಗಳು ಧನುಶ್ರೀ ಅವರ ವಿಶೇಷ ಕೆಲಸಕ್ಕಾಗಿ ಗುರುತಿಸಿ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ವಿಶೇಷ ರೀತಿಯಲ್ಲಿ ಸನ್ಮಾನಿಸಿದ್ದಾರೆ.
೨೦೦೫ರಿಂದಲೂ ಶಿವಮೊಗ್ಗ ಜಿಲ್ಲೆಯಾದ್ಯಂತ ಅನಾಥ ಶವಗಳು ಕಂಡು ಬಂದತಂಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಮಾಹಿತಿ ನೀಡಿದ ತಕ್ಷಣ ಅನಾಥ ಶವಗಳನ್ನು ಸಾಗಿಸಿ, ಸಂಸ್ಕಾರ ನೆರವೇರಿಸುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಈ ಇಬ್ಬರು ಗಮನ ಸೆಳೆಯುತ್ತಲೇ ಬಂದಿದ್ದರು. ಆದರೂ ಎಲೆಮರೆ ಕಾಯಿಯಾಗಿಯೇ ಉಳಿದುಕೊಂಡಿದ್ದರು.

Shivamogga Police ಇವರ ಈ ಸೇವೆ ಗಮನಿಸಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಿಥುನ್‌ಕುಮಾರ್ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್ ಪಿಗಳಾದ ಬಾಬು ಆಂಜನಪ್ಪ, ಸುರೇಶ್ ಉಪಸ್ಥಿತರಿದ್ದರು.

Doctor Death in Kolkatta ಕೊಲ್ಕೊತ್ತಾದಲ್ಲಿ ವೈದ್ಯೆ ವಿದ್ಯಾರ್ಥಿನಿ ಶವ ಪತ್ತೆ. ಲೈಂಗಿಕ ದೌರ್ಜನ್ಯದ ನಂತರ ಹತ್ಯೆ ವರದಿ ಹೇಳಿಕೆ

0

Doctor Death in Kolkatta ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಶವವಾಗಿ ಪತ್ತೆಯಾದ ಸ್ನಾತಕೋತ್ತರ ತರಬೇತಿ ವೈದ್ಯೆಯ ಪ್ರಾಥಮಿಕ ಮರಣೋತ್ತರ ಪರೀಕಾ ವರದಿ, ಲೈಂಗಿಕ ದೌರ್ಜನ್ಯದ ನಂತರ ಹತ್ಯೆ ಮಾಡಲಾಗಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವರದಿಯು ವೈದ್ಯೆಯ ಸಾವು ಆತ್ಮಹತ್ಯೆ ಎಂಬುವುದನ್ನು ತಳ್ಳಿಹಾಕಿದ್ದು, ಈ ಸಂಬಂಧ ತಾಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಹೇಳಿದ್ದಾರೆ.
“ನಾಲ್ಕು ಪುಟಗಳ ವರದಿಯ ಪ್ರಕಾರ, ಮಹಿಳೆಯ ಖಾಸಗಿ ಭಾಗ, ಮುಖ ಮತ್ತು ಕಣ್ಣುಗಳಲ್ಲಿ ರಕ್ತಸ್ರಾವವಾಗಿದೆ. ಮುಖ, ಉಗುರು, ಹೊಟ್ಟೆ, ಎಡಗಾಲು, ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿಗಳಿಗೆ ಗಾಯಗಳಾಗಿವೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ. ಆಸ್ಪತ್ರೆಯ ಕಡೆಯಿಂದಲೂ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಶುಕ್ರವಾರ ಮುಂಜಾನೆ, ಕೋಲ್ಕತ್ತಾ ಮಹಾನಗರದ ಆರ್‌ಜಿ ಕರ್ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಅರೆ ನಗ್ನ ಶವ ಪತ್ತೆಯಾಗಿತ್ತು. ಮೃತ ವೈದ್ಯೆ ಎದೆಯ ಔಷಧ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದರು.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ ನನ್ನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಮೃತಳ ತಂದೆ ಆರೋಪಿಸಿದ್ದು, ‘ಸತ್ಯವನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃತಳ ಪೋಷಕರಿಗೆ ದೂರವಾಣಿ ಕರೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಸರ್ಕಾರ ಆರೋಗ್ಯ ಕಾರ್ಯದರ್ಶಿ ಎನ್ ಎಸ್ ನಿಗಮ್ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

Doctor Death in Kolkatta ಹತ್ಯೆ ಘಟನೆ ಖಂಡಿಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪಿಜಿಟಿ ವೈದ್ಯರು ತುರ್ತು ಚಿಕಿತ್ಸಾ ವಿಭಾಗ ಹೊರತುಪಡಿಸಿ ಎಲ್ಲಾ ವಿಭಾಗಗಳಲ್ಲಿ ಕೆಲಸ ಸ್ಥಗಿತಗೊಳಿಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಶೀಘ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಶಾಸಕ ಅಗ್ನಿಮಿತ್ರ ಪೌಲ್ ಸೇರಿದಂತೆ ವಿರೋಧ ಪಕ್ಷ ಬಿಜೆಪಿಯ ಹಲವಾರು ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದು, ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಪ್ರಕರಣದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಾಯಕ ಸಂತಾನು ಸೇನ್ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು ಇಡೀ ಘಟನೆಯ ಬಗ್ಗೆ ನ್ಯಾಯಯುತ, ಪಾರದರ್ಶಕ ಮತ್ತು ಸಂಪೂರ್ಣ ತನಿಖೆಯನ್ನು ಬಯಸುತ್ತೇವೆ” ಎಂದು ಹೇಳಿದ್ದಾರೆ.

ಓರ್ವ ಆರೋಪಿಯ ಬಂಧನ :

ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನಿಗೆ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಮುಕ್ತ ಪ್ರವೇಶವಿತ್ತು. ಆತನ ಮೇಲೆ ನಮಗೆ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ.

District Court Shivamogga 8 ಮಂದಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

0

District Court Shivamogga ಗಾಂಜಾ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಇಲ್ಲಿನ ಟಿಪ್ಪುನಗರ ನಿವಾಸಿ ಇರ್ಫಾನ್ ಅಲಿಯಾಸ್ ಟ್ವಿಸ್ಟ್ ಇರ್ಫಾನ್ ನನ್ನು ಕೊಲೆ ಮಾಡಿದ ಎಂಟು ಆರೋಪಿಗಳಿಗೆ ಶಿವಮೊಗ್ಗ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶುಕ್ರವರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನ್ಯಾಯಾಧೀಶೆ ಪಲ್ಲವಿ ಎಂಟು ಆರೋಪಿಗಳಿಗೆ ೧೪ ವರ್ಷ ಜೀವಾವಧಿ ಶಿಕ್ಷೆ ಪ್ರತಿ ಆಪರಾಧಿಗಳಿಗೂ ತಲಾ ಐದು ಸಾವಿರ ದಂಢ ವಿಧಿಸಿದ್ದಾರೆ. ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸರ್ಕಾರಿ ಅಭಿಯೋಜಕಿ ಪುಷ್ಪಾ ವಾದ ಮಂಡಿಸಿದ್ದರು.

ಪ್ರಕರಣದ ವಿವರ
೨ಂ೨೧ ರ ಸೆ. ೧೮ರಂದು ಇರ್ಫಾನ್ ತನ್ನ ಸ್ನೇಹಿತ ಅಸಾದ್ ಮತ್ತು ವಾಷರ್ ಜೊತೆ ಸಂಜೆ ಬೈಕ್‌ನಲ್ಲಿ ಬರುವಾಗ ಟಿಪ್ಪು ನಗರ ಏಳನೇ ಮುಖ್ಯ ರಸ್ತೆಯ ನಾಲ್ಕನೇ ಕ್ರಾಸ್ ನಲ್ಲಿ ಇರ್ಫಾನ್‌ಗೆ ಲತೀಫ್ ಮತ್ತವನ ಸಹಚರರ ತಂಡ ಎದುರಾಗಿ ಗಾಂಜಾ ವಿಚಾರದಲ್ಲಿ ಕ್ಯಾತೆ ತೆಗೆದಿತ್ತು. ಲತೀಫ್, ಪರ್ವೇಜ್, ಸೈಯ್ಯದ್ ಜಿಲಾನ್, ಜಾಫರ್ ಸಾದಿಕ್, ಸೈಯ್ಯದ್ ರಾಜೀಕ್, ಮೊಹಮ್ಮದ್ ಶಹಬಾಜ್, ಸಾಬಿರ್ ಮತ್ತು ಮೊಹಮ್ಮದ್ ಯೂಸೂಫ್ ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ಇರ್ಫಾನ್‌ನ ಎದೆಗೆ ಚುಚ್ಚಿ ಕೊಲೆ ಅಲ್ಲಿಯೇ ಮಾಡಿತ್ತು.
ರಕ್ತದ ಮಡುವಿನಲ್ಲಿದ್ದ ಇರ್ಫಾನ್‌ನನ್ನು ಸ್ನೇಹಿತ ಅಸಾದ್ ಮತ್ತು ವಾಷರ್ ಅಂಬುಲೆನ್ಸ್‌ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಆಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿ, ಇನ್‌ಸ್ಪೆಕ್ಟರ್ ದೀಪಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳಿಗೆ ಯಾವ ಹಂತದಲ್ಲೂ ಜಾಮೀನು ಸಿಗದಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

District Court Shivamogga ಆರೋಪಿಗಳಿಗೆ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಹಾಗು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಗಳು ಹೆಚ್ಚಿದೆ. ಜಾಮೀನು ನೀಡಿದರೆ ಮೃತನ ಕುಟುಂಬದ ಕಡೆಯವರು ಹಾಗು ಇವರ ನಡುವೆ ಗಲಾಟೆಗಳಾಗಿ ಆಸ್ತಿ ಜೀವ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಲತೀಫ್,ಪರ್ವೆಜ್ ಹಾಗೂ ಸೈಯದ್ ರಾಜೀಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಲಂ ೫೦೪, ೩೦೭, ೩೪ ಐಪಿಸಿ ಆರೋಪಿತರಾಗಿದ್ದು ಜಾಮೀನಿನ ಮೇಲಿದ್ದರೂ, ನ್ಯಾಯಾಲಯಕ್ಕೆ ಹಾಜರಾಗದೆ ಗೈರಾಗಿರುತ್ತಾರೆ. ರಾಜೀಕ್ ಮತ್ತು ಮೊಹಮ್ಮದ್ ಯೂಸುಫ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಕೊಲೆಯತ್ನದಂತ ಕೇಸುಗಳಿವೆ ಎಂದು ಇನ್‌ಸ್ಪೆಕ್ಟರ್ ದೀಪಕ್ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಈ ಕಾರಣಕ್ಕೆ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು.
ಶುಕ್ರವಾರ ನ್ಯಾಯಾಲಯ ತೀರ್ಪು ನೀಡಿ ಎಲ್ಲಾ ಆರೋಪಿಗಳಿಗೆಜೀವಾವಧಿ ಶಿಕ್ಷೆ ವಿಧಿಸಿದೆ.

Nagar Panchami ಹುತ್ತದಿಂಬ ಗ್ರಾಮದಲ್ಲಿ ಹಾವು ಕಡಿತಕ್ಕೆ ಬಾಣಂತಿ ಬಲಿ

0

Nagar Panchami ನಾಗರ ಪಂಚಮಿ ದಿನ ಹಾವು ಕಚ್ಚಿ ಬಾಣಂತಿಯೊಬ್ಬರು ಸಾವನ್ನಪ್ಪಿದ ಬಗ್ಗೆ ಸಾಗರ ತಾಲ್ಲೂಕುನಲ್ಲಿ ವರದಿಯಾಗಿದೆ
ನಾಗರ ಪಂಚಮಿ
ಸಾಗರ ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

Nagar Panchami ರಂಜಿತಾ ಎಂಬ 22 ವರ್ಷದ ಮಹಿಳೆ ಮೃತ ನಿವಾಸಿ
ಜಾನುವಾರುಗೆ ಮೇವು ತರಲು ಎಂದು ಹೊಲಕ್ಕೆ ಹೋಗಿದ್ದ ಇವರಿಗೆ ಅಲ್ಲಿಯೇ ಪೊದೆಯಲ್ಲಿದ್ದ ಹಾವೊಂದು ಕಚ್ಚಿದೆ. ಮೊದಲು ಮಹಿಳೆಗೆ ಹಾವು ಕಚ್ಚಿರುವ ಬಗ್ಗೆ ಗೊತ್ತಾಗಲಿಲ್ಲ. ಆ ಬಳಿಕ ನಂಜು ಏರಿ ಹೊಲದಲ್ಲಿಯೇ ರಂಜಿತಾ ಕುಸಿದು ಬಿದ್ದಿದ್ದಾಳೆ.
ಕೆಲಹೊತ್ತು ಬಿಟ್ಟು ಮನೆಯವರು ಗದ್ದೆಗೆ ಬಂದು ನೋಡಿದಾಗ ರಂಜಿತಾ ಕುಸಿದು ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಾಗರ ಉಪವಿಭಾಗೀಯ ಆಸ್ಪತ್ರೆ
ಅಲ್ಲಿನ ವೈದ್ಯರು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ಆಕೆಯನ್ನು ಕರೆತರುವ ಸಂದರ್ಭದಲ್ಲಿ ಮಾರ್ಗಮಧ್ಯೆ ರಂಜಿತಾ ಸಾವನ್ನಪ್ಪಿದ್ದಾರೆ.
ಮೂರು ವರುಷದ ಮಗುವನ್ನ ಹೊಂದಿರುವ ರಂಜಿತಾರಿಗೆ ಎರಡನೇ ಹೆರಿಗೆಯಾಗಿ ನಾಲ್ಕು ತಿಂಗಳಷ್ಟೆ ಕಳೆದಿತ್ತು.

ಇದೀಗ ಇಬ್ಬರು ಮಕ್ಕಳು ತಾಯಿಯನ್ನ ಕಳೆದುಕೊಂಡಿದ್ದಾರೆ

Competitive Exam ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಕ್ರಮ ತಿಳಿಸಿದ ಸೌಭಾಗ್ಯ ಬೀಳಗಿಮಠ

0

Competitive Exam ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನ ಮಾಡುವ ಅಭ್ಯರ್ಥಿಗಳು ಸಮಯ ಪಾಲನೆ, ವಿಷಯಗಳ ಗ್ರಹಿಕೆ ಹಾಗೂ ಓದಿದ್ದರ ಪುನರ್ಮನ ನಿತ್ಯವೂ ಕ್ರಮ ತಪ್ಪದೇ ಮಾಡುವುದು ಅವಶ್ಯ ಎಂದು 2023-24ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದು ಉತ್ತೀರ್ಣರಾಗಿರುವ ದಾವಣಗೆರೆ ನಗರದವರೇ ಆದ ಸೌಭಾಗ್ಯ ಬೀಳಗಿ ಮಠ ಹೇಳಿದರು.

ದಾವಣಗೆರೆ ನಗರ ಕೇಂದ್ರ ಗ್ರಂಥಾಲಯದ ಸಿಲ್ವರ್ ಜುಬಿಲಿ ರೇಡಿಂಗ್ ರೂಮ್ ಆವರಣದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಾಡು ಆಗಿದ್ದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇಶ ವಿದೇಶಗಳಲ್ಲಿನ ವಿದ್ಯಮಾನಗಳು ಅದರಿಂದ ನಮ್ಮ ದೇಶದ ಸಾಮಾಜಿಕ ಆರ್ಥಿಕ ಔದ್ಯಮಿಕ ಆಡಳಿತಾತ್ಮಕ ನೈಸರ್ಗಿಕ ಮುಂತಾದ ಪರಿಸ್ಥಿತಿಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುತ್ತಿರಬೇಕು, ಇದಕ್ಕಾಗಿ ಹೆಚ್ಚೆಚ್ಚು ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳುವವರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಹಾಗೆಯೇ ವಿಷಯ ಪ್ರಸ್ತುತಿಯಲ್ಲಾಗಲಿ ಉತ್ತರ ನೀಡುವಲ್ಲಿ ಸತ್ಯವನ್ನೇ ಹೇಳಬೇಕು ಎಂದರಲ್ಲದೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ್ ರವರು ಮಾತನಾಡಿ ನಮ್ಮ ನಾಡಿನ ನೆಲ ಜಲ ಹಾಗೂ ಆಡಳಿತಾತ್ಮಕ ವಿಚಾರವಾಗಿ ನಮಗೆ ನಮ್ಮ ನಾಡಿಗೆ ನ್ಯಾಯ ದೊರಕಬೇಕೆಂದರೆ ಉನ್ನತ ಅಧಿಕಾರಿಗಳು ಮೂಲತಃ ಅಪ್ಪಟ ಕನ್ನಡಿಗರೇ ಆಗಿರಬೇಕು, ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಕೈಕೊಂಡು ಉನ್ನತ ಹುದ್ದೆಗಳನ್ನು ಪಡೆಯಬೇಕಿದೆ ಎಂದರಲ್ಲದೆ ಓದುವ ಹವ್ಯಾಸ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಂಡಲ್ಲಿ ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳು ಕಷ್ಟಕರವಲ್ಲ ಎಂದರಲ್ಲದೆ ದಾವಣಗೆರೆ ಗ್ರಂಥಾಲಯ ವ್ಯವಸ್ಥೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಮಾಡುವಲ್ಲಿ ತಾವು ಪಟ್ಟ ಪರಿಶ್ರಮವನ್ನು ವಿವರಿಸಿದರು.

Competitive Exam ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರಾದ ಪಿ ಆರ್ ತಿಪ್ಪೇಸ್ವಾಮಿಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವ ಎಲ್ಲ ಬೇಡಿಕೆಗಳನ್ನು ಸ್ವೀಕರಿಸಿ ಅದಕ್ಕೆ ಸ್ಪಂದಿಸಲು ಪ್ರಯತ್ನಿಸುವುದಾಗಿ ಹೇಳಿದರಲ್ಲದೇ ಇದಕ್ಕೆ ಪೂರಕವಾದ ಪುಸ್ತಕ ಹಾಗೂ ಗ್ರಂಥಗಳ ಬಗೆಗೆ ವಿದ್ಯಾರ್ಥಿಗಳಿಂದ ಹಾಗೂ ಸೌಭಾಗ್ಯ ಬೀಳಗಿ ಮಠ ರವರಿಂದ ಸೂಚಿತವಾಗುವ ಪುಸ್ತಕ ಹಾಗೂ ಗ್ರಂಥಗಳ ಪೂರೈಕೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಸೌಭಾಗ್ಯ ಬೀಳಗಿ ಮಠ ರವರ ತಂದೆಯವರು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಆದ ಶರಣಯ್ಯ ಬೀಳಗಿ ಮಠರವರು, ಸಿಬ್ಬಂದಿಗಳಾದ ಮಹಾಸ್ವಾಮೀ ಬಿ ಇ, ಗೋಪಾಲ್ ಕೆ, ಸಂಗಣ್ಣ ಬೆಳಗಲ್ಲ, ಮಂಜುನಾಥ ಎಸ್ ಬಗರಿ, ಪರಶುರಾಮಪ್ಪ ಎಮ್ ಆರ್ ಮುಂತಾದವರು ಉಪಸ್ಥಿತರಿದ್ದರು. ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ವಿದ್ಯಾರ್ಥಿಗಳು ತತ್ಸಂಬಂಧಿ ಪ್ರಶ್ನೆಗಳನ್ನು ಕೇಳಿ ಸೌಭಾಗ್ಯ ಬೀಳಗಿ ಮಠ ರವರಿಂದ ಉತ್ತರಗಳನ್ನು ಪಡೆದರು.