Thursday, June 19, 2025
Thursday, June 19, 2025

Rotary Shivamogga ವಿದ್ಯಾರ್ಥಿಗಳು ಸಮಾಜಮುಖಿಯಾಗಲು ಇಂಟರ್ಯಾಕ್ಟ್ ಕ್ಲಬ್ ಸಹಕಾರಿ- ಅರುಣ್ ದೀಕ್ಷಿತ್

Date:

Rotary Shivamogga ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಹಾಗೂ ಸಮಾಜಮುಖಿಯಾಗಿ ಜೀವನಶೈಲಿ ರೂಪಿಸಿಕೊಳ್ಳಲು ಇಂಟರ‍್ಯಾಕ್ಟ್ ಕ್ಲಬ್ ತುಂಬಾ ಸಹಕಾರಿ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಇಂಟರ‍್ಯಾಕ್ಟ್ ಕ್ಲಬ್‌ನ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ಟಿವಿ ನೋಡಲು ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಒಳ್ಳೆ ಒಳ್ಳೆಯ ಪುಸ್ತಕಗಳನ್ನು ಓದುವ ಮುಖಾಂತರ ಹಾಗೂ ಸಮಾಜದಲ್ಲಿ ಸಣ್ಣ ಸಣ್ಣ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅವಿಭಾಜ್ಯ ಅಂಗ ಇಂಟರ‍್ಯಾಕ್ಟ್ ಕ್ಲಬ್ ಮುಖಾಂತರ ಬೇರೆ ಬೇರೆ ದೇಶದಲ್ಲಿರುವ ಮಕ್ಕಳ ಜೊತೆಗೆ ಸಂಪರ್ಕ ಸಾಧನೆ ಮಾಡಿ ಅವರ ಪ್ರತಿಭೆಗಳನ್ನು ಅನಾವರಣಗೊಳಿಸಿಕೊಳ್ಳಬಹುದು. ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಉತ್ತಮವಾದ ವೇದಿಕೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮಾತನಾಡಿ, ತಂದೆ ತಾಯಿಗಳಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವಿಸಬೇಕು. ವಿದ್ಯಾಭ್ಯಾಸ ಜತೆಗೆ ಸಂಸ್ಕಾರ ಮುಖ್ಯ. ನಾವು ವಿದ್ಯೆ ಕಲಿಸಿಕೊಟ್ಟ ಗುರುಗಳು ಹಾಗೂ ಓದಿದ ಶಾಲೆಯನ್ನು ಮರೆಯಬಾರದು ಎಂದು ತಿಳಿಸಿದರು.

ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಬ್ಧಕೋಶಗಳನ್ನು ನೀಡಿ ಸನ್ಮಾನಿಸಲಾಯಿತು. ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಚೈತನ್ಯ, ಕಾರ್ಯದರ್ಶಿಯಾಗಿ ನಂದಿನಿ ತಮ್ಮ ತಂಡದೊಂದಿಗೆ ಅಧಿಕಾರ ವಹಿಸಿಕೊಂಡರು.

Rotary Shivamogga ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕ ಮುರಳೀಧರ್ ಮಾತನಾಡಿ, ನಮಗೆ ರೋಟರಿ ಸಂಸ್ಥೆಯಿಂದ ಸಾಕಷ್ಟು ಸಹಾಯವಾಗಿದೆ. ಬರುವ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಅದಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

ಶಿಕ್ಷಕರಾದ ಶ್ವೇತಾ, ಸವಿತಾ ಹಾಗೂ ಶಿಕ್ಷಕರು, ಕಿಶೋರ್, ಧನಂಜಯ ರಾಂಪುರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...

Klive Special Article ಈ ಶತಮಾನದಲ್ಲಿ ಯೋಗವು ಜಗತ್ತನ್ನು ಒಂದುಗೂಡಿಸಿದೆ

Klive Special Article ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ...

District Legal Services Authority ಯೋಗಾಭ್ಯಾಸದ ಮಹತ್ವ ಕುರಿತು ಹಿರಿಯ ನಾಗರೀಕರಿಗೆ ಮಾಹಿತಿ ಕಾರ್ಯಕ್ರಮ

District Legal Services Authority ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...