Chamber Of Commerce ದೇಶ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಭಾರತ ಸ್ವಾವಲಂಬಿಯಾಗಿ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಭಾರತ ದೇಶವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯು ದೇಶಕ್ಕಾಗಿ ಕೆಲಸ ಮಾಡಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜತೆಯಲ್ಲಿ ದೇಶದ ಅಭಿವೃದ್ಧಿಯಲ್ಲೂ ಮಹತ್ತರ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಆಂತರಿಕ, ಬಾಹ್ಯ ಬೆದರಿಕೆಗಳಿಗೆ ಜಗ್ಗದೇ ಬದ್ಧತೆಯಿಂದ ಕೆಲಸ ಮಾಡುವ ಗುರಿ ಹೊಂದಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡೋಣ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಉದ್ದಿಮೆದಾರರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಆಡಳಿತ ಮಂಡಳಿಯು ಸಂಘಟಿತ ಕೆಲಸವನ್ನು ಎಲ್ಲರೊಟ್ಟಿಗೆ ಸೇರಿ ಪ್ರಾಮಾಣಿಕವಾಗಿ ಬದ್ಧತೆಯಿಂದ ಮಾಡುತ್ತಿದೆ. ಎಲ್ಲ ರೀತಿ ಅಭಿವೃದ್ಧಿ ಮಾಡಲಾಗುವುದು ಎಂದರು.
Chamber Of Commerce ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೇತೃತ್ವದಲ್ಲಿ ಆರಂಭಿಸಿರುವ ಅಡ್ವಾನ್ಸ್ಡ್ ಅಕಾಡೆಮಿ ಕೌಶಲ್ಯಯುತ ಯುವ ಸಮೂಹ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ನುರಿತ ನೌಕರರ ಪಡೆ ಸಿದ್ಧವಾಗಬೇಕು. ಹೊಸ ಕೈಗಾರಿಕೆಗೆ ಅವಶ್ಯವಿರುವ ಪೂರಕ ವಾತಾವರಣ ನಿರ್ಮಿಸಲು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ, ಡಿ.ಎಂ.ಶಂಕರಪ್ಪ, ಕೆ.ವಿ.ವಸಂತಕುಮಾರ್, ಮಂಜೇಗೌಡ, ಸುರೇಶ್, ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ದೇವರಾಜ್, ಮಧುಸೂದನ್ ಐತಾಳ್, ನಟರಾಜ್, ಎಂ.ರಾಜು, ಉದಯಕುಮಾರ್, ರಂಗಪ್ಪ ಶಾಸ್ತ್ರಿ, ಪ್ರದೀಪ್ ವಿ.ಎಲಿ, ಎ.ಎಂ.ಸುರೇಶ್, ಪ್ರಶಾಂತ್ ಶಾಸ್ತ್ರಿ, ಚಂಪಾಲಾಲ್ ಉಪಸ್ಥಿತರಿದ್ದರು.
Chamber Of Commerce ಭಾರತ ಸ್ವಾವಲಂಬಿ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ- ಎನ್.ಗೋಪಿನಾಥ್
Indian Medical Association ಕೊಲ್ಕತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಹತ್ಯೆ: ಶಿವಮೊಗ್ಗ ಐಎಂಎ ನಿಂದ ಖಂಡನೆ
Indian Medical Association 9 ಆಗಸ್ಟ್ 2024 ರ ಮುಂಜಾನೆ ಕೋಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಚೆಸ್ಟ್ ಮೆಡಿಸಿನ್‌ನ ವಿಭಾಗದಲ್ಲಿ ಯುವ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿನಿಯನ್ನು
ಕ್ರೂರವಾಗಿ ಅತ್ಯಾಚಾರ ಮತ್ತು ಹತ್ಯೆ ಮಾಡಲಾಗಿದೆ . ಅಂದಿನಿಂದ ಅಲ್ಲಿಯ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ.
ಐಎಂಎ ವತಿಯಿಂದ ದೇಶಾದ್ಯಂತ ಪ್ರತಿಭಟನೆಗಳು ಹಾಗೂ ಕ್ಯಾಂಡಲ್ ಮೆರವಣಿಗೆಗಳು ನಡೆದಿವೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಶಿವಮೊಗ್ಗ ಶಾಖೆ ಸ್ನಾತಕೋತ್ತರ ವಿದ್ಯಾರ್ಥಿಯ ದುರಂತ, ನಷ್ಟದ ಬಗ್ಗೆ ತೀವ್ರವಾಗಿ ದುಃಖಿತವಾಗಿದೆ.
ಅವರ ಕುಟುಂಬಕ್ಕೆ ನಮ್ಮ ಒಗ್ಗಟ್ಟು ಮತ್ತು ಬೆಂಬಲವನ್ನು ತೋರಿಸಲು,
ನಾವು, ನಮ್ಮ ಶಾಖೆಯ ಸದಸ್ಯರು ಕ್ಯಾಂಡಲ್ ಲೈಟ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡೆವು. ಮತ್ತು
14-8-24ರಂದು ಐಎಂಎ ಸಭಾಂಗಣದಲ್ಲಿ ಸಂತಾಪ ಸೂಚಿಸಲಾಯಿತು.
Indian Medical Association ನಮ್ಮ ಅಧ್ಯಕ್ಷರಾದ ಡಾ॥ ರಮೇಶ್ ಈ ಘಟನೆಯನ್ನು ಖಂಡಿಸಿದ್ದಾರೆ. ಮಹಿಳಾ ಘಟಕದ ಅಧ್ಯಕ್ಷೆ ಡಾ.ವಿಶಾಲಾಕ್ಷಿ ಮೂಗಿ ಈ ಘಟನೆಗೆ ದುಃಖ ವ್ಯಕ್ತಪಡಿಸಿ, ಖಂಡಿಸಿದ್ದಾರೆ.
IMA ತನ್ನ ವೈದ್ಯರ ನ್ಯಾಯಯುತ ಭೇಡಿಕೆಗಳಿಗೆ ರಾಷ್ಟ್ರದ ಸಹಾನುಭೂತಿಯನ್ನು ಕೋರುತ್ತದೆ
Rotary Shivamogga Central Club ರೋಟರಿ ಸೇರಿ ಸಮಾಜಮುಖಿ ಸೇವೆ ಮಾಡುವುದರಿಂದ ವೈಯಕ್ತಿಕ ವರ್ಚಸ್ಸು ವರ್ಧನೆ-ಪ್ರೊ.ಸುರೇಶ್
Rotary Shivamogga Central Club ರೋಟರಿ ಸಂಸ್ಥೆಯ ಸದಸ್ಯತ್ವದಿಂದ ಸಮಾಜಮುಖಿ ಕೆಲಸದೊಂದಿಗೆ ವೈಯಕ್ತಿಕ ವರ್ಚಸ್ಸು ಹಾಗು ವ್ಯಾವಹಾರಿಕ ಹೆಚ್ಚು ಅನುಕೂಲವಾಗುವುದು ಎಂದು ವಲಯ 11ರ ಅಸಿಸ್ಟೆಂಟ್ ಗವರ್ನರ್ ಪ್ರೊಫೆಸರ್ ಸುರೇಶ್ ಅಭಿಪ್ರಾಯಪಟ್ಟರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಹಾಗೂ ರೋಟರಿ ತರೀಕೆರೆ ಕ್ಲಬ್ ಬಹು ವಲಯ ಮಟ್ಟದ ಕಾರ್ಯಕ್ರಮ ವನ್ನು ನಗರದ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನಲ್ಲಿ ರೋಟರಿ ಜಿಲ್ಲೆ 3182 ವಲಯ 7 ರ ರೋಟರಿ ಕ್ಲಬ್ ತರೀಕೆರೆ ಹಾಗೂ ವಲಯ 11 ರ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಜಂಟಿಯಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯಲ್ಲಿ ನೂತನವಾಗಿ ಸದಸ್ಯರು ಸೇರುವುದರ ಪ್ರಯೋಜನ ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುವುದರ ಜೊತೆಗೆ ವೈಯಕ್ತಿಕ ಹಾಗೂ ವ್ಯವಹಾರಿಕವಾಗಿ ತುಂಬಾ ಅನುಕೂಲವಾಗುತ್ತದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಪ್ರಪಂಚದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಆ ಸಂಸ್ಥೆಯ ಸದಸ್ಯರು ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷ ಕಿರಣ್ ಮಾತನಾಡಿ, ಅಂತರ್ ವಲಯ ಮಟ್ಟದ ಕ್ಲಬ್ ಜೊತೆಯಲ್ಲಿ ನಾವು ಸಭೆಗಳನ್ನು ಮಾಡುವುದರಿಂದ ಒಳ್ಳೆಯ ಸ್ನೇಹವನ್ನು ಬೆಳೆಸಿಕೊಳ್ಳಬಹುದು. ಜೊತೆಯಲ್ಲಿ ರೋಟರಿಯಿಂದ ಮಾಡಬಹುದಾದ ಸಮಾಜಮುಖಿ ಕೆಲಸಗಳ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು. ವಲಯ 7 ರ ರೋಟರಿ ಕ್ಲಬ್ ತರೀಕೆರೆಯ ಎಲ್ಲಾ ಸದಸ್ಯರು ಜಂಟಿ ವಲಯ ಸಭೆಗೆ ಬಂದಿರುವುದು ತಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.
ವಲಯ 7 ರ ಕೋಟಿ ಕ್ಲಬ್ ತರೀಕೆರೆ ಅಧ್ಯಕ್ಷ ರಾಕೇಶ್ ಮಾತನಾಡಿ, ವಲಯ 11 ರ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ರವರು ಈ ದಿನ ನಮಗೆ ಆಮಂತ್ರಣ ನೀಡಿ ಸಭೆ ನಡೆಸುತ್ತಿರುವುದು ಬಹಳ ಸಂತೋಷವಾಗಿದೆ. ಸಭೆಯಲ್ಲಿ ರೋಟರಿ ಸದಸ್ಯತ್ವದ ಬಗ್ಗೆ ಮಾಹಿತಿಯನ್ನು ತಿಳಿಸಿದ ಅಸಿಸ್ಟೆಂಟ್ ಗವರ್ನರ್ ಸುರೇಶ್ ರವರಿಗೂ ಹಾಗೂ ಕಾರ್ಯಕ್ರಮ ಆಯೋಜಿಸಿದ ಎಲ್ಲಾ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷರಿಗೂ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ಎಂದರು.
Rotary Shivamogga Central Club ವಲಯ 7 ರ ಅಸಿಸ್ಟೆಂಟ್ ಗವರ್ನರ್ ನಾಸಿರ್ ಹುಸೇನ್ ಮಾತನಾಡಿ, ಎಲ್ಲಾ ಕ್ಲಬ್ ಗಳು ಅಂತರ್ ವಲಯ ಮಟ್ಟದ ಕ್ಲಬ್ ಗಳ ಜೊತೆ ಸಭೆ ಮಾಡುವುದರಿಂದ ತುಂಬಾ ಉಪಯುಕ್ತವಾಗುತ್ತದೆ.
ರೋಟರಿ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದ ನಾವೆಲ್ಲರೂ ಧನ್ಯರು. ಅಂತರರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆಯು ಪಲ್ಸ್ ಪೋಲಿಯೋ ಲಸಿಕೆಯನ್ನು ಪ್ರಪಂಚಕ್ಕೆ ನೀಡಿದ್ದು, ಅಂತಹ ಸಂಸ್ಥೆಯಲ್ಲಿ ನಾವೆಲ್ಲರೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು, ಜೊತೆಯಲ್ಲಿ ನೂತನ ಸದಸ್ಯರಿಗೆ ರೋಟರಿಯ ಬಗ್ಗೆ ಹಾಗೂ ಸಾರ್ವಜನಿಕರಲ್ಲಿ ನಾವುಗಳು ಮಾಹಿತಿಗಳನ್ನು ತಿಳಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಿಡಿಜಿ ಪ್ರಕಾಶ್, ಜೋನಲ್ ಲಿಪ್ಟಿನೆಂಟ್ ಮಂಜುನಾಥ್ ಕದಂ, ರೋಟರಿ ಸೆಂಟ್ರಲ್ ಕ್ಲಬ್ ನ ಕಾರ್ಯದರ್ಶಿ ಈಶ್ವರ್, ತರೀಕೆರೆ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರವಿಕುಮಾರ್, ರೋಟರಿ ಸದಸ್ಯರಾದ ಬಸವರಾಜ್, ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ಜಗದೀಶ್, ಬಲರಾಮ್, ಮಾಜಿ ಅಸಿಸ್ಟೆಂಟ್ ಗವರ್ನರ್ ವಸಂತ ಹೋಬಳಿದಾರ್ , ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ಚಂದ್ರು, ಸಂತೋಷ್, ತರೀಕೆರೆ ಕ್ಲಬ್ ನ ಸದಸ್ಯರಾದ ಗೋವರ್ಧನ್, ಡಾ. ಶರತ್ ಹಾಗೂ ಇತರೆ ಸದಸ್ಯರು ಮತ್ತು ವಲಯ 7 ಹಾಗೂ ವಲಯ 11 ರ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
Annapurneshwari Trust ಸಂಘ ಸಂಸ್ಥೆಗಳೂ ಸರ್ಕಾರಿ ಶಾಲಾಮಕ್ಕಳ ಪ್ರತಿಭೆ ವಿಕಾಸಕ್ಕೆ ಪ್ರೋತ್ಸಾಹಿಸಬೇಕು-ಕೆ.ಆರ್.ಚಂದ್ರಶೇಖರ್
Annapurneshwari Trust ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಇಂತಹ ಮಕ್ಕಳಿಗೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳ ನೆರವು ಪ್ರೋತ್ಸಾಹ ಅಗತ್ಯವಾಗಿ ಬೇಕಾಗುತ್ತದೆ. ಆಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಅನ್ನಪೂರ್ಣೇಶ್ವರಿ ಸ್ವ – ಸಹಾಯ ಸಂಘದ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್ ಅಭಿಮತ ವ್ಯಕ್ತಪಡಿಸಿದರು.
ಅವರು ನಿಧಿಗೆ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಗವರ್ನರ್ ಜಿ.ವಿಜಯ್ ಕುಮಾರ್ ಮಾತನಾಡಿ, ಅಗತ್ಯ ವಿದ್ದಲ್ಲಿ ಸೇವೆ ಮಾಡಬೇಕು. ನಾವು ಮಾಡುವ ಸೇವೆ ಸದ್ ವಿನಿಯೋಗವಾಗಬೇಕು. ಈ ರೀತಿಯ ನೆರವು ಸಿಕ್ಕಾಗ ಮಕ್ಕಳು ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಹೆಚ್ಚು ಪ್ರತಿಭಾವಂತರಾಗುತ್ತಾರೆ. ಆದ್ದರಿಂದ ಸಂಘ ಸಂಸ್ಥೆಯವರು ಇಂತಹ ಸರ್ಕಾರಿ ಶಾಲೆಗಳ ಕಡೆ ಗಮನಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯದರ್ಶಿ ರವೀಶ್ ಮಾತನಾಡಿ, ನಮ್ಮ ಅನ್ನಪೂರ್ಣೇಶ್ವರಿ ಸ್ವ ಸಹಾಯ ಸಂಘದಿಂದ ಈ ರೀತಿ ಹಲವಾರು ಮನುಕುಲದ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಮಾಜಿ ಕಾರ್ಯದರ್ಶಿ
ಕಿರಣ್ ಕುಮಾರ್ ಮಾತನಾಡಿ, ರಸ್ತೆ ಸುರಕ್ಷಿತೆ ಬಗ್ಗೆ ಮಾಹಿತಿ ತಿಳಿಸಿದರು.
Annapurneshwari Trust ಕಾರ್ಯಕ್ರಮದ ಅಧ್ಯ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ತುಳಸಿ ಅಡಿಗ ಮಾತನಾಡಿ, ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ನಮ್ಮ ಶಾಲೆ ಮಾದರಿ ಶಾಲೆಯಾಗಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಸೋಮಬಾಯಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
Canara Bank ಅಂಬೇಡ್ಕರ್ ಓದುವ ಕಾಲದಲ್ಲಿ ಅವರಲ್ಲಿ ಹಣ,ಆಸ್ತಿ ಇರಲಿಲ್ಲ ಬದಲಿಗೆ ಇಚ್ಛಾಶಕ್ತಿ ಇತ್ತು- ರಮೇಶ್
Canara Bank ಆಸ್ತಿ, ಸಂಪತ್ತು ಇದ್ದ ಮಾತ್ರಕ್ಕೆ ವಿದ್ಯೆ ದಕ್ಕುವುದಿಲ್ಲ. ಕಲಿಕಾ ಇಚ್ಚಾಶಕ್ತಿ ಇದ್ದರೆ ಮಾತ್ರ ವಿದ್ಯೆ ಒಲೆಯುತ್ತದೆ ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.
ಶಿವಮೊಗ್ಗ ವಾಜಪೇಯಿ ಬಡಾವಣೆಯಲ್ಲಿರುವ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾವಂತ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ವೇತನ ವಿದ್ಯಾ ಜ್ಯೋತಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಂಬೇಡ್ಕರ್ ಓದುವ ಕಾಲದಲ್ಲಿ ಅವರ ಬಳಿ ಹಣ, ಆಸ್ತಿ ಯಾವುದು ಇರಲಿಲ್ಲ. ಬದಲಿಗೆ ಕಲಿಕಾ ಇಚ್ಚಾಶಕ್ತಿ ಇತ್ತು. ಹೀಗಾಗಿ ಅವರು ವಿದ್ಯಾರ್ಥಿ ವೇತನದಿಂದಲೇ ದೇಶ, ವಿದೇಶದಲ್ಲೂ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು ಎಂದರು.
ಸರ್ಕಾರದಿಂದ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯ ನೀಗುತ್ತಿದ್ದು, ಸರ್ಕಾರ ಜೊತೆಗೆ ಬ್ಯಾಂಕ್‌ಗಳು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡುತ್ತಿವೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅಚಲ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ ಮಾತನಾಡಿ, ಕೆನರಾ ಬ್ಯಾಂಕ್ ವತಿಯಿಂದ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಅಂಬೇಡ್ಕರ್ ಹೆಸರಿಟ್ಟಿರುವುದು ಹೆಮ್ಮೆಯ ವಿಚಾರ. ಇವತ್ತು ಮಹಿಳೆ ಈ ದೇಶದ ಪ್ರಧಾನಿಯಾಗಿದ್ದಾರೆ ಎಂದರೆ ಅದು ಅಂಬೇಡ್ಕರ್ ಅವರ ಚಿಂತನೆಯ ಫಲ ಎಂದರು.
ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಜಾತಿ, ವರ್ಗದ ಜನರಿಗೆ ಅಂಬೇಡ್ಕರ್ ಬೇಕಾದವರಾಗಿದ್ದಾರೆ. ಅವರ ಚಿಂತನೆಯಿಂದಾಗಿ ಎಲ್ಲ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳೂ ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಹಲವು ಯೋಜನೆಗಳ ಬಗ್ಗೆ ಹಲವರಿಗೆ ಮಾಹಿತಿ ಕೊರತೆ ಇದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ಪ್ರೇರಣೆ ಪಡೆದು ಸಾಧನೆಯ ಗುರಿಯತ್ತ ಸಾಗಬೇಕು ಎಂದು ಹೇಳಿದರು.
Canara Bank ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ಅವರ ಓದಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂಬ ಉದ್ದೇಶದಿಂದ ಕೆನರಾ ಬ್ಯಾಂಕ್‌ನಿಂದ ಕಳೆದ 20 ವರ್ಷದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಧನ ನೀಡುತ್ತಾ ಬರಲಾಗುತ್ತಿದೆ. ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಇಂದು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಇಂದಿನಿಂದಲೇ ಉಳಿತಾಯದ ಬಗ್ಗೆ ಅರಿವು ಹೊಂದಬೇಕು. ದಿನಕ್ಕೆ 10 ರು. ಉಳಿಸಿದರೂ ಒಂದು ವರ್ಷಕ್ಕೆ 3650 ರು. ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಎಸ್ಸಿ, ಎಸ್ಟಿ ವಿದ್ಯಾರ್ಥಿನಿಯರಿಗೆ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಎಂ.ಕೆ.ರಾಥೋಡ್ ಇದ್ದರು.
Independence Day ಹತ್ತುಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮಕೈಗೊಳ್ಳಲಾಗುತ್ತಿದೆ- ಸಚಿವ ಮಧು ಬಂಗಾರಪ್ಪ
Independence Day ಶಿವಮೊಗ್ಗ ನಗರ ಹಾಗೂ ಆನವಟ್ಟಿಯಲ್ಲಿ ಬೃಹತ್ ಪ್ರಮಾಣದ ಶೀತಲೀಕರಣ ಘಟಕ ಹಾಗೂ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ಸುಮಾರು ನೂರು ಎಕರೆ ವಿಸ್ತೀರ್ಣದಲ್ಲಿ ಆಹಾರ ಸಂಸ್ಕರಣ ಘಟಕವನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ಆಡಳಿತರೂಢ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಘೋಷಣೆಯಂತೆ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಪರಿಷ್ಕರಣೆ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ವಿಶೇಷ ಗಮನಹರಿಸಿತ್ತು. ಪ್ರಶಸ್ತ ಸಾಲಿನಿಂದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಗೆ ಜಿಲ್ಲೆಯ ತುರ್ತು ಅಗತ್ಯ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಗಮನಹರಿಸಲಿದೆ ಎಂದ ಅವರು, ಗ್ಯಾರಂಟಿ ಯೋಜನೆಗಳು ಜನರ ನೆಮ್ಮದಿಯ ಬದುಕಿಗೆ ಆಸರೆಯಾಗಿವೆ ಅವುಗಳು ದುರ್ಬಳಕೆಯಾಗದಂತೆ ಜನರು ಗಮನಹರಿಸಬೇಕು ಎಂದವರು ನುಡಿದರು.
ಪ್ರಸಕ್ತ ಸಾಲಿನ ಮುಂಗಾರಿನಿಂದಾಗಿ ಎಲ್ಲಾ ಜಲಾಶಯಗಳು, ಕೆರೆ-ಕಟ್ಟೆ- ಕಾಲುವೆಗಳು ತುಂಬಿ ತುಳುಕುತ್ತಿ ವೆ. ಕೃಷಿ ಚಟುವಟಿಕೆಗಳು ಎಂದಿನಂತೆ ಸಾಗಿವೆ ರೈತರಲ್ಲಿ ಸಹಜವಾಗಿ ಮಂದಹಾಸ ಮೂಡಿದೆ ಎಂದು ಅವರು ರಾಜ್ಯದ ಎಲ್ಲಾ ಜಲಾಶಯಗಳ ನಿರ್ವಹಣೆ ಮತ್ತು ದುರಸ್ತಿಗಾಗಿ ಸರ್ಕಾರ ವಿಶೇಷ ಗಮನಹರಿಸಲಿದೆ ಎಂದವರು ನುಡಿದರು.
ಜಿಲ್ಲೆಯ ಬಹು ದಿನಗಳ ಸಮಸ್ಯೆಯಾಗಿರುವ ಶರಾವತಿ ಸಂತ್ರಸ್ಥರು, ಬಗರ್ ಹುಕುಂ ಸಾಗುವಳಿದಾರರುಹಾಗೂ ಚಕ್ರ ವರಾಹಿ ಸಾವೇಹಕ್ಲು ಸೇರಿದಂತೆ ಸರ್ಕಾರದ ವಿವಿಧ ನೀರಾವರಿ ಯೋಜನೆಗಳಿಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡವರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ಸರ್ಕಾರ ವಿಶೇಷ ನಡವಳಿಯನ್ನು ಅನುಮೋದಿಸಿದೆ ಅಲ್ಲದೆ ಅರಣ್ಯ ವಾಸಿ ಗಳಾಗಿ ಬದುಕು ಕಟ್ಟಿಕೊಂಡಿರುವವರ ಹಿತ ರಕ್ಷಣೆಗೆ ಹಾಗೂ ಅವರನ್ನು ಒಕ್ಕಲಿಬ್ಬಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. 2015
ರ ನಂತರ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ರಕ್ಷಣೆ ಮಾಡದು ಸಾಧ್ಯವಾಗದು ಎಂದ ಅವರು ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ಸಲಹೆಯಂತೆ ಕಾರ್ಯನಿರ್ವಹಣೆ ನಡೆಯಲಿದೆ ಎಂದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಹಾಗೂ ನ್ಯೂನ್ಯತೆಗಳ ಸಮರ್ಪಕ ನಿರ್ವಹಣೆಗಾಗಿ ಜಿಲ್ಲಾಮಟ್ಟದಲ್ಲಿ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ ಒಂದು ಅಂದಾಜಿನ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿಗೆ ಸುಮಾರು 9 ಕೋಟಿ ರೂಗಳ ವಾರ್ಷಿಕ ಅನುದಾನ ವ್ಯಯ ಮಾಡಲಾಗುತ್ತಿದೆ ಎಂದರು
ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಸಹಯೋಗದೊಂದಿಗೆ ಸೆಪ್ಟೆಂಬರ್ 5 ರಿಂದ ರಾಜ್ಯರಾದ್ಯಂತ ರಾಜ್ಯದ 56 ಲಕ್ಷ ಮಕ್ಕಳಿಗೆ ವಾರದ ಆರು ದಿನಗಳ ಕಾಲ ಮೊಟ್ಟೆ ಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಲು ಕ್ರಮವಹಿಸಲಾಗಿದೆ ಅದಕ್ಕಾಗಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನಿಂದ ಸುಮಾರು 1500 ಕೋಟಿ ರೂಪಾಯಿಗಳ ಆರ್ಥಿಕ ನೆರವು ದೊರೆಯಲಿದೆ ಎಂದರು.
Independence Day ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಓದಿದ್ದು, ಪ್ರಸ್ತುತ ಸಂದರ್ಭದಲ್ಲಿ ಉನ್ನತ ಸ್ಥಾನದಲ್ಲಿದ್ದು ಉತ್ತಮ ಜೀವನ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ಹಾಗೂ ಗಣ್ಯರು ತಾವು ಓದಿದ ಶಾಲೆಗೆ ಏನನ್ನಾದರೂ ಕೊಡುಗೆ ನೀಡುವ ಮೂಲಕ ಶಾಲೆಯ ಸರ್ವ ಸರ್ವಾಂಗಿನ ವಿಕಾಸಕ್ಕೆ ಸಹಕರಿಸುವಂತೆ ಸಚಿವರು ಮನವಿ ಮಾಡಿದರು.
ರಾಜ್ಯದಲಿನ ಸರ್ಕಾರಿ ಶಾಲೆಗಳಲ್ಲಿನ ಕೊರತೆ ಇರುವ ಶಿಕ್ಷಕರ ಬರ್ತಿಗೆ ಕ್ರಮ ವಹಿಸಲಾಗಿದ್ದು ಈಗಾಗಲೇ 12 ಸಾವಿರ ಶಿಕ್ಷಕರನ್ನು ನೇಮಿಸಲಾಗಿದೆ. ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಕ್ಕೂ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಮಕ್ಕಳ ಪಠ್ಯಪುಸ್ತಕ ಹೊರೆಯನ್ನು ಕಡಿಮೆ ಮಾಡಲು, ಎಸ್ ಎಸ್ ಎಲ್ ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ಕರೆ ತರಲು ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಸಲಾಗುತ್ತಿದೆ ಸರ್ಕಾರಿ ಶಾಲೆಗಳ ಸರ್ವಾಂಗೀಣ ವಿಕಾಸದ ಜೊತೆಗೆ ಸರ್ಕಾರಿ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮುಂದಾಗುವಂತೆ ಹಾಗೂ ತಮ್ಮ ಮಕ್ಕಳನ್ನು ಸತ್ ಪ್ರಜೆಗಳಾಗಿ ರೂಪಿಸುವಂತೆ
ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯಗೊಳ್ಳುವಂತೆ ರಾಜ್ಯದ ಸುಮಾರು 25 ಸಾವಿರ ಮಕ್ಕಳಿಗೆ ನೀಟ್ ಮತ್ತಿತರ ಪರೀಕ್ಷೆಗಳಿಗೆ ಸಹಕಾರಿಯಾಗುವಂತೆ ಶಿಕ್ಷಣ ತರಬೇತಿಗಳನ್ನು ಸರ್ಕಾರದ ವತಿಯಿಂದಲೇ ನಡೆಸಲು ಉದ್ದೇಶಿಸಲಾಗಿದೆ ರಾಜ್ಯದಾದ್ಯಂತ ಸಾವಿರದ 800 ಎಲ್ ಕೆ ಜಿ ಯು ಕೆ ಜಿ ತರಗತಿಗಳನ್ನು ಆರಂಭಿಸಿ 36,000 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿದೆ. 1700 ಕನ್ನಡ ಮತ್ತು ಆಂಗ್ಲ ಮಧ್ಯಮದ ಶಾಲೆಗಳನ್ನು ತೆರೆಯಲಾಗಿದೆ
ಎಂದರು.
ಪ್ರಸ್ತುತ ಜೋಗದಲ್ಲಿ 1700 ಮೆಗಾ ವ್ಯಾಟ್ ವಿದ್ಯುತ್ ಉತ್ಪನ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪನ್ನ ಮಾಡಲು ಅಗತ್ಯ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿತಲ್ ಕುಮಾರ್, ವಿಧಾನಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು, ಜಿಲ್ಲಾ ಗ್ಯಾರೆಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರ ಭೂಪಾಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Kuvempu University ಬಹುಸಂಸ್ಕೃತಿಯನ್ನ ಒಪ್ಪಿಕೊಂಡು ಸಹೋದರ ಭಾವದಿಂದ ಶಾಂತಿಯುತ ನೆಲೆಸಲು ಸಂವಿಧಾನ ನಮಗೆ ದಾರಿದೀಪ- ಪ್ರೊ. ಶರತ್ ಅನಂತ ಮೂರ್ತಿ
Kuvempu University ನಮಗೆ ಲಭಿಸಿರುವ ಸ್ವಾತಂತ್ರ್ಯದ ಸ್ವರೂಪವನ್ನು ಮರುಚಿಂತನೆ ಮಾಡಿಕೊಳ್ಳುವ ಅಗತ್ಯ ಇದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯ ಅನುಷ್ಠಾನದಲ್ಲಿ ಸಣ್ಣಪುಟ್ಟ ಊನಗಳಿದ್ದರೂ, ಜಗತ್ತಿನ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಸ್ಥಿರತೆ ಕಾಯ್ದುಕೊಂಡಿದೆ ಎಂದು ಕುವೆಂಪು ವಿಶ್ವವಿದ್ಯಾಲದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಟ್ಟರು.
ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶದ ವಿವಿಧ ಭಾಗಗಳಲ್ಲಿನ ವೈವಿಧ್ಯತೆಯೇ ನಮ್ಮ ಶಕ್ತಿ. ದೇಶದ ಉದ್ದಗಲಕ್ಕೂ ಹಬ್ಬಿರುವ ಈ ಬಹುಸಂಸ್ಕೃತಿಯನ್ನು ಒಪ್ಪಿಕೊಂಡು ಸಹೋದರ ಭಾವದಿಂದ ಶಾಂತಿಯುತವಾಗಿ ನೆಲೆಸಲು ಸಂವಿಧಾನ ನಮಗೆ ದಾರಿದೀಪವಾಗಿದೆ ಎಂದರು.
ಕುಲಸಚಿವ ಎ. ಎಲ್. ಮಂಜುನಾಥ್ ಮಾತನಾಡಿ, ದೇಶ ಇಂದು ಬಡತನ, ನಿರುದ್ಯೋಗ ಮತ್ತಿತರ ಜ್ವಲಂತ ಸಮಸ್ಯೆಗಳಿದ್ದರೂ ಅನ್ಯಾಯ, ಅಸೂಯೆ,ಅಸಹಕಾರ, ಅಧರ್ಮಳಿಂದ ಮುಕ್ತವಾದ ಸಮಸಮಾಜದ ನಿರ್ಮಾಣ ನಮ್ಮೆಲ್ಲರ ಗುರಿಯಾಗಿರಬೇಕು ಎಂದರು.
Kuvempu University ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಪ್ರೊ. ಎನ್. ಡಿ. ವಿರೂಪಾಕ್ಷ, ಪ್ರೊ. ಗಜಾನನ ಪ್ರಭು, ಡಾ. ರವೀಂದ್ರ ಗೌಡ, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Independence Day ವೈಯಕ್ತಿಕ ಹಿತಕ್ಕೆ ಸೀಮಿತವಾಗದೇ ರಾಷ್ಟ್ರಹಿತದತ್ತ ಮುಖ ಮಾಡುವುದೇ ಸ್ವಾತಂತ್ರ್ಯ ದಿನಾಚರಣೆ- ಡಾ.ಎಚ್.ಬಿ.ಮಂಜುನಾಥ್
Independence Day ದೇಶದ ಪ್ರತಿ ಪ್ರಜೆಯೂ ತಮ್ಮ ಚಿಂತನೆ, ನಿರ್ಧಾರ ಹಾಗೂ ಕಾರ್ಯಗಳನ್ನು ವೈಯಕ್ತಿಕ ಹಿತಕ್ಕೆ ಸೀಮಿತ ಮಾಡದೆ ರಾಷ್ಟ್ರ ಹಿತ ದತ್ತ ಮುಖ ಮಾಡುವುದೇ ಸ್ವಾತಂತ್ರ್ಯ ದಿನಾಚರಣೆಯಾಗಬೇಕು ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಆಶಯ ವ್ಯಕ್ತಪಡಿಸಿದರು. ದಾವಣಗೆರೆ ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ಭಾರತದ 78ನೇ ಸ್ವಾತಂತ್ರೋತ್ಸವದ ಆಚರಣೆಯ ಮುಖ್ಯ ಅತಿಥಿಗಳಾಗಿ ಧ್ವಜಾರೋಹಣ ನೆರವೇರಿಸಿ ಶಾಲಾ ಮಕ್ಕಳ ಕವಾಯತಿನ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಾ ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಲಕ್ಷಾಂತರ ಹೋರಾಟಗಾರರು ರಾಷ್ಟ್ರ ಕ್ಕಾಗಿ ತಮ್ಮ ಬಲಿದಾನ ಮಾಡಿದರೆ ವಿನಹ ದುಷ್ಟ ಆಡಳಿತದ ಬ್ರಿಟಿಷರನ್ನು ಬಲಿಪಡೆಯಲಿಲ್ಲ. ಅನೇಕ ಬಾರಿ ಪರಕೀಯರ ದಬ್ಬಾಳಿಕೆ ಹಾಗೂ ಆಡಳಿತಕ್ಕೆ ಒಳಪಟ್ಟರೂ independence-day ನಮ್ಮ ಭಾರತ ತನ್ನ ತಾಳುವ ಹಾಗೂ ಬಾಳುವ ಸುಸಾಮರ್ಥ್ಯದಿಂದ ತನ್ನ ಅಮೂಲ್ಯ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಇಂತಹ ಭಾರತ ವಿಶ್ವನಾಯಕತ್ವ ವಹಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದನ್ನು ವಿಶ್ವದ ಬೇರೆ ದೇಶಗಳು ತಿಳಿದಿವೆ, ಇದಕ್ಕಾಗಿ ನಮ್ಮ ಶಾಲಾ ಮಕ್ಕಳಿಗೆ ಶಿಕ್ಷಣ ಹಂತದಲ್ಲೇ ಒಳ್ಳೆಯ ನಾಯಕತ್ವದ ಗುಣಲಕ್ಷಣಗಳನ್ನು ಹೇಳಿಕೊಡಬೇಕಾಗಿದೆ ಎಂದರು. ಶಾಲಾ ಪ್ರಾಂಶುಪಾಲ ಸೈಯದ್ ಅರೀಫ್ ಆರ್ ಅಧ್ಯಕ್ಷೀಯ ನುಡಿಗಳನ್ನಾಡಿ ಪಾರಂಪರಿಕ ಹಬ್ಬ ಹರಿದಿನಗಳಲ್ಲಿ ತೋರುವ ಆಸಕ್ತಿಯನ್ನು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವಗಳಲ್ಲೂ ವಿದ್ಯಾರ್ಥಿಗಳು ತೋರಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಟಿ ಎಂ ಗಿರೀಶ್ ಹಾಗೂ ಅಧ್ಯಾಪಕ ವರ್ಗದ ಪ್ರೀತಾ ಟಿ ರೈ, ನೇತ್ರಾವತಿ ಎಸ್ಎಂ, ರೂಪ ಎಂ ಎಸ್ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ರಾಷ್ಟ್ರಭಕ್ತಿ ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ರೂಪಕಗಳನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿದರು. ಮಹಾಲಕ್ಷ್ಮಿ ಬಿ, ಉಮ್ಮೇ ಸಲ್ಮಾ, ಶಾಂತಲಾ ಎನ್ ಪಿ ನಿರೂಪಿಸಿದರೆ ದೇಶಭಕ್ತಿ ಗೀತೆಯನ್ನು ಖುಶಿ ಮತ್ತು ತಂಡದವರು ಹಾಡಿದರು. ಶ್ರೈನ್ ಬ್ಯಾಸಿಲಿಕ ಸ್ವಾಗತ ಕೋರಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಜಿ ಆರ್ ಉಷಾ ಮಾಡಿದರು. ತಸ್ಲಿಮಾ ನಝ್ನೀನ್ ವಂದನೆ ಸಮರ್ಪಿಸಿದರು.
Independence Day ಶರಾವತಿ ಸಂತ್ರಸ್ತರ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶಾಶ್ವತ ಕಾರ್ಯಪಡೆ ರಚನೆಗೆ ಕ್ರಮ- ಮಧು ಬಂಗಾರಪ್ಪ
Independence Day ನಮ್ಮ ಭಾರತ ದೇಶವನ್ನು ವಿದೇಶಿಯರಿಂದ ಮುಕ್ತಿಗೊಳಿಸುವಲ್ಲಿ ನಾಡಿನ ಲಕ್ಷಾಂತರ ಭಾರತೀಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ನಮ್ಮ ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಆ ಎಲ್ಲಾ ಸ್ವಾತಂತ್ರ್ಯ ವೀರರಿಗೆ ಅನಂತ ನಮನಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ನಗರದ ಡಿ.ಎ.ಆರ್ ಮೈದಾನದಲ್ಲಿ ಆಯೋಜಿಸಿದ್ದ 78 ನೇ ಸ್ವತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಶ್‌ಚಂದ್ರ ಬೋಸ್, ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಈ ನೆಲದ ಅನೇಕ ಹೋರಾಟಗಾರರ ಪರಿಶ್ರಮದ ಫಲ ಇಂದಿನ ಸ್ವಾತಂತ್ರ್ಯ ದಿನಾಚರಣೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಐವರು ವೀರಸೇನಾನಿಗಳು ನೇಣಿಗೆ ಶರಣಾಗಿ ಹುತಾತ್ಮರಾಗಿದ್ದು ನಿಜಕ್ಕೂ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಜಿಲ್ಲೆ ಅನೇಕ ಹೋರಾಟಗಾರರಿಗೆ ಜನ್ಮ ನೀಡಿದೆ. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಪೂಜ್ಯ ತಂದೆಯವರಾದ ಶ್ರೀ ಎಸ್.ಬಂಗಾರಪ್ಪನವರು ಸೇರಿದಂತೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ನೀಡಿದ್ದು, ಅನೇಕ ಕ್ಷೇತ್ರಗಳಲ್ಲಿನ ಅಸಂಖ್ಯಾತ ಪ್ರತಿಭಾವಂತರು, ಪ್ರಸಿದ್ದರು, ಉದಯಿಸಿದ ಪುಣ್ಯಭೂಮಿ ಶಿವಮೊಗ್ಗ ಜಿಲ್ಲೆ ಎಂದರು.
ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಭಾರೀ ಮಳೆಯಿಂದಾಗಿ ಜನ-ಜಾನುವಾರುಗಳು, ಮನೆಗಳು ಹಾನಿಗೊಳಗಾಗಿವೆ. ಹಾನಿಗೊಳಗಾಗಿರುವ ಮನೆಗಳ ಮಾಲೀಕರಿಗೆ ತಕ್ಷಣದ ಪರಿಹಾರ ಕ್ರಮವಾಗಿ ಅಗತ್ಯ ನೆರವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಹಾನಿಗೊಳಗಾದ 294 ಶಾಲೆಗಳು, ಅಂಗನವಾಡಿಗಳು, ಇತರೆ ಕಟ್ಟಡಗಳು, ರಸ್ತೆ, ಸೇತುವೆಗಳ ದುರಸ್ತಿಗೂ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 41 ಕೆ.ಪಿ.ಎಸ್ ಶಾಲೆಗಳನ್ನು ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅಲ್ಲದೇ 2023-24ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ಗಳನ್ನು ಪೂರೈಸಲಾಗಿದೆ. ಈಗಾಗಲೇ 12000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 2015 ರಿಂದ 2020 ನೇ ಸಾಲಿನ ವರೆಗೆ ಅನುದಾನಿತ ಶಾಲಾ ಕಾಲೇಜುಗಳಲ್ಲಿ 5 ಸಾವಿರ ಶಿಕ್ಷರ ನೇಮಕಾತಿ ಅನುಮತಿ ನೀಡಲಾಗಿದೆ. ಖಾಲಿ ಇರುವ 10 ಸಾವಿರ ಖಾಯಂ ಶಿಕ್ಷರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ.
ಮಕ್ಕಳಲ್ಲಿನ ಪೌಷ್ಠಿಕತೆಯನ್ನು ಹೆಚ್ಚಿಸಲು ವಾರದ ಮೂರು ದಿನ ಹಾಲಿನೊಂದಿಗೆ ರಾಗಿಮಾಲ್ಟ್ ಹಾಗೂ ಒಂದರಿಂದ ಹತ್ತನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಪ್ರತಿದಿನ ಬಿಸಿಯೂಟ, ಮೊಟ್ಟೆ, ಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಲಾಗುತ್ತಿದೆ. ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಹಯೋಗದೊಂದಿಗೆ ಮುಂದಿನ 3 ವರ್ಷಗಳ ಅವಧಿಗೆ ವಾರದ 6 ದಿನಗಳು ಮೊಟ್ಟೆ ವಿತರಿಸುವ ಯೋಜನೆ ಪ್ರಾರಂಭಿಸಲಾಗಿದೆ. 10 ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಸರಿಯದಂತೆ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಕವಾಗುವಂತೆ ಮೂರು ಹಂತದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಮೂಡಿದೆ ಎಂದರು.
Independence Day ಶರಾವತಿ ಹಾಗೂ ಇತರೆ ಯೋಜನೆಗಳ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲೆ ಮತ್ತು ಸರ್ಕಾರದ ಹಂತದಲ್ಲಿ ಸಭೆಗಳನ್ನು ನಡೆಸಲಾಗಿದೆ. ಸಂತ್ರಸ್ಥರ ಪರವಾಗಿ ಸುಪ್ರಿಂಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ಈಗಾಗಲೇ ನೇಮಿಸಲಾಗಿದೆ. ವಿಧಾನ ಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂತ್ರಸ್ಥರ ಪರಿಹಾರಕ್ಕಾಗಿ ಶಾಶ್ವತ ಕಾರ್ಯಪಡೆ ರಚಿಸಲು ಕ್ರಮ ವಹಿಸಲಾಗಿದೆ.
ಹಲವು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಮನೆಕಟ್ಟಿಕೊಂಡಿರುವ ವನವಾಸಿಗಳನ್ನು ಒಕ್ಕಲೆಬ್ಬಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ನಗರದ ಹೊರವಲಯ ಸೋಗಾನೆಯಲ್ಲಿ ಸುಮಾರು 98 ಎಕರೆ ಪ್ರದೇಶದಲ್ಲಿ ಫುಡ್‌ಪಾರ್ಕ್ (Food Park) ಆರಂಭಿಸಲು ಕ್ರಮ ವಹಿಸಲಾಗಿದೆ. ಚಂದ್ರಗುತ್ತಿಯನ್ನು ಆಧುನಿಕ ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದರು.
ಶರಾವತಿ ನದಿಯಿಂದ ಸೊರಬ, ಆನವಟ್ಟಿ ಮತ್ತು ಶಿರಾಳಕೊಪ್ಪ ಪಟ್ಟಣಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಶಾಶ್ವತ ಶುದ್ದಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ನಗರದಲ್ಲಿ ಕಿದ್ವಾಯಿ ಮಾದರಿಯ ಕ್ಯಾನ್ಸರ್ (Cancer) ಆಸ್ಪತ್ರೆ ಕಟ್ಟಡ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಶಿವಮೊಗ್ಗದಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಮಾನವ ಎದೆಹಾಲು ಸಂಸ್ಕರಣೆ ಹಾಗೂ ವಿತರಣಾ ಕೇಂದ್ರವನ್ನು ಈಗಾಗಲೇ ಆರಂಭಿಸಲಾಗಿದೆ. ಮೆಗಾನ್ ಆಸ್ಪತ್ರೆಯಲ್ಲಿ ಮೆದುಳು ರೋಗಗಳ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರತ್ಯೇಕ ಘಟಕ ಜನವರಿಯಿಂದ ಕಾರ್ಯ ಆರಂಭಗೊಂಡಿದೆ ಎಂದರು.
ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಆಯುಷ್ಮಾನ್ ಯೋಜನೆಯಡಿ ಸರ್ಕಾರ ವೆಚ್ಚ ಮಾಡುತ್ತಿದ್ದ 8 ಕೋಟಿ ರೂ.ಗಳನ್ನು 20 ಕೋಟಿ ರೂ.ಗಳಿಗೆ
ಹೆಚ್ಚಿಸಲಾಗಿದೆ.
ರಾಜ್ಯದ ಜನರ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಜಿವನ ಮಟ್ಟ ಸುಧಾರಿಸಲು, ಯುವಜನರ ಹಲವು ಕನಸುಗಳಿಗೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮಹಿಳಾ ಫಲಾನುಭವಿಗಳು ಸೇರಿದಂತೆ ರಾಜ್ಯದ ಬಹುಪಾಲು ಜನರು ಸದರಿ ಯೋಜನೆಗಳ ಸಂಗತಿಯಾಗಿದೆ. ಲಾಭವನ್ನು ಪಡೆದುಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿ ಪಡೆಯುವ ಕುಟುಂಬಗಳ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆ.ಜಿ. ಉಚಿತ ಅಕ್ಕಿಯನ್ನು ನೀಡುವ ಕಾರ್ಯಕ್ರಮ ರಾಜ್ಯದಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 05 ಕೆ.ಜಿ. ಅಕ್ಕಿಗೆ ಬದಲಾಗಿ ಫಲಾನುಭವಿಯ ಖಾತೆಗೆ ನೇರವಾಗಿ ರೂ.170 ಗಳನ್ನು ಜಮಾ ಮಾಡುತ್ತಿದೆ.
ಸರ್ಕಾರ ರಚನೆಯ ಅಲ್ಪ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಲಾಗಿದೆ. ಈ ಅವಧಿಯಲ್ಲಿ ಕ್ರಮಿಸಿದ ದೂರ ಕಡಿಮೆಯಾಗಿದ್ದರೂ ಸಾಧಿಸಿದ ಸಾಧನೆ ದೇಶಕ್ಕೆ ಮಾದರಿಯಾಗಿದೆ.
ರಾಜ್ಯದಲ್ಲಿ ಅನುಷ್ಠಾನಗೊಂಡ ಈ ಎಲ್ಲಾ ಯೋಜನೆಗಳು ದೇಶದಲ್ಲಿಯೇ ಮಾದರಿ ಯೋಜನೆಗಳಾಗಿ ಗುರುತಿಸಲಾಗುತ್ತಿರುವುದು ವಿಶೇಷವೆನಿಸಿದೆ.
ಒಟ್ಟಾರೆಯಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ 30 ರಿಂದ 50 ಸಾವಿರದ ವರೆಗೆ ಆರ್ಥಿಕ ನೆರವು ಲಭಿಸುತ್ತಿದೆ. ಒಂದು ಗ್ರಾಮ ಪಂಚಾಯಿತಿಗೆ ವಾರ್ಷಿಕವಾಗಿ ಸುಮಾರು 09 ಕೋಟಿ ರೂ.ಗಳ ಹಣಕಾಸು ಮತ್ತಿತರ ಸೌಲಭ್ಯವು ಯಾವುದೇ ಮಧ್ಯವರ್ತಿಗಳಿಲ್ಲದೆ ತಲುಪಿಸುತ್ತಿರುವುದು ನಾಡಿನ ಜನ ಹೆಮ್ಮೆ ಪಡುವ ಸಂಗತಿಯಾಗಿದೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ ವಿಕಾಸಕ್ಕೆ ಇನ್ನೂ ಹೆಚ್ಚಿನ ಗಮನಹರಿಸಲಾಗುವುದು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ವೀರಸೇನಾನಿಗಳ ಆಶಯದಂತೆ ಸಾಮಾಜಿಕವಾಗಿ ಹಿಂದುಳಿದ ಹಾಗೂ ಕೆಳ ವರ್ಗಗಳೂ ಸೇರಿದಂತೆ ಎಲ್ಲಾ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು ಸೇರಿದಂತೆ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವ, ದೇಶ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮೆಲ್ಲರ ಸಲಹೆ-ಸಹಕಾರ ಪಡೆದು ಮುಂದೆ ಸಾಗುವ ಆಶಯ ಹೊಂದಿದ್ದೇನೆ ಎಂದರು.
ವಿವಿಧ ತುಕಡಿಗಳು ಆಕರ್ಷಕ ಪಥಸಂಚನದಲ್ಲಿ ಸಾಗಿದರು. ಸಾಮೂಹಿಕ ವ್ಯಾಯಾಮ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಪಥಸಂಚಲನದಲ್ಲಿ ಪ್ರಥಮ ಸ್ಥಾನ ಮೊರಾರ್ಜಿ ವಸತಿ ಶಾಲೆ, ದ್ವಿತೀಯ ಸ್ಥಾನ ಭಾರತ್ ಸ್ಕೌಟ್ಸ್ ಬಾಲಕರ ಶಾಲೆ ಹಾಗೂ ತೃತೀಯ ಸ್ಥಾನವನ್ನು ಜ್ಞಾನದೀಪ ಶಾಲೆ ವಿದ್ಯಾರ್ಥಿಗಳು ಪಡೆದುಕೊಂಡರು.
ಉತ್ತಮ ಸೇವೆ ಸಲ್ಲಿಸಿದ ೫ ಜನ ಅಧಿಕಾರಿ/ಸಿಬ್ಬಂದಿಗಳು, ಅಲ್ಪಸಂಖ್ಯಾತ ಇಲಾಖೆಯ ಅಡಿ ಬರುವ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅಂಗಾಂಗ ದಾನ ಮಾಡಿದ ದಿ.ಉಲ್ಲಾಸ್ , ದಿ.ಲಲಿತಮ್ಮ ಕುಟುಂಬ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರರಾಘವೇಂದ್ರ, ಶಾಸರಾದ ಚನ್ನಬಸಪ್ಪ, ಆರಗ ಜ್ಣಾನೇಂದ್ರ, ಶಾರದಾ ಪೂರ್ಯಾನಾಯ್ಕ, ಬಲ್ಕೀಶ್ ಬಾನು, ಧನಂಜಯ ಸರ್ಜಿ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ. ಸಿಇಓ ಎನ್.ಹೇಮಂತ್,ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕ ರು ಹಾಜರಿದ್ದರು.

Education Foudation RDPR Department ಗ್ರಾಮೀಣ ಯುವಜನತೆಗೆ ಡಿಜಿಟಲ್ ಸಾಕ್ಷರತೆ ಸಹಕಾರಿ-ಅವಿನಾಶ್
Education Foudation RDPR Department ಸುಂದರ ಭವಿಷ್ಯದ ಕನಸ್ಸು ಕಾಣುತ್ತಿರುವ ಗ್ರಾಮೀಣ ಯುವ ಜನತೆಗೆ ಡಿಜಿಟಲ್ ಸಾಕ್ಷರತೆಯಿಂದ ಸಹಕಾರಿ ಆಗಲಿದೆ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ಅವಿನಾಶ್ ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಫೌಂಡೇಶನ್ ಆರ್‌ಡಿಪಿಆರ್
ಇಲಾಖೆ ಹಾಗೂ ಡೆಲ್ ಸಂಸ್ಥೆಯ ಸಹಭಾಗಿತ್ವದ ಗ್ರಾಮ ಡಿ.ಜಿ ವಿಕಸನ ಕಾರ್ಯಕ್ರಮದಡಿ ಡಿಜಿಟಲ್ ಉಪಕರಣ ಗಳನ್ನು ವಿತರಣೆ ಮಾಡಿ ಮಾತನಾಡಿದರು.
ಜಿಲ್ಲೆಯ 19 ಗ್ರಂಥಾಲಯಗಳಿಗೆ ಡಿಜಿಟಲ್ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 62 ಗ್ರಂಥಾಲಯಗಳಿಗೆ ಡಿಜಿಟಲ್ ಉಪಕರಣ ಹಂಚಲಾಗಿತ್ತು. ಈ ಕಾರ್ಯಕ್ರಮದ ಸಫಲತೆಯನ್ನು ಯುವ ಜನರು ಸದುಪಯೋಗಪಡಿಸಿಕೊಕೊಳ್ಳಬೇಕು ಎಂದರು.
Education Foudation RDPR Department ಸಹಾಯಕ ನಿರ್ದೇಶಕ ರವಿರಾಮಚಂದ್ರ, ವ್ಯವಸ್ಥಾಪ ಶ್ರೀಧರ್ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಟಿ.ವಿ, ಲ್ಯಾಪ್ ಟಾಪ್ ವಿತರಿಸಿ ಮಾತನಾಡಿದರು.
ಶಿಕ್ಷಣ ಫೌಂಡೇಶನ್ ನ ಜಿಲ್ಲಾ ಸಂಯೋಜಕ ಎಂ. ತಿಮ್ಮೇಶ್, ಎಚ್.ಟಿ. ತಿಪ್ಪೇಸ್ವಾಮಿ, ಪಿಡಿಒ ಇ ಭಾರತಿ, ಗ್ರಂಥಪಾಲಕಿ ಕೆಎಸ್. ಮಮತ ಇದ್ದರು.
