Tuesday, March 31, 2026
Tuesday, March 31, 2026
Home Blog Page 591

Department of Social Welfare ಸಿಬ್ಬಂದಿಗಳು ಹಾಸ್ಟೆಲ್ ವಿದ್ಯಾರ್ಥಿಗಳ ಸೌಲಭ್ಯಕ್ಕೆ ಕೊರತೆ ಮಾಡಿದರೆ ಕಠಿಣ ಕ್ರಮ- ಶಾಸಕ ವಿಜಯೇಂದ್ರ

0

Department of Social Welfare ಶಿಕಾರಿಪುರ ಪಟ್ಟಣದ ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಶಾಸಕ ಬಿ.ವೈ.ವಿಜಯೇಂದ್ರ ದಿಢೀರ್ ಭೇಟಿ ನೀಡಿ ಅಲ್ಲಿನ ಸಮಸ್ಯೆ ಕುರಿತು ವಿದ್ಯಾರ್ಥಿಗಳೊಂದಿಗೆ
ಮಾತನಾಡಿದರು.

ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದ ಶಾಸಕ ಬಿ.ವೈ.ವಿಜಯೇಂದ್ರ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.

ಅಡುಗೆ ಸಿಬ್ಬಂದಿ ನಿತ್ಯ ಆಹಾರ ಪದಾರ್ಥ, ದಿನಸಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ, ಅಡುಗೆಯಲ್ಲಿ ತರಕಾರಿ ಕಡಿಮೆ ಇರುತ್ತದೆ, ಗುಣಮಟ್ಟದ ಆಹಾರ ಇರುವುದಿಲ್ಲ, ಹಾಸ್ಟೆಲ್ ಕಿಡಕಿ ಒಡೆದಿದ್ದು ವಿದ್ಯಾರ್ಥಿನಿಯರು ತೊಂದರೆ ಪಡುವಂತಾಗಿದೆ, ಸೊಳ್ಳೆ ಬತ್ತಿ ನೀಡುತ್ತಿಲ್ಲ, ಕಿಟ್ ವಿತರಣೆ ಪ್ರತಿ ತಿಂಗಳು ನೀಡಿಲ್ಲ, ಪೈಪ್ ದುರಸ್ಥಿ ಕಾರಣಕ್ಕೆ ಬಿಸಿನೀರು ಸಿಗುತ್ತಿಲ್ಲ, ಮೊಟ್ಟೆ, ಬಾಳೆಹಣ್ಣು ಅಸಮರ್ಪಕ ವಿತರಣೆ ಸೇರಿದಂತೆ ಹಲವು ಸಮಸ್ಯೆ ಹೇಳಿಕೊಂಡರು.

Department of Social Welfare ಶಾಸಕ ಬಿ.ವೈ.ವಿಜಯೇಂದ್ರ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆಯಿಸಿ ಮಾತನಾಡಿ, ಹಾಸ್ಟೆಲ್ ಸಮಸ್ಯೆ ಸರಿಪಡಿಸುವುದು ಶಾಸಕನಾದ ನನ್ನ ಕರ್ತವ್ಯವೂ ಹೌದು. ಸರಕಾರ ಬಡ, ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯ ನೀಡುತ್ತಿದೆ ಅದು ವಿದ್ಯಾರ್ಥಿಗಳಿಗೆ ತಲುಪಬೇಕು ಅದು ಆಗದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಡೆಂಗ್ಯು ಜ್ವರ ಹೆಚ್ಚಿರುವ ಈ ದಿನಗಳಲ್ಲಿ ಕಿಟಕಿ ಸರಿಪಡಿಸಬೇಕು, ಸೊಳ್ಳೆ ಬತ್ತಿ ಕೂಡಲೆ ನೀಡುವುದಕ್ಕೆ ವ್ಯವಸ್ಥೆ ಮಾಡಬೇಕು, ಊಟದ ವಿಷಯದಲ್ಲಿ ಮಕ್ಕಳಿಗೆ ಅನ್ಯಾಯ ಆದರೆ ಸಹಿಸುವುದಿಲ್ಲ ನಿಮ್ಮ ಮನೆಯ ಮಕ್ಕಳಂತೆ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕಾಣಬೇಕು ಮುಂದಿನ ಭೇಟಿ ವೇಳೆಗೆ ಸಮಸ್ಯೆ ಸರಿಯಾಗಬೇಕು ಎಂದು ಎಚ್ಚರಿಕೆ ನೀಡಿದರು.

Karate Institute ಹೆಣ್ಣುಮಕ್ಕಳು ಸಂಕೋಚಪಡದೇ ಕರಾಟೆ ಕಲಿಯಬೇಕು- ಪ್ರೇಮಾ ಟೋಕಪ್ಪ

0

Karate Institute ಹೆಣ್ಣುಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಏಕಾಗ್ರತೆಯು ಸಹ ಹೆಚ್ಚಾಗುತ್ತದೆ ಎಂದು ಪುರಸಭೆ ಸದಸ್ಯೆ ಪ್ರೇಮಾ ಟೋಕಪ್ಪ ಹೇಳಿದರು.
ಸೊರಬ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಹಮ್ಮಿಕೊಂಡ ಕರಾಟೆ ತರಬೇತಿ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Karate Institute ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳು ಸಂಕೋಚ ಪಡದೆ ಕರಾಟೆಯನ್ನು ಶ್ರದ್ದೆಯಿಂದ ಕಲಿಯಬೇಕು. ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆದರೆ ಧೈರ್ಯ ಹೆಚ್ಚುತ್ತದೆ. ಯಾರಾದರೂ ಆಕ್ರಮಣ ಮಾಡಿದರೆ ಅದರಿಂದ ಪರಾಗಲು ಅನುಕೂಲವಾಗುತ್ತದೆ ಎಂದ ಅವರು, ಕ್ಷೇತ್ರದ ಶಾಸಕರಾದ ಎಸ್. ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾಗಿರುವುದು ಹೆಮ್ಮೆಯ ವಿಷಯ. ಈಗಾಗಲೇ ಸಚಿವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸರ್ಕಾರವೂ ಸಹ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯವನ್ನು ಕಲ್ಪಿಸುತ್ತಿದೆ ಇದರ ಸದುಪಯೋಗ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.
ಸಾಗರ ಕರಾಟೆ ಇನ್ಸ್ಟಿಟ್ಯೂಟ್ ನ ಕರಾಟೆ ತರಬೇತುದಾರ ಶಿಹಾನ್ ಪಂಚಪ್ಪ ಮಾತನಾಡಿ, ಕರಾಟೆ ಕಲಿಕೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಜೊತೆಗೆ ಆತ್ಮರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಓದಿನಲ್ಲಿ ಆಸಕ್ತಿ ಮೂಡಲು ಸಹ ಅನುಕೂಲವಾಗುತ್ತದೆ. ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು. ಕರಾಟೆಯಲ್ಲಿ ಸಾಧನೆ ಮಾಡಿದರೆ ಉನ್ನತ ಶಿಕ್ಷಣ ಪಡೆಯಲು ಮೀಸಲಾತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಆಸಕ್ತಿಯಿಂದ ಕರಾಟೆ ಕಲಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಶಿಕ್ಷಣ ಇಲಾಖೆಯಿಂದ ಶೋ ವಿತರಿಸಲಾಯಿತು. ನಂತರ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಬಿ. ಗೀತಾ ಪ್ರಾಸ್ತಾವಿಕ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತ್ಯಾಗರಾಜ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭವಾನಿ, ಸಿಆರ್‌ಪಿ ಸುಧಾ, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿ ಎಚ್.ವೈ. ರಕ್ಷಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎಂ. ಶೀಲಾ, ಶಿಕ್ಷಕಿಯರಾದ ವಿದ್ಯಾ, ಜ್ಯೋತಿ, ಸುನಿತಾ, ರೂಪಾ, ಅಮೃತಾ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ತುಳಸಾ ನಾಯ್ಕ್ ಸ್ವಾಗತಿಸಿ, ಮುದಿಗೌಡರ್ ವಂದಿಸಿ, ಅರುಣ್ ಕುಮಾರ್ ನಿರೂಪಿಸಿದರು.

Karnataka Minorities Development Corporation ಅರಿವು( ರಿನ್ಯುವಲ್)ಸಾಲ ಯೋಜನೆಯಡಿ ಅರ್ಜಿಗೆ ಆಹ್ವಾನ

0

Karnataka Minorities Development Corporation ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2024-25 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಅರಿವು(ರಿನಿವಲ್) ಸಾಲ ಯೋಜನೆ ಅಡಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿರುವ ಎಂಬಿಬಿಎಸ್ ಎಂಡಿ ಎಂಎಸ್, ಬಿಡಿಎಸ್, ಎಂಡಿಎಸ್, ಬ್ಯಾಚುಲರ್ ಆಫ್ ಆಯುಷ್, ಮಾಸ್ಟರ್ ಆಫ್ ಆಯುಷ್, ಬಿ.ಇ. ಬಿ.ಟೆಕ್, ಎಂಇ, ಎಂ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಮಾಸ್ಟರ್ ಆಫ್ ಆರ್ಕಿಟೆಕ್ಚರ್, ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬಿಎಸ್‌ಸಿ ಇನ್ ಹಾರ್ಟಿಕಲ್ಚರ್. ಕೃಷಿ ಇಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಫಾರೆಸ್ಟರಿ, ಪಶುವೈದ್ಯಕೀಯ ಮತ್ತು ಪ್ರಾಣಿ ತಂತ್ರಜ್ಞಾನ, ಮೀನುಗಾರಿಕೆ, ಸಿರಿಕಲ್ಚರ್, ಗೃಹ/ಸಮುದಾಯ ವಿಜ್ಞಾನಗಳು ಆಹಾರ ಪೋಷಣೆ ಮತ್ತು ಆಹಾರ ಪದ್ಧತಿ, ಬಿ. ಫಾರ್ಮಾ, ಎಂ. ಫಾರ್ಮಾ, ಫಾರ್ಮಾ ಡಿ ಆಂಡ್ ಡಿ ಫಾರ್ಮಾ ಕೋರ್ಸ್ಗಳಲ್ಲಿ ಆಯ್ಕೆಯಾಗಿರುವಂತಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು (ರಿನಿವಲ್) ಸಾಲ ಯೋಜನೆಯಡಿಯಲ್ಲಿ ಆನ್‌ಲೈನ್ ಮೂಲಕ ದಿನಾಂಕ: 17-08-2024 ರಿಂದ ದಿನಾಂಕ: 31-10-2024 ರ ವರೆಗೆ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ.
Karnataka Minorities Development Corporation ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಪಡೆದ ಸಾಲದ ಮೊತ್ತಕ್ಕೆ ಶೇ 12% ರಷ್ಟು ಹಣವನ್ನು ಪಾವತಿಸಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಆಯ್ಕೆಯಾಗಿದ್ದು ಬೇರೆ ಬೇರೆ ವರ್ಷಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಅರಿವು ವಿದ್ಯಾಭ್ಯಾಸ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಹ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಇಂತಹ ವಿದ್ಯಾರ್ಥಿಗಳು ರಿನಿವಲ್ ಮೊತ್ತವನ್ನು ಪಾವತಿಸುವುದು ಅಗತ್ಯವಿರುವುದಿಲ್ಲ.
ಅರ್ಜಿ ಸಲ್ಲಿಸಲು ನಿಗಮದ ವೆಬ್‌ಸೈಟ್: kmdconline.karnataka.gov.in ಆನ್‌ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ತೆಗೆದುಕೊಂಡು ವ್ಯಾಸಂಗ ಪ್ರಮಾಣಪತ್ರ, ಕಾಲೇಜು ಶುಲ್ಕ ವಿನ್ಯಾಸ, ಎಸ್‌ಎಸ್‌ಎಲ್‌ಸಿ ಅಂಕÀಪಟ್ಟಿ, ಹಿಂದಿನ ವರ್ಷ ಉತ್ತೀರ್ಣರಾದ ಅಂಕಪಟ್ಟಿ, ಬ್ಯಾಂಕ್ ಖಾತೆಯ ವಿವರ, 12% ಸಾಲದ ಮೊತ್ತ ಪಾವತಿಸಿದ ರಸೀದಿ, ಕೆಇಎ ಪ್ರವೇಶ ಆದೇಶದ ಪ್ರತಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ, ನೋಟರಿಯೊಂದಿಗೆ ಇಂಡೆಮ್ನಿಟಿ ಬಾಂಡ್, ವಿದ್ಯಾರ್ಥಿ ಮತ್ತು ಪೋಷಕರ ಸ್ವಯಂ ಘೋಷಣೆ ಪತ್ರ. ಈ ಎಲ್ಲಾ ದಾಖಲಾತಿಗಳೊಂದಿಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31-10-2024 ಆಗಿರುತ್ತದೆ. ಹಾಗೂ ಸದರಿ ದಾಖಲಾತಿಗಳನ್ನು ಆನ್‌ಲೈನ್ ಅರ್ಜಿಯ ಜೊತೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಚ್ಚುತರಾವ್ ಲೇ ಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ ಶಿವಮೊಗ್ಗ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ:08182-228262 ಮತ್ತು ಜಿಲ್ಲಾ ವ್ಯವಸ್ಥಾಪಕರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Chandrayaan-3 ಚಂದ್ರಯಾನ-3 ರ ಯಶಸ್ಸು ನಮ್ಮ ದೇಶದ ಹೆಮ್ಮೆ-ಜಿ.ಶಿವಣ್ಣ

0

Chandrayaan-3 ಚಂದ್ರಯಾನ-3 ರ ಯಶಸ್ಸು ನಮ್ಮ ದೇಶದ ಹೆಮ್ಮೆಯಾಗಿದ್ದು ಈ ಮೂಲಕ ನಮ್ಮ ಹಿರಿಯ ವಿಜ್ಞಾನಿಗಳ ಕನಸು ನನಸಾಗಿದೆ ಎಂದು ಇಸ್ರೋ/ಯುಆರ್‌ಎಸ್‌ಸಿ ಜಿಸ್ಯಾಟ್-7 ಮಿಷನ್‌ನ ಮಾಜಿ ವಿಜ್ಞಾನಿ ಮತ್ತು ಯೋಜನಾ ನಿರ್ದೇಶಕ ಜಿ.ಶಿವಣ್ಣ ನುಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಹಾಘೂ ಜಿಲ್ಲಾ ಪಂಚಾಯಿತಿ ಶಿವಮೊಗ್ಗ, ದೇಶೀಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟಿçÃಯ ಬಾಹ್ಯಾಕಾಶ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಬಾಯಿ ಸೇರಿದಂತೆ ಅನೇಕ ವಿಜ್ಞಾನಿಗಳು ಚಂದ್ರನ ಮೇಲೆ ಉಪಗ್ರಹ ಕಳುಹಿಸುವ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದು, ಚಂದ್ರಯಾನ-3 ರ ಯಶಸ್ಸು ಅವರ ಕನಸಿನ ಫಲವಾಗಿದೆ ಎಂದರು.
ದೇಶದ ರಕ್ಷಣಾ ವ್ಯವಸ್ಥೆಗಾಗಿ ಇಸ್ರೋದಿಂದ ಮೊದಲ ಉಪಗ್ರಹ ಉಡಾವಣೆ ಮಾಡಲಾಯಿತು. ನಂತರ ನೌಕಾ ಪಡೆಗಳಲ್ಲಿ ಸಂವಹಿಸಲು ಸರಿಯಾದ ಮಾಧ್ಯಮ ಇರಲಿಲ್ಲ ಅದಕ್ಕಾಗಿ, ಇನ್ಸಾಟ್-07 ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇಂದು ಇದನ್ನು ಭಾರತೀಯ ಮೂರು ಸೇನೆಗಳೂ ಬಳಸುತ್ತಿದ್ದಾರೆ. ಚಂದ್ರಯಾನ-01 ಮತ್ತು ಚಂದ್ರಯಾನ-02 ರಲ್ಲಿನ ಸೂಕ್ಷö್ಮ ವಿಚಾರಗಳನ್ನು ಅಧ್ಯಯನ ನಡೆಸಿ ಚಂದ್ರಯಾನ -3 ರಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ ಅದ್ಭುತ ಸಾಧನೆ ತೋರಲಾಗಿದ್ದು, ದಕ್ಷಿಣ ಧೃವದಲ್ಲಿ ಲ್ಯಾಂಡಿAಗ್ ಮಾಡಿದ ಮೊದಲ ದೇಶವಾಗಿ ಹೊರಹೊಮ್ಮಿದ್ದೇವೆ. ಈ ಮೂಲಕ ಚಂದ್ರನ ಮೇಲೆ ಇತರೆ ಎರಡು ದೇಶಗಳೊಂದಿಗೆ ನಮಗೂ ಹಕ್ಕಿದೆ ಎಂದು ತಿಳಿಸಿದ ಅವರು ಪಿಪಿಟಿ ಪ್ರದರ್ಶನದ ಮೂಲಕ ಚಂದ್ರಯಾನ-3 ರ ಸಂಪೂರ್ಣ ಪ್ರಕ್ರಿಯೆ, ವಿಜ್ಞಾನಿ ವಿಕ್ರಮ್ ಸಾರಾಬಾಯಿ ಅವರ ಸಾಧನೆಗಳು, ಇತರೆ ಬಾಹ್ಯಾಕಾಶದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮಾತನಾಡಿ, ಚಂದ್ರಯಾನ-3 ಮಿಷನ್ ಯಶಸ್ಸನ್ನು ಆಚರಿಸಲು ಭಾರತ ಸರ್ಕಾರ ಪ್ರತಿ ವರ್ಷ ಆಗಸ್ಟ್ 23 ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ್ದು, ಇದರ ಅಂಗವಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಬಾಹ್ಯಾಕಾಶ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಲು ಗಗನಯಾತ್ರಿ ಹಾಗೂ ಬಾಹ್ಯಾಕಾಶ ವಿಜ್ಞಾನಿಗಳ ಕೊಡುಗೆಗಳ ಬಗ್ಗೆ ವಿಜ್ಞಾನ ಚಟುವಟಿಕೆಗಳನ್ನು ಆಯೋಜಿಸಿದೆ.
Chandrayaan-3 ಇಸ್ರೋ ನಮ್ಮ ದೇಶದ ಸಂರಕ್ಷಣಾ ವಿಷಯದಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು, ಸಂಶೋಧನೆಗಳನ್ನು ಮಾಡುತ್ತಾ ಬಂದಿದೆ. ವಿಶೇಷ ಸಾಧನೆ ಮಾಡಿದಾಗ ಮಾತ್ರ ನಮಗೆ ಗೊತ್ತಾಗುತ್ತಿದೆ. ವಿಕ್ರಂ ಸಾರಾಬಾಯಿ, ಡಾ.ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಹಲವಾರು ಬಾಹ್ಯಾಕಾಶ ವಿಜ್ಞಾನಿಗಳು ಅನೇಕ ಕೊಡುಗಡೆಗಳನ್ನು ನೀಡಿದ್ದು ‘ನಮ್ಮ ಇಸ್ರೋ ನಮ್ಮ ಹೆಮ್ಮೆ’ ಎನ್ನುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಇಂಜಿನಿಯರಿAಗ್ ಕೋರ್ಸ್ ಮಾಡದೇ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಹ ಆಸಕ್ತಿ ಹೊಂದಬೇಕು ಎಂದ ಅವರು ಇಸ್ರೋ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಬೇಕೆಂದು ಆಶಿಸಿದರು.
ಡಿಡಿಪಿಯು ಚಂದ್ರಪ್ಪ ಎಸ್ ಗುಂಡಪಲ್ಲಿ ಮಾತನಾಡಿ, ಚಂದ್ರಯಾನ-3 ಮಿಷನ್‌ನಲ್ಲಿ ದಕ್ಷಿಣ ದೃವದಲ್ಲಿ ಸಾಫ್ಟ್ಲ್ಯಾಂಡಿAಗ್ ಮಾಡಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಜಗತ್ತೇ ನಮ್ಮ ದೇಶದತ್ತ ನೋಡುವಂತೆ ಮಾಡಿರುವ ಇಸ್ರೋದ ವಿಜ್ಞಾನಿಗಳು ಮತ್ತು ತಂಡಕ್ಕೆ ಅಭಿನಂದನೆಗಳು.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡು ಕೊಡುಗೆಗಳನ್ನು ನೀಡಬೇಕು. ನಮ್ಮ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ವೈಜ್ಞಾನಿಕವಾಗಿ ಅಭಿವೃದ್ದಿ ಹೊಂದಿದ್ದು, ವಿದ್ಯಾರ್ಥಿಗಳು ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಮತ್ತು ಇಚ್ಚಾಶಕ್ತಿಯನ್ನು ಬೆಳೆಸಿಕೊಂಡು ಸಾಧಿಸುವೆಡೆ ಗಮನ ಹರಿಸಬೇಕೆಂದರು.
ದೇಶೀಯ ವಿದ್ಯಾ ಶಾಲಾ ಸಮಿತಿ ಕಾರ್ಯದರ್ಶಿಗಳಾದ ರಾಜಶೇಖರ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ, ಬಾಹ್ಯಾಕಾಶ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಇರುವ ವಿಫುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎ.ಈ.ರಾಜಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಚಂದ್ರಯಾನ-3 ರ ಯಶಸ್ಸು ನಮ್ಮೆಲ್ಲರ ಹೆಮ್ಮೆ. ಈ ದಿನವನ್ನು ಬಾಹ್ಯಾಕಾಶ ದಿನವಾಗಿ ಸಂಭ್ರಮಿಸುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ಚಂದ್ರಯಾನ-3 ರ ತಂಡದಲ್ಲಿ ಡಿವಿಎಸ್ ಕಾಲೇಜಿನ 5 ಜನ ವಿದ್ಯಾರ್ಥಿಗಳಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ವಾರ್ತಾ ಇಲಾಖೆಯ ವಾರ್ತಾ ಸಹಾಯಕಿ ಭಾಗ್ಯ ಎಂ.ಟಿ, ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಶಿಕ್ಷಕ ಪ್ರತಿನಿಧಿ ಉಮೇಶ್ ಹೆಚ್.ಸಿ, ಜಿ.ಪಂ ಜಿಲ್ಲಾ ಯೋಜನಾ ಸಂಯೋಜಕ ಶಂಕರ ಪಿ, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Akhil Bharatiya Sahitya Parishad ಆದಿಕವಿ & ವಾಗ್ದೇವಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಮಾಹಿತಿ ಕೋರಿ ಅಭಾಸಾಪ ಪ್ರಕಟಣೆ

0

Akhil Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರತೀ ವರ್ಷ ಸಾಹಿತ್ಯದ ಹಿರಿಯ ಸಾಧಕರಿಗೆ “ಆದಿಕವಿ ಪ್ರಶಸ್ತಿ”ಯನ್ನೂ ಕಿರಿಯ ಸಾಧಕರಿಗೆ “ವಾಗ್ದೇವಿ ಪ್ರಶಸ್ತಿ”ಯನ್ನೂ ಪ್ರದಾನಿಸುತ್ತಿರುವುದು ತಮ್ಮ ಗಮನದಲ್ಲಿ ಇದ್ದೇ ಇದೆ. ಹಾಗೆಯೇ ಸಂಸ್ಕೃತ ಕ್ಷೇತ್ರದ ಸಾಧಕರನ್ನೂ ಸಮ್ಮಾನಿಸುತ್ತಿದೆ. ಈ ಮೂರೂ ಪ್ರಶಸ್ತಿ – ಸಮ್ಮಾನಗಳು ಒಂದು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತವೆ. ಇದರ ಆಯ್ಕೆ ಪ್ರಕ್ರಿಯೆಗೆ ಪೂರಕವಾಗಿ ಈ ಹಿಂದೆ ನಮ್ಮ ನಮ್ಮ ಜಿಲ್ಲೆಯ/ವಿಭಾಗದ ವ್ಯಾಪ್ತಿಯಲ್ಲಿ ಇರುವ ಸಾಧಕರನ್ನು ಗುರುತಿಸಿ ಅವರ ಸಮಗ್ರ ವಿವರಗಳನ್ನು ಕಳಿಸುತ್ತಾ ಬಂದಿರುವಿರಿ.

ಈ ವರ್ಷ ಸಾಧಕರನ್ನು ಗುರುತಿಸುವ ಮತ್ತು ಆಯ್ಕೆ ಮಾಡುವ ಪ್ರಕ್ರಿಯೆ ಆಗಬೇಕಿದೆ. ಈ ಬಾರಿಯೂ ಇವುಗಳಿಗೆ ಸಂಬಂಧಿಸಿದ ಈವರೆಗಿನ ವಿವರಗಳನ್ನು ೨೦೨೪ ಸೆಪ್ಟೆಂಬರ್ ೧೦ರೊಳಗೆ ಕಳಿಸಿಕೊಡಬೇಕಾಗಿ ಮನವಿ.

Akhil Bharatiya Sahitya Parishad ಹಾಗೆಯೇ ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮವೂ ಈ ಬಾರಿ ೨೦೨೪ ನವೆಂಬರ್ ೧೦ ರಂದು ಕಲ್ಲಡ್ಕದ ಶ್ರೀರಾಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಅದಕ್ಕಾಗಿ ರಾಜ್ಯದಲ್ಲಿ ಇರುವ ಅನುದಾನರಹಿತ, ರಾಷ್ಟ್ರೀಯ ವಿಚಾರಧಾರೆಯಲ್ಲಿ ಕೆಲಸ ಮಾಡುವ, ನಮ್ಮ ಸಂಸ್ಕೃತಿ – ಪರಂಪರೆಗಳನ್ನು ಅನುಸರಿಸುವ ಕನ್ನಡ ಶಾಲೆಗಳನ್ನು ಗುರುತಿಸಬೇಕು. ನಮ್ಮ ನಮ್ಮ ಜಿಲ್ಲೆಗಳಲ್ಲಿ ಇರುವ ಇಂತಹ ಕನ್ನಡ ಶಾಲೆಗಳ ವಿವರಗಳನ್ನೂ ಸೆಪ್ಟೆಂಬರ್ ೧ರೊಳಗೆ ಕಳಿಸಿದರೆ ಅನುಕೂಲ.

ಎರಡೂ ವಿವರಗಳನ್ನು ಪ್ರಾಂತ ಜಾಲತಾಣ ಪ್ರಮುಖರಾದ ಶ್ರೀ ಗಣೇಶ ಅಡಿಗರಿಗೆ ಕಳಿಸಬೇಕು.
(ಗಣೇಶ ಅಡಿಗ +919036178263)

Dr. Babu Jagjivan Ram Leather Industries Development ಲಿಡ್ಕರ್ ಕುಶಲಕರ್ಮಿಗಳಿಗೆ/ ಸಂಘಸಂಸ್ಥೆಗಳ‌ ಕುಂದುಕೊರತೆ ಸಭೆ

0

Dr. Babu Jagjivan Ram Leather Industries Development ಡಾ.ಬಾಬು ಜಗಜೀವನ ರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಚರ್ಮ ಕುಶಲಕರ್ಮಿಗಳು/ವಿವಿಧ ಸಂಘ ಸಂಸ್ಥೆಗಳ ಕುಂದು ಕೊರತೆ ಸಭೆಯನ್ನು ಆ.30 ರಂದು ಸರ್ಕಾರಿ ಕಚೇರಿ ವೇಳೆಯಲ್ಲಿ ನಿಗಮದ ಡಾ. ಬಾಬು ಜನಜೀವನ ರಾಂ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ನಿಗಮದ ವ್ಯಾಪ್ತಿಗೆ ಒಳಪಡುವವರು ತಮ್ಮ ಕುಂದುಕೊರತೆಯನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್‌ಕರ್, ನೆಹರು ರಸ್ತೆ, ಶಿವಮೊಗ್ಗ, ದೂ.ಸಂ.: 8762883941 ನ್ನು ಸಂಪರ್ಕಿಸುವಂತೆ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Shringeri Shree Sharadambe Devi  ಕೂಡಲಿ ಮಠದಲ್ಲಿ ಚಿನ್ನದ ಪಾದುಕೆ ಕಳವು, ಪ್ರಕರಣ ದಾಖಲು

0

Shringeri Shree Sharadambe Devi  ಕೂಡಲಿ ಶೃಂಗೇರಿ ಶಾಖಾ ಮಠದ ಶಾರದಾಂಬೆ ದೇವಿಗೆ ಮಾಡಿಸಿರುವ ಚಿನ್ನದ ಪಾದುಕೆಗಳು ಕಳುವಾಗಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಠದ ರಮೇಶ್ ಹುಲ್ಮನಿ ಎನ್ನುವವರು ದಾಖಲಿಸಿದ್ದಾರೆ.
ಕೂಡ್ಲಿ ಶ್ರೀಮಠದಲ್ಲಿ ಪರಂಪರಗತವಾಗಿ ಬಂದಿರುವ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಯು (ಒಂದು ದೊಡ್ಡ ವಿ ಮುದ್ರೆ, ಇನ್ನೊಂದು ಸಣ್ಣ ಮುದ್ರೆ ಜೊತೆಗೆ ಮನ್ನಾರಾಯಣ ಸ್ಮೃತಯ ಅನ್ನುವ ಬೆಳ್ಳಿಯ ಸೀಲು) ಸುರಕ್ಷಿತವಾಗಿ ಬಿರುವಿನಲ್ಲಿಡಲಾಗಿತ್ತು, ಆ.೮ ರಂದು ಮಠದ ಭಕ್ತರೋರ್ವರು ಪೂಜೆಗೆ ಪಾದುಕೆ ಬೇಕೆಂದು ಎಂದು ಬೀಗ ಕೇಳಿದಾಗ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳ ಬಳಿ ಇದ್ದ ಬೀಗವನ್ನು ಉಪಯೋಗಿಸಿ ತೆಗೆಯಲು ಹೋದಾಗ ಆ ಬೀಗ ತೆರೆಯಲು ಸಾಧ್ಯವಾಗಲಿಲ್ಲ.
ನಂತರ ಮಠದ ಅರ್ಚಕರು ಇದರ ಬೀಗದ ಕೈ ಇಲ್ಲಿ ಇದೆ ಎಂದು ತಂದು ಕೊಟ್ಟಿದ್ದರು. ತಾನು ಅದರಿಂದ ಬೀರುವನ್ನು ತೆಗೆದಾಗ ಸುವರ್ಣ ಪಾದುಕೆಯು ಇರಲಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.
Shringeri Shree Sharadambe Devi  ಕಳೆದ ವರ್ಷ ಜುಲೈ ೨೩ ರಿಂದ ಮಠದ ಪೀಠಾಧಿಪತಿ ವಿದ್ಯಾಭಿನವರು ಹಿಂದಿನ ಚಾರ್ತುಮಾಸ ಹಾಗೂ ನಂತರ ದಿನಗಳಲ್ಲಿ ಅನಾರೋಗ್ಯದ ನಿಮಿತ್ತ ದಾವಣಗೆರೆಯ ಶಾಖಾ ಮಠದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ವಾಸವಾಗಿದ್ದರು. ಈ ನಡುವೆ ಸ್ವಾಮಿಗಳ ಖಾಸಗಿ ಉಪಯೋಗದ ದಾಸ್ತಾನು ಕೊಠಡಿ ಬೀಗವನ್ನು ಒಡೆದಿದ್ದು ತಿಳಿದು ಬಂದಿದ್ದರಿಂದ ಹುಲಮನಿಯವರು ಮಠಕ್ಕೆ ತೆರಳಿ ಬೇರೆ ಬೀಗವನ್ನು ಹಾಕಿದ್ದರು.
ಎಂಟು ತಿಂಗಳಿಂದ ಶ್ರೀಗಳು ಕೂಡ್ಲಿಮಠದಲ್ಲಿ ಇರದಿದ್ದರಿಂದ ಯಾವುದೇ ಆಗುಹೋಗು ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ನಂತರ ಚಾರ್ತುಮಾಸ ಕಾರ್ಯಕ್ರಮ ನಿಮಿತ್ತ ಜುಲೈ ೨೦ ರಂದು ಮಠಕ್ಕೆ ಬಂದು ವಾಸ್ತವ್ಯವಿದ್ದರು. ಆಗ ಶಾರದಂಬಾ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಲೆಕ್ಕ ಮಾಡಲಾಗಿತ್ತು. ಅಂದು ಬ್ಯಾಂಕಿಗೆ ಪಾವತಿ ಮಾಡುವ ಸಮಯ ಮೀರಿದ್ದರಿಂದ ಹಣವನ್ನು ಬೀರುವಿನಲ್ಲಿ ಇಡುವಂತೆ ಹೇಳಿ ತಮ್ಮ ಬಳಿ ಇದ್ದ ಬೀರುವಿನ ಬೀಗವನ್ನು ಪೀಠಾಧಿಪತಿ ಕೊಟ್ಟಿದ್ದರು.ಆದರೆ ಆ ಬೀಗದ ಕೈಯಿಂದ ಬೀರು ತೆಗೆಯಲು ಆಗಿಲ್ಲ ಎಂದಿದ್ದಾರೆ.
ಆಗ ಮಠದ ಆರ್ಚಕ ದತ್ತಾತ್ರಿ ಶಾಸ್ತ್ರಿ ಈ ಬೀಗದ ಕೈಯಿಂದ ಬೀರು ಬೀಗ ತೆಗೆಯಿರಿ ಎಂದು ತಮ್ಮ ಬಳಿ ಇದ್ದ ಬೀಗದ ಕೈಯನ್ನು ಕೊಟ್ಟರು. ಅದೇ ಬೀಗದ ಕೈಯಿಂದ ಬೀರು ಬೀಗ ತೆಗೆದು ಹಣ ಇಟ್ಟು ಬೀಗ ಹಾಕಲಾಗಿದೆ. ಆಗ ಶ್ರೀಗಳಿಗೆ ಸಂಶಯ ಬಂದು ಉಳಿದೆರಡು ಬೀರುವಿನ ಬೀಗವನ್ನು ತೆಗೆಸಿ ನೋಡಿದಾಗ ಬೀರುವಿನಲ್ಲಿಟ್ಟಿದ್ದ ಬಂಗಾರದ ಎರಡು ಪಾದುಕೆಗಳು ಕಾಣೆ ಆಗಿದ್ದು ಕಂಡು ಬಂದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಂತರ ಹುಡುಕಾಡಿದರೂ ಅವು ಸಿಕ್ಕಿಲ್ಲ. ಈ ಬಗ್ಗೆ ಗುರುಗಳೊಂದಿಗೆ ಚರ್ಚಿಸಿ ಕಾಣೆಯಾಗಿರುವ ಸುಮಾರು ಅಂದಾಜು ೧ ಕೆ.ಜಿ ತೂಕದ, ೫೦ ರಿಂದ ೬೦ ಲಕ್ಷ ಮೌಲ್ಯದ ಬಂಗಾರದ ಪಾದುಕೆಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Mc Gann Hospital  ಗಾರೆ ಕೆಲಸದ ಯುವಕನಿಗೆ ಕರೆಂಟ್ ಶಾಕ್ ,ಸಾವಿನಲ್ಲಿ ಅಂತ್ಯ

0

Mc Gann Hospital  ಹಳೆ ಜಂಬರಘಟ್ಟದಲ್ಲಿ ಗಾರೆ ಕೆಲಸ ಮಾಡುವ ವೇಳೆ ಯುವಕನೋರ್ವನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಹೊಳೆಹೊನ್ನೂರಿನ ಉಪ್ಪಾರರಕೇರಿಯ ವಾಸಿ ಶರತ್ ಮೃತ ಯುವಕ. ಹಳೇ ಜಂಬರಘಟ್ಟದ ದೇವಸ್ಥಾನದ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಕೆಳಕ್ಕೆ ಬಿದ್ದಾಗ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲೇ ಆತನ ಸಾವಾಗಿತ್ತು ಎಂದು ಗೊತ್ತಾಗಿದೆ.

Kim Star Udupi ಡಾ.ರಕ್ಷಾರಾವ್, ಜಿ.ವಿಜಯಕುಮಾರ್ ಮುಂತಾದವರು ರಾಜರತ್ನ ಪ್ರಶಸ್ತಿ ಘೋಷಣೆ

0

Kim Star Udupi ಕಿಮ್ ಸ್ಟಾರ್ ಉಡುಪಿ ವತಿಯಿಂದ ಆ. 25ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಬೆಂಗಳೂರು ಚಿತ್ರೋತ್ಸವ, ಸಿನಿಮಾ ಹಾಗೂ ಕಿರುಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವೈದ್ಯೆ ಡಾ. ರಕ್ಷಾ ರಾವ್, ಉದ್ಯಮಿ ಎ.ಆರ್.ಅವಿನಾಶ್, ವಿದ್ಯಾ, ಉಮಾ ದಿಲೀಪ್, ಪುನೀತ್ ಬೆಳ್ಳೂರು, ಪೂರ್ಣಿಮಾ, ಅಮೃತಾ ಹಾಗೂ ವಿಷ್ಣುಪ್ರಸಾದ್ ಅವರಿಗೆ ರಾಜರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ.
Kim Star Udupi ಬೆಂಗಳೂರಿನ ಮೂಡಲಪಾಳ್ಯ ಕಲ್ಯಾಣ ನಗರದಲ್ಲಿರುವ ಜ್ಞಾನ ಸೌಧದಲ್ಲಿ ಆ. 25ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಧಕರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದಿಸಲಾಗುತ್ತಿದೆ. ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಚಿತ್ರಗೀತೆಗಳ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಿಮ್ ಸ್ಟಾರ್ ಉಡುಪಿ ಮುಖ್ಯಸ್ಥ ಕೆ.ಜಯಶೀಲ್ ತಿಳಿಸಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅಧ್ಯಕ್ಷತೆ ವಹಿಸುವರು. ಗೋವಿಂದರಾಜಪುರ ಶಾಸಕ ಎಂ.ಪ್ರಿಯಕೃಷ್ಣ ಉದ್ಘಾಟಿಸುವರು. ಚಲನಚಿತ್ರ ಮಂಡಳಿ ಸದಸ್ಯ ಚಿಕ್ಕಣ್ಣ, ಬಿಬಿಎಂಪಿ ಸದಸ್ಯೆ ತಾರಾ ಲೋಕೇಶ್, ನಟಿ ಗೀತಾ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Rotary Club Shivamogga ಶಿವಮೊಗ್ಗ ರೋಟರಿ ಸೆಂಟ್ರಲ್ ನಿಂದ ಕುಟುಂಬ ಮಿಲನ

0

Rotary Club Shivamogga ರೋಟರಿ ಕ್ಲಬ್, ಶಿವಮೊಗ್ಗ ಸೆಂಟ್ರಲ್ ನಿಂದ ಕುಟುಂಬ ಮಿಲನ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ನಯಾಬ ಸುಬೇದಾರ್ ಪ್ರಕಾಶ್ ರವರನ್ನು ಸನ್ಮಾನಿಸಲಾಯಿತು ಹಾಗೂ ಇತ್ತೀಚಿಗೆ ಕರ್ನಾಟಕ ವಾಣಿಜ್ಯ ರತ್ನ ಪ್ರಶಸ್ತಿ ಪಡೆದ ಶ್ರೀಮತಿ ಸಹಾನ ನಂದನ್ ಮೂರ್ತಿರವ ರಿಗೂ ಸನ್ಮಾನಿಸಲಾಯಿತು.. ಇದೇ ಸಂದರ್ಭದಲ್ಲಿ ಸೆಂಟ್ರಲ್ ಕ್ಲಬ್ಬಿನ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಮಾತನಾಡುತ್ತಾ ದೇಶವನ್ನು ಕಾದಂತ ಯೋಧರು ಹಾಗೂ ತ್ಯಾಗ ಬಲಿದಾನದಿಂದ ನಮ್ಮ ದೇಶವನ್ನ ಸಂರಕ್ಷಿಸಿದ ಯೋಧರು ಹಾಗೂ ಹೋರಾಟಗಾರರು ಸದಾ ಸ್ಮರಣೀಯರು. ಯೋಧರನ್ನು ಗೌರವಿಸಿದರೆ ದೇಶವನ್ನು ಗೌರವಿಸಿದ ಹಾಗೆ ಮತ್ತು ನಮ್ಮ ಮಕ್ಕಳಿಗೆ ಯುವಜನತೆಗೆ ದೇಶಭಕ್ತಿ ರಾಷ್ಟ್ರಪ್ರೇಮ ನಮ್ಮ ಇತಿಹಾಸದ ಅರಿವು ತುಂಬಾ ಅಗತ್ಯವಾಗಿ ಬೇಕಾಗಿದೆ.

Rotary Club Shivamogga ಇದೇ ಸಂದರ್ಭದಲ್ಲಿ ನಯ ಬಾ ಸುಬೇದಾರ್ ಪ್ರಕಾಶ್ ಅವರು ಮಾತನಾಡುತ್ತಾ ಸೇನೆಯಲ್ಲಿ ಸಲ್ಲಿಸಿದ ರೋಚಕ ಅನುಭವಗಳನ್ನು ತಿಳಿಸುತ್ತಾ ರೋಟರಿ ಸಂಸ್ಥೆಗೆ ಧನ್ಯವಾದ ತಿಳಿಸಿದರು ಕಾರ್ಯಕ್ರಮದಲ್ಲಿ ಡ್ರಾಮಾ ಗ್ರೂಪ್ ಸಾಂಗ್ ಏಕಪಾತ್ರ ಅಭಿನಯ ದೇಶಭಕ್ತಿ ಗೀತೆ ಮಕ್ಕಳಿಗೆ ಫ್ಯಾಶನ್ ಶೋ ಹಾಗೂ ಗಳಿಗೆ ರಸಪ್ರಶ್ನೆ ಕಾರ್ಯಕ್ರಮ ದಲ್ಲಿ ನಡೆಯಿತು ಪಿಡಿಜಿ ಪ್ರಕಾಶ್ ಪಾಸ್ಟ್ ಅಸಿಸ್ಟೆಂಟ್ ಗವರ್ನರ್ ಗಳಾದ ರವಿ ಕೊಠಜಿ. ಚುಡ ಮಣಿ ಪವಾರ್.ಆನಂದ್.ಮತ್ತು ಕಾರ್ಯದರ್ಶಿ ಈಶ್ವರ್ ಖಜಾಂಚಿ ಬಸವರಾಜ್ ಬಲರಾಮ್ ರಮೇಶ್ ಸಂತೋಷ್ ಬಿ.ಏ ರಮನಾಥ್ ಗಿರಿ ಮಾಜಿ

ಸುರೇಖಾ ಮುರಳಿದರು ಅನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಜಗದೀಶ್ ಕಾರ್ಯದರ್ಶಿ ಶುಭಾ ಚಿದಾನಂದ ಮತ್ತು ಕ್ಲಬ್ಬಿನ ಎಲ್ಲಾ ರೋಟರಿ ಸದಸ್ಯರು ಹಾಗೂ ಅನ್ಸ್ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು