Shringeri Shree Sharadambe Devi ಕೂಡಲಿ ಶೃಂಗೇರಿ ಶಾಖಾ ಮಠದ ಶಾರದಾಂಬೆ ದೇವಿಗೆ ಮಾಡಿಸಿರುವ ಚಿನ್ನದ ಪಾದುಕೆಗಳು ಕಳುವಾಗಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಠದ ರಮೇಶ್ ಹುಲ್ಮನಿ ಎನ್ನುವವರು ದಾಖಲಿಸಿದ್ದಾರೆ.
ಕೂಡ್ಲಿ ಶ್ರೀಮಠದಲ್ಲಿ ಪರಂಪರಗತವಾಗಿ ಬಂದಿರುವ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಯು (ಒಂದು ದೊಡ್ಡ ವಿ ಮುದ್ರೆ, ಇನ್ನೊಂದು ಸಣ್ಣ ಮುದ್ರೆ ಜೊತೆಗೆ ಮನ್ನಾರಾಯಣ ಸ್ಮೃತಯ ಅನ್ನುವ ಬೆಳ್ಳಿಯ ಸೀಲು) ಸುರಕ್ಷಿತವಾಗಿ ಬಿರುವಿನಲ್ಲಿಡಲಾಗಿತ್ತು, ಆ.೮ ರಂದು ಮಠದ ಭಕ್ತರೋರ್ವರು ಪೂಜೆಗೆ ಪಾದುಕೆ ಬೇಕೆಂದು ಎಂದು ಬೀಗ ಕೇಳಿದಾಗ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳ ಬಳಿ ಇದ್ದ ಬೀಗವನ್ನು ಉಪಯೋಗಿಸಿ ತೆಗೆಯಲು ಹೋದಾಗ ಆ ಬೀಗ ತೆರೆಯಲು ಸಾಧ್ಯವಾಗಲಿಲ್ಲ.
ನಂತರ ಮಠದ ಅರ್ಚಕರು ಇದರ ಬೀಗದ ಕೈ ಇಲ್ಲಿ ಇದೆ ಎಂದು ತಂದು ಕೊಟ್ಟಿದ್ದರು. ತಾನು ಅದರಿಂದ ಬೀರುವನ್ನು ತೆಗೆದಾಗ ಸುವರ್ಣ ಪಾದುಕೆಯು ಇರಲಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.
Shringeri Shree Sharadambe Devi ಕಳೆದ ವರ್ಷ ಜುಲೈ ೨೩ ರಿಂದ ಮಠದ ಪೀಠಾಧಿಪತಿ ವಿದ್ಯಾಭಿನವರು ಹಿಂದಿನ ಚಾರ್ತುಮಾಸ ಹಾಗೂ ನಂತರ ದಿನಗಳಲ್ಲಿ ಅನಾರೋಗ್ಯದ ನಿಮಿತ್ತ ದಾವಣಗೆರೆಯ ಶಾಖಾ ಮಠದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ವಾಸವಾಗಿದ್ದರು. ಈ ನಡುವೆ ಸ್ವಾಮಿಗಳ ಖಾಸಗಿ ಉಪಯೋಗದ ದಾಸ್ತಾನು ಕೊಠಡಿ ಬೀಗವನ್ನು ಒಡೆದಿದ್ದು ತಿಳಿದು ಬಂದಿದ್ದರಿಂದ ಹುಲಮನಿಯವರು ಮಠಕ್ಕೆ ತೆರಳಿ ಬೇರೆ ಬೀಗವನ್ನು ಹಾಕಿದ್ದರು.
ಎಂಟು ತಿಂಗಳಿಂದ ಶ್ರೀಗಳು ಕೂಡ್ಲಿಮಠದಲ್ಲಿ ಇರದಿದ್ದರಿಂದ ಯಾವುದೇ ಆಗುಹೋಗು ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ನಂತರ ಚಾರ್ತುಮಾಸ ಕಾರ್ಯಕ್ರಮ ನಿಮಿತ್ತ ಜುಲೈ ೨೦ ರಂದು ಮಠಕ್ಕೆ ಬಂದು ವಾಸ್ತವ್ಯವಿದ್ದರು. ಆಗ ಶಾರದಂಬಾ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಲೆಕ್ಕ ಮಾಡಲಾಗಿತ್ತು. ಅಂದು ಬ್ಯಾಂಕಿಗೆ ಪಾವತಿ ಮಾಡುವ ಸಮಯ ಮೀರಿದ್ದರಿಂದ ಹಣವನ್ನು ಬೀರುವಿನಲ್ಲಿ ಇಡುವಂತೆ ಹೇಳಿ ತಮ್ಮ ಬಳಿ ಇದ್ದ ಬೀರುವಿನ ಬೀಗವನ್ನು ಪೀಠಾಧಿಪತಿ ಕೊಟ್ಟಿದ್ದರು.ಆದರೆ ಆ ಬೀಗದ ಕೈಯಿಂದ ಬೀರು ತೆಗೆಯಲು ಆಗಿಲ್ಲ ಎಂದಿದ್ದಾರೆ.
ಆಗ ಮಠದ ಆರ್ಚಕ ದತ್ತಾತ್ರಿ ಶಾಸ್ತ್ರಿ ಈ ಬೀಗದ ಕೈಯಿಂದ ಬೀರು ಬೀಗ ತೆಗೆಯಿರಿ ಎಂದು ತಮ್ಮ ಬಳಿ ಇದ್ದ ಬೀಗದ ಕೈಯನ್ನು ಕೊಟ್ಟರು. ಅದೇ ಬೀಗದ ಕೈಯಿಂದ ಬೀರು ಬೀಗ ತೆಗೆದು ಹಣ ಇಟ್ಟು ಬೀಗ ಹಾಕಲಾಗಿದೆ. ಆಗ ಶ್ರೀಗಳಿಗೆ ಸಂಶಯ ಬಂದು ಉಳಿದೆರಡು ಬೀರುವಿನ ಬೀಗವನ್ನು ತೆಗೆಸಿ ನೋಡಿದಾಗ ಬೀರುವಿನಲ್ಲಿಟ್ಟಿದ್ದ ಬಂಗಾರದ ಎರಡು ಪಾದುಕೆಗಳು ಕಾಣೆ ಆಗಿದ್ದು ಕಂಡು ಬಂದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಂತರ ಹುಡುಕಾಡಿದರೂ ಅವು ಸಿಕ್ಕಿಲ್ಲ. ಈ ಬಗ್ಗೆ ಗುರುಗಳೊಂದಿಗೆ ಚರ್ಚಿಸಿ ಕಾಣೆಯಾಗಿರುವ ಸುಮಾರು ಅಂದಾಜು ೧ ಕೆ.ಜಿ ತೂಕದ, ೫೦ ರಿಂದ ೬೦ ಲಕ್ಷ ಮೌಲ್ಯದ ಬಂಗಾರದ ಪಾದುಕೆಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Shringeri Shree Sharadambe Devi ಕೂಡಲಿ ಮಠದಲ್ಲಿ ಚಿನ್ನದ ಪಾದುಕೆ ಕಳವು, ಪ್ರಕರಣ ದಾಖಲು
Date: