Monday, June 23, 2025
Monday, June 23, 2025

ISRO Scientist ಭಾರತದಲ್ಲಿ ಹೆಣ್ಣುಮಕ್ಕಳು ವಿಜ್ಞಾನಕ್ಷೇತ್ರಕ್ಕೆ ಹೆಚ್ಚು ಬರಬೇಕು-ವಿಜ್ಞಾನಿ ಡಾ.ಕೆ.ಎಲ್.ಶಿವಾನಿ

Date:

ISRO Scientist ಕನ್ನಡ ಮಾಧ್ಯಮದಲ್ಲಿ ಓದಿದರೂ ಸಾಧನೆ ಮಾಡಲು ತೊಂದರೆಯಿಲ್ಲ ಎಂದು ಇಸ್ರೋ ವಿಜ್ಞಾನಿ ಡಾ.ಕೆ.ಎಲ್.ಶಿವಾನಿ ಹೇಳಿದರು.

ಬಹುಮುಖಿ ವತಿಯಿಂದ ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಚಂದ್ರಯಾನ 3ರ ಅನುಭವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿವಮೊಗ್ಗದ ಮಕ್ಕಳ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನ್ಯಾಷನಲ್ ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಜೆ.ಎನ್.ಎನ್.ಸಿ ಯಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಬಿ.ಇ.ಪದವಿ ಪಡೆದು ಇಸ್ರೋ ಸೇರಿಕೊಂಡೆ ಎಂದರು.

ಚಂದ್ರಯಾನ 3ರಲ್ಲಿ ಭಾಗವಹಿಸಿದಾಗ 20 ವರ್ಷ ಕೆಲಸದ ಅನುಭವ ಆಗಿತ್ತು.15 ಜನ ಇಂಜಿನಿಯರ್ ಗಳು ನನ್ನ ಕೈಕೆಳಗೆ ಸೇವೆ ಸಲ್ಲಿಸುತ್ತಿದ್ದರು. ಈ ಮದ್ಯೆ ನಾನು ಎಂಟೆಕ್ ಪದವಿ 42ನೇವಯಸ್ಸಿನಲ್ಲಿ ಪಡೆದುಕೊಂಡೆ.1993ರಿಂದ ಇಸ್ರೋ ದ ಹಿರಿಯ ವಿಜ್ಞಾನಿಯಾಗಿ ಉಪನಿರ್ದೇಶಕರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ 2 ವಿಫಲ ಆಗಿದ್ದರಿಂದ ತುಂಬಾ ದುಃಖವಾಯಿತು. ಅದನ್ನು ಮರೆಯುವ ಸಲುವಾಗಿ ಚಂದ್ರಯಾನ 3 ಪ್ರಾರಂಭಿಸಿ ದೇಹದ ನರದಂತೆ ಇರುವ ವೈಯರ್ ಗಳನ್ನು ನೋಡುತ್ತಾ ಪ್ರತಿ ಸೆಕೆಂಡಿಗೆ ಸಂದೇಶ ಕೊಡುತ್ತಾ ಕೊನೆಗೆ ಭೂಮಿ ದಾಟಿ ಸಂದೇಶ ಕೊಡುವಾಗ 12ಗಂಟೆಗಳ ಕಾಲ ಆಗುತ್ತಿತ್ತು.ಅಲ್ಲಿಂದ ಸಂದೇಶ ಬರುವಾಗ ಪುನಃ 12ಗಂಟೆ ಆಗುತ್ತಿತ್ತು.ಕೊನೆ ಹಂತದಲ್ಲಿ ಆಟೋಮ್ಯಾಟಿಕ್ ಆಗಿತ್ತು. ನಾವು ಇತರರ ಹಾಗೇ ಸುಮ್ಮನೆ ನೋಡುತ್ತಿದ್ದೆವು. ಕೊನೆಗೆ ಸಕ್ಸಸ್ ಆಯಿತು.
ಅತ್ಯಂತ ಚಿಕ್ಕ ಚಿಕ್ಕ ಕೆಲಸಗಾರರು ಕೂಡ ತಮ್ಮ ತಮ್ಮ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದರು.ಇದು ಸಂಪೂರ್ಣ ತಂಡದ ಕಾರ್ಯ ಎಂದರು.

ಈಗ ಪ್ರತಿ ಎರಡು ತಿಂಗಳಿಗೆ ಒಂದೊಂದು ಸೆಟ್ ಲೈಟ್ ಕಳುಹಿಸುತ್ತಿದ್ದೇವೆ.ನಮ್ಮ ಮನೆಯ ಕೆಲಸ ಎಂದು ತಿಳಿದು
ಎಲ್ಲರೂ ಕೆಲಸ ಮಾಡಿದ್ದೇವೆ.ಚಂದ್ರ 4ಲಕ್ಷ ಕಿ.ಮೀ.ದೂರದಲ್ಲಿದ್ದಾನೆ. ಎಷ್ಟೋ ವೇಳೆ ನಾವು ಬೆಳಿಗ್ಗೆ 6ಗಂಟೆಗೆ ಎದ್ದು ಕೆಲಸಕ್ಕೆ ಹೋದರೆ ರಾತ್ರಿ 12ಗಂಟೆಗೆ ಬಂದಿದ್ದು ಇದೆ. ಇಸ್ರೋ ಮತ್ತು ಅಮೆರಿಕದ ನ್ಯಾಸದ ಉತ್ತಮ ಬಾಂಧವ್ಯ ಇದೆ. ನಾವು ಅವರಿಗೆ ಅವರು ನಮಗೆ ಸಹಾಯ ಮಾಡುತ್ತಿದ್ದಾರೆ ಎಂದರು.

ISRO Scientist ಭಾರತದಲ್ಲಿ ಹೆಣ್ಣು ಮಕ್ಕಳು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಬರಬೇಕು. ಇಸ್ರೋದಲ್ಲಿ ಎಲ್ಲಾ ರೀತಿಯ ವಿಜ್ಞಾನ ಓದಿದ ಮತ್ತು ಗಣಿತ ಓದಿದ ವ್ಯಕ್ತಿಗಳಿಗೂ ಅವಕಾಶವಿದೆ. ಈಗ 20,000 ಜನ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಸಮರ್ಪಣ ಭಾವದಲ್ಲೀ
ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಹುಮುಖಿಯ ಡಾ.ನಾಗಭೂಷಣ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...