Akhil Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರತೀ ವರ್ಷ ಸಾಹಿತ್ಯದ ಹಿರಿಯ ಸಾಧಕರಿಗೆ “ಆದಿಕವಿ ಪ್ರಶಸ್ತಿ”ಯನ್ನೂ ಕಿರಿಯ ಸಾಧಕರಿಗೆ “ವಾಗ್ದೇವಿ ಪ್ರಶಸ್ತಿ”ಯನ್ನೂ ಪ್ರದಾನಿಸುತ್ತಿರುವುದು ತಮ್ಮ ಗಮನದಲ್ಲಿ ಇದ್ದೇ ಇದೆ. ಹಾಗೆಯೇ ಸಂಸ್ಕೃತ ಕ್ಷೇತ್ರದ ಸಾಧಕರನ್ನೂ ಸಮ್ಮಾನಿಸುತ್ತಿದೆ. ಈ ಮೂರೂ ಪ್ರಶಸ್ತಿ – ಸಮ್ಮಾನಗಳು ಒಂದು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತವೆ. ಇದರ ಆಯ್ಕೆ ಪ್ರಕ್ರಿಯೆಗೆ ಪೂರಕವಾಗಿ ಈ ಹಿಂದೆ ನಮ್ಮ ನಮ್ಮ ಜಿಲ್ಲೆಯ/ವಿಭಾಗದ ವ್ಯಾಪ್ತಿಯಲ್ಲಿ ಇರುವ ಸಾಧಕರನ್ನು ಗುರುತಿಸಿ ಅವರ ಸಮಗ್ರ ವಿವರಗಳನ್ನು ಕಳಿಸುತ್ತಾ ಬಂದಿರುವಿರಿ.
ಈ ವರ್ಷ ಸಾಧಕರನ್ನು ಗುರುತಿಸುವ ಮತ್ತು ಆಯ್ಕೆ ಮಾಡುವ ಪ್ರಕ್ರಿಯೆ ಆಗಬೇಕಿದೆ. ಈ ಬಾರಿಯೂ ಇವುಗಳಿಗೆ ಸಂಬಂಧಿಸಿದ ಈವರೆಗಿನ ವಿವರಗಳನ್ನು ೨೦೨೪ ಸೆಪ್ಟೆಂಬರ್ ೧೦ರೊಳಗೆ ಕಳಿಸಿಕೊಡಬೇಕಾಗಿ ಮನವಿ.
Akhil Bharatiya Sahitya Parishad ಹಾಗೆಯೇ ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮವೂ ಈ ಬಾರಿ ೨೦೨೪ ನವೆಂಬರ್ ೧೦ ರಂದು ಕಲ್ಲಡ್ಕದ ಶ್ರೀರಾಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಅದಕ್ಕಾಗಿ ರಾಜ್ಯದಲ್ಲಿ ಇರುವ ಅನುದಾನರಹಿತ, ರಾಷ್ಟ್ರೀಯ ವಿಚಾರಧಾರೆಯಲ್ಲಿ ಕೆಲಸ ಮಾಡುವ, ನಮ್ಮ ಸಂಸ್ಕೃತಿ – ಪರಂಪರೆಗಳನ್ನು ಅನುಸರಿಸುವ ಕನ್ನಡ ಶಾಲೆಗಳನ್ನು ಗುರುತಿಸಬೇಕು. ನಮ್ಮ ನಮ್ಮ ಜಿಲ್ಲೆಗಳಲ್ಲಿ ಇರುವ ಇಂತಹ ಕನ್ನಡ ಶಾಲೆಗಳ ವಿವರಗಳನ್ನೂ ಸೆಪ್ಟೆಂಬರ್ ೧ರೊಳಗೆ ಕಳಿಸಿದರೆ ಅನುಕೂಲ.
ಎರಡೂ ವಿವರಗಳನ್ನು ಪ್ರಾಂತ ಜಾಲತಾಣ ಪ್ರಮುಖರಾದ ಶ್ರೀ ಗಣೇಶ ಅಡಿಗರಿಗೆ ಕಳಿಸಬೇಕು.
(ಗಣೇಶ ಅಡಿಗ +919036178263)