Wednesday, April 1, 2026
Wednesday, April 1, 2026
Home Blog Page 592

Raghavendra Swamy ಭರಮಸಾಗರದಲ್ಲಿ ಶ್ರೀರಾಯರ ಆರಾಧನೆ

0

Raghavendra Swamy ಪ್ರತಿ ವರ್ಷದಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ದಿನಾಂಕ 20-8-2024 ರಿಂದ 22-8-2023. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ ಐದನೇಯ ಮಂತ್ರಾಲಯ ಭರಮಸಾಗರದಲ್ಲಿ ಆರಾಧನೆ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.

ದಿನಾಂಕ 20-8-2024 ರಂದು ಶ್ರೀ ಗುರು ರಾಯರ ಆರಾಧನಾ ಕಳಸ ಸ್ಥಾಪನೆ, ಪೂರ್ವಾರಾಧನೆ ಪೂಜಾಕಲಾಪಗಳು, ಪಂಚಾಮೃತಾಬಿಷೇಕ, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಸ್ಥಳೀಯ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಿನಾಂಕ 21-8-2024 ರಂದು ಮಧ್ಯಆರಾಧನೆ , ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ರುದ್ದರಾಭಿಷೇಕ, ನೂತನ ವಸ್ರ್ರಾಧಾರಣೆ, ಗುರುಬಿಕ್ಷ, ಗುರು ಪಾದಕೆ ಪೂಜೆ, ಪುಷ್ಪ ಅಲಂಕಾರ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ. ಮಧ್ಯ ಆರಾಧನಾ ಪೂಜಾಕಲಾಪಗಳು, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಗುರುದರ್ಶನದ ಭಕ್ತರಿಂದ ಭಕ್ತಿ ಸಂಗೀತ ಮತ್ತು ಭಜನೆ ಆಯೋಜಿಸಲಾಗಿತ್ತು.

ದಿನಾಂಕ 22-08-2024 ರಂದು ಗುರುವಾರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ತರರಾಧನೆ ವಿಶೇಷವಾಗಿ ಶ್ರೀ ರಾಯರ ಬೃಂದಾವನ ಕ್ಕೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ ಭಕ್ತ ಮಹಿಳೆಯರಿಂದ ಸುಮಂಗಲಿ ಪೂಜೆ, ಅರಿಷಿಣ ಕುಂಕುಮ ಸಮರ್ಪಣೆ, ಶ್ರೀ ಸತ್ಯನಾರಾಯಣ ಪೂಜೆ, ಸರ್ವ ಸಮರೋಪನೋತ್ಸವ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ, ಪ್ರಸಾದ ವಿತರಣೆ. ನೆರವೇರಿತು. ಸಂಜೆ ಭರಮಸಾಗರದ ಸಾಯಿ ಭಕ್ತ ಮಂಡಲಿಯ ಸದಸ್ಯರಿಂದ ಸಾಯಿ ಭಜನೆ ಕಾರ್ಯಕ್ರಮ ಭಕ್ತರಿಂದ ಭಕ್ತಿ ಗೀತೆಗಳು, ಗುರು ಭಜನೆ ಮತ್ತು ಮಂಗಳಾರತಿ ಲಾಲಿ ಸೇವೆಯನ್ನು ನೆರವೇರಿಸಲಾಯಿತು.

Raghavendra Swamy ಭರಮಸಾಗರದ ರಾಯರ ವಿಶ್ರಾಂತಿ ಗೃಹ ಕ್ಕೆ ಜಾತಿಬೇದವಿಲ್ಲದೆ ನಂಬಿ ಬಂದ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಂತೆ ಕಾರ್ಯಕ್ರಮದಲ್ಲಿ ಹಾಜರಾಗಿ ಆಶೀರ್ವಾದ ಪಡೆದರು.

ಮುರುಳಿಧರ್ ನಾಡಿಗೇರ್

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ , ಐದನೇಯ ಮಂತ್ರಾಲಯ. ಭರಮಸಾಗರ
ಚಿತ್ರದುರ್ಗ ತಾ ಮತ್ತು ಜಿಲ್ಲೆ

Population Census ಜನಗಣತಿ ಪ್ರಕ್ರಿಯೆ ಸೆಪ್ಟೆಂಬರ್ ನಲ್ಲಿ ಆರಂಭವಾಗುವ ನಿರೀಕ್ಷೆ

0

Population Census ತನ್ನ ದೀರ್ಘಾವಧಿಯ ವಿಳಂಬದ ಬಳಿಕ ಕೇಂದ್ರ ಸರ್ಕಾರವು ಜನಸಂಖ್ಯಾ ಗಣತಿಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, 2021 ರಲ್ಲಿ ಜನಗಣತಿ ಪೂರ್ಣಗೊಳ್ಳಬೇಕಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದಶವಾರ್ಷಿಕ ಜನಗಣತಿ ವಿಳಂಬವಾಗಿತ್ತು. ತಾಂತ್ರಿಕ ಮತ್ತು ವ್ಯವಸ್ಥಾಪನಾ ಅಡೆತಡೆಗಳಿಂದಾಗಿ ಅದನ್ನು ಮತ್ತಷ್ಟು ಮುಂದಕ್ಕೆ ತಳ್ಳಲಾಯಿತು.
ಹೊಸ ಸಮೀಕ್ಷೆಯು ಮುಂದಿನ ತಿಂಗಳು ಪ್ರಾರಂಭವಾದ ನಂತರ ಪೂರ್ಣಗೊಳ್ಳಲು ಸುಮಾರು 18 ತಿಂಗಳುಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಈ ವಿಷಯದಲ್ಲಿ ನೇರವಾಗಿ ಭಾಗಿಯಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Population Census ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿಯ ಪ್ರಕಾರ, ಪ್ರಕ್ರಿಯೆಯು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಿಂದ ಅಂತಿಮ ಅನುಮೋದನೆಗೆ ಕಾಯುತ್ತಿದೆ. ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ), ಜನಗಣತಿಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ, ಜೊತೆಗೆ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಕೈಜೋಡಿಸಲಿದೆ. ಮಾರ್ಚ್ 2026 ರೊಳಗೆ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಗುರಿಯೊಂದಿಗೆ ಟೈಮ್‌ಲೈನ್ ಅನ್ನು ಸ್ಥಾಪಿಸಿದೆ.
2011 ರಲ್ಲಿ ನಡೆದ ಕೊನೆಯ ಜನಗಣತಿಯ ಆಧಾರದ ಮೇಲೆ ಭಾರತದ ಜನಸಂಖ್ಯೆಯು 121.1 ಕೋಟಿ ಆಗಿತ್ತು. ಆಗ ಮತ್ತು ಇಂದಿನ ನಡುವೆ, ವಿಶ್ವಸಂಸ್ಥೆಯು ಏಪ್ರಿಲ್ 2023 ರ ವರದಿಯಲ್ಲಿ ಭಾರತವು ಮೊದಲ ಬಾರಿಗೆ ಚೀನಾವನ್ನು ಮೀರಿಸಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ, ಅಂದಾಜು 142 ಕೋಟಿ (1,425,775,850) ಜನಸಂಖ್ಯೆಯನ್ನು ಹೊಂದಿದೆ.
ಡೆಕಾನಿಯಲ್ ಜನಗಣತಿಯು ಜನಸಂಖ್ಯಾಶಾಸ್ತ್ರ, ಆರ್ಥಿಕ ಚಟುವಟಿಕೆಗಳು, ಸಾಕ್ಷರತೆ ಮತ್ತು ವಸತಿ ಸೇರಿದಂತೆ ವಿವರವಾದ ಜನಸಂಖ್ಯೆಯ ಡೇಟಾವನ್ನು ಸಂಗ್ರಹಿಸಲು ಒಂದು ನಿರ್ಣಾಯಕ ಸಾಧನವಾಗಿದೆ. ಈ ಡೇಟಾವು ಸರ್ಕಾರದ ಯೋಜನೆ, ನೀತಿ ನಿರೂಪಣೆ ಮತ್ತು ದೇಶಾದ್ಯಂತ ಸಂಪನ್ಮೂಲಗಳು ಮತ್ತು ಸೇವೆಗಳ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅವಶ್ಯಕವಾಗಿದೆ.
ಜನಗಣತಿಯು ಪ್ರಾದೇಶಿಕ ಅಸಮಾನತೆಗಳ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಅಭಿವೃದ್ಧಿಯ ಪ್ರಗತಿಯನ್ನು ಟ್ರ್ಯಾಕ್ ಮಾಡುತ್ತದೆ, ಇದು ಪರಿಣಾಮಕಾರಿ ಆಡಳಿತ ಮತ್ತು ಸಮಾನ ಬೆಳವಣಿಗೆಗೆ ಪ್ರಮುಖವಾಗಿದೆ.
ಇತ್ತೀಚಿನ ಜನಗಣತಿಯಲ್ಲಿನ ವಿಳಂಬವು ಟೀಕೆಗೆ ಗುರಿಯಾಗಿದೆ, ಇದು ಆರ್ಥಿಕ ದತ್ತಾಂಶ, ಹಣದುಬ್ಬರ ಮತ್ತು ಉದ್ಯೋಗದ ಮೇಲಿನ ಪ್ರಮುಖ ಅಂಕಿಅಂಶಗಳ ಸಮೀಕ್ಷೆಗಳ ನಿಖರತೆಯನ್ನು ದುರ್ಬಲಗೊಳಿಸುತ್ತದೆ ಎಂಬ ಕಳವಳವನ್ನು ಹೊಂದಿದೆ. ಜನಗಣತಿಯು ದೀರ್ಘ ಅವಧಿಯ ನಂತರ, ಕೇಂದ್ರ ಸರ್ಕಾರವು ಹಳತಾದ 2011 ದತ್ತಾಂಶವನ್ನು ಅವಲಂಬಿಸಬೇಕಾಯಿತು, ಪ್ರಮುಖ ಆರ್ಥಿಕ ಸೂಚಕಗಳ ಗುಣಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಮಾಡುವುದನ್ನು ತಡೆಯುತ್ತದೆ.
ಈ ಮಧ್ಯೆ, ಜಾತಿ ಆಧಾರಿತ ಜನಗಣತಿಗೆ ಹೆಚ್ಚುತ್ತಿರುವ ಬೇಡಿಕೆಗಳ ನಡುವೆ ಸಂಭಾವ್ಯ ಜನಗಣತಿ ಪ್ರಕಟಣೆ ಬಂದಿದೆ, ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ಭರವಸೆಯಾಗಿ ಪ್ರತಿಪಕ್ಷಗಳು ಈ ವಿಷಯವನ್ನು ಎತ್ತಿ ತೋರಿಸಿವೆ.

CM Siddharamaih ಕಾಂಗ್ರೆಸ್ ನಡೆ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

0

CM Siddharamaih ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವರು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯವೆಸಗಿದ್ದಾರೆ. ರಾಜ್ಯಪಾಲರು ಭಾರತದ ರಾಷ್ಟ್ರಪತಿಯವರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆ ಹೊರತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು.

CM Siddharamaih ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮೇಲಿನ ತನಿಖೆಗಾಗಿ ರಾಜ್ಯಪಾಲರ ಬಳಿ ಲೋಕಾಯುಕ್ತದವರು ಮನವಿ ಮಾಡಿದ್ದಾರೆ. ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ನಲ್ಲಿ ನಡೆದ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದವರು 23-11-2023 ರಂದು ಅನುಮತಿ ಕೋರಿದ್ದು, ಆ ಬಗ್ಗೆ ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ಲೋಕಾಯುಕ್ತದವರು ಮತ್ತೊಮ್ಮೆ ಕೋರಿದ್ದಾರೆ. ಆದರೆ 26-07-2024 ರಂದು ಅಬ್ರಾಹಂರವರು ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇಂತಹ ತಾರತಮ್ಯವೇಕೆ?

ಶ್ರೀಮತಿ ಶಶಿಕಲಾ ಜೊಲ್ಲೆ, ಹೆಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿನವರ ಮೇಲೆ ಆರೋಪಗಳಿದ್ದು, ಇದುವರೆಗೆ ತನಿಖೆಗೆ ಆದೇಶಿಸಿರುವುದಿಲ್ಲ. ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದ್ದು, ಅವರ ಮೇಲೆ ಗೌರವವಿದೆ. ಆದರೆ ರಾಜ್ಯಪಾಲರು ತಾರತಮ್ಯ ಧೋರಣೆ ಅನುಸರಿಸಬಾರದು.

VISL Mine Society ಪಡಿತರದಾರರಿಗೆ ಸೇವಾನ್ಯೂನತೆ. ವಿಐ ಎಸ್ ಎಲ್ ಸೊಸೈಟಿ ಅಮಾನತು

0

VISL Mine Society ನ್ಯೂಟೌನ್ ಉಂಬ್ಳೇಬೈಲು ರಸ್ತೆಯಲ್ಲಿರುವ ವಿಐಎಸ್‌ಎಲ್ ಮೈನ್ ಸೊಸೈಟಿಯಲ್ಲಿ ಬಡವರಿಗೆ ನೀಡುವ ಪಡಿತರ26.47ಕ್ವಿಂಟಾಲ್ ಅಕ್ಕಿ ದಾಸ್ತಾನಿಲ್ಲದೆ ಕಡಿಮೆ ಇದ್ದುದ್ದನ್ನು ಆಹಾರ ಇಲಾಖಾಧಿಕಾರಿಗಳು ಪರಿಶೀಲಿಸಿ ಪತ್ತೆ ಹಚ್ಚಿ ಸೊಸೈಟಿಯನ್ನು ಅಮಾನತು ಮಾಡಿ ಕ್ರಮಕೈಗೊಂಡಿದ್ದಾರೆ.
ಆಹಾರ ಇಲಾಖೆಯ ನಿರೀಕ್ಷಕರು ಪರಿಶೀಲನೆ ಮಾಡಲಾಗಿ ಸೊಸೈಟಿಯಲ್ಲಿ ಇರಬೇಕಾಗಿದ್ದ 29.97 ಕ್ವಿಂಟಾಲ್ ಪಡಿತರ ಅಕ್ಕಿಯ ಬದಲು 3.50 ಕ್ವಿಂಟಾಲ್ ಮಾತ್ರ ಇದ್ದಿದ್ದನ್ನು ದಾಖಲಿಸಿಕೊಂಡು ಉಳಿಕೆ ೨೬.೪೭ ಕ್ವಿಂಟಾಲ್ ಇರಲಿಲ್ಲವೆಂದು ಮೇಲಾಧಿಕಾರಿಗಳಿಗೆ ಸಹಾಯಕ ನಿರ್ದೇಶಕರು ನೀಡಿದ ವರದಿ ಆಧರಿಸಿ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರು ತಕ್ಷಣದಿಂದ ಜಾರಿಗೆ ಬರುವಂತೆ ಸೊಸೈಟಿಯನ್ನು ಅಮಾನತು ಮಾಡಿದ್ದಾರೆ.
VISL Mine Society ಸೊಸೈಟಿಯಲ್ಲಿರುವ 250 ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಟಿ.ಕೆ.ರಸ್ತೆಯ ಎಂ.ಎಂ.ಕಾಂಪೌಂಡ್ ಪಿಸಿಸಿಎಸ್ ಸೊಸೈಟಿಗೆ ಅಟ್ಯಾಚ್ ಮಾಡಿ ಆದೇಶಿಸಿದ್ದಾರೆ. ಪಿಸಿಸಿಎಸ್ ಸೊಸೈಟಿಯ ಕಾರ್ಯದರ್ಶಿ ಪಡಿತರ ಚೀಟಿದಾರರಿಗೆ ಅನುಕೂಲ ಕಲ್ಪಿಸಲು ಅಮಾನತ್ತುಗೊಂಡ ಸೊಸೈಟಿ ಸಮೀಪ ನ್ಯೂಟೌನ್ ಪೊಲೀಸ್ ಠಾಣೆ ಮುಂಭಾಗದ ಸಿದ್ದಲಿಂಗಯ್ಯ ಅವರ ಕಟ್ಟಡದಲ್ಲಿ ವಿಐಎಸ್‌ಎಲ್ ಮೈನ್ ಸೊಸೈಟಿಯ ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತಿತರೆ ಪಡಿತರ ನೀಡಲಾಗುತ್ತಿದೆ. ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸೊಸೈಟಿಯ ಕಾರ್ಯದರ್ಶಿ ತಿಳಿಸಿದ್ದಾರೆ.

Ambedkar Residential School “ಹೆತ್ತಾಕೆಯ ಹೆಸರಿನಲ್ಲಿ ಒಂದು ಸಸಿ” ನೆಟ್ಟ ವಿನೂತನ ಕಾರ್ಯಕ್ರಮ

0

Ambedkar Residential School ಕೋಡೂರು ಗ್ರಾಪಂ ವ್ಯಾಪ್ತಿಯ ಯಳಗಲ್ಲು ಅಂಬೇಡ್ಕರ್ ವಸತಿ ಶಾಲೆಯ ಆವರಣದಲ್ಲಿ ಕೋಡೂರು ಗ್ರಾಪಂ ಆಯೋಜಿಸಿದ್ದ ’ತಾಯಿಯ ಹೆಸರಿನಲ್ಲಿ ಒಂದು ಗಿಡ’ ಎಂಬ ವನ ಮಹೋತ್ಸವ ಕಾರ್ಯಕ್ರಮ ಗ್ರಾಪಂ ಸದಸ್ಯರು ಸಸಿಗಳನ್ನು ನೆಡುವ ಮೂಲಕ ನಡೆಸಲಾಯಿತು.
Ambedkar Residential School ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಉಮೇಶ್ ಕೆ.ಎಸ್., ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಜಯಪ್ರಕಾಶ್, ಯೋಗೇಂದ್ರಪ್ಪ, ಶೇಖರಪ್ಪ, ಮಂಜಪ್ಪ, ಅನ್ನಪೂರ್ಣ, ಶ್ಯಾಮಲಾ, ಸವಿತಾ, ಪಿಡಿಒ ನಾಗರಾಜ್, ಗ್ರಾಪಂ ಸಿಬ್ಬಂದಿಗಳು, ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

Forest Area ಗಾಡ್ಗಿಳ್ ವರದಿ ಅನುಷ್ಠಾನಕ್ಕೆ ಆಗ್ರಹ

0

Forest Area ಕೇರಳದ ವೈನಾಡಿನಲ್ಲಿ ನಡೆದ ಭೀಕರ ದುರಂತದ ಹಿನ್ನಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಗತೀಕ ಮಹತ್ವವನ್ನು ಅರಿತು ಪರಿಸರ ರಕ್ಷಣೆಗಾಗಿ ಪ್ರೊ. ಮಾಧವ್ ಗಾಡ್ಗೀಳ್ ಸಮಿತಿ 2011ರಲ್ಲಿ ಸಲ್ಲಿಸಿದ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಇತ್ತೀಚೆಗೆ ಕೇರಳದಲ್ಲಿ ನಡೆದ ದುರಂತದಲ್ಲಿ ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ಅಪಾರ ಪ್ರಮಾಣದ ಜೀವ, ಆಸ್ತಿ ಪಾಸ್ತಿ ನಷ್ಟವಾಯಿತು. ಅದೇ ರೀತಿ ಉತ್ತರ ಭಾರತದ ಹಿಮಾಚಲ ಪ್ರದೇಶ ಮತ್ತು ಉತ್ತರಖಾಂಡದಲ್ಲೂ ಹಲವು ಭೂ ಕುಸಿತಗಳಾಗಿವೆ. ಇದಕ್ಕೆ ಕಾರಣ ಪ್ರಕೃತಿಯ ಮೇಲೆ ಮಾನವನ ಅತಿಯಾದ ದಬ್ಬಾಳಿಕೆ, ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್ ಹೋಂ ಸ್ಟೇ, ಹೋಟೆಲ್‌ಗಳ ಅಕ್ರಮ ನಿರ್ಮಾಣ, ರಸ್ತೆ ಅಗಲೀಕರಣಕ್ಕಾಗಿ ಮರಗಳ ಕಡಿತ, ರಸ್ತೆ, ರೈಲು ದಾರಿ, ವಿದ್ಯುತ್ ಲೈನ್ ಮಾತ್ರವಲ್ಲ, ಮನೆ, ಕಾರ್ಖಾನೆ ಇತ್ಯಾದಿ ಎಲ್ಲಾ ಕಾಮಗಾರಿಗಳಿಗೂ ಅವಿರತವಾಗಿ ಬುಲ್ಡೋಜರಗಳ ಎಣೆಯಿಲ್ಲದ ಬಳಕೆ, ನೀರಿನ ಸಹಾಯವಾದ Forest Area ಅರಿವಿಕೆಗೆ ತಡೆ, ಜೀವ ವೈವಿಧ್ಯವುಳ್ಳ ಅರಣ್ಯ ಪ್ರದೇಶದಲ್ಲಿ ಏಕ ಬೆಳೆಯ ನೆಡುತೋಪುಗಳು ಇವೆಲ್ಲವೂ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭೂ ಕುಸಿತ ಹಾಗೂ ಮಣ್ಣಿನ ಸವಳಕಳಿಗಳಿಗೆ ಕಾರಣವಾಗಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪಶ್ಚಿಮ ಘಟ್ಟ ಪ್ರಾಧಿಕಾರ ರಚಿಸುವುದು, ಸೂಕ್ಷ್ಮ ಪರಿಸರ ವಲಯ ಘೋಷಿಸುವುದು, ಪರಿಸರ ಪರಿಣಾಮ ಅಧ್ಯಯನವನ್ನು ಬಲಪಡಿಸುವುದು, ಸುಸ್ಥಿರ ಕೃಷಿ ಮತ್ತು ವನೀಕರಣವನ್ನು ಪ್ರೋ ಪ್ರಕೃತಿ ಸಂರಕ್ಷಣೆಗೆ ನಿಧಿ ಕಾಯ್ದಿರಿಸುವುದು, ಪರಿಸರ ಸ್ನೇಹಿ ಪ್ರವಾಸೋಧ್ಯಮಕ್ಕೆ ಮಾರ್ಗಸೂಚಿ ತಯಾರಿಸುವುದು, ಪವಿತ್ರಬನಗಳನ್ನು ಮತ್ತು ಪಾರಂಪರಿಕ ಜನವನ್ನು ರಕ್ಷಿಸುವುದು ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರತಿ ಪಂಚಾಯಿತಿ, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಪಡೆಯನ್ನು ರಚಿಸಿ ದಾಖಲಾತಿ ಮಾಡಬೇಕು. ರಾಜಕೀಯೇತರ ತಜ್ಞರನ್ನು ಉಸ್ತುವಾರಿಗಳನ್ನಾಗಿ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಶೇಖರ್ ಗೌಳೇರ್, ಎನ್.ಗೋಪಿನಾಥ್, ವಸಂತ ಹೋಬಳಿದಾರ್, ನವ್ಯಶ್ರೀ ನಾಗೇಶ್, ಪರಿಸರ ನಾಗರಾಜ್, ಗುರುದತ್ತ್, ಗೀತಾ, ಶರವಣ ಸಿ.ಎಂ., ಎಸ್.ಬಿ.ಅಶೋಕ್‌ಕುಮಾರ್, ಆರ್.ಎನ್. ಸ್ವಾಮಿ ಮೊದಲಾದವರು ಇದ್ದರು.

DC Shivamogga ಬಾಲ್ಯ ವಿವಾಹಗಳ ಬಗ್ಗೆ ಹೆಚ್ಚು ದೂರುಗಳನ್ನ ದಾಖಲಿಸಿ- ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ವಿರುದ್ದ ಹೆಚ್ಚೆಚ್ಚು ಪ್ರಕರಣಗಳನ್ನು ದಾಖಲಿಸಬೇಕು ಹಾಗೂ ಅರಿವನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಏಪ್ರಿಲ್ ಮಾಹೆಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ ೪೩ ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಲ್ಲಿ ೧೯ ಮತ್ತು ಭದ್ರಾವತಿ ೧೨ ಸಂಖ್ಯೆಯಲ್ಲಿದ್ದು ಈ ಎರಡು ತಾಲ್ಲೂಕುಗಳಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳಿವೆ. ಹೆಚ್ಚಿನ ಪ್ರಕರಣ ದಾಖಲಾಗಿರುವೆಡೆ ಸಮುದಾಯದಲ್ಲಿ ಸೇವೆ ಸಲ್ಲಿಸಿರುವ ಮುಖಂಡರ ಮುಂದಾಳತ್ವದಲ್ಲಿ, ಅವರನ್ನೊಳಗೊಂಡು ಆ ಪ್ರದೇಶದಲ್ಲಿ ಪರಿಣಾಮಕಾರಿ ಅರಿವು ಕಾರ್ಯಕ್ರಮ ಕೈಗೊಳ್ಳಬೇಕು ಹಾಗೂ ಬಾಲ್ಯ ವಿವಾಹ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಾಗೂ ೨೦೨೨-೨೩ ನೇ ಸಾಲಿನಲ್ಲಿ ಒಟ್ಟು ೨೪೭ ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದ್ದು, ಇದನ್ನು ತಡೆಯಲು ಸಿಡಿಪಿಓ ಗಳು ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಅರಿವು ಕಾರ್ಯಕ್ರಮ ಮಾಡುವುದರೊಂದಿಗೆ ಪೋಷಕರಿಗೆ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅನಧಿಕೃತ ಸ್ಪಾ ಗಳ ವಿರುದ್ದ ಕ್ರಮ :
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸ್ಪಾ ಗಳ ಸಂಖ್ಯೆ ಹೆಚ್ಚುತ್ತಿದ್ದು ಇಲ್ಲಿ ವೇಶ್ಯಾವಾಟಿಕೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದರು.

DC Shivamogga ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸ್ಪಾಗಳು ಪಾಲಿಕೆ ಮತ್ತು ಎಸ್‌ಪಿ ಕಚೇರಿಯಿಂದ ಪರವಾನಗಿ ಮತ್ತು ಅನುಮತಿ ಪಡೆಯಬೇಕು. ಪರವಾನಗಿ ಪಡೆಯದೇ ಹಾಗೂ ನಿಯಮಗಳನ್ನು ಅನುಸರಿಸದೇ ಅನಧಿಕೃತವಾಗಿ ನಡೆಸುತ್ತಿರುವ ಸ್ಪಾಗಳ ಮೇಲೆ ದಾಳಿ ನಡೆಸಿ, ಮುಚ್ಚಲು ಕ್ರಮ ವಹಿಸಲಾಗುವುದು. ದಾಳಿ ವೇಳೆ ಸಿಡಿಪಿಓ ಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಯವರು ಸಹ ಹಾಜರಾಗಬೇಕು. ಹಾಗೂ ನಿಯಮಿತವಾಗಿ ಸ್ಪಾಗಳ ಚಟುವಟಿಕೆ ಬಗ್ಗೆ ಪರಿಶೀಲಿಸುತ್ತಿರುಬೇಕು ಎಂದು ತಿಳಿಸಿದೆ.

Department of Cooperation ಆಗಸ್ಟ್ 26 ರಂದು ಶಿವಮೊಗ್ಗದಲ್ಲಿ ಪ್ರಬಂಧ ರಚನಾ ಸ್ಪರ್ಧೆ

0

Department of Cooperation ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಪದವಿಪೂರ್ವ ಕಾಲೇಜು, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಶಿವಮೊಗ್ಗ, ಸಹಕಾರ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 26 ರಂದು ಸರ್ಕಾರಿ ಪದವಿಪೂರ್ವ ಕಾಲೇಜು, ಮೀನಾಕ್ಷಿ ಭವನ ಎದರು, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇದರ ಉಪನ್ಯಾಸ ಕೊಠಡಿಯಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಬಂಧಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ.

Department of Cooperation ಜಿಲ್ಲಾ ಮಟ್ಟದ ಪ್ರಬಂಧಸ್ಪರ್ಧೆಯ ವಿಷಯ, ಶಾಲಾ-ಕಾಲೇಜುಗಳ ಪಠ್ಯವಿಷಯಗಳಲ್ಲಿ ಸಹಕಾರ ವಿಷಯ ಅಳವಡಿಕೆ(ಇಂಟ್ರಡಕ್ಷನ್ ಆಫ್ ಸಬ್‌ಜೆಕ್ಟ್ ಆನ್ ಕೋಆಪರೇಷನ್ ಇನ್ ಸಿಲ್ಲಬಸ್ ಆಫ್ ಸ್ಕೂಲ್ ಆಂಡ್ ಕಾಲೇಜಸ್) ಹಾಗೂ ಚರ್ಚಸ್ಪರ್ಧಾ ವಿಷಯವಾಗಿ, ಯುವನಾಯಕತ್ವದಿಂದ ಮಾತ್ರವೇ ಸಹಕಾರಿ ವ್ಯವಸ್ಥೆ ಬಲಾಡ್ಯಗೊಳ್ಳಬಲ್ಲದು(ಯಂಗ್ ಲೀಡರ್‌ಶಿಪ್ ಕ್ಯಾನ್ ಓನ್ಲಿ ಸ್ಟೆçಂಥೆನ್ ದಿ ಕೋಆಪರೇಟಿವ್ ಮೂವ್‌ಮೆಂಟ್) ಎಂಬ ವಿಷಯವಾಗಿ ಸ್ಪರ್ಧೆಯನ್ನು ಜರುಗಿಸಿ ಅದೇ ದಿನ ಮಧ್ಯಾಹ್ನ 03-00 ಗಂಟೆಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

Agnipath Yojana ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ಸಂಬಂಧಿಸಿದ ದೈಹಿಕ ಕ್ಷಮತೆ & ವೈದ್ಯಕೀಯ ಪರೀಕ್ಷೆಗಳು ಆ.31 ರವರೆಗೆ ಆಯೋಜನೆ

0

Agnipath Yojana ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಕ್ಷಮತಾ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಆಗಸ್ಟ್ ೨೨ರಿಂದ ೩೧ರವರೆಗೆ ನಗರದ ನೆಹರೂ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಕರ್ನಲ್ ಕೃಷ್ಣನ್ ಕಶ್ಯಪ್ ಹೇಳಿದರು.

ಅವರು ನಗರದ ನೆಹರೂ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್‍ಯಾಲಿಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದರು.
. ಈ ರ್‍ಯಾಲಿಯಲ್ಲಿ ಮಂಗಳೂರು ಸೈನಿಕ ನೇಮಕಾತಿ ಘಟಕವು ಈಗಾಗಲೆ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಒಟ್ಟು ೧೧ ಜಿಲ್ಲೆಗಳ ಅಭ್ಯರ್ಥಿಗಳ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೆ ರವಾನಿಸಲಾಗಿದ್ದು, ಪ್ರತಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ದಿನಾಂಕವನ್ನು ನಿಗಧಿಗೊಳಿಸಲಾಗಿದೆ ಎಂದರ.
ನೇಮಕಾತಿಗೆ ಪೂರಕವಾಗಿ ನಿಯಮಾನುಸಾರ ಅಭ್ಯರ್ಥಿಯು ಹೊಂದಿರುವ ದೈಹಿಕ ಸಾಮರ್ಥ್ಯವನ್ನು ಧೃಡೀಕರಿಸುವ ಕ್ರೀಡೆ, ಚಟುವಟಿಕೆ ನಡೆಸಲಾಗುವುದು ಎಂದ ಅವರು, ಪ್ರತಿದಿನ ೮೦೦-೯೦೦ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ ನೆರೆಯ ಹಾವೇರಿ ಜಿಲ್ಲೆಯಲ್ಲಿ ನೇಮಕಾತಿ ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ಆಯ್ಕೆ ಬಯಸಿ ಬರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೀರು, ಶೌಚ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

Agnipath Yojana ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಮತ್ತು ಕ್ರೀಡಾ ಚಟುವಟಿಕೆಗಳೊಂದಿಗೆ ದಾಖಲಾತಿಗಳ ಪರಿಶೀಲನೆಯೂ ಇದೇ ಆವರಣದಲ್ಲಿ ನಡೆಯಲಿದೆ. ಅದಕ್ಕಾಗಿ ಸಂಬಂಧಿತ ಇಲಾಖೆಗಳ ಸ್ಥಳೀಯ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದ ಅವರು ಆಗಸ್ಟ್ ೨೩ರಂದು ಬೆಳಿಗ್ಗೆ ೬.೩೦ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಈ ಎಲ್ಲಾ ನೇಮಕಾತಿ ಚಟುವಟಿಕೆಗಳು ಸುಗಮವಾಗಿ ನಡೆಯಲು ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರವಿದೆ. ಅದಕ್ಕಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಅದರ ಸಮಗ್ರ ಉಸ್ತುವಾರಿಗಾಗಿ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸೈನಿಕ ಅಧಿಕಾರಿ ದುರ್ಗಾಪ್ರಸಾದ್ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ|| ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.

Rattlesnake ಶಿವಮೊಗ್ಗ ಗುಜರಿ‌ ಅಂಗಡಿಯಲ್ಲಿ ಕಾಣಿಸಿದ ಕಾಳಿಂಗ ಸರ್ಪ

0

Rattlesnake ಶಿವಮೊಗ್ಗ ನಗರದ ಓ ಟಿ ರಸ್ತೆಯ ಗುಜರಿ ಅಂಗಡಿಯಲ್ಲಿ ಸುಮಾರು ೨ ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡು ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಇದರಿಂದ ಗಾಬರಿಗೊಂಡ ಸ್ಥಳೀಯರು ಕೂಡಲೆ ಉರಗ ರಕ್ಷಕರಾದ ಸ್ನೇಕ್ ವಿಕ್ಕಿ ಮತ್ತು ಉರಗತಜ್ಞರಾದ ಜಯಂತ್ ಬಾಬುರವರಿಗೆ ಕರೆಮಾಡಿ ತಿಳಿಸಿದರು,
ಕೂಡಲೆ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸಂರಕ್ಷಿಸಿದರು.

Rattlesnake ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಯಿತು.