Wednesday, April 1, 2026
Wednesday, April 1, 2026
Home Blog Page 593

Department of Handloom and Textiles ಆಗಸ್ಟ್ 23 , ಜವಳಿ ಕ್ಷೇತ್ರದ ಉದ್ಯಮಿಗಳೊಂದಿಗೆ ಸಂವಾದ ಸಭೆ

0

Department of Handloom and Textiles ಕೈಮಗ್ಗ ಮತ್ತು ಜವಳಿ ಇಲಾಖೆಯು ಆ.23 ರಂದು ಮಧ್ಯಾಹ್ನ 12.00ಕ್ಕೆ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಮಂಜುನಾಥ್ ಟವರ‍್ಸ್, 2ನೇ ಮಹಡಿ, ಗಾಂಧಿನಗರ, 1ನೇ ಮುಖ್ಯರಸ್ತೆ, ಜಿಲ್ಲಾ ಪಂಚಾಯತ್ ಇಲ್ಲಿ ಜವಳಿ/ಸಿದ್ಧ ಉಡುಪು ತಯಾರಕರ ಘಟಕ, ಕೈಮಗ್ಗ ಮತ್ತು ವಿದ್ಯುತ್ ಮಗ್ಗ ಸಹಕಾರ ಸಂಘ, ಇತರೆ ಜವಳಿ ಕ್ಷೇತ್ರದ ಉದ್ದಿಮೆದಾರರೊಂದಿಗೆ ಸಂವಾದ ಸಭೆಯನ್ನು ಏರ್ಪಡಿಸಿದೆ.

Department of Handloom and Textiles ಜವಳಿ ಮತ್ತು ಸಿದ್ಧ ಉಡುಪು ಉದ್ದಿಮೆದಾರರು ಈ ಸಭೆಯಲ್ಲಿ ಭಾಗವಹಿಸಿ ಹೊಸ ಜವಳಿ ನೀತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಸಲಹೆ/ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಹಿತಿಗಾಗಿ ಇಲಾಖಾ ಕಚೇರಿ ದೂ.ಸಂ.: 08182-223405 ನ್ನು ಸಂಪರ್ಕಿಸುವುದು.

The Shivamogga Multipurpose Social Service Society ಕೋಟೆ ಗಂಗೂರಿನಲ್ಲಿ ಯಶಸ್ವಿಯಾಗಿ ನಡೆದ ಮಹಿಳಾ ಕಿಸಾನ್ ಗೋಷ್ಠಿ

0

The Shivamogga Multipurpose Social Service ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಸಮುದಾಯದ ಭವನದಲ್ಲಿ ಕೃಷಿ ಇಲಾಖೆ ಮತ್ತು ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಕಿಸಾನ್ ಗೋಷ್ಠಿ ಆಯೋಜನೆ ಮಾಡಲಾಗಿತ್ತು.
ಅತಿಥಿಯಾಗಿದ್ದ ಕೆವಿಕೆಯ ಪ್ರೊ. ಸುಧಾರಾಣಿ ಕೃಷಿಗೆ ಸಂಬಂಧಿಸಿದ ಇತರ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ರೈತ ತರಬೇತಿ ಕೇಂದ್ರದ ಮುಖ್ಯಸ್ಥ ಪ್ರೊ. ಅಶೋಕ್, ಹೈನುಗಾರಿಕೆ ಮಾಡಿ ಆದಾಯವನ್ನು ಹೆಚ್ಚು ಮಾಡುವ ಬಗ್ಗೆ ಮಾಹಿತಿ ನೀಡಿದರು.

ನಿವೃತ್ತ ಅಧಿಕಾರಿ ರಘುನಾಥ್, ವ್ಯಕ್ತಿತ್ವ ವಿಕಾಸನ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕೋಟೆಗಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೂದ್ಯ ನಾಯ್ಕ ವಹಿಸಿದ್ದರು. ಕೃಷಿ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಗ್ರಾಪಂ ಉಪಾಧ್ಯಕ್ಷೆ ರೇಖಾಬಾಯಿ ಉಪಸ್ಥಿತರಿದ್ದರು. ಎಸ್ ಎಂಎಸ್ ಎಸ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕಿ
ಕಾರ್ಯಕ್ರಮವನ್ನು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.

The Shivamogga Multipurpose Social Service ಪ್ರಮೀಳಾ, ಒಕ್ಕೂಟದ ಅಧ್ಯಕ್ಷೆ ಆಶಾ
ಕಾರ್ಯಕರ್ತರಾದ ಕಾರ್ಮೆಲ್, ತಾಂತ್ರಿಕ ವ್ಯವಸ್ಥಾಪಕ ನಾಗರಾಜ್ , ಮಂಜುನಾಥ ಮತ್ತು ಸಂಘದ ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

Tirthahalli Police ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ಪೋಕ್ಸೋ ದೂರು ದಾಖಲು

0

Tirthahalli Police ವಸತಿ ಶಾಲೆಯ ಶಿಕ್ಷಕ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ದೂರೊಂದು ದಾಖಲಾಗಿದೆ. ದೂರಿನ ಅನ್ವಯ ಸಂಗೀತ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

೧೦ ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿನಿಯರ ದೇಹ ಮುಟ್ಟಿ ಅಸಭ್ಯ ವರ್ತನೆ ನಡೆಸಿರುವ ಆರೋಪ ಕೇಳಿ ಬಂದಿದೆ. ಸಂಗೀತ ಶಿಕ್ಷಕ ಇಮ್ತಿಯಾಜ್ (೪೫) ಆರೋಪಿಯಾಗಿದ್ದಾನೆ. ಹಲವು ದಿನಗಳಿಂದ ಅಸಭ್ಯವಾಗಿ ವರ್ತಿಸುತ್ತಿರುವ ಶಿಕ್ಷಕನ ದುರ್ವರ್ತನೆ ಬಗ್ಗೆ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದ್ದರು.

Tirthahalli Police ಈ ವಿದ್ಯಾರ್ಥಿನಿಯರ ದೂರಿನ ಮೇರೆಗೆ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಾಂಶುಪಾಲರೇ ದೂರು ದಾಖಲಿಸಿದ್ದಾರೆ.
ಶಿಕ್ಷಕನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಶಿಕ್ಷಕನ ವಿರುದ್ದ ಪ್ರಕರಣ ದಾಖಲಾಗಿದೆ. ಪೊಕ್ಸೋ ಕಾಯಿದೆ ಅಡಿ ತೀರ್ಥಹಳ್ಳಿ ಪೊಲೀಸರು ಶಿಕ್ಷಕರನ್ನ ವಶಕ್ಕೆ ಪಡೆದಿದ್ದು ಬಂಧನದ ಪ್ರಕ್ರಿಯೆ ನಡೆದಿರುವುದಾಗಿ ತಿಳಿದು ಬಂದಿದೆ.

High Court ಹತ್ತು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ನೌಕರರು ಖಾಯಂ ಮಾಡಲು ಅರ್ಹರು. ಹೈಕೋರ್ಟ್ ತೀರ್ಪು.

0

High Court 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನೌಕರರು ಖಾಯಂಗೆ ಅರ್ಹರು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ಕೆಲಸ ಮಾಡುತ್ತಿದ್ದ ನೌಕರರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂಬ ಸರ್ಕಾರದ ಹಿಂಬರಹವನ್ನು ರದ್ದುಪಡಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಪೀಠವು, ಈ ನೌಕರರು ಖಾಯಂಮಾತಿಗೆ ಅರ್ಹರಾಗಿದ್ದು, ಮೂರು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿತು.

ಸೇವೆ ಖಾಯಂಗೊಳಿಸಲು ನಿರಾಕರಿಸಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ನೀಡಿದ್ದ ಹಿಂಬರವನ್ನು ಪ್ರಶ್ನಿಸಿ ಮೈಸೂರಿನ ಶಾಂತಲಕ್ಷ್ಮಿ ಹಾಗೂ ಇತರರು ಹೈಕೋರ್ಟ್ ಗೆ ಪ್ರತ್ಯೇಕವಾಗಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಈ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಪೀಠವು, ಒಂದೇ ಬಗೆಯ ಉದ್ಯೋಗ ಮಾಡುವವರನ್ನು ಭಿನ್ನ ರೀತಿಯಲ್ಲಿ ನೋಡಲಾಗದು.

High Court ಅರ್ಜಿದಾರರು 10 ವರ್ಷಗಳಿಗೂ ಅಧಿಕ ಕಾಲ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಹಂಗಾಮಿ ನೌಕರರಾಗಿಯೇ ಮುಂದುವರಿಸಲಾಗದು. ಅವರಿಗೆ ಅರ್ಹ ವೇತನ/ ಭತ್ಯೆಗಳನ್ನು ನೀಡಬೇಕಾಗುತ್ತದೆ. ಹಾಗಾಗಿ, ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನುಸಾರ ಇವರು ಸೇವೆ ಖಾಯಂಗೆ ಅರ್ಹರು” ಎಂದು ತಿಳಿಸಿದೆ.
ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ಅರ್ಜಿದಾರರನ್ನು ಖಾಯಂಗೊಳಿಸಲು ನಿರಾಕರಿಸಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಹಿಂಬರಹನೀಡಿದ್ದವು. ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅರ್ಜಿದಾರರನ್ನು ಮಂಜೂರಾದ ಹುದ್ದೆಗಳಿಗೆ ನೇಮಕ ಮಾಡಿಕೊಂಡಿರಲಿಲ್ಲ. ಬದಲಿಗೆ ಅವರನ್ನು ಮಂಜೂರಾಗದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ನ್ಯಾಯಾಲಯಗಳ ಅದೇಶದಿಂದಾಗಿ ಅರ್ಜಿದಾರರನ್ನು 10 ವರ್ಷಕ್ಕೂ ಅಧಿಕ ಸಮಯದಿಂದ ದಿನಗೂಲಿ ಸೇವೆಯಲ್ಲಿ ಮುಂದುವರಿಸಲಾಗಿದೆ.

ಹಾಗಾಗಿ ಅವರು ಸೇವೆ ಕಾಯಂಗೆ ಅನರ್ಹರು ಎಂದು ವಾದಿಸಿತ್ತು.

Bombay High Court ಕೊಲೆ ಆರೋಪಿಗಳ ಖುಲಾಸೆ ವಿರೋಧಿಸಿಧಾಬೋಲ್ಕರ್ ಕುಟುಂಬದವರಿಂದ ಹೈಕೋರ್ಟ್ ಗೆ ಮನವಿ

0

Bombay High Court ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಅವರ ಕುಟುಂಬ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ದಾಭೋಲ್ಕರ್ ಕುಟುಂಬದ ಮೇಲ್ಮನವಿ ಪುರಸ್ಕರಿಸಿದ್ದು, ಆರೋಪಿಗಳಾದ ವೀರೇಂದ್ರಸಿನ್ಹ ತಾವಡೆ, ಸಚಿನ್ ಅಂದುರೆ, ಶರದ್ ಕಲಾಸ್ಕರ್, ವಕೀಲ ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇವರು ಬಲಪಂಥೀಯ ಗುಂಪುಗಳಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಎನ್ನಲಾಗಿದೆ.

Bombay High Court ಪೀಠವು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೂಡ ನೋಟಿಸ್ ಜಾರಿಗೊಳಿಸಿದೆ. ವಕೀಲ ವಿವೇಕ್ ಪಾಟೀಲ್ ಮೂಲಕ ದಾಭೋಲ್ಕರ್ ಕುಟುಂಬ ಮೇಲ್ಮನವಿ ಸಲ್ಲಿಸಿದೆ.
ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ ಸಂಬಂಧ ಮೇ 10, 2024 ರಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಸೆಕ್ಷನ್ 34ರ (ಸಾಮಾನ್ಯ ಉದ್ದೇಶ) ಅಡಿ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ದೋಷಿಗಳೆಂದು ಘೋಷಿಸಿದೆ.

Cylinder Blast ಆಯನೂರು ಬೇಕರಿಯಲ್ಲಿ ಬೆಂಕಿ

0

Cylinder Blast ಆಯನೂರಿನ ಬೇಕರಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟವಾಗಿರುವ ಶಂಕೆ.
ಸ್ವಲ್ಪಹೊತ್ತಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕದಳದಿಂದ
ಬೆಂಕಿ‌ನಂದಿಸುವ ಕಾರ್ಯಸಾಗಿತು.
ನಷ್ಟದ ಬಗ್ಗೆ ಇನ್ನೂ ಅಂದಾಜು‌ ಸಿಕ್ಕಿಲ್ಲ.
ಸಂಚಾರಿ ವಾಹನಗಳನ್ನ ಕೊಂಚ ಕಾಲ ತಡೆಹಿಡಿಯಲಾಗಿತ್ತು.

Rotary Club Shivamogga ಲಿಂಗತ್ವ ಅಲ್ಪ ಸಂಖ್ಯಾತರ ಬಗ್ಗೆಗಿನ ನಮ್ಮ ದೃಷ್ಟಿಕೋನ ಬದಲಾಗಬೇಕು-ಕಿರಣ್ ಕುಮಾರ್

0

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಇಂಡಿಯಾ ಹಾಗೂ ರಕ್ಷಾ ಸಂಘ ಶಿವಮೊಗ್ಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಆರೋಗ್ಯ ತಪಾಸಣೆ ಮತ್ತು ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ವೇಳೆ ರೋಟರಿ ಕ್ಲಬ್ ಸೆಂಟ್ರಲ್ ನ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದಲ್ಲಿ ನೋಡುವ ದೃಷ್ಟಿಕೋನ ಬದಲಾಗಬೇಕು ಹಾಗೂ ಗೌರವ ಸಮ್ಮಾನ ಅವರಿಗೆ ಸಿಗಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಸೆಂಟ್ರಲ್ ಅನ್ಸ್ ಕ್ಲಬ್ ಅಧ್ಯಕ್ಷರಾದ ಗೀತಾ ಜಗದೀಶ್ವರ ಮಾತನಾಡಿ, ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾನತೆ ದೊರೆಯಬೇಕು ಮತ್ತು ನಮ್ಮಲ್ಲೇ ನೀವು ಒಬ್ಬರು ಎಂದ ಅವರು, ಮುಂದಿನ ದಿನಗಳಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ತಿಳಿಸಿದರು.

Rotary Club Shivamogga ಕಾರ್ಯಕ್ರಮದಲ್ಲಿ ರಕ್ಷಾ ಸಂಘದ ಅಧ್ಯಕ್ಷ ಖಾನ್ ಮತ್ತು ಎಫ್ ಪೈನ ನ ಸತೀಶ್ ಮಾತನಾಡಿ, ರೋಟರಿ ಕ್ಲಬ್ ಅವರ ಸಹಯೋಗದಿಂದ ಇಂತಹ ಹಲವಾರು ಕಾರ್ಯಕ್ರಮಗಳು ನೆರವೇರಲಿದ್ದೇವೆಂದು ಆಶಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಗಣೇಶ್ ಎಂ ಅಂಗಡಿ, ಪ್ರೋಟಿನ್ ಫುಡ್ ಅನ್ನು ಉಚಿತವಾಗಿ ನೀಡಿದರು.

ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ವಿಜಯಕುಮಾರ್.ಜಿ ಹಾಗೂ ಅನ್ಸ್ ಅಧ್ಯಕ್ಷರಾದ ಗೀತಾ ಜಗದೀಶ್, ಸಹ ಕಾರ್ಯದರ್ಶಿ ನಯನ ಗಣೇಶ್, ರೊಟೇರಿಯನ್ ಜಯಶೀಲ ಶೆಟ್ಟಿ, ಧರ್ಮೇಂದ್ರ ಸಿಂಗ್, ಮೋಹನ್, ಸಂತೋಷ್.ಬಿ.ಎ, ಚಂದ್ರು.ಜೆ.ಪಿ, ಮಂಜುನಾಥ್ ಹೆಗಡೆ, ದೀಪಾ ಶೆಟ್ಟಿ, ಸುನಿತ ಗಣೇಶ್, ಜಗದೀಶ್, ಕಾರ್ಯದರ್ಶಿ ಈಶ್ವರ.ಬಿ.ವಿ ಉಪಸಿತರಿದ್ದರು.

Agricultural University ರಾಜ್ಯದ ಕೃಷಿ ವಿವಿಗಳಲ್ಲಿ ವಿವಿಧ ಸ್ನಾತಕೋತ್ತರ & ಪಿಎಚ್ ಡಿ ಪದವಿ ಅಧ್ಯಯನಕ್ಕೆ ಪ್ರವೇಶಾತಿ ಪ್ರಕಟಣೆ

0

Agricultural University 2024-25 ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದ ಐದು ಕೃಷಿ ವಿಶ್ವವಿದ್ಯಾಲಯಗಳಾದ ಕೆ. ಶಿ. ನಾ. ಕೃ. ತೋ. ವಿ. ವಿ.,ಶಿವಮೊಗ್ಗ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇಲ್ಲಿ ವಿವಿಧ ಸ್ನಾತಕೋತ್ತರ (ಎಂ.ಎಸ್ಸಿ. ಮತ್ತು ಡಾಕ್ಟರೇಟ್) ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

Agricultural University https://pg-admission.kar.nic.in ಅಥವಾ ವಿಶ್ವವಿದ್ಯಾಲಯದ ಅಂತರ್ಜಾಲ ತಾಣಗಳಲ್ಲಿ ಲಭ್ಯವಿರುವ ಸಾಮಾನ್ಯ ಸ್ನಾತಕೋತ್ತರ ಪ್ರವೇಶ 2024-25 (ಎಂ.ಎಸ್ಸಿ. ಮತ್ತು ಡಾಕ್ಟರೇಟ್ ಪದವಿ ಕಾರ್ಯಕ್ರಮಗಳು) ಮಾಹಿತಿ ಕಿರುಹೂತ್ತಿಗೆಯಲ್ಲಿ ವಿವರಗಳನ್ನು ನೀಡಲಾಗಿದೆ. ಅರ್ಜಿ ಹಾಕಲು ದಿ: 09-09-2024 ಕೊನೆಯ ದಿನವಾಗಿರುತ್ತದೆ ಎಂದು ತಿಳಿಸಿದೆ

Kudali – Samsthan Mutt ಪಂಚಮಹಾಯಜ್ಞಗಳಿಂದ ಆಧುನಿಕ ಸಮಸ್ಯೆಗಳಿಗೆ ಪಾರಂಪರಿಕ ಪರಿಹಾರ ಸಾಧ್ಯ- ಶ್ರೀಶ್ರೀಅಭಿನವ ಶಂಕರ ಭಾರತಿಶ್ರೀ

0

Kudali – Samsthan Mutt ಭಾರತೀಯ ಪರಿಸರದಲ್ಲಿನ ಆಧುನಿಕ ಸಮಸ್ಯೆಗಳಿಗೆ ನಮ್ಮ ಸನಾತನ ಹಿನ್ನೆಲೆಯಲ್ಲಿಯೇ ಸಾಕಷ್ಟು ಪರಿಹಾರಗಳಿವೆ ಎಂದು‌ ಶಿವಮೊಗ್ಗ ಜಿಲ್ಲೆ ಕೂಡಲಿ ಸಂಸ್ಥಾನದ ಶ್ರೀಶಾರದಾ ಪೀಠದ
ಶ್ರೀಶ್ರೀಅಭಿನವ ಶಂಕರ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ಈಗಷ್ಟೇ ಸುಮಾರು ಐವತ್ತು ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲಿ ಕಲಿತು ಬಂದ ಒಂದು ಬೃಹತ್‌
ವಿದ್ವಾಂಸ ವೃಂದ
ನಮ್ಮ ಭಾರತೀಯ ಹಿಂದೂ ಧರ್ಮ ,ವೇದೋಪನಿಷತ್ತುಗಳು,
ಇವೆಲ್ಲ ಜೀವ ವಿರೋಧಿ ಎಂಬ
ಸಿದ್ಧಾಂತವನ್ನಿಟ್ಟು ಕೊಂಡು
ಸಾಹಿತ್ಯ ರಚನೆಗೆ ತೊಡಗಿದರು.
ಈ ಬಗೆಯ ದೃಷ್ಟಿಕೋನದಿಂದ
ನಮ್ಮಲ್ಲಿನ ಭಾರತೀಯ ದರ್ಶನಗಳನ್ನ ಮೂಲೆಗುಂಪು ಮಾಡುವಲ್ಲಿ ಒಂದು
“ ಇಂಗ್ಲೀಷ್ ಕಲಿತವರ ಪಡಸಾಲೆ “ಯೇ ಬಲವಾಗಿ ಬೇರೂರಿತು.
ಇಂಗ್ಲೀಷ್ ಸಾಹಿತ್ಯವೇ ಸಾಹಿತ್ಯ.
ಅದೇ ಜೀವಪರ. ಸಾಹಿತ್ಯರೂಪಿಯಾಗಿ ಭಾರತದಲ್ಲಿ ಲಭ್ಯವಿರುವ ವೇದ ಸಾಹಿತ್ಯ ಜೀವ ವಿರೋಧಿ ಎಂಬುದನ್ನ ಸಾರ್ವಕಾಲಿಕವಾಗಿ ಜನರ ಮನಸ್ಸಿನಲ್ಲಿ ಬಿತ್ತಲಾಯಿತು.

Kudali – Samsthan Mutt ಬ್ರಿಟೀಷರಿಗೆ ಬೇಕಾದದ್ದೂ ಇದೆ
ಕಲಿತವರಿಂದ ಚರಿತ್ರೆಯನ್ನ ತಮ್ಮಮೂಗಿನ‌‌ ನೇರಕ್ಕೇ ನಿರ್ದೇಶಿಸಿ ಬರೆಸಿದರು.

ಸಾಹಿತ್ಯ ವಲಯದಲ್ಲಿ ಸ್ಥಾಪಿಸಿದ ಈ ವಾದ ತತ್ವವಾಗಿ ವ್ಯಕ್ತಿಗಳ, ಸಂಘಟನೆಗಳ ಅಸ್ತ್ರಗಳಾದವು.
ಕಡೆಗವು ರಾಜಕೀಯ ಪ್ರಣಾಳಿಕೆಗಳ ಒಳ ಸೇರಿದವು.

ನಿಜಕ್ಕೂ ನಾವು ಎದಿರಿಸುತ್ತಿರುವ ಸಮಸ್ಯೆಗಳು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು
ರಾಷ್ಟ್ರಮಟ್ಟದಲ್ಲಿವೆ.
ಕಾರಣ, ಪೂರ್ವಿಕವಾಗಿ ಕೂಡು ಕುಟುಂಬಗಳಿದ್ದ ನಮ್ಮ ಸಾಮಾಜಿಕ ವ್ಯವಸ್ಥೆ ಆಧುನಿಕತೆ ಗಾಳಿಬೀಸುತ್ತಿದ್ದಂತೆಯೇ ಚದುರಿತು.
ನಾವು ನಮ್ಮ ವೇದ ಸಾಹಿತ್ಯದ ಬಗೆಗಿನ ಅವಜ್ಞತೆಗೊಳಗಾದೆವು.
ಎಂದು ಶ್ರೀಗಳು‌ ನುಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ,ಶಿವಮೊಗ್ಗ ಜಿಲ್ಲಾ ಶಾಖೆಯ ವತಿಯಿಂದ ಏರ್ಪಡಿಸಿದ್ದ ‘ ಶ್ರಾವಣ ಸಂಜೆ’ ಕಾರ್ಯಕ್ರಮದಲ್ಲಿ
ಅವರು ಅನುಗ್ರಹ ಉಪನ್ಯಾಸ ನೀಡಿ ಮಾತನಾಡಿದರು.
ಪಂಚಮಹಾ ಯಜ್ಞಗಳನ್ನ ನಮ್ಮಲ್ಲಿ ವೇದಕಾಲೀನವಾಗಿದ್ದವು.
ದೇವ ಯಜ್ಞ, ಪಿತೃ ಯಜ್ಞ, ಭೂತ ಯಜ್ಞ,ಬ್ರಹ್ಮ‌ಯಜ್ಞ, ಮನುಷ್ಯ ಯಜ್ಞ.
ಇಲ್ಲಿ ಯಜ್ಞ ಎಂದರೆ ತ್ಯಾಗ ಎಂಬರ್ಥವಿದೆ.
ದೇವಯಜ್ಞದಲ್ಲಿ , ಯಜ್ಞಯಾಗಾದಿಗಳ ಮೂಲಕ ದೈವಗಳ ಕೃಪೆಗೊಳಗಾಗುವುದು.
ನಿಸರ್ಗದಲ್ಲಿ ಎಲ್ಲವೂ ದೈವದ ಕೊಡುಗೆ ಎಂದು ಪರಿಭಾವಿಸುವುದು.

ಬ್ರಹ್ಮ ಯಜ್ಞದಲ್ಲಿ ನಾವು ಪಡೆದ ಜ್ಞಾನವನ್ನ ಪ್ರತಿಫಲಾಪೇಕ್ಷೆ ಇಲ್ಲದೇ ಅರ್ಥಿಗಳಿಗೆ ಕಲಿಸುವುದು.
ನಾವು ಅರ್ಜಿಸಿದ ವಿದ್ಯೆಯನ್ನ
ಹೆಚ್ಚುವರಿಯಾಗಿ ನೀಡುವುದು.ಸ್ವಯಂ ಜ್ಞಾನ ಜೀವನದ ಜಂಜಡಗಳಿಂದ ಮುಕ್ತಗೊಳಿಸುತ್ತದೆ.

ದೇವ ಯಜ್ಞದಲ್ಲಿ ನಮ್ಮ ನಂಬಿಕೆಯ ದೇವರುಗಳ ಆರಾಧನೆ.
ಹೋಮ ಹವನಗಳ ಮೂಲಕ
ವಾತಾವರಣ ಶುದ್ಧತೆ ಮತ್ತು
ಸ್ವಾಸ್ಥ್ಯ ಸಾಧನೆಗೆ ಸಹಾಯಕ.ನಮ್ಮ ಆರೋಗ್ಯ ಸಂರಕ್ಷಿಸುವಲ್ಲಿ ಬಲವಾದ ಮಾರ್ಗ.
ಪಿತೃಯಜ್ಞದಲ್ಲಿ ನಮ್ಮ ವಂಶದ ಹಿರಿಯರಿಗೆ ವೈದೀಕ ಶ್ರಾದ್ಧಗಳಲ್ಲಿ ನೀಡುವ ಗೌರವ. ಇದರಿಂದ ಈ ಭೂಮಿಯಲ್ಲಿ ನಾನು ಯಾರ ಮಗ. ನಮ್ಮ ಹಿರಿಯರ ಪರಂಪರೆ ಯಾವುದು ಎಂದು ನಾವೇ ಪ್ರತೀ‌ಕ್ಷಣದಲ್ಲೂ ಸ್ಮರಿಸುವ ಮಾರ್ಗ. ನಮ್ಮ ಅಸ್ತಿತ್ವದ ಅರಿವಾದಲ್ಲಿ ನಮ್ಮ ಬದುಕಿನ ಆದ್ಯತೆಗಳೇ ಇರುವುದಿಲ್ಲ. ಬರುವುದನ್ನ ಬಂದಹಾಗೆ ಅನುಭವಿಸುವುದು
ಇನ್ನು ಮನುಷ್ಯ ಯಜ್ಞ. ನಾವು ಜೀವಿಸುತ್ತಿರುವ ಸಮಾಜದಲ್ಲಿ‌
ನಮ್ಮ ದೈನಿಕ ಆಹಾರದಲ್ಲಿ ಅತಿಥಿಯೊಬ್ಬರಿಗೆ ದಿನವೂ ಉಣಬಡಿಸುವುದು. ನಿರ್ಗತಿಕರು,ಪೀಡಿತರು ,ಹಸಿದವರು ಮುಂತಾದವರಿಗೆ ಆಹಾರ ನೀಡುವುದು.
ಭೂತ ಯಜ್ಞದಲ್ಲಿ ಕೊನೇ ಪಕ್ಷ ಪರಿಸರದ ಪ್ರಾಣಿಪಕ್ಷಿಗಳಿಗೆ ಉಣ್ಣಿಸುವುದು. ಅವು ನಮ್ಮ ಜೀವನ ಚಕ್ರದ ಭಾಗವೆಂಬ ಮನೋಧರ್ಮ ಹೊಂದುವುದಾಗಿದೆ.
ಇವಿಷ್ಟೂ ಸಾರಾಂಶದಲ್ಲಿ ಹೇಳಬಹುದಾದ ನಾವು ಜನನಮಾಡಬಹುದಾದ ತ್ಯಾಗಗಳು ಅಂದರೆ ಯಜ್ಞಗಳಾಗಿವೆ.
ಇವುಗಳ ತಳಹದಿಯಲ್ಲಿ ನಮ್ಮ ಜೀವನ ರೂಪಿತವಾದರೆ ನಮಗೆ ಆಧುನಿಕತೆಯ ಈ‌ ಕಾಲದಲ್ಲೂ
ಸಮಸ್ಯಾರಹಿತ ಬದುಕು ನಮ್ಮದಾಗುತ್ತದೆ.
ಪೂಜ್ಯಶ್ರೀಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ಈ ಪಂಚಮಹಾಯಜ್ಞಗಳ ಬಗ್ಗೆ ಸೋದಾಹರಣವಾಗಿ ತಿಳಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ ಅವರು ಉಪಸ್ಥಿತರಿದ್ದರು.
ಪಂಚಮಹಾಯಜ್ಞಗಳ ಬಗ್ಗೆ
ತಿಳಿಯಹೇಳಬೇಕಾದ ಹೊಣೆ
ನಮ್ಮ ಪ್ರಾಜ್ಞರ ಮೇಲಿದೆ. ಯುವ ಪೀಳಿಗೆಗೆ ಈ ತ್ಯಾಗಗಳು ಸರಳ
ಅರ್ಥವಾದರೆ ಆಧುನಿಕ ಸಮಸ್ಯೆಗಳೇ ಉದ್ಭವಿಸುವುದಿಲ್ಲ.
ಹೆಚ್ಚು ವಿದೇಶಿ ಭಾಷೆ ಕಲಿತ‌ ವಿದ್ಯಾವಂತರು ಪಾಶ್ಚಿಮಾತ್ಯ
ವಾದಗಳ ಮೂಲಕ ನಮ್ಮ ವೇದಕಾಲೀನ ಸಾಹಿತ್ಯದ ಒಳತಿರುಳನ್ನ ಅದುಮಿಡುವಲ್ಲಿ‌
ಯಶಸ್ವಿಯಾಗಿದ್ದಾರೆ. ಈ ಆಂತರ್ಯದ ಐಶ್ವರ್ಯವನ್ನ ನಮ್ಮದಾಗಿಸಿಕೊಳ್ಳಬೇಕು.
ಕೂಡಲಿಶ್ರೀಗಳು‌ ನಮಗೆಲ್ಲ
ಜ್ಞಾನದ ಮಿಂಚಿನ ಹೊಳಪನ್ನ
ನೀಡಿದ್ದಾರೆ. ಮುಂದಿನ ದಿನಗಳಲ್ಲಿ
ಅಭಾಸಾಪ ಚಟುವಟಿಕೆಗಳಿಗೆ
ಶ್ರೀಗಳ ಆಶೀರ್ವಾದ‌ ಇರಲಿ
ಎಂದು ಡಾ.ಸುಧೀಂದ್ರ ಆಶಿಸಿದರು.
ಮೊದಲಿಗೆ ಅಭಾಸಾಪ
ಸಮನ್ವಯ ಪ್ರಮುಖ ಶ್ರೀಹರ್ಷ ಅವರು ಸ್ವಾಮೀಜಿಗಳಿಗೆ ಗೌರವ ಅರ್ಪಿಸಿ ಎಲ್ಲರಿಗೂ ಸ್ಚಾಗತ ಕೋರಿದರು. ಶ್ರೀಮತಿ‌ ಹರ್ಷ ಅವರು ಶಾರದಾ ಪ್ರಾರ್ಥನೆ ಮಾಡಿದರು.ಖಜಾಂಚಿ ಮಂಜುನಾಥ ಶರ್ಮರು ಆಭಾರಮನ್ನಣೆ ಮಾಡಿದರು.

Department of Information and Public Relations ಮಹಾತ್ಮಗಾಂಧೀಜಿ ಅವರ ಬಗ್ಗೆ ಪ್ರೌಢಶಾಲೆ/ ಪಪೂ/ ಪದವಿ/ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಬಂಧ ರಚನಾ ಸ್ಪರ್ಧೆ

0

Department of Information and Public Relations ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ / ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲು ಉದ್ದೇಶಿಸಲಾಗಿದೆ.

ವಿಜೇತರಿಗೆ ರಾಜ್ಯಮಟ್ಟದಲ್ಲಿ ಪ್ರಥಮ 31 ಸಾವಿರ ರೂ. ದ್ವಿತೀಯ 21 ಸಾವಿರ ರೂ. ಮತ್ತು ತೃತೀಯ 11 ಸಾವಿರ ರೂ. ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಥಮ 3 ಸಾವಿರ ರೂ. ದ್ವಿತೀಯ 2 ಸಾವಿರ ರೂ ಮತ್ತು ತೃತೀಯ 1 ಸಾವಿರ ರೂ. ಬಹುಮಾನ ನೀಡಲಾಗುವುದು.

ಪ್ರೌಢ ಶಾಲಾ ವಿಭಾಗ :- 1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, 2) ಗಾಂಧೀಜಿಯವರ ವಿಚಾರದಲ್ಲಿ ಸತ್ಯಾಗ್ರಹ, 3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, 4) ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 900 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.

Department of Information and Public Relations ಪದವಿ ಪೂರ್ವ ಶಿಕ್ಷಣ ವಿಭಾಗ :- 1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, 2) ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು, 3) ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ, 4) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 1500 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ :- 1) ಇಂದಿನ ಪ್ರಜಾಪ್ರಭುತ್ವದಲ್ಲಿ ಸತ್ಯಾಗ್ರಹದ ಮಹತ್ವ, 2) ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು, 3) ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು, 4) ಗಾಂಧೀಜಿಯವರ ವಿಚಾರದಲ್ಲಿ ಸತ್ಯದ ಪರಿಕಲ್ಪನೆ, 5) ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳು. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 2000 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.

ದಿನಾಂಕ : 06-09-2024 ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಸ್ಪರ್ಧೆ ಏರ್ಪಡಿಸಿ ದಿನಾಂಕ : 10-09-2024 ರೊಳಗಾಗಿ ಮೌಲ್ಯಮಾಪನ ಮಾಡಿ, ವಿಜೇತರ ವಿವರಗಳು ಹಾಗೂ ಪ್ರಬಂಧಗಳನ್ನು ಕೇಂದ್ರ ಕಚೇರಿಗೆ ಕಳುಹಿಸಲಿದೆ. ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ, ರಾಜ್ಯಮಟ್ಟದ ಫಲಿತಾಂಶ ಘೋಷಿಸಲಾಗುವುದು.
ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು (3) ಪ್ರಬಂಧಗಳಿಗೆ ಅಕ್ಟೋಬರ್ 02 ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರಬಂಧ ರಚನೆಕಾರರಿಗೆ ಗೌರವಿಸಲಾಗುವುದು.

ನಿಬಂಧನೆಗಳು :-
ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಆಕರವಾಗಿ ಬಳಸಿದ ಪರಾಮರ್ಶನ / ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು. ಆದರೆ, ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿ ಪರಾಮರ್ಶನ / ಆಧಾರ ಗ್ರಂಥಗಳು / ಮೊಬೈಲ್ ಗಳ ಬಳಕೆಗೆ ಅವಕಾಶವಿರುವುದಿಲ್ಲ. ಪ್ರಬಂಧಕಾರರ ಹೆಸರು, ವಿಳಾಸ ನಮೂದಿಸಿರಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿರುತ್ತದೆ.