Wednesday, April 1, 2026
Wednesday, April 1, 2026
Home Blog Page 594

Shivamogga Police ಅಪರಿಚಿತ ವ್ಯಕ್ತಿಯ ಸಾವು. ಚಹರೆ ಬಗ್ಗೆ ಪೊಲೀಸ್ ಪ್ರಕಟಣೆ

0

Shivamogga Police ಆ.17 ರಂದು ನಗರದ ಸಾಗರ ರಸ್ತೆ ಮಹೀಂದ್ರ ಷೋರೂಂ ಎದುರು ಮೋಟಾರ್ ಬೈಕ್ ಡಿಕ್ಕಿ ಹೊಡೆದು ಸುಮಾರು 35 ವರ್ಷದ ವ್ಯಕ್ತಿಯೊಬ್ಬರಿಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ. 18 ರಂದು ಮೃತಪಟ್ಟಿದ್ದಾರೆ.

Shivamogga Police ಈತನ ಹೆಸರು, ವಿಳಾಸ, ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.
ಈ ಮೃತ ವ್ಯಕ್ತಿಯ ಚಹರೆ 5.8 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತನ ಬಲಮುಂಗೈ ಒಳಭಾಗದಲ್ಲಿ ಅಮ್ಮ ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ತುಂಬು ತೋಳಿನ ಷರ್ಟ್, ನಶೆ ಬಣ್ಣದ ಟೀಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ವಾರಸ್ಸುದಾರರ ಬಗ್ಗೆ ಮಾಹಿತಿ ದೊರಕಿದಲ್ಲಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ದೂ.ಸಂ.:08182-261417/ 9480803346/9480803309 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

CM Siddharamaih ರಾಜ್ಯಪಾಲರು ತಮ್ಮ ಕ್ರಮದಲ್ಲಿ ತಾರತಮ್ಯ ಮಾಡಿದ್ದಾರೆ- ಸಿಎಂ ಸಿದ್ಧರಾಮಯ್ಯ

0

CM Siddharamaih ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವರು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯವೆಸಗಿದ್ದಾರೆ. ರಾಜ್ಯಪಾಲರು ಭಾರತದ ರಾಷ್ಟ್ರಪತಿಯವರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆ ಹೊರತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮೇಲಿನ ತನಿಖೆಗಾಗಿ ರಾಜ್ಯಪಾಲರ ಬಳಿ ಲೋಕಾಯುಕ್ತದವರು ಮನವಿ ಮಾಡಿದ್ದಾರೆ. ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ನಲ್ಲಿ ನಡೆದ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದವರು 23-11-2023 ರಂದು ಅನುಮತಿ ಕೋರಿದ್ದು, ಆ ಬಗ್ಗೆ ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ಲೋಕಾಯುಕ್ತದವರು ಮತ್ತೊಮ್ಮೆ ಕೋರಿದ್ದಾರೆ. ಆದರೆ 26-07-2024 ರಂದು ಅಬ್ರಾಹಂರವರು ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇಂತಹ ತಾರತಮ್ಯವೇಕೆ?

CM Siddharamaih ಶ್ರೀಮತಿ ಶಶಿಕಲಾ ಜೊಲ್ಲೆ, ಹೆಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿನವರ ಮೇಲೆ ಆರೋಪಗಳಿದ್ದು, ಇದುವರೆಗೆ ತನಿಖೆಗೆ ಆದೇಶಿಸಿರುವುದಿಲ್ಲ. ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದ್ದು, ಅವರ ಮೇಲೆ ಗೌರವವಿದೆ. ಆದರೆ ರಾಜ್ಯಪಾಲರು ತಾರತಮ್ಯ ಧೋರಣೆ ಅನುಸರಿಸಬಾರದು.

Rotary Shivamogga ಗುರುಹಿರಿಯರ ಮಾರ್ಗದರ್ಶನದಿಂದ ಉತ್ತಮಜೀವನ- ಅರುಣ್ ದೀಕ್ಷತ್

0

Rotary Shivamogga ಶಿಕ್ಷಣದ ಜತೆಗೆ ಕೌಶಲ್ಯ ಕಲಿಕೆಯೂ ಅತ್ಯಂತ ಅವಶ್ಯಕ. ಕೌಶಲ್ಯ ಕಲಿಕೆಯಿಂದ ಜೀವನದಲ್ಲಿ ಸಾಧನೆ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಹೇಳಿದರು.
ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನೋಟ್ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ಸಂಘ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಉತ್ತಮ ಜೀವನ ರೂಪಿಸಿಕೊಳ್ಳಲು ಗುರು ಹಿರಿಯರ ಮಾರ್ಗದರ್ಶನದ ಜತೆಯಲ್ಲಿ ಒಳ್ಳೆಯ ಆಲೋಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಗುಣದ ಜತೆಗೆ ಸಂವಹನ ಕಲೆ, ಗುಂಪು ಚರ್ಚೆ ಮತ್ತು ಉತ್ತಮ ಫಲಿತಾಂಶ ಪಡೆಯಲು ಇಂಟರ‍್ಯಾಕ್ಟ್ ಕ್ಲಬ್ ಸಹಕಾರಿ ಆಗುತ್ತದೆ. ಫ್ಲೋರಿಡಾ ದೇಶದಲ್ಲಿ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಸ್ಥಾಪಿತವಾದ ಇಂಟರ‍್ಯಾಕ್ಟ್ ಕ್ಲಬ್ ಇಂದಿಗೂ ರೋಟರಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.
Rotary Shivamogga ಇದೇ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಪಾಲಕರ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಇನ್ನರ್‌ವ್ಹೀಲ್‌ನಿಂದ ವಿತರಿಸಲಾಯಿತು.
ಇಂರ‍್ಯಾಕ್ಟ್ ಕ್ಲಬ್ ಚೇರ್ಮನ್ ಶೇಷಗಿರಿಗೌಡ ಹೈಸ್ಕೂಲ್ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಬ್ಧಕೋಶ ನೀಡಿ ಗೌರವಿಸಿದರು. ಡಾ. ಕಡಿದಾಳ್ ಗೋಪಾಲ್ ಮಾತನಾಡಿ, ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ 600 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ 10,000 ರೂ. ನೀಡಲಾಗುವುದು ಎಂದರು.
ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಹರ್ಷಿತಾ ಹಾಗೂ ಕಾರ್ಯದರ್ಶಿಯಾಗಿ ಪ್ರಜ್ವಲ್ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೊಳಿಗೆ ವಾಸಪ್ಪಗೌಡ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಲತಾ ಸೋಮಶೇಖರ್, ಶಬರಿ ಕಡಿದಾಳ್, ಟಿ.ಪಿ.ನಾಗರಾಜ್, ಗುರುಮೂರ್ತಿಗೌಡ, ಸಲ್ಮಾ, ಡಾ. ಧನಂಜಯ ಉಪಸ್ಥಿತರಿದ್ದರು.

Kuvempu University ಭುವನೇಶ್ವರದಲ್ಲಿ ನಡೆಯುವ ಎನ್ಎಸ್ಎಸ್ ಯುವ ನಾಯಕತ್ವ ಶಿಬಿರಕ್ಕೆ ರಾಜ್ಯದ 17 ಸ್ವಯಂ ಸೇವಕರ ಆಯ್ಕೆ

0

Kuvempu University ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ಆಗಸ್ಟ್ 28 ರಿಂದ 31 ರ ವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರ್ ನಲ್ಲಿ ನಡೆಯುವ ರಾಷ್ಟ್ರೀಯ ಯುವ ನಾಯಕತ್ವ ಶಿಬಿರದಲ್ಲಿ ಭಾಗವಹಿಸುವ ಮೂಲಕ ಶಿಬಿರದಲ್ಲಿ ಸಹಭಾಗಿಯಾಗುವ ಅವಕಾಶ ಪಡೆದಿದೆ. ಒರಿಸ್ಸಾ ಸರ್ಕಾರ, ಯುವ ಸಬಲೀಕರಣ ಇಲಾಖೆ ಭಾರತ ಸರಕಾರ ಹಾಗೂ ಪ್ರಾಜೆಕ್ಟ್ ಪಾಯಿಂಟ್ ಸಂಸ್ಥೆಯು ಜಂಟಿಯಾಗಿ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಒಟ್ಟು 18 ರಾಜ್ಯಗಳು 21 ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದಿಂದ 17 ಸ್ವಯಂಸೇವಕರು ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಯುವ ನೀತಿಯ ಮೇಲೆ ವಿಶೇಷ ಚರ್ಚೆ ಸಂವಾದ ನಡೆಸಲು ದೇಶದ ವಿವಿಧ ಭಾಗಗಳಿಂದ ಸಂಪನ್ಮೂಲ ವ್ಯಕ್ತಿಗಳು ಆಗಮಿಸುತ್ತಿದ್ದು ಕುವೆಂಪು Kuvempu University ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ‘ಜೆಂಡರ್ ಜಸ್ಟಿಸ್’ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಾರ್ಯಕ್ರಮಾಧಿಕಾರಿಗಳಾದ ಡಾ. ಹಾ. ಮಾ. ನಾಗಾರ್ಜುನ ಹಾಗೂ ಇತರ ಹಿರಿಯ ಎನ್ ಎಸ್ ಎಸ್ ಸ್ವಯಂ ಸೇವಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಯುವ ಯೋಜನೆಯ ಕರ್ನಾಟಕ ರಾಜ್ಯ ಸಂಯೋಜಕರಾದ ಡಾ. ವಿ. ಪ್ರಶಾಂತ್ ಹಾಗೂ ಆಯೋಜಕರಾದ ಡಾ. ಸಂಗ್ರಾಮ್ ಕೇಸರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಎನ್ ಎಸ್ ಎಸ್ ನ ಈ ವಿಸ್ತರಣಾ ಚಟುವಟಿಕೆಗಾಗಿ ಮಾನ್ಯ ಕುಲಪತಿಗಳಾದ ಡಾ. ಶರತ್ ಅನಂತಮೂರ್ತಿ, ಕುಲಸಚಿವರಾದ ಶ್ರೀ ಎ. ಎಲ್.ಮಂಜುನಾಥ್ ಹಾಗೂ ಇತರ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Department of Kannada and Culture ಸಂಗೀತ ರಸಿಕರ ಮನಸೆಳೆದ ಕಲಾವಿದರ ಗಾಯನ

0

Department of Kannada and Culture ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಡಿ.ದೇವರಾಜ ಅರಸು ರವರ 109ನೇ ಜನ್ಮದಿನ ಹಾಗೂ ‘ಬ್ರಹ್ಮಶ್ರೀನಾರಾಯಣಗುರು’ ಜಯಂತಿ ಅಂಗವಾಗಿ ಸಾಗರದ ಕಲಾವಿದೆ ಸಹನಾ ಪಿ.ಜಿ ಮತ್ತು ಸಂಗಡಿಗರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸುಗಮ ಸಂಗೀತ ಗಾಯನ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಗಿತ್ತು. ವರಕವಿ ದ.ರಾ ಬೇಂದ್ರೆ, ರಾಷ್ಟಕವಿ ಕುವೆಂಪು, ನಿಸ್ಸಾರ್ ಅಹಮದ್, ಡಾ.ಚಂದ್ರಶೇಖರ ಕಂಬಾರ, ಹೆಚ್.ಎಸ್.ವೆಂಕಟೇಶಮೂರ್ತಿ, ಸಂತ ಶಿಶುನಾಳ ಶರೀಫ, ಗೋಪಾಲಕೃಷ್ಣ ಅಡಿಗ ಮುಂತಾದ ಕವಿಗಳು, ದಾರ್ಶನಿಕರ ಗೀತೆಗಳನ್ನು ಹಾಡಿದರು. ಗಾಯನದಲ್ಲಿ ಶಿವಮೊಗ್ಗದ ರಘು ಸಮರ್ಥ ನಾಡಿಗ್ ಸಹಕರಿಸಿದರು. ಪಕ್ಕವಾದ್ಯದಲ್ಲಿ ಸಿದ್ದಪ್ಪ, ಪ್ರಶಾಂತ್, ಅವಿನ್ ತೇಲ್ಕರ್ ಕಾರ್ಯನಿರ್ವಹಿಸರು. ಗಾಯನ ಯಶಸ್ವಿಯಾಗಿ ಮೂಡಿಬಂತು.

Department of Kannada and Culture ಫೋಟೋ: ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ, ಡಿ.ದೇವರಾಜ್ ಅರಸು ರವರ 009ನೇ ಜನ್ಮದಿನ ಹಾಗೂ ಬ್ರಹ್ಮಶ್ರೀನಾರಾಯಣಗುರು ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುಗಮಸಂಗೀತ ಗಾಯನ ಕಾರ್ಯಕ್ರಮವನ್ನು ಸಾಗರದ ಕಲಾವಿದೆ ಸಹನಾ ಪಿ.ಜಿ ಮತ್ತು ತಂಡ ನಡೆಸಿಕೊಟ್ಟರು.

Team Pu College Shivamogga ಗೌರಂಗಿ ಗೌಡ ಅಥ್ಲೆಟಿಕ್ ಚಾಂಪಿಯನ್

0

Team Pu College Shivamogga ಶಿವಮೊಗ್ಗ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಟೀಂ ಪಿಯು ಕಾಲೇಜಿನ ವಿದ್ಯಾರ್ಥಿನಿ ಗೌರಂಗಿ ಗೌಡ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.
ನೆಹರು ಕ್ರೀಡಾಂಗಣದಲ್ಲಿ ನಡೆದ ಈ ಕೂಟದಲ್ಲಿ ಗೌರಂಗಿ ಗೌಡ ಅವರು, ಉದ್ದ ಜಿಗಿತದಲ್ಲಿ ಪ್ರಥಮ, 100 ಹಾಗೂ 400 ಮೀಟರ್ ಹರ್ಡಲ್ಸ್‌ ವಿಭಾಗದಲ್ಲಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
Team Pu College Shivamogga ಮಂಗಳವಾರ ಟೀಂ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಹಲವು ಕ್ರೀಡೆಗಳಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ವಿದ್ಯಾರ್ಥಿನಿ ಗೌರಂಗಿ ಗೌಡ ಹಾಗೂ ಇತರೆ ಕ್ರೀಡೆಗಳಲ್ಲಿ ಸಾಧನೆಗೈದ ಕಾಲೇಜಿನ ಗೌತಮಿ‌ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

Commercial Taxes Department ರಾಷ್ಟ್ರಮಟ್ಟದ ಕೇರಂ ಪಂದ್ಯಾವಳಿಗೆ ಶಿವಮೊಗ್ಗದ ಸಿ.ರವಿ.ಆಯ್ಕೆ

0

Commercial Taxes Department ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಬೆಂಗಳೂರಿನಲ್ಲಿ ಕೇರಮ್ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದ ಸಿ. ರವಿ ವಾಣಿಜ್ಯ ತೆರಿಗೆ ಇಲಾಖೆ ಶಿವಮೊಗ್ಗ ಇವರು ಓಡಿಸ್ಸಾ ರಾಜ್ಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿದ್ದಾರೆ.

Toast Masters Club ಸಂವಹನ ಕೌಶಲದಿಂದ ಜೀವನ & ವೃತ್ತಿಕ್ಷೇತ್ರದಲ್ಲಿ ಯಶಸ್ಸು- ಡಾ.ಸೋಮಶೇಖರ್

0

Toast Masters Club ಸಂವಹನ ಕೌಶಲ್ಯಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅತ್ಯಂತ ಅವಶ್ಯಕ ಎಂದು ಅಲ್ ಮಹಮದ್ ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಸೋಮಶೇಖರ್ ಹೇಳಿದರು.

ಟೋಸ್ಟ್ ಮಾಸ್ಟರ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಂವಹನ ಕೌಶಲ್ಯ ಉತ್ತಮವಾಗಿದ್ದಲ್ಲಿ ಜೀವನ ಮತ್ತು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ಟೋಸ್ಟ್ ಮಾಸ್ಟರ್ಸ್ ಕ್ಲಬ್ ಅಧ್ಯಕ್ಷ ಸಿ.ಎ.ಶರತ್ ಮಾತನಾಡಿ, ಟೋಸ್ಟ್ ಮಾಸ್ಟರ್ಸ್ ಇಂಟರ್ ನ್ಯಾಷನಲ್, ಲಾಭರಹಿತ ಶೈಕ್ಷಣಿಕ ಸಂಸ್ಥೆಯಾಗಿದ್ದು, ಜನರು ಸಂವಹನ, ಸಾರ್ವಜನಿಕ ಭಾಷಣ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಉದ್ದೇಶಕ್ಕಾಗಿ ವಿಶ್ವಾದ್ಯಂತ ಕ್ಲಬ್‌ಗಳನ್ನು ನಿರ್ವಹಿಸುತ್ತದೆ ಎಂದು ಹೇಳಿದರು.

ಕ್ಲಬ್‌ಗಳಲ್ಲಿ ವಿವಿಧ ರೀತಿಯ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ. ಪಾಥ್ವೇಸ್ ಪಠ್ಯಕ್ರಮ (ವಿವಿಧ ರೀತಿಯ ಭಾಷಣ ಕಲೆಯನ್ನು ಸುಧಾರಿಸುವುದು), ಭಾಷಣ ಸ್ಪರ್ಧೆ, ಪೂರ್ವಸಿದ್ಧತೆಯಿಲ್ಲದ ಭಾಷಣ, ಹಾಸ್ಯ ಭಾಷಣ ಮತ್ತು ವೇದಿಕೆ ಮೇಲೆ ನಿಂತು ಧೈರ್ಯವಾಗಿ ಮಾತನಾಡಲು ಸಾಮರ್ಥ್ಯ, ನಾಯಕತ್ವದ ಕೌಶಲ್ಯವನ್ನೂ ಸದಸ್ಯರು ಕಲಿಯುತ್ತಾರೆ. ಸಮಯಪಾಲನೆ, ಕಾರ್ಯಕ್ರಮ ನಿರ್ವಹಣೆ, ಭಾಷಣ ಮೌಲ್ಯಮಾಪನ ಹಾಗೂ ಚರ್ಚಾ ಕೌಶಲ್ಯ ಅರಿವು ಮೂಡಿಸಲಾಗುವುದು ಎಂದರು.

Toast Masters Club ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಮತ್ತು ವ್ಯಾಲಿಯು ಹೆಸರಿನ ಎರಡು ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಉದ್ಯಮಿಗಳು, ಗೃಹಿಣಿಯರು ಮತ್ತು ವಿವಿಧ ವಲಯದ ಜನರು ಸಂವಹನ ಮತ್ತು ನಾಯಕತ್ವವನ್ನು ಸುಧಾರಿಸಲು ಕ್ಲಬ್‌ಗಳಲ್ಲಿ ಸೇರುವುದು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಸ್ಮಿತಾ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಡೈರೆಕ್ಟರ್ ಸಾಧ್ವಿ ಚಂದ್ರಕಾಂತ್ ಕ್ಲಬ್ ಅಧಿಕಾರಿಗಳ ಪ್ರಮಾಣ ವಚನ ನಿರ್ವಹಿಸಿದರು. ಪ್ರಮುಖವಾಗಿ ಬೋಧನಾ ಸಿಬ್ಬಂದಿಯಲ್ಲಿ ಕೌಶಲ್ಯಗಳ ಮಹತ್ವದ ಬಗ್ಗೆ ಚರ್ಚಿಸಲಾಯಿತು. ಡಿವಿಷನ್ ಡೈರೆಕ್ಟರ್ ಅಜಯ್ ಪಾಳೇಗಾರ್ ಸಾರ್ವಜನಿಕ ಭಾಷಣದ ಮಹತ್ವದ ಕುರಿತು ಮಾತನಾಡಿದರು.

ನೂತನವಾಗಿ ಆಯ್ಕೆಯಾದ ಕ್ಲಬ್ ಅಧ್ಯಕ್ಷ ಸಿ.ಎ.ಶರತ್ ಮತ್ತು ಡಾ. ತಾಜ್ ಅವರು ವರ್ಷದ ಶೈಕ್ಷಣಿಕ ಯೋಜನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರು ಮತ್ತು ಅತಿಥಿಗಳು ಉಪಸ್ಥಿತರಿದ್ದರು.

D. Devaraja Arasu ಹಸಿದ ಹೊಟ್ಟೆಗೆ ಅನ್ನ ನೀಡಿದವರು ದೇವರಾಜ ಅರಸ್- ಬಿ.ವೈ.ರಾಘವೇಂದ್ರ

0

D. Devaraja Arasu ಶೋಷಿತರು, ಹಿಂದುಳಿದವರು, ತಳ ಸಮುದಾಯ, ರೈತಾಪಿ ವರ್ಗದವರ ಕೈಹಿಡಿದು ಅವರ ಪರವಾಗಿ ಕಾನೂನುಗಳನ್ನು ತರುವ ಮೂಲಕ ಅವರ ಏಳ್ಗೆಗೆ ಶ್ರಮಿಸಿದವರು ಡಿ.ದೇವರಾಜ ಅರಸುರವರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಾಂತಿಕಾರಿ ಬದಲಾವಣೆಯಿಂದ ಹಸಿದ ಹೊಟ್ಟೆಗೆ ಅನ್ನ ನೀಡಿದವರು. ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಜಮೀನ್ದಾರಿ ಪದ್ದತಿಯನ್ನು ನಿರ್ಮೂಲನೆ ಮಾಡಿ ಉಳುವವನೇ ಒಡೆಯನನ್ನಾಗಿ ಮಾಡಿದರು. ಸಾಮಾಜಿಕ ಪಿಡುಗಾಗಿದ್ದ ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಿದರು. ಜೀತದಾಳು ಪದ್ದತಿಗೆ ಮುಕ್ತಿ ನೀಡಿದರು.

ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಹಿಂದುಳಿದವರ ಬೆಳಕಾದರು. ಹಾವನೂರು ವರದಿ ಜಾರಿಗೆ ತರುವ ಮೂಲಕ ಹಿಂದುಳಿದ ವರ್ಗಗಳ ಏಳ್ಗೆಗೆ ಕಾರಣರಾದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿ, ಧರ್ಮಕ್ಕಿಂತ ಮನುಕುಲ ಶ್ರೇಷ್ಟವೆಂದು ಅಸ್ಪೃಶ್ಯರಿಗೆ, ಹಿಂದುಳಿದವರಿಗೆ ನೂರಾರು ಕೆರೆ ಕಟ್ಟೆ, ದೇವಾಲಯ ಕಟ್ಟಿಸಿದರು.

ಕೀಳರಿಮೆ ಬಿಟ್ಟು ಬೃಹತ್ ಆಗಿ ಚಿಂತಿಸಬೇಕು ಹಾಗೂ ಸಮಾಜದ ಏಳ್ಗೆಗಾಗಿ ಎಲ್ಲರೂ ಒಂದಾಗ ಬೇಕು ಎಂದು ಸಾರಿದರು.
ಪ್ರಕೃತಿಗೆ ನಾವು ಇದುವೆರೆಗೆ ಮಾಡಿರುವ ದಬ್ಬಾಳಿಕೆಗೆ ಪ್ರಕೃತಿ ಸುನಾಮಿ, ಭೂಸಿತ ಇತರೆ ವಿಕೋಪದ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಇಂದಿನ ಪೀಳಿಗೆ ಇದನ್ನೆಲ್ಲ ಸೂಕ್ಷ್ಮ ವಾಗಿ ಗಮನಿಸಿ ತಿದ್ದಿ ನಡೆಯಬೇಕು ಎಂದ ಅವರು ಯುವಜನತೆಗೆ ಪ್ರಸ್ತುತ ಅನೇಕ ಉದ್ಯೋಗಾವಕಾಶವನ್ನು ಸರ್ಕಾರಗಳು ಕಲ್ಪಿಸಿವೆ. ರಾಷ್ಟ್ರೀಯ ಕೌಶಲ್ಯಾಭಿವೃದ್ದಿ ಕಾರ್ಯಕ್ರಮದ ವತಿಯಿಂದ 500 ಅತ್ಯುತ್ತಮ ಕಂಪನಿಗಳು ಕೌಶಲ್ಯ ತರಬೇತಿ ಪಡೆದವರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿವೆ. ದಕ್ಷಿಣ ಭಾರತದಲ್ಲೇ ಮೊದಲನೆಯದಾಗಿ ಬೈಂದೂರಿನಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು ಶಿವಮೊಗ್ಗದಲ್ಲಿಯೂ ತರಬೇತಿ ನೀಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ದಿ ಕೆಲಸಗಳು ಉತ್ತಮವಾಗಿ ಸಾಗುತ್ತಿದ್ದು ಜಿಲ್ಲೆಗೆ ಉಜ್ವಲ ಭವಿಷ್ಯವಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಅರಸುರವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ರಾಜ್ಯದ ಚರಿತ್ರೆಯಲ್ಲಿ 70 ರ ದಶಕ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ದೃಷ್ಟಿಯಿಂದ ಭೀಕರವಾಗಿದ್ದು, ಇಂತಹ ವೈಪರೀತ್ಯಗಳ ಸಂದರ್ಭದಲ್ಲಿ ಅರಸುರವರು ರಾಜಕೀಯ ಪ್ರವೇಶ ಮಾಡುತ್ತಾರೆ. ಅರಸು ಮನೆತನದವರಾದರೂ ರೈತ ಕುಟುಂಬದ ಶ್ರಮಜೀವಿ ವ್ಯಕ್ತಿ ಇವರಾಗಿರುತ್ತಾರೆ. ರಾಜ್ಯದಲ್ಲಿ ಮೊತ್ತ ಮೊದಲಿಗೆ ಪ್ರಜಾಸತ್ತಾತ್ಮಕಕವಾಗಿ ಮೈಸೂರು ಸಂಸ್ಥಾನ ಮತ್ತು ಕೊಲಾಪುರ್ ಸಂಸ್ಥಾನಗಳು ಹಿಂದುಳಿದವರಿಗೆ ಮೀಸಲಾತಿಯನ್ನು ಜಾರಿಗೆ ತರುತ್ತಾರೆ.

D. Devaraja Arasu ಮೀಸಲಾತಿ ಒಂದು ವೈಜ್ಞಾನಿಕ ಕ್ರಮವಾಗಿದ್ದು ಮೊದಲ ಬಾರಿಗೆ ಅರಸುರವರು ರೋಸ್ಟರ್ ಪದ್ದತಿ ಜಾರಿಗೆ ತರುತ್ತಾರೆ. ರಾಜಕೀಯವಾಗಿ ಹಲವಾರು ಶಿಷ್ಯಂದಿರನ್ನು ಬೆಳೆಸುತ್ತಾರೆ. ಕೆಲವರಿಗೆ ರಾಜಕೀಯ ಧೀಕ್ಷೆ ನೀಡುತ್ತಾರೆ. 20 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಾರೆ.
. ಅರಸು ಅವರ ಜೀವನವೇ ಆದರ್ಶಮಯ, ತುಂಬಾ ಓದಿಕೊಂಡವರು. ಸಾಮಾನ್ಯ ಜನರಿಗೆ ಮಿಡಿಯುವ ಶಕ್ತಿ ಅವರಲ್ಲಿತ್ತು. ಭೂ ಸುಧಾರಣಾ ಕಾಯ್ದೆ ತಂದಾಗ ಅನೇಕರು ಈ ಕಾನೂನನ್ನು ಒಪ್ಪಿ ನಡೆಯುತ್ತಾರೆ. ಅನಿಷ್ಟ ಪದ್ದತಿಯಾದ ಮಲಹೊರುವ ಪದ್ದತಿ ನಿಷೇಧ ಮಾಡುತ್ತಾರೆ. ಹಾವನೂರು ಕಮಿಷನ್ ಜಾರಿಗೊಳಿಸುವ ಮೂಲಕ ಹಿಂದುಳಿದವರಿಗೆ ಉದ್ಯೊಗ ಶಿಕ್ಷಣ ದೊರೆತು ಬದುಕು ಬದಲಿಸಲು ಸಾಧ್ಯವಾಯಿತು.

ಅನೇಕ ಬಗೆಯ ಖಾತೆಗಳನ್ನು ನಿರ್ವಹಿಸಿದ ಅವರು ಹಲವಾರು ಸುಧಾರಣೆ ತರುತ್ತಾರೆ. 70 ರ ದಶಕದಲ್ಲಿ ರಾಜ್ಯದಲ್ಲಿ ಸರ್ವಾಂಗೀಣ ಬೆಳವಣಿಗೆಯನ್ನು ಮಾಡಿದವರೆಂದರೆ ಅರಸು. .ಜನತಾ ಮನೆ, ಭಾಗ್ಯಜ್ಯೋತಿ ವಿದ್ಯುತ್, ಉದ್ಯೋಗ ಕಚೇರಿ, ನ್ಯಾಯಬೆಲೆ ಅಂಗಡಿ ಸ್ಥಾಪನೆ, ನಿಗಮಗಳ ಸ್ಥಾಪನೆ ಸೇರಿದಂತೆ 150 ಕ್ಕೂ ಹೆಚ್ಚು ಮಹತ್ವದ ಕಾರ್ಯಕ್ರಮ ನೀಡುತ್ತಾರೆ. ರಾಜ್ಯ ಬೆಳಗಿದ ದೊಡ್ಡ ಆಡಳಿತಗಾರನ ರಾಜಕೀಯ ಜೀವನವೇ ರೋಚಕವಾಗಿದ್ದು ಅನೇಕ ಏಳುಬೀಳು ಸಂಭವಿಸುತ್ತವೆ.
ವರದಿಯೊಂದರ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ 1500 ಕ್ಕೂ ಹೆಚ್ಚು ಉಪ ಜಾತಿ ಇವೆ. 89 ಹೊಸ ಜಾತಿ ಸೇರ್ಪಡೆಯಾಗಿದೆ.

ನಾವೆಲ್ಲ ನಮ್ಮ ನಡುವಿನ ಜಾತಿ ಕೋಟಲೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಜಾತೀಯತೆ ಮಾಡದಿರುವುದೇ ನಾವು ಸಮಾಜಕ್ಕೆ ಕೊಡುವ ಕೊಡುಗೆ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ನಾನು ಕೂಡ ಅರಸುರವರ ಸುಧಾರಣಾ ಕಾರ್ಯಕ್ರಮಗಳ ಫಲಾನುಭವಿ. ಅವರೊಬ್ಬ ಸಾಮಾಜಿಕ ಚಿಂತಕ. ಬಡವರು, ದೀನ ದಲಿತರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುತ್ತಿದ್ದ ನಾಯಕ. ಅವರು ವೃತ್ತಿಯಲ್ಲಿ ಹಿಂದುಳಿದವರಿಗಾಗಿ, ಶ್ರಮಿಕರಿಗಾಗಿ, ಶೋಷಿತರಿಗಾಗಿ ಹೋರಾಟ ಮಾಡುತ್ತಿದ್ದರೇ ಹೊರತು ಅವರ ಹೋರಾಟ ಜಾತಿ ಆಧಾರಿತವಾಗಿರಲಿಲ್ಲ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಜ್ಯೋತಿ ಕುಮಾರಿ ಕೆ ವಿ ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಂದಿನ ಕಾಲಘಟ್ಟದಲ್ಲಿದ್ದ ಸಾಮಾಜಿಕ ಸುಶುಪ್ತಿಯನ್ನು ಎಚ್ಚರಿಸಿ, ಸಿದ್ದತೆ ಮೂಲಕ ಉತ್ತರ ನೀಡಿದವರು ಶ್ರೀ ನಾರಾಯಣ ಗುರುಗಳು. ತಮ್ಮ ಹೋರಾಟಕ್ಕೆ ಧೈರ್ಯ ತಂದುಕೊಂಡು ಸಮನ್ವಯ ಸಾಧಿಸಲು ಮುಂದಾಗುತ್ತಾರೆ. ಮನುಷ್ಯ ಧರ್ಮ ಒಂದೇ ಎಂದು ಸಾರುತ್ತಾರೆ. ಅಸ್ಪೃಶ್ಯರಿಗೆ ದೇವಾಲಯಗಳನ್ನೇ ನಿಮ್ಮೆಡೆಗೆ ತರುತ್ತೇನೆಂದು ಅವರಿಗಾಗಿ ದೇವಸ್ಥಾನಗಳನ್ನು ಸ್ಥಾಪಿಸಿ ಧಾರ್ಮಿಕ ಸುಧಾರಣೆ ತರುತ್ತಾರೆ. ಅವರೊಬ್ಬ ಸಾಮಾಜಿಕ ಚಿಕಿತ್ಸಕ. ಶಿಕ್ಷಣದಿಂದ ಸಮಾಜನತೆ ಸಾಧ್ಯವೆಂದು ಅರಿತ ಅವರು 176 ಶಾಲೆಗಳನ್ನು ಹಾಗೂ ಹಲವು ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುತ್ತಾರೆ.. ಅವರ ಹೋರಾಟ ಶಾಂತಿಯುತವಾಗಿದ್ದು ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ. ಮಾನವ ಧರ್ಮ ಶ್ರೇಷ್ಟವೆಂದು ಪ್ರತಿಪಾದಿಸಿದ ಅವರು ಯುವಕರನ್ನು ಸಂಘಟಿಸುವ ಮೂಲಕ ಸಂಘಟನೆಯ ಮಹತ್ವ ತಿಳಿಸುತ್ತಾರೆ.

ಶಾಪಗ್ರಸ್ತ ನಾಡು ಎಂದೆನಿಸಿಕೊಂಡಿದ್ದ ಕೇರಳ ಇಂದು ಅತಿ ಹೆಚ್ಚು ಲಿಂಗಾನುಪಾತ, ಸಾಕ್ಷರತೆ ಇದ್ದು ಬುದ್ದಿವಂತರ ದೇವರನಾಡು ಎಂದು ಕರೆಸಿಕೊಳ್ಳುವಲ್ಲಿ ನಾರಾಯಣ ಗುರುಗಳ ಕೊಡುಗೆಯೂ ಇದೆ ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ: ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಶೇ.100 ಫಲಿತಾಂಶ ಪಡೆದ ವಸತಿ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಾಗೂ ವಸತಿ ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಸದ್ಬಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶೋಭಾ ಕೆ ಆರ್ ಬೋಧಿಸಿದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು. ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷ ವಿ.ರಾಜು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Shivamogga Scouts ಸ್ವಾತಂತ್ರ್ಯೋತ್ಸವದ ಜಿಲ್ಲಾ ಕವಾಯತಿನಲ್ಲಿ ಶಿವಮೊಗ್ಗ ಸ್ಕೌಟ್ಸ್ ಗೆ ದ್ವಿತೀಯ ಪುರಸ್ಕಾರ

0

Shivamogga Scouts ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ನಗರದ ಡಿ. ಎ.ಆರ್ ಗ್ರೌಂಡ್ಸ್ ನಲ್ಲಿ ಏರ್ಪಡಿಸಿದ್ದ 78ನೇ ಸ್ವತಂತ್ರ ದಿನಾಚರಣೆಯಲ್ಲಿ ನಡೆದ ಕವಾಯಿತಿನಲ್ಲಿ ಭಾಗವಹಿಸಿದ್ದ ಸ್ಕೌಟ್ಸ್ ತಂಡ ತನ್ನ ಪ್ರದರ್ಶನಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಪಾರಿತೋಷಕವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಮಧು ಬಂಗಾರಪ್ಪರವರು ನೀಡಿದರು. ಕಾರ‍್ಯಕ್ರಮದಲ್ಲಿ ಶಾಸಕರಾದ ಚನ್ನಬಸಪ್ಪನವರು. ಶ್ರೀಮತಿ ಬಲ್ಕೀಸ್ ಬಾನು, ಎಸ್ ಪಿ ಮಿಥುನ್ ಕುಮಾರ್ ಹಾಗೂ ನಗರದ ಗಣ್ಯರು, ಜಿಲ್ಲಾಡಳಿತದ ಸದಸ್ಯರು ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್.ತಂಡಕ್ಕೆ ತರಬೇತಿ ನೀಡಿದ ಸ್ಕೌಟ್ ಮಾಸ್ಟರ್ ಶ್ರೀ ವೀರಭದ್ರ ಗೌಡ, ಜಿಲ್ಲಾ ಸಹ ಕರ‍್ಯರ‍್ಶಿ ಶ್ರೀ ವೈ ಆರ್ ವೀರೇಶಪ್ಪ, ತಂಡ ನಾಯಕ, ಸ್ಕೌಟ್ ಮಾಸ್ಟರ್ ಶ್ರೀ ಚೇತನ್ ಪಾರಿತೋಷಕ ಸ್ವೀಕರಿಸಿದರು.ಶ್ರೀ ರಾಜೇಶ್ ಅವಲಕ್ಕಿ, ಸ್ಥಳೀಯ ಸಂಸ್ಥೆ ಕರ‍್ಯರ‍್ಶಿ ಉಪಸ್ಥಿತರಿದ್ದರು.

Shivamogga Scouts ಇವರಿಗೆ ಜಿಲ್ಲಾ ಮುಖ್ಯ ಆಯುಕ್ತ ಶ್ರೀ ಕೆ. ಪಿ. ಬಿಂದು ಕುಮಾರ್ ಮತ್ತು ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.