Wednesday, April 1, 2026
Wednesday, April 1, 2026
Home Blog Page 595

Sri Raghavendra Swamy ಆಯನೂರಿನಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353 ನೇ ಆರಾಧನೆ

0

Sri Raghavendra Swamy ಆಗಸ್ಟ್ ತಿಂಗಳ 20 ರಿಂದ 22 ವರೆಗೆ ‌ಎಲ್ಲೆಡೆ ‌ಶ್ರೀರಾಘವೇಂದ್ರ ಸ್ವಾಮಿಗಳ‌ 353 ನೇ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ

Sri Raghavendra Swamy ಶಿವಮೊಗ್ಗ ಸಮೀಪದ ಆಯನೂರಿನಲ್ಲಿ ಶ್ರೀಹಯಾಸ್ಯ ವಾದಿರಾಜರ ಮಂದಿರ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮೂಲ‌ಮೃತ್ತಿಕಾ ಬೃಂದಾವನ ಸನ್ನಿಧಿಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353‌ನೇ ಅರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು.
ಆಗಸ್ಟ್ ತಿಂಗಳ 20 ರಂದು ಆಯನೂರು ಹೊಸೂರಿನ ಮಹಿಳಾ ಭಕ್ರಮಂಡಳಿಯಿಂದ ಹರಿಕೀರ್ತನೆ ನಡೆಯಿತು.

Election Commission ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಗಿಂತ ಬಿಜೆಪಿ ಸಂಸ್ಥೆಯಾಗಿದೆ- -ಹೇಮಂತ್ ಸೊರೈನ್

0

Election Commission ಚಂಪೈ ಸೊರೇನ್ ಸೇರಿದಂತೆ ಐದಾರು ಮಂದಿ ಜೆಎಂಎಂ ಶಾಸಕರು ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳ ನಡುವೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪ್ರತಿಕ್ರಿಯಿಸಿದ್ದು, “ಭಾರತೀಯ ಜನತಾ ಪಕ್ಷ (ಬಿಜೆಪಿ) ಕುಟುಂಬಗಳು ಮತ್ತು ಪಕ್ಷಗಳನ್ನು ವಿಭಜಿಸಲು ಹಣವನ್ನು ಬಳಸುತ್ತಿದೆ. ಬಿಜೆಪಿ ಶಾಸಕರನ್ನು ಖರೀದಿಸುತ್ತದೆ ಮತ್ತು ಹಣದ ಪ್ರಭಾವದಿಂದಾಗಿ ನಾಯಕರು ಹೆಚ್ಚು ಹಿಂಜರಿಕೆಯಿಲ್ಲದೆ ತ್ವರಿತವಾಗಿ, ಸುಲಭವಾಗಿ ಪಕ್ಷವನ್ನು ಬದಲಾಯಿಸುತ್ತಾರೆ” ಎಂದು ಅವರು ಆರೋಪಿಸಿದರು.

ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮುನ್ನ ಚಂಪೈ ಸೊರೇನ್ ಪಕ್ಷವನ್ನು ಬದಲಾಯಿಸಬಹುದು ಎಂಬ ಬಲವಾದ ಊಹಾಪೋಹಗಳ ನಡುವೆ ಮುಖ್ಯಮಂತ್ರಿಯವರ ಈ ಹೇಳಿಕೆ ಬಂದಿದೆ. ಅವರು ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Election Commission ಈ ವರ್ಷ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಬೆಳವಣಿಗೆ ನಿರ್ಣಾಯಕವಾಗಿದೆ.
ಪಾಕುರ್ ಜಿಲ್ಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಮುಖ್ಯ ಸಮ್ಮಾನ್ ಯೋಜನೆ (ಜೆಎಂಎಂಎಸ್‌ವೈ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚುನಾವಣಾ ಆಯೋಗವನ್ನು ಟೀಕಿಸಿದರು.

ಇದು ಸಾಂವಿಧಾನಿಕ ಸಂಸ್ಥೆಗಿಂತ ಬಿಜೆಪಿಯ ಸಂಸ್ಥೆಯಾಗಿದೆ ಎಂದು ಆರೋಪಿಸಿದರು. ತಕ್ಷಣವೇ ಚುನಾವಣೆ ನಡೆಸುವಂತೆ ಸೊರೇನ್ ಬಿಜೆಪಿಗೆ ಸವಾಲು ಹಾಕಿದರು. ಫಲಿತಾಂಶಗಳು ತಮ್ಮ ಪಕ್ಷಕ್ಕೆ ಅನುಕೂಲಕರವಾಗಿ ಮತ್ತು ನಿರ್ಣಾಯಕ ಗೆಲುವಿಗೆ ಕಾರಣವಾಗುತ್ತವೆ ಎಂದು ಅವರು ಸೂಚಿಸಿದರು.

S.N.Chennabasappa ಬಸವ ಗಂಗೂರಿನ ಕೆರೆ ಕೋಡಿ ಒಡೆದು ಅನಾಹುತ.ಶಾಸಕ ಚೆನ್ನಿ ಭೇಟಿ ಪರಿಶೀಲನೆ

0

S.N.Chennabasappa ಶಿವಮೊಗ್ಗ ನಗರದ ಆಶ್ರಯ ಬಡಾವಣೆಯ ಎಫ್ ಬ್ಲಾಕ್ ನಲ್ಲಿ ಬಸವನಗಂಗೂರು ಕೆರೆಯ ಕೋಡಿ ಒಡೆದ ಪರಿಣಾಮ ಭಾರಿ ಪ್ರಮಾಣದ ನೀರು ನುಗ್ಗಿದ್ದು ಇದರ ಪರಿಣಾಮ ಸುಮಾರು 20 ಎಕರೆ ಭತ್ತದ ಗದ್ದೆ ನಾಶವಾಗಿದ್ದು, 40ಕ್ಕೂ ಮನೆಗಳು ಹಾನಿಯಾಗಿದೆ. ಈ ಕುರಿತಂತೆ ಕೂಡಲೇ ಸ್ಥಳಕ್ಕೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ, ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ 2500 (ಒಟ್ಟಾರೆ 5000) ಪರಿಹಾರವನ್ನು ಘೋಷಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

S.N.Chennabasappa ಈ ಸಂದರ್ಭದಲ್ಲಿ ತಹಶೀಲ್ದಾರ್, ವಿಲೇಜ್ ಅಕೌಂಟೆಂಟ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Legal Services Authority ತಂಬಾಕು ದುಷ್ಪರಿಣಾಮ ಜಾಗೃತಿ ಬಗ್ಗೆ ಒಂದುದಿನದ ಕಾರ್ಯಾಗಾರ

0

Legal Services Authority ದಿನಾಂಕ 19.8.2024ರಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಕುರಿತಂತೆ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ತರಬೇತಿ ಕೇಂದ್ರ ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸಂತೋಷ್ ಎಂ ಎಸ್ ಗೌರವಾನ್ವಿತ ಹಿರಿಯ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇವರು ನೆರವೇರಿಸಿದರು. ಭರತ್ ಕುಮಾರ್ ಪೊಲೀಸ್ ಇನ್ಸ್ಪೆಕ್ಟರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Legal Services Authority ಡಾ. ನಟರಾಜ್ ಕೆ ಎಸ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಮಲ್ಲಪ್ಪ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಇವರು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಹೇಮಂತ್ ರಾಜ್ ಅರಸ್ ಜಿಲ್ಲಾ ಸಲಹೆಗಾರರು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಇವರು ಕೋಟ್ಪ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಶಿವಕುಮಾರ್ ಟಿ ಎಸ್ ಆಪ್ತ ಸಮಾಲೋಚಕರು ತಂಬಾಕು ವ್ಯಸನ ಮುಕ್ತಿ ಕೇಂದ್ರ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಇವರು ತಂಬಾಕು ವ್ಯಸನ ಮುಕ್ತಿ ಕೇಂದ್ರದ ಸೇವೆಗಳ ಕುರಿತು ಮಾಹಿತಿ ನೀಡಿದರು. ರವಿರಾಜ್ ಜಿ ಕೆ ಸಮಾಜ ಕಾರ್ಯಕರ್ತರು ಇವರು ನಿರೂಪಣೆ ಮಾಡಿದರು. ಡಿ ಇ ಓ ಪ್ರವೀಣ್, ಕುವೆಂಪು ವಿಶ್ವವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Sahyadri Commerce Science College ಸಂಸ್ಥೆಗಳನ್ನ ಉತ್ತಮ ಧ್ಯೇಯೋದ್ದೇಶಗಳಿಂದ ನಡೆಸಿ- ಡಾ.ಟಿ.ಅವಿನಾಶ್

0

Sahyadri Commerce Science College ಉತ್ತಮ ಮೌಲ್ಯ, ಧ್ಯೇಯೋದ್ದೇಶದೊಂದಿಗೆ ಸಂಸ್ಥೆಯನ್ನು ಮುನ್ನಡೆಸುವುದು ಮುಖ್ಯ ಎಂದು ಸಹ್ಯಾದ್ರಿ ವಾಣಿಜ್ಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಅವಿನಾಶ ಹೇಳಿದರು.
ಫ್ರೆಂಡ್ಸ್ ಸೆಂಟರ್ ಶಿವಮೊಗ್ಗದ 58ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬದಲಾವಣೆಯನ್ನು, ಪರಂಪರೆಯನ್ನು, ನ್ಯೂನತೆಯನ್ನು ತಿದ್ದುವ ಸರಿಪಡಿಸುವ ಪ್ರಯತ್ನವನ್ನು ಇಂತಹ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ ನೂತನ ಕಾರ್ಯಕಾರಿ ಸಮಿತಿಯೊಂದಿಗೆ ಅಧಿಕಾರ ಸ್ವೀಕರಿಸಿ ಮಾತನಾಡಿ, ಸ್ನೇಹದ ಸೇತುವೆ ಕಟ್ಟುವ ಮೂಲಕ ಸೇವೆಯ ಸ್ಪರ್ಶ ಸಂಸ್ಥೆಗೆ ನೀಡುವುದು ನನ್ನ ಉದ್ದೇಶ ಅಂತ ತಿಳಿಸಿದರು.
ಸಂಸ್ಥೆ ವತಿಯಿಂದ ಪ್ರತಿ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಪ್ರಸ್ತಕ ಸಾಲಿನಲ್ಲಿಯೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
Sahyadri Commerce Science College ಸಂಧ್ಯಾ ಸತ್ಯ ನಾರಾಯಣ ಪ್ರಾರ್ಥಿಸಿದರು. ಎಂ.ಎಂ.ವೆಂಕಟೇಶ ಸ್ವಾಗತಿಸಿದರು. ಫ್ರೆಂಡ್ಸ್ ಸೆಂಟರ್ ಹಾಗೂ ನೇತ್ರ ಭಂಡಾರ ನಡೆದು ಬಂದ ದಾರಿಯನ್ನು ಹಿರಿಯ ಸದಸ್ಯ ನಾಗರಾಜ ವಿವರಿಸಿದರು. ಸತ್ಯ ನಾರಾಯಣ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮಲ್ಲಿಕಾರ್ಜುನ ಕಾನೂರ್ ವಾರ್ಷಿಕ ವರದಿ ವಾಚಿಸಿದರು. ಲೋಕೇಶ್ ಅವರು ನೂತನ ಅಧ್ಯಕ್ಷ ಬಿ.ಜಿ.ಧನರಾಜಗೆ ಅಧಿಕಾರ ಹಸ್ತಾಂತರಿಸಿದರು. ಜಿ.ವಿಜಯಕುಮಾರ ನೂತನ ಅಧ್ಯಕ್ಷರ ಪರಿಚಯಿಸಿದರು. ನಿಕಟಪೂರ್ವ ಅಧ್ಯಕ್ಷ ಲೋಕೇಶ್ ದಂಪತಿಗಳಿಗೆ ಸನ್ಮಾನಿಸಲಾಯಿತು. 14 ಜನ ನೂತನ ಸದಸ್ಯರು ಸೇರ್ಪಡೆಯಾದರು. ಮಹಿಳಾ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ಸುನೀತಾ ಮೋಹನ್ ಅವರು ನೂತನ ಅಧ್ಯಕ್ಷೆ ಸಪ್ನಾ ಬದರಿನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಕಾರ್ಯದರ್ಶಿ ರವೀಂದ್ರನಾಥ ಐತಾಳ ವಂದನಾರ್ಪಣೆ ನಡೆಸಿಕೊಟ್ಟರು. ನಿರೂಪಕಿ ರಂಜಿನಿ ದತ್ತಾತ್ತಿ ನಿರೂಪಣೆ ಮಾಡಿದರು

Tirthahalli Police Station ಅತೀ ಮದ್ಯ ಸೇವನೆ, ಮೃತ್ಯುವನ್ನಪ್ಪಿದ ಕೂಲಿ ಕಾರ್ಮಿಕ

0

Tirthahalli Police Station ಅತಿಯಾದ ಮದ್ಯಪಾನದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಸೊಪ್ಪುಗುಡ್ಡೆಯ ಮಾರ್ಕೆಟ್ ರಸ್ತೆಯಲ್ಲಿ ವರದಿಯಾಗಿದೆ.

ಮೃತಪಟ್ಟ ವ್ಯಕ್ತಿ ಇಂದಿರಾನಗರದ ನರಸಿಂಹ (46)ಎನ್ನುವವನಾಗಿದ್ದಾನೆ. ಈತ ಕೂಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಈ ಸಂಬಂಧ ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kimmane Ratnakar ರಾಜ್ಯಪಾಲರು ಅನಗತ್ಯ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ- ಕಿಮ್ಮನೆ ರತ್ನಾಕರ್

0

Kimmane Ratnakar ಈ ದೇಶವು ಪ್ರಜಾಪ್ರಭತ್ವ ಮತ್ತು ಸಂವಿಧಾನದ ಅಡಿಯಲ್ಲಿ ನಿರ್ಮಾಣವಾಗಿದ್ದು, ರಾಜ್ಯಪಾಲರು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಮೇಲೆ ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಈ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ನಂತರ ತಾಲೂಕು ಕಚೇರಿ ಎದುರು ಮಾತನಾಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರದ ಒತ್ತಡದ ಪರಿಣಾಮವಾಗಿ ರಾಜ್ಯಪಾಲರು ಅನಗತ್ಯವಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದರು.
ಈ ಪ್ರಕರಣ ರಾಜಕೀಯ ಒಳಗೊಂಡಂತೆ ಕಾಣುತ್ತಿದೆ. ಭಾರತದ ಸ್ವಾತಂತ್ರ್ಯ ದಿನದ ಮರು ದಿನವೇ ಚುನಾಯಿತ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಒಂದು ಷಡ್ಯಂತ್ರದ ಭಾಗವಾಗಿದ್ದು, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ.

Kimmane Ratnakar ಹಾಗಾಗಿ ರಾಷ್ಟ್ರಪತಿ ತತ್‌ಕ್ಷಣದಲ್ಲಿ ಮಧ್ಯಸ್ಥಿಕೆ ವಹಿಸಿ ಕರ್ನಾಟಕದ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಹಿಂಪಡೆಯುವಂತೆ ತಿಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಕೆಸ್ತೂರ್ ಮಂಜುನಾಥ್, ಡಿ.ಎಸ್.ವಿ.ಶೆಟ್ಟಿ, ಅಮರನಾಥ್ ಶೆಟ್ಟಿ, ಟಿ.ಎಲ್.ಸುಂದರೇಶ್, ರೆಹಮತ್ ಆಜಾದಿ, ಉದಯ್ ಕುಮಾರ್, ಪ.ಪಂ.ಸದಸ್ಯರಾದ ಗೀತಾ ರಮೇಶ್, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ ಮುಂತಾದವರಿದ್ದರು.

Ayanur Manjunath ಶಾಸಕ ವಿಜಯೇಂದ್ರ ಶಿವಮೊಗ್ಗ & ಹಾಸನಕ್ಕೂ ಪಾದಯಾತ್ರೆ ಮಾಡಲಿ – ಆಯನೂರು ಮಂಜುನಾಥ್

0

Ayanur Manjunath ಬಿಜೆಪಿ ಅಧ್ಯಕ್ಞ ಬಿ ವೈ ವಿಜಯೇಂದ್ರ ಶಿವಮೊಗ್ಗ ಮತ್ತು ಹಾಸನಕ್ಕೂ ಪಾದಯಾತ್ರೆ ಮಾಡಲಿ ನೋಡೋಣ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸೋಮವಾರ ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರು ಮೈಸೂರಿಗೆ ಪಾದಯಾತ್ರೆ ಮಾಡಿದ್ದು ಅಲ್ಲ. ಆದರೆ ಅವರು ಅತಿ ಅವಶ್ಯಕವಾಗಿ ಶಿವಮೊಗ್ಗ ಹಾಗೂ ಹಾಸನಕ್ಕೆ ಪಾದಯಾತ್ರೆ ಮಾಡಬೇಕಾಗಿದೆ.

ಹಾಸನದಲ್ಲಿ ಕೇವಲ ಮಹಿಳೆಯರ ಮೇಲಷ್ಟೇ ಅಲ್ಲ, ಪುರುಷರ ಮೇಲೂ ಅತ್ಯಾಚಾರ ನಡೆದಿದೆ. ಇಬ್ಬರನ್ನೂ ರಕ್ಷಣೆ ಮಾಡಬೇಕಾಗಿದೆ. ಅಲ್ಲಿಗೆ ಪಾದಯಾತ್ರೆ ಮಾಡಲಿ ಎಂದರು.

ಶಿವಮೊಗ್ಗಕ್ಕೂ ಪಾದಯಾತ್ರೆ ಮಾಡಲಿ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಾಚಾರಗಳು ಸಾಕಷ್ಟಿವೆ. ಚೋಟಾ ಸಹಿ ಮಾಡಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ ಇತಿಹಾಸವಿದೆ. ಇಲ್ಲಿಗೂ ಪಾದಯಾತ್ರೆ ಮಾಡಲಿ. ಅವರ ಕುಟುಂಬದ ಆಸ್ತಿಯ ಬಗ್ಗೆ ತನಿಖೆಗೆ ಆಗ್ರಹಿಸಲಿ ಎಂದರು.

Ayanur Manjunath ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈವಾಡವಿದೆ. ಬಹುಮತ ಪಡೆದ ಸರ್ಕಾರವನ್ನು ಬೀಳಿಸಿದ ದುರುದ್ದೇಶವಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಾಮಾಣಿಕರಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರವನ್ನು ನೈತಿಕವಾಗಿ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೊಬ್ಬ ದೂರು ನೀಡಿದ್ದಕ್ಕೆ ರಾಜ್ಯಪಾಲರು ಈ ರೀತಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಸಿದ್ಧರಾಮಯ್ಯ ಪರ 136 ಶಾಸಕರು ಕೂಡ ಇದ್ದೇವೆ. ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಏನೂ ಆಗುವುದಿಲ್ಲ. ಯಡಿಯೂರಪ್ಪ ಸೇರಿದಂತೆ ಅವರ ಮಕ್ಕಳು ಕೂಡ ಭ್ರಷ್ಟರಾಗಿದ್ದಾರೆ ಎಂದರು.

ಎಸ್.ಸಿ., ಎಸ್.ಟಿ. ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಮಾತನಾಡಿ, ಇದು ಬಿಜೆಪಿಯವರ ಹುನ್ನಾರವಾಗಿದೆ. ಯಾರು ಏನು ಮಾಡಿದರೂ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆನ್ನಹಿಂದೆ ನಾವೆಲ್ಲರೂ ಇದ್ದೇವೆ ಎಂದರು.

Belur Gopalakrishna ಪಕ್ಷ ಬಿಜೆಪಿ. ನಿಷ್ಠೆ ಕಾಂಗ್ರೆಸ್ ಶಾಸಕರಿಗೆ.ಗೆಲುವಿಗೆ ಹರಕೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತ

0

Belur Gopalakrishna ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಗೆಲುವಿಗಾಗಿ ಬಿಜೆಪಿ ಪಕ್ಷದ ಕಟ್ಟಾ ಕಾರ್ಯಕರ್ತರೊಬ್ಬರು ಪಟ್ಟಣದ ಪುರಾಣ ಪ್ರಸಿದ್ಧ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಸೋಮವಾರ ಪಟ್ಟಣದ ಸಿದ್ಧಿವಿನಾಯಕ ದೇವಸ್ಥಾನದ ಸನ್ನಿಧಿಗೆ ಆಗಮಿಸಿ ತನ್ನ ಅಭಿಮಾನಿಯೊಂದಿಗೆ ಹರಕೆಯನ್ನು ಸಲ್ಲಿಸಿದರು.

ರಿಪ್ಪನ್ ಪೇಟೆ ಪಟ್ಟಣದ ಬಿಜೆಪಿ ಕಟ್ಟಾ ಕಾರ್ಯಕರ್ತ ಹರೀಶ್ ಪ್ರಭು ಎಂಬುವರು ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣರವರ ಗೆಲುವಿಗಾಗಿ ಪಟ್ಟಣದ ಪುರಾಣ ಪ್ರಸಿದ್ದ ಶ್ರೀ ಸಿದ್ಧಿವಿನಾಯಕ ಸ್ವಾಮಿಗೆ ಬೆಣ್ಣೆ ಅಲಂಕಾರದ ಸೇವೆಯ ಹರಕೆ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಅಭಿಮಾನಿಯೊಂದಿಗೆ ಪಟ್ಟಣದ ದೇವಸ್ಥಾನಕ್ಕೆ ಆಗಮಿಸಿ ಹರಕೆಯನ್ನು ಸಲ್ಲಿಸಿದ್ದಾರೆ.
ನಂತರ ಮಾತನಾಡಿದ ಹರೀಶ್ ಪ್ರಭು, ಮೂವತ್ತು ವರ್ಷಗಳಿಂದ ನಾನು ಸಂಘ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ, ನಾನು ಈಗಲೂ ಬಿಜೆಪಿ ಪಕ್ಷದ ಕಟ್ಟಾ ಕಾರ್ಯಕರ್ತನಾಗಿದ್ದು ನನ್ನ ರಕ್ತದ ನರ ನಾಡಿಗಳಲ್ಲಿ ಬಿಜೆಪಿ ಪಕ್ಷದ ಸಿದ್ಧಾಂತವಿದೆ ಆದರೆ ಶಾಸಕ ಬೇಳೂರು ಗೋಪಾಲಕೃಷ್ಣರವರ ಮಾನವೀಯ ಮೌಲ್ಯಗಳು ಹಾಗೂ ಅವರ ಉಪಕಾರದ ಮನೋಭಾವ ನನ್ನನ್ನು ಪಕ್ಷದ ಚೌಕಟ್ಟನ್ನು ಮೀರಿ ಅವರ ಪರವಾಗಿ ನಿಲ್ಲುವಂತೆ ಮಾಡಿದೆ.

Belur Gopalakrishna ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣರವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡಿದ್ದವು ಈ ಹಿನ್ನೆಲೆಯಲ್ಲಿ ಪಟ್ಟಣದ ಪುರಾಣ ಪ್ರಸಿದ್ಧ ಸಿದ್ಧಿ ವಿನಾಯಕ ಸ್ವಾಮಿಯ ಮೊರೆ ಹೋಗಿದ್ದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪ್ರಚಂಡ ಬಹುಮತದೊಂದಿಗೆ ಗೆಲ್ಲುವುದರೊಂದಿಗೆ ನನ್ನ ಅಭಿಲಾಷೆ ಈಡೇರಿದೆ.

ಈ ಹಿನ್ನೆಲೆಯಲ್ಲಿ ಇಂದು ಅವರ ಸಮ್ಮುಖದಲ್ಲಿ ನನ್ನ ಹರಕೆಯನ್ನು ಸಲ್ಲಿಸಿದ್ದೇನೆ ಹಾಗೂ ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಮಂತ್ರಿಯಾಗುವುದರೊಂದಿಗೆ ಇನ್ನಷ್ಟು ಉನ್ನತ ಹುದ್ದೆಗೆ ಏರಲಿ ಎಂದು ಮತ್ತೆ ಹರಕೆ ಮಾಡಿಕೊಂಡಿದ್ದೇನೆ ಎಂದರು.

Klive Special Article ಕಲಿಯುಗದ ಕಲ್ಪತರು, ಕಾಮಧೇನು

0

Klive Special Article ಲೇ:ಎನ್.ಜಯಭೀಮ್ ಜೊಯಿಸ್.ಶಿವಮೊಗ್ಗ

“ಕರೆದರೆ ಬರಬಾರದೇ ಗುರು ರಾಘವೇಂದ್ರ/
ವರ ಮಂತ್ರಾಲಯ ಪುರ ಮಂದಿರ ತವ
ಚರಣ ಸೇವಕರು ಕರವ ಮುಗಿದು.”//
ಇದು ರಾಯರ ಮೇಲೆ “ಕಮಲೇಶ ವಿಠಲ” ಅಂಕಿತ
ದಿಂದ ಅಲಂಕೃತರಾದ ಹರಿದಾಸರಾದ ಸುರಪುರದ
ಆನಂದ ದಾಸರು ತುಂಗಭದ್ರೆಯ ಪ್ರವಾಹದಿಂದ
ಪಾರಾಗಿ ಬಂದು ಮಂತ್ರಾಲಯದಲ್ಲಿ ಶ್ರೀರಾಯರ
ಬೃಂದಾವನ ದರ್ಶನ ಮಾಡಿದಾಗ ರಚಿಸಿದ ಕೃತಿ.
ಸುರಪುರದ ಆನಂದ ದಾಸರು ಪಂಚಮುಖಿ ಪ್ರಾಣ
ದೇವರ ದರ್ಶನ ಮಾಡಿಕೊಂಡು ಶ್ರೀರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಬರುವಾಗ ದಾರಿಯಲ್ಲಿ ತುಂಗಭದ್ರೆ ತುಂಬಿ ಹರಿಯುತ್ತಿದ್ದಾಳೆ.ಬೆಳದಿಂಗಳ
ಬೆಳಕು ಹರಡಿದೆ.ಆನಂದದಾಸರು ನದಿಯದಡದಲ್ಲಿದ್ದ ಅಂಬಿಗರನ್ನು ಒತ್ತಾಯಿಸಿ
ಹರಿಗೋಲಿನಿಂದ ತುಂಗಭದ್ರೆಯನ್ನು ದಾಟಿಸಲು
ಒಪ್ಪಿಸಿ ಹರಿಗೋಲಿನಲ್ಲಿ ಕುಳಿತೇಬಿಟ್ಟರು.
ಹರಿಗೋಲು ನದಿಯ ಮಧ್ಯದಲ್ಲಿ ಬಂದಿದೆ.ಪ್ರವಾಹ
ಹೆಚ್ಚಾಗಿ ಕ್ಷಣಕ್ಷಣಕ್ಕೂ ನೀರಿನ ಸೆಳವು ಹೆಚ್ಚಿ ಹರಿಗೋಲು ಅಂಬಿಗನ ಹಿಡಿತ ತಪ್ಪಿ ತೇಲುತ್ತಾ
ಹೋಗಿ ಬಂಡೆಗೆ ತಾಗಿ ನಿಲ್ಲುತ್ತದೆ.ಅಂಬಿಗನಿಗೆ
ಈಜು ಬರುತ್ತಿದ್ದುದರಿಂದ ಅವನು ತನ್ನ ಜೀವವನ್ನು
ರಕ್ಷಿಸಿಕೊಳ್ಳುತ್ತಾನೆ.ದಾಸರಿಗೆ ಈಜು ಬಾರದ್ದರಿಂದ
ಇನ್ನೇನು ನಾನು ತುಂಗಭದ್ರೆಯ ಪಾಲಾಗುತ್ತೇನೆ,
Klive Special Article ಮಂತ್ರಾಲಯ ಪ್ರಭುಗಳೇ ತಮ್ಮನ್ನು ಕಾಪಾಡಬೇಕು ಎಂದು ಭಕ್ತಿಯಿಂದ ರಾಯರನ್ನು
ಸ್ಮರಿಸಿ ಶ್ರೀರಾಘವೇಂದ್ರಸ್ತೋತ್ರವನ್ನು ಹೇಳಿಕೊಳ್ಳುತ್ತಾ ಶ್ರೀರಾಘವೇಂದ್ರಾಯನಮಃ
ಎಂದು ಜಪವನ್ನೂ ಮಾಡತೊಡಗಿದರು.ಇಬ್ಬರು ಕಾವಿಧಾರಿಗಳು ನದಿಯ ಪ್ರವಾಹದಲ್ಲಿ ಈಜಿಕೊಂಡು ಬಂದು ಇವರನ್ನು ಕರೆದುಕೊಂಡು
ನದಿಯ ದಡವನ್ನು ಸೇರಿಸುತ್ತಾರೆ.ದಾಸರಿಗೆ
ಒಬ್ಬರುತನ್ನಹೆಸರುರಾಘಪ್ಪಎಂತಲೂ,ಮತ್ತೊಬ್ಬರುವಾದಪ್ಪ ಎಂತಲೂ ಹೇಳಿ ಅದೃಶ್ಯರಾಗುತ್ತಾರೆ.
ಮಂತ್ರಾಲಯ ತಲುಪಿದ ದಾಸರು ಗುರುರಾಯರ ಬೃಂದಾವನದ ಎದುರುನಿಂತುಕೊಂಡು ಆನಂದ ಭಾಷ್ಪ ಸುರಿಸುತ್ತಾ “ಕರೆದರೆ ಬರಬಾರದೇ”ಎಂದು ಶ್ರೀರಾಯರಮೇಲೆ ಆನಂದ ಪರವಶರಾಗಿ ಹಾಡುತ್ತಾರೆ.
ಆಗ ಅಲ್ಲಿಗೆ ದಾಸರಗುರುಗಳಾದಇಭರಾಮಪುರದ
ಶ್ರೀಅಪ್ಪಾವರುಶ್ರೀರಾಯರದರ್ಶನಕ್ಕೆಬರುತ್ತಾರೆ.
ಜ್ಞಾನಿಗಳಾದಅಪ್ಪಾವರುದಾಸರನ್ನುಪ್ರವಾಹದಿಂದಪಾರುಮಾಡಿದವರುರಾಯರುಮತ್ತುವಾದೀಂದ್ರರು ಎಂದು ಹೇಳುತ್ತಾರೆ.ಹೀಗೆ ರಾಯರು ತಮ್ಮನ್ನು ನಂಬಿದಭಕ್ತರನ್ನುಹೇಗೆಸಂಕಷ್ಟಗಳಿಂದಕಾಪಾಡು
ವರು ಎಂಬುದು ತಿಳಿಯುತ್ತದೆ.
“ರಾಯರು,ಗುರುರಾಯರು,ಗುರುರಾಜರು”ಈ ಹೆಸರನ್ನು ಕೇಳಿದರೇ ನಮ್ಮ ನರನಾಡಿಗಳೆಲ್ಲ ಭಕ್ತಿಯಿಂದ ಕಂಪಿಸುತ್ತವೆ.ಆ ಹೆಸರನ್ನು ನೆನೆದರೆ,ಮನಸ್ಸಿನಲ್ಲಿ ಒಂದು ರೀತಿಯ ಧೈರ್ಯಮೂಡುತ್ತದೆ.
ಲೋಕದಲ್ಲಿಕೆಲವರುಕೇವಲತಮಗಾಗಿಬದುಕು
ತ್ತಾರೆ.ಇನ್ನು ಕೆಲವರುತಮ್ಮಸಾಧನೆಮರೆತುಕೇವಲ ಸಮಾಜಕ್ಕಾಗಿಬದುಕುತ್ತಾರೆ.ಆದರೆವಿಶಿಷ್ಟವ್ಯಕ್ತಿಗಳು
ಕೆಲವರುತಮ್ಮ ಸಾಧನೆಯ ಜೊತೆಗೆ ಸಮಾಜಕ್ಕೆ ಒಳಿತನ್ನುಮಾಡುವ ಗುರಿ ಹೊಂದಿರುತ್ತಾರೆ.ಅಂತಹ ಸಾಧಕರಲ್ಲಿಶ್ರೀರಾಘವೇಂದ್ರಗುರುಸಾರ್ವಭೌಮರು
ಅತ್ಯುನ್ನತಶ್ರೇಣಿಯಲ್ಲಿಕಂಡುಬರುತ್ತಾರೆ.ಶ್ರೀರಾಯರುತಾವುಸಾಧನೆಯನ್ನುಮಾಡುವುದಲ್ಲದೇಆಸಾಧನೆಯ ಫಲವನ್ನು ಜಾತಿಭೇದವಿಲ್ಲದೆ ಎಲ್ಲಾ ಭಕ್ತ ಜನರಿಗೆ ಹಂಚುತ್ತಾ ತಾವುಒಬ್ಬ ನಿಸ್ವಾರ್ಥ ಯೋಗಿ
ಗಳಾಗಿದ್ದಾರೆ.
ಸನ್ಯಾಸತ್ವವನ್ನು ಸ್ವೀಕರಿಸಿದವರು ಯಾವರೀತಿ
ಬದುಕಬೇಕುಯಾವರೀತಿಯಾಗಿಸಮಾಜಮುಖಿಯಾಗಿರಬೇಕೆಂಬುದನ್ನು ತಮ್ಮನಡೆ ನುಡಿಯಲ್ಲಿ ತೋರಿಸಿಕೊಟ್ಟಮಹಾನುಭಾವರುರಾಯರು.
ಶ್ರೀರಾಯರು ತಮ್ಮ ಭಕ್ತರು ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವಂತೆ ಕೋರಿ ಶರಣು ಹೋದವರಿಗೆ ಸಂಕಷ್ಟಗಳನ್ನು ಪರಿಹರಿಸಿ ಅನುಗ್ರಹಿಸಿದ್ದಾರೆ.
ರಾಯರ ಮೊದಲನೆಯ ಅವತಾರವಾದ ಪ್ರಹ್ಲದಾವತಾರದಲ್ಲಿ,ಪ್ರಹ್ಲಾದರಾಜರು ಬಾಲ್ಯದಲ್ಲಿ
ತನ್ನ ಸ್ನೇಹಿತರಿಗೆ ಭಗವಂತನ ಆರಾಧನೆ ಎಂದರೆ ಕೇವಲ ಪ್ರತಿಮೆಯ ಪೂಜೆಯೊಂದೇ ಅಲ್ಲ,ಎಲ್ಲಾ
ಸಜ್ಜನರ ಒಳಗೆ ಭಗವಂತನನ್ನು ಕಂಡುಕೊಂಡು
ಅವರಲ್ಲಿ ಪ್ರೀತಿ ತೋರಿಸಿ,ಅವರಕಷ್ಟಗಳಿಗೆಸ್ಪಂದಿಸಿ
ಸಹಾಯ ಮಾಡುವುದೇ ನಿಜವಾದ ಭಗವಂತನ ಪೂಜೆ ಎಂದು ತಿಳಿಸುತ್ತಾರೆ.
ಅದರಂತೆ ರಾಯರು ಎಲ್ಲಾ ಭಕ್ತರಲ್ಲೂ ಭಗವಂತ
ನನ್ನು ಕಂಡು ಅವರ ಕಷ್ಟಗಳನ್ನು ಪರಿಹರಿಸುತ್ತಾ ತಮ್ಮಸಾಧನೆಯನ್ನುಪೂರ್ಣಗೊಳಿಸಿಕೊಳ್ಳುತ್ತಿ
ದ್ದಾರೆ.ಎರಡನೆಯಅವತಾರವಾದಬಾಲ್ಹೀಕರಾಜರಾಗಿಕುರುವಂಶದಲ್ಲಿ ಹುಟ್ಟಿ ಭೀಮಸೇನ ದೇವರಿಂದ ಅವರ ಅವತಾರ ಸಮಾಪ್ತಿಯಾಗುತ್ತದೆ.
ಮೂರನೆಯ ಅವತಾರದಲ್ಲಿ ವ್ಯಾಸರಾಯರಾಗಿ
ಅವತರಿಸಿವಿಜಯೀಂದ್ರತೀರ್ಥರುಮತ್ತುವಾದಿರಾಜ
ರಂತಹಜ್ಞಾನಿಗಳನ್ನುಲೋಕಕ್ಕೆಕೊಟ್ಟಂತಹಮಹಾತ್ಮರು.ಪುರಂದರದಾಸರು ಮತ್ತು ಕನಕದಾಸರಂತಹ
ಹರಿದಾಸರತ್ನಗಳಿಗೆಅಂಕಿತವನ್ನುಪ್ರದಾನಮಾಡಿರುವಮಹಾನುಭಾವರು.ಇನ್ನುನಾಲ್ಕನೆಯಅವತಾರವೇ ನಾವು ಭಕ್ತಿಯಿಂದ ಆರಾಧಿಸುತ್ತಿರುವ ಶ್ರೀರಾಘವೇಂದ್ರ ಗುರು ಸೌರ್ವಭೌಮರು.
ಈ ಕಲಿಯುಗದಲ್ಲಿ ಶ್ರೀರಾಯರು ತಾವು
ಸಂಪಾದಿಸಿದ್ದ ಪುಣ್ಯವನ್ನು ಭಕ್ತಕೋಟಿಗೆ ಧಾರೆ
ಯೆರೆಯುತ್ತಿರುವ ಕರುಣಾಮಯಿಗಳು.ರಾಯರು ಹುಟ್ಟಿದ್ದುತಮಿಳುನಾಡಿನಭುವನಗಿರಿಯಲ್ಲಿ,ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ್ದು ಆಂಧ್ರ
ಪ್ರದೇಶದ ಮಂತ್ರಾಲಯದಲ್ಲಿ.ದೇಶ ವಿದೇಶಗಳಲ್ಲಿ ಅಪಾರಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವವರು ರಾಯರು.ಶ್ರೀರಾಘವೇಂದ್ರತೀರ್ಥರುಅವರ
ವೇದಾಂತಸಾಮ್ರಾಜ್ಯದ ಪೀಠವನ್ನಲಂಕರಿಸಿದ 50 ವರ್ಷಗಳ(ಕ್ರಿಶ1621ರಿಂದಕ್ರಿಶ1671)ಅವಧಿಯಲ್ಲಿ
ಬಹಳಷ್ಟು ಗ್ರಂಥಗಳನ್ನು ರಚಿಸಿದ್ದಾರೆಂದು
ತಿಳಿದು ಬರುತ್ತದೆ.ಶ್ರೀರಾಯರು ಅಲಂಕಾರಶಾಸ್ತ್ರ,
ಕಾವ್ಯ,ಕವಿತಾ,ನಾಟಕಕಲೆ,,ನ್ಯಾಯ,ವ್ಯಾಕರಣ,ಪೂರ್ವಮೀಮಾಂಸಾ,ವೇದ,ಸ್ಮ್ರುತಿ ಇವುಗಳಲ್ಲಿ ಪಾರಂಗತರಾಗಿದ್ದರಲ್ಲದೆ ಸಂಗೀತ ಶಾಸ್ತ್ರದಲ್ಲೂ
ಪಾರಂಗತರಾಗದ್ದರೆಂದು ಅವರ ಆಪ್ತ ಶಿಷ್ಯರಾಗಿದ್ದ ಅಪ್ಪಣ್ಣಾಚಾರ್ಯರಿಂದ ತಿಳಿದುಬರುತ್ತದೆ.
“ಇಂದು ಎನಗೆ ಗೋವಿಂದ ನಿನ್ನಯ ಪಾದಾರ
ವಿಂದವತೋರೋಮುಕುಂದಇಂದಿರೆರಮಣ”
ಎಂಬ ಕೃತಿಯು ರಾಯರಿಗೆಕವಿತಾ ರಚನೆಯ ಸಾಮರ್ಥ್ಯ ಮತ್ತು ಸಂಗೀತ ಶಾಸ್ತ್ರದಲ್ಲಿಯ ನಿಪುಣತೆಗೆ ಸಾಕ್ಷಿಯಾಗಿದೆ.
ಫಾಲ್ಗುಣಮಾಸದ ಶುಕ್ಲ ಪಕ್ಷದ ದ್ವಿತೀಯದಂದು
ಶ್ರೀರಾಯರ ಪಟ್ಟಾಭಿಷೇಕ ಮಹೋತ್ಸವವೂ ಮತ್ತು ಇದೇ ಮಾಸದ ಶುಕ್ಲಪಕ್ಷದ ಸಪ್ತಮಿಯಂದು ರಾಯರ ವರ್ಧಂತಿಉತ್ಸವವನ್ನುಬಹಳವಿಜೃಂಭಣೆ
ಯಿಂದ ಆಚರಿಸಲಾಗುತ್ತದೆ.
ಫಾಲ್ಗುಣಮಾಸದಶುಕ್ಲಪಕ್ಷದದ್ವಿತೀಯಾದಿಂದ ಸಪ್ತಮಿವರೆಗೆಶ್ರೀರಾಯರಿಗೆವಿಶೇಷಪೂಜೆ,ಉತ್ಸವಗಳುಮತ್ತುಪಂಡಿತರಿಂದಉಪನ್ಯಾಸಕಾರ್ಯಕ್ರಮಗಳುನಡೆಯುತ್ತವೆ.ಈಒಂದುವಾರವನ್ನು”ಶ್ರೀರಾಘವೇಂದ್ರಸಪ್ತಾಹ”ವೆಂದೂ ಆಚರಿಸಲಾಗುತ್ತದೆ.
ಶ್ರೀರಾಯರು ಶ್ರೀರುಧಿರೋದ್ಗಾರಿ ಸಂವತ್ಸರದ
ಶ್ರಾವಣ ಬಹುಳ ದ್ವಿತೀಯಾದಂದು(ಕ್ರಿ ಶ1671ನೇ ಆಗಸ್ಟ್ ಮಾಹೆ)ಸಶರೀರಾಗಿ ವೃಂದಾವನವನ್ನು ಪ್ರವೇಶ ಮಾಡಿದ್ದಾರೆ‌.ಈ ವಿಶೇಷವಾದ ದಿನವನ್ನು ಶ್ರೀರಾಯರ ಆರಾಧನಾ ಮಹೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.ಈ ವರ್ಷ ಶ್ರಾವಣ ಬಹುಳ ಬಿದಿಗೆಯಂದು ಆಚರಿಸುತ್ತಿರುವುದು ಶ್ರೀರಾಯರ 353ನೇವರ್ಷದಆರಾಧನಾಮಹೋತ್ಸವವಾಗಿರುತ್ತೆ


ಎನ್.ಜಯಭೀಮ್ ಜೊಯ್ಸ್.ಶಿವಮೊಗ್ಗ