Nuliya Chandayya ಕಾಯಕವೇ ಶ್ರೇಷ್ಟವೆಂದು ಕಾಯಕ ಪರಂಪರೆಗೆ ಶಕ್ತಿ ನೀಡಿದ ಶ್ರೀ ನುಲಿಯ ಚಂದಯ್ಯನವರ ವಚನಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕೊರಮ ಹಾಗೂ ಕೊರಚ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
48 ಕ್ಕೂ ಹೆಚ್ಚು ವಚನಗಳನ್ನು ನೀಡಿದ ಚೇತನ ಇವರು. ಇವರ ಚಿಂತನೆಗಳು ಸಮಾಜದಲ್ಲಿ ಮುಂದೆ ಸಾಗಬೇಕು. ಎಲ್ಲ ಸಮುದಾಯದವರು ಒಟ್ಟಾಗಿ ಸೇರಿ ನುಲಿಯ ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಮಾಡುವ ಮೂಲಕ ಅವರ ಯೋಚನೆಯನ್ನು ಮುನ್ನಡೆಸಬೇಕು. ಹುಟ್ಟಿನಿಂದಲೂ ಹಗ್ಗ ಮಾಡುವ ಕೆಲಸ ಮಾಡುತ್ತಿದ ಅವರು ಶೂನ್ಯ ಸಂಪಾದನೆಯಲ್ಲಿ ಕಾಯಕ ಯೋಗ ಮುನ್ನಡೆಸಿದರು. ಇವರ ಸಾಧನೆಯು ನಮ್ಮೆಲ್ಲರಿಗೆ ಮಾದರಿಯಾಗಿದ್ದು ಅವರ ವಚನಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಆಶಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಬಸವಾದಿ ಶರಣದಾರ ನುಲಿಯ ಚಂದಯ್ಯನವರು ತಮ್ಮ ಕಾಯಕದಿಂದ ಹೆಸರಾದವರು. ದುಡಿದು ತಿನ್ನಬೇಕು ಎನ್ನುತ್ತಿದ್ದ ಇವರು ತಮ್ಮ ದುಡಿಮೆಯ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದರು. ಇಂತಹ ಮಹಾನುಭಾವರ ಸಂದೇಶಗಳನ್ನು ನಾವೆಲ್ಲ ಎಲ್ಲೆಡೆ ಪ್ರಚಾರ ಮಾಡಬೇಕು ಎಂದ ಅವರು ರಾಜ್ಯ ಸರ್ಕಾರ ಬಡವರು, ಹಿಂದುಳಿದ ವರ್ಗಗಳ ಏಳ್ಗೆಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅರ್ಹರೆಲ್ಲ ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಬೇಕೆಂದರು.
Nuliya Chandayya ಶಿವಮೊಗ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ರವೀಂದ್ರಕುಮಾರ್ ಕೆ ಆರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನುಲಿಯ ಚಂದಯ್ಯನವರು ಕಾಯಕಯೋಗಿ ಬಸವಣ್ಣನವರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಅನುಭವ ಮಂಟಪಕ್ಕೆ ಸೇರುತ್ತಾರೆ. ಹುಲ್ಲು ತಂದು ಹಗ್ಗ ಹೊಸೆದು ಮಾರಿ ಬಂದ ಹಣದಲ್ಲಿ ಜಂಗಮ ದಾಸೋಹ ಮಾಡುತ್ತಿದ್ದರು. ಮಡಿವಾಳ ಮಾಚಯ್ಯ, ಚನ್ನಬಸವಣ್ಣ, ಅಕ್ಕ ನಾಗಮ್ಮ ಹೀಗೆ ಹಲವಾರು ಶರಣರೊಂದಿಗೆ ಕಾಯಕದಲ್ಲಿ ನಿರತರಾಗಿ ಲಿಂಗಧಾರಣೆ ಮಾಡಿ, ಸಹ್ಯಾಹಾರಿಗಳಾಗಿ ತಮ್ಮ ಕಾಯಕ ಹಾಗೂ ಜಂಗಮ ದಾಸೋಹದಲ್ಲಿ ತೊಡಗುತ್ತಾರೆ. ಕಲ್ಯಾಣ ಕ್ರಾಂತಿಯ ವೇಳೆ ಶರಣರ ವಚನಗಳನ್ನು ಸುಟ್ಟು ಹಾಕಲಾಗುತ್ತದೆ. ಆಗ ನುಲಿಯ ಚಂದಯ್ಯನವರು ಕಲ್ಯಾಣ ತ್ಯಜಿಸಿ ಎಣ್ಣೆಹೊಳೆ ನಂತರ ನಂದಿಗ್ರಾಮಕ್ಕೆ ಬಂದು ತಮ್ಮ ವಚನಗಳ ಮೂಲಕ ಶರಣ ತತ್ವವನ್ನು ಸಾರುತ್ತಾರೆ. ತದನಂತರ ನುಲೇನೂರಿನಲ್ಲಿ ಐಕ್ಯವಾಗುತ್ತಾರೆ ಎಂದು ತಿಳಿಸಿದರು
ಶಿವಮೊಗ್ಗ ತಾಲ್ಲೂಕು ತಹಶೀಲ್ದಾರರಾದ ಗಿರೀಶ್ ಮಾತನಾಡಿ, ಶರಣರು ರಚಿಸಿರುವ, ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗುವ ವಚನಗಳಲ್ಲಿರುವ ಸಾರವನ್ನು ನಾವೆಲ್ಲವರೂ ಅಳವಡಿಸಿಕೊಳ್ಳಬೇಕು. ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆ ಮನೆಗಳಲ್ಲಿ ದಿನಕ್ಕೆ ಒಂದಾದರೂ ವಚನಗಳನ್ನು ಓದುವಂತಾಗಬೇಕು. ವಚನಗಳು ಶರಣರ ಜೀವಾನುಭವವನ್ನು ತಿಳಿಸುತ್ತದೆ. ಕಾಯಕದ ಮಹತ್ವವನ್ನು ಸಾರುತ್ತದೆ. ಇಂತಹ ಮಹಾನುಭಾವರ ಜಯಂತಿಯAದು ಎಲ್ಲ ಸಮುದಾಯವರು ಒಟ್ಟಿಗೆ ಸೇರಿ ಜಯಂತಿಯನ್ನು ಆಚರಿಸಬೇಕು ಹಾಗೂ ಅವರ ಕೆಲವಾದರೂ ತತ್ವಗಳನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಕೊರಮ ಜನಾಂಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪಕೀರಪ್ಪ ಭಜಂತಿ ಮಾತನಾಡಿ, ನೂಲು ಹುಣ್ಣಿಮೆಯ ಪವಿತ್ರ ದಿನದಂದು ಶರಣ ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆ.ಕಾಯಕದ ಮುಂದೆ ಏನೂ ಇಲ್ಲ. ಕಾಯಕವೇ ಶ್ರೇಷ್ಟವೆಂದು ಪ್ರತಿಪಾದಿಸಿದವರು ನುಲಿಯ ಚಂದಯ್ಯನವರು. ಇಂತಹ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬರಬೇಕು. ನಮ್ಮಲ್ಲಿ ಸಂಘಟನೆಯ ಕೊರತೆ ಇದೆ. ಇನ್ನು ಮುಂದೆ ಸಂಘಟಿತರಾಗಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೆಂದು ಆಶಿಸಿದರು.
ಜಿಲ್ಲಾ ಕೊರಚರ ಮಹಾಸಂಘದ ಅಧ್ಯಕ್ಷ ಶ್ರೀನಿವಾಸ್ ಜಿ ಮಾತನಾಡಿ, ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಶುಭ ಕೋರಿ, ಸೆ.18 ರಂದು ನಗರ ಅಂಬೇಡ್ಕರ್ ಭವನದಲ್ಲಿ ಸಂಘದ ವತಿಯಿಮದ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬಂದು ಯಶಸ್ವಿಗೊಳಿಸಬೇಕೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.
Nuliya Chandayya ನುಲಿಯ ಚಂದಯ್ಯನವರ ಸಾಧನೆ ನಮಗೆಲ್ಲರಿಗೂ ಮಾದರಿ- ಎಸ್.ಎನ್.ಚನ್ನಬಸಪ್ಪ
Tarunodaya Samskruta Seva Samsthe ಓದಿನ ಜೊತೆ ಆಟದ ಕಡೆಗೂ ಮಕ್ಕಳು ಗಮನ ಕೊಡಬೇಕು- ಗುರುರಾಜ ಭಟ್
Tarunodaya Samskruta Seva Samsthe ಪಾಠದ ಜೊತೆಗೆ ಆಟವನ್ನೂ ಆಡಿಕೊಂಡು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಂತರಾಗಿರ ಬೇಕೆಂದು ಉಡುಪಿ ಸ್ಟೋರ್ಸ್ ನ ಗುರುರಾಜ್ ಭಟ್ ತಿಳಿಸಿದರು.
ಅವರು ಶಿವಮೊಗ್ಗ ನಗರದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸಂಸ್ಕೃತ ಭಾರತಿ ಮತ್ತು ಉಡುಪಿ ಸ್ಟೋರ್ಸ್‌ನ ಸಹಯೋಗದಲ್ಲಿ ವಿನೋಬಾ ನಗರದಲ್ಲಿ ಇರುವ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ಸಂಸ್ಕೃತ ವಿದ್ಯಾರ್ಥಿಗಳ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮಕ್ಕಳು ಓದಿನ ಜೊತೆಗೆ ಆಟದ ಕಡೇ ಕೂಡ ಹೆಚ್ಚಿನ ಗಮನವನ್ನು ಕೊಡಬೇಕು ಇದರಿಂದ ಅವರಿಗೆ ಏಕಾಗ್ರತೆ, ಸೋಲು ಗೆಲುವಿನ ಪರಿಚಯ, ದೈಹಿಕ ಸಾಮರ್ಥ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ಕ್ರೀಡೆಗಳಲ್ಲಿ ಹಲವಾರು ಬಗೆಗಳನ್ನು ನಾವು ಕಾಣುತ್ತೇವೆ ಒಳಾಂಗಣ, ಹೊರಾಂಗಣ, ಜಾಣತನ, ಸಮೂಹ, ಜಾನಪದ ಕ್ರೀಡೆಗಳು ಇತ್ಯಾದಿ ಇವೆಲ್ಲವೂ ನಮ್ಮ ವೈಯುಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
Tarunodaya Samskruta Seva Samsthe ಕಳೆದ 15 ವರ್ಷಗಳಿಂದ ನಮ್ಮ ಸಂಸ್ಥೆ ಸಂಸ್ಕೃತ ವಿದ್ಯಾರ್ಥಿಗಳಿಗೆ ಸಂಸ್ಕೃತೋತ್ಸವದಲ್ಲಿ ಏಳು ದಿನಗಳ ಕಾಲ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮುಖಾಂತರ ಸಂಸ್ಕೃತ ಭಾಷಾ ಪ್ರಚಾರಕ್ಕೆ ಒತ್ತು ಕೊಡುತ್ತಿದೆ ಏಕೆಂದರೆ ಇಂದಿನ ಸನ್ನಿವೇಶದಲ್ಲಿ ನಮ್ಮ ಮಕ್ಕಳಿಗೆ ಸಂಸ್ಕೃತ ಅದ್ಯಯನ ಅವಶ್ಯಕ ಎಂಬುದನ್ನು ತಿಳಿಸುವ ಸಲುವಾಗಿ ಹಾಗೂ
ವಿದ್ಯಾರ್ಥಿಗಳು ಸೋಲೂ ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳುವ ಎನ್ನುವ ಸಂದೇಶ ನಮ್ಮ ಆಶಯ ಎಂದರು.
ಸಂಸ್ಕೃತ ಭಾರತಿ ಶಿವಮೊಗ್ಗ ನಗರ ಸಂಯೋಜಕ ವಿಮಲಾ ರೇವಣಕರ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಮನು ಚೌಹಾಣ್ ಕಾರ್ಯಕ್ರಮ ನಿರೂಪಿಸಿದರು ಮೀನಾ ಸ್ವಾಗತಿಸಿದರು, ವರಲಕ್ಷ್ಮಿ ವಂದಿಸಿದರು,
ಸಂಸ್ಕೃತ ಶಿಕ್ಷಕ ಪ್ರಶಾಂತ್, ಕಾರ್ಯಕರ್ತರಾದ ಗೌತಮ, ಶ್ರೀವತ್ಸ, ದೀಪಿಕ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Astronaut Sunita Williams ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುರಕ್ಷಿತ ಧರೆಗೆ ಬರಲು ಪ್ರಾರ್ಥನೆ
Astronaut Sunita Williams ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಪ್ರಾರ್ಥಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪಟ್ಟಣದ ದಂಡಾವತಿ ಬ್ಲಾಕ್‌ನಲ್ಲಿರುವ ನದಿಕಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಜೂ.೫ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತ ಮೂಲದ ಖಗೋಳ ವಿಜ್ಞಾನಿ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಹಿಂದಿರುವುದು ಕಷ್ಟಕರವಾಗಿದೆ. ಅವರ ವಾಹನದಲ್ಲಿ ಹಲವು ತಾಂತ್ರಿಕ ದೋಷಗಳು ಕಾಣ ಸಿಕೊಂಡಿವೆ. ಆದ್ದರಿಂದ ಅವರು ಭೂಮಿಗೆ ತೆರಳದೇ ಅಲ್ಲೇ ಉಳಿಯುವಂತಾಗಿದೆ. ಎರಡು ಬಾರಿ ಯಶಸ್ವಿಯಾಗಿ ಗಗನಯಾತ್ರೆ ಮಾಡಿದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಮೂರನೇ ಬಾರಿಗೆ ಮತ್ತೋರ್ವ ಖಗೋಳ ವಿಜ್ಞಾನಿ ಬುಚ್ ವಿಲ್ಮೋರ್ ಅವರೊಂದಿಗೆ ಭೂಮಿಗೆ ಜೂನ್ ೧೪ರಂದು ವಾಪಾಸ್ಸಾಗಬೇಕಿತ್ತು. ಆದರೆ, ಈಗಾಗಲೇ ಎರಡು ತಿಂಗಳು ಹೆಚ್ಚುವರಿಯಾಗಿದೆ ಎಂದು ತಿಳಿಸಿದರು.
Astronaut Sunita Williams ಖಗೋಳಾಸಕ್ತರಿಗೆ ಸಾಮಾನ್ಯವಾದ ಪ್ರವಾಸದಂತೆ ಬಾಹ್ಯಕಾಶಕ್ಕೆ ಕರೆದುಕೊಂಡು ಹೋಗಿ ಅಂತಾರಾಷ್ಟ್ರೀಯ ಬಾಹ್ಯಕಾಶದಲ್ಲಿ ಕೆಲ ದಿನಗಳು ಉಳಿದು ಪುನಃ ಭೂಮಿಗೆ ಹಿಂದಿರುಗುವ ರೋಮಾಂಚನ ನೀಡುವ ಉದ್ದೇಶದಿಂದ ಯೋಜನೆ ರೂಪಿತವಾಗಿತ್ತು. ಇದರಿಂದ ಖಗೋಳಾಸಕ್ತರಿಗೆ ಮತ್ತಷ್ಟು ಮಾಹಿತಿ ಲಭ್ಯವಾಗುತ್ತಿತ್ತು. ಪ್ರಾಯೋಗಿಕವಾಗಿ ನಡೆದ ಯೋಜನೆಯಲ್ಲಿ ಸುನಿತಾ ವಿಲಿಯಮ್ಸ್ ಸಿಲುಕಿದ್ದಾರೆ. ಅವರು ಸುರಕ್ಷಿತವಾಗಿ ಭೂಮಿಗೆ ಹಿಂದಿರಗಬೇಕು. ದೇಶಕ್ಕೆ ಮತ್ತಷ್ಟು ಕೀರ್ತಿ ತರಬೇಕು ಎಂದು ಪ್ರಾರ್ಥಿಸಿ ಪವನಸುತ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸುಮನಾ ಬಿ. ಗೌಡ, ಜೆ.ಸಿ. ಮುರಳೀಧರ ಗುಡಿಗಾರ್, ರಾಮಚಂದ್ರ ಆಚಾರ್, ನಿರಂಜನಗೌಡ ಹಳೇಸೊರಬ, ಶಾಂತಕುಮಾರ್ ಮರೂರು, ಎಂ.ಎಸ್. ಸಂಜಯ, ಅರ್ಚಕ ಭಾರ್ಗವ ಗೋಖಲೆ ಸೇರಿದಂತೆ ಇತರರಿದ್ದರು.
ಫೋಟೋ
೧೯ ಸೊರಬ ೦೧: ಸೊರಬ ಪಟ್ಟಣದ ದಂಡಾವತಿ ಬ್ಲಾಕ್‌ನಲ್ಲಿರುವ ನದಿಕಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
Mathura Paradise ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ- ಶಾಂತಾಶೆಟ್ಟಿ
Mathura Paradise ಯಾವುದೇ ಸ್ಪರ್ಧೆಯಾಗಲಿ ಸೋಲು – ಗೆಲುವು ಮುಖ್ಯವಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ. ನಮ್ಮಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಚಿಂತನ ಯೋಗ, ಸಂಗೀತ ಟ್ರಸ್ಟ್ ನ ಜಿಲ್ಲಾ ಅಧ್ಯಕ್ಷೆ ಶಾಂತಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಥುರಾ ಪ್ಯಾರಡೈಸ್ 25 ರ ಬೆಳ್ಳಿ ಹಬ್ಬದ ಅಂಗವಾಗಿ ಮಥುರಾ ಸಭಾಂಗಣದಲ್ಲಿ ದೇಶಭಕ್ತಿ ಗೀತೆ, ದೇಶ, ನಾಡು, ನುಡಿ, ಜಲದ ಬಗ್ಗೆ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಬೆಳ್ಳಿ ಹಬ್ಬ ಸಮಿತಿಯ ನಿರ್ದೇಶಕ ಜಿ.ವಿಜಯ್ ಕುಮಾರ್ ಮಾತನಾಡಿ, ಸಂಗೀತಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಇದನ್ನು ಚೆನ್ನಾಗಿ ಅಭ್ಯಾಸ ಮಾಡಿ, ಹಾಡುಗಳನ್ನು ಅನುಭವಿಸಿ ಹಾಡಬೇಕು. ಈ ಜಿಲ್ಲೆ ಈ ಕ್ಷೇತ್ರ ಸಾಧನೆ ಮಾಡಿದ ದಿಗ್ಗಜರ ತವರೂರು ಶಿವಮೊಗ್ಗ ಎಂದು ನುಡಿದರು.
ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ಎಸ್.ಎಸ್.ವಾಗೀಶ್ ಮಾತನಾಡಿ, ಈಗಾಗಲೇ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ನಿರಂತರವಾಗಿ ಜನಮಾನಸ ತಲುಪುತ್ತಿವೆ. ಇಂತಹ ಕಾರ್ಯಕ್ರಮಗಳಲ್ಲಿ ಸದಸ್ಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು.
Mathura Paradise ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭದ್ರಾವತಿ ವಾಸು ಮಾತನಾಡಿ, ನಮ್ಮ ದೇಶ, ನೆಲ, ಜಲ, ನಾಡು, ನುಡಿ ಬಗ್ಗೆ ನಮಗೆ ಗೌರವ ಇರಬೇಕು.
ಈ ನಿಟ್ಟಿನಲ್ಲಿ ಇಂದು ನಮ್ಮ ಸದಸ್ಯರು ಇಂತಹ ಅಭೂತಪೂರ್ವ ಹಾಡುಗಳನ್ನು ಆಯ್ಕೆ ಮಾಡಿ, ತುಂಬಾ ವಿಶೇಷವಾಗಿ ಹಾಡಿ ಅಪಾರ ಜನ ಮೆಚ್ಚುಗೆ ಗಳಿಸಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಅನೂಪ್ ಶಿವಮೊಗ್ಗ, ದ್ವಿತೀಯ ಬಹುಮಾನ ಏಳುಮಲೈ, ತೃತೀಯ ಬಹುಮಾನ ಸುನೀಲ್ ಎಸ್ ಕಾಮತ್ ಹಾಗೂ ಸಮಾದಾನಕರ ಬಹುಮಾನ ಹೇಮಂತ್ ಶೇಟ್ ಶಿವಮೊಗ್ಗ ಇವರಿಗೆ ನೀಡಲಾಯಿತು.
ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಆಧ್ಯಾ ಹೊಸನಗರ, ರಾಜಶೇಖರ್ ಪಾಲ್ಗೊಂಡಿದ್ದರು. ಆ.ನ.ವಿಜಯೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
Rotary Organization Shivamogga ಸಮಾಜಮುಖೀ ಕಾರ್ಯಗಳಲ್ಲಿ ಯಾವಾಗಲೂ ಎಲ್ ಐ ಸಿ ಯು ರೋಟರಿ ಜೊತೆಗಿರುತ್ತದೆ- ಶ್ರೀನಿವಾಸ್
Rotary Organization Shivamogga ಬಯೋ ಡೈವರ್ಸಿಟಿ ಪಾರ್ಕ್ ತುಂಬಾ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 10,000 ಗಳಿಗಿಂತ ಹೆಚ್ಚು ಗಿಡಮರಗಳನ್ನು ಪೋಷಣೆ ಮಾಡುತ್ತಿರುವ ರೋಟರಿ ಸಂಸ್ಥೆಯ ಕಾರ್ಯಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಎಲ್‍ಐಸಿ ಸಂಸ್ಥೆಯ ಸಮಾಜಮುಖಿ ಕೆಲಸಗಳಿಗೆ ರೋಟರಿ ಸಂಸ್ಥೆಯೊಂದಿಗೆ ಇರುತ್ತೇವೆ ಎಂದು ಎಲ್‍ಐಸಿ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಶ್ರೀನಿವಾಸ್ ಅಭಿಮತ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ರೋಟರಿ ಸಂಸ್ಥೆಯ ಪ್ರಾಜೆಕ್ಟ್ ಆದ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ಸುಮಾರು 500 ಗಿಡಗಳ ಸಸಿಗಳನ್ನು ನೆಡುವುದರ ಮೂಲಕ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಹಾಗೂ ಶಿವಮೊಗ್ಗ ನಗರದ ಎಲ್‍ಐಸಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವನಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೋಟರಿ ಸಂಸ್ಥೆಯೊಂದಿಗೆ ಈ ದಿನ ಎಲ್‍ಐಸಿ ಯ ಜೊತೆಗೂಡಿ ವನಮೋತ್ಸವ ಮಾಡುತ್ತಿರುವುದು ಬಹಳ ಸಂತೋಷವಾದ ವಿಚಾರವಾಗಿದೆ. ಇಂತಹ ಸಮಾಜಮುಖಿ ಕೆಲಸಗಳಲ್ಲಿ ಯಾವಗಲೂ ನಿಮ್ಮ ಜೊತೆಗೂಡಿರುತ್ತೇವೆ ಎಂದರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್‍ನ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಸಸಿಗಳು ನೆಡುವುದು ಅμÉ್ಟೀ ಅಲ್ಲ ಅದನ್ನು ನೋಡಿ ಘೋಷಣೆ ಮಾಡುವುದು ಬಹಳ ಮುಖ್ಯವಾದ ಕೆಲಸ. ಆ ನಿಟ್ಟಿನಲ್ಲಿ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನೋಡಿಕೊಳ್ಳುತ್ತಿರುವ ಉಮೇಶ್ ರವರ ಶ್ರಮ ಶ್ಲಾಘನೀಯವಾಗಿದೆ ಎಂದ ಅವರು, ನಾವೆಲ್ಲ ರೋಟರಿ ಸದಸ್ಯರು ಸದಾ ತಮ್ಮ ಜೊತೆ ಇರುತ್ತವೆ ಎಂದು ತಿಳಿಸಿದರು.
Rotary Organization Shivamogga ಇದೇ ಸಂದರ್ಭದಲ್ಲಿ ಸದಸ್ಯರಾದ ಗಿರೀಶ್ ಅವರು 5,000 ಗಳನ್ನು ಬಯೋ ಡೈವರ್ಸಿಟಿ ಪಾರ್ಕ್ ಗೆ ಧೇಣಿಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಬಯೋಡೈವರ್ಸಿಟಿ ಪಾರ್ಕಿನ ಉಪಾಧ್ಯಕ್ಷ ಪಿಡಿಜಿ ಪ್ರಕಾಶ್, ಕಾರ್ಯದರ್ಶಿ ಈಶ್ವರ್, ಜೈಶೀಲ್ ಶೆಟ್ಟಿ, ಬಸವರಾಜ್, ಮಂಜುನಾಥ್ ಹೆಗಡೆ, ಗುರುರಾಜ್, ಜಗದೀಶ್, ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ಆನ್ಸ್ ಕ್ಲಬ್‍ನ ಅಧ್ಯಕ್ಷರಾದ ಗೀತಾ ಜಗದೀಶ್, ಎಲ್‍ಐಸಿ ಸಂಸ್ಥೆಯ ಗಣೇಶ್ ಭಟ್, ಆನಂದ್, ಇತರೆ ಸಿಬ್ಬಂದಿ ವರ್ಗದವರು ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
MESCOM Shivamogga ಆಗಸ್ಟ್ 20 ರಂದು ಮಂಡ್ಲಿ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
MESCOM Shivamogga ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಆ.20 ರಂದು ಬೆಳಗ್ಗೆ 09.00 ಗಂಟೆಯಿಂದ ಸಂಜೆ 6.00 ರವರೆಗೆ ಈ ವ್ಯಾಪ್ತಿಗೆ ಸೇರಿರುವ ಪಿಯರ್‌ಲೈಟ್, ಪೇಪರ್ ಪ್ಯಾಕೇಜ್, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರ್, ಇಲಿಯಾಜ್‌ನಗರ 1 ರಿಂದ 13ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಫಾರೂಕ್ಯ ಶಾದಿಮಹಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ MESCOM Shivamogga ಲೇಔಟ್, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಮಂಡಕ್ಕಿಭಟ್ಟಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿನಗರ 80 ಅಡಿರಸ್ತೆ, ಕಾಮತ್ ಲೇಔಟ್, ಆನಂದರಾವ್ ಬಡಾವಣೆ, ಗಾರ್ಡನ್ ಏರಿಯಾ, ಸಿಟಿ ಸೆಂಟ್ರಲ್ ಮಾಲ್, ರಾಯಲ್ ಆರ್ಕೇಡ್, ಸರ್ಕಾರಿ ಮತ್ತು ಖಾಸಗಿ ಬಸ್‌ನಿಲ್ದಾಣ, ಇಲಿಯಾಜ್‌ನಗರ ಲಾರಿ ಗ್ಯಾರೇಜ್, ಬಿಹೆಚ್ ರಸ್ತೆ, ಸಾಗರ ನರ್ಸರಿ, ಚಾನಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ತಿಳಿಸಿದೆ
Kumsi Police ಪ್ರಾಮಾಣಿಕತರ ಮೆರೆದ ನಾಗರೀಕರಿಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಸನ್ಮಾನ
Kumsi Police ಪ್ರಾಮಾಣಿಕತನ ಮೆರೆದ ಇಬ್ಬರು ನಾಗರೀಕರಿಗೆ ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ಅವರು ಸನ್ಮಾನಿಸಿದ್ದಾರೆ. ಇದರ ಮೂಲಕ ಉತ್ತಮ ನಾಗರೀಕರ ಬೆನ್ನಿಗೆ ಪೊಲೀಸ್ ಇಲಾಖೆ ನಿಂತಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ಸೋಮಶೇಖರ್ ಮತ್ತು ಸುಹಾಸ್ ಪ್ರಸಾದ್ ಸಿ ಚೋರಡಿ ಗ್ರಾಮ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆ.1 ರಂದು ಚೋರಡಿ ಗ್ರಾಮದ ಸೋಮಶೇಖರ್ ಅವರಿಗೆ ಗ್ರಾಮದ ರಂಗಮಂದಿರ ರಸ್ತೆಯಲ್ಲಿ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿದ್ದು ಅದರಲ್ಲಿ ಐಡಿ ಕಾರ್ಡ್. 1 ಲಕ್ಷ ಹಣ. ಬ್ಯಾಂಕ್ ಪಾಸ್ ಪುಸ್ತಕ. ಎಟಿಎಂ ಕಾರ್ಡ್ ಹಾಗೂ ಶಾಲೆ ದಾಖಲಾತಿಗಳು ದೊರೆತಿದ್ದವು.
ಇವುಗಳನ್ನು ಸಂಬಂಧಪಟ್ಟ ಅದೇ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಎಲ್ ರೇಣುಕಾ ರವರಿಗೆ ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದಿದ್ದರು.
Kumsi Police ಅದೇ ರೀತಿ ಸುಹಾಸ್ ಪ್ರಸಾದ್ ಸಿ ಚೋರಡಿ ಜ.26 ರಂದು ಚೋರಡಿ ಗ್ರಾಮದ ಎನ್ ಹೆಚ್ 69 ರಸ್ತೆಯಲ್ಲಿ ಸಿಕ್ಕ ಪರ್ಸನಲ್ಲಿ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು.
ಇದರ ಮಾಲೀಕರಾದ ನಿವೃತ್ತ ಐಜಿಪಿ ಸುರೇಶ್ ಬಾಬು ಅವರ ಮಗಳು ಶಶಿ ಶಾಲಿನಿಗೆ ವಾಪಸು ನೀಡಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
B.Y.Vijayendra ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶಿಕಾರಿಪುರಕ್ಕೆ ಬಂದರೆ ಘೇರಾವ್- ನಾಗರಾಜ ಗೌಡ
B.Y.Vijayendra ರಾಜ್ಯದಾದ್ಯಂತ ಸಾವಿರಾರು ಕೋಟಿ ಆಸ್ತಿ ಮಾಡಿರುವ ಬಿ.ಎಸ್ ಯಡಿಯೂರಪ್ಪ ಹಾಗೂ ಅವರು ಕುಟುಂಬದ ತನಿಖೆಯಾಗಬೇಕು, ವಿಜಯೇಂದ್ರ ಶಿಕಾರಿಪುರಕ್ಕೆ ಬಂದರೆ ಘೇರಾವ್ ಹಾಕಲಾಗುವುದು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಾಗರಾಜ್ ಗೌಡ ಯಡಿಯೂರಪ್ಪ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಅವರು. ಕೇಂದ್ರ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್ ಕೊಡಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದು ರಾಜಕೀಯ ಪ್ರೇರಿತ ಹಾಗೂ ಒಬ್ಬ ವ್ಯಕ್ತಿಯ ಸ್ವಹಿತಾಸಕ್ತಿಯ ಕಾರಣಕ್ಕೆ ಪ್ರಾಸಿಕ್ಯೂಷನ್ ನಡೆಸಲಾಗುತ್ತಿದೆ ಎಂದರು.
ರಾಜ್ಯಪಾಲರ ಎದುರು ಅನೇಕ ಬಿಜೆಪಿ ನಾಯಕರ ಹಲವು ಪ್ರಕರಣಗಳಿದ್ದರೂ ಅದರ ಬಗ್ಗೆ ತನಿಖೆಗೆ ಆದೇಶಿಸದೆ ಯಾವುದೇ ಹಗರಗಳಿಲ್ಲದೆ ಪಾರದರ್ಶಕ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯರವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಣತಿ ನೀಡಲಾಗಿದ್ದು ಇದು ಕೇಂದ್ರ ಸರ್ಕಾರದ ಷಡ್ಯಂತ್ರವಲ್ಲದೇ ಬೇರೇನೂ ಅಲ್ಲ. ಬಿ ಎಸ್ ವೈ
ಬಸವರಾಜ್ ಬೊಮ್ಮಾಯಿಯವರ ಆಡಳಿತಾವಧಿಯಲ್ಲಿ ಹಲವಾರು ಭ್ರಷ್ಟಾಚಾರ ನಡೆದಿದ್ದು, ಈಬಗ್ಗೆ ಅನೇಕ ಬಾರಿ ರಾಜ್ಯಪಾಲರಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ.
ಹೀಗಿರುವಾಗ ಸಿದ್ಧರಾಮಯ್ಯರವರು ಮುಡಾ ಪ್ರಕರಙದಲ್ಲಿ ಭಾಗಿಯಾಗದಿದ್ದರೂ ಭಾಗಿಯಾಗಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಆಪಾದನೆಯಾಗಿದೆ ಎಂದರು.
B.Y.Vijayendra ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸಮಗ್ರ ಆಸ್ತಿಗಳ ತನಿಖೆ ನಡೆಸಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿರುವ ಕಾರ್ಯಕರ್ತರು ಅಂಜುವ ಮಕ್ಕಳ್ಳಲ್ಲ, ಇನ್ನು ಮುಂದೆ ನಿಮ್ಮ ಆಟ ಹೇಗಿರುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದ ಅವರು, ಶಿಕಾರಿಪುರದಲ್ಲಿ ನಿಮ್ಮ ದುರಾಡಳಿತ ಹಾಗೂ ದಬ್ಬಾಳಿಕೆಯ ವಿರುದ್ಧ ತಾಲ್ಲೂಕಿನ ಜನರು ಸೆಟೆದೆದ್ದು, ಕಾಂಗ್ರೆಸ್ ಪಕ್ಷಕ್ಕೆ 75,000 ಮತಗಳನ್ನ ನೀಡಿ ಆಶೀರ್ವದಿಸಿದ್ದಾರೆ ಅಲ್ಲದೇ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ನಿಮ್ಮನ್ನ ತಿರಸ್ಕರಿಸಿದ್ದಾರೆ ಮರೆಯಬೇಡಿ ಎಂದು ಹೇಳಿದರು.
ಬಿಎಸ್ವೈ ಮನೆಗೆ ಮುತ್ತಿಗೆ ಹಾಕಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಪಕ್ಷದ ಮುಖಂಡರಾದ ನಗರದ ಮಹದೇವಪ್ಪ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರನಗೌಡ ಮುಖಂಡರಾದ ಉಳ್ಳಿ ದರ್ಶನ, ಭಂಡಾರಿ ಮಾಲತೇಶ್, ರಾಘವೇಂದ್ರ ನಾಯಕ್, ಶಿವನಾಯಕ್, ಶಿವು ಹುಲ್ಮಾರ್, ಮಂಜು ಹುಣಸೆಕೊಪ್ಪ, ಎಚ್. ಎಸ್. ರವೀಂದ್ರ ಮಾರವಳ್ಳಿ ಉಮೇಶ್, ನಗರದ ರವಿ, ಸೇರಿದಂತೆ ಪಕ್ಷದ ಅನೇಕ ಮುಖಂಗರು, ಕಾರ್ಯಕರ್ತರು ಭಾಗವಹಿಸಿದ್ದರು.
Ayodhya Ram Mandira ಅಮೆರಿಕಾದಲ್ಲಿ ಆಯೋಜಿತವಾಗಿರುವ “ಇಂಡಿಯಾ ಡೇ ಪರೇಡ್” ಗೆ ಮುಸ್ಲೀಂ ಸಂಘಟನೆಗಳ ಟೀಕೆಗೆ ಪ್ರತ್ಯುತ್ತರ- ಅಂಕುರ್ ವೈದ್ಯ
Ayodhya Ram Mandira ಅಯೋಧ್ಯಾ ರಾಮ ಮಂದಿರವು ಬಾಬರಿ ಮಸೀದಿ ಧ್ವಂಸದ ಪ್ರತೀಕವಾಗಿದ್ದು, ಈ ಘಟನೆಯನ್ನು ನೆನಪಿಸುವ ಜೊತೆಯಲ್ಲೇ ವೈಭವೀಕರಿಸುತ್ತದೆ. ಅಷ್ಟೇ ಅಲ್ಲ, ದಕ್ಷಿಣ ಏಷ್ಯಾ ರಾಷ್ಟ್ರವಾದ ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯದ ಪ್ರತೀಕವಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಶೇ. 80 ರಷ್ಟು ಹಿಂದೂ ಜನಸಂಖ್ಯೆ ಇರುವ ಭಾರತದಲ್ಲಿ ಹಿಂದೂಗಳು ಮಾತ್ರವಲ್ಲ, 20 ಕೋಟಿ ಮುಸ್ಲಿಮರೂ ಇದ್ದಾರೆ. ಆದರೆ, ಹಿಂದೂ ರಾಷ್ಟ್ರೀಯವಾದಿಗಳು ಮುಸ್ಲಿಮರ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಅಮೆರಿಕದ ಮುಸ್ಲಿಂ ಸಂಘಟನೆಗಳು ಆರೋಪ ಮಾಡಿವೆ.
ಭಾರತೀಯತೆಯನ್ನು ಬಿಂಬಿಸುವ ಪ್ರದರ್ಶನ ಆಯೋಜಿಸುವ ಬದಲು ಹಿಂದೂ ರಾಷ್ಟ್ರೀಯವಾದಿ ಸಿದ್ದಾಂತ ಪ್ರತಿಬಿಂಬಿಸುವ ಪ್ರತಿಕೃತಿಯ ಪ್ರದರ್ಶನ ಮಾಡಲು ಸಂಘಟಕರು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಮುಸ್ಲಿಂ ಸಂಘಟನೆಗಳು ಈ ಕುರಿತಾಗಿ ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾಥಿ ಹೋಚುಲ್ ಹಾಗೂ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅವರಿಗೆ ಪತ್ರ ಬರೆದಿದ್ದಾರೆ.
ಇದು ಸಾಂಸ್ಕೃತಿಕ ಪ್ರದರ್ಶನವಲ್ಲ, ಮುಸ್ಲಿಂ ವಿರೋಧಿ ದ್ವೇಷದ ಅಸಹ್ಯಕರ ಸಂಭ್ರಮಾಚರಣೆ ಎಂದು ಸಂಘಟನೆ ತನ್ನ ಪತ್ರದಲ್ಲಿ ಕಿಡಿ ಕಾರಿದೆ.
ಕೋಟ್ಯಂತರ ಭಾರತೀಯರ ನಂಬಿಕೆ, ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯಾ ರಾಮ ಮಂದಿರ ಒಂದು ಪವಿತ್ರ ತಾಣ ಎಂದು ಹೇಳಿರುವ ನ್ಯೂಯಾರ್ಕ್ ಇಂಡಿಯಾ ಡೇ ಪರೇಡ್ ಆಯೋಜಕರು ಮುಸ್ಲಿಂ ಸಂಘಟನೆಗಳ ವಾದವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ.
ನಾವು ರಾಮ ಮಂದಿರದ ಪ್ರತಿಕೃತಿಯ ಮೆರವಣಿಗೆ ಮಾಡಿಯೇ ಸಿದ್ದ ಎಂದು ಹೇಳಿದ್ದಾರೆ.
ನಾವು ಯಾವುದೇ ರೀತಿಯ ಹಿಂಸೆ ಹಾಗೂ ದ್ವೇಷವನ್ನು ತಿರಸ್ಕರಿಸುತ್ತೇವೆ ಎಂದು ಹೇಳಿರುವ ಕಾರ್ಯಕ್ರಮ ಆಯೋಜಕರು, ಯಾವುದೇ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡೋದನ್ನೂ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಂಕುರ್ ವೈದ್ಯ ಅವರು ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಾವು ಶಾಂತಿಯುತ ಸಹಬಾಳ್ವೆಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
Ayodhya Ram Mandira ನ್ಯೂಯಾರ್ಕ್‌ನಲ್ಲಿ ನಡೆಸಲಾಗುವ ಇಂಡಿಯಾ ಡೇ ಪರೇಡ್‌ನಲ್ಲಿ ಕೇವಲ ಹಿಂದೂ ಧರ್ಮ ಮಾತ್ರವಲ್ಲ, ಮುಸ್ಲಿಂ, ಸಿಖ್ ಹಾಗೂ ಕ್ರೈಸ್ತ ಧರ್ಮೀಯರನ್ನೂ ಪ್ರತಿನಿಧಿಸುವ ಪ್ರತಿಕೃತಿಗಳ ಪ್ರದರ್ಶನ ಆಗುತ್ತದೆ. ಭಾರತದ ವಿವಿಧತೆ, ಧಾರ್ಮಿಕ ಭಾವೈಕ್ಯತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತೇವೆ ಎಂದು ಒಕ್ಕೂಟ ಸ್ಪಷ್ಟನೆ ನೀಡಿದೆ.
ಇದೇ ವೇಳೆ ವಸುದೇವ ಕುಟುಂಬಕಂ ಎಂಬ ಸಂಸ್ಕೃತದ ಸಾಲನ್ನೂ ನೆನಪಿಸಿರುವ ಒಕ್ಕೂಟದ ಅಧ್ಯಕ್ಷ ವೈದ್ಯ ಅವರು, ಮುಸ್ಲಿಂ ಸಂಘಟನೆಗಳ ವಾದವನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಅಮೆರಿಕಾಗೆ ಪ್ರಧಾನಿ ಮೋದಿ ಭೇಟಿ: ನ್ಯೂಯಾರ್ಕ್‌ನಲ್ಲಿ ‘ಭವಿಷ್ಯದ ಶೃಂಗ ಸಭೆ’ಯಲ್ಲಿ ಭಾಗಿ
ಕಳೆದ 42 ವರ್ಷಗಳಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಇಂಡಿಯಾ ಡೇ ಪರೇಡ್ ನಡೆಯುತ್ತಿದೆ. ಈ ಭಾನುವಾರ 42ನೇ ಪರೇಡ್ ನಡೆಯಲಿದೆ.
ಭಾರತದ ಹೊರಗೆ ಭಾರತೀಯರು ನಡೆಸುವ ಅತಿ ದೊಡ್ಡ ಕಾರ್ಯಕ್ರಮ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸಾವಿರಾರು ಭಾರತೀಯ ವಲಸಿಗರು, ಬಾಲಿವುಡ್ ತಾರೆಯರು, ಭಾರತದ ಕ್ರೀಡಾ ಪಟುಗಳು ನ್ಯೂಯಾರ್ಕ್‌ನ ಮ್ಯಾನ್‌ಹಟ್‌ನಲ್ಲಿ ಇರುವ ಮ್ಯಾಡಿಸನ್ ಅವೆನ್ಯೂನಲ್ಲಿ ಸೇರುತ್ತಾರೆ. ಇಲ್ಲಿ ಮೆರವಣಿಗೆ ಕೂಡಾ ನಡೆಯುತ್ತದೆ. ಭಾರತದಲ್ಲಿ ಬ್ರಿಟಿಷರ ರಾಜ್ಯಭಾರ ಅಂತ್ಯವಾಗಿ 1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸ್ಮರಣಾರ್ಥ ಈ ಕಾರ್ಯಕ್ರಮ ನಡೆಯುತ್ತದೆ.
Supreme Court ಕೊಲ್ಕೊತಾ’ಹತ್ಯಾಚಾರ’ ಪ್ರಕರಣ. ಸುಪ್ರೀಂ ಕೋರ್ಟಿನಿಂದ ಸ್ವಪ್ರೇರಿತ ವಿಚಾರಣೆ
Supreme Court ಇಡೀ ದೇಶವನ್ನು ಬೆಚ್ಚಿಬೀಳಿಸಿದ ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ವಿಷಯದ ವಿಚಾರಣೆಯನ್ನು ಆಗಸ್ಟ್ 20ರಂದು ನಡೆಸಲಿದೆ.
ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಕ್ರೂರವಾಗಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆಗೆ ನ್ಯಾಯ ದೊರಕಿಸಿಕೊಡಬೇಕೆಂಬ ಬೇಡಿಕೆ ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಸುಪ್ರೀಂ ಕೋರ್ಟ್‌ನ ಈ ಕ್ರಮವು ಬಂದಿದೆ. ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಯಿತು.
ಮರುದಿನ ಆರೋಪಿಯನ್ನು ಬಂಧಿಸಲಾಯಿತು. ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವಂತೆ ಆದೇಶಿಸಿದ ನಂತರ ಹೈ ಪ್ರೊಫೈಲ್ ಪ್ರಕರಣವನ್ನು ಈಗ ಸಿಬಿಐ ತನಿಖೆ ನಡೆಸುತ್ತಿದೆ.
ಈ ಘಟನೆಯ ಬಗ್ಗೆ ದೇಶಾದ್ಯಂತ ವೈದ್ಯರು ತಮ್ಮ ದುಃಖ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಬೀದಿಗಿಳಿದಿದ್ದಾರೆ. ದೇಶದ ವಿವಿಧ ಭಾಗಗಳ ಬೀದಿಗಳಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನೆಯಲ್ಲಿ ದೇಶದಾದ್ಯಂತ ಒಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.
Supreme Court ಆದರೂ, ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇದ್ದವು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಶನಿವಾರ (ಆಗಸ್ಟ್ 17) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ.
ಈ ಬಗ್ಗೆ ಐಎಂಎ ಕೆಲವು ಪರಿಹಾರಗಳು ಮತ್ತು ಬೇಡಿಕೆಗಳನ್ನು ಪ್ರಧಾನ ಮಂತ್ರಿಗೆ ಮುಂದಿಟ್ಟಿದೆ. “ಪರಿಸ್ಥಿತಿಯನ್ನು ಗಮನಿಸುವುದು ಮಹಿಳಾ ವೈದ್ಯರಿಗೆ ಮಾತ್ರವಲ್ಲದೆ ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬ ಮಹಿಳೆಗೆ ಆತ್ಮವಿಶ್ವಾಸವನ್ನು ನೀಡುತ್ತದೆ” ಎಂದು ಹೇಳಿದರು. ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ಮತ್ತು ಗೌರವ ಕಾರ್ಯದರ್ಶಿ ಡಾ.ಅನಿಲ್‌ಕುಮಾರ್ ಜೆ.ನಾಯಕ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಐಎಂಎ ಪತ್ರದಲ್ಲಿ, ಆಗಸ್ಟ್ 9 ರಂದು ಅಪರಾಧ ನಡೆದ ಆಗಸ್ಟ್ 14 ರಂದು ರಾತ್ರಿ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯವನ್ನು ಉಲ್ಲೇಖಿಸಿದೆ. ಆಸ್ಪತ್ರೆಗಳು ಮತ್ತು ಕ್ಯಾಂಪಸ್‌ಗಳ ಒಳಗೆ ವೈದ್ಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
