Klive Special Article “ದಧಾನಾಂ ಕರಪದ್ಮಾಭ್ಯಾಂ
ಅಕ್ಷಮಾಲಾ ಕಮಂಡಲೂ/
ದೇವಿ ಪ್ರಸೀದತು ಮಯಿ
ಬ್ರಹ್ಮಚಾರಿಣ್ಯನುತ್ತಮಾ//
ಮೊದಲನೆಯ ದಿನ ದೇವಿಯ ಶೈಲಪುತ್ರಿರೂಪದಿಂದ ಪೂಜಿಸಲ್ಪಡುತ್ತಾಳೆ.ಇಂದು ನವರಾತ್ರಿಯ ಎರಡನೇ ದಿವಸ.
ಎರಡನೆಯ ದಿನ ದೇವಿಯನ್ನು ಬ್ರಹ್ಮಚಾರಿಣಿ
ರೂಪದಲ್ಲಿ ಪೂಜಿಸಲಾಗುತ್ತದೆ.
ಜಗನ್ಮಾತೆಯನ್ನು ಬ್ರಾಹ್ಮೀ ಸ್ವರೂಪದಲ್ಲಿ
ನೋಡುವಬಗೆ,ಕಮಂಡಲುಧಾರಿಣಿ,ಅಕ್ಷಮಾಲೆ.ಸಪ್ತಮಾತೃಕೆಯರಲ್ಲಿ ಬ್ರಾಹ್ಮಿಯೂ ಒಬ್ಬಳೆಂದು ಗುರುತಿಸಲ್ಪಟ್ಟಿದ್ದಾಳೆ.ಬ್ರಹ್ಮಚಾರಿಣಿ ಎಂದರೆ ಸಂತೋಷ ಮತ್ತುಶಾಂತ ಶಕ್ತಿಯನ್ನು ಹೊಂದಿರುವ ರೂಪ.ಮೋಕ್ಷವನ್ನು ಬಯಸಿಅಥವಾ ಕಾರ್ಯಗಳ
ವಿಮೋಚನೆಗೆ ಬಯಸಿ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿ ಆರಾಧಿಸಿದರೆದೇವಿ ಅನುಗ್ರಹ ಮಾಡುವಳು.
Klive Special Article ಪ್ರಜಾಪತಿ ದಕ್ಷನಿಂದ ತನ್ನ ಪತಿ ಶಿವನು ಅವಮಾನಿತಗೊಂಡಾಗ,ಸತಿಯಾಗಿ ಮರುಜನ್ಮ ಪಡೆದು
ಮತ್ತೆ ಶಿವನನ್ನೇ ವರಿಸಲು ಬ್ರಹ್ಮಚಾರಿಣಿಯಾಗಿ ಅವತರಿಸಿದ ರೂಪವೇ ಬ್ರಹ್ಮಚಾರಿಣಿ ದೇವಿ.
ಶಿವನನ್ನು ವಿವಾಹವಾಗಲು ದೀರ್ಘಕಾಲ ಬ್ರಹ್ಮಚಾರಿಣಿಯು ಹಣ್ಣು-ಎಲೆ ಸೇವಿಸುತ್ತಾ ,ನಂತರ ಎಲ್ಲವನ್ನೂ ನಿಲ್ಲಿಸಿ ಬಹಳ ಕಠೋರವಾಗಿ ತಪಸ್ಸನ್ನು ಆಚರಿಸುತ್ತಾಳೆ.ಈ ತಪಶಕ್ತಿಯಿಂದ ಶಿವನನ್ನು ಒಲಿಸಿಕೊಂಡು ವಿವಾಹವಾಗುವ ಅವತಾರವೇ ಬ್ರಹ್ಮಚಾರಿಣಿ.
ಬಲಗೈಯಲ್ಲಿ ಜಪಮಾಲೆ,ಮತ್ತೊಂದು ಕೈಯಲ್ಲಿ ಕಮಂಡಲ ಹಿಡಿದು ನಿಂತ ಸ್ವರೂಪದಲ್ಲೇ ಬಹು ದೀರ್ಘಕಾಲತಪಸ್ಸನ್ನು ಆಚರಿಸಿ ತನ್ನನ್ನು ತಾನು ಶಿವನಿಗೆ ಅರ್ಪಿಸಿಕೊಂಡಿದ್ದರಿಂದ ಈ ದೇವಿಯನ್ನು ಅರ್ಪಣಾದೇವಿ ಎನ್ನುವ ಹೆಸರಿನಿಂದಲೂ ಕಲ
ರೆಯಲಾಗಿದೆ.ಮುಂದೆ ಈಶ್ವರನೂ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.ಬ್ರಹ್ಮಚಾರಿಣಿಯ ಈ ಅವತಾರದಲ್ಲಿ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲುವನ್ನು ಹಿಡಿದಿರುವ ದುರ್ಗೆಯ ರೂಪವನ್ನು ಕಾಣಬಹುದು.ದೇವಿಯ ಎರಡನೆಯ ಅವತಾರವಾದಬ್ರಹ್ಮಚಾರಿಣಿದೇವಿಯನ್ನುಆರಾಧಿಸಿ,
ಪೂಜಿಸಿ ದೇವಿಯ ಅನುಗ್ರಹಕ್ಕೆ ಪ್ರಾರ್ಥಿಸೋಣ.
Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.
Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ
Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9 ಮತ್ತು 11ನೇ ತರಗತಿಗೆ ಖಾಲಿ ಇರುವ ಸೀಟುಗಳನ್ನು ತುಂಬಲು ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
9ನೇ ತರಗತಿಗೆ ಸೇರಬಯಸುವ ವಿದ್ಯಾರ್ಥಿಗಳು https://cbseitms.nic.in/2024/nvsix ಹಾಗೂ 11ನೇ ತರಗತಿಗೆ ಸೇರಬಯಸುವ ವಿದ್ಯಾರ್ಥಿಗಳು https://cbseitms.nic.in/2024/nvsxi_11 ವೆಬ್‌ಸೈಟ್ ಮೂಲಕ ಅ.30ರೊಳಗಾಗಿ ಅರ್ಜಿ ಸಲ್ಲಿಸುವುದು ಹಾಗೂ Jawahar Navodaya Vidyalaya ಪ್ರವೇಶ ಪರೀಕ್ಷೆಯು ದಿ: 08/02/2025 ರಂದು ನಡೆಯಲಿದೆ ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ ಬದಲಾವಣೆ ಗಮನಿಸಿ
Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಬೆಂಗಳೂರು ಹಾಗೂ ಜಿಲ್ಲಾ ಉಪನಿರ್ದೇಶಕರು ಮತ್ತು ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಅ. 05 ರಂದು ಜಿಲ್ಲಾ ಪಂಚಾಯತ್, ಅಬ್ದಲ್ ನಜೀರ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಆದರೆ ತುರ್ತು ಸರ್ಕಾರಿ ಕಾರ್ಯಕ್ರಮದ ಕಾರಣದಿಂದ ಕಾರ್ಯಕ್ರಮವನ್ನು ಅ.05 ರಂದು ಮದ್ಯಾಹ್ನ 2.00 ಗಂಟೆಗೆ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Shivamogga Police ಶಿವಮೊಗ್ಗ ನೆಹರು ರಸ್ತೆಯ ಎರಡು ಮಳಿಗೆಗಳಲ್ಲಿ ನಗದು ಅಪಹರಣ
Shivamogga Police ಶಿವಮೊಗ್ಗ ನಗರದ ನೆಹರೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿಯ ಮೇಲಂತಸ್ಥಿನ ಶೆಟ್ಟರ್‌ನ ಕೀ ಹಾಕುವ ಕೊಂಡಿಯನ್ನ ಜಖಂಗೊಳಿಸಿ 75700 ಕ್ಯಾಶ್ ಮತ್ತು ಸಿಸಿ ಕ್ಯಾಮೆರಾದ ಎರಡು ಹಾರ್ಡ್ ಡಿಸ್ಕ್ ಕದ್ದುಕೊಂಡು ಹೋಗಿರುವ ಘಟನೆ ವರದಿಯಾಗಿದೆ.
ನೆಹರೂ ರಸ್ತೆಯಲ್ಲಿರುವ ಫ್ಯಾಶನ್ ರೆಡಿಮೇಡ್ ಬಟ್ಟೆ ಅಂಗಡಿಯ ಮೇಲಂತಸ್ಥಿನ ಶೆಟರ್ ಮುರಿದು ಕಳ್ಳತನ ಮಾಡಲಾಗಿದೆ. ಅಂಗಡಿಯ ಹಿಂದಿನ ದಿನದ ವ್ಯಾಪಾರ ಮತ್ತು ಅಂದಿನ ವ್ಯಾಪಾರ ಸೇರಿ ಒಟ್ಟು 75700 ರೂ. ಮತ್ತು ಮೇಲಂತಸ್ಥಿನಲ್ಲಿದ್ದ ಡಿವಿಆರ್ ಸಹ ಕಳುವಾಗಿದೆ.
Shivamogga Police ಈ ಅಂಗಡಿಯ ಜೊತೆಗೆ ಪಕ್ಕದ ವಿಡಿಯೋ ಟ್ರಾನಿಕ್ಸ್ ಅಂಗಡಿಯ 650 ಕ್ಯಾಶ್ ಸಹ ಕಳ್ಳತನವಾಗಿದೆ. ಇಲ್ಲಿನ ಸಿಸಿ ಟಿವಿಯ ಹಾರ್ಡ್ ಡಿಸ್ಕ್ ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ
MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕಾರ್ಯವನ್ನು ಕೈಗೊಂಡಿದ್ದು, ರಾಜ್ಯದ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆಗಳಾದ ವಿದ್ಯುತ್ ಬಿಲ್‌ಗಳ ಪಾವತಿ, ಹೊಸ ಸಂಪರ್ಕ ಸೇವೆಗಳು, ಹೆಸರು ಮತ್ತು ಜಕಾತಿ ಬದಲಾವಣೆ ಹಾಗೂ ಮೊಬೈಲ್ ಆಪ್ ಇತ್ಯಾದಿ ಸೇವೆಯು ಮೆಸ್ಕಾಂ ವ್ಯಾಪ್ತಿಯ ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭಧ್ರಾವತಿ, ಚಿಕ್ಕಮಗಳೂರು RAPDRP ನಗರ ಪ್ರದೇಶಗಳ ಗ್ರಾಹಕರಿಗೆ ಲಭ್ಯವಿರುವುದಿಲ್ಲ.
MESCOM ತಂತ್ರಾಂಶವು ಕಾರ್ಯಾರಂಭಗೊAಡ ನಂತರ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿದ್ದು, ಈ ಸಮಯದಲ್ಲಿ ತಂತ್ರಾಂಶದ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ
Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ ಭಾಗವಾಗಿ ಚಲನಚಿತ್ರ ದಸರಾ ಅ.04 ರಂದು ಆರಂಭವಾಗಲಿದೆ.
ಅಂಬೇಡ್ಕರ್ ಭವನದಲ್ಲಿ ಅ. ೦೪ರಂದು ಬೆಳಿಗ್ಗೆ 9 :30ಕ್ಕೆ ಹೆಸರಾಂತ ಚಲನಚಿತ್ರ ಕಲಾವಿದೆ, ಮಾಜಿ ಸಚಿವೆ, ಹಾಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಯವರು ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಆಯೋಜಿಸಲಾಗಿರುವ ಛಾಯಾಚಿತ್ರ ಪ್ರದರ್ಶನ, ಕ್ಯಾಮರಾ ಪ್ರದರ್ಶನ, ಪತ್ರಿಕೆಗಳ ಪ್ರದರ್ಶನ, ವ್ಯಂಗ್ಯ ಚಿತ್ರ ಪ್ರದರ್ಶನಗಳಿಗೆ ಖ್ಯಾತ ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಚಾಲನೆ ನೀಡಿ, ಚಲನಚಿತ್ರ ಸಂಗೀತ ಬೆಳೆದು ಬಂದ ದಾರಿಯನ್ನು ಅವಲೋಕಿಸಲಿದ್ದಾರೆ.
ಪೃಥ್ವಿಗೌಡ, ಸಂಗೀತ ಹುಂಚರವರು ಗೀತೆಗಳನ್ನು ಹಾಡಲಿದ್ದಾರೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭೀಮ ಚಿತ್ರದ ಖ್ಯಾತಿಯ ಇನ್ಸ್ಪೆಕ್ಟರ್ ಪಾತ್ರಧಾರಿ ಪ್ರಿಯಾ, ಚಲನಚಿತ್ರ ನಟ ಅವಿನಾಶ್, ಶಾಖಾಹಾರಿ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ ಪಾಲ್ಗೊಳ್ಳಲಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ವಾರ್ತಾಽಕಾರಿ ಮಾರುತಿ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ, ಬೆಳ್ಳಿಮಂಡಲದ ಸಂಚಾಲಕ ವೈದ್ಯ, ಆಯುಕ್ತರು ಹಾಗೂ ದಸರಾ ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಕವಿತಾ ಯೋಗಪ್ಪನವರ್, ಕಾರ್ಯದರ್ಶಿ ಯಶವಂತ್, ಮಲ್ಲಿಕಾರ್ಜುನ ಚಿತ್ರ ಮಂದಿರದ ಮಾಲೀಕರಾದ ಹೆಚ್. ಆರ್. ಶೈಲೇಶ್, ಶ್ರೀ ವೀರಭದ್ರೇಶ್ವರ ಚಿತ್ರ ಮಂದಿರದ ಮಾಲೀಕರಾದ ಎನ್. ಜೆ. ವೀರಣ್ಣ ಪಾಲ್ಗೊಳ್ಳಲಿದ್ದಾರೆ.
Shivamogga Dasara ಅಧ್ಯಕ್ಷತೆಯನ್ನು ಶಾಸಕ ಎಸ್. ಎನ್. ಚನ್ನಬಸಪ್ಪ ವಹಿಸಲಿದ್ದಾರೆ.
ಚಿತ್ರೋತ್ಸವದ ಮೊದಲ ಚಿತ್ರವಾಗಿ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಶಾಖಾಹಾರಿ ಚಿತ್ರ ಪ್ರಡರ್ಶನ ನಡೆಯಲಿದೆ.
ಇದೇ ಸಂದರ್ಭದಲ್ಲಿ ನಗರದ ಖ್ಯಾತ ಪತ್ರಿಕಾ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್‌ರವರ ಛಾಯಾಚಿತ್ರಗಳ ಪ್ರದರ್ಶನ, ಪ್ರದೀಪ್ ಕುಮಾರ್-ವಾಸುಕಿ ಕುಮಾರ್‌ರವರ ಅಪರೂಪದ ಕ್ಯಾಮರಾಗಳ ಪ್ರದರ್ಶನ ನಡೆಯಲಿದೆ.
ಚಿತ್ರ ಪ್ರದರ್ಶನ
ನಾಲ್ಕು ದಿನಗಳ ಈ ಚಿತ್ರೋತ್ಸವದಲ್ಲಿ ಅ. 05ರಂದು ಬೆಳಿಗ್ಗೆ 9:00ಗಂಟೆಗೆ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಟಗರು ಪಲ್ಯ, 06ರ ಭಾನುವಾರ ಬೆಳಿಗ್ಗೆ ಮಲ್ಲಿಕಾರ್ಜುನ ಚಿತ್ರ ಮಂದಿರದಲ್ಲಿ ಕಂಬ್ಳಿಹುಳ, ಅ. 07ರಂದು ಬೆಳಿಗ್ಗೆ 9:00ಗಂಟೆಗೆ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಲಾಪತ್ಥರ್ ಚಿತ್ರಗಳು ಪ್ರದರ್ಶನ ಕಾಣಲಿವೆ.
ಚಲನಚಿತ್ರ ಕಾರ್ಯಗಾರ
ದಸರಾ ಚಲನಚಿತ್ರೋತ್ಸವದ ಭಾಗವಾಗಿ ಅ. 05ರ ಶನಿವಾರ ಬೆಳಿಗ್ಗೆ 9:00ರಿಂದ 12ರ ವರೆಗೆ ಅಂಬೇಡ್ಕರ್ ಭವನದಲ್ಲಿ ಚಲನಚಿತ್ರ ಕ್ಕೆ ಸಂಬಂಧಿಸಿದ ಕಾರ್ಯಗಾರ ನಡೆಯಲಿದ್ದು, ಕಿರುಚಿತ್ರ ನಿರ್ಮಾಣ ಕುರಿತು ರಾಮ ರಾಮ ರೇ ಖ್ಯಾತಿಯ ನಿರ್ದೇಶಕ-ನಟ ಡಿ. ಸತ್ಯಪ್ರಕಾಶ್, ಮಾತನಾಡಲಿದ್ದು, ಛಾಯಾಗ್ರಾಹಣ ಒಂದು ಅನುಸಂಧನ ಕುರಿತು ಪ್ರಸಿದ್ಧ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಛಾಯಾಗ್ರಾಹಣ ವರ್ತಮಾನದ ಬೆಳವಣ ಗೆಗಳು ಕುರಿತು ಗುರು ಪ್ರಸಾದ ಕಾಶಿ ಮಾತನಾಡಲಿದ್ದಾರೆ.
ಚಲನಚಿತ್ರ ಆಸಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
Navaratri Festival ಬಂಗಾರಮಕ್ಕಿಯಲ್ಲಿ ಶರನ್ನವರಾತ್ರಿ ಉತ್ಸವ
Navaratri Festival ಬಂಗಾರಮಕ್ಕಿಯ ಹೇಮಪುರ ಮಹಾಪೀಠದ ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್‌ನಲ್ಲಿ ಅ. ೦೩ರಿಂದ ೧೭ರವರೆಗೆ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಯಕ್ಷ ಪೂರ್ಣಿಮೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಯಕ್ಷ ಪೂಣ ðಮೆ ಕಾರ್ಯಕ್ರಮದಲ್ಲಿ ಪೌರಾಣ ಕ ಯಕ್ಷಗಾನ ಪ್ರಸಂಗಗಳ ಸೇವಾ ಪ್ರದರ್ಶನಗಳನ್ನು ನಡೆಯಲಿದ್ದು, ವಿವರಗಳು ಇಂತಿದೆ.
ಅ. ೦೩ರಂದು ಕನಕಾಂಗಿ ಕಲ್ಯಾಣ, ೦೪ರಂದು ಕಾರ್ತವೀರ್ಯಾರ್ಜುನ, ೦೫ರಂದು ರತ್ನಾವತಿ ಕಲ್ಯಾಣ, ೦೬ ರಂದು ದೇವಿ ಮಹಾತ್ಮೆ, ೦೭ರಂದು ಬ್ರಹ್ಮಕಪಾಲ, ೦೮ರಂದು ಪಾಂಚಜನ್ಯ, ೦೯ರಂದು ಕೃಷ್ಣಾರ್ಜುನ, ೧೦ರಂದು ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಲಿದೆ.
Navaratri Festival ಅ. ೧೧ರಂದು ವಜ್ರದುಂಬಿ, ೧೨ರಂದು ಕರ್ಣಪರ್ವ, ೧೩ ರಂದು ವಿಶ್ವಾಮಿತ್ರ ಮೇನಕೆ, ೧೪ರಂದು ಭಸ್ಮಾಸುರ ಮೋಹಿನಿ, ೧೫ ರಂದು ಪಾರಿಜಾತ, ೧೬ ರಂದು ಮಾಗಧವಧೆ ಹಾಗೂ ೧೭ರಂದು ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ.
ಭಕ್ತಾದಿಗಳು ಈ ಯಕ್ಷಪೂರ್ಣಿಮೆ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಡಳಿತಾಽಕಾರಿಗಳು ವಿನಂತಿಸಿದ್ದಾರೆ.
ವಿವರಗಳಿಗೆ 6361011288, 9380643455ರಲ್ಲಿ ಸಂಪರ್ಕಿಸಬಹುದು
Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ
ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ
Navaratri Festival ವಂದೇ ವಾಂಛಿತ ಲಾಭಾಯ
ಚಂದ್ರಾರ್ಧಕೃತಶೇಖರಂ/
ವೃಷಾರೂಢಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಂ//
ಇಂದು ಶರನ್ನವರಾತ್ರಿ ಹಬ್ಬದ ಮೊದಲನೆಯ ದಿನ. ಈದಿನ ದುರ್ಗಾಮಾತೆಯನ್ನು ಶೈಲಪುತ್ರಿದೇವಿ ಎಂಬ
ರೂಪದಿಂದ ಆರಾಧಿಸಲಾಗುತ್ತದೆ. ದೇವಿಯು ಕೈಯಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದು ಎತ್ತನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆಯನ್ನು ಶೈಲಪುತ್ರಿ ಎಂದು ಕರೆಯುತ್ತಾರೆ. ಸುಂದರ ಮತ್ತು ಸೌಮ್ಯ ರೂಪ ಶೈಲಪುತ್ರಿದೇವಿಯದು. ಶಿವ ಪುರಾಣದ ಪ್ರಕಾರ,ಸತಿದೇವಿ ದಕ್ಷಪ್ರಜಾಪತಿಯ
ಯಜ್ಞಕುಂಡಕ್ಕೆ ಹಾರಿ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನಿಗೆ ಮಗಳಾಗಿ ಜನಿಸಿ ಶೈಲಪುತ್ರಿ ಎಂದು
ಹೆಸರು ಪಡೆದಳು.
Navaratri Festival ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ಮದುವೆಯಾದಳು.ಅಸುರರಿಂದ ತೊಂದರೆ ಅನುಭವಿಸುತ್ತಿದ್ದ ದೇವಾನುದೇವತೆಗಳಿಗೆ ಅಭಯ ಹಸ್ತ ನೀಡಿದವಳೇ ಶೈಲಪುತ್ರಿದೇವಿ. ನವರಾತ್ರಿ ಹಬ್ಬದ ಮೊದಲನೆಯ ದಿನ ಶೈಲಪುತ್ರಿದೇವಿಯನ್ನು ಶ್ರದ್ಧಾ,ಭಕ್ತಿಯಿಂದ ಆರಾಧಿಸಿದರೆ ದೇವಿಯು ಭಕ್ತರಿಗೆ ವಿಶೇಷ ಶಕ್ತಿಯನ್ನು ಕರುಣಿಸುತ್ತಾಳೆ ಎಂಬ ದೃಢವಾದ ನಂಬಿಕೆ ಇದೆ.
ಇಂತಹ ಅಭಯಕೊಟ್ಟು ಕಾಪಾಡುವ ಶೈಲಪುತ್ರಿ ದೇವಿಯನ್ನು ನಾವು ಭಕ್ತಿಯಿಂದ ಆರಾಧಿಸಿ,ಪೂಜೆ ಸಲ್ಲಿಸಿ,ತಾಯಿಯ ಅನುಗ್ರಹವನ್ನು ಪಡೆಯೋಣ.
Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ
Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಆಚರಣೆಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರೋವರ್ಸ್ ಕ್ಲಬ್ಬಿನ ಅಧ್ಯಕ್ಷರಾದ ಕೆಸಿ ಮಲ್ಲಿಕಾರ್ಜುನಪ್ಪನವರು ಸ್ವತಂತ್ರ ಸಂಗ್ರಾಮದಲ್ಲಿ ಗಾಂಧೀಜಿಯವರು ತೊಡಗಿಸಿಕೊಂಡ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸ ಮಾರ್ಗವಾಗಿ ಗಳಿಸಿದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು. Gandhi Jayanthi ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿದರು ಸಮಾರಂಭದಲ್ಲಿ ಕಾರ್ಯದರ್ಶಿ ಆಮ.ಪ್ರಕಾಶ್. ನಿರ್ದೇಶಕರಾದ ಜಿ.ವಿಜಯಕುಮಾರ್. ಎಸ್ ಚಿನ್ನಪ್ಪ. ಹಾಗೂ ರೋವರ್ಸ್ ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು
B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ
B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ, ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಸೇರಿದಂತೆ ಪದಾಧಿಕಾರಿಗಳು ಅಭಿನಂದಿಸಿದರು.
ಸಾರ್ವಜನಿಕ ಉದ್ಯಮಗಳ ಸಮಿತಿಯು ಸರ್ಕಾರಿ ಸ್ವಾಮ್ಯದ ಉದ್ಯಮಗಳ ನಿರ್ವಹಣೆ, ಕಾರ್ಯಕ್ಷಮತೆ ಪರಿಶೀಲಿಸುವ ಸಮಿತಿಯಾಗಿದೆ. ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸುತ್ತದೆ.
ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯ ಕುರಿತು ವಿವಿಧ ವಿಷಯಗಳು, ಅಭಿವೃದ್ಧಿ ಯೋಜನೆಗಳ ಬಗ್ಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಶಿವಮೊಗ್ಗ ನಿವಾಸದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.
ನೂತನ ಅಧ್ಯಕ್ಷ ಬಿ.ಗೋಪಿನಾಥ್ ಅವರನ್ನು ಅಭಿನಂದಿಸಿ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ಲೋಸಕಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ವೇಗಗತಿಯಲ್ಲಿ ಸಾಗುತ್ತಿದ್ದು, ಪ್ರಮುಖ ಯೋಜನೆಗಳನ್ನು ತರುವಲ್ಲಿ ಸಂಪೂರ್ಣ ಪ್ರಯತ್ನ ನಡೆಸಲಾಗುತ್ತಿದೆ. ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ತಿಳಿಸಿದರು.
B.Y.Raghavendra ಪ್ರವಾಸೋದ್ಯಮ ಹಾಗೂ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯೋಜಿಸಲಿರುವ ಶಿವಮೊಗ್ಗ ಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ರಾಘವೇಂದ್ರ ಅವರು ಲೋಕಸಭಾ ಸದಸ್ಯರಾದ ಮೇಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮಹತ್ತರ ಬದಲಾವಣೆ ಆಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. 2025ರ ಹೊಸ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಹಬ್ಬ ಆಯೋಜಿಸಲು ಅಗತ್ಯ ಚರ್ಚೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಶೀಘ್ರದಲ್ಲಿಯೇ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸಂಯೋಜಿತ ಸಂಸ್ಥೆಗಳ ಪ್ರಮುಖ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್ ಉಪಸ್ಥಿತರಿದ್ದರು.
