Saturday, March 28, 2026
Saturday, March 28, 2026
Home Blog Page 542

Mahatma Gandhi ಗಾಂಧಿ ಟೋಪಿ ಧಾರಣೆ ಕೇವಲ ತೋರಿಕೆಯಾಗಬಾರದು. ಆದರ್ಶಗಳ ಪಾಲನೆಯಾಗಬೇಕು-ಡಾ.ಎಚ್.ಬಿ.ಮಂಜುನಾಥ್.

0

Mahatma Gandhi ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೆ ಮಹಾತ್ಮರ ಆದರ್ಶಗಳ ಪಾಲಿಕೆಯಾಗಬೇಕು, ಇದು ನಾವು ಮಹಾತ್ಮರ ದಿವ್ಯಾತ್ಮಕ್ಕೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು.

ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಲಯನ್ಸ್ ಕ್ಲಬ್, ಲಯನ್ಸ್ ಟ್ರಸ್ಟ್ ಹಾಗೂ ಲಯನ್ಸ್ ಶಾಲಾ ಸಂಯುಕ್ತ ಆಶ್ರಯದಲ್ಲಿ ನೆರವೇರಿದ ಮಹಾತ್ಮ ಗಾಂಧೀ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ವಿಶೇಷ ಉಪನ್ಯಾಸ ನೀಡುತ್ತಾ ಆಂಧ್ರಪ್ರದೇಶದಲ್ಲಿ ಮಹಾತ್ಮ ಗಾಂಧೀಜಿಯವರ ಭಾಷಣ ಕೇಳಿದ ಶ್ರೀಮಂತ ಮಹಿಳೆಯೋರ್ವಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಗಾಂಧೀಜಿಯವರ ತಂಡದ ಹಿಂದೆ ಹೋಗುವ ನಿರ್ಧಾರ ಮಾಡಿ ತನ್ನ ಮೈ ಮೇಲಿದ್ದ ಎಲ್ಲಾ ಒಡವೆಗಳನ್ನು ಬಿಚ್ಚಿ ಕರವಸ್ತದಲ್ಲಿ ಕಟ್ಟಿ ಅಪರಿಚಿತ ವ್ಯಕ್ತಿಯೋರ್ವನ ಕೈಗೆ ಕೊಟ್ಟು ತನ್ನ ಮಾವನಿಗೆ ತಲುಪಿಸುವಂತೆ ಹೇಳಿದಳು.
ಗಾಬರಿಗೊಂಡ ಆ ವ್ಯಕ್ತಿ “ಪರಿಚಯವೇ ಇಲ್ಲದ ನನ್ನ ಕೈಗೆ ಇಷ್ಟೊಂದು ಆಭರಣ ಕೊಟ್ಟಿರಲ್ಲ?!!, ನನ್ನ ಬಗ್ಗೆ ನಿಮಗೆ ವಿಶ್ವಾಸ ಹೇಗೆ ಬಂತು?!” ಎಂದು ಕೇಳಿದಾಗ ಆ ಮಹಿಳೆಯು “ನಿನ್ನ ತಲೆಯ ಮೇಲೆ ಗಾಂಧಿ ಟೋಪಿ ಇದೆ ಅಂದ ಮೇಲೆ ನೀನು ಪ್ರಾಮಾಣಿಕ ವ್ಯಕ್ತಿಯೇ ಆಗಿರುತ್ತೀ ಎಂಬ ವಿಶ್ವಾಸ ನನ್ನದು”ಎಂದಳು.

ಗಾಂಧಿ ಟೋಪಿ ಧರಿಸಿದವರು ಈ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು,ಆಗ ತೋರಿಕೆಯಾಗದೆ ಪಾಲಿಕೆಯಾಗುತ್ತದೆ ಎಂದು ಡಾ.ಎಚ್ ಬಿ ಮಂಜುನಾಥ್ ಹೇಳಿದರು.

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಸರಳ ಜೀವನ, ಪ್ರಾಮಾಣಿಕತೆ ನಿದರ್ಶನ ಘಟನೆಗಳನ್ನು ಮನೋಜ್ಞವಾಗಿ ವಿವರಿಸಿದರು. ಲಯನ್ ಆರ್ ಜೆ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ ಉಳವಯ್ಯ ಎಸ್ ಜಿ ನೆರವೇರಿಸಿದರು.

Mahatma Gandhi ಲಯನ್ ಹೆಚ್ ಸಿ ಹುಲ್ಲತ್ತಿ ಹಾಗೂ ಲಯನ್ ಎಂ ಎಸ್ ಉದಯಕುಮಾರ್ ಪ್ರಾಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ ಗಳಾದ ವೈ ಬಿ ಸತೀಶ್, ಬೆಳ್ಳೂಡಿ ಶಿವಕುಮಾರ್, ಕೆ ಮುರುಗೇಶಪ್ಪ, ಎ ರಮೇಶ್, ಎ ಎಸ್ ಮೃತ್ಯುಂಜಯ, ಎನ್ ವಿ ಬಂಡಿವಾಡ, ಎಸ್ ನಾಗರಾಜ, ಎಚ್ ಎಂ ನಾಗರಾಜ್, ಶಾಲಾ ಮುಖ್ಯೋಪಾಧ್ಯಾಯನಿ,ಶಿಕ್ಷಕಿಯರು ಮುಂತಾದವರು ಭಾಗವಹಿಸಿದ್ದರು. ಶಾಲಾ ಮಕ್ಕಳು ಗಾಂಧೀಜಿ ಹಾಗೂ ಶಾಸ್ತ್ರೀಜಿ ಬಗ್ಗೆ ಮಾತುಗಳನ್ನಾಡಿದರು.

Gandhi jayanthi ಬೀದಿಬದಿ ವ್ಯಾಪಾರಿಗಳ ಸಂಘಟನೆಯಿಂದ ಗಾಂಧೀಜಿ & ಶಾಸ್ತ್ರೀಜಿ ಜಯಂತಿ

0

Gandhi jayanthi ಶಿವಮೊಗ್ಗ ನಗರದ ಮೇನ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಮಹಾತ್ಮ ಗಾಂಧಿಜೀಯವರ155ನೇ ಹಾಗೂ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ ಜನ್ಮದಿನಾಚರಣೆಯನ್ನು ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು.
Gandhi jayanthi ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ, ಜೆ ಸಿ ನಾಗರಾಜ್, ಸತ್ಯಮೂರ್ತಿ, ಧನರಾಜ್, ಫೈರೋಜ್ ಖಾನ್ ಹಾಗೂ ಇತರರು ಉಪಸ್ಥಿತರಿದ್ದರು.

CM Siddharamaiah ನೈಜ ಸುದ್ದಿ ಪ್ರಕಟಿಸಿ, ಸಮಾಜದಲ್ಲಿ ಶಾಂತಿ ಕಾಪಾಡುವುದು ನಿಜವಾದ ಪತ್ರಿಕೋದ್ಯಮ- ಸಿದ್ಧರಾಮಯ್ಯ

0

CM Siddharamaiah ಊಹಾ ಪತ್ರಿಕೊದ್ಯಮದಿಂದ ಇನ್ನೊಬ್ಬರ ತೇಜೋವಧೆ ಮಾಡುವುದು ಪತ್ರಿಕೋದ್ಯಮದ ಕೆಲಸವಲ್ಲ. ನೈಜ ಸುದ್ದಿಗಳನ್ನು ಜನರಿಗೆ ತಲುಪಿಸಿ ವಸ್ತು ಸ್ಥಿತಿಯನ್ನು ಬಿತ್ತರಿಸಿ ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಂತಹ ಕೆಲಸ ಮಾಡುವುದು ನಿಜವಾದ ಪತ್ರಿಕೋದ್ಯಮದ ಕೆಲಸ. ಊಹಾ ಪತ್ರಿಕೋದ್ಯಮಕ್ಕೆ ನಾವು ಅಸ್ಪದ ಕೊಡಬಾರದು. ಇಂತಹ ಪತ್ರಿಕೋದ್ಯಮದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಇಂದು ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ – 2024, ಟೀಯೆಸ್ಸಾರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿವೆ. ಸುಳ್ಳು ಸುದ್ದಿಗಳ ಪ್ರಭಾವದಿಂದಾಗಿ ಸಮಾಜದಲ್ಲಿ ಅಶಾಂತಿ ತುಂಬಿದೆ. ಸುಳ್ಳು ಸುದ್ದಿಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಇಂತಹ ಸುದ್ದಿಗಳಿಗೆ ತಡೆ ಒಡ್ಡಬೇಕು. ಸುಳ್ಳು ಸುದ್ದಿಗಳ ವಿರುದ್ದ ನಾವೆಲ್ಲರೂ ಹೋರಾಡಬೇಕು. ಇಂದು ಗಂಡ ಹೆಂಡತಿಯ ಜಗಳವನ್ನೇ ಬಿತ್ತರಿಸುವ ಸುದ್ದಿಯೇ ನೈಜ ಪತ್ರಿಕೋದ್ಯಮ ಎಂದು ತಿಳಿದುಕೊಳ್ಳಲಾಗಿದೆ. ಅದರೆ ಇಂತಹ ಸುದ್ದಿಗಳಿಂದ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

ಪ್ರಶಸ್ತಿ ಪುರಸ್ಕೃತರು ಇತರೇ ಪತ್ರಕರ್ತರಿಗೆ ಮಾದರಿಯಾಗಿ:
ಪತ್ರಿಕೋದ್ಯಮದಲ್ಲಿ ಪ್ರಸಸ್ತಿಗಳನ್ನು ನೀಡುವ ವಿಚಾರ ಬಹಳ ಸ್ವಾಗತಾರ್ಹವಾಗಿದೆ. ಪ್ರಸಸ್ತಿಗಳನ್ನು ಸ್ವೀಕರಿಸಿರುವವರೆಲ್ಲರೂ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಮಹನೀಯರು. ತಾವೆಲ್ಲರೂ ಇತರೆ ಪತ್ರಕರ್ತರಿಗೆ ಮಾದರಿಯಾಗಬೇಕು. ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಕಟ್ಟಕಡೆಯ ವ್ಯಕ್ತಿಯನ್ನು ಮನುಷ್ಯರನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಜನರಿಗೆ ವಸ್ತುಸ್ಥಿತಿ, ಸತ್ಯವಾದ ವಿಷಯವನ್ನು ತಿಳಿಸುವಂತ ಸುದ್ದಿಗಳು ಬಿತ್ತರವಾಗಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಸಿಎಂ ಸಿದ್ದರಾಮಯ್ಯ ಅವರು ನೈಜ ಸುದ್ದಿಗಳಿಂದ ಪರಿಹಾರ ಸೂಚಿಸಬಹುದು. ಅದು ನೈಜ ಪತ್ರಿಕೋದ್ಯಮದ ಕೆಲಸ. ಇಂದು ಪ್ರಶಸ್ತಿಗಳನ್ನು ಪಡೆದವರೆಲ್ಲರೂ ಇಂದಿನ ಪತ್ರಿಕೋದ್ಯಮಿಗಳಿಗೆ ಅದರ್ಶವಾಗಲಿ. ಪ್ರೇರಣೆಯಾಗಲಿ ಎಂದು ಆಶಿಸಿದರು.

ಇಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮದಿನದ ಜೊತೆಗೆ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನ ದಿನವೂ ಹೌದು. ಈ ಇಬ್ಬರ ಮಹಾನ್ ನಾಯಕರ ಜನ್ಮದಿನವನ್ನು ಆಚರಣೆ ಮಾಡಿ ನಮನಗಳನ್ನು ಸಲ್ಲಿಸುತ್ತಿದ್ದೇವೆ. ಈ ಇಬ್ಬರು ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದರೆ ಅದೇ ಅವರಿಗೆ ನಾವು ಸಲ್ಲಿಸುವ ಗೌರವ ಎಂದು ತಿಳಿಸಿದರು.

CM Siddharamaih ವಿಶ್ವ ಕಂಡ ನಾಯಕ ಮಹಾತ್ಮ ಗಾಂಧೀಜಿ: ಗಾಂಧೀಜಿಯವರು ದೇಶ ಕಂಡಂತಹ ಅಪರೂಪದ ನಾಯಕ. ಅದಕ್ಕೆ ಅಮೇರಿಕಾ ದೇಶದ ಮಾಜಿ ಅಧ್ಯಕ್ಷರಾದ ಒಬಾಮ ಅವರು ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಮಾತ್ರ ನಾಯಕರಲ್ಲ ಇಡೀ ಜಗತ್ತಿಗೆ ನಾಯಕರು ಎಂದು ಹೇಳಿದ್ದಾರೆ. ನಾವೆಲ್ಲರೂ ಕೂಡ ಹೆಮ್ಮೆ ಪಡುತ್ತೇವೆ. ಗಾಂಧೀಜಿಯವರು ಭಾರತದಲ್ಲಿ ಹುಟ್ಟಿದರೂ ಸಹ ವಿಶ್ವದ ನಾಯಕರಾಗಿದ್ದರು. ಅವರಿಂದ ಸ್ವಾತಂತ್ರ್ಯ ಬಂದಿತು. ಬ್ರಿಟೀಷರ ದಾಸ್ಯದಿಂದ ಹೊರಬಂದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ವಿದೇಶದ ಗಣ್ಯರಾದ ಒಬಾಮ ಅವರೇ ಮಹಾತ್ಮ ಗಾಂಧೀಜಿ ಅವರನ್ನು ಜಗತ್ತಿನ ನಾಯಕರೆಂದು ಹೇಳಿದರೆ ಕೆಲವರು ಇಂದು ಗಾಂಧೀಜಿ ಅವರನ್ನು ಖಳ ನಾಯಕರನ್ನಾಗಿ ಮಾಡುತ್ತಿದ್ದಾರೆ. ಗೂಡ್ಸೆ ಅಂತವರನ್ನು ನಾಯಕರೆಂದು ಬಿಂಬಿಸುತ್ತಿದ್ದಾರೆ. ಇದನ್ನೆಲ್ಲ ನಾವು ಸಹಿಸಿಕೊಳ್ಳಬಾರದು. ಗಾಂಧೀಜಿ ಅವರ ಬಗ್ಗೆ ತುಚ್ಛವಾಗಿ, ಲಘುವಾಗಿ ಕೀಳು ಮಟ್ಟದಲ್ಲಿ ಮಾತನಾಡುವ ಶಕ್ತಿಗಳನ್ನು ನಾವು ಸೋಲಿಸಬೇಕು. ಅದೇ ನಾವು ಗಾಂಧೀಜಿ ಅವರಿಗೆ ಸಲ್ಲಿಸುವ ಗೌರವ ಎಂದು ಭಾವಿಸಿದ್ದೇನೆ ಎಂದರು.

ಇಂದು ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಕೊಡುತ್ತಿದ್ದೇವೆ. ಇಂದು ಯಾರು ಯಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೋ ಅವರೆಲ್ಲರಿಗೂ ಕೂಡ ನನ್ನ ಅಭಿನಂಧನೆಗಳು.

ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ಮೈಗೂಡಿಸಿಕೊಂಡು ಜನಸೇವೆಯಲ್ಲಿ ತೊಡಗಿಕೊಂಡವರಿಗೆ ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿಗಳನ್ನು 2014ರಿಂದ ಕೊಡುತ್ತಾ ಬಂದಿದ್ದೇವೆ. ಇಂದು ಇಬ್ಬರಿಗೆ ಸೇವಾ ಪ್ರಶಸ್ತಿಯನ್ನು ನೀಡಿದ್ದೇವೆ. ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಮತ್ತು ತುಮಕೂರು ಜಿಲ್ಲೆ ತುರುವೆ ಕೆರೆ ತಾಲ್ಲೂಕಿನ ಗೊಟ್ಟಿಕೆರೆಯ ಜಿ.ಬಿ. ಶಿವರಾಜು ಅವರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.

ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯು ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಮನುಷ್ಯರಾಗುವಂತೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಕುವೆಂಪು ಅವರು ಹೇಳಿರುವಂತೆ “ಹುಟ್ಟುತ್ತಾ ವಿಶ್ವ ಮಾನವರು ಬೆಳೆಯುತ್ತಾ ಅಲ್ಪ ಮಾನವರು” ಅದಕ್ಕೆ ನಮ್ಮ ಶಿಕ್ಷಣ ಹೇಗಿರಬೇಕು ಎಂದರೆ ಮನುಷ್ಯರನ್ನು ರೂಪಿಸುವ ಶಿಕ್ಷಣವಾಗಬೇಕು ಜನಪರ ಕಾಳಜಿಯನ್ನು ಹೊಂದಿರುವಂತಹ ಶಿಕ್ಷಣವನ್ನು ನೀಡುವುದಾಗಿರಬೇಕು ಆಗ ಎಲ್ಲರೂ ಮನುಜರಾಗುತ್ತಾರೆ ಎಂದರು.

ಶಿಕ್ಷಣವೆಂಬುದು ಮೌಲ್ಯಗಳನ್ನು ರೂಪಿಸಿಕೊಳ್ಳುವ ಶಿಕ್ಷಣವಾಗಬೇಕು ದಾರಿ ತಪ್ಪಿಸುವಂತಹ ಶಿಕ್ಷಣವಾಗಬಾರದು. ಗಾಂಧೀಜಿಯವರ ಸಂದೇಶವೇನೆಂದರೆ “ನನ್ನ ಜೀವನವೇ ಸಂದೇಶ” ಗಾಂಧೀಜಿ ಅವರು ಸತ್ಯ ಅಹಿಂಸೆ ಮಾರ್ಗದಲ್ಲಿ ನಡೆದವರು. ಅವರು ಬದಕಿನುದ್ದಕ್ಕೂ ಸಮಾಜಸೇವೆ, ನಾಡಿನ ಸೇವೆ, ದೇಶದ ಸೇವೆ ಮಾಡಿ ಇಡೀ ಜೀವನವನ್ನೇ ದೇಶ ಸೇವೆಗಾಗಿ ಮುಡುಪಾಗಿಟ್ಟಂತ ಮಹಾನ್ ಚೇತನ. ಇಂದು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ಅವರನ್ನು ಗೌರವಿಸುತ್ತಿದ್ದೇವೆ. ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.

ವ್ಯಕ್ತಿಯನ್ನು ಕೊಲ್ಲಬಹುದು ಅದರೆ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಗಾಂಧಿ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ನಾವು ಗಾಂಧೀಜಿ ಕಂಡಂತಹ ಕನಸನ್ನು ನನಸು ಮಾಡಿ ಭಾರತವನ್ನು ಕಟ್ಟುವಂತಹ ಕೆಲಸ ಮಾಡಬೇಕು ಎಂದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಬೆಳಗಾವಿಯಲ್ಲಿ 1924ರ ಡಿಸೆಂಬರ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ಅವರು ವಹಿಸಿದ್ದರು. ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದಾಗಿದೆ. ಈಗ ಈ ಅಧಿವೇಶನಕ್ಕೆ 100 ವರ್ಷಗಳು ತುಂಬಲಿದ್ದು, ರಾಜ್ಯ ಸರಕಾರವು ಸದರಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಇದೇ ಡಿಸೆಂಬರ್ ತಿಂಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇನ್ಮುಂದೆ ಪ್ರಶಸ್ತಿಗಳನ್ನು ಆಯಾ ವರ್ಷವೇ ಪ್ರದಾನ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ನೆರೆದಿದ್ದ ಜನರಿಗೆ ಅಶ್ವಾಸನೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರದ ಶಾಸÀಕರಾದ ರಿಜ್ವಾನ್ ಅರ್ಷದ್ ಅವರು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅದ್ಬುತ ವಿಚಾರಧಾರೆಗಳು ಸರ್ವಕಾಲಕ್ಕೂ ಸಲ್ಲುವಂತದ್ದು. ಅವರು ಸತ್ಯ, ಅಹಿಂಸೆ, ಕೋಮುಸೌಹಾರ್ದತೆ, ಸಹಬಾಳ್ವೆ ಮಾರ್ಗಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟವರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ವಹಿಸಿ ನಮ್ಮನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಿದರು. ಗಾಂಧೀಜಿಯವರು ಗತಿಸಿ ಶತಮಾನಗಳು ಕಳೆದರು ದೇಶ ವಿದೇಶದಲ್ಲಿ ಅವರ ಚಿಂತನೆ, ವಿಚಾರಗಳು ಸದಾ ಪ್ರಸ್ತುತವಾಗಿದೆ. ಗಾಂಧೀಜಿಯವರು ನೀಡಿದ ಸಂದೇಶ ಸಮಾಜಕ್ಕೆ ಗಟ್ಟಿ ಅಡಿಪಾಯವಾಗಿದೆ. ಅವರ ಜೀವನವೇ ಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

2023ನೇ ಸಾಲಿನ ಟೀಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತರಾದ ಡಾ. ಸರಜೂ ಕಾಟ್ಕರ್ ಅವರು ಮಾತನಾಡಿದರು.

ಪ್ರಶಸ್ತಿ ಪುರಸ್ಕøತರ ವಿವರ: ಟೀಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿಗಳನ್ನು 2019 ನೇ ಸಾಲಿಗೆ ಶಿವಾಜಿ ಗಣೇಶನ್, 2020 ನೇ ಸಾಲಿಗೆ ಶ್ರೀಕಾಂತಾಚಾರ್ಯ ಮಣೂರ, 2021ನೇ ಸಾಲಿಗೆ ಡಾ. ಆರ್.ಪೂರ್ಣಿಮಾ, 2022ನೇ ಸಾಲಿಗೆ ಡಾ. ಪದ್ಮರಾಜ ದಂಡಾವತಿ ಹಾಗೂ 2023ನೇ ಸಾಲಿಗೆ ಡಾ.ಸರಜೂ ಕಾಟ್ಕರ್ ಅವರುಗಳಿಗೆ ಹಾಗೂ ಶ್ರೀ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು, 2019 ನೇ ಸಾಲಿಗೆ ರಾಜೀವ ಕಿದಿಯೂರ, 2020ನೇ ಸಾಲಿಗೆ ಇಂದೂಧರ ಹೊನ್ನಾಪುರ, 2021 ನೇ ಸಾಲಿಗೆ ಎನ್.ಮಂಜುನಾಥ, 2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ, 2023ನೇ ಸಾಲಿಗೆ ಶ್ರೀ ಶಿವಲಿಂಗಪ್ಪ ದೊಡ್ಡಮನಿ ಅವರುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು.

ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಮತ್ತು ತುಮಕೂರು ಜಿಲ್ಲೆ ತುರುವೆ ಕೆರೆ ತಾಲ್ಲೂಕಿನ ಗೊಟ್ಟಿಕೆರೆಯ ಜಿ.ಬಿ. ಶಿವರಾಜು ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಮಹಾತ್ಮ ಗಾಂಧೀಜಿ (ಬಾಪೂಜಿ) ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗ, ಪದವಿ ಪೂರ್ವ ವಿಭಾಗ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧುಕೋಕಿಲ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯಿಷಾ ಖಾನಂ, ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೆಹಬೂಬ್ ಪಾಷ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Mahatma Gandhiji ಗಾಂಧಿ ಜಯಂತಿಯನ್ನ ಮನೆಹಬ್ಬದಂತೆ ಆಚರಿಸಿದ ಗಾಂಧಿ ಬಸಪ್ಪ ಕುಟುಂಬದ ಸದಸ್ಯರು

0

Mahatma Gandhiji ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆ ನಡೆಯುತ್ತಿದೆ. ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗತ್ತಿನ ಕೋಟ್ಯಂತರ ಜನರಿಗೆ ಗಾಂಧೀಜಿ ಆದರ್ಶಪ್ರಾಯ. ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ವನ್ನಾಗಿಯೂ ಆಚರಣೆ ಮಾಡಲಾಗುತ್ತದೆ.
ಮಹಾನ್ ವ್ಯಕ್ತಿಯ ತತ್ವ, ಸಿದ್ಧಾಂತವನ್ನು ಕಳೆದ ಏಳು ದಶಕಗಳಿಂದ ಶಿವಮೊಗ್ಗದ ಕುಟುಂಬವೊಂದು ಅನುಸರಿಸುತ್ತಾ ಬರುತ್ತಿದೆ. ನಗರದ ಸ್ವಾತಂತ್ರ್ಯ ಹೋರಾಟಗಾರಾದ ಗಾಂಧಿ ಬಸಪ್ಪನವರ ಕುಟುಂಬದ ಸದಸ್ಯರೆಲ್ಲರೂ ಪ್ರತಿ ವರ್ಷ ನಗರದ ಕುವೆಂಪು ರಂಗಮಂದಿರದಲ್ಲಿ ಗಾಂಧಿ ಜಯಂತಿ ಆಚರಿಸಿಕೊಂಡು ಬರುತ್ತಿದ್ದು, ಯುವಜನರಿಗೆ ಗಾಂಧೀಜಿಯ ಆದರ್ಶಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಗಾಂಧೀಜಿ ಕರೆ ನೀಡಿದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಬಸಪ್ಪನವರು ಸ್ವಾತಂತ್ಯ ಹೋರಾಟಕ್ಕೆ ಅಡಿಯಿಡುತ್ತಾರೆ. ಶಿವಮೊಗ್ಗದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸೇರಿ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ತಮ್ಮ ಹೋರಾಟಗಳಿಂದ ಅನೇಕ ಸಲ ಸೆರೆವಾಸವನ್ನೂ ಅನುಭವಿಸಿದ್ದಾರೆ.
ಗಾಂಧೀಜಿ ಹತ್ಯೆ ನಡೆದಾಗ ಬಸಪ್ಪನವರು ತೀವ್ರ ಆಘಾತಕ್ಕೀಡಾಗಿದ್ದರು. ಮೂರು ದಿನಗಳ ಕಾಲ ತಮ್ಮ ಕೋಣೆಯಲ್ಲೇ ಇದ್ದು, ಯಾರೊಂದಿಗೂ ಮಾತನಾಡದೆ ಚರಕದಲ್ಲಿ ನೂಲು ನೇಯುತ್ತಾ ಉಪವಾಸ ಮಾಡಿದ್ದರು. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ನಾಗಪ್ಪ ಶ್ರೇಷ್ಠಿಗಳು ಬಂದು ಬಸಪ್ಪನವರನ್ನು ಸಮಾಧಾನಪಡಿಸಿ, ನೀರು ಕುಡಿಸುವ ಮೂಲಕ ಉಪವಾಸ ಅಂತ್ಯಗೊಳಿಸಿದ್ದರು.

ಬಸಪ್ಪನವರು ಗಾಂಧಿ ಬಸಪ್ಪ ಆಗಿದ್ದು ಹೇಗೆ ? :

Mahatma Gandhiji ಗಾಂಧೀಜಿಯ ತತ್ವ, ಸಿದ್ಧಾಂತಗಳನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಗಾಂಧಿ ಜಯಂತಿಯಂದು ತಾವೇ ಸಹ ಸಂಸ್ಥಾಪಕರಾಗಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಶಾಲಾ ಆವರಣದಲ್ಲಿ ಉಪನ್ಯಾಸ, ಚರ್ಚೆ, ಭಜನೆ ನಡೆಸಿಕೊಂಡು ಬರುತ್ತಿದ್ದರು. ಹೀಗಾಗಿ ಇವರನ್ನು ಜನರು ‘ಗಾಂಧಿ ಬಸಪ್ಪ’ ಎಂದು ಕರೆಯಲು ಪ್ರಾರಂಭಿಸಿದ್ದರು.
ಗಾಂಧಿ ಬಸಪ್ಪನವರು ಬದುಕಿನ ಕೊನೆಯ ದಿನಗಳಲ್ಲಿ ತಮ್ಮ ನಾಲ್ವರು ಗಂಡು ಮಕ್ಕಳು ಹಾಗೂ ಕುಟುಂಬಸ್ಥರನ್ನು ಕರೆಯಿಸಿ 2 ಲಕ್ಷ ರೂಪಾಯಿ ಠೇವಣಿ ಇಟ್ಟು, ಇಹಲೋಕ ತ್ಯಜಿಸಿದ್ದರು. ನಂತರ ತನ್ನ ತಿಥಿ ಮಾಡದೆ ತನ್ನಂತೆಯೇ ಪ್ರತಿ ವರ್ಷ ಗಾಂಧಿ ಜಯಂತಿ ಆಚರಿಸಬೇಕು ಎಂದು ಹೇಳಿ ಮರಣ ಹೊಂದಿದ್ದರು. ಗಾಂಧಿ ಬಸಪ್ಪನವರ ಮಕ್ಕಳು ತಮ್ಮ ತಂದೆಯ ಹಣದ ಜೊತೆಗೆ ತಾವೂ ಸಹ ಹಣ ಸೇರಿಸಿ ಠೇವಣಿ ಇಟ್ಟು ಗಾಂಧಿ ಜಯಂತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಗಾಂಧಿ ಬಸಪ್ಪನವರ ಪುತ್ರ ಅಶೋಕ ಕುಮಾರ್ ಮಾತನಾಡಿ, “ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಜನರಲ್ಲಿ ರಾಷ್ಟ್ರೀಯತೆಯ ಮನೋಭಾವವಿತ್ತು.‌ ಆಗ ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಕೊಡಸಬೇಕೆಂಬ ಕಿಚ್ಚಿತ್ತು. ನಮ್ಮ ತಂದೆ ಗಾಂಧಿ ಬಸಪ್ಪನವರಿಗೆ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾದ ನಾಗಪ್ಪ ಶ್ರೇಷ್ಠಿಗಳು ಹಾಗೂ ದಿನಕರ, ಗಿರಿಮಾಜಿ ರಾಜಗೋಪಾಲ್ ಅವರು ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಒಡನಾಟವಿತ್ತು” ಎಂದರು.

ಗಾಂಧೀವಾದಿಯಾಗಿ ಬೆಳೆದ ಬಸಪ್ಪ :

“ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಬಿಡಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಪ್ರಭಾತಪೇರಿ ಹೊರಟು ಸ್ವಾತಂತ್ರ್ಯದ ಕಿಚ್ಚನ್ನು ಎಲ್ಲರಲ್ಲೂ ಹರಡುತ್ತಿದ್ದರು. ಆಗ ನಮ್ಮ ತಂದೆ ಗಾಂಧೀಜಿ ಅವರ ಪ್ರಭಾವಕ್ಕೊಳಗಾಗಿ ಗಾಂಧೀವಾದಿ ಆಗುತ್ತಾರೆ. ಸ್ವತಃ ಚರಕದಲ್ಲಿ ನೂಲು ನೇಯುವುದು, ಗಾಂಧಿ ವಿಚಾರಧಾರೆಯನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಾರೆ. ಅಸಹಕಾರ, ದೇಶ ಬಿಟ್ಟು ತೂಲಗಿ, ಉಪ್ಪಿನ‌ ಸತ್ಯಾಗ್ರಹದಲ್ಲಿ ಭಾಗಿಯಾಗಿ ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಜೈಲು ವಾಸ ಅನುಭವಿಸುತ್ತಾರೆ” ಎಂದು ಸ್ಮರಿಸಿದರು.
ಗಾಂಧಿ ಬಸಪ್ಪನವರ ಮತ್ತೊಬ್ಬ ಪುತ್ರ ಸತೀಶ್ ಮಾತನಾಡಿ, “ಮಹಾತ್ಮ ಗಾಂಧಿಜಿಯವರು ಸ್ವಾತಂತ್ರ್ಯಕ್ಕಾಗಿ ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದ ನಂತರ ನಮ್ಮ ತಂದೆ ಅವರ ಮಾತಿನ ಪ್ರಭಾವಕ್ಕೊಳಗಾಗಿ ಹೋರಾಟಕ್ಕೆ ಧುಮುಕಿದ್ದರು. ನಂತರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಆಗ ಜೈಲುವಾಸವನ್ನೂ ಅನುಭವಿಸಿದ್ದರು. ಗಾಂಧೀಜಿ ಹತ್ಯೆಯ ನಂತರ ನಮ್ಮ ತಂದೆ ತುಂಬ ಚಿಂತೆಗೀಡಾಗಿದ್ದರು. ಗಾಂಧೀಜಿ ಅವರ ತತ್ವ, ಸಿದ್ಧಾಂತವನ್ನು ಹರಡಬೇಕೆಂದು ತೀರ್ಮಾನಿಸಿ, ಗಾಂಧಿ ಜಯಂತಿಯಂದು ಅವರ ತತ್ವ ಹಾಗೂ ಚಿಂತನೆಯನ್ನು ಜನರಿಗೆ ತಿಳಿಸತೊಡಗಿದರು” ಎಂದು ನೆನೆದರು.
“ನಮ್ಮ ಮನೆಗೆ ವಂದೇ ಮಾತರಂ ಎಂದು ಹೆಸರಿಟ್ಟರು. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ, ಸ್ವಾತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದರು. ತಂದೆಯವರು 1999ರಲ್ಲಿ ನಿಧನರಾದರು. ಅದಕ್ಕೂ ಮುಂಚೆ ನಮ್ಮ ಕುಟುಂಬಸ್ಥರೆಲ್ಲರನ್ನು ಕರೆಸಿ ಪ್ರತಿ ವರ್ಷ ನನ್ನ ತಿಥಿ ಆಚರಿಸದೇ ಮಹಾತ್ಮ ಗಾಂಧೀಜಿಯ ಜನ್ಮ ದಿನವನ್ನು ಆಚರಿಸಬೇಕೆಂದು ತಿಳಿಸಿದರು.

Mahatma Gandhiji ಅಂದಿನಿಂದ ನಮ್ಮ ಸಹೋದರರೆಲ್ಲರೂ ಸೇರಿ ಗಾಂಧಿ ಜಯಂತಿ ಆಚರಣೆ ಹಾಗೂ ಗಾಂಧೀಜಿ ಅವರ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.
ಸ್ಥಳೀಯರಾದ ಉಲ್ಲಾಸ್ ಮಾತನಾಡಿ, “ಗಾಂಧಿ ಬಸಪ್ಪನವರ ಕುಟುಂಬದವರು ಪ್ರತಿ ವರ್ಷ ಗಾಂಧಿ ಜಯಂತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರ ಆಚಾರ, ವಿಚಾರವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಗಾಂಧಿ ತತ್ವ, ಸಿದ್ಧಾಂತ ಇಂದಿಗೂ ಪ್ರಸ್ತುತ. ನಮ್ಮಂತಹ ಯುವ ಪಿಳಿಗೆಗೆ ಅವರ ತತ್ವ ಮಾರ್ಗದರ್ಶನವಾಗಿದೆ” ಎಂದು ತಿಳಿಸಿದರು.

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

0

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ ಅದ್ಯಾಪಕರದು, ಅವರ ಕಾರ್ಯ ಗುರುತಿಸಿ ಸನ್ಮಾನಿಸುವುದು ನಾಗರೀಕರ ಕರ್ತವ್ಯ ಎಂದು ರೋಟರಿ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ಆಯೋಜಿಸಿದ್ದ ಅಂಬೇಡ್ಕರ್ ಮಹಿಳಾ ವಸತಿ ಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಮೇಸ್ಕಾಂನ ಮಾಜಿ ಚೀಫ್ ಇಂಜಿನಿಯರ್ ಭಾರದ್ವಾಜ್ ತಿಳಿಸಿದರು.
ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಮನೆಯ ವಾತವರಣದಲ್ಲಿ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು ಕಡು ಬಡವರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನಿರ್ಭಯ ವಾಗಿ ಈ ಶಾಲೆಗಳಿಗೆ ಕಳಿಸಿ ಅವರ ಉನ್ನತಿಯಿಂದ ನೆಮ್ಮದಿ ಜೀವನ ಕಾಣಲು ಸಾಧ್ಯ ಎಂದರು.
Rotary Shivamogga ಪ್ರಾಸ್ತಾಕವಾಗಿ ಮಾತನಾಡಿದ ರೇಣುಕರಾಧ್ಯ ರವರು ಸ್ಪರ್ದಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಅತ್ಯಗತ್ಯ. ಸರ್ಕಾರ ಉತ್ತಮ ಶಿಕ್ಷಕರನ್ನು ನೇಮಿಸಿ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಲು ಶ್ರಮ ವಹಿಸುತ್ತಿದೆ. ಅದರ ಸದುಪಯೋಗ ಪಡಿಸಿಕೊಳ್ಳಲು ಪಾಲಕರು ಮುಂದೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರೊ.ರೂಪಪುಣ್ಯಕೊಟಿ ಯವರು ಈ ಶಾಲೆಯ ಶಿಕ್ಷಕರ ಶಿಸ್ತುಬದ್ದ ಕಾರ್ಯ ಚಟುವಟಿಕೆ ಗಮನಿಸಿದ್ದೇನೆ. ಮಕ್ಕಳು ಅತ್ಯುತ್ತಮ ಅಂಕಗಳಿಸಿ ಉನ್ನತ ಶಿಕ್ಷಣ ಗಳಿಸಲು ಸಹಕಾರಿಯಾಗಿದೆ. ಎಲೆ ಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರನ್ನು ಗುರುತಿಸುವುದು ನಮ್ಮಂತ ಸಂಘ ಸಂಸ್ಥೆಗಳ ಆದ್ಯ ಕರ್ತವ್ಯ, ಆ ನಿಟ್ಟಿನಲ್ಲಿ ಇಂದು ಅವರನ್ನು ಸನ್ಮಾನಿಸಿ ಇನ್ನು ಉತ್ತಮ ಕಾರ್ಯ ಮಾಡಲು ಉತ್ತೇಜನ ನೀಡಲಾಗಿದೆ ಎಂದರು.
ಲಕ್ಮೀನಾರಾಯಣ್ ಸ್ವಾಗತಿಸಿ, ಸತ್ಯನಾರಾಯಣ್ ವಂದಿಸಿದರು ರಾಜಶೇಖರ್ ನಿರೂಪಿಸಿದರು.

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

0

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ ಸ್ವಾತಂತ್ರö್ಯ ಲಭಿಸಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಹಾಗೂ ಪ್ರೀತಿ-ವಿಶ್ವಾಸದಿಂದ ಬಾಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ 155 ನೇ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಸ್ವಾತಂತ್ರ‍್ಯ ಸುಲಭದಿಂದ ಬಂದಿಲ್ಲ. ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದಿಂದ ಲಭಿಸಿದ್ದು. ಗಾಂಧೀಜಿಯವರು ತಮ್ಮ ಜೀವನಪೂರ್ತಿ ಶಾಂತಿ, ಸಮಾನತೆ, ಸೌಹಾರ್ಧತೆ ಸ್ಥಾಪಿಸಲು ಹೋರಾಡಿದರು. ಅದನ್ನು ನಾವು ಉಳಿಸಿಕೊಂಡು ಹೋಗಬೇಕು. ಸುಮಾರು 84 ದೇಶಗಳು ಗಾಂಧೀಜಿಯವರ ಪ್ರತಿಮೆಯನ್ನು ಹೊಂದಿವೆ. ಸಾಮಾನ್ಯವಾಗಿ ಎಲ್ಲರೂ ಅವರ ಚಿಂತನೆಗೆ ಮಾರು ಹೋಗಿದ್ದಾರೆ.
Gandhi Jayanthi ಮಕ್ಕಳು ಈ ದೇಶದ ಭವಿಷ್ಯ. ಅವರಿಗೆ ದೇಶವನ್ನು ಬದಲಿಸುವ ಶಕ್ತಿ ಇದೆ. ಗನ್‌ಗಿಂತ ಪೆನ್ ಅತ್ಯಂತ ಬಲಿಷ್ಟವಾಗಿದ್ದು, ವಿದ್ಯಾವಂತರಾಗಿ ದೇಶದ ಒಳಿತಿಗಾಗಿ ಮುಂದೆ ಬರಬೇಕು ಎಂದರು.
ಇಡೀ ದೇಶ ಒಂದೇ ವೇದಿಕೆ. ನಾವೆಲ್ಲ ಒಂದೇ ತಾಯಿ ಮಕ್ಕಳು. ಒಂದೇ ವೇದಿಕೆಯಲ್ಲಿ ಎಲ್ಲ ಧರ್ಮದವರು ಸೇರಲು ಕಾರಣ ಗಾಂಧೀಜಿ ಮತ್ತು ಅಂಬೇಡ್ಕರ್‌. ನಾವೆಲ್ಲ ನಮ್ಮ ಸಂವಿಧಾನವನ್ನು ತಿಳಿಯಬೇಕು. ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕು. ಅದೇ ಉದ್ದೇಶದಿಂದ ಸೆ. 5 ರಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದಲು ಆದೇಶಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದುವ ಮೂಲಕ ಗೌರವ ತೋರಬೇಕು. ನಾವೆಲ್ಲ ಒಂದೇ ಎಂಬ ಭಾವನೆ ಮೂಡಬೇಕು ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ವಿಶ್ವದಲ್ಲೇ ಶಾಂತಿ ನೆಲೆಸಲು ಗಾಂಧೀಜಿಯವರು ಶಾಂತಿ ಸಂದೇಶ ಸಾರಿದ್ದಾರೆ. ಸ್ವದೇಶಿ ವಸ್ತುಗಳ ಬಳಕೆ, ಸ್ವಾವಲಂಬನೆ ಸೂತ್ರ, ಸ್ವಚ್ಚ ಭಾರತ ಸಂಕಲ್ಪದಂತಹ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲ ಸಾಗಬೇಕು. ಸಮಾಜವನ್ನು ಶ್ರೀಮಂತಗೊಳಿಸಬೇಕು ಎಂದ ಅವರು ನಮ್ಮ ತಂದೆ, ತಾಯಿ ಹೆಸರಿನಲ್ಲಿ, ಹುಟ್ಟಿದ ದಿನಗಳಂದು ಪ್ರತಿಯೊಬ್ಬರೂ ಒಂದೊAದು ಗಿಡ ನೆಟ್ಟು ಬೆಳೆಸುವ ಸಂಕಲ್ಪವನ್ನು ಇಂದು ಮಾಡೋಣ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಗಾಂಧೀಜಿಯವರ ಜೀವನ ಕಥೆ ಓದಿ, ತಿಳಿದು ಅವರ ತತ್ವಗಳನ್ನು ನಾವು ಅಳವಡಿಸಿಕೊಳ್ಳಬೇಕು. ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಅವರಉ ನಡೆದರು. ಶಾಂತಿ ಮತ್ತು ಸ್ವಾತಂತ್ರ‍್ಯದ ಬದುಕಿಗೆ ಗಾಂಧಿ ಮತ್ತು ಅಂಬೇಡ್ಕರ್‌ರAತಹ ಮಹಾನ್ ವ್ಯಕ್ತಿಗಳು ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ದೇಶ ಹೇಗಿರಬೇಕು ಎಂದು ಗಾಂಧೀಜಿ ಮೊದಲೇ ತಿಳಿಸಿದ್ದಾರೆ. ಶಾಂತಿ ಮತ್ತು ಸೌಹಾರ್ಧತೆಯಿಂದ ಬದುಕಲು ಹೇಳಿಕೊಟ್ಟಿದ್ದಾರೆ. ಅವರು ತಮ್ಮ ನಡವಳಿಕೆಯಿಂದ ಮಹಾತ್ಮರಾಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ ಮಹಾನ್ ವ್ಯಕ್ತಿಯಾಗಿದ್ದು ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಿದ್ದಾರೆ. ಗಾಂಧೀಜಿಯವರು ತಮ್ಮ ಜೀವನದ ಉದ್ದಕ್ಕೂ ರಾಮನ ಭಜನೆಯನ್ನು ಮಾಡಿದ್ದರೆಂದು ಸ್ಮರಿಸಿದ ಅವರು ನಾವೆಲ್ಲ ದೇಶಭಕ್ತರಾಗೋಣ. ಸ್ವಚ್ಚ ಭಾರತ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.
ಸ.ಪ್ರ.ದ ಕಾಲೇಜಿನ ಉಪನ್ಯಾಸಕ ಅಣ್ಣಪ್ಪ ಮಳಮಠ್ ಗಾಂಧಿ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಗಾಂಧಿ ನಮ್ಮಂತೆ ಸಾಮಾನ್ಯವಾಗಿ ಬದುಕಿದವರು. ಅವರನ್ನು ಆರಾಧನಾ ನೆಲೆಯಿಂದ ನೋಡದೆ ಒಬ್ಬ ಮನುಷ್ಯನಾಗಿ ನೋಡಿದಾಗ ಹೆಚ್ಚು ಅರ್ಥ ಆಗುತ್ತಾರೆ. ಸತ್ಯಕ್ಕಾಗಿ ಬದುಕಿದವರು. ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಬೇಕೆಂದು, ಅಸಮಾನತೆ ತೊಡೆದು ಹಾಕಲು ಹೋರಾಡಿದವರು. ಯಾವುದು ಸತ್ಯದ ಪರ, ಅಹಿಂಸೆಯ ಪರ, ಪ್ರೀತಿಯ ಪರವಾಗಿರುತ್ತದೋ ಅದನ್ನು ನಾವು ಒಪ್ಪಿಕೊಳ್ಳಬೇಕೆಂದು ತಿಳಿಸಿದವರು.
ಸತ್ಯ ಸಾಗರದಂತೆ ಮತ್ತು ಪ್ರೀತಿ ಪರ್ವತದಂತೆ. ಸಾಗರ ಮತ್ತು ಪರ್ವತದಲ್ಲಿ ಅಗಾಧ ಸಹನೆ ಇರುತ್ತದೆ. ಎಲ್ಲರನ್ನೂ ಒಂದೇ ರೀತಿ ನೋಡುವುದು ಕರುಣೆ ಎಂದು ತಿಳಿಸಿದವರು ಗಾಂಧೀಜಿ. ಜಗತ್ತು ಸುಂದರವಾಗಿ ಕಾಣಲು, ನಾವು ಮನುಷ್ಯರಾಗಿ ಬಾಳಲು, ನಮ್ಮ ಬದುಕು ಹಸನಾಗಲು ಗಾಂಧಿ ನಮಗೆ ಬೇಕು. ಸಂಕುಚಿತ ಮನೋಭಾವ ದೂರ ಮಾಡದಿದ್ದರೆ ನಾವು ಗಾಂಧಿಯನ್ನು ತಲುಪಲು ಸಾಧ್ಯವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನದಲ್ಲಿ ಗಾಂಧಿಯವರ ಆಶಯಗಳಿವೆ.
ಕಾರ್ಯಕ್ರಮದಲ್ಲಿ ಸರ್ವಧರ್ಮ ಪಠನೆ ಮಾಡಲಾಯಿತು. ಭಗವದ್ಗೀತೆ ಪಠನೆಯನ್ನು ಕು. ಐಶೂಬಾಯಿ ನೆರವೇರಿಸಿದರು. ಕುರಾನ್ ಪಠನೆಯನ್ನು ಮೌಲ್ವಿ ಲತೀಫ್ ಸಾಬ್ ಮತ್ತು ಸ್ಟ್ಯಾನ್ಲಿ ಡಿಸೋಝ ಬೈಬಲ್ ಪಠನ ಮಾಡಿದರು.
ಗಾಂಧಿ ಜಯಂತಿ ಪ್ರಯುಕ್ತ ಫ್ರೌಢಶಾಲೆ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು.
ಜಿ.ಪಂ.ಸಿಇಓ ಎನ್.ಹೇಮಂತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

0

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ ದಸರಾಕ್ಕೆ’ ಕ್ಷಣಗಣನೆ ಪ್ರಾರಾಭವಾಗಿದ್ದು, ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿ ಹೊರುವ ಆನೆಗಳಿಗೆ ಅಧಿಕೃತ ಆಹ್ವಾನ ನೀಡಲಾಯಿತು.

Shivamogga Dasara ಶಿವಮೊಗ್ಗದ ಸಕ್ಕರೆ ಬೈಲಿ ನಲ್ಲಿರುವ ಆನೆ ಬಿಡಾರದಲ್ಲಿ ಮಹಾನಗರಪಾಲಿಕೆ ವತಿಯಿಂದ ನಡೆಯುವ ದಸರಾ ಮಹೋತ್ಸವಕ್ಕೆ ಅಧಿಕೃತ ಆಹ್ವಾನ ನೀಡಿ, ಅಂಬಾರಿ ಹೊರುವ ಸಾಗರ್ ಆನೆಗೆ ಹಾಗೂ ಜೊತೆಯಲ್ಲಿ ಸಾತ್ ನೀಡಲಿರುವ ಬಹದ್ದೂರ್ ಹಾಗೂ ಬಾಲಣ್ಣ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನು ಸುಮಾರು 650 ಕೆಜಿ ಇರುವ ಬೆಳ್ಳಿಯ ಅಂಬಾರಿಯನ್ನು ಹೊರಲಿರುವ ಸಾಗರ್ ಆನೆಯ ಜೊತೆಯಲ್ಲಿ ಈ ಬಾರಿ ಜಂಬೂಸವಾರಿಯಲ್ಲಿ ಕೇವಲ ಗಂಡು ಆನೆಗಳ ಬಳಕೆ ವಿಶೇಷ. ಹಾಗಾಗಿಯೇ, ಆನೆಗಳಿಗೆ ನಾಳೆಯಿಂದಲೇ ತಾಲೀಮು ನಡೆಸಲು ನಿರ್ಧಾರ ಮಾಡಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪಾಲಿಕೆಯ ಮಾಜಿ ಸದಸ್ಯರುಗಳು ಉಪಸ್ಥಿತರಿದ್ದರು.

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

0

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ ಪ್ರಯುಕ್ತ ಅ.03ರಿಂದ ಅ. 12ರವರೆಗೆ ಶರನ್ನವರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಯಿಂದ ಚಂಡಿಕಾಪಾರಾಯಣ ಹಾಗೂ ದೇವಿಗೆ ವಿಶೇಷ ಅಲಂಕಾರ , ಬೆಳಿಗ್ಗೆ 10 ಗಂಟೆಯಿಂದ ಹೋಮ ಪ್ರಾರಂಭವಾಗಲಿದೆ 12:30ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಿರುತ್ತದೆ.
ಪ್ರತಿನಿತ್ಯ ಸಂಜೆ 6.00 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 08 ಗಂಟೆಗೆ ಉಯ್ಯಾಲೇ ಸೇವೆ ಪ್ರಾರಂಭ, 8:30ಕ್ಕೆ ಮಹಾಮಂಗಳಾರತಿ ರ್ಥಪ್ರಸಾದ ವಿನಿಯೋಗವಿರುತ್ತದೆ.
Chaudeshwari Temple ಅ.o3ಗುರುವಾರದಂದು ಶ್ರೀಮತಿ ಡಾ|| ರಶ್ಮಿ ಶ್ರೀ ಡಾ || ಅನಿಲ್‌ಕುಮಾರ್ ಕುಟುಂಬದವರಿಂದ ದೇವಿಗೆ ಅರಿಶಿನ-ಕುಂಕುಮ ಅಲಂಕಾರ, ಶ್ರೀಮತಿ ಭವಾನಿ ಶ್ರೀ ಜಯಣ್ಣ ಕುಟುಂಬದವರಿಂದ , ಶ್ರೀಮತಿ ಭವಾನಿ ಮತ್ತು ಶ್ರೀ ಶಶಿಧರ್ ಕುಟುಂಬದವರಿಂದ ದೀಪ ನಮಸ್ಕಾರ, ಶ್ರೀಮತಿ ದಿವ್ಯ ಡಾ|| ಮೋಹನ್ ಕುಟುಂಬದವರಿಂದ ಉಯ್ಯಾಲೇ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀ ಚೇತನ್ ಭಟ್ 9980247081 ಶ್ರೀ ಕೆ. ಶೇಖರ್ 9448888129 ಸಂಪರ್ಕಿಸಬಹುದು.
ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

Gandhi Jayanthi ಗಾಂಧೀಜಿ & ಶಾಸ್ತ್ರೀಜಿ ನಮ್ಮೆಲ್ಲರ ಹೆಮ್ಮೆ- ಎನ್.ಎನ್.ಕಬ್ಬೂರ

0

Gandhi Jayanthi ಶಾಂತಿಯ ಹರಿಕಾರರಾದ ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೆ ಅಹಿಂಸೆಯ ಪಾಠ ಹೇಳಿಕೊಟ್ಟು, ಅದರ ಮೂಲಕವೇ ಜಗತ್ತನ್ನು ಗೆದ್ದರು, ಅದೇ ರೀತಿ ಲಾಲ್ ಬಹದ್ದೂರ ಶಾಸ್ತ್ರಿಯವರು ಭಾರತೀಯ ಜನರಿಗೆ ದೇಶಪ್ರೇಮ ಹಾಗೂ ನೈತಿಕತೆ ಮಾರ್ಗದರ್ಶನ ಮಾಡಿದರು. ಅವರ ಜಯಂತಿಯ ಈ ದಿನದಂದು ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನೀವೆಲ್ಲ ಸಾಗಬೇಕಾಗಿದೆ, ಈ ಇಬ್ಬರು ಮಹಾನ್ ನಾಯಕರು ನಮ್ಮೆಲ್ಲರ ಹೆಮ್ಮೆಯಾಗಿದ್ದಾರೆ” ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ರಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಂತರ ಗಾಂಧೀಜಿ ಮತ್ತು ಶಾಸ್ತ್ರಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

Gandhi Jayanthi ಮಕ್ಕಳು ಗಾಂಧೀಜಿ ಹಾಗೂ ಶಾಸ್ತ್ರಿಜಿಯವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಭಾಷಣಗಳ ಮೂಲಕ ಹಂಚಿಕೊಂಡರು, ಈ ವೇಳೆ ಶಿಕ್ಷಕಿ ಎಮ್.ಆರ್.ಫಂಡಿ ಮಕ್ಕಳಿಗೆ ಬುಕ್ ಹಾಗೂ ಪೆನ್ನುಗಳನ್ನು ಬಹುಮಾನವಾಗಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ-ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

Klive Special Article ಕನ್ನಡದ ನೆಲದಲ್ಲಿ ಗಾಂಧೀಜಿಯ ಹೆಜ್ಜೆಗಳು ಲೇ: ರಘು.ಆರ್.

0

Klive Special Article ಕರ್ನಾಟಕದಲ್ಲಿ ಮಹಾತ್ಮ ಗಾಂಧಿಜಿ ಅವರ ಅತ್ಯಂತ ಅವಿಸ್ಮರಣಿಯ ಘಟನೆಗಳು ನಡೆದಿದೆ. ರಾಷ್ಟçಪಿತ ಮಹಾತ್ಮ ಗಾಂಧಿಜಿ ಅವರು ತಮ್ಮ ಶಾಂತಿ, ಸತ್ಯ,ಅಹಿಂಸೆಗಳ ಮೂಲಕ ದೇಶದಲ್ಲಿ ಸ್ವಾತಂತ್ರö್ಯ ಚಳುವಳಿಗೆ ಹೊಸ ರೂಪವನ್ನು ನೀಡಿದವರು. ಕರ್ನಾಟಕದಲ್ಲಿ ಅವರ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎನ್ನುವ ಘೊಷಣೆಯ ಪ್ರಭಾವದಿಂದ ಇಡೀ ದೇಶದಲ್ಲಿ ಮೊದಲು ಸ್ವಾತಂತ್ರö್ಯವನ್ನು ಘೋಷಿಸಿಗೊಂಡ ಗ್ರಾಮ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮ, ಶಿವಪುರ ದ್ವಜ ಸತ್ಯಗ್ರಹ ಅಂಕೋಲ ಉಪ್ಪಿನ ಸತ್ಯಗ್ರಹ, ಅಸಹಕಾರ ಚಳುವಳಿ, ಹೀಗೆ ಗಾಂಧಿಜೀ ಅವರ ಜೀವನ ಆದರ್ಶಗಳು ಕನ್ನಡದ ನೆಲದಲ್ಲಿ ಅಚ್ಚಳಿಯಾಗಿ ಬೆರೂರಿದ್ದು ಕರ್ನಾಟಕಕ್ಕೆ ಅವರು ಅನೇಕ ಬಾರಿ ಬಂದು ಹೋಗಿದ್ದಾರೆ. ಗಾಂಧಿಜೀ ಅವರ ಜಯಂತಿಯ ಪ್ರಯುಕ್ತ ಅವರು ಈ ನೆಲದಲ್ಲಿ ನಡೆದಾಡಿದ ದಿನಗಳನ್ನು ನೆನೆಯೊಣ.
ಕರುನಾಡಿನಲ್ಲಿ ಗಾಂಧಿಯ ಹೆಜ್ಜೆ ಗುರುತು:
Klive Special Article 1915ರಲ್ಲಿ ಗಾಂಧೀಜಿ ಆಫ್ರೀಕಾದಿಂದ ಭಾರತಕ್ಕೆ ಮರಳಿದ ಮೇಲೆ ತನ್ನ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಸೂಚನೆ ಮೇರೆಗೆ ದೇಶ ಪರ್ಯಟನೆ ಹೊರಟರು. 1915ರ ಮೇ 8ರಂದು ಬೆಂಗಳೂರಿಗೆ ಪತ್ನಿ ಜೊತೆ ಬಂದ ಗಾಂಧೀಜಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಗೋಪಾಕೃಷ್ಣ ಗೋಖಲೆಯವರ ಭಾವಚಿತ್ರ ಅನಾವರಣ ಮಾಡಿದರು. ಗಾಂಧೀಜಿ ಅವರು ಕರುನಾಡಿಗೆ ಮೊದಲು ಭೇಟಿ ನೀಡಲು ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರ ಪ್ರಯತ್ನವಿದೆ ಎಂದು ಉಲ್ಲೇಖವಿದೆ. 1915 ಮಾತ್ರವಲ್ಲ 1920, 1927, 1934, 1936ರಲ್ಲಿ ಕೂಡ ಹಲವು ಬಾರಿ ಗಾಂಧೀಜಿ ಬೆಂಗಳೂರಿಗೆ ಬಂದಿದ್ದಾರೆ.
ಗಾAಧಿಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ:
ಗಾಂಧೀ ಅಧ್ಯಕ್ಷತೆಯಲ್ಲಿ ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ 1924, ಡಿಸೆಂಬರ್ 20 ರಂದು ನಡೆಯಿತು. ಇದು 39ನೇ ಕಾಂಗ್ರೇಸ್ ಅಧಿವೇಶನವಾಗಿದ್ದು 26 ಮತ್ತು 27ರಂದು ನಡೆಯಲಿದ್ದ ಅಧಿವೇಶನಕ್ಕೆ ಆರು ದಿನ ಮೊದಲೇ ಆಗಮಿಸಿದ್ದರು. ಸಭೆಗಳಲ್ಲಿ ಮಹಾರಾಷ್ಟ್ರ, ಮೈಸೂರು ಪ್ರಾಂತ್ಯಗಳಿAದ ಬಂದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಧಿವೇಶನದಲ್ಲಿ 10 ನಿಮಿಷಗಳ ಅಧ್ಯಕ್ಷೀಯ ಭಾಷಣದಲ್ಲಿ ದೇಶ ಬಾಂಧವರಲ್ಲಿ ಒಗ್ಗಟ್ಟು, ಸ್ಥಳೀಯ ಭಾಷೆಯ ಮಹತ್ವ, ಅಸ್ಪೃಶ್ಯತೆ, ಸ್ವರಾಜ್ಯ ಕುರಿತು ಮಾತನಾಡಿದರು. ಯಾರದೇ ಮನೆಯಲ್ಲಿ ವಾಸ್ತವ್ಯ ಹೂಡದೆ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಗಾಂಧಿ ಟೆಂಟ್ ಹಾಕಿಕೊಂಡಿದ್ದರು.
ಅನಾರೋಗ್ಯದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟಕ್ಕೆ ಎರಡು ಬಾರಿ ಭೇಟಿ ನೀಡಿರುವ ಬಗ್ಗೆ ಉಲ್ಲೇಖವಿದೆ. ಮೊದಲ ಬಾರಿ 1927ರಲ್ಲಿ 45 ದಿನಗಳ ಕಾಲ ಮತ್ತು 1936 ರಲ್ಲಿ 20ಗಳ ನಂದಿಬೆಟ್ಟದಲ್ಲಿ ತಂಗಿ ಆರೋಗ್ಯ ವೃದ್ಧಿಸಿಕೊಂಡಿದ್ದರು.
1934ರಲ್ಲಿ ದೊಡ್ಡ ಬಳ್ಳಾಪುರಕ್ಕೆ ಬಂದಿದ್ದ ಗಾಂಧೀಜಿ ಅಲ್ಲಿ ನೆರೆದಿದ್ದ 25 ಸಾವಿರದಷ್ಟು ಜನರಿಗೆ ದೇಶಪ್ರೇಮದ ಪಾಠ ಮಾಡಿದ್ದರು.
1921 , ಅಕ್ಟೋಬರ್ 10 ರಂದು ಅಸಹಕಾರ ಚಳುವಳಿಯ ಪ್ರಚಾರಕ್ಕೆಂದು ಗಾಂಧಿ ಬಳ್ಳಾರಿಗೆ ರೈಲಿನಲ್ಲಿ ಬಂದಿದ್ದರು.
ವಿಜಯಪುರ (ಆಗಿನ ಬಿಜಾಪುರ)ಕ್ಕೆ ಕಾಂಗ್ರೆಸ್ ನ 17 ಸಮಾವೇಶಕ್ಕೆಂದು 1918, ಮೇ 5ರಂದು ಬಂದಿದ್ದರು ಅದಾದ ಬಳಿಕ ಎರಡನೇ ಬಾರಿ 1921, ಮೇ 28ರಂದು ಗುಮ್ಮಟ ನಗರಿಗೆ ಬಂದಿದ್ದರು.
ಮೈಸೂರಿಗೆ ಗಾಂಧೀಜಿ ಮೊದಲು ಭೇಟಿಕೊಟ್ಟಿದ್ದು, 1927ರಲ್ಲಿ, ಇದಾದ ಬಳಿಕ 1934ರಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿಗೆ ಗಾಂಧೀಜಿ ಭೇಟಿ ಕೊಟ್ಟಿದ್ದರು.
1927ರ ಅಗಸ್ಟ್ ನಲ್ಲಿ ಚಿಕ್ಕಮಗಳೂರಿನಗೆ ಬಂದಿದ್ದ ಗಾಂಧಿ, ಅಲ್ಲಿನ ಜಿಲ್ಲಾಧಿಕಾರಿ ಪ್ರಾಂಗಣದಲ್ಲಿ ಸಭೆ ನಡೆಸಿದ್ದಾರೆ.
ಕೇರಳ ಮಾರ್ಗವಾಗಿ ಬಂದಿದ್ದ ಗಾಂಧಿ ಕೊಡಗಿಗೆ ಭೇಟಿಕೊಟ್ಟಿದ್ದರು. 1934ರ ಫೆಬ್ರವರಿ 22ರಂದು ಪೊನ್ನಂಪೇಟೆಗೆ ಬಂದಿದ್ದ ಅವರು ಅಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ತಂಗಿದ್ದರು.
1934 ಮಾರ್ಚ್ 1ರಂದು ಚಿತ್ರದುರ್ಗ, ಶಿರಸಿ ಮೂಲಕ ಹಾವೇರಿಗೆ ಬಂದಿದ್ದರು.
1934 ಮಾರ್ಚ್ 2 ರಂದು ದಾವಣಗೆರೆ ಬಂದ ಗಾಂಧಿ , ಅಲ್ಲಿ ಸ್ವಾತಂತ್ರ‍್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದರು. ಅಲ್ಲಿಂದ ಬಳ್ಳಾರಿ , ಹುಬ್ಬಳ್ಳಿಗೆ ಭೇಟಿ ನೀಡಿದರು.
1934ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಆಗಮಿಸಿದ್ದರು. ಅಲ್ಲಿ ಅಶ್ವತ್ಥ ಮರದ ಕೆಳಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನೆನಪಿನಲ್ಲಿ ಕಟ್ಟೆ ಕಟ್ಟಲಾಗಿದೆ. ಮಡಿಕೇರಿಯಿಂದ ಸುಳ್ಯ ರಸ್ತೆಯ ಮೂಲಕ ಪುತ್ತೂರಿಗೆ ಕಾಲ್ನಡಿಗೆಯಲ್ಲಿ ಬಂದು ಬಳಿಕ ಮಂಗಳೂರು ತೆರಳಿದರು ಎಂಬುದು ವಿಶೇಷ.
ಮಹಾತ್ಮಾ ಗಾಂಧೀಜಿ ಅವರು ಉಡುಪಿ ಜಿಲ್ಲೆಗೆ ಬಂದದ್ದು ಕೇವಲ ಒಂದು ಬಾರಿ, ಅದು 1934ರ ಫೆ.25ರಂದು. ಗಾಂಧಿಜಿ ಅವರು 1915 ರಿಂದ 1936 ರವರೆಗೆ ಅನೇಕ ಬಾರಿ ಕರ್ನಾಟಕ್ಕೆ ಭೇಟಿ ನೀಡಿದ್ದಾರೆ. ಅನೇಕ ಸಂಘಟನೆಗಳ ಹೋರಾಟ ಸಭೆ ಸಮಾರಂಭಗಳಲ್ಲಿ ಅವರು ಭಾಗವಹಿಸಿದ್ದಾರೆ.
ಮಹತ್ಮ ಗಾಂಧಿಜೀ ಅವರು ಈ ದೇಶಕಂಡ ಮಹಾನ್ ವ್ಯಕ್ತಿ ಒಂದು ಹಿಡಿ ಉಪ್ಪು, ಅಸಹಕಾರ,ಸತ್ಯ ನಿಷ್ಠೆ, ಸತ್ಯಗ್ರಹದ ಮೂಲಕ ಬ್ರಿಟೀಷರ ವಿರುದ್ದ ಭಾರತಮಾತೆಯ ಮುಕ್ತಿಗಾಗಿ ಶ್ರಮಿಸಿದ ಬರಿಗೈ ಸಂತ, ಅವರ ಹೋರಾಟದ ಹಾದಿ ಜೀವನ ಪದ್ಧತಿ ಇಂದು ಜಗತ್ತು ಗೌರವಿಸುತ್ತಿದೆ.
-ರಘು ಆರ್.ಅಪ್ರೆಂಟಿಸ್
ವಾರ್ತಾ ಇಲಾಖೆ ಶಿವಮೊಗ್ಗ.