Saturday, March 28, 2026
Saturday, March 28, 2026
Home Blog Page 540

Chain Snatching ಬಸ್ ಪ್ರಯಾಣದಲ್ಲಿ ಚಿನ್ನಾಭರಣ ಕಳವು ಪ್ರಕರಣ

0

Chain Snatching ಬಂಗಾರದ ಕಿವಿರಿಂಗ್ ರಿಪೇರಿ ಮಾಡಿಸಲು ಬಜಾರ್ ಗೆ ಬಂದಿದ್ದ ಮಹಿಳೆ ಬಂಗಾರದ ಅಂಗಡಿ ಬಂದ್ ಮಾಡಿದ ಪರಿಣಾಮ ಬಸ್ ನಿಲ್ಧಾಣಕ್ಕೆ ಹೋಗಿ ಮನೆವಸ್ತುಗಳನ್ನು ಖರೀದಿಸಿ ಬಿಲ್ ನೀಡಲು ಮುಂದಾದಾಗ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ನಡೆದಿದೆ‌.
ಹೊಸಳ್ಳಿಯ ನಿವಾಸಿಯ ಮಹಿಳೆ ತಮ್ಮ
ದೊಡ್ಡಮ್ಮನ ಮಗಳ ಜೊತೆ ಸೆ.21 ರಂದು ಬಟ್ಟೆ ಖರೀದಿ ಮಾಡಲು ಮತ್ತು ಬಂಗಾರದ ಕಿವಿರಿಂಗ್ ರಿಪೇರಿ ಹಾಗೂ ಮನೆ ಸಾಮಾನುಗಳನ್ನು ಖರೀದಿಸಲು ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು.
ಗಾಂಧಿಬಜಾರ್ ನಲ್ಲಿ ಬಟ್ಟೆ ಮತ್ತು ಮನೆ ಸಾಮಾನುಗಳನ್ನು ಖರೀದಿಸಿದ ನಂತರ ಕಿವಿರಿಂಗ್ ರಿಪೇರಿ ಮಾಡಿಸಲು ಅಂಗಡಿಗೆ ಹೋಗಿ ನೋಡಿದಾಗ ಅಂಗಡಿ ಬಂದ್ ಆಗಿದ್ದರಿಂದ ವಾಪಾಸ್ ಊರಿಗೆ ಹೋಗಲು ಶಿವಪ್ಪನಾಯಕ ಸರ್ಕಲ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಹತ್ತಿ ಬಸ್ ಸ್ಟ್ಯಾಂಡ್ ಗೆ ಬಂದಿದ್ದಾರೆ.

Chain Snatching ಬಸ್ ಸ್ಟ್ಯಾಂಡ್ ನಲ್ಲಿ ಮದ್ಯಾಹ್ನ 04-30 ಗಂಟೆಗೆ ಸ್ಮಾರ್ಟ್ ಬಜಾರ್ ನಲ್ಲಿ ಸಾಮಾನುಗಳನ್ನು ಖರೀದಿಸಿದ ನಂತರ ಬಿಲ್ ಕೊಡಲು ಬ್ಯಾಗ್ ನಲ್ಲಿದ್ದ ಪರ್ಸ್ ನ್ನು ತೆಗೆಯಲು ಹೋದಾಗ ಬ್ಯಾಗಿನ ಜಿಪ್ ಅರ್ಧ ತೆರೆದಿದ್ದು, ತಕ್ಷಣ ಮಹಿಳೆಯು ಗಾಭರಿಯಾಗಿ ಬ್ಯಾಗ್ ನ್ನು ಚೆಕ್ ಮಾಡಿದಾಗ ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳಿದ್ದ ಪರ್ಸ್ ಇರಲಿಲ್ಲ.
ಪರ್ಸ್ ನಲ್ಲಿ 1) 2010 ನೇ ಸಾಲಿನಲ್ಲಿ ಖರೀದಿಸಿ ಸುಮಾರು 6 ಗ್ರಾಂ 800 ಮೀಲಿ ತೂಕದ ಸುಮಾರು 25,000/-ರೂ ಬೆಲೆಬಾಳುವ ಬಂಗಾರದ ಸ್ನೇಕ್ ಚೈನ್ ಮತ್ತು 2) ಸುಮಾರು 3 ಗ್ರಾಂ 500 ಮೀಲಿ ತೂಕದ 12,000/ -ರೂ ಬೆಲೆಬಾಳುವ ಒಂದು ಜೊತೆ ಬಂಗಾರದ ಕಿವಿರಿಂಗ್ ಇದ್ದುದ್ದ ಪರ್ಸ್ ಕಳುವಾಗಿತ್ತು.
ಶಿವಪ್ಪನಾಯಕ ಸರ್ಕಲ್ ನಿಂದ ಬಸ್ ಸ್ಟ್ಯಾಂಡ್ ಗೆ ಬಸ್ ನಲ್ಲಿ ಬರುವಾಗ ಅವರ ಬ್ಯಾಗ್ ನ ಜಿಪ್ ನ್ನು ತೆಗೆದು ಬಂಗಾರದ ಒಡವೆಗಳಿದ್ದ ಪರ್ಸ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Navratri Dasara Festival ನವರಾತ್ರಿ ಉತ್ಸವ.ಮೂರನೇದಿನ.ದೇವಿಯ ಚಂದ್ರಘಂಟಾ ರೂಪದ ಆರಾಧನೆ ಲೇ:ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

0

Navratri Dasara Festival ಇಂದು ನವರಾತ್ರಿ ಹಬ್ಬದ ಮೂರನೆಯ ದಿನ.
ಇಂದು”ಚಂದ್ರಘಂಟಾ”(ಚಂದ್ರಿಕಾದೇವಿ)-ಅವತಾರದಲ್ಲಿದೇವಿಯಆರಾಧನೆಮಾಡುತ್ತಾರೆ.ದುರ್ಗಾದೇವಿಯು
ಹುಲಿಯಮೇಲೆಆರೂಢಳಾಗಿರುತ್ತಾಳೆ.
ದೇವಿಯ ಶರೀರದಿಂದ ಚಿನ್ನದ ಬಣ್ಣ ಹೊಮ್ಮು
ತ್ತಿರುವಂತೆ ಕಾಣುತ್ತದೆ.ದೇವಿಗೆ ಹತ್ತುಕೈಗಳು ಇರುತ್ತವೆ.ಎಂಟು ಕೈಗಳಲ್ಲಿ ವಿಧವಿಧವಾದ ಯುದ್ಧ ಅಸ್ತ್ರಗಳು ಮತ್ತು ಒಂದು ಕೈಯಲ್ಲಿ ವರಗಳನ್ನು ಕೊಡುತ್ತಾ ಮತ್ತೊಂದು ಕೈಯಲ್ಲಿ ಅಭಯಮುದ್ರೆ ಆಶ್ವಾಸನೆ ತೋರಿಸುತ್ತಾಳೆ.ಘಂಟೆಯಾಕಾರದ ಚಂದ್ರನನ್ನು ಶಿರದಲ್ಲಿ ಧರಿಸಿದವಳಾದ್ದರಿಂದ ಈಕೆಗೆ ಚಂದ್ರಘಂಟೆಯೆಂಬ ಹೆಸರು ಬಂದಿದೆ.
ಇವಳ ಆರಾಧನೆಯಿಂದ ಸಂಪತ್ತು ಹಾಗೂ
ಸಮೃದ್ಧಿಯನ್ನು ಪಡೆಯಬಹುದು.ಈಕೆಯ
ಆಶೀರ್ವಾದದಿಂದ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಎದುರಾಗದು ಎಂಬ ನಂಬಿಕೆ ಭಕ್ತರದ್ದು.
Navratri Dasara Festival ಚಂದ್ರಘಂಟಾದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುವುದು.ಈ ದೇವಿಯ ಪೂಜೆಯಿಂದ
ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ
ದೂರವಾಗುವುದು.
ಇಂತಹ ಆತ್ಮವಿಶ್ವಾಸ ಹೆಚ್ಚಿಸುವ ಈದೇವಿಯ
ಪೂಜೆಮಾಡಿ ತಾಯಿಯ ಅನುಗ್ರಹ ಪಡೆಯೋಣ.

Journalism Award ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ನೆನಪಿನ ಪ್ರಶಸ್ತಿಗೆ ನಾಮನಿರ್ದೇಶನಕ್ಕೆ ಆಹ್ವಾನ

0

ಬೆಂಗಳೂರು, ಅಕ್ಟೋಬರ್ 04 (ಕರ್ನಾಟಕ ವಾರ್ತೆ) :

Journalism Award ಹಿರಿಯ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ಅವರ ನೆನಪಿನಾರ್ಥ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದಾರೆ. ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿದೆ.

“ವಡ್ಡರ್ಸೆ ರಘುರಾಮ ಶೆಟ್ಟಿ” ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಹಾಗೂ ಸಾರ್ವಜನಿಕರು, ಸಂಘ – ಸಂಸ್ಥೆಗಳು ಅರ್ಹ ಪತ್ರಕರ್ತರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದಾಗಿದೆ.

ವಡ್ಡರ್ಸೆ ರಘುರಾಮಶೆಟ್ಟಿ ಅವರ ಪರಿಚಯ:

ಓದುಗರ ಸಂಪಾದಕ ಎಂದೇ ಹೆಸರಾಗಿದ್ದ ದಿ.ವಡ್ಡರ್ಸೆ ರಘುರಾಮ ಶೆಟ್ಟಿಯವರು. 1960ರ ದಶಕದಿಂದ ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ವದ ಸೇವೆಗೈದಿದ್ದಾರೆ. ಮಾಧ್ಯಮವು ವಾಣಿಜ್ಯೋದ್ಯಮಿಗಳ ಹಾಗೂ ಈ ರಂಗದ ಪರಿಚಯವಿಲ್ಲದವರ ಆಡುಂಬೊಲವಾಗಬಾರದು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಸಮಾಜದ ವಂಚನೆಯ ಜಾಲಗಳನ್ನು ಬಯಲಿಗೆಳೆಯುವ ಉದ್ದೇಶದಿಂದ 1984 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ “ಮುಂಗಾರು” ದಿನಪತ್ರಿಕೆಯನ್ನು ಪ್ರಾರಂಭಿಸಿ, ನಿರ್ಭೀತ ಬರಹಗಳ ಮೂಲಕ ಪತ್ರಿಕಾ ವೃತ್ತಿಯಲ್ಲಿ ಬದಲಾವಣೆಯನ್ನು ತಂದವರು. ಕನ್ನಡ ಪತ್ರಿಕೋದ್ಯಮದಲ್ಲಿ ದೀನದಲಿತರ ಹಾಗೂ ದುರ್ಬಲ ವರ್ಗದವರ ಪರವಾಗಿ ಧ್ವನಿಯೆತ್ತುವ, ದನಿಯಿಲ್ಲದವರ ದನಿಯಾಗಿದ್ದರು. ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಉತ್ತೇಜಿಸಲು ಮತ್ತು ಸಾಮಾಜಿಕ ಬದಲಾವಣೆಯನ್ನು ತರಲು ಶ್ರಮಿಸಿದರು.

ಪ್ರಶಸ್ತಿಗೆ ಅರ್ಹತೆಗಳು:

Journalism Award ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷ ಸೇವಾನುಭವ ಹೊಂದಿರಬೇಕು. ಹಿರಿಯರಿಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ನ್ಯಾಯದ ಕಾಳಜಿ ಹೊಂದಿರುವ 10 ರಿಂದ 15 ಲೇಖನಗಳು ಪ್ರಕಟವಾಗಿರಬೇಕು ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ವಿಶೇಷ ವರದಿ, ಚರ್ಚೆ, ಸಂವಾದ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿರ್ಮಿಸಿರಬೇಕು.

ನಾಮನಿರ್ದೇಶನಗಳನ್ನು ಸಲ್ಲಿಸಲು 2024ನೇ ಅಕ್ಟೋಬರ್ 21 ಕೊನೆಯ ದಿನಾಂಕವಾಗಿರುತ್ತದೆ.
ನಾಮನಿರ್ದೇಶನಗಳನ್ನು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾಸೌಧ, ಭಗÀವಾನ್ ಮಹಾವೀರ ರಸ್ತೆ, (ಇನ್ ಫೆಂಟ್ರಿ ರಸ್ತೆ), ಬೆಂಗಳೂರು 560 001 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ tsraward@gmail.com ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ. ಇತರೆ ಜಿಲ್ಲೆಗಳ ಪತ್ರಕರ್ತರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

0

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಅದ್ದೂರಿಯಾಗಿ ಜರುಗಲಿರುವ ವಿಜಯದಶಮಿಯ “ಬನ್ನಿ ಮುಡಿಯುವ ಕಾರ್ಯಕ್ರಮ”ದ ಪೂರ್ವಭಾವಿ ಸಿದ್ಧತೆಗೆ ಸಂಬಂಧಿಸಿದಂತೆ ಇಂದು ಬನ್ನಿಮಂಟಪದ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭಾಗಿಯಾಗಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

0

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ನವರಾತ್ರಿ ಉತ್ಸವದ 9 ದಿನಗಳು ದೇವಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ನಡೆಯಲಿದ್ದು,ದೇವಿಗೆ ವಿಶೇಷವಾಗಿ ತೈಲಾಭಿಷೇಕ, ಅಲಂಕಾರ ಪೂಜೆ, ಮಹಾ ಪೂಜೆ, ಗಣಹೋಮ ನಡೆಯಲಿದೆ. ಆಲಯದಲ್ಲಿ ಪ್ರತಿನಿತ್ಯ ವಿವಿಧ ಹವನ, ಗುರುಗಳ ಆರಾಧನೆಯು ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಲಿವೆ. ಪ್ರತಿನಿತ್ಯ ಸಂಜೆ 7ರಿಂದ ದೀಪೋತ್ಸವ, ರಾತ್ರಿ 8ಕ್ಕೆ ಮಹಾ ಮಂಗಳಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

0

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು ನಗರ ಪ್ರದೇಶದ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾಲದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು

ಅವರು ಇಂದು ಸಾಗರ ಸಮೀಪದ ತಾಳಗುಪ್ಪದಲ್ಲಿ ಏರ್ಪಡಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಮಾನ ದೃಷ್ಟಿಕೋನದಿಂದ ಗಮನಿಸುವುದಾಗಿ ತಿಳಿಸಿದ ಅವರು ತಾಳಗುಪ್ಪ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು. ಜನರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಬದ್ದವಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಜನರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಸ್ತಾನಗೊಳಿಸುತ್ತಿದೆ ಎಂದರು.

Madhu Bangarappa ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ನೀಡುವ ಸಂದರ್ಭಗಳಿದ್ದಲ್ಲಿ ಜನಪ್ರತಿನಿದಿಗಳ ಸೂಚನೆಗಾಗಿ ಕಾಯದೆ ಸೌಲಭ್ಯ ಗಳನ್ನು ವಿತರಿಸಿವಂತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಇನ್ನಷ್ಟು ವೇಗ ಹೆಚ್ಚಿಸುವಂತೆ ಅವರು ಸೂಚಿಸಿದರು.

94ಸಿ ಯೋಜನೆ ಗ್ರಾಮೀಣ ಬಡ ಜನರಿಗೆ ಹಕ್ಕುಪತ್ರ ನೀಡಿ ಅವರ ನೆಮ್ಮದಿಯ ಬದುಕಿಗೆ ಆಸರೆಯಾಗುವ ಸರ್ಕಾರದ ಮಹತ್ವಕಾoಕ್ಷಿ ಯೋಜನೆ ಯಾಗಿದ್ದು, ಈ ಯೋಜನೆಯ ಅನುಸ್ತಾನಕ್ಕಾಗಿ ಅಂದು ಹಗಲಿರುಳು ಶ್ರಮಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಭಿನಂದನಾರ್ಹರು ಎಂದರು.

ಈ ಜನಸ್ಪಂದನ ಕಾರ್ಯಕ್ರಮದಿಂದಾಗಿ ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಜನಸ್ಪಂದನದಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ವಿಲೇವಾರಿ ಹಾಗೂ ಪ್ರತಿ ಹಂತದ ಬೆಳವಣಿಗೆಯನ್ನು ಮಾನ್ಯ ಮುಖ್ಯ ಮಂತ್ರಿಗಳ ಕಚೇರಿಯಿಂದ ಗಮನಿಸಲಾಗುತ್ತಿದೆ ಎಂದ ಅವರು ವಯಸ್ಕರು, ವಿಕಲಾoಗರು, ಮಹಿಳೆಯರು ನಂತರ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು.

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

0

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೇವಲ ರಂಗು ರಂಗಿನ ಮಾತಿನ ಮೂಲಕ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರಗಳನ್ನು ವಾಮ ಮಾರ್ಗಗಳಲ್ಲಿ ಕಿತ್ತು ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಾಗಿದ್ದು, ಪ್ರಜಾಪ್ರಭುತ್ವ ಇನ್ನಷ್ಟು ಬಲಪಡಿಸಬೇಕು ಎಂದಿರುವುದು ಔಚಿತ್ಯಪೂರ್ಣವಾಗಿದೆ” ಎಂದು ಹೇಳಿದರು.

ಜನರ ಆಶೀರ್ವಾದ ಇರುವರೆಗೆ ಆಡಳಿತ :

“ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ. ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ನಿಮ್ಮೆಲ್ಲರ ಆಶೀರ್ವಾದ, ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವ ತನಕ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ” ಎಂದು.
CM Siddharamaiah “ಚಾಮುಂಡೇಶ್ವರಿ ತಾಯಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ. ನನಗೆ ನ್ಯಾಯಾಲಯಗಳಲ್ಲಿ ನಂಬಿಕೆಯಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಗಾಂಧೀಜಿ ಅವರು ಹೇಳಿದಂತೆ ಆತ್ಮಸಾಕ್ಷಿ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದುದು. ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ” ಇದೆ ಎಂದು ಹೇಳಿದರು.

“ಪರಸ್ಪರರನ್ನು ಪ್ರೀತಿಸಬೇಕೆ ಹೊರತು ಯಾರನ್ನೂ ದ್ವೇಷಿಸಬಾರದು. ಎಲ್ಲ ಧರ್ಮಗಳು ಪರಸ್ಪರ ಪ್ರೀತಿಸಿ ಮಾನವರಾಗಿ ಬಾಳುವ ಸಂದೇಶವನ್ನು ನೀಡಿವೆ” ಎಂದರು.

MESCOM ಅ.6 ರಂದು ಮಂಡ್ಲಿ ಸುತ್ತಮುತ್ತ ಕೆಲವೆಡೆ ಮೆಸ್ಕಾಂ ವಿದ್ಯುತ್ ಸರಬರಾಜು ಇರುವುದಿಲ್ಲ

0

MESCOM ಶಿವಮೊಗ್ಗ ನಗರ ಉಪವಿಭಾಗ-2ರ ಮಂಡ್ಲಿ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ. 06 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಪೇಪರ್ ಪ್ಯಾಕೇಜ್, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ಸವಾಯಿಪಾಳ್ಯ, ಕುರುಬರ ಪಾಳ್ಯ, ಇಲಿಯಾಜ್‌ನಗರ 1 ರಿಂದ 4ನೇ ಕ್ರಾಸ್ ವರೆಗೆ, 100 ಅಡಿ ರಸ್ತೆ, ಗಾಜನೂರು ಗ್ರಾಮಾಂತರ ಪ್ರದೇಶ, MESCOM ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಹೊಸಳ್ಳಿ ಅಗಸವಳ್ಳಿ, ಐಹೊಳೆ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತರಾಪುರ, ಶರಾವತಿನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‌ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Madhu Bangarappa ಮಕ್ಕಳಿಗೆ ಯೋಗ್ಯ ಸಂಸ್ಕಾರ.ರೈತರಿಗೆ ಹಕ್ಕುಪತ್ರ.ನೀರಾವರಿ ಸೌಲಭ್ಯ.ಉತ್ತಮ ಬೆಳೆಯಾದರೆ ನಿತ್ಯವೂ ನವರಾತ್ರಿ- ಮಧು ಬಂಗಾರಪ್ಪ.

0

Madhu Bangarappa ಕಲಿಯುವ ಮಕ್ಕಳಿಗೆ ಉತ್ತಮ ವಿದ್ಯೆ, ಯೋಗ್ಯ ಸಂಸ್ಕಾರ, ರೈತರು ಉಳುವ ಭೂಮಿಗೆ ಹಕ್ಕುಪತ್ರ, ನೀರಾವರಿ ಮತ್ತು ಉತ್ತಮ ಬೆಳೆ ಬಂದರೆ ನಿತ್ಯವೂ ನವರಾತ್ರಿಯ ಸಂಭ್ರಮ ಮನೆಮಾಡುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಾಗರ ತಾಲೂಕು ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇಗುಲದಲ್ಲಿ ಗುರುವಾರ ದಸರಾ ವೈಭವ ಕಾರ್ಯಕ್ರಮಕ್ಕೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ನವರಾತ್ರಿಯ ಸಂಭ್ರಮ ಇಮ್ಮಡಿಯಾಗಿದೆ. ರಾಜ್ಯ ಸರ್ಕಾರ ಸಂವಿಧಾನ ಓದು ಕಾರ್ಯಕ್ರಮವನ್ನು ಜಾರಿಗೆ ತಂದಿರುವುದರಿಂದ ಮಕ್ಕಳಲ್ಲಿ ಸಂವಿಧಾನದ ಅರಿವು, ಜಾತ್ಯತೀತ ಮನೋಭಾವ ಹೆಚ್ಚಾಗುತ್ತದೆ. ಮಕ್ಕಳನ್ನು ಜಾತಿ-ಧರ್ಮದ ತಾರತಮ್ಯದಿಂದ ದೂರ ಮಾಡುತ್ತದೆ ಎಂದರು.

ಮಕ್ಕಳಲ್ಲಿ ಜಾತಿ ಪ್ರೇಮ ಮೂಡಬಾರದು. ಇದು ಎಂದಿಗೂ ದೇಶ ಪ್ರೇಮವಾಗುವುದಿಲ್ಲ. ಜಾತಿ- ಧರ್ಮದ ಸಂಕೋಲೆ ತೊರೆದು ಒಳ್ಳೆಯ ಪ್ರಜೆಯಾಗಬೇಕು ಎಂದರೆ, ಡಾ.ಬಿ.ಆರ್. ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನದಿಂದ ಮಾತ್ರ ಸಾಧ್ಯ. ಒಂದೇ ಜಾತಿ, ಒಂದೇ ಮತ ಎಂದು ನಾರಾಯಣ ಗುರುಗಳ ಆಶಯವನ್ನು ವೇದಿಕೆ ಮೇಲೆ ಭಾಷಣ ಮಾಡಲಾಗುತ್ತದೆ. ಆದರೆ, ರಾಜಕಾರಣಕ್ಕೆ ಹೋಗಿ ಜಾತಿ, ಧರ್ಮದ ಹೆಸರಿನಲ್ಲಿ ಕಚ್ಚಾಡಿದರೆ, ದೇಶದ ಭವಿಷ್ಯ ಕಟ್ಟಲು ಸಾಧ್ಯವಿಲ್ಲ ಎಂದರು.
ನಾಡಿನ ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಮಷ್ಟಿಯ ದೃಷ್ಟಿಕೋನವನ್ನು ಹೊಂದಿದೆ. ಧರ್ಮದರ್ಶಿ ರಾಮಪ್ಪ ಅವರು ಅನೇಕ ಸಾಮಾಜಿಕ ಕಾರ್ಯಗಳಿಗೆ ಜೀವ ತುಂಬಿದ್ದಾರೆ. ಅದೇ ರೀತಿ, ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದ, ಮುಂದಿನ ದಿನದಲ್ಲೂ ಈ ಸಹಕಾರ ಶಿಕ್ಷಣ ಕ್ಷೇತ್ರಕ್ಕೆ ಇರಲಿ ಎಂದು ಕೋರಿದರು.

ಶಿಕ್ಷಣ ಇಲಾಖೆಯಲ್ಲಿ ಅನೇಕ ಬದಲಾವಣೆ ತರಲಾಗುತ್ತಿದೆ. ಶರಾವತಿ ಸಂತ್ರಸ್ತರ ಕಣ್ಣೀರು ಒರೆಸುವ ಹೊಣೆ ಸರ್ಕಾರ ಮೇಲಿದೆ. ಇದಕ್ಕೆ ಕ್ರಮವಹಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರ ಹಸಿವು ನೀಗಿಸಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಇಲಾಖೆ ಕಟಿಬದ್ಧವಾಗಿದೆ ಎಂದರು.

Madhu Bangarappa ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಮಾತನಾಡಿ, ಚೌಡೇಶ್ವರಿ ದೇವಿಯ ಅನುಗ್ರಹದಿಂದ ಉತ್ತಮ ಮಳೆ- ಬೆಳೆ ಆಗಿದೆ. ಇಲ್ಲಿ ದಸರಾ ಹಬ್ಬವನ್ನು 34 ವರ್ಷದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಶ್ರೀ ಕ್ಷೇತ್ರದಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿ ದಶಕಗಳಿಂದ ಬಗೆಹರಿಯದ ಹತ್ತಾರು ಸಮಸ್ಯೆಗಳು ಜೀವಂತವಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಮುಕ್ತಿ ಕೊಡಿಸಬೇಕು. ಮುಳುಗಡೆ ರೈತರು ಹಾಗೂ ಬಗರ್‌ ಹುಕುಂ ಸಾಗುವಳಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. 75 ವರ್ಷಗಳ ದಾಖಲೆ ಕೇಳಿದರೆ ಮುಳುಗಡೆ ಸಂತ್ರಸ್ತರಿಗೆ ಕೊಡಲಾಗುವುದಿಲ್ಲ ಈ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಹೇಳಿದರು.

ಸಿಗಂದೂರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಶಾಲೆಗಳ ಸೌಂದರ್ಯೀಕರಣಕ್ಕೆ ಸಿಗಂದೂರು ಚಿತ್ತ ಸರ್ಕಾರಿ ಶಾಲೆಗಳತ್ತ ಯೋಜನೆ ಮೂಲಕ ತಾಲ್ಲೂಕಿನ 49ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕರೂರು ಹೂಬಳಿ ತುಮರಿ ಗ್ರಾಂಥಾಲಯಕ್ಕೆ 1 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸ್ಪರ್ಧಾತ್ಮಕ ಪರೀಕ್ಷಾ ಸಲಕರಣೆ ವಿತರಣೆ ಸೇರಿ ಅನೇಕ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಪ್ರಮುಖರಾದ ಆರ್.ಪ್ರಸನ್ನ ಕುಮಾರ, ಕಲಗೋಡು ರತ್ನಾಕರ, ಶ್ರೀನಿವಾಸ ಕರಿಯಣ್ಣ, ಶಾಂತವೀರ ನಾಯ್ಕ, ಹೊಳಿಯಪ್ಪ, ಸರಸ್ವತಿ ಗಣಪತಿ, ಮಂಜಪ್ಪ ಮರಸ, ಯೋಗರಾಜ್‌ ಯಮಗಳಲತೆ ಮತ್ತಿತರರಿದ್ದರು.

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

0

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024-25 ನೇ ಸಾಲಿಗೆ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪ್ರವರ್ಗ-1, ಎಸ್‌ಸಿ ಮತ್ತು ಎಸ್‌ಟಿ ಆದಾಯ ಮಿತಿ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗಗಳ ಆದಾಯ ಮಿತಿ ರೂ.1.00 ಲಕ್ಷ ಗಳು ಇರುತ್ತದೆ.

Backward Classes Welfare Department ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‌ಸೈಟ್ www.bcwd.karnataka.gov.in ನ್ನು ವೀಕ್ಷಿಸುವುದು. ಅರ್ಜಿಯನ್ನು ಅ.30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ತೊಂದರೆಗಳಾದಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ bcwd.hostels@karnataka.gov.in ಗೆ ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು ಹಾಗೂ ಸಹಾಯವಾಣಿ ಸಂಖ್ಯೆ 805077004/805077005/08182-222129, ಶಿವಮೊಗ್ಗ -08182-240078, ಭದ್ರಾವತಿ-08282-264644, ತೀರ್ಥಹಳ್ಳಿ- 08181-296096, ಸಾಗರ-08183-298014, ಸೊರಬ- 08184- 295893, ಹೊಸನಗರ- 08185- 295050 ಹಾಗೂ ಶಿಕಾರಿಪುರ- 08187-295207 ಗಳನ್ನು ಸಂಪರ್ಕಿಸಬಹುದಾಗಿದೆ‌