Friday, March 27, 2026
Friday, March 27, 2026
Home Blog Page 533

Klive Special Article “ಎರಡು ಚಹಾ;ಅರ್ಧ ಬ್ಯಾಗ್ ಸಿಮೆಂಟ್ ! “

0

ಲೇ: ಡಾ. ಹೆಚ್ ಎಸ್ ಸುರೇಶ್ .ಬೆಂಗಳೂರು. (9448027400)

Klive Special Article ” 2003-೦4 ರ ರಾಷ್ಟ್ರೀಯ ಯುವ ಉತ್ಸವ ಝಾರ್ಖಂಡ್ ರಾಜ್ಯದ ಜಮಷೆಡಪುರ ದಲ್ಲಿನ ಟಾಟಾ ಸ್ಟೀಲ್ ಸಿಟಿಯಲ್ಲಿ 2004 ಜನವರಿ 12 ರಿಂದ 17 ರವರೆಗೆ ನಡೆಯಿತು . ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಮಂತ್ರಾಲಯ ಆಯೋಜಿಸಿದ್ದ ಈ ಯುವಜನೋತ್ಸವದಲ್ಲಿ ಸುಮಾರು ಐದು ಸಾವಿರಕೂ ಮಿಕ್ಕಿದ ದೇಶದಾದ್ಯಂತ ಆಗಮಿಸಿದ ಯುವ ಪ್ರತಿನಿಧಿಗಳ ಊಟ ಉಪಹಾರ ವಸತಿ ಸಾಗಾಣಿಕೆಯ ಎಲ್ಲ ವೆಚ್ಚವನ್ನೂ ಟಾಟಾ ಸಂಸ್ಥೆಯೇ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿತು .ನನ್ನಂತೆಯೇ ಭಾಗವಹಿಸಿದ ಐದುನೂರಕ್ಕೂ ಹೆಚ್ಚು ಅಧಿಕಾರಿಗಳಿಗೂ ಪ್ರತ್ಯೇಕ ಕಾರುಗಳ ವ್ಯವಸ್ಥೆ ಮಾಡಲಾಗಿತ್ತು .ಆದರೆ ಎಲ್ಲಿಯೂ ಅಪ್ಪಿ ತಪ್ಪಿಯೂ ಟಾಟಾ ದ ಬ್ಯಾನರ್ ಗಳಾಗಲೀ, ಹೆಸರಾಗಲೀ , ಪ್ರದರ್ಶಿತವಾಗಲಿಲ್ಲ .
ನಾನು ಹಾಗೂ ನನ್ನ ಸಹೋದ್ಯೋಗಿಗಾಗಿ ಉತ್ಸವದ ಸ್ಥಳದಿಂದ ಸುಮಾರು ಹತ್ತು ಕಿ .ಮೀ .ದೂರದಲ್ಲಿನ ಟ್ರೈನಿ ಇಂಜಿನಿಯರ್ರ್ಸ್ ಹಾಸ್ಟೆಲ್ ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು .ಊಟ ಉಪಹಾರಗಳಿಗೆ ಉತ್ಸವ ಸ್ಥಳಕ್ಕೆ ಹೋಗಬೇಕಿತ್ತು . ವಸತಿ ನಿಲಯದ 120 ಟಾಟಾ ಟ್ರೈನಿ ಗಳಿಗೆ ಬೆಳಿಗ್ಗೆಯ ಕಾಫಿ –ಚಹಾ ಕೊಡಲಾಗುತ್ತಿತ್ತು . ಬೆಳಗಿನ ಕಾಫಿ ಅಭ್ಯಾಸಕ್ಕೆ ಅಂಟಿಕೊಂಡಿದ್ದ ನಮಗೆ ಅದಿಲ್ಲದೇ ಚಡಪಡಿಸುವಂತೆ ಆಯಿತು .
Klive Special Article ” ಅಲ್ಲಿ ಪ್ರತಿ ರೂಂ ಗೂ ಹೋಗಿ ಚಹಾ ವಿತರಿಸುತ್ತಿದ್ದ ವ್ಯಕ್ತಿಯನ್ನು ತಡೆದು 20 ರೂ .ಮುಂದುಮಾಡಿ ‘ ಭಯ್ಯಾ ಹಮೆ ದೋ ಚಾಯ್ ದೇದೋ ‘ ಅಂದೆ. ಆತ ವಿನಯದಿಂದಲೇ ‘ಮಾಫ್ ಕೀಜಿಯೇ ಸಾಬ್ ; ಮುಝೇ ಸಿರಫ್ ಏಕ ಸೌ ಬೀಸ್ ಚಾಯ್ ದೆನೆಕೆಲಿಯೇ ನಿರ್ದೇಶ್ ಹೈ. ಮೇ ಕೈಸೆ ದೇ ದೂ’ ಅಂದು ಹೇಳಿದ . ನಾನು ಮುಂದುವರೆದು ಹೇಳಿದೆ ‘ ಅರೇ ಭಾಯ್ ದೋ ಚಾಯ್ ಮೇ ಕ್ಯಾ ಫರಕ್ ಪಡೆಗಾ ? .ಮತ್ತಷ್ಟು ವಿನಯದಿಂದ ಹೇಳಿದ ‘ ಫರಕ್ ಪಡೆಗಾ ಸರ್ ‘
ಅವನ ಮಾತು ಕೇಳಿ ಜನವರಿಯ ಆ ಚಳಿಯಲ್ಲೂ ನಾವು ಬೆವೆತೆವು ! ಘೋರವಾದ ಅಪಮಾನ ಹಾಗೂ ಲಜ್ಜೆ ಅನಿಸಿತು .
ಇಂತಹಾ ಅತೀ ಕೆಳದರ್ಜೆಯ ಸಾಮಾನ್ಯ ನೌಕರರ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದಲೇ ಟಾಟಾ ಬಲಿಷ್ಠವಾದ ಉದ್ದಿಮೆಗಳನ್ನು
ಕಟ್ಟಲು ಮತ್ತು ಮೌಲ್ಯಾಧಾರಿತ ಔದ್ಯಮಿಕ- ಔದ್ಯೋಗಿಕ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಅಂದುಕೊಳ್ಳುತ್ತೇನೆ
ಇನ್ನೊಂದು ಕತೆ ಕೇಳಿ ,ಇದು 1997 ರಲ್ಲಿ ನಡೆದ ಘಟನೆ !
ಗುಜರಾತಿನಲ್ಲಿದ್ದ ನಾನು ರಜೆಯ ಮೇಲೆ ಶಿವಮೊಗ್ಗೆಯ ಬಡಾವಣೆಯೊಂದರಲ್ಲಿ ಸೂಡಾ’ ಮಂಜೂರು ಮಾಡಿದ್ದ ನಿವೇಶನದಲ್ಲಿ ಮನೆ ಕಟ್ಟಿಸುತ್ತಿದ್ದೆ.
ಅರ್ಧ ಮೂಟೆ ಸಿಮೆಂಟ್ ಇಲ್ಲದೆ ಕೆಲಸ ಆ ಸಂಜೆ ಅರ್ಧಕ್ಕೆ ನಿಂತಿತ್ತು . ಇನ್ನು ಮಾರನೆ ದಿನ ಅಂಗಡಿಯ ಬಾಗಿಲು ತೆಗೆದಮೇಲಷ್ಟೇ ಗಾರೆಯವನಿಗೆ ಕೆಲಸ . ಬೆಳಿಗ್ಗೆ ಎಂಟಕ್ಕೇ ಸೈಟ್ ತಲುಪಿದಾಗ ಸಿಮೆಂಟ್ ಕೆಲಸವೇ ಮುಗಿದಿತ್ತು .ವಿಸ್ಮಯ ಆಯಿತು . ಮೆಸ್ತ್ರಿಯನ್ನು ವಿಚಾರಿಸಿದೆ .
ಮೇಸ್ತ್ರಿ ಹೇಳಿದ . ‘ ಇಲ್ಲೇ ಒಂದು ಗೌರ್ಮೆಂಟ್ ಬಿಲ್ಡಿಂಗ್ ಕೆಲ್ಸಾ ನಡೀತಿದೆ . ರಾತ್ರೆ ವಾಚ್ ಮ್ಯಾನ್ ಗೆ ಐವತ್ತು ರುಪಾಯಿ ಕೊಟ್ಟಿದ್ದೆ. ಪಾಪ ತಕ್ಷಣ ತಂದುಕೊಟ್ಟ . ಗಾರೆಯೋರನ್ನ ನಾಳೆ ಬೇರೆ ಕಡೆ ಹಚ್ಚಿದೀನಿ . ಅದೂ ಪ್ಯಾಚ್ ವರ್ಕ್ .ಅರ್ಧ ಗಂಟೇಲಿ ಮಾಡಿ ಮುಗಿಸಿದ ‘ ಅಂದ
ತಪ್ಪಲ್ವಾ ? ನೂರಾರು ಮೂಟೆ ಸಿಮೆಂಟ್ ಕೊಂಡಿರುವಾಗ ಈ ಅರ್ಧ ಮೂಟೆ ಸಿಮೆಂಟ್ಗೆ ಜಾತಿ ಕೆಟ್ಟ ಹಾಗೆ ಆಗ್ಲಿಲ್ವಾ ? ಅಂದೆ.
“ಸಾರ್ , ಅರ್ಧ ಮೂಟೆ ಸಿಮೆಂಟ್ ಸರ್ಕಾರಕ್ಕೆ ಯಾವ್ ಲೆಕ್ಕ ? ಕ್ಯಾ ಫರಾಕ್ ಪಡೆಗಾ ?” ಅಂದ .
ಅಂದಿನ ನನ್ನ ಮೌನ ಇಂದಿಗೂ ನನ್ನನ್ನು ಕಾಡುತ್ತಿದೆ ! ಆ ಮನೆಯನ್ನು ನೋಡಿದಾಗಲೆಲ್ಲಾ ಈ ಘಟನೆ ನೆನಪಾಗುತ್ತದೆ .

Mylareshwara Temple ಶ್ರೀಮೈಲಾರೇಶ್ವರ ದಸರಾ ಶ್ರದ್ಧಾಪೂರ್ವಕ ಏಕಾದಶ ರುದ್ರಾಭಿಷೇಕ

0

Mylareshwara Temple ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಬುಧವಾರ ಮೂಲ ನಕ್ಷತ್ರ ಶ್ರೀ ಮೈಲಾರೇಶ್ವರ ದೇವರನ್ನು ಪಟ್ಟಕ್ಕೆ ಕುರಿಸಲಾಯಿತು ಸರಸ್ವತಿ ಪೂಜೆ ನಡೆಯಿತು. ದುರ್ಗಾಷ್ಟಮಿ ಮಹಾನವಮಿ ಆಯುಧ ಪೂಜೆ ನಡೆಯಿತು ಶನಿವಾರ ವಿಜಯದಶಮಿ ಮೈಲಾರೇಶ್ವರ ಸನ್ನಿಧಿಯಲ್ಲಿ ಸಂಜೆ 5 ಗಂಟೆಗೆ ಬನ್ನಿ ಮುಡಿಯಲಾಯಿತು. ಭಾನುವಾರ ಏಕದಶಿ ಬೆಳಿಗ್ಗೆ 5:00 ಯಿಂದ ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ಹಾಗೂ ಶ್ರೀ ಮೈಲಾರೇಶ್ವರ ದೇವರ ರಾಜಭೀದಿ ಉತ್ಸವ ಬೆಳಿಗ್ಗೆ 7:00 ಯಿಂದ ದೇವಸ್ಥಾನದಿಂದ ಹೊರಟು ಬಿ ಎಚ್ ರಸ್ತೆ ಕೋಟೆ ಪೊಲೀಸ್ ಠಾಣೆ ರಸ್ತೆ ಕೋಟೆ ರಸ್ತೆ Mylareshwara Temple ಮೂಲಕ ಕೋರ್ಪಲ್ಲಯ್ಯನ ಛತ್ರದ ತುಂಗಾ ನದಿಯಲ್ಲಿ ಗಂಗೆಪೂಜೆ ನಂತರ ಎಸ್ ಪಿ ಎಂ ರಸ್ತೆ ಗಾಂಧಿ ಬಜಾರ್ ಮೂಲಕ ಶಿವಪ್ಪ ನಾಯಕ ಸರ್ಕಲ್ ನಂತರ ಬಿ ಎಚ್ ರಸ್ತೆ ಮುಖಾಂತರ ದೇವಸ್ಥಾನಕ್ಕೆ ಬರುವುದು ನಂತರ ಶ್ರೀ ಮೈಲಾರೇಶ್ವರ ದೇವರಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನೆರವೇರಿಸಲಾಗಿದೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು,

Sri Basaveshwara Veershiva Samaj Seva Sangh ಹಬ್ಬಗಳ ಆಚರಣೆ ನಮ್ಮ ಸಂಸ್ಕೃತಿಯ ಪ್ರತೀಕ- ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀ

0

Sri Basaveshwara Veershiva Samaj Seva Sangh ಹಬ್ಬದ ಆಚರಣೆ, ಸಂಪ್ರದಾಯಗಳ ಪಾಲನೆಯು ಶಾಂತಿ, ನೆಮ್ಮದಿ ಒದಗಿಸುತ್ತದೆ. ಹಬ್ಬಗಳ ಆಚರಣೆಯು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ಚೌಕಿಮಠದ ಆವರಣದಲ್ಲಿ ದಸರಾ ಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನವರಾತ್ರಿ, ಆಯುಧಪೂಜೆ ಆಚರಣೆಯು ನಮ್ಮಲ್ಲಿರುವ ಶ್ರದ್ಧೆ ಭಕ್ತಿಯನ್ನು ಸೂಚಿಸುತ್ತವೆ. ಗುರು ಹಿರಿಯರಲ್ಲಿ ಭಕ್ತಿ ಹೊಂದಿರಬೇಕು. ಮನುಷ್ಯನಿಗೆ ಹಣವೇ ಮುಖ್ಯವಲ್ಲ. ಸೇವೆ, ಸತ್ಕಾರ್ಯ ಜತೆಗೆ ಇಂತಹ ಪೂಜೆ ಪುನಸ್ಕಾರ ಸೇವೆಗಳು ಮನುಷ್ಯನ ಜೀವನವನ್ನು ಹಸನುಗೊಳಿಸುತ್ತವೆ ಎಂದು ತಿಳಿಸಿದರು.

Sri Basaveshwara Veershiva Samaj Seva Sangh ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಹಲವಾರು ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಮಕ್ಕಳಿಗೆ ಧಾರ್ಮಿಕ ಆಚರಣೆಗಳ ಮಹತ್ವ ತಿಳಿಸಬೇಕು. ಭಗವಂತನ ಅನುಗ್ರಹದಿಂದ ಎಲ್ಲರೂ ಸುಖ ಸಮೃದ್ಧಿಯಿಂದ ಬದುಕು ನಡೆಸುವಂತಾಗಲಿ ಎಂದು ಶುಭಹಾರೈಸಿದರು.

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಪ್ರಾಸ್ತವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಾಗರತ್ನಮ್ಮ ಚಂದ್ರಶೇಖರಯ್ಯ ಅವರಿಂದ ಭಕ್ತಿ ಸಂಗೀತ ಸೇವೆ ನೆರವೇರಿತು. ಕಾರ್ಯದರ್ಶಿ ಎಸ್.ಪಿ.ದಿನೇಶ್, ಕೋಶಾಧ್ಯಕ್ಷ ಕೆ.ಎಸ್.ತಾರನಾಥ್, ನಿರ್ದೇಶಕರಾದ ಅನಿತಾ ರವಿಶಂಕರ್, ಡಾ. ಸಿ.ರೇಣುಕಾರಾಧ್ಯ, ಎಸ್.ಎನ್.ಮಹಾಲಿಂಗಯ್ಯಶಾಸ್ತ್ರಿ, ಮೋಹನ್‌ಕುಮಾರ್, ಟಿ.ಬಿ.ಜಗದೀಶ್, ಎಂ.ಆರ್.ಪ್ರಕಾಶ್, ಸಿ.ಮಹೇಶಮೂರ್ತಿ, ಜೆ.ಆರ್.ರತ್ನಾ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಉಪಸ್ಥಿತರಿದ್ದರು.

Rotary Club Shivamogga ಸಸಿ ನೆಡುವ ಜೊತೆ ಪೋಷಣೆಯ ಸಂಕಲ್ಪ ಮಾಡಬೇಕು- ಸಿ.ಎ.ದೇವ್ ಆನಂದ್

0

Rotary Club Shivamogga ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸಸಿಗಳ ನೆಡುವುದ ಜತೆಯಲ್ಲಿ ಪೋಷಣೆ ಮಾಡುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಕಾಲೇಜಿನ ಉದ್ಯಾನದಲ್ಲಿರುವ ಗಿಡ ಮರಗಳ ಪೋಷಣೆಗೆ 500 ಕೆಜಿ ಸಾವಯವ ಗೊಬ್ಬರವನ್ನು ರೋಟರಿ ಮಲೆನಾಡು ಕ್ಲಬ್ ಅಧ್ಯಕ್ಷ ಮುಸ್ತಾಕ್ ಅಲಿಶಾ ವಿತರಿಸಿದರು. ಕಾಲೇಜಿನ ಸ್ನೇಹಿತರ ಬಳಗದ ಸಹಕಾರದಿಂದ ಕಾಲೇಜಿಗೆ ಆಲ್ ಇನ್ ಒನ್ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು.
Rotary Club Shivamogga ಕ್ಲಬ್ ಅಧ್ಯಕ್ಷ ಮುಸ್ತಾಕ್ ಮಾತನಾಡಿ, ಕ್ಲಬ್‌ನಿಂದ ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುತ್ತಿದೆ. ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಎನ್. ರಾಜೇಶ್ವರಿ ಮಾತನಾಡಿ, ರೋಟರಿಯಂತಹ ಸಂಸ್ಥೆಗಳು ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಬಹಳ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಮನೋವೈದ್ಯ ಡಾ. ಆಫ್ತಾಬ್ ಮಾಲ್ದರ್ ತರಗತಿ ನಿರ್ವಹಣೆ ಹಾಗೂ ಕೆಲಸದೊತ್ತಡದ ನಿರ್ವಹಣೆ ಕುರಿತು ಸಿಬ್ಬಂದಿಗೆ ಉಪಯುಕ್ತ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಜಯನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದೇಗೌಡ ಮಾತನಾಡಿ, ನಮ್ಮ ಪ್ರಾಣ ರಕ್ಷಣೆಗಾಗಿ ರಸ್ತೆ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಬಹುತೇಕ ಅಪಘಾತಗಳು ಚಾಲಕರ ನಿರ್ಲಕ್ಷತೆಯಿಂದ ನಡೆಯುತ್ತಿವೆ ಎಂದರು. ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಶ್ರೀನಿವಾಸ್ ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ಟ್ರಾಫಿಕ್ ನಿಯಮಗಳು, ಅದರ ಉಲ್ಲಂಘನೆಯ ಪರಿಣಾಮಗಳು, ಉಲ್ಲಂಘನೆಗೆ ಇರುವ ದಂಡ ಶುಲ್ಕಗಳ ಮಾಹಿತಿಯನ್ನು ತಿಳಿಸಿದರು. ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಸ್ಮಾರ್ಟ್ ಸಿಟಿ ಟ್ರಾಫಿಕ್ ನಿರ್ವಹಣೆ ವ್ಯವಸ್ಥೆಯಿಂದ ಕಾರ್ಯರೂಪಕ್ಕೆ ತಂದಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕ್ಲಬ್ ಪೋಲಿಯೋ ಪ್ಲಸ್ ವಿಭಾಗ ಚೇರ್ಮನ್ ಡಾ. ಶ್ರೀನಿವಾಸ್ ಮಾತನಾಡಿ, ತಂಬಾಕು ಉತ್ಪನ್ನಗಳ ವ್ಯಸನ ಹಾಗೂ ಅದರ ದುಷ್ಟರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರೋಟರಿ ವಲಯ 10ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ, ಸಿ.ಎ.ರೇಖಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಗವರ್ನರ್ ಅವರ ಉಪಸ್ಥಿತಿಯಲ್ಲಿ ರೋಟರಿ ಮಿಡ್ ಟೌನ್ ಸಭಾಂಗಣದಲ್ಲಿ ಸಾರ್ವಜನಿಕ ಸಮಾರಂಭ ನಡೆಯಿತು.

Shahi Exports Pvt Ltd ಶಾಹಿ ಗಾರ್ಮೆಂಟ್ಸ್ ನಿಂದ ಸರ್ಕಾರಿ ಆಸ್ಪತ್ರೆಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಕೊಡುಗೆ

0

Shahi Exports Pvt Ltd ಶಾಹಿ ಎಕ್ಸ್‌ಪೋರ್ಟ್ಸ್ ಪ್ರವೈಟ್ ಲಿ. ಅವರ ಸಾಮಾಜಿಕ ಹೊಣೆಗಾರಿಕಾ ಭದ್ರತಾ ನೀತಿ ಅಡಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಭದ್ರಾವತಿಗೆ ಸುಮಾರು 22 ಲಕ್ಷ ರೂ. ಮೌಲ್ಯದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್ ನೀಡಿದ್ದು ಬಡ-ಜನರ ಅನುಕೂಲಕ್ಕಾಗಿ ನೀಡಿದ್ದು, ಇಂದು ಉದ್ಘಾಟನೆ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆ ಮಾಡಲಾಯಿತು.
ಇದು ಬಡ ಜನರ ಅನುಕೂಲಕ್ಕಾಗಿ ನೀಡಿದ್ದು 5ವರ್ಷಗಳವರೆಗೆ ಎ ಎಂ ಸಿ ನೀಡಿದ್ದು, ಇದು ಸುಮಾರು 10ಕೋಟಿ ರೂ ಗಳ ಆರ್ಥಿಕ ಹೊಣೆಯನ್ನು ನಿಭಾಯಿಸುವುದಾಗಿದೆ. (ದಿನಕ್ಕೆ 40 ಜನರಂತೆ 26 ದಿನಗಳು 1500 ರೂ 12 ತಿಂಗಳು5 ವರ್ಷಗಳು)
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಕೆ.ಸಂಗಮೇಶ್ವರ್ ಬಲ್ಕೀಶ್ ಭಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಭದ್ರಾವತಿ ತಹಶಿಲ್ದಾರವರು, ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.
ಶಾಹಿಯ ಹಿರಿಯ ಅಧಿಕಾರಿಗಳಾದ ಲಕ್ಷ್ಮಣ ಧರ್ಮಟ್ಟಿ, ಎಜಿಎಂ, ಅಡ್ಮಿನ್; ನಾಗಯ್ಯ ಸಿ,ಎಸ್, ಆರ್ ವಿಭಾಗ ರವಾರು ಹಾಜರಿದ್ದರು.
ಶಾಹಿ ಎಕ್ಸ್‌ಪೋರ್ಟ್ಸ್ ಮಾಹಿತಿ:
Shahi Exports Pvt Ltd ಶಾಹಿ ಎಕ್ಸಪೊರ್ಟ್ ಪ್ರವೈಟ್ ಲಿಮಿಟೆಡ್ ಅನ್ನು ಸರಳಾ ಅಹುಜಾ ರವರು 1974 ರಲ್ಲಿ ಸ್ಥಾಪಿಸಿದರು, ಇದು ಕುಟುಂಬ ಮಾಲೀಕತ್ವದ ಕಂಪನಿಯಾಗಿದ್ದು, ಭಾರತದ ಅತಿದೊಡ್ಡ ಉಡುಪು ತಯಾರಕ ಮತ್ತು ರಫ್ತುದಾರನಾಗಿ ಬೆಳೆದಿದೆ. ಶಾಹಿಯು ಮೂರು ಫ್ಯಾಬ್ರಿಕ್ ಪ್ರೊಸೆಸಿಂಗ್ ಮಿಲ್ ಗಳನ್ನು ಹೊಂದಿದೆ ಮತ್ತು 50ಕ್ಕೂ ಹೆಚ್ಚು ಅತ್ಯಾಧುನಿಕ ಉಡುಪು ತಯಾರಿಕಾ ಘಟಕಗಳನ್ನು ಭಾರತದ 8 ರಾಜ್ಯಗಳಲ್ಲಿ ಹೊಂದಿದೆ, ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ವೈವಿಧ್ಯಮಯ ಉತ್ಪನ್ನ ಶ್ರೇಣಿ ಮತ್ತು ಉತ್ತಮ ಕಾರ್ಯನಿರ್ವಹಣೆ, ಕಠಿಣ ಪರಿಶ್ರಮ ಮತ್ತು ನಿರಂತರತೆಯು ಶಾಹಿಯನ್ನು ವಿಶ್ವದ ಅತ್ಯಂತ ಆದ್ಯತೆಯ ಉಡುಪು ತಯಾರಕರಲ್ಲಿ ಒಬ್ಬರನ್ನಾಗಿ ಮಾಡಿದೆ.ಎಂದರು

Style Dance Crew Shivamogga ಕಲಾವಿದ ಶಶಿಕುಮಾರ್ ಗೆ ” ಮಲೆನಾಡು ಬಹುಮುಖಿ ಪ್ರತಿಭೆ ಪ್ರಶಸ್ತಿ”

0

Style Dance Crew Shivamogga ನೃತ್ಯಗಾರ, ನೃತ್ಯ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ಗಾಯಕ ಸೇರಿದಂತೆ ಹಲವು ಕಲೆಗಳನ್ನು ಮೈಗೂಡಿಸಿಕೊಂಡಿರುವ ಸ್ಟೈಲ್‌ಡ್ಯಾನ್ಸ್ ಕ್ರಿವ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಶಶಿಕುಮಾರ್ ಎನ್ ಅವರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮದಲ್ಲಿ 2024ನೇ ಸಾಲಿನ “ಮಲೆನಾಡು ಬಹುಮಖಿ ಪ್ರತಿಭೆ ಪ್ರಶಸ್ತಿ” ನೀಡಿ ಗೌರವಿಸಿದರು.

Style Dance Crew Shivamogga ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ, ಪಾಲಿಕೆಯ ಆಯುಕ್ತೆ ಕವಿತಾ ಯೋಗಪ್ಪನವರ್, ಮಾಜಿ ಪಾಲಿಕೆ ಸದಸ್ಯರಾದ ವಿಶ್ವಾಸ್, ಹೆಚ್.ಸಿ.ಯೋಗೀಶ್ , ರಘು ಗುಂಡ್ಲು ಸೇರಿದಂತೆ ಹಲವರಿದ್ದರು.

Shivamogga Dasara ಶಿವಮೊಗ್ಗ ದಸರಾ ವಿಶೇಷ :ಕರಾಟೆ ಪಂದ್ಯಾವಳಿ ಯಶಸ್ವಿ

0

Shivamogga Dasara ನಾಡಹಬ್ಬ ದಸರಾ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಪ್ರತಿ ವರ್ಷ ಆಯೋಜಿಸುವಂತೆ ಈ ವರ್ಷವೂ 4ನೇ ಬಾರಿ ಶಿವಮೊಗ್ಗದ ವಿನೋಬನಗರದ ಸಮುದಾಯ ಭವನದಲ್ಲಿ ದಸರಾ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು.

ಪಂದ್ಯಾವಳಿಗೆ ಜಿಲ್ಲೆಯ ಸುಮಾರು 100 ಕ್ರೀಡಾಪಟುಗಳು ಆಗಮಿಸಿದ್ದು
ಪಂದ್ಯಾವಳಿಯಲ್ಲಿ ಕಟಾ ಮತ್ತು ಕುಮತಿ ವಿಭಾಗಗಳಲ್ಲಿ ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .

Shivamogga Dasara ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಲಂಕಾ ಶೋಟೋಖಾನ್ ವರ್ಲ್ಡ್ ಕರಾಟೆ
ಮುಖ್ಯ ತರಬೇತಿದಾರ ಮೇಡೋನ್ಜ್ ಮತ್ತು ವಿನೋಬನಗರದ ಮುಖಂಡರಾದ ಶರತ್ ಅಭಿನಂದನ್ ಸಂತೋಷ್ ಗಿರೀಶ್ ಮತ್ತು
ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಅಧ್ಯಕ್ಷ ಮುಕೀಬ್ ಅಹಮದ್ ಚಿಕ್ಕಮಗಳೂರು ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸೈಯಾದ್ ರಿಯಾಜ್ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಖಜಾಂಚಿ ಮೀನಾಕ್ಷಿ ಸಹ ಕಾರ್ಯದರ್ಶಿ ಇರ್ಫಾನ್ ಮತ್ತು ನಿರ್ದೇಶಕರಾದ ಜಸ್ಟಿನ್ ಸಾಧಿಕ್
ಸೇರಿದಂತೆ ಇತರರು ಉಪಸ್ಥಿತರಿದ್ದರು.

Sandipani English Medium School ಶಿಕ್ಷಕ, ರಂಗಕರ್ಮಿ ಚೇತನ್ ಸಿ. ರಾಯನಹಳ್ಳಿಗೆ “ಸದ್ಭಾವನಾ ಸೇವಾರತ್ನ” ಪ್ರಶಸ್ತಿ

0

Sandipani English Medium School ಶಿವಮೊಗ್ಗದ ನಮ್ಮ ಹಳ್ಳಿ ಥಿಯೇಟರ್ ನ (ರಿ) ಅಧ್ಯಕ್ಷರು ಹಾಗೂ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಗ್ರಂಥಪಾಲಕರು ಹಾಗೂ ಶಿಕ್ಷಕರಾದ ಚೇತನ್.ಸಿ.ರಾಯನಹಳ್ಳಿಯವರಿಗೆ ರಂಗಭೂಮಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ವಿಜಯನಗರ ಜಿಲ್ಲೆಯ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರು (ರಿ) ಸಂಘದ Sandipani English Medium School ವತಿಯಿಂದ ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ನೀಡುವ “ಸದ್ಭಾವನಾ ಸೇವಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Shivamogga Dasara ಶಿವಮೊಗ್ಗದಲ್ಲಿ ಮನಾಕರ್ಷಕ ವೈಭವದ ವಿಜಯದಶಮಿ ಉತ್ಸವ: ವರುಣ ತಂಪೆರೆದು ಸಂಪನ್ನ

0

Shivamogga Dasara ಜೋರು ಮಳೆಯ ನಡುವೆ ಶಿವಮೊಗ್ಗ ದಸರಾದಲ್ಲಿ ಅಂಬು ಛೇದನ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್‌ ಗಿರೀಶ್‌ ಅವರು ಅಂಬು ಛೇದನ ಮಾಡಿದರು. ಬಳಿಕ ಪಟಾಕಿ ಸಿಡಿಸಲಾಯಿತು.
ಅಂಬು ಛೇದನಬದ ಬಳಿ ಜನರು ಘೋಷಣೆ ಕೂಗಿದರು. ಪರಸ್ಪರ ಬನ್ನಿ ಹಂಚಿಕೊಂಡು ದಸರಾ ಹಬ್ಬ ಶುಭಾಶಯ ವಿನಿಮಯ ಮಾಡಿಕೊಂಡರು.

ಇದೇ ವೇಳೆ ಬೃಹತ್‌ ರಾವಣನ ಪ್ರತಿಕೃತಿ ದಹಿಸಲಾಯಿತು.

ಶಿವಮೊಗ್ಗ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ದಿಢೀರ್‌ ಶುರುವಾದ ಮಳೆಯಿಂದಾಗಿ ಜನರು ಕಾರ್ಯಕ್ರಮ ಬಿಟ್ಟು ತೆರಳುವಂತಾಯಿತು. ಕೆಲವರು ಛತ್ರಿ ಹಿಡಿದು ನಿಂತು ಅಂಬು ಛೇದನ ವೀಕ್ಷಿಸಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಂಬು ಛೇದನ ಆಯೋಜಿಸಲಾಗಿತ್ತು.

ಈ ಸಂದರ್ಭ ಮಳೆಯಿಂದಾಗಿ ಜನರು ಗಲಿಬಿಲಿಗೊಂಡರು.

ಮೆರವಣಿಗೆ ವೇಳೆ ತುಂತುರು ಮಳೆ

Shivamogga Dasara ದಸರಾ ಮೆರವಣಿಗೆ ಜೈಲು ರಸ್ತೆಯಲ್ಲಿದ್ದಾಗ ದಟ್ಟವಾಗಿ ಮೋಡ ಕವಿದು, ತುಂತುರು ಮಳೆಯಾಗಿತ್ತು. ಕೆಲವೇ ನಿಮಿಷದಲ್ಲಿ ಮೋಡ ಸರಿದಂತಾಗಿತ್ತು. ಮಳೆ ಭೀತಿಯಿಂದಾಗಿ ಈ ಬಾರಿ ಅಂಬು ಛೇದನಕ್ಕೆ ಕಡಿಮೆ ಸಂಖ್ಯೆ ಜನ ಸೇರಿದ್ದರು.

ದಿಢೀರ್‌ ಮಳೆಗೆ ಜನರು ಗಲಿಬಿಲಿ:
ಅಂಬು ಛೇದನ ಕಾರ್ಯಕ್ರಮ ಮುನ್ನ ದಿಢೀರ್‌ ಮಳೆ ಸುರಿಯಿತು. ಜೋರು ಮಳೆಯಾಗುತ್ತಿದ್ದಂತೆ ತಕ್ಷಣ ಫ್ರೀಡಂ ಪಾರ್ಕ್‌ನಿಂದ ಹೊರ ನಡೆದರು. ಮಳೆಯಿಂದ ರಕ್ಷಣೆಗೆ ದಸರಾ ಕಾರ್ಯಕ್ರಮದ ಪೆಂಡಾಲ್‌, ಅಕ್ಕಪಕ್ಕದ ಕಟ್ಟಡಗಳ ಅಡಿ‌, ಉತ್ಸವ ಮೂರ್ತಿಗಳ ಟ್ರಾಕ್ಟರ್‌ ಕೆಳಗೆ ಕುಳಿತು ಜನರು ರಕ್ಷಣೆ ಪಡೆದರು. ಕೆಲವು ಛತ್ರಿ ಹಿಡಿದು ನಿಂತಿದ್ದರು.

University of Agricultural and Horticultural Sciences ಆಧುನಿಕ ತಾಂತ್ರಿಕತೆಯ ಸದುಪಯೋಗದಿಂದ ಕೃಷಿ ಪ್ರಗತಿ- ಡಾ.ಶ್ರೀಬಸವಸಿದ್ಧ ಮರುಳಶ್ರೀ

0

University of Agricultural and Horticultural Sciences ರೈತರು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಬೇಕು ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ನವುಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ರೋಟರಿ ಜಿಲ್ಲಾ ಕಾರ್ಯಕ್ರಮ, ಹಸಿರು ಮತ್ತು ನೀರು ಜಾಗೃತಿ ಉಪನ್ಯಾಸ
ಪ್ರಗತಿಪರ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯು ಸೇವಾ ಕಾರ್ಯದ ಜತೆಯಲ್ಲಿ ಪರಿಸರ ಜಾಗೃತಿ, ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್, ರೈತರು ಸಮಗ್ರ ಕೃಷಿ ಪದ್ಧತಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದರು.

University of Agricultural and Horticultural Sciences ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಮಾತನಾಡಿ, ಹಸಿರೇ ಉಸಿರು, ನಮಗೆ ಉಸಿರಾಡಲು ಗಿಡಮರಗಳು ಆಮ್ಲಜನಕ ಒದಗಿಸುತ್ತದೆ. ಹಸಿರನ್ನು ಕಾಪಾಡಿಕೊಳ್ಳುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಬೆಳೆ ಬೆಳೆಯುತ್ತಿದ್ದರು. ರೈತರು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎಂದು ಹೇಳಿದರು.