Good Luck Center ಶಿವಮೊಗ್ಗ ನಗರದ ಗುಡ್ ಲಕ್ ಆರೈಕೆ ಕೇಂದ್ರದಲ್ಲಿ 15 ವರ್ಷಗಳಿಂದ ಆಶ್ರಮದಲ್ಲಿ ಆರೈಕೆ ಪಡೆಯುತ್ತಿದ್ದ ಶ್ರೀಮತಿ ಕಾಮಾಕ್ಷಿ (80) ವರ್ಷ ಇವರು ನಿನ್ನೆ ದಿನ ಆರೈಕೆ ಕೇಂದ್ರದಲ್ಲಿ ನಿಧನರಾಗಿದ್ದು.ಇವರ ಇಚ್ಛೆಯಂತೆ ಇವರ ಕಣ್ಣುಗಳನ್ನು ಹಾಗೂ ದೇಹವನ್ನು ಸರ್ಕಾರಿ ಜಿಲ್ಲಾ ಮೆಗಾನ್ ಬೋಧನಾ ಆಸ್ಪತ್ರೆಗೆ ದಾನ ಮಾಡಲಾಯಿತು. ಇವರ ನಿಧನಕ್ಕೆ ಆಶ್ರಮವಾಸಿಗಳು ಹಾಗು ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ. ಯು ರವೀಂದ್ರನಾಥ್ ಐತಾಳ್. ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ್. ಶಿವಪ್ಪಗೌಡ.
Good Luck Center ಜಿ ವಿಜಯಕುಮಾರ್. ಹಾಗೂ ಗುಡ್ ಲಕ್ ಆರೈಕೆ ಕೇಂದ್ರದ ನಿರ್ದೇಶಕರು ಪದಾಧಿಕಾರಿಗಳು ತೀರ್ವ ಸಂತಾಪ ಸೂಚಿಸಿದ್ದಾರೆ
Good Luck Center ದೇಹದಾನಿ ಶ್ರೀಮತಿ ಕಾಮಾಕ್ಷಿ ನಿಧನ
Bhadravati ಮಳೆಯ ಆರ್ಭಟ: ಹಂಚಿನ ಸಿದ್ದಾಪುರದಲ್ಲಿ ಕುಸಿದ ಸೇತುವೆ
Bhadravati ಭದ್ರಾವತಿ ತಾಲೂಕಿನಲ್ಲಿಮೊನ್ನೆ ಸುರಿದ ಧಾರಾಕಾರ ಮಳೆಗೆ ಸೇತುವೆಯೊಂದು ಕುಸಿದು ಹೋಗಿದೆ.
ಹಂಚಿನ ಸಿದ್ದಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಭದ್ರಾ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಬಿದ್ದುಹೋಗಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ.
Bhadravati ಗ್ರಾಮದಿಂದ ಸಿದ್ದೇಶ್ವರ ದೇವಸ್ಥಾನ ಹಾಗೂ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಕುಸಿದು ಹೋಗಿದೆ. ಸಾರ್ವಜನಿಕರು ಪರದಾಡುವಂತಾಗಿದೆ. ಸೇತುವೆ ಶೀಘ್ರ ನಿರ್ಮಿಸಿಕೊಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.
Sirsi Marikamba Temple ಶಿರಸಿಯ ಶ್ರೀ ಮಾರಿಕಾಂಬಾ ದೇಗುಲದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಜಾರಿ
Sirsi Marikamba Temple ವಿಶ್ವವಿಖ್ಯಾತ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಸಂಬಂಧಿಸಿದಂತೆ ಹೊಸದೊಂದು ನಿಯಮಾವಳಿ ಜಾರಿಗೆ ತರಲಾಗಿದೆ. ದೇವಸ್ಥಾನದ ಆಡಳಿತ ಕಮಿಟಿ ಡ್ರೆಸ್ ಕೋಡ್ ಜಾರಿಗೊಳಿಸಿದ್ದು, ಸಂಪ್ರದಾಯಕ್ಕನುಗುಣವಾದ ಉಡುಗೆಗಳನ್ನು ಧರಿಸಿ ಬರುವಂತೆ ಸೂಚನೆ ನೀಡಿದೆ.
ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನು ಜಾರಿ ಮಾಡಲಾಗಿದೆ. ದೇವಸ್ಥಾನದ ಆಡಳಿತ ಕಮಿಟಿಯು ಡ್ರೆಸ್ ಕೋಡ್ ಜಾರಿಗೊಳಿಸಿದ್ದು, ಸಂಪ್ರದಾಯಕ್ಕನುಗುಣವಾದ ಉಡುಗೆಗಳನ್ನು ಧರಿಸಿ ಬರುವಂತೆ ಸೂಚನೆ ನೀಡಿದೆ.
Sirsi Marikamba Temple ವಸ್ತ್ರಸಂಹಿತೆ ನಿಯಮ ಜಾರಿಗೊಳಿಸಿರುವ ಬಗ್ಗೆ ಮಾರಿಕಾಂಬಾ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಈ ಹಿಂದೆ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿಯೂ ವಸ್ತ್ರಸಂಹಿತೆಯನ್ನು ಜಾರಿ ಮಾಡಲಾಗಿತ್ತು. ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ.
ದೇಗುಲಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆಯಬೇಕೆಂದು ಮುಜರಾಯಿ ಇಲಾಖೆ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ರಾಜ್ಯದ ವಿವಿಧ ದೇಗುಲಗಳಲ್ಲಿ ಈಗಾಗಲೇ ವಸ್ತ್ರಸಂಹಿತೆಯನ್ನು ಕಡ್ಡಾಯ ಮಾಡಲಾಗಿದೆ. ಈಗ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿಯೂ ವಸ್ತ್ರಸಂಹಿತೆ ಕಡ್ಡಾಯ ನಿಯಮ ಜಾರಿಗೆ ಬಂದಿದೆ.
ದೇಗುಲದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ:
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ದೇಗುಲದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಕಡ್ಡಾಯ ಮಾಡುವ ಉದ್ದೇಶವಿದೆ.
ಭಕ್ತರ ಸ್ಪಂದನೆ ಪರಿಗಣಿಸಿ
ಮುಂದಿನ ಹೆಜ್ಜೆ :
ಇದಕ್ಕೆ ಸಂಬಂಧಿಸಿದಂತೆ ಶಿರಸಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ್ ಮಾತನಾಡಿ, ದೇವಸ್ಥಾನಕ್ಕೆ ಹೋಗುವಾಗ ಸಂಪ್ರದಾಯ ಪಾಲನೆ ಮಾಡಬೇಕೆಂಬ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ಭಕ್ತರ ಸ್ಪಂದನೆ ಕೂಡಾ ಪರಿಗಣಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.
Actor Darshan ನಟ ದರ್ಶನ್ ಭೇಟಿಗಾಗಿ ಟೆಡ್ಡಿಬೇರ್ ಧರಿಸಿ ಬಳ್ಳಾರಿ ಜೈಲಿಗೆ ಬಂದ ಅಭಿಮಾನಿ
Actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಅವರನ್ನು ನೋಡಲು ಅಭಿಮಾನಿಯೋರ್ವ ಟೆಡ್ಡಿ ಬೇರ್ ಧರಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಆಗಮಿಸಿದ್ದಾನೆ.
ಬಳ್ಳಾರಿ ಕೇಂದ್ರ ಕಾರಾಗೃಹದೆದುರು ಇಂದು ಬೆಳಗ್ಗೆ ಅಭಿಮಾನಿ ಕಾರ್ತಿಕ್ ಎಂಬಾತ ಕಾಣಿಸಿಕೊಂಡಿದ್ದಾನೆ. ಟೆಡ್ಡಿಬೇರ್ ಉಡುಪು ಧರಿಸಿ, We are waiting you D BOSS ಎಂಬ ಸಂದೇಶದ ಫಲಕ ಹಿಡಿದು ನಿಂತಿದ್ದ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತಿರುವ ಈತ ಜೈಲು ಸಿಬ್ಬಂದಿಯನ್ನು ಮಾತನಾಡಿಸಿದ್ದಾನೆ. ಈ ವೇಳೆ ಆರೋಪಿಯ ಭೇಟಿಗೆ ಹೊರಗಿನವರಿಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Actor Darshan ಜೈಲಿಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ವಕೀಲರು ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಈಗಾಗಲೇ ಹಲವು ಬಾರಿ ಭೇಟಿ ನೀಡಿದ್ದಾರೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್ ಕೂಡಾ ಇತ್ತೀಚೆಗೆ ಆಗಮಿಸಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ಅಂತಿಮ ಆದೇಶ ಸೋಮವಾರ ಹೊರಬೀಳಲಿದೆ. ಸರ್ಕಾರದ ಪರವಾಗಿ ಅಭಿಯೋಜಕ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದಿಸಿದ್ದರು.
ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಆದೇಶ ಕೂಡಾ ಇದೇ ದಿನ ಹೊರಬರಲಿದೆ.
Kumsi Police ಸಿಗಂದೂರಿಗೆ ತೆರಳುತ್ತಿದ್ದ ಕಾರು ಅಪಘಾತ: ಬೆಂಗಳೂರಿನ ಯುವಕ ಸಾವು
Kumsi Police ಚಾಲಕನ ನಿಯಂತ್ರಣ ತಪ್ಪಿದ ಕಾರು ಗದ್ದೆಗೆ ಪಲ್ಟಿಯಾಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ಸಂಭವಿಸಿದೆ.
ಬೆಂಗಳೂರು ನೆಲಮಂಗಲದ ಚಂದನ್ ಮೃತ ಯುವಕ. ಕೊಡುಗು ಮೂಲದ ನಂದನ್, ಕೋಲಾರದ ಕೋದಂಡ, ಹಾಸನದ ಭರತ್, ಮಂಡ್ಯ ಜಿಲ್ಲೆಯ ಯೋಗೇಶ್ ಎಂಬುವವರು ಗಾಯಗೊಂಡಿದ್ದಾರೆ. ಐವರು ಬೆಂಗಳೂರಿನಲ್ಲಿ ನೆಲೆಸಿದ್ದರು.
ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದರು
Kumsi Police ರಜೆ ಇದ್ದಿದ್ದರಿಂದ ಐವರು ಯುವಕರು ಬೆಂಗಳೂರಿನಿಂದ ಸಿಗಂದೂರಿಗೆ ತೆರಳುತ್ತಿದ್ದರು. ಈ ಸಂದರ್ಭ ಕುಂಸಿಯ ಕೆರೆಕೋಡಿ ಬಳಿ ಚಂದನ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ತಲೆಗೆ ಪೆಟ್ಟು ಬಿದ್ದ ಹಿನ್ನೆಲೆ ಚಂದನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಚಂದನ್ ಮೃತದೇಹವನ್ನು ಮೆಗ್ಗಾನ್ ಅಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೀಡಿದರು.
Chamber Of Commerce Shivamogga ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಸಹಕಾರ ನೀಡಲು ಮನವಿ
Chamber Of Commerce Shivamogga ನದಿಯ ಶುದ್ಧತೆ ಮತ್ತು ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ನಿರ್ಮಲ ತುಂಗಾಭದ್ರಾ ಅಭಿಯಾನ ಶಿವಮೊಗ್ಗ ವತಿಯಿಂದ ನಡೆಸುತ್ತಿರುವ ಜಲಜಾಗೃತಿ, ಜನಜಾಗೃತಿ ಹಾಗೂ ಪಾದಾಯಾತ್ರೆಗೆ ಬೆಂಬಲ, ಸಹಕಾರ ನೀಡುವಂತೆ ಅಭಿಯಾನದ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಸೇರಿದಂತೆ ಆಡಳಿತ ಮಂಡಳಿಗೆ ಕೋರಿದರು.
ನಗರ, ಪಟ್ಟಣ, ಗ್ರಾಮಗಳಲ್ಲಿ ತ್ಯಾಜ್ಯ ನೀರು ನದಿಗೆ ನೇರವಾಗಿ ಸೇರದಂತೆ ಎಲ್ಲ ಕಡೆಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಲು ಒತ್ತಾಯಿಸುವುದು. ತುಂಗಾ, ಭದ್ರಾ ನದಿಗಳ ಪಾವಿತ್ರ್ಯತೆ ಕಾಪಾಡುವುದು. ನದಿಗಳಲ್ಲಿ ನೀರಿನ ಹರಿವು ಇರುವಂತೆ ಯೋಜನೆ ರೂಪಿಸಲು ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಶೃಂಗೇರಿಯಿಂದ ಕಿಷ್ಕಿಂದೆ ತನಕ ಪಾದಾಯಾತ್ರೆ ನಡೆಸಲಾಗುತ್ತಿದೆ ಎಂದು ಅಭಿಯಾನದ ಪದಾಧಿಕಾರಿಗಳು ತಿಳಿಸಿದರು.
ಜಲಚರ ಸಂತತಿಗಳ ನಾಶವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಒತ್ತಾಯಿಸುವುದು. ನದಿ ನೀರಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಬೇಕು. ಶುದ್ಧತೆಯಲ್ಲಿ ವ್ಯತ್ಯಯ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದು. ಸಾರ್ವಜನಿಕರಲ್ಲಿ ಜಲ ಜಾಗೃತಿ ಮತ್ತು ಸ್ವಚ್ಛತೆ ಜಾಗೃತಿ ಮೂಡಿಸುವುದು. ತುಂಗಾಭದ್ರಾ ನದಿ ನೀರು ಕಲುಷಿತವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಪಶ್ಚಿಮಘಟ್ಟ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕೋರಿಕೆ ಸಲ್ಲಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
Chamber Of Commerce Shivamogga ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಜಂಟಿ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ರಮೇಶ್ ಹೆಗಡೆ, ನಿರ್ಮಲ ತುಂಗಾಭದ್ರಾ ಅಭಿಯಾನ ಶಿವಮೊಗ್ಗದ ಪ್ರೊ. ಬಿ.ಎಂ.ಕುಮಾರಸ್ವಾಮಿ, ಎಂ.ಶಂಕರ್, ತ್ಯಾಗರಾಜ್, ದಿನೇಶ್ ಶೇಠ್, ಬಾಲಕೃಷ್ಣನಾಯ್ಡು ಇತರರಿದ್ದರು.
Klive Special Article ಹೌ ಟು ಗೆಟ್ ಕನ್ಫರ್ಮ್ ಟ್ರೈನ್ ಟಿಕೆಟ್
Klive Special Article ರೈಲು ಹೊರಡುವ ಸ್ವಲ್ಪ ಸಮಯದ ಮುಂಚೆಯೇ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎನ್ನುವ ಸೌಲಭ್ಯದ ಬಗ್ಗೆ ನಿಮಗೆ ಅರಿವಿದೆಯೇ?
ರೈಲು ಪ್ರಯಾಣವು ಭಾರತದಲ್ಲಿ ಹೆಚ್ಚು ಆದ್ಯತೆಯ ಪ್ರಯಾಣದ ವಿಧಾನಗಳಲ್ಲಿ ಒಂದಾಗಿದೆ.ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ.ಹೆಚ್ಚುತ್ತಿರುವ ಜನಸಂದಣಿಯಿಂದಾಗಿ ರೈಲಿನಲ್ಲಿ ಸೀಟು ಕಾಯ್ದಿರಿಸಲು ಕಷ್ಟವಾಗುತ್ತಿದೆ.ಹಬ್ಬ ಹರಿದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ.ಅನೇಕ ಬಾರಿ ಜನರು ತಿಂಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬೇಕು. ಇದ್ದಕ್ಕಿದ್ದಂತೆ ಎಲ್ಲಿಗಾದರೂ ಹೋಗಬೇಕಾದಾಗ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಬೇಕಾಗುತ್ತದೆ.ಆದರೆ ಇದನ್ನೂ ಮುಂಚಿತವಾಗಿಯೇ ಬುಕ್ಕಿಂಗ್ ಮಾಡಬೇಕು. ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಟಿಕೆಟ್ ಬುಕಿಂಗ್ ಸಮಸ್ಯೆ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ.
ಸಾಮಾನ್ಯ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ :
ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ದೋಷಗಳಿಂದ ಸಾಮಾನ್ಯ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಆರಂಭವಾದ ತಕ್ಷಣ ಟಿಕೆಟ್ ಏಜೆಂಟ್ ಗಳು ವಿಶೇಷ ಸಾಫ್ಟ್ ವೇರ್ ಬಳಸಿ ಎಲ್ಲಾ ಸೀಟುಗಳನ್ನು ಬುಕ್ ಮಾಡುತ್ತಾರೆ.ಇದರಿಂದಾಗಿ ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ಅವಕಾಶ ಸಿಗುವುದಿಲ್ಲ. ಇದಲ್ಲದೇ, ತತ್ಕಾಲ್ ಟಿಕೆಟ್ ದರ ಸಾಮಾನ್ಯ ಟಿಕೆಟ್‌ಗಳಿಗಿಂತ ಹೆಚ್ಚು.ಇದು ಪ್ರಯಾಣಿಕರಿಗೆ ಹೆಚ್ಚುವರಿ ಹೊರೆಯಾಗಿದೆ.
ಇದ್ದಕ್ಕಿದ್ದಂತೆ ಎಲ್ಲೋ ಹೋಗುವ ಎಮರ್ಜೆನ್ಸಿ ಎದುರಾದರೆ ರೈಲು ಟಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ.ಆದರೆ ರೈಲು ಹೊರಡುವ ಸ್ವಲ್ಪ ಸಮಯದ ಮುಂಚೆಯೇ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎನ್ನುವ ಸೌಲಭ್ಯದ ಬಗ್ಗೆ ನಿಮಗೆ ಅರಿವಿದೆಯೇ? ಈ ಸೌಲಭ್ಯವನ್ನು ರೈಲ್ವೆಯ ಕರೆಂಟ್ ಟಿಕೆಟ್ ಬುಕಿಂಗ್ ಆನ್‌ಲೈನ್ ಎಂದು ಕರೆಯಲಾಗುತ್ತದೆ.ಅನೇಕ ಜನರಿಗೆ ಈ ಸೇವೆಯ ಬಗ್ಗೆ ತಿಳಿದಿಲ್ಲ.
ಕರೆಂಟ್ ಟಿಕೆಟ್ ಕಾಯ್ದಿರಿಸುವುದು ಹೇಗೆ:
Klive Special Article ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆಯು ಕರೆಂಟ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಮೂಲಕ ರೈಲಿನಲ್ಲಿ ಖಾಲಿ ಇರುವ ಸೀಟುಗಳನ್ನು ಕೊನೆ ಘಳಿಗೆಯಲ್ಲಿ ಅಂದರೆ ಕರೆಂಟ್ ಟಿಕೆಟ್ ಬುಕ್ ಮಾಡುವ ಪ್ರಯಾಣಿಕಾರಿಗೆ ಹಂಚಲಾಗುತ್ತದೆ. ಈ ಟಿಕೆಟ್‌ಗಳನ್ನು ರೈಲು ಹೊರಡುವ ಸ್ವಲ್ಪ ಸಮಯದ ಮೊದಲು ನೀಡಲಾಗುತ್ತದೆ.ಇದರಿಂದ ರೈಲಿನ ಸೀಟುಗಳು ಸಂಪೂರ್ಣ ಭರ್ತಿಯಾಗುವುದಲ್ಲದೆ ಪ್ರಯಾಣಿಕರಿಗೆ ಕೊನೆಯ ಕ್ಷಣದಲ್ಲಿ ಪ್ರಯಾಣಿಸುವ ಅವಕಾಶವೂ ದೊರೆಯುತ್ತದೆ.
ಬುಕಿಂಗ್ ಸಮಯ ಮತ್ತು ಶುಲ್ಕ ;
ಕರೆಂಟ್ ಟಿಕೆಟ್ ಅನ್ನು ಬುಕ್ ಮಾಡಲು ಎರಡು ಆಯ್ಕೆಗಳಿವೆ. ಮೊದಲನೆಯದಾಗಿ, IRCTC ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.ಎರಡನೆಯ ಆಯ್ಕೆಯೆಂದರೆ ರೈಲ್ವೆ ನಿಲ್ದಾಣದ ಟಿಕೆಟ್ ವಿಂಡೋಗೆ ಹೋಗಿ ಟಿಕೆಟ್ ಗಳನ್ನು ಬುಕ್ ಮಾಡಬಹುದು.ರೈಲು ಹೊರಡುವ ಸುಮಾರು 3-4 ಗಂಟೆಗಳ ಮೊದಲು ನೀವು ಈ ಎರಡೂ ವಿಧಾನಗಳ ಮೂಲಕಕರೆಂಟ್ ಟಿಕೆಟ್‌ಗಳ ಲಭ್ಯತೆಯನ್ನು ಪರಿಶೀಲಿಸಬಹುದು.
ರೈಲು ಹೊರಡುವ ಸುಮಾರು ನಾಲ್ಕು ಗಂಟೆಗಳ ಮೊದಲು ಕರೆಂಟ್ ಟಿಕೆಟ್ ಅನ್ನು ಬುಕ್ ಮಾಡಬಹುದು. ಕರೆಂಟ್ ಟಿಕೆಟ್‌ನ ದೊಡ್ಡ ವೈಶಿಷ್ಟ್ಯವೆಂದರೆ ರೈಲು ಹೊರಡುವ ಕೆಲವು ನಿಮಿಷಗಳ ಮೊದಲು ನೀವು ಅದನ್ನು ಬುಕ್ ಮಾಡಬಹುದು. 5 ರಿಂದ 10 ನಿಮಿಷಗಳ ಮುಂಚಿತವಾಗಿ ಈ ಟಿಕೆಟ್ ಅನ್ನು ಬುಕ್ ಮಾಡಬಹುದು. ಇದು ತತ್ಕಾಲ್ ಟಿಕೆಟ್‌ಗಿಂತ ಸುಲಭವಾಗಿದೆ ಮತ್ತು ಇದು ಸಾಮಾನ್ಯ ಟಿಕೆಟ್‌ಗಿಂತ ಸ್ವಲ್ಪ ಅಗ್ಗವಾಗಿದೆ.
Cybercrime of Punjab Police ವಿದೇಶಗಳಲ್ಲಿ ಉದ್ಯೋಗವಕಾಶ ಜಾಹಿರಾತು: 18 ಕಾನೂನುಬಾಹಿರ ಟ್ರಾವೆಲ್ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು
Cybercrime of Punjab Police ಕಾನೂನುಬಾಹಿರ ಜಾಹೀರಾತು ನೀಡಿದ್ದಕ್ಕಾಗಿ ರಾಜ್ಯದಾದ್ಯಂತ 18 ಟ್ರಾವೆಲ್ ಏಜೆನ್ಸಿಗಳ ವಿರುದ್ಧ ಎನ್‌ಆರ್‌ಐ ಅಫೇರ್ಸ್ ವಿಂಗ್ ಮತ್ತು ಪಂಜಾಬ್ ಪೋಲೀಸ್‌ನ ಸೈಬರ್ ಕ್ರೈಮ್ ವಿಭಾಗವು ಚಂಡೀಗಢದ ಪ್ರೊಟೆಕ್ಟರೇಟ್ ಆಫ್ ಎಮಿಗ್ರಂಟ್ಸ್ ಸಮನ್ವಯದಲ್ಲಿ ಪ್ರಕರಣ ದಾಖಲಾಗಿದೆ.
ಈ ಟ್ರಾವೆಲ್ ಏಜೆನ್ಸಿಗಳು ವಿದೇಶಗಳಲ್ಲಿ ಉದ್ಯೋಗವಕಾಶಗಳನ್ನು ನೀಡುವುದಾಗಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿತ್ತು ಎಂದು ವಲಸಿಗರ ಸಂರಕ್ಷಣಾ ಸಂಸ್ಥೆಯಾಗಿರುವ ಪ್ರೊಟೆಕ್ಟರೇಟ್ ಆಫ್ ಎಮಿಗ್ರಂಟ್ಸ್ ಆರೋಪಿಸಿದೆ.
ಆಗಸ್ಟ್‌ನಲ್ಲಿ ಇಂತಹ 25 ಅಕ್ರಮ ಟ್ರಾವೆಲ್ ಏಜೆನ್ಸಿಗಳ ವಿರುದ್ಧ ಕನಿಷ್ಠ 20 ಎಫ್‌ಐಆರ್‌ಗಳು ದಾಖಲಾಗಿತ್ತು. ಇದರೊಂದಿಗೆ ಇಂತಹ ಪ್ರಕರಣ ದಾಖಲಾಗದ ಅಕ್ರಮ ಟ್ರಾವೆಲ್ ಏಜೆನ್ಸಿಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ಎನ್‌ಆರ್‌ಐ ವ್ಯವಹಾರಗಳ ಹೆಚ್ಚುವರಿ ಡಿಜಿಪಿ ಪ್ರವೀಣ್ ಕುಮಾರ್ ಸಿನ್ಹಾ, “ಈ ಟ್ರಾವೆಲ್ ಏಜೆನ್ಸಿಗಳು ಅಗತ್ಯ ಪರವಾನಗಿ ಮತ್ತು ಅನುಮತಿಗಳಿಲ್ಲದೆ ವಿದೇಶದಲ್ಲಿ ಉದ್ಯೋಗಗಳನ್ನು ಜಾಹೀರಾತು ಮಾಡುತ್ತಿವೆ. ನಾವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಶೀಲಿಸಿದ್ದು, ಅವರ ದಾಖಲೆಗಳನ್ನು ರಹಸ್ಯವಾಗಿ ಪರಿಶೀಲಿಸಿದ್ದೇವೆ. ಇದರ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ.” ಎಂದು ಹೇಳಿದ್ದಾರೆ.
Cybercrime of Punjab Police ಅಮೃತಸರ, ಎಸ್‌ಎಎಸ್ ನಗರ, ಲುಧಿಯಾನ ಮತ್ತು ಪಟಿಯಾಲ ಸೇರಿದಂತೆ ಚಂಡೀಗಢದ ವಿವಿಧ ಎನ್‌ಆರ್‌ಐ ಪೊಲೀಸ್ ಠಾಣೆಗಳಲ್ಲಿ ಎಮಿಗ್ರೇಷನ್ ಕಾಯ್ದೆಗಳ ಸೆಕ್ಷನ್ 24/25 ರ ಅಡಿಯಲ್ಲಿ 18 ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ದಾಖಲಾದ 18 ಎಫ್‌ಐಆರ್‌ಗಳಲ್ಲಿ ಆರು ಸೆಪ್ಟೆಂಬರ್‌ನಲ್ಲಿ ಮತ್ತು ಹನ್ನೆರಡು ಅಕ್ಟೋಬರ್‌ನಲ್ಲಿ ದಾಖಲಾಗಿವೆ.
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ದಾಖಲಾದ 26 ಎಫ್‌ಐಆರ್‌ಗಳಲ್ಲಿ 34 ಆರೋಪಿಗಳ ಪೈಕಿ 25 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿನ್ಹಾ ಹೇಳಿದ್ದಾರೆ. “ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಮತ್ತು ಉಳಿದ ಆರೋಪಿ ಟ್ರಾವೆಲ್ ಏಜೆಂಟ್‌ಗಳಿಗೆ ನೋಟಿಸ್ ಕಳುಹಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ದಾಖಲೆಗಳು ಮತ್ತು ಹಣವನ್ನು ಕೊಡುವ ಮೊದಲು ಟ್ರಾವೆಲ್ ಏಜೆಂಟ್‌ಗಳ ದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ಜಾಗರೂಕರಾಗಿರುವಂತೆ ನಾಗರಿಕರಿಗೆ ಎಂದು ಸಿನ್ಹಾ ಹೇಳಿದ್ದಾರೆ.
“ಎಮಿಗ್ರೇಷನ್ ಆಕ್ಟ್, 1983 ರ ಅಡಿಯಲ್ಲಿ ಮಾನ್ಯವಾದ ನೇಮಕಾತಿ ಏಜೆಂಟ್ (RA) ಪರವಾನಗಿ ಇರುವ ಏಜೆನ್ಸಿಗಳೊಂದಿಗೆ ತೊಡಗಿಸಿಕೊಳ್ಳಿ. ಯಾವಾಗಲೂ ಕಾಯಿದೆಯ ಅಡಿಯಲ್ಲಿ ನೀಡಲಾದ ಏಜೆನ್ಸಿಯ ಪರವಾನಗಿಯನ್ನು ಕೇಳಿ. ಟ್ರಾವೆಲ್ ಏಜೆಂಟ್‌ಗಳನ್ನು ತೊಡಗಿಸಿಕೊಳ್ಳುವಾಗ ‘ಪರಿಶೀಲಿಸಿ ಮತ್ತು ನಂತರ ನಂಬಿ’ ಎಂಬುದು ಕೆಲಸದ ತತ್ವವಾಗಿರಬೇಕು” ಅವರು ಹೇಳಿದ್ದಾರೆ.
CM Siddharamaiah ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
CM Siddharamaiah ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಮತ್ತು ಶಾಸಕರು ಇಂದು ಶಕ್ತಿ ಪೀಠದ ಸವದತ್ತಿ ಯಲ್ಲಮ್ಮದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಸವದತ್ತಿಯ ಯಲ್ಲಮ್ಮ ಗುಡ್ಡಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ವಾದ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಮಂತ್ರ ಘೋಷಗಳೊಂದಿಗೆ ದೇವಿ ದರ್ಶನಕ್ಕೆ ಅರ್ಚಕರು ಆಹ್ವಾನಿಸಿದರು. ಇದೇ ವೇಳೆ ದೇವಸ್ಥಾನದ ಅರ್ಚಕ ಕೊಟ್ಟ ಎರಡು ಲಿಂಬೆಹಣ್ಣುಗಳನ್ನು ಕೈಯಲ್ಲಿ ಹಿಡಿದುಕೊಂಡು ದೇವಸ್ಥಾನ ಪ್ರವೇಶಿಸಿದ ಸಿದ್ದರಾಮಯ್ಯ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ: ಪತ್ನಿ ಹೆಸರಲ್ಲಿ ಸಿಎಂ ಪೂಜೆ :
CM Siddharamaiah ಪತ್ನಿ ಪಾರ್ವತಿ ಹೆಸರಲ್ಲಿ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು ಅವರ ಹೆಸರಲ್ಲಿ ಪೂಜೆ ಸಲ್ಲಿಸಿ, ಮಂಗಳಾರತಿ ನೀಡಿ, ನಾಗಮೂರ್ತಿ ದೇವಿಯ ಬೆಳ್ಳಿ ಕಿರೀಟವನ್ನು ಸಿದ್ದರಾಮಯ್ಯ ಅವರ ತಲೆಗೆ ಮುಟ್ಟಿಸಿ ಆಶೀರ್ವಾದ ಮಾಡಿದರು. ದೇವಿಯ ಆರತಿ ಆಗುವವರೆಗೂ ದೇವಿ ಸನ್ನಿಧಾನದಲ್ಲಿ ನಿಂತು ದರ್ಶನ ಪಡೆದ ಸಿಎಂ, ತಾವೇ ಕುಂಕುಮ ಹಚ್ಚಿಕೊಂಡರು. ಬಳಿಕ ಆರತಿ ತಟ್ಟೆಗೆ 500 ರೂ. ಹಾಕಿದರು.ದೇವಿ ಮುಂದೆ 10 ನಿಮಿಷ ಕುಳಿತು ಡಿಸಿಎಂ ಡಿ.ಕೆ. ಶಿವಕುಮಾರ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಹೊರಗೆ ಡಿಕೆಶಿ ಬರೋವರೆಗೆ ಸಿಎಂ ಸಿದ್ದರಾಮಯ್ಯ ಕಾದು ನಿಂತಿದ್ದರು. ಈ ವೇಳೆ ಸಚಿವರಾದ ಹೆಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಭರಮಗೌಡ ಕಾಗೆ, ಆಸೀಫ್ ಸೇಠ್, ಎನ್.ಹೆಚ್. ಕೋನರೆಡ್ಡಿ, ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ಕೊಟ್ಟರು.ದೇವಿ ದರ್ಶನ ಪಡೆದು ವಾಪಸ್ ಆಗುವಾಗ ಸಿಎಂ ಸಿದ್ದರಾಮಯ್ಯ ಅವರಿಗೆ ಸವದತ್ತಿ ಯಲ್ಲಮ್ಮ ದೇವಿಯ ಅರ್ಚಕರು ರಾಜ್ಯದಲ್ಲಿರುವ ಅರ್ಚಕರ ವೇತನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ವೇತನ ಬಿಡುಗಡೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು. ದೇವಸ್ಥಾನದಿಂದ ಹೊರ ಬಂದ ಸಿದ್ದರಾಮಯ್ಯ ಜನರತ್ತ ಕೈ ಬೀಸಿದರು.
Bangalore BBMP ಬಿಬಿಎಂಪಿಯಿಂದ ನಾಯಿಗಳ ಹಬ್ಬ
Bangalore BBMP ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೇ ಅಕ್ಟೋಬರ್ 17 ರಂದು ‘ಕುಕುರ್ ತಿಹಾರ್’ ಎಂದು ಕರೆಯಲ್ಪಡುವ ‘ನಾಯಿಗಳ ಹಬ್ಬ’ವನ್ನು ಆಚರಿಸಲಿದೆ. ಈ ವಿಶಿಷ್ಟ ಕಾರ್ಯಕ್ರಮವು ನಗರದಾದ್ಯಂತ ವಸತಿ ಕಲ್ಯಾಣ ಸಂಘಗಳು (RWA) ಮತ್ತು ಪ್ರಾಣಿ ಪಾಲಕರನ್ನು ಒಟ್ಟಿಗೆ ಸೇರಿಸುತ್ತದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಬಂಧವನ್ನು ಎತ್ತಿ ತೋರಿಸುವ ಕಾರ್ಯಕ್ರಮ ಇದಾಗಿರುತ್ತದೆ.
ಅದೇ ದಿನ, ಬಿಬಿಎಂಪಿಯು ನಾಲ್ಕು ವಾರ್ಡ್‌ಗಳಿಂದ ಪೌರಕಾರ್ಮಿಕರನ್ನು ನೇಮಿಸುವ ಮೂಲಕ ಪ್ರಾಯೋಗಿಕ ಫೀಡಿಂಗ್ ಉಪಕ್ರಮವನ್ನು ಪ್ರಾರಂಭಿಸುತ್ತದೆ. ಪ್ರದೇಶದ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮುದಾಯ ನಾಯಿಗಳಿಗೆ ಆಹಾರ ನೀಡಲು ಸಹಾಯ ಮಾಡುತ್ತದೆ.
Bangalore BBMP ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಸಮಾಜದಲ್ಲಿ ಪರಿಸರ ಸಮತೋಲನ ಕಾಪಾಡಲು ಪ್ರಾಣಿಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯ ಮಹತ್ವವನ್ನು ಒತ್ತಿ ಹೇಳಿದರು. ಪ್ರಾಣಿಗಳ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್‌ಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರಕೃತಿಯು ಅವುಗಳನ್ನು ಸೃಷ್ಟಿಸಿದ ರೀತಿಯಲ್ಲಿ ಅವುಗಳನ್ನು ಸ್ವೀಕರಿಸುವುದು ನಿರ್ಣಾಯಕವಾಗಿದೆ ಎಂದು ಹೇಳಿದರು.
ಸಹವರ್ತಿನ್ ಅನಿಮಲ್ ವೆಲ್ಫೇರ್ ಟ್ರಸ್ಟ್ ಜೊತೆಗೆ BBMP ಪಶುಸಂಗೋಪನೆ ಇಲಾಖೆ ಮತ್ತು ಇತರ ಪಾಲುದಾರರು ‘BITEFREELOCALITY’ ಕಾರ್ಯಕ್ರಮದ ಅಡಿಯಲ್ಲಿ ಅ ನೇಮಕ ಉಪಕ್ರಮಗಳನ್ನು ಪರಿಚಯಿಸಲು ಉದ್ದೇಶಿಸಿದ್ದಾರೆ. ಈ ಉಪಕ್ರಮವು ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸುವಲ್ಲಿ ಒಟ್ಟಾಗಿ ಕೆಲಸ ಮಾಡುವ ಸಂಬಂಧಿತ ಸಹಾನುಭೂತಿಯ ಜನರ ಗುಂಪಿನ ಸಂಪರ್ಕ ಹೊಂದುವ ಉದ್ದೇಶ ಹೊಂದಿದೆ.
