Wednesday, March 25, 2026
Wednesday, March 25, 2026
Home Blog Page 1947

ಸಲಗ ಚಿತ್ರಕ್ಕೆ ಶಿವಮೊಗ್ಗದಲ್ಲಿ ಗುಡ್ ರೇಸ್ಪಾನ್ಸ್,ಚಿತ್ರ ಮಂದಿರ ಹೌಸ್ ಪುಲ್

0

ಕೊರೊನಾ ಮಹಾಮಾರಿ ಕಡಿಮೆಯಾದ ನಂತರ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಸಲಗಕ್ಕೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಹಾಗೂ ಭಾರತ್ ಸಿನಿಮಾಸ್ ನಲ್ಲಿ ಸಲಗ ಚಿತ್ರ ತೇರೆ ಕಂಡಿದೆ .ಹಾಗಾಗಿ ದುನಿಯಾ ವಿಜಯ್ ಅಭಿಮಾನಿಗಳು ಸಲಗ ಚಿತ್ರ ನೋಡಿ ಚಿತ್ರದ ನಿರ್ದೇಶನಕ್ಕೆ ಬಹುಪರಾಕ್ ಹೇಳಿದ್ದಾರೆ.
ಚಿತ್ರ ಮಂದಿರದ ಬಳಿ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಚಿತ್ರ ವಿಕ್ಷೀಸಿದ್ದಾರೆ.ಬೆಳಗ್ಗೆ ಶೋ ಮತ್ತು ಮತ್ತು ಮಧ್ಯಾಹ್ನದ ಶೋ ಕೂಡ ಹೌಸ್ ಪುಲ್ ಆಗಿದ್ದು ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಿಸಿರುವ ಚಿತ್ರಕ್ಕೆ ಶಿವಮೊಗ್ಗದ ಜನ ಚಿತ್ರ ನೋಡಿ ಹಾರೈಸಿದ್ದಾರೆ.

ಒಟ್ಟಾರೆ ಕಳೆದೆರೆಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ಯಾಗದೇ ವರ್ಷಗಳೆ ಕಳೆದೊಗಿತ್ತು ಇಂದು ತೇರೆ ಕಂಡಿರುವ ಚಿತ್ರ ಸಲಗಕ್ಕೆ ಶಿವಮೊಗ್ಗ ದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಿನಿ ರಸಿಕರು ಚಿತ್ರ ನೋಡಿ ಏಂಜಾಯ್ ಮಾಡಿದ್ದಾರೆ.