Friday, March 27, 2026
Friday, March 27, 2026
Home Blog Page 526

Karnataka Cricket Premier League ಕರ್ನಾಟಕ ಕ್ರಿಕೆಟ್ ಪ್ರಿಮೀಯರ್ ಲೀಗ್ ಶಿವಮೊಗ್ಗ ಟೈಗರ್ಸ್ ತಂಡದ ಆಟಗಾರರ ಪಟ್ಟಿ ಪ್ರಕಟಣೆ

0

Karnataka Cricket Premier League ಕರ್ನಾಟಕ ರಾಜ್ಯ ಕ್ರಿಕೆಟ್ ಪ್ರೀಮಿಯರ್ ಲೀಗ್ (ಎಸ್.ಪಿ.ಎಲ್ 2024) ಟೂರ್ನಿಯ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸುವ ಶಿವಮೊಗ್ಗ ಟೈಗರ್ಸ್ ತಂಡದ ಆಟಗಾರರ ಪಟ್ಟಿ ಹಾಗೂ ಆಹ್ವಾನ ಪತ್ರಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಶಿವಮೊಗ್ಗ ತಂಡದ ಮಾಲಕ ಚೇತನ್ ದಾಸರಹಳ್ಳಿ, ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ನಡೆಸುವ ಕರ್ನಾಟಕ ಸಾಫ್ಟ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ – 2024 ನ. 1ರಂದು ಬೆಂಗಳೂರಿನ ಸೋಲದೇವನಹಳ್ಳಿಯ ಆಚಾರ್ಯ ಮೈದಾನದಲ್ಲಿ‌ ನಡೆಯಲಿದೆ ಎಂದರು.

ಯಾರೆಲ್ಲ ಗಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಗ್ರಾಮೀಣ ಮಟ್ಟದ ಕ್ರಿಕೆಟ್ ಪ್ರತಿಭೆಗಳಿದ್ದರುಊ ಅವರನ್ನು ಗುರುತಿಸುವ ಮತ್ತು ಒಂದು ಅದ್ಭುತವಾದ ಅವಕಾಶವನ್ನು ಕಲ್ಪಿಸುವ ಪ್ರಯತ್ನವೇ ಈ KSPL 2024 ಆಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಟಗಾರರ ಆಯ್ಕೆಯ ಟ್ರಯಲ್ಸ್ ನ್ನು KSSCA ವತಿಯಿಂದಲೆ ನಡೆಸಿ, ಅಲ್ಲಿ ಆಯ್ಕೆಯಾದ 700 ಜನ ಪ್ರತಿಭಾನ್ವಿತ ಯುವ ಕ್ರಿಡಪಟುಗಳನ್ನು ಹರಾಜು ಪ್ರಕ್ರಿಯೆಯ ಮುಖೇನ ರಾಜ್ಯದ 32 ತಂಡಗಳಿಗೆ ಆಟಗಾರರ ಆಯ್ಕೆ ಯನ್ನು ಮಾಡಲಾಯಿತು ಎಂದರು.

Karnataka Cricket Premier League ಇದರಲ್ಲಿ ಶಿವಮೊಗ್ಗ ಟೈಗರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 21 ಜನ ಆಟಗಾರರಲ್ಲಿ 17 ಆಟಗಾರರು ಶಿವಮೊಗ್ಗ ಜಿಲ್ಲೆಯವರರಾಗಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಪ್ರಯತ್ನ ನಮ್ಮದಾಗಿದೆ ಎಂದರು.

, 01 ನವೆಂಬರ್ 2024 ಇಂದ 01 ಡಿಸೆಂಬರ್ 2024 ರ ವರೆಗೆ ಒಂದು ತಿಂಗಳ ಕಾಲ ನಡೆಯಲಿದ್ದು, ಎಲ್ಲಾ ಆಟಗಳ ನೇರ ಪ್ರಸಾರವನ್ನು ದೂರ ದರ್ಶನ ಚಂದನದಲ್ಲಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶಿವಮೊಗ್ಗ ತಂಡದ ಪಂದ್ಯ ನ.‌24ರಂದು ಹಾವೇರಿ, 25ರಂದು ಬೆಂಗಳೂರು ಗ್ರಾಮಾಂತರ, 27ರಂದು ಗದಗ್ ತಂಡದ ಜೊತೆ ನಡೆಯಲಿದೆ ಎಂದರು.

ತಂಡದ
ಆಟಗಾರರ ಪಟ್ಟಿ : ಬಸವರಾಜು (ಶಿವಮೊಗ್ಗ) – ನಾಯಕ 3. ಎಂ.ಡಿ ಸಿರಾಜ್ (ಬೀದರ್) 5. ವಿನಯ್ (ಹೊಸನಗರ) 7. ಸನತ್ ಆಚಾರ್ಯ (ಹೊಸನಗರ) 9. ಗಂಗಾಧರ (ಶಿವಮೊಗ್ಗ) 2. ಸಚಿನ್‌ (ತೀರ್ಥಹಳ್ಳಿ) – ಉಪ ನಾಯಕ 4. ಕಿರಣ್ (ಭದ್ರಾವತಿ) 6. ಸೈಯದ್ ಖಾಷಿಫ್ (ಶಿವಮೊಗ್ಗ) 8. ಆಶಿಕ್ (ಹೊಸನಗರ) 10. ತೌಫಿಕ್ (ತೀರ್ಥಹಳ್ಳಿ, 11. ಶ್ರೀನಿವಾಸ್ (ಶಿವಮೊಗ್ಗ)

  1. ಚೇತನ್ (ಶಿವಮೊಗ್ಗ)
  2. ನಿಯಾಸ್ (ಭದ್ರಾವತಿ)
  3. ವಿಕ್ರಮ್‌ ಗೌಡ (ತೀರ್ಥಹಳ್ಳಿ)
  4. ಸ್ವಸ್ತಿಕ್ ನಾಗರಾಜ್ (ಬೆಂಗಳೂರು)
  5. ಪ್ರತಾಪ್ (ಶಿವಮೊಗ್ಗ)
  6. ಪ್ರಜ್ವಲ್ ಗಂಗೊಳ್ಳಿ (ಕುಂದಾಪುರ)
  7. ಉಮೇಶ್ (ತುಮಕೂರು)
  8. ರಾಘವೇಂದ್ರ (ಶಿವಮೊಗ್ಗ)
  9. ಅವಿನಾಶ್ ಆಚಾರ್ಯ (ಹೊಸನಗರ)
  10. ಸುಧಾಕರ್ (ಸೊರಬ) ಆಟಗಾರರಿದ್ದಾರೆ ಎಂದರು.

C.P. Yogeshwar ಚನ್ನಪಟ್ಟಣ ,ಉಪಚುನಾವಣೆ ಹಿನ್ನೆಲೆ. ಟಿಕೆಟ್ ಗೆ ಪಟ್ಟುಬಿಡದ ಸಿಪಿವೈ ಮಾಡಿದ್ದೇನು?

0

C.P. Yogeshwar ಸಿ.ಪಿ. ಯೋಗೇಶ್ವರ್ ಅವರು ಇಂದು ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಗೀಶ್ವರ್ ಅವರು, ದೇಶಾಪಾಂಡೆ ನಗರದ ‌ಪಿಂಟೋ ರಸ್ತೆಯಲ್ಲಿರುವ ಸಭಾಪತಿ ಬಸವರಾಜ್ ಹೊರಟ್ಟಿ ಮನೆಗೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿದರು.

ಅಂಗೀಕಾರ :

ರಾಜೀನಾಮೆ ಪತ್ರ ಸ್ವೀಕರಿಸಿ ಮಾತನಾಡಿದ ಸಭಾಪತಿಗಳು, ಸಿ ಪಿ ಯೋಗೇಶ್ವರ್ ಅವರು ಸ್ವ-ಇಚ್ಛೆಯಿಂದ ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ಅಂಗೀಕಾರ ಮಾಡಿದ್ದೇನೆ ಎಂದು ತಿಳಿಸಿದರು.
ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ಪಿ ಯೋಗೇಶ್ವರ್
ಬಳಿಕ ಯೋಗೇಶ್ವರ್ ಮಾತನಾಡಿ, ಸ್ವ-ಇಚ್ಛೆಯಿಂದ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿರುವೆ.

ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಈಗ ಕೇಂದ್ರ ಸಚಿವರಾಗಿದ್ದು, ಆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ನಾನು ಜನಗಳ ಮಧ್ಯೆ ಇರುವ ಆಸೆ ಹೊಂದಿದ್ದೇನೆ. ಹೀಗಾಗಿ ವಿಧಾನ‌ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಎಂದರು.

ಹೆಚ್ಡಿಕೆ ಅವಕಾಶ ಮಾಡಿಕೊಡಲಿ: ಸಿಪಿವೈ :

C.P. Yogeshwar ಕಾಂಗ್ರೆಸ್ ಪಕ್ಷದವರ ಸಂಪರ್ಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಯಾರೂ ಸಹ ಸಂಪರ್ಕ ಮಾಡಿಲ್ಲ. ಒಂದು ಅವಕಾಶ ಮಾಡಿಕೊಡುವೆಂತೆ ಬಿಜೆಪಿ ವರಿಷ್ಠರಿಗೆ ಇವತ್ತು ಮನವಿ ಮಾಡುತ್ತೇನೆ. ಉಪಚುನಾವಣೆಯಲ್ಲಿ ಜನರು ಗೆದ್ದೇ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧೆಗೆ ಅವಕಾಶ ಮಾಡಿಕೊಡಲಿ. ವರಿಷ್ಠರು ಕೊನೆ ಗಳಿಗೆಯಲ್ಲಾದರೂ ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಟಿಕೆಟ್ ವಿಚಾರದಲ್ಲಿ ಪಕ್ಷದ ಎಲ್ಲ ನಾಯಕರು ನಮ್ಮ ಪರವಾಗಿ ಧ್ವನಿ ಎತ್ತಿದ್ದಾರೆ. ನನಗೆ ಟಿಕೆಟ್ ನೀಡಬೇಕೆಂದು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈವರೆಗೆ ನನಗೆ ಸ್ಪಂದನೆ ಸಿಕ್ಕಿಲ್ಲ. ಇನ್ನೂ ಕಾಲಾವಕಾಶ ಇದೆ, ಕಾದು ನೋಡೋಣ ಎಂದರು.

ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಬಿಜೆಪಿಯಲ್ಲಿರಬೇಕು, ಎನ್ಡಿಎ ಅಭ್ಯರ್ಥಿಯಾಗಬೇಕೆಂಬ ಆಸೆಯಿದೆ. ಅನುಭವ ನೋಡಿ ಪಕ್ಷ ಟಿಕೆಟ್ ನೀಡಬೇಕು. ಇಲ್ಲದೇ ಹೋದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದೇನೆ. ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಯೋಚನೆ ಇಲ್ಲ‌. ಅವರು ಕೂಡ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾಳೆ ಏನಾಗುತ್ತೋ ನೋಡೋಣ ಎಂದರು.

Klive Special Article ಐಎಎಸ್ ಅಧಿಕಾರಿ ಕೆಂಪಹೊನ್ನಯ್ಯ , ಒಂದು ಅವಿಸ್ಮರಣೀಯ ಭೇಟಿ- ಎಚ್.ಕೆ.ವಿವೇಕಾನಂದ.

0

Klive Special Article ದಿವ್ಯಾಂಗ ಚೇತನ, ಕರ್ನಾಟಕದ ಹೆಮ್ಮೆ,
ಪಶ್ಚಿಮ ಬಂಗಾಳದ ಮಿಡ್ನಾಪುರದ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ
ಶ್ರೀ ಕೆಂಪ ಹೊನ್ನಯ್ಯನವರು…

ಕೆಲವು ವರ್ಷಗಳ ಹಿಂದೆ ಅಂಗವಿಕಲ ಎಂಬ ಪದವನ್ನು ಬದಲಾಯಿಸಿ ವಿಕಲಚೇತನರು ಅಥವಾ ವಿಶೇಷಚೇತನರು ಅಥವಾ ದಿವ್ಯಾಂಗ ಚೇತನರು ಎಂಬುದಾಗಿ ಸರ್ಕಾರದ ಮಟ್ಟದಲ್ಲಿ ಬದಲಾಯಿಸಲಾಗಿದೆ.

ಏಕೆಂದರೆ ದೇಹದ ಯಾವುದೇ ಭಾಗದ ಅಸಹಜತೆ ಅಥವಾ ನ್ಯೂನ್ಯತೆ ಒಂದು ದೌರ್ಬಲ್ಯ, ಅದನ್ನು ಮತ್ತೆ ಮತ್ತೆ ಹೇಳಿ ಅಂಗವಿಕಲರು ಎಂದರೆ ಅದೊಂದು ವ್ಯಕ್ತಿ ನಿಂದನೆಯಾಗಬಹುದು ಮತ್ತು ಅವರಲ್ಲಿ ಕೀಳರಿಮೆ ಉಂಟುಮಾಡುತ್ತದೆ ಎಂಬ ಕಾರಣದಿಂದ ಅದನ್ನು ದಿವ್ಯಾಂಗ ಚೇತನ ಎಂದು ಬದಲಾಯಿಸಲಾಯಿತು.

ಅನೇಕ ಸಾಮಾನ್ಯ ಜನರಿಗೆ ಇದು ಒಂದು ರೀತಿ ಆಶ್ಚರ್ಯಕರ ಎನಿಸುತ್ತಿತ್ತು. ಒಂದು ಅಂಗವಿಕಲತೆ ದಿವ್ಯಾಂಗ ಹೇಗಾಗುತ್ತದೆ ಎಂಬ ಒಳ ಮನಸ್ಸಿನ ಪ್ರಶ್ನೆಗೆ ಉತ್ತರ ರೂಪದಲ್ಲಿ ಅನೇಕ ಉದಾಹರಣೆಗಳಿವೆ.

ಅವರಲ್ಲಿ ಪ್ರಮುಖರೊಬ್ಬರು ಇಲ್ಲಿದ್ದಾರೆ, ಅವರೇ ಈಗಿನ ಪಶ್ಚಿಮ ಬಂಗಾಳದ ಐತಿಹಾಸಿಕ ಜಿಲ್ಲೆ ಮಿಡ್ನಾಪುರದ ವಿಶೇಷ ಜಿಲ್ಲಾಧಿಕಾರಿ ಶ್ರೀ ಕೆಂಪ ಹೊನ್ನಯ್ಯನವರು, ದಕ್ಷಿಣ ಭಾರತದ ಮೊದಲ ದೃಷ್ಠಿಯಿಲ್ಲದ ಐಎಎಸ್ ಅಧಿಕಾರಿ..

ನನ್ನ ಮೈಸೂರಿನ ಆತ್ಮೀಯ ಗೆಳೆಯರು ಒಂದು ದಿನ ಕರೆ ಮಾಡಿ ಮಿಡ್ನಾಪುರದ ವಿಶೇಷ ಜಿಲ್ಲಾಧಿಕಾರಿಯವರು ನಿಮ್ಮೊಂದಿಗೆ ಮಾತನಾಡಬೇಕಿದೆ. ಅವರು ನಿಮ್ಮ ಬರಹಗಳನ್ನು ಓದಿ ಸದಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು. ಹಾಗೆಯೇ
ಶ್ರೀ ಕೆಂಪ ಹೊನ್ನಯ್ಯನವರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಕೆಲವು ವಿಷಯಗಳನ್ನು ಚರ್ಚಿಸಿ ಒಮ್ಮೆ ಮಿಡ್ನಾಪುರಕ್ಕೆ ಅವರ ಅತಿಥಿಯಾಗಿ ಬರಲು ಆಹ್ವಾನಿಸಿದರು. ನಾನು ಬಹಳ ಹಿಂದೆ ಕೊಲ್ಕತ್ತಾ ಪ್ರವಾಸ ಮಾಡಿದ್ದೆ. ಈಗ ಈ ನೆಪದಲ್ಲಿ ಮತ್ತೊಮ್ಮೆ ಪಶ್ಚಿಮ ಬಂಗಾಳದ ರಾಜಧಾನಿ ಮತ್ತು ಐತಿಹಾಸಿಕ ಮಿಡ್ನಾಪುರ ಜಿಲ್ಲೆಯನ್ನು ನೋಡುವ ಸಲುವಾಗಿ ಗೆಳೆಯರೊಂದಿಗೆ ಮಿಡ್ನಾಪುರಕ್ಕೆ ಭೇಟಿ ನೀಡಿದೆ.

Klive Special Article ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನವರಾದ, 2017 ನೇ ಬ್ಯಾಚಿನ ಐಎಎಸ್ ಅಧಿಕಾರಿ ಶ್ರೀ ಕೆಂಪ ಹೊನ್ನಯ್ಯನವರು ಕಳೆದ ಏಳು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಕಳೆದ ಮೂರು ವರ್ಷಗಳಿಂದ ಮಿಡ್ನಾಪುರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದಾರೆ.

ಅವರನ್ನು ಮೊದಲ ಬಾರಿ ಮಿಡ್ನಾಪುರದಲ್ಲಿ ಭೇಟಿಯಾದಾಗ ಅವರ ಫಿಸಿಕಲ್ ಅಪಿಯರೆನ್ಸ್ ನಿಜಕ್ಕೂ ಗಮನ ಸೆಳೆಯಿತು. ಸಿನಿಮಾ ನಟನ ರೀತಿಯಲ್ಲಿ ದೃಷ್ಟಿ ಹೊರತುಪಡಿಸಿ ಆರೋಗ್ಯಕರ ದೈಹಿಕ ರಚನೆ ಹೊಂದಿದ್ದ ಕೆಂಪ ಹೊನ್ನಯ್ಯನವರು ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಅವರೇ ನಮ್ಮನ್ನು ಉಳಿಸಿದ್ದ ಅತಿಥಿಗೃಹಕ್ಕೆ ಬಂದರು. ಅಲ್ಲಿ ನಮಗೆಲ್ಲ ಆತ್ಮೀಯ ಸ್ವಾಗತ ಕೋರಿ ಆತಿಥ್ಯ ನೀಡಿದರು.

ಪ್ರೀತಿಸಿ ಮದುವೆಯಾದ ಈ ಜೋಡಿಯದು ಒಂದು ಆದರ್ಶ ಕುಟುಂಬ. ಆ ಹೆಣ್ಣು ಮಗಳು ಮನೆಯವರ ಪ್ರತಿರೋಧವನ್ನು ಎದುರಿಸಿ ಇವರನ್ನು ಮದುವೆಯಾದ ಪ್ರಕ್ರಿಯೆ ಪ್ರೀತಿಯ ಭಾವ ತರಂಗಗಳ ವೈಶಾಲ್ಯತೆಗೆ ಎಲ್ಲೆ ಮೀರಿದ
ಅರ್ಥದ ಅತ್ಯುತ್ತಮ ಉದಾಹರಣೆ.

ಪಶ್ಚಿಮ ಬಂಗಾಳ ರಾಜ್ಯದ ಮಿಡ್ನಾಪುರ ಜಿಲ್ಲೆ ಭಾರತದ ಒಂದು ಐತಿಹಾಸಿಕ ಮಹತ್ವದ ಸ್ಥಳ. ವಿಸ್ತಾರದಲ್ಲಿ ಸಹ ಬಂಗಾಳದ ಬಹುದೊಡ್ಡ ಜಿಲ್ಲೆಯಾಗಿದೆ. ಭಾರತ ಸ್ವಾತಂತ್ರ್ಯ ಹೋರಾಟಗಾರ ಧೀರೋದಾತ್ತ ಖುದಿರಾಮ್ ಬೋಸ್ ಇದೇ ಮಿಡ್ನಾಪುರದವರು. ಖ್ಯಾತ ಹಿಂದಿ ಸಾಹಿತಿ ಮತ್ತು ಸಾಮಾಜಿಕ ಹೋರಾಟಗಾರ ಈಶ್ವರ ಚಂದ್ರ ವಿದ್ಯಾಸಾಗರ ಅವರು ಸಹ ಮಿಡ್ನಾಪುರ ಜಿಲ್ಲೆಯವರೇ. ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಸ್ವಾಭಿಮಾನಿ ನೆಲ. ಇಂತಹ ಜಿಲ್ಲೆಯಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕೆಂಪಹೊನ್ನಯ್ಯನವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಹಾಗೂ ಅಲ್ಲಿನ ಮುಖ್ಯಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿ ಅವರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಕಣ್ಣು ಕಾಣದ ಜಿಲ್ಲಾಧಿಕಾರಿಯೊಬ್ಬರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವ ಕುತೂಹಲ ಅನೇಕರಿಗೆ ಇದೆ. ಆದರೆ ದೃಷ್ಟಿ ಇರುವ ಎಲ್ಲರಿಗಿಂತಲೂ ಸ್ಪಷ್ಟವಾಗಿ ತಮ್ಮ ಮುಂದಿನ ಫೈಲ್ಗಳನ್ನು ಅರ್ಥ ಮಾಡಿಕೊಂಡು ಡಿಜಿಟಲ್ ಸಹಿಯನ್ನು ಉಪಯೋಗಿಸಿಕೊಂಡು ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆಡಳಿತಾತ್ಮಕವಾಗಿ ಅತ್ಯುತ್ತಮ ಕೆಲಸ ಮಾಡಲು ಯಾವ ತೊಂದರೆಯೂ ಇಲ್ಲ. ಅದಕ್ಕೆಂದೇ ಹೇಳಿದ್ದು ಅವರು ಒಬ್ಬ ದಿವ್ಯಾಂಗ ಚೇತನರು. ಆಡಳಿತಾತ್ಮಕವಾಗಿ ಯಾವುದೇ ಸಮಸ್ಯೆಯನ್ನು ಎದುರಿಸದೆ, ಕೆಲವೊಮ್ಮೆ ಎದುರಾಗುವ ಕ್ಲಿಷ್ಟಕರ ಸನ್ನಿವೇಶದಲ್ಲಿ ಆಧುನಿಕ ತಂತ್ರಜ್ಞಾನ ಅವರಿಗೆ ಸಹಾಯ ಮಾಡಿದೆ.

ಅವರೊಂದಿಗೆ ಸಾಕಷ್ಟು ಮಾತುಕತೆ, ಚರ್ಚೆ, ಸಂವಾದ, ಸಂದರ್ಶನ ನಡೆಯಿತು. ತಮ್ಮ ಮಾತೃ ಭೂಮಿ ಕರ್ನಾಟಕ ರಾಜ್ಯದ ಬಗ್ಗೆ, ತಾಯಿ ಭಾಷೆ ಕನ್ನಡದ ಬಗ್ಗೆ ಅವರು ತೀವ್ರವಾದ ಅಭಿಮಾನ ಹೊಂದಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳೇ ಆಗಲಿ, ನೀಟ್ ಪರೀಕ್ಷೆಗಳೇ ಆಗಲಿ, ಕನ್ನಡ ತಾಯಿ ಭಾಷೆಯಲ್ಲಿ ಅವಕಾಶ ನೀಡುವುದು ಸಂವಿಧಾನಾತ್ಮಕ ಹಕ್ಕಾಗಿದೆ. ಸಂವಿಧಾನಾತ್ಮಕವಾಗಿ ಎಲ್ಲಾ 22 ಭಾಷೆಗಳಿಗೂ ಸಮಾನ ಅವಕಾಶ ನೀಡಬೇಕು. ನಮ್ಮ ಮಾತೃಭಾಷೆಯಲ್ಲಿ ನಾವು ಓದಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಏಕೆಂದರೆ ತಾಯಿ ಭಾಷೆಯೇ ನಿಜವಾದ ಅರಿವಿನ ಭಾಷೆ. ನಮ್ಮದಲ್ಲದ ಇತರೆ ಭಾಷೆಗಳು ಜ್ಞಾನ, ಸಂಪರ್ಕ, ಉದ್ಯೋಗ, ವ್ಯವಹಾರದ ದೃಷ್ಟಿಯಿಂದ ಉತ್ತಮವಾಗಬಹುದೇ ಹೊರತು, ನಮ್ಮೊಳಗಿನ ಅರಿವನ್ನು ಸಂಪೂರ್ಣ ಪ್ರಮಾಣದಲ್ಲಿ ಹೊರ ಹಾಕುವುದು ಕಷ್ಟ. ಒಂದು ತಾಯಿ ಭಾಷೆಯಲ್ಲಿ ಆ ನೆಲದ ಸಂಸ್ಕೃತಿ ಅಡಗಿರುತ್ತದೆ ಎಂಬುದನ್ನು ಅತ್ಯಂತ ಪ್ರಾಮಾಣಿಕವಾಗಿ, ಅರ್ಥಗರ್ಭಿತವಾಗಿ ಮಾತನಾಡಿದರು.

ಅವರನ್ನು ನೀವು ಐಎಎಸ್ ಪಾಸಾಗಲು ನಿಮ್ಮೊಳಗಿನ ಸಹಜ ಪ್ರತಿಭೆ ಕಾರಣವೋ
ಅಥವಾ ನೀವು ಸಾಕಷ್ಟು ಶ್ರಮವಹಿಸಿ ಈ ಪರೀಕ್ಷೆಯನ್ನು ಪಾಸು ಮಾಡಿದಿರೋ ಎಂಬುದಾಗಿ ಕೇಳಿದಾಗ ಅದಕ್ಕೆ ಅವರು ಕೊಟ್ಟ ಉತ್ತರ ಬಹುತೇಕ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವವರಿಗೆ ಮಾರ್ಗದರ್ಶನವಾಗಬಹುದು, ಪ್ರೇರಣೆಯೂ ಆಗಬಹುದು.
ಅವರು ಹೇಳಿದ್ದು ” ನಾನು ಇತಿಹಾಸವನ್ನು ಓದುವಾಗ ಅದು ನನ್ನ ಇತಿಹಾಸ, ನನ್ನ ಮನೆಯ ಇತಿಹಾಸ, ನನ್ನ ಸಮಾಜದ ಇತಿಹಾಸ ಎಂಬುದಾಗಿ ಓದುತ್ತಿದ್ದೆ. ವಿಜ್ಞಾನವನ್ನು ಓದುವಾಗ ಅದು ನನಗೆ ಸಂಬಂಧಿಸಿದೆ ನನ್ನದೇ ವಿಜ್ಞಾನ ಎಂಬುದಾಗಿ ಓದುತ್ತಿದ್ದೆ. ಗಣಿತವನ್ನು ಓದುವಾಗ ಅದು ನನ್ನದೇ ಲೆಕ್ಕಾಚಾರ, ನನ್ನ ಬದುಕಿನ ಲೆಕ್ಕಾಚಾರ ಎಂದೇ ಭಾವಿಸಿ ಅದನ್ನು ಓದುತ್ತಿದ್ದೆ. ಹೀಗೆ ಯಾವುದೇ ವಿಷಯವನ್ನು ಅದು ನನ್ನದು, ನನಗೆ ಸಂಬಂಧಿಸಿದ್ದು ಎನ್ನುವ ಭಾವದಲ್ಲಿ ಓದಿದರೆ ಯಾವ ವಿಷಯವೂ ಕಷ್ಟವಾಗುವುದಿಲ್ಲ ಅಥವಾ ಬೇಸರವೂ ಆಗುವುದಿಲ್ಲ. ಏಕೆಂದರೆ ನಾನು ನನ್ನನ್ನು ಅರಿಯುತ್ತಾ ಮುನ್ನಡೆಯುತ್ತೇನೆ. ಈ ಒಂದು ಭಾವದಲ್ಲಿ ಓದಿದ್ದರಿಂದ ನನಗೆ ಐಎಎಸ್ ಪಾಸ್ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ನಿಜಕ್ಕೂ ಅತ್ಯುತ್ತಮವಾದ, ಸ್ಪೂರ್ತಿದಾಯಕ ಮಾತುಗಳಿವು.‌….

ಈಗಾಗಲೇ ಏಳು ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರತರಾಗಿರುವ ಶ್ರೀ ಕೆಂಪಹೊನ್ನಯ್ಯನವರು ಕರ್ನಾಟಕದಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಅದಕ್ಕೆ ಏನು ಕಾನೂನಾತ್ಮಕ ತೊಡಕುಗಳಿದೆಯೋ ಗೊತ್ತಿಲ್ಲ. ಆದರೆ ಅವರು ನಮ್ಮ ರಾಜ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತರೆ ಖಂಡಿತವಾಗಲೂ ರಾಜ್ಯಕ್ಕೆ ಒಬ್ಬ ಅತ್ಯುತ್ತಮ ಮತ್ತು ಉಪಯುಕ್ತ ಐಎಎಸ್ ಅಧಿಕಾರಿ ದೊರೆಯುತ್ತಾರೆ. ಕೇವಲ ಅರಳಿತಾತ್ಮಕವಾಗಿ ಮಾತ್ರವಲ್ಲ ಇತರರಿಗೆ ಸ್ಪೂರ್ತಿಯಾಗಿ, ದಿವ್ಯಾಂಗ ಚೇತನರಿಗೆ ಆದರ್ಶವಾಗಿ, ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಮಾದರಿಯಾಗಿ ಶ್ರೀ ಕೆಂಪಹೊನ್ನಯ್ಯನವರು ಈ ನೆಲದಲ್ಲಿ ಸೇವೆ ಸಲ್ಲಿಸುವಂತಾಗಲಿ……

ಅವರ ಪ್ರತಿಭೆ ಮತ್ತು ಚಿಂತನೆಗಳ ಬಗ್ಗೆ ಹೇಳಲು ಸಾಕಷ್ಟು ವಿಷಯಗಳಿವೆ. ಆದರೆ ಅವರು ಉನ್ನತ ಸರ್ಕಾರಿ ಅಧಿಕಾರಿಯಾಗಿ ರುವುದರಿಂದ ಎಚ್ಚರಿಕೆಯಾಗಿ ಕೆಲವನ್ನು ಮಾತ್ರ ಸರಳವಾಗಿ ಹೇಳಿದ್ದೇನೆ. ನಮ್ಮ ನಡುವಿನ ಸಮಕಾಲೀನ ಪ್ರತಿಭೆಗೆ ಶುಭಾಷಯಗಳನ್ನು ಕೋರುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……….

Kuppalli ನವೆಂಬರ್ 15 ರಿಂದ ಕುಪ್ಪಳಿ ಪರಿಸರದಲ್ಲಿ ಚಾರಣ ಆಸಕ್ತರಿಗೆ ಮಾಹಿತಿ

0

Kuppalli YHAI ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಸಹಕಾರದಿಂದ ಬರುವ ನವೆಂಬರ್ 15, 16, 17 ರಂದು ಮೂರು ದಿನಗಳ ಮಲೆನಾಡು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮ ವನ್ನು ಕುಪ್ಪಳ್ಳಿ ಯ ಸುತ್ತ ಮುತ್ತಲಿನ ಪರಿಸರದಲ್ಲಿ ಹಮ್ಮಿಕೊಂಡಿದ್ದೇವೆ ..

ಈ ಮೂರು ದಿನದ ಚಾರಣದಲ್ಲಿ ಕವಲೇದುರ್ಗ , ಕೋಟೆಗುಡ್ಡ , ಆಲೆಮನೆ, ಕಗ್ಗ, ಅಶೋಕವನ, ಕವಿಶೈಲ ದಂತಹ ಅನೇಕ ಸ್ಥಳ ಗಳನ್ನು ಬೇಟಿ ನೀಡಲಿದ್ದೇವೆ…

ಈ ಚಾರಣ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ಪ್ರತಿಷ್ಠಾನದ ಶ್ರೀ ಕಡಿದಾಳ್ ಪ್ರಕಾಶ್, YHAI ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಹಾಗೂ ಸ್ನೇಹಜೀವಿ ಶ್ರೀ ವಿಜಯಕುಮಾರ್, ಆಗುಂಬೆಯ ಉರಗ ತಜ್ಞ ಶ್ರೀ ಗೌರಿಶಂಕರ್, ತೀರ್ಥಹಳ್ಳಿ ಯ ಪಕ್ಷಿ ತಜ್ಞ ಶ್ರೀ k s ಭಟ್ ಹಾಗೂ YHAI ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ …

Kuppalli ರಾಜ್ಯ ದ ಅನೇಕ ಜಿಲ್ಲೆ ಗಳಿಂದ ಆಗಮಿಸುವ ಚಾರಣಿಗರ ಜೊತೆ ಶಿವಮೊಗ್ಗದ ಸಾಹಸಿಗರಿಗಾಗಿ ಸುಮಾರು 25 ಸೀಟು ಗಳನ್ನು ಕಾಯ್ದೀರಿಸಿದ್ದೇವೆ…

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ…
ಹರೀಶ್ ಪಂಡಿತ್ 9886422078
ಪ್ರಶಾಂತ್ 9353504801
ರಾಘವೇಂದ್ರ 7795516155

Shivaganga Yoga Centre ಯೋಗದಿಂದ ಮಾನಸಿಕ ಖಿನ್ನತೆ ದೂರ ಮತ್ತು ಉತ್ತಮ ಆರೋಗ್ಯ- ಸಿ.ವಿ.ರುದ್ರಾರಾಧ್ಯ

0

Shivaganga Yoga Centre ಯೋಗ ಅಭ್ಯಾಸದಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ. ನಮಗೆ ಸದಾ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುವ ಜತೆಯಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಹೇಳಿದರು.
ನಗರದ ಬೊಮ್ಮನಕಟ್ಟೆಯ ಮಮತಾ ನಗರದಲ್ಲಿ ಆಯೋಜಿಸಿದ್ದ 20 ದಿನಗಳ ಉಚಿತ ಯೋಗ ಶಿಬಿರದ ಸಮಾರೋಪ ಹಾಗೂ 32ನೇ ಶಾಖೆ ಪ್ರಾರಂಭೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಕರಾತ್ಮಕ ಭಾವನೆಗಳನ್ನು ದೂರ ಮಾಡುವುದರ ಜತೆಯಲ್ಲಿ ಮನುಷ್ಯನ ಮನಸ್ಸನ್ನು ತಿಳಿಗೊಳಿಸುತ್ತದೆ. ಮುಖದಲ್ಲಿ ಕಾಂತಿ ಹೆಚ್ಚಿಸುತ್ತದೆ. ದ್ವೇಷ ಅಸೂಹೆಗಳನ್ನು ಕಡಿಮೆಗೊಳಿಸುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಔಷಧಿಗಳಿಂದ ಗುಣಪಡಿಸಲು ಸಾಧ್ಯವಾಗದ ಕೆಲ ಕಾಯಿಲೆಗಳನ್ನು ಯೋಗದಿಂದ ಗುಣಪಡಿಸಲು ಸಾಧ್ಯವಿದೆ ಎಂದು ಹೇಳಿದರು.
Shivaganga Yoga Centre ಪ್ರತಿ ನಿತ್ಯ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಭಜನೆ ಮಾಡಿದರೆ ಸದಾ ಹಸನ್ಮುಖಿಯಾಗಿರಲು ಸಾಧ್ಯ. ಲವಲವಿಕೆಯಿಂದ ಇರುವ ಜತೆಯಲ್ಲಿ ಆಯುಷ್ಯ ಹೆಚ್ಚಾಗಲು ಸಾಧ್ಯವಾಗುತ್ತದೆ. ಈಗಾಗಲೇ ಶಿವಗಂಗಾ ಯೋಗಕೇಂದ್ರದ ವತಿಯಿಂದ ನಗರದಲ್ಲಿ 32 ಕೇಂದ್ರಗಳಲ್ಲಿ ಉಚಿತವಾಗಿ ಯೋಗ ಕಲಿಸುತ್ತಿದೆ. ಉತ್ತಮ ಆರೋಗ್ಯ ಶೈಲಿ, ಜೀವನಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಯೋಗ ಶಿಕ್ಷಕರಾದ ವಿಜಯಾ ಬಾಯರ್ ಅವರು ಮಾತನಾಡಿ, ಯೋಗ ನಮ್ಮ ಬಾಹ್ಯ ಹಾಗೂ ಆಂತರಿಕ ಸೌಂದರ್ಯ ಹೆಚ್ಚಿಸುವುದರ ಜತೆಗೆ ಕಾಯಿಲೆಗಳಿಂದ ದೂರ ಇರುವಂತೆ ಮಾಡುತ್ತದೆ. ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಹೇಳಿದರು. ಸಹಶಿಕ್ಷಕ ಅಶೋಕ್, ಉಮೇಶ್, ಆಶಾ, ಪುಟ್ಟಸ್ವಾಮಿ, ಶಿವಕುಮಾರ್, ವಿನುತಾ, ತ್ರಿವೇಣಿ, ರೇಣುಕಮ್ಮ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Shivamogga Rangayana ಶಿವಮೊಗ್ಗ ರಂಗಾಯಣದಿಂದ ” ಅಕ್ಟೋಬರ್ 24 ರಿಂದ ನಾಟಕ ಅವಲೋಕನ ಕಾರ್ಯಾಗಾರ- ಪ್ರಸನ್ನ ಡಿ.ಸಾಗರ

0

Shivamogga Rangayana ಹೊಸ ತಲೆಮಾರಿನ ಯುವಕರು ನಾಟಕ ಪ್ರದರ್ಶನಗಳನ್ನು ಆಸ್ವಾದಿಸಿ, ಆ ಪ್ರದರ್ಶನಗಳ ಬಗ್ಗೆ ವಿಶ್ಲೇಷಿಸಿ, ಅದರ ಒಳನೋಟಗಳನ್ನು ಅಕ್ಷರ ರೂಪದಲ್ಲಿ, ವೀಡಿಯೋ ರೂಪದಲ್ಲಿ ವಿಶ್ಲೇಷಿಸುವ ದಿಸೆಯಲ್ಲಿ ಕಾಲೇಜುಗಳಲ್ಲಿ ಓದುತ್ತಿರುವ ಸೃಜನಶೀಲ ಬರಹಗಾರರನ್ನು ಗುರುತಿಸಿ ಅವರಿಗೆ ನಾಟಕ ವಿಶ್ಲೇಷಣೆ ತಿಳಿಸಿಕೊಡಲು ರಂಗಾಯಣವು ‘ನಾಟಕ ಅವಲೋಕನ ಕಾರ್ಯಾಗಾರ’ ಹಮ್ಮಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಡಿ ಸಾಗರ ತಿಳಿಸಿದರು.
ನಾಟಕ ಅವಲೋಕನ ಕಾರ್ಯಾಗಾರ ಕುರಿತು ಮಾಹಿತಿ ನೀಡಲು ರಂಗಾಯಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಹೊಸ ಪ್ರೇಕ್ಷಕರು ರಂಗಭೂಮಿಯೆಡೆಗೆ ಬರುವುದೇ ವಿರಳವಾಗಿರುವ ಈ ಸಂದರ್ಭದಲ್ಲಿ ನಾಟಕ ಪ್ರದರ್ಶನಗಳನ್ನು ಹೊಸ ತಲೆಮಾರಿಗೆ, ಹೊಸ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದರು.
ಯುವಕರ ಬರವಣಿಗೆಗಳಿಗೆ ಇನ್ನೂ ಹೆಚ್ಚು ಬಲ ಕೊಡುವುದೇ ಈ ಕಾರ್ಯಾಗಾರದ ಉದ್ದೇಶ. ಆ ಕಾರಣದಿಂದಾಗಿ ಅಕ್ಟೋಬರ್ 24, 25 ಮತ್ತು 26 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿವಮೊಗ್ಗದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ನಾಟಕ ಅವಲೋಕನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಕರ್ನಾಟಕದ ರಂಗಭೂಮಿಯಲ್ಲಿ ನುರಿತ ರಂಗಕರ್ಮಿಗಳು, ರಂಗ ವಿಮರ್ಶಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು ನಾಟಕ ಓದು, ನಾಟಕ ನೋಡುವ ಕ್ರಮ, ರಂಗನೋಟ, ನಾಟ್ಯಧರ್ಮಿ, ರಂಗ ಅವಲೋಕನ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
Shivamogga Rangayana ಕಾರ್ಯಾಗಾರವನ್ನು ಅ.24 ರ ಬೆಳಿಗ್ಗೆ 10 ಗಂಟೆಗೆ ಹಿರಿಯ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ ವಹಿಸುವರು. ಅತಿಥಿಗಳಾಗಿ ರಂಗಕರ್ಮಿಗಳು ಹಾಗೂ ಕಲಾವಿದರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೊಟ್ರಪ್ಪ ಹಿರೇಮಾಗಡಿ ಆಗಮಿಸುವರು.
ಅ.26 ರಂದು ಸಂಜೆ 5.30 ಕ್ಕೆ ಸಮಾರೋಪ ಸಮಾರಂಭವಿದ್ದು ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಸಮಾರೋಪ ನುಡಿಗಳನ್ನಾಡಲಿದ್ದು ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ ವಹಿಸುವರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮಗಳಲ್ಲಿ ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ, ನಾಟಕ ಅವಲೋಕನ ಕಾರ್ಯಾಗಾರದ ನಿರ್ದೇಶಕರು ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ.ಮೇಟಿ ಮಲ್ಲಿಕಾರ್ಜುನ, ಕಾರ್ಯಾಗಾರದ ಸಂಚಾಲಕರು ಹಾಗೂ ಸಹ್ಯಾದ್ರಿ ಕಲಾ ತಂಡದ ಮುಖ್ಯಸ್ಥರಾದ ಡಾ.ಲವ ಜಿ ಆರ್ ಪಾಲ್ಗೊಳ್ಳುವರು.
ವಿಚಾರ ಮಂಡನೆ ಮತ್ತು ಸಂವಾದ : ದಿ: 25-10-2024 ರಂದು ಬೆಳಿಗ್ಗೆ 11 ರಿಂದ ‘ನಾಟಕದ ಪ್ರವೇಶ ಮತ್ತು ಸಂವಿಧಾನ’ ವಿಚಾರ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ರಂಗನಿರ್ದೇಶಕ, ನಾಟಕಗಾರರಾದ ನಟರಾಜ್ ಹೊನ್ನವಳ್ಳಿ ಪಾಲ್ಗೊಳ್ಳುವರು. 12.30 ರಿಂದ 1 ಗಂಟೆವರೆಗೆ ಶಿಬಿರಾರ್ಥಿಗಳೊಂದಿಗೆ ಸಂವಾದ. ಮಧ್ಯಾಹ್ನ 2 ರಿಂದ 3.30 ರವರೆಗೆ ‘ರಂಗ ಪಠ್ಯಗಳ ವಿಶ್ಲೇಷಣೆ ಹಾಗೂ ವಿಸ್ತರಣೆ’ ಕುರಿತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾಹಕ ಕಾಲೇಜಿನ ಪ್ರೊ.ಟಿ.ಅವಿನಾಶ್ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸುವರು. ಮಧ್ಯಾಹ್ನ 3.45 ರಿಂದ ಸಂಜೆ 6 ಗಂಟೆವರೆಗೆ ಗುಣಮುಖ ನಾಟಕ ಪ್ರದರ್ಶನ ಮತ್ತು ಸಂವಾದವನ್ನು ಪ್ರೊ.ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು.
ದಿ: 25-10-2024 ರಂದು ಬೆಳಿಗ್ಗೆ 10 ರಿಂದ 10.30 ಗುಣಮುಖ ನಾಟಕದ ಕುರಿತು ಮಾತುಕತೆ. 10.40 ರಿಂದ 12.15ರವರೆಗೆ ಬರಹಗಾರ್ತಿ ಹಾಗೂ ಪತ್ರಕರ್ತರಾದ ಪ್ರೀತಿ ನಾಗರಾಜ್‌ರಿಂದ ನಾಟಕ ವಿಶ್ಲೇಷಣೆ ಹಾಗೂ ವಿಮರ್ಶಾತ್ಮಕ ನೋಟ, ಮಧ್ಯಾಹ್ನ 2 ರಿಂದ 3.30 ರವರೆಗೆ ಹಿರಿಯ ರಂಗಕರ್ಮಿ ಹಾಗೂ ರಂಗಾಯನ ಶಿವಮೊಗ್ಗದ ಮಾಜಿ ನಿರ್ದೇಶಕ ಇಕ್ಬಾಲ್‌ರಿಂದ ನಾಟಕದ ಕಟ್ಟುವಿಕೆಯಲ್ಲಿ ನಿರ್ದೇಶಕ ಹಾಗೂ ನೇಪಥ್ಯ ಕುರಿತು ವಿಷಯ ಮಂಡನೆ. 3.45 ರಿಂದ ಸಂಜೆ 6 ಗಂಟೆವರೆಗೆ ಅಗ್ನಿ ಮತ್ತು ಮಳೆ ನಾಟಕ ಪ್ರದರ್ಶನ ಕುರಿತು ಸಂವಾದ ಇರಲಿದೆ.
ದಿ: 26-10-2024 ಬೆಳಿಗ್ಗೆ 10.45 ರಿಂದ ಮಧ್ಯಾಹ್ನ 12.15 ರವರೆಗೆ ನಾಟಕದ ವಿಶ್ಲೇಷಣೆಯಲ್ಲಿ ಬಹು ಮಾಧ್ಯಮಕಗಳ ಬಳಕೆ ಕುರಿತು ಬೆಂಗಳೂರಿನ ವರ್ಡ್ವೈಸ್ ಲಾಂಗ್ವೇಜ್ ಲ್ಯಾಬ್ಸ್ನ ಸಿಇಓ ಅವಿನಾಶ್ ಹೆಗ್ಗೋಡು ವಿಚಾರ ಮಂಡನೆ. ಮಧ್ಯಾಹ್ನ 2 ರಿಂದ 3.30 ರವರೆಗೆ ನಾಟಕದ ವಿಷಯ ವಸ್ತುವಿನ ಗ್ರಹಿಕೆ ಕುರಿತು ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ವೆಂಕಟರಮಣ ವಿಚಾರ ಮಂಡಿಸುವರು. ಈ ಎಲ್ಲ ಕಾರ್ಯಕ್ರಮಗಳನ್ನು ಪ್ರೊ.ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಟಕ ಅವಲೋಕನ ಕಾರ್ಯಾಗಾರ ಕುರಿತಾದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಪತ್ರಿಕಾಗೋಷ್ಟಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ , ಡಾ.ಲವ ಜಿ ಆರ್ ಉಪಸ್ಥಿತರಿದ್ದರು.

Forest Department ಸಾಗರ ತಾಲ್ಲೂಕಿನಲ್ಲಿ ಅಕ್ರಮ ಅಕೇಶಿಯ ಮರ ಕಡಿತಲೆ. ಡಿಎಫ್ಓ ಮೋಹನ್ ಭೇಟಿ, ಪರಿಶೀಲನೆ

0

Forest Department ಸಾಗರ ತಾಲೂಕಿನ ಹೊಸಹಳ್ಳಿ, ಹಂಸಗಾರು ಮತ್ತು ಗಿಳಿಗಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಕೇಶಿಯಾ ಮರಗಳ ಕಡಿತಲೆ ಮತ್ತು ಸಾಗಾಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರು ದಿನಗಳ ಒಳಗಾಗಿ ತನಿಖೆ ನಡೆಸಿ ವರದಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Forest Department ಈ ಕುರಿತು ಮಾತನಾಡಿದ ಡಿಎಫ್​ಒ ಮೋಹನ್, “ಅಕ್ರಮವಾಗಿ ಅಕೇಶಿಯಾ ಮರಗಳ ಕಡಿತಲೆ ಮತ್ತು ಸಾಗಣೆ ಸಂಬಂಧ ಗ್ರಾಮಸ್ಥರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದ ಹಿನ್ನೆಲೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ರೇಂಜರ್​ ಕೊಟ್ಟ ತನಿಖಾ ವರದಿಯನ್ನು ಉನ್ನತಾಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ತಲುಪಿಸಲಾಗುತ್ತದೆ” ಎಂದು ತಿಳಿಸಿದರು.
ಸ್ಥಳೀಯರಾದ ಹರ್ಷ ಮಾತನಾಡಿ, “ಹೊಸಹಳ್ಳಿ ಗ್ರಾಮದ ಸರ್ಕಾರಿ ಅಕೇಶಿಯಾ ನೆಡುತೋಪಿನಲ್ಲಿ ಐದಾರು ವರ್ಷಗಳಿಂದ ಅಕ್ರಮವಾಗಿ ಅಕೇಶಿಯಾ ಮರಗಳ ಕಡಿತಲೆ‌ ಮಾಡಲಾಗುತ್ತಿದೆ. ಈ ಕುರಿತು ಕ್ರಮ ಜರುಗಿಸಬೇಕಾದ ಅರಣ್ಯಾಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಜರುಗಿಸಬೇಕು ಹಾಗೂ ಅವರನ್ನು ಕೆಲಸದಿಂದ ವಜಾ ಮಾಡಬೇಕು” ಎಂದು ಆಗ್ರಹಿಸಿದರು.

Karnataka Sahitya Academy ಯುವಕವಿಗಳೆ! ಕವಿತೆ ಕಳಿಸಲು ನಿಮಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಹ್ವಾನ

0

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ವಿಭಾಗವಾರು 20 ರಿಂದ 40 ವರ್ಷದ ಕವಿಗಳಿಗೆ ಯುವಕವಿ ಗೋಷ್ಠಿಯನ್ನು ಆಯೋಜಿಸಿದೆ.
Karnataka Sahitya Academy ಆಸಕ್ತ ಯುವ ಕವಿಗಳು ಅ. 30 ರ ಒಳಗೆ ಮೂರು ಕವಿತೆಗಳನ್ನು ಕಳುಹಿಸಬಹುದಾಗಿದೆ. ಕವಿಗಳು ಕವಿತೆಯನ್ನು ಕಳುಹಿಸುವಾಗ ಕರ್ನಾಟಕ ಸಾಹಿತ್ಯ ಜಾಲತಾಣ http:karnatakasahithyaacademy.org ಯಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ತಿಳಿಸಿದ್ದಾರೆ.

Police Martyrs’ Day  ಟೀಕೆಗಳಿಗೆ ತಲೆಕಡಿಸಕೊಳ್ಳದೇ ಕರ್ತವ್ಯ ನಿರ್ವಹಿಸಿ- ನ್ಯಾ.ಮಂಜುನಾಥ ನಾಯಕ್

0

Police Martyrs’ Day  ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಸಮಾಜದ ಶಾಂತಿಯ ಬಗ್ಗೆ ಕೆಲಸ ನಿರ್ವಹಿಸಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ ಪೊಲೀಸರಿಗೆ ಕಿವಿಮಾತು ಹೇಳಿದರು.
ಡಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಲೀಸರ ಸೇವೆ ಅತ್ಯಮೂಲ್ಯವಾದುದು. ಅವರ ಬದ್ಧತೆ ಶ್ಲಾಘನೀಯ. ತಮ್ಮ ಕೆಲಸದ ಅವಧಿಯಲ್ಲಿ ಮರಣ ಹೊಂದಿದ ಹುತಾತ್ಮ ಪೊಲೀಸರನ್ನು ಸ್ಮರಣೆ ಮಾಡಿಕೊಳ್ಳುವುದು. ನಮ್ಮ ಕರ್ತವ್ಯವಾಗಿದೆ. ಒಂದು ಅಂಕಿ ಅಂಶದ ಪ್ರಕಾರ ದೇಶದಲ್ಲಿ ಸೈನಿಕರಿಗಿಂತ ಪೊಲೀಸರೇ ಹೆಚ್ಚು ಹುತಾತ್ಮರಾಗಿದ್ದಾರೆ. ಇದನ್ನು ನೋಡಿದರೆ ಪೊಲೀಸರ ಕೆಲಸ ಎಷ್ಟು ಕಠಿಣವಾದುದು ಮತ್ತು ಒತ್ತಡದಲ್ಲಿರುತ್ತದೆ ಎಂದು ಗೊತ್ತಾಗುತ್ತದೆ ಎಂದರು.
Police Martyrs’ Day  ಬಹುಶಃ ಪೊಲೀಸರು ಹೆಚ್ಚು ಟೀಕೆಗೆ ಒಳಗಾಗುತ್ತಿದ್ದಾರೆ. ರಾಜಕೀಯ ಕ್ಷೇತ್ರದಿಂದ ಹಿಡಿದು ಮಾಧ್ಯಮ ಕ್ಷೇತ್ರದವರೆಗೂ ಪೊಲೀಸರನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ. ಆದರೆ, ಪೊಲೀಸರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಮ್ಮ ಕರ್ತವ್ಯವನ್ನು ಅವರು ನಿಭಾಯಿಸಿದರೆ ಸಮಾಜ ಸ್ವಸ್ಥವಾಗಿರುತ್ತದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ತುಂಬಾ ಚೆನ್ನಾಗಿದೆ. ಇದಕ್ಕಾಗಿ ಜಿಲ್ಲೆಯ ಪೊಲೀಸ್ ಇಲಾಖೆಗೆ ಅಭಿನಂದನೆ ಹೇಳುತ್ತೇನೆ. ಪೊಲೀಸರು ಸಮಾಜದ ಎಲ್ಲಾ ಸ್ತರಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಅನೇಕ ಬಾರಿ ನ್ಯಾಯಾಧೀಶರಂತೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೊಂದು ಜವಾಬ್ದಾರಿಯುತ ಕೆಲಸ. ಹುತಾತ್ಮರಾದ ಪೊಲೀಸ್ ಕುಟುಂಬಕ್ಕೆ ನಮ್ಮೆಲ್ಲರ ಶ್ರದ್ಧಾಂಜಲಿ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹುತಾತ್ಮರ ಪಟ್ಟಿಯನ್ನು ಓದಿದರು. ಜಿಪಂ ಸಿಇಒ ಹೇಮಂತ್, ಎಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಇದ್ದರು.

MESCOM Shivamogga ಅಕ್ಟೋಬರ್ 23, ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM Shivamogga ಶಿವಮೊಗ್ಗ ನಗರದ ಗಾಂಧಿಬಜಾರ್, ಹರಳೆಣ್ಣೆಕೇರಿ, ಎಲೆರೇವಣ್ಣ ಕೇರಿ, ಓ.ಟಿ.ರಸ್ತೆ, ಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.23 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿಬಜಾರ್, ಹರಳೆಣ್ಣೆಕೇರಿ, ಎಲೆರೇವಣ್ಣ ಕೇರಿ, ಲಷ್ಕರ್ ಮೊಹಲ್ಲಾ, ನಾಗಪ್ಪಕೇರಿ, ಅಶೋಕರಸ್ತೆ, ಕುಚ್ಚುಲಕ್ಕಿ ಕೇರಿ, ತುಳುಜಾ ಭವಾನಿ ರಸ್ತೆ, MESCOM Shivamogga ಸಾವರ್ಕರ್ ನಗರ, ಫಿಶ್ ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.