Friday, March 27, 2026
Friday, March 27, 2026
Home Blog Page 527

Rain In Shivamogga ಪ್ರಚಂಡ ಮಳೆಗೆ ಕೋಳಿ ಫಾರಂ ಕೋಳಿಗಳು ನೀರಲ್ಲಿ ಮುಳುಗಿ ಮಟಾಷ್!

0

Rain In Shivamogga ಮಳೆಯ ಆರ್ಭಟದಿಂದ ಹಾನಿಗೆ ಸಾಕ್ಷಿ ಎಂಬಂತೆ ಶಿವಮೊಗ್ಗ ತಾಲ್ಲೂಕು ಉಂಬ್ಳೆಬೈಲಿನಲ್ಲಿ ಕೋಳಿಫಾರಂ ಜಲಾವೃತಗೊಂಡಿದ್ದು, ಸಾವಿರಾರು ಕೋಳಿಗಳು ಸಾವನ್ನಪ್ಪಿವೆ.

ಇಲ್ಲಿನ ಕೈದೊಟ್ಲು ಗ್ರಾಮದಲ್ಲಿನ ಚಂದ್ರೇಗೌಡ ಎಂಬವರಿಗೆ ಸೇರಿದ ಕೋಳಿಫಾರಂನಲ್ಲಿ ಸುಮಾರು ಐದು ಸಾವಿರ ಕೋಳಿಗಳಿದ್ದವು. ರಾತ್ರಿಯಿಂದ ಸುರಿದ ಮಳೆ ಕೋಳಿಫಾರಂನೊಳಗೆ ನೀರು ನುಗ್ಗಿದ್ದು ಮೊಣಕಾಲಿನವರೆಗೂ ನೀರು ನಿಂತಿತ್ತು. ಪರಿಣಾಮ ಮೂರು ಸಾವಿರ ಕೋಳಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿವೆ.

Rain In Shivamogga ರಸ್ತೆಗಳು ಜಲಾವೃತ , ನದಿಯ ರೂಪ ತಾಳಿದ ಚರಂಡಿಗಳು
ಇತ್ತ ಗೋಪಾಲಗೌಡ ಬಡಾವಣೆಯಲ್ಲಿ ರಸ್ತೆಯಲ್ಲಿ ಒಂದುವರೆ ಅಡಿ ನೀರು ನಿಂತಿತ್ತು. ಇನ್ನೂ ಚರಂಡಿಗಳು ಮಳೆಗಾಲದ ನದಿಯ ಸ್ವರೂಪ ತಾಳಿದ್ದವು. ಅದೃಷ್ಟಕ್ಕೆ ಯಾವುದೇ ಹಾನಿ ಸಂಭವಿಸಿಲ್ಲವಾದರೂ ಚರಂಡಿಯ ಬ್ಲಾಕ್‌ಗಳು ಕಿತ್ತು ಬರುವಂತೆ ಮೋರಿಗಳಲ್ಲಿ ನೀರು ಹರಿಯುತ್ತಿತ್ತು. ಕಸಕಡ್ಡಿ ರಾಶಿಗೆ ಸಿಲುಕಿ ರಸ್ತೆ ಮೇಲೆ ಚರಂಡಿಯ ನೀರು ಉಕ್ಕೆರಿ ಹರಿಯುತ್ತಿತ್ತು

CM Siddaramaiah “ಕರ್ನಾಟಕದ ತಲಾ ಜಿಎಸ್‌ಡಿಪಿ ದೇಶದಲ್ಲೇ ಅತ್ಯಧಿಕವಾಗಿದೆ.- ಸಿದ್ಧರಾಮಯ್ಯ”

0

CM Siddaramaiah ಕರ್ನಾಟಕ ರಾಜ್ಯ ಆರ್ಥಿಕ ಪ್ರಗತಿಯಲ್ಲಿ ದೇಶದಲ್ಲೇ ಉತ್ತಮ ಸಾಧನೆ ಮಾಡಿದ್ದು, 2023-24ನೇ ಹಣಕಾಸು ಸಾಲಿನಲ್ಲಿ ಶೇ.10.2ರಷ್ಟು ಜಿಎಸ್‌ಡಿಪಿ ಪ್ರಗತಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಈ ಅವಧಿಯಲ್ಲಿ ದೇಶದ ಸರಾಸರಿ ಜಿಎಸ್‌ಡಿಪಿ ಶೇ.8.2 ಆಗಿದೆ. ಕಳೆದ ಬಾರಿ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಐಟಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ.

ನ್ಯಾಷನಲ್‌ ಸ್ಟಾಟಿಸ್ಟಿಕಲ್‌ ಎಸ್ಟಿಮೇಟ್‌ (ಎನ್‌ಎಸ್‌ಸಿ) ಆರಂಭದಲ್ಲಿ ಶೇ. 4ರಷ್ಟು ಕರ್ನಾಟಕದ ಜಿಎಸ್‌ಡಿಪಿ ಅಭಿವೃದ್ಧಿ ದರವನ್ನು ಅಂದಾಜಿಸಿತ್ತು. ಆದರೆ ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯದ ಅಭಿವೃದ್ದಿ ದರ ಶೇ.13.1 ರಷ್ಟಾಗಿದ್ದು, ಎನ್‌ಎಸ್‌ಸಿ ಕರ್ನಾಟಕದ ಪ್ರಗತಿಯನ್ನು ತಪ್ಪಾಗಿ ಅಂದಾಜಿಸಿರುವುದು ಸ್ಪಷ್ಟವಾಗಿದೆ.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಕೃಷಿ ವಲಯದ ಅಭಿವೃದ್ದಿ ಉದ್ದೇಶಿತ ಪ್ರಮಾಣದಲ್ಲಿ ಸಾಧ್ಯವಾಗಿರುವುದಿಲ್ಲ. ಕರ್ನಾಟಕದ Gross State Value Added (ಜಿಎಸ್‌ವಿಎ) ಅಂದರೆ ಒಟ್ಟು ಆರ್ಥಿಕತೆಯಲ್ಲಿ ಐಟಿ ಮತ್ತು ಹಾರ್ಡ್‌ವೇರ್‌ ವಲಯದ ಪಾಲು ಶೇ.28ರಷ್ಟಿದ್ದು, ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಈ ವಲಯ ಜಾಗತಿಕವಾಗಿ ಹಿನ್ನಡೆ ಅನುಭವಿಸಿದೆ. ಭಾರತದ ಐಟಿ ವಲಯ 2022ರ ಹಣಕಾಸು ಸಾಲಿನಲ್ಲಿ ಶೇ.15.5 ರಷ್ಟು ಪ್ರಗತಿ ಕಂಡದ್ದು, 2023ರ ಅವಧಿಯಲ್ಲಿ ಶೇ.8ಕ್ಕೆ ಕುಸಿತ ಅನುಭವಿಸಿದೆ. ಆದರೆ ಉತ್ತಮ ಆಡಳಿತ ಮತ್ತು ಬಹುವಲಯಗಳ ಅಭಿವೃದ್ಧಿಯಿಂದಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಸ್ಥಿರವಾಗಿರುವುದು ಕಂಡು ಬಂದಿದೆ.

CM Siddaramaiah 2024-25ನೇ ಹಣಕಾಸು ಸಾಲಿಗೆ ಎನ್‌ಎಸ್ಸಿ ಕರ್ನಾಟಕ ರಾಜ್ಯಕ್ಕೆ ಶೇ.9.4 ಜಿಎಸ್‌ಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ.10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಹಣಕಾಸು ಸಚಿವಾಲಯ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿರಿಸಿ ಈ ಅವಧಿಯಲ್ಲಿ ಕರ್ನಾಟಕದ ಜಿಎಸ್‌ಡಿಪಿ ದರವನ್ನು ಶೇ.14ರಷ್ಟು ಅಂದಾಜಿಸಿದೆ. 2024ರ ಸೆಪ್ಟಂಬರ್‌ ಅವಧಿಯಲ್ಲಿ ಕರ್ನಾಟಕ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ.10ರಷ್ಟು ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇ.24ರಷ್ಟು ಹೆಚ್ಚಳ ದಾಖಲಿಸಿದ್ದು, ಉತ್ತಮ ಆರ್ಥಿಕತೆಯನ್ನು ತೋರಿಸುತ್ತಿದೆ.

ಕರ್ನಾಟಕದ ತಲಾ ಜಿಎಸ್‌ಡಿಪಿ ದೇಶದಲ್ಲೇ ಅತ್ಯಧಿಕವಾಗಿದೆ. ಗ್ಯಾರಂಟಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳು ಅಭಿವೃದ್ಧಿಯ ಫಲ ಎಲ್ಲಾ ವರ್ಗಗಳಿಗೂ ತಲುಪುವುದನ್ನು ಖಾತ್ರಿಪಡಿಸಿವೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನುfun ಒಂದುಗೂಡಿಸುವ ಕರ್ನಾಟಕದ ಆರ್ಥಿಕ ಮಾದರಿಯ ಯಶಸ್ಸನ್ನು ಇದು ತೋರಿಸುತ್ತದೆ ಎಂದು ಸಿದ್ಧರಾಮಯ್ಯ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Shimoga Police Martyrs’ Day ಪೊಲೀಸ್ ಹುತಾತ್ಮರ ಸೇವೆಯನ್ನ ಸ್ಮರಿಸಿದ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್

0

Shimoga Police Martyrs’ Day ಈ ದಿನ ದಿನಾಂಕ : 21-10-2024 ರಂದು ಪೊಲೀಸ್ ಹುತಾತ್ಮರ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ತವ್ಯದಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಮನವನ್ನು ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದಿನಾಂಕ:21-10-1959 ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಡಿ.ಎಸ್.ಪಿ. ರವರಾದ ಶ್ರೀ.ಕರಣ್ ಸಿಂಗ್ ನೇತೃತ್ವದ 20 ಜನರ ತಂಡ ಭಾರತ ಮತ್ತು ಚೀನಾ ದೇಶದ ಗಡಿ ಪ್ರದೇಶದ ಲಡಾಕ್ ನ ಹಾಟ್ ಸ್ಟಿಂಗ್ ಎಂಬ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವಾಗ ಚೀನಾ ದೇಶದ ಸೈನಿಕರು ಹಠಾತ್ತನೆ ಆಕ್ರಮಣ ಮಾಡಿ ಶ್ರೀ.ಕರಣ್ ಸಿಂಗ್ ಮತ್ತು ಇತರೆ 09 ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದು, ಹುತಾತ್ಮರ ದೇಹಗಳನ್ನು ದಿನಾಂಕ:28-11-1959 ರಂದು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಗಿರುತ್ತದೆ.
ಈ ದಾರುಣ ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದವರ ನೆನಪಿನಲ್ಲಿ ರಾಷ್ಟ್ರಾದ್ಯಾಂತ ಪ್ರತಿ ವರ್ಷ ಅಕ್ಟೋಬರ್ 21 ನೇ ತಾರೀಖಿನಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರತಿ ವರ್ಷದ 21ನೇ ಅಕ್ಟೊಬರ್ ನಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಾಗ, ರಾಷ್ಟ್ರ ರಕ್ಷಣೆ ಮಾಡುವಾಗ ಮತ್ತು ಇತರೆ ಕರ್ತವ್ಯ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿರವರನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಗತ್ತಿದೆ.
ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥ ನಾಯಕ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗರವರು ವಹಿಸಿದ್ದು, ಮುಖ್ಯ ಆಹ್ವಾನಿತರಾಗಿ ಹೇಮಂತ್ ಎನ್,ಐಎಎಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಶಿವಮೊಗ್ಗ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಜಿ ಕೆ ಮಿಥುನ್ ಕುಮಾರ್ ಐಪಿಎಸ್ ರವರು ಮಾತನಾಡಿ, ಹುತಾತ್ಮ ಯೋಧರ ಸೇವೆಯನ್ನು ಸ್ಮರಿಸಿ,
Shimoga Police Martyrs’ Day ಸಮಾಜದ ರಕ್ಷಣಾ ಕರ್ತವ್ಯ ಪರಿಪಾಲನೆಯಲ್ಲಿ ದಿನಾಂಕ: 01-09-2023 ರಿಂದ 31-08-2024 ರ ಅವಧಿಯಲ್ಲಿ ಭಾರತ ದೇಶದಲ್ಲಿ ಒಟ್ಟು 213 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರವರು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ, ಮೃತಪಟ್ಟಿರುತ್ತಾರೆ, ಇದರಲ್ಲಿ ಕರ್ನಾಟಕ ರಾಜ್ಯದ 06 ಪೊಲೀಸ್ ಅಧಿಕಾರಿ / ಸಿಬ್ಬಂದಿರವರು ಮೃತಪಟ್ಟಿದ್ದು ಇವರುಗಳ ಹೆಸರನ್ನು ವಾಚಿಸಿ, ಹುತಾತ್ಮರ ಸ್ತಂಭಕ್ಕೆ ಹೂ ಗುಚ್ಛವನ್ನು ಅರ್ಪಿಸುವ ಮೂಲಕ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಯುವಕುಮಾರ್ ಎಸ್ ಕಮಾಂಡೆಂಟ್ 8ನೇ ಪಡೆ ಕೆ.ಎಸ್.ಆರ್.ಪಿ ಮಾಚೇನಹಳ್ಳಿ, ಶಿವಮೊಗ್ಗ, ಶ್ರೀ ಮಂಜುನಾಥ್ ಅಣಜಿ ಡೆಪ್ಯುಟಿ ಕಮಾಂಡೆಂಟ್, 2ನೇ ಪಡೆ ಕೆ.ಎಸ್.ಐ.ಎಸ್.ಎಫ್, ಶಿವಮೊಗ್ಗ, ಶ್ರೀ ಬಾಬು ಆಂಜನಪ್ಪ ಪೋಲಿಸ್ ಉಪಾಧೀಕ್ಷಕರು ಶಿವಮೊಗ್ಗ-ಎ ಉಪ ವಿಭಾಗ, ಶ್ರೀ ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಬಿ ಉಪ ವಿಭಾಗ, ಶ್ರೀ ಕೃಷ್ಣಮೂರ್ತಿ ಪೋಲಿಸ್ ಉಪಾಧೀಕ್ಷಕರು ಡಿಎಆರ್ ಶಿವಮೊಗ್ಗ, ಶ್ರೀ ಗಜಾನನ ವಾಮನಸುತರ ಪೋಲಿಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ, ಶ್ರೀ ಕೇಶವ್, ಪೋಲಿಸ್ ಉಪಾಧೀಕ್ಷಕರು ಶಿಕಾರಿಪುರ ಉಪವಿಭಾಗ, ಶ್ರೀ ನಾಗರಾಜ್ ಪೋಲಿಸ್ ಉಪಾಧೀಕ್ಷಕರು ಭದ್ರಾವತಿ ಉಪವಿಭಾಗ, ಶ್ರೀ ಸಂಜೀವ್ ಕುಮಾರ್ ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತ ವಾರ್ತೆ, ಶಿವಮೊಗ್ಗ ಮತ್ತು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

N Ravikumar ಜೀವನದಲ್ಲಿ‌ ಧನಾತ್ಮಕತೆ & ಶಾಂತಿ ಭಾವ ಕ್ರೀಡೆಗಳಿಂದ ಲಭ್ಯ- ಎನ್.ರವಿಕುಮಾರ್

0

N Ravikumar ಕ್ರೀಡೆ ಎಂಬುದು ಸಂಘಟಿಕ ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ ಜೀವನದ ಸವಾಲುಗಳನ್ನು ಅತ್ಯಂತ ಧನಾತ್ಮಕ ಮತ್ತು ಶಾಂತ ರೀತಿಯಿಂದ ಎದುರಿಸಲು ಕ್ರೀಡೆ ನಮ್ಮನ್ನು ಸಿದ್ಧಪಡಿಸುತ್ತದೆ
ಹಾಗೂ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಬೋವಿ ನಿಗಮದ ಅಧ್ಯಕ್ಷರಾದ ಎಸ್ ರವಿಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ಶಾಲಾ ಶಿಕ್ಷಣ ಇಲಾಖೆ( ಪದವಿಪೂರ್ವ). ಶಿವಮೊಗ್ಗ. ಮತ್ತು ಮಹೇಶ್ ಪದವಿಪೂರ್ವ ಕಾಲೇಜ್ ಶಿವಮೊಗ್ಗ ಇವರ ಸಹಯೋಗದಲ್ಲಿ 19 ವರ್ಷ ವಯೋಮಿತಿ ಒಳಗಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ 2 ದಿನದ ಬಾಕ್ಸಿಂಗ್ ಕ್ರೀಡಾಕೂಟ 2024 -25 .ನ್ನೂ.. ನೆಹರು ಒಳ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯೂ ಸಹ ತುಂಬಾ ಮುಖ್ಯ ಇದು ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಆ ಯೋಜನೆ ಗೊಂಡಿರುವಂತಹ ಈ ಬಾಕ್ಸಿಂಗ್ ಕ್ರೀಡಾಕೂಟಕ್ಕೆ 17 ಜಿಲ್ಲೆಗಳಿಂದ ಸ್ಪರ್ಧೆಗಳು ಆಗಮಿಸಿದ್ದು ತುಂಬಾ ಸಂತೋಷವಾಗಿದೆ ಎಂದು ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದಿಸಿದರು.. ಶಿವಮೊಗ್ಗ ಜಿಲ್ಲೆ ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಹೆಸರುವಾಸಿಯಾಗಿದೆ ಇಲ್ಲಿನ ಸಾಕಷ್ಟು ಕ್ರೀಡಾಪಟುಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರನ್ನಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ಈ ಕ್ರೀಡೆ ಯಶಸ್ವಿಯಾಗಲಿ ಎಂದು ಹಾರೈಸಿದರು ಇದೇ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಶ್ರೀ ರೇಖಾ ನಾಯಕ ಅವರು ಮಾತನಾಡುತ್ತಾ ಸುಮಾರು 15 ಲಕ್ಷ ವೆಚ್ಚದಲ್ಲಿ ಈ ಬಾಕ್ಸಿಂಗ್ ರೌಂಡ್ ಅನ್ನು ಆಯೋಜಿಸಲಾಗಿದ್ದು ರಾಷ್ಟ್ರಮಟ್ಟದ ಕ್ರೀಡಾಕೂಟದ ತರಹ ವ್ಯವಸ್ಥೆ ಮಾಡಲಾಗಿದೆ ಈ ಕಾರ್ಯಕ್ರಮ ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ನೋಡಿದರು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂತಹ ಕ್ರೀಡೆಗಳು ನಮ್ಮಲ್ಲಿ ಖಿನ್ನತೆಯನ್ನು ಕಡಿಮೆ ಮಾಡುವುದರ ಜೊತೆಗೆ ನಾವು ಸದಾ ಸದೃಢರಾಗಿ ಧನಾತ್ಮಕ ಚಿಂತೆಯಿಂದ ಇರುತ್ತೇವೆ ಎಂದು ಈ ಕ್ರೀಡೆಯನ್ನು ಆಯೋಜಿಸಿದ ಮಹೇಶ್ ಪಿಯು ಕಾಲೇಜ್ ಅವರಿಗೆ ಧನ್ಯವಾದಗಳು ತಿಳಿಸಿದರು ಈ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡೆಯಲ್ಲಿ 160 ಜನ ಸ್ಪರ್ದಾಳುಗಳು ಭಾಗವಹಿಸಿದ್ದು ಅದರಲ್ಲಿ 120 ಯುವಕರು ಹಾಗೂ 40 ಜನ ಯುವತಿಯರು ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು
N Ravikumar ಡಿ ವಿ ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ . ಎಇ ರಾಜಶೇಖರ್ ಅವರು ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ ದೇವರಾಜ್ ಮಂಡನೆಕೊಪ್ಪ. ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ. ಕಾರ್ಯದರ್ಶಿ. ಸಾಯಿ ಸತೀಶ್. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷನ ಜಿ ವಿಜಯಕುಮಾರ್.. ಪಂಡ್ರಿನಾಥ್. ಪಳನಿ ವೇಲು ಶ್ರೀ ಹರಿ. ಶಶಿಕುಮಾರ್. ನಾಗೇಂದ್ರ ಪ್ರಸಾದ್. ಶ್ರೀ ಪ್ರಸನ್ನ ಕೆ. ಹೆಚ್ ವಿ ಶುಭಕರ. ಬೆಂಜಮಿನ್ ಫ್ರಾನ್ಸಿಸ್. ಜಿಎಫ್ ಕುಟ್ರಿ ಜಿಎಫ್ ಕುಟ್ರಿ… ಶಿವಮೊಗ್ಗ ವಿನೋದ್. ಉಪಸ್ಥಿತರಿದ್ದರು

BY Raghavendra ಸಮುದಾಯ ಅಭಿವೃದ್ಧಿಗೆ ಸಂಘಟನೆ ಅವಶ್ಯ- ಬಿ.ವೈ.ರಾಘವೇಂದ್ರ

0

BY Raghavendra ಶಿವಮೊಗ್ಗ ಸಮುದಾಯಗಳು ಸದೃಢವಾಗಲು ಸಂಘಟನೆಯು ಅತ್ಯಂತ ಅವಶ್ಯಕ. ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಸಂಘಟನೆಯು ಮಹತ್ತರ ಪಾತ್ರ ವಹಿಸುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಸ್ಕೌಟ್ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಮಹಾಸಭೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧಕರು ಸಮಾಜದ ಆಸ್ತಿ. ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು. ಹಿರಿಯ ನಾಗರಿಕರ ಸೇವೆ ದೇವರ ಸೇವೆಗೆ ಸಮಾನ. ಜಿಲ್ಲಾ ಗಾಣಿ ಸಮಾಜವು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು 20 ವಿದ್ಯಾರ್ಥಿಗಳಿಗೆ ತಾಯಿಯ ಹೆಸರಿನಲ್ಲಿ 20 ಸಾವಿರ ರೂ. ನಗದು ಬಹುಮಾನ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ, ಗಾಣಿಗ ಸಮಾಜದ ಮುಖಂಡ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ನಮ್ಮ ಸಮಾಜ ತುಂಬಾ ಚಿಕ್ಕ ಸಮಾಜ ಆಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಮಾಜಕ್ಕೆ ಅವಶ್ಯವಿರುವ ಕಟ್ಟಡ ನಿರ್ಮಾಣಕ್ಕೆ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
BY Raghavendra ಭದ್ರಾವತಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಮಾತನಾಡಿ, ರಾಜಕೀಯವಾಗಿ ಉತ್ತಮವಾಗಿ ಬೆಳೆಯಲು ಗಾಣಿಗ ಸಮಾಜ ಬೆನ್ನು ತಟ್ಟಿ ಆಶೀರ್ವದಿಸಿದೆ. ನಮ್ಮ ಗಳಿಕೆಯಲ್ಲಿ ಸಮಾಜಸೇವೆಯು ಸ್ವಲ್ಪ ಹಣ ವಿನಿಯೋಗಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಘಕ್ಕೆ ಅವಶ್ಯವಿರುವ ಕಟ್ಟಡ ನಿರ್ಮಾಣವನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಎಸ್.ಎಸ್.ಸತೀಶ್, ಎನ್.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್ ಎಂ.ಆರ್., ರವಿ.ಎಸ್ , ಇಂದೂಧರ, ಗುರುರಾಜ್, ಆನಂದಕುಮಾರ್, ವಾಗೀಶ್ ಕೋಟಿ, ಸಿದ್ದಲಿಂಗಪ್ಪ, ಜಯಂತ್, ಮಲ್ಲಿಕಾರ್ಜುನ ಕಾನೂರು, ರವೀಶ್, ಎನ್.ಜಿ.ಲೋಕೇಶ್, ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

Bharat Scouts and Guides Shivamogga ಸ್ಕೌಟ್ಸ್ & ಗೈಡ್ಸ್ ನಿಂದ ಉತ್ತಮ ವ್ಯಕ್ತಿತ್ವ ಹಾಗೂ ಕೌಶಲ್ಯ ವೃದ್ಧಿ- ಸಂಸದ ರಾಘವೇಂದ್ರ

0

Bharat Scouts and Guides Shivamogga ಶಿವಮೊಗ್ಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಕೌಟ್ ಮತ್ತು ಗೈಡ್ಸ್ ಸಹಕಾರಿ ಆಗುವುದರ ಜತೆಯಲ್ಲಿ ಕೌಶಲ್ಯ ವೃದ್ಧಿಸಿಕೊಳ್ಳಲು ನೆರವಾಗುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಜಂಬೂರೀ ಆನ್ ದಿ ಏರ್ ( ಜೋಟ ), ಜಂಬೂರೀ ಆನ್ ದಿ ಇಂಟರ್ನೆಟ್ ( ಜೋಟಿ ) ಕಾರ್ಯಕ್ರಮದಲ್ಲಿ ಭಾಗವಹಿಸಿ ಪದಾಧಿಕಾರಿಗಳು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಸ್ಕೌಟ್ಸ್, ಗೈಡ್ಸ್ ಸೇರಿಕೊಂಡರೆ ದೇಶಪ್ರೇಮ, ಸಾಮಾಜಿಕ ಬದ್ಧತೆ ಬೆಳೆಯುತ್ತದೆ. ಮುಂದಿನ ಜೀವನಕ್ಕೂ ಸಹಕಾರಿಯಾಗಲಿದೆ. ಸಂಸ್ಥೆಯ ಎಲ್ಲ ಚಟುವಟಿಕೆಗಳಿಗೆ ನನ್ನ ಸಹಕಾರ ಇರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಸಂಸ್ಥೆಯ ಮುಂದಿನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾರ್ಯಾಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
Bharat Scouts and Guides Shivamogga ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹವ್ಯಾಸಿ ರೇಡಿಯೋದಲ್ಲಿ 12ನೇ ವಯಸ್ಸಿನಲ್ಲಿ ಪರವಾನಿಗೆ ಪಡೆದುಕೊಂಡು ಸಕ್ರಿಯವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸುಭಾಷ್ ಲಕ್ಷ್ಮಣನ್ ಅವರನ್ನು ಸಂಸ್ಥೆ ಮತ್ತು ಶಿವಮೊಗ್ಗ ಹವ್ಯಾಸಿ ರೇಡಿಯೋ ಕ್ಲಬ್ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಸ್ಕೈಪ್ ತಂತ್ರಾಂಶದ ಮೂಲಕ ಮಕ್ಕಳು ದೇಶ ವಿದೇಶದ ಸ್ಕೌಟ್ ಗೈಡ್ ಮಕ್ಕಳೊಂದಿದೆ ಸಂವಹನ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಟ್ಟರು.
ಜಿಲ್ಲಾ ಆಯುಕ್ತ ( ರೋವರ್ ) ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್, ಆರ್.ರಾಘವೇಂದ್ರ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ವಿ.ಅವಲಕ್ಕಿ, ಸಹಾಯಕ ಜಿಲ್ಲಾ ಆಯುಕ್ತ ಶ್ರೀನಿವಾಸ್ ವರ್ಮಾ, ಮಲ್ಲಿಕಾರ್ಜುನ ಕಾನೂರ್, ಸ್ಥಳೀಯ ಸಂಸ್ಥೆ ಸಹಕಾರ್ಯದರ್ಶಿ ಘನಶ್ಯಾಮ್ ಗಿರಿಮಾಜಿ, ಕಬ್ ಮಾಸ್ಟರ್ ಲೋಹಿತ್ ಪ್ರಸಾದ್ ಹೆಚ್. ವಿ. ಹಾಗೂ ವಿವಿಧ ಶಾಲೆ, ಕಾಲೇಜಿನ, ಮುಕ್ತದಳದ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

2024 Dasara Dolls ಗ್ಲೋಬಲ್ ಗೋಕುಲ ಅಂತಾರಾಷ್ಟ್ರೀಯ ದಸರಾ ಗೊಂಬೆ ಪ್ರದರ್ಶನ ಆನ್ ಲೈನ್ ಸ್ಪರ್ಧೆ.ಫಲಿತಾಂಶ ಇಲ್ಲಿದೆ

0

2024 Dasara Dolls ಅಂತರರಾಷ್ಟ್ರೀಯ ನವರಾತ್ರಿ ಗೊಂಬೆ ಪ್ರದರ್ಶನ ದಲ್ಲಿ ಬೆಂಗಳೂರಿನ ಅಶ್ವಿನಿ ಯೋಗೇಶ್ ಗೆ
ದ್ವಿತೀಯ ಸ್ಥಾನ ಲಭಿಸಿದೆ. ಪ್ರಥಮ ಸ್ಥಾನ ಚೆನ್ನೈ ನ ಸರಣ್ಯ ವಿ ರಾಜನ್ ಮತ್ತು ತೃತೀಯ ಸ್ಥಾನ ಅಮೇರಿಕೆ ಯ
ನ್ಯೂಯಾರ್ಕ್ ನ ವಿಜಯಲಕ್ಷ್ಮಿ ರಾಜನ್ ಅವರ ಪಾಲಾಗಿದೆ ಚೆನ್ನೈ ನ ಮೈಲಾಪುರ ದ
ಅರ್ಪಾವಿ ಹಸ್ತಕಲಾ ಸಂಸ್ಥೆ ಈ ಗ್ಲೋಬಲ್ ಗೋಲ -2024 ಸ್ಪರ್ಧೆಯನ್ನು ಆನ್ ಲೈನ್ ನಲ್ಲಿ ಏರ್ಪಡಿಸಿತ್ತು.
ಅಶ್ವಿನಿ ಯೋಗೇಶ್ ಆಕ್ಸೆಂಚರ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಪ್ರತಿವರ್ಷ ದಸರಾ ಹಬ್ಬದಲ್ಲಿ ವಿಷಯಾಧಾರಿತ ಗೊಂಬೆಗಳ ಪ್ರದರ್ಶನ ರೋಹನ್ ಆಕೃತಿ ವಸತಿ ಸಮುಚ್ಚಯದ ತಮ್ಮ ಮನೆಯಲ್ಲಿ ಏರ್ಪಡಿಸುತ್ತಾರೆ.

Vidyaranya ವಿಜಯನಗರ ಜಿಲ್ಲಾಧಿಕಾರಿಗಳಿಗೆಗುರು ವಿದ್ಯಾರಣ್ಯರ ಬಗ್ಗೆ ಮಾಹಿತಿ ಪ್ರಚುರ ಪಡಿಸಲುಸಾರ್ವಜನಿಕ ಮನವಿ

0

Vidyaranya ಹಂಪೆ, ಹೊಸಪೇಟೆ, ಮತ್ತು ಕರ್ನಾಟಕದ ಜನತೆ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಚಾರ್ಯ ಶ್ರೀ ಶ್ರೀ ವಿದ್ಯಾರಣ್ಯ ಗುರುಗಳನ್ನ ಮರೆತುಬಿಟ್ಟಿದ್ದಾರೆ.

ಹೌದು, ಶ್ರೀ ಶ್ರೀ ವಿದ್ಯಾರಣ್ಯ ಗುರುಗಳು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರು ಅವರ ನೆನಪು ಕೇವಲ ಹಂಪೆಯಲ್ಲಿರುವ ಒಂದು ಸಣ್ಣ ದೇಗುಲದಲ್ಲಿ ಅಡಕವಾಗಿಬಿಟ್ಟಿದೆ. ಆದರೆ ಆ ದೇವಾಲಯವೂ ಸಹ ಸದಾ ಕಾಲ ಮುಚ್ಚಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾರಿಂದಾಯಿತು, ಹೇಗೆ ಆಯಿತು ಎಂಬುವುದು ಕೇವಲ ಪುಸ್ತಕದ ಬರವಣಿಗೆಯಲ್ಲಿ ಇಡಲಾಗಿದೆ, ಹಂಪಿನ ನೋಡಲು ಬಂದಂತಹ ಪ್ರವಾಸಗರಿಗೆ ಅಲ್ಲಿಯ ಅಪ್ಪ್ರೋಡ್ ಗೈಡ್ ಗಳು ಸಹ ಸರಿಯಾದ ಮಾರ್ಗದರ್ಶನ ಮತ್ತು ಶ್ರೀ ವಿದ್ಯಾರಣ್ಯ ಗುರುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇರುವುದಿಲ್ಲ

Vidyaranya ಶ್ರೀ ಶ್ರೀ ವಿದ್ಯಾರಣ್ಯ ಗುರುಗಳು ಮಾಡಿದಂತಹ ಕೊಡುಗೆಯನ್ನು ಹಂಪೆ ಮತ್ತು ಹೊಸಪೇಟೆ ಹಾಗೂ ಕರ್ನಾಟಕದ ಜನತೆ ಮರೆತುಬಿಟ್ಟಿದ್ದಾರೆ, ಹಂಪೆ ಮತ್ತು ಹೊಸಪೇಟೆಯಲ್ಲಿ ಎಲ್ಲಿಯೂ ಶ್ರೀ ಗುರುಗಳ ಕಂಚಿನ ಪ್ರತಿಮೆ ಇರುವುದು, ಪುತ್ತಳಿಕೆ ಇಲ್ಲ ಶ್ರೀ ಗುರುಗಳ ಹೆಸರಿನಲ್ಲಿ ಬೀದಿಗಳಿಲ್ಲ ,ಶ್ರೀ ಗುರುಗಳ ಹೆಸರಿನಲ್ಲಿ ಯಾವುದೇ ಶಾಲೆಗಳಿಲ್ಲ, ಶ್ರೀ ಗುರುಗಳ ಹೆಸರಿನಲ್ಲಿ ಎಲ್ಲಿಯೂ ಜಯಂತಿ, ಆಚರಣೆ, ದಿನಚರಣೆ ನಡೆಯುವುದಿಲ್ಲ. ಕರ್ನಾಟಕ ಸರ್ಕಾರ ಎಲ್ಲಾ ಗುರುಗಳ ಎಲ್ಲಾ ಮಹನೀಯರ ಜಯಂತಿಗಳನ್ನ ಆಚರಣೆ ಮಾಡುತ್ತಾರೆ. ಆದರೆ ಕರ್ನಾಟಕ ಸ್ಥಾಪನಾಚಾರ್ಯ ಶ್ರೀ ಶ್ರೀ ವಿದ್ಯಾರಣ್ಯ ಗುರುಗಳ ಜಯಂತಿ ಆಚರಣೆ ಅಥವಾ ಅವರ ಬಗ್ಗೆ ಸ್ಮರಣೆ ಎಲ್ಲಿಯೂ ನಡೆಯುತ್ತಿಲ್ಲ, ಏಕೋ ಗೊತ್ತಾಗದಾಗಿದೆ. ಕರ್ನಾಟಕದ ಜನತೆ ಪ್ರತಿದಿನ ಊಟ ಮಾಡುವಾಗ ಅವರ ಹೆಸರನ್ನ ಸ್ಮರಿಸಿ ಊಟ ಮಾಡಬೇಕು ಏಕೆಂದರೆ ಕರ್ನಾಟಕದಲ್ಲಿ ಹಂಪೆಯ ಸಾಮ್ರಾಜ್ಯವನ್ನು ಕಟ್ಟಿಸಿದ ಮಹಾನ್ ಚೇತನ ಮತ್ತು ಮಹಾನ್ ಗುರುಗಳು ಕಾರಣ ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಇನ್ನೂ ಮುಂದಾದರು ಅವರ ಬಗ್ಗೆ ಸ್ಮರಿಸುವಂತಹ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕು ವಿದ್ಯಾರಣ್ಯರ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಎಂಬುದೇ ನನ್ನ ಆಸೆ. ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಾರೆ ಎಂಬುದು ನನ್ನ ನಂಬಿಕೆ.

ಕರ್ನಾಟಕದ ಎಲ್ಲಾ ವರ್ಗದ ಜನರು ಅವರನ್ನು ನೆನೆಯಬೇಕು ಸದಾ ಕಾಲ ನೆನೆಯಬೇಕು ಕಾರಣ ಶ್ರೀ ಗುರುಗಳನ್ನು ಸ್ಮರಿಸುವಂತಹ ಕಾರ್ಯಕ್ರಮಗಳು ಹಂಪೆ ಹೊಸಪೇಟೆಯಲ್ಲಿ ಸದಾ ಕಾಲ ನಡೆಯುವಂತೆ ಆಗಬೇಕು ಶ್ರೀ ಶ್ರೀ ವಿದ್ಯಾರಣ್ಯ ಗುರುಗಳ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳು ಆಗಲು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳು ಮುಂದಾಗಬೇಕು ನೋಡೋಣ ಮುಂದಿನ ದಿನಗಳಲ್ಲಿ ಶ್ರೀ ಶ್ರೀ ಗುರುಗಳನ್ನ ನೆನೆಯುವಂತಹ ಕಾಲ ಮತ್ತೆ ಬರುತ್ತದೆ ಕಾದು ನೋಡೋಣ.

Madhu Bangarappa ಮೂರು ಎಕರೆ ಒಳಗಿನ ಜಮೀನು ಸಾಗುವಳಿ ಕೃಷಿಕರಿಗೆ ಒಕ್ಕಲೆಬ್ಬಿಸಿ,ನೋಟೀಸ್ ಜಾರಿ ಮಾಡಬೇಡಿ- ಸಚಿವ ಮಧು ಬಂಗಾರಪ್ಪ

0

Madhu Bangarappa ಶಿವಮೊಗ್ಗ ಅಕ್ಟೋಬರ್ 19 ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ. ಯಾವುದೇ ರೈತರು ಧೃತಿಗೆಡಬಾರದು. ಸರ್ಕಾರ ರೈತರ ಪರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಲೋಕೋಪಯೋಗಿ ಭವನದಲ್ಲಿನ ಸಭೆ ನಂತರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.21 ಕ್ಕೆ ಸಾಗರದಲ್ಲಿ ಅರಣ್ಯ ಭೂಮಿ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಕೆಲಸ ಮಾಡುತ್ತಿದೆ.
ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಉತ್ತಮ ನ್ಯಾಯವಾದಿಗಳನ್ನು ನೇಮಿಸಿ ಐಎ ಹಾಕಲಾಗುವುದು. ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಮತ್ತು ನ್ಯಾಯ ಒದಗಿಸಲು ಎಲ್ಲ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ. ರೈತರಿಗೆ ಒಳ್ಳೆಯ ಸುದ್ದಿಯನ್ನೇ ನಿಡುತ್ತೇವೆ. ಕೋರ್ಟ್ ವಿಚಾರ ಸೂಕ್ಷö್ಮವಾಗಿದ್ದು ಹುಷಾರಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಇಂದಿನ ಸಮಸ್ಯೆಯಲ್ಲ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಂತ್ರಸ್ತರು ಧೃತಿಗೆಡಬಾರದು ಎಂದರು.
ಸಂತ್ರಸ್ತರ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲ. ಅದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು. ಮುಳುಗಡೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಹೋರಾಟ ನಡೆಯುತ್ತಿದೆ.
ರೈತರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ. ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. 2015 ರೊಳಗೆ 3 ಎಕರೆ ಒಳಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಯಾವುದೇ ರೀತಿಯ ನೋಟಿಸ್ ನೀಡುವುದು, ತೊಂದರೆ ನೀಡದಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೂ ಎಲ್ಲ ರೀತಿಯ ಭೂ ಕಬಳಿಕೆ ಪ್ರಕರಣ ನಿರ್ವಹಿಸಲು ಜನಪ್ರತಿಧಿಗಳು, ಅಧಿಕಾರಿಗನ್ನೊಳಗೊಂಡ ಅರಣ್ಯ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
Madhu Bangarappa ತುಂಗಾ ನದಿಗೆ ಕಲುಷಿತ ನೀರು ಹೋಗದಂತೆ ಕ್ರಮ ವಹಿಸಲು ಸಮಿತಿ ರಚಿಸಲಾಗುವುದು. ನದಿ ಈಗಾಗಲೇ ಸಾಕಷ್ಟು ಕಲುಷಿತವಾಗಿದೆ. ಮುಂದೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ನದಿ ಸಂರಕ್ಷಣೆಗೆ ಶಾಶ್ವತ ಪರಿಹಾರದ ಕುರಿತು ಪಕ್ಷಾತೀತವಾಗಿ ಯೋಚಿಸಲಾಗುತ್ತಿದೆ. ಬೃಹತ್ ನೀರಾವರಿ ಮತ್ತು ಪಾಲಿಕೆ ಅಧಿಕಾರಿಗಳು ಈ ಕುರಿತು ಸಭೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಎಂಎಡಿಬಿ ಅಧ್ಯಕ್ಷರಾದ ಆರ್.ಎಂ ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮಾಜಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಉಪಸ್ಥಿತರಿದ್ದರು.

RM Manjunatha Gowda ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಬಲಿಷ್ಢವಾಗಬೇಕು- ಆರ್.ಎಂ. ಮಂಜುನಾಥ ಗೌಡ

0

RM Manjunatha Gowda ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಬಲಿಷ್ಠವಾಗಬೇಕು : ಡಾ.ಆರ್ ಎಂ ಮಂಜುನಾಥ ಗೌಡ
ಶಿಮುಲ್ ಸದೃಢವಾಗಿ ಇರಲು ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಬಲಿಷ್ಠವಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡ ಅವರು ತಿಳಿಸಿದರು.
ಶಿವಮೊಗ್ಗ, ಮಾಚೇನಹಳ್ಳಿಯ ಶಿಮುಲ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಹಾಗೂ ಸಹಕಾರ ಇಲಾಖೆ ಇವರ ಸಹಯೋಗದೊಂದಿಗೆ ಶಿವಮೊಗ್ಗ ಸಹಕಾರಿ ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿಗಳ ಮತ್ತು ಸಿಬ್ಬಂದಿಗಳಿಗೆ ಆಯೋಜಿಸಲಾಗಿದ ರಾಜ್ಯಮಟ್ಟದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಬೇಕಾಗಿದ್ದು ಅಧಿಕಾರಿಗಳು ಸಿಬ್ಬಂದಿಗಳು ಈ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ. ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಉಳಿದರೆ ಮಾತ್ರ ಕೆಎಂಎಫ್ ನಂದಿನಿ ಬ್ರಾಂಡ್ ಉಳಿಯಲು ಸಾಧ್ಯ ಸಹಕಾರಿ ಸಂಘಗಳ ಕಾಯ್ದೆಗಳು ಸಾಕಷ್ಟು ತಿದ್ದುಪಡಿಯಾಗಿದ್ದು ಹೊಸ ಕಾಯ್ದೆಗಳ ಅನುಗುಣವಾಗಿ ಅಧಿಕಾರಿಗಳು ಮಾಹಿತಿ ತಿಳಿದುಕೊಳ್ಳಬೇಕು ಅದ್ದರಿಂದ ಕಾರ್ಯಾಗಾರಗಳು ಅಗತ್ಯವಾಗಿದ್ದು ತರಬೇತಿಗಳಲ್ಲಿ ಅಧಿಕಾರಿಗಳು ಹೆಚ್ಚು ತೊಡಗಿಸಿಕೊಳ್ಳಬೇಕು ಆಗ ಮಾತ್ರ ಸಂಸ್ಥೆಗಳ ಬೆಳವಣಿಗೆ ಸಹಕಾರಿ ಆಗಲಿದೆ ಎಂದರು.
ತಾಲೂಕ್ ಕೇಂದ್ರಗಳಲ್ಲಿ ಸಣ್ಣ ಸಣ್ಣ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪ್ರಾಥಮಿಕ ಸಂಘಗಳ ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಗಳು ಕಾರ್ಪೋರೆಟ್ ಮಾದರಿಯಲ್ಲಿ ಸುಧಾರಣೆ ಆಗಬೇಕು ಸ್ಪರ್ಧಾತ್ಮಕ ಯುಗದಲ್ಲಿ ಒಕ್ಕೂಟ ಸದೃಢವಾಗಿ ಇರಲು ಸಹಕಾರಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ಮೌಲ್ಯಗಳ ಅಳವಡಿಸಿಕೊಂಡು ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು ಕೃಷಿ ಕಾರ್ಮಿಕರ ನೆರವು ಆಗಲು ಪ್ರಾಥಮಿಕ ಹಾಲು ಒಕ್ಕೂಟಗಳ ಭದ್ರ ಬುನಾದಿಯಾಗಿದ್ದು ಉತ್ತಮಗುಣ ಮಟ್ಟದ ಮತ್ತು ಪರಿಶುದ್ಧತೆಯನ್ನು ಕಾಪಾಡಿಕೊಂಡು ಇನ್ನೂ ಹೆಚ್ಚಿನ ಮಾರುಕಟ್ಟೆಗಳನ್ನು ಸೃಷ್ಠಿಸಬೇಕಾಗಿದೆ.
ನಂದಿನ ಮಿಲ್ಕ್ ಪಾರ್ಲರ್ ಗಳು ಇಡೀ ರಾಜ್ಯಾದ್ಯಂತ ಕೇಂದ್ರಗಳನ್ನು ಹೊಂದಿದ್ದು ಶಿಮುಲ್ ವತಿಯಿಂದ ತೆರೆಯಲಾಗಿರುವ ಮಿಲ್ಕ್ ಪಾರ್ಲರ್‌ಗಳು ಗುಣಮಟ್ಟ ಪರಿಶೀಲಿಸಿ ಮೂರು ಜಿಲ್ಲೆಗಳಲ್ಲಿ ೫೦೦ ಕ್ಕೂ ಹೆಚ್ಚು ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಎಂದು ಸಲಹೆ ನೀಡಿದರು.
RM Manjunatha Gowda ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಹಾಲು ಉತ್ಪಾದಕರ ಕೊಡುಗೆ ಅಪಾರವಾಗಿದೆ ಅವರ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಸಂಸ್ಥೆಯ ಬೆಳವಣಿಗೆಯೂ ಕೂಡ ಮುಖ್ಯವಾಗಿದೆ. ವಾರ್ಗಿಸ್ ಕುರಿಯನ್ ಅವರು ಹಾಕಿದ ಅಡಿಪಾಯ ದೇಶದಲ್ಲಿ ಅಮುಲ್ ಒಂದು ಬೃಹತ್ ಹಾಲು ಉತ್ಪಾದಕ ಸಂಸ್ಥೆಯಾಗಿದ್ದು ನಂದಿನಿ ಕೂಡ ದೊಡ್ಡ ಬ್ರಾಂಡ್ ಆಗಿ ಬೆಳೆದಿದೆ. ಉತ್ಪಾದನೆ ಮಾರುಕಟ್ಟೆ ನಿರ್ವಹಣೆಗೆ ಬೇಕಾದ ತರಬೇತಿಗಳು ಗುಣಮಟ್ಟ ಮತ್ತು ಸಾಮಾರ್ಥ್ಯ ಹಾಗೂ ಕಾನೂನು ನಿಯಮಗಳ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಬೈಲಾಗಳ ಬಗ್ಗೆ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ತಿಳಿದುಕೊಳ್ಳಲು ತರಬೇತಿಗಳು ಅವಶ್ಯಕವಾಗಿದೆ ಪ್ರತಿಯೊಬ್ಬ ಆಡಳಿತ ಮಂಡಳಿಗಳು ಉಪ ವಿಧಿ ಕಾಯ್ದೆಗಳ ಕುರಿತು ಪ್ರಾಥಮಿಕ ಜ್ಞಾನ ಇರಬೇಕು ಎಂದರು.
ಈ ಸಂದರ್ಭದಲ್ಲಿ ಸಹಕಾರ ಯೂನಿಯನ್ ಅಧ್ಯಕ್ಷರಾದ ಸುರೇಶ್ ವಾಟಗೋಡು, ಶಿಮುಲ್ ಅಧ್ಯಕ್ಷರಾದ ಹೆಚ್ .ಎನ್ ವಿದ್ಯಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ, ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಡಿ.ಆನಂದ್, ಹೆಚ್ ಬಿ ದಿನೇಶ್ ,ಟಿ.ಎಸ್ ದಯಾನಂದ ಗೌಡ್ರು, ಎಸ್ ಕುಮಾರ್, ಯೂನಿಯನ್ ನಿರ್ದೇಶಕರಾದ ಡಿ.ಎಸ್ ಈಶ್ವರಪ್ಪ, ಕರಿಯಪ್ಪ, ನಿಖಿಲ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರಾದ ತೇಜವಮೂರ್ತಿ ಆರ್, ವ್ಯವಸ್ಥಾಪಕ ನಿರ್ದೇಶಕ ಎಸ್‌ಜಿ ಶೇಖರ್, ತರಬೇತಿ ಸಂಪನ್ಮೂಲ ವ್ಯಕ್ತಿ ಜಿ.ಕೆ ರಾಮಪ್ಪ, ಸಿಇಓ ಯಶವಂತ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.