Friday, March 27, 2026
Friday, March 27, 2026
Home Blog Page 528

FIR against Yatnal ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಮತ್ತು ಸಚಿವ ಜಮೀರ್ ವಿರುದ್ದ್ ಅವಹೇಳನ ಹೇಳಿಕೆ:ಯತ್ನಾಳ್ ವಿರುದ್ಧ ಎಫ್ ಐ ಆರ್ ದಾಖಲು

0

FIR against Yatnal ವಿಜಯಪುರ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿದ ಆರೋಪದಡಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರ ವಿರುದ್ಧ ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಜಯಪುರ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಪರಶುರಾಮ ಹೊಸಮಿ ಎಂಬವರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
FIR against Yatnal “ಯತ್ನಾಳ್ ಮತ್ತು ಇತರರು ಹಿಂದೂ-ಮುಸ್ಲಿಮರ ನಡುವೆ ಗಲಭೆ ಸೃಷ್ಟಿಸುವ ಉದ್ದೇಶದಿಂದ ಭಾಷಣ ಮಾಡಿದ್ದು, ಕೋಮುಗಲಭೆ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಭಯದ ವಾತಾವರಣ ಮೂಡಿಸಿದ ಕಾರಣ ಶಾಸಕ ಯತ್ನಾಳ್ ಹಾಗೂ ವೇದಿಕೆ ಮೇಲಿದ್ದ ಇತರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಪರಶುರಾಮ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ಯತ್ನಾಳ್ ಭಾಷಣ ಕೇಳಿ ಪರಶುರಾಮ ಅವರು ದೂರು ಕೊಟ್ಟಿದ್ದಾರೆ. ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಯು/ಎಸ್‌-352(3) ಅಡಿ ಪ್ರಕರಣ ದಾಖಲಿಸಲಾಗಿದೆ.

Ayanur Manjunath ಸಚಿವ ಪ್ರಹ್ಲಾದ್ ಜೋಷಿ ರಾಜಿನಾಮೆ ನೀಡಲಿ- ಆಯನೂರು ಮಂಜುನಾಥ್

0

Ayanur Manjunath ಶಿವಮೊಗ್ಗ ಟಿಕೇಟ್ ಗಾಗಿ ಡೀಲ್ ನಡೆಯುವುದು ಬಿಜೆಪಿಯಲ್ಲಿ ಹೊಸತೇನಲ್ಲ, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸಹೋದರ-ಸಹೋದರಿಯರ ವಿರುದ್ದ ವೇ ಕೇಸು ದಾಖಲಾಗಿದ್ದು, ಪ್ರಹ್ಲಾದ್ ಜೋಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ವಕ್ತಾರ , ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡುತ್ತಿದ್ದ ಆಯನೂರು ಮಂಜುನಾಥ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲದ್ ಜೋಷಿಯವರ ಸಹೋದರ ಗೋಪಾಲ ಜೋಷಿ ಅವರು ಟಿಕೆಟ್ ಕೊಡಿಸಲು ೫ ಕೋಟಿ ಡಿಮ್ಯಾಂಡ್ ಮಾಡಿದ್ದರು. ಅದರಂತೆ ೨೫ ಲಕ್ಷ ಮುಖಂಡ ಹಣ ನೀಡಿದ್ದೇವು. ಆದರೆ ಟಿಕೆಟ್ ಕೊಡಿಸದೆ ವಂಚಿಸಲಾಗಿದೆ. ವಾಪಾಸ್ ಹಣ ಕೇಳಿದರೆ ಜೀವಬೆದರಿಕೆ ಹಾಕಲಾಗಿದೆ ಎಂದು ಸುನೀತಾ ಚೌವ್ಹಣ್ ಎಂಬುವವರು ಕೊಟ್ಟ ದೂರಿನಲ್ಲಿ ಈ ಎಲ್ಲಾ ವ್ಯವಹಾರಗಳು ಸಚಿವ ಪ್ರಹ್ಲಾದ್ ಜೋಷಿ ಅವರ ಕಚೇರಿಯಲ್ಲೇ ನಡೆದಿದೆ ಇದಕ್ಕೆ ಜೋಷಿ ಉತ್ತರಿಸಬೇಕು.
ಬಿಜೆಪಿಯಲ್ಲಿ ಒಂದು ಶಿಷ್ಟಾಚಾರ ಇದೆ. ಈ ತರಹದ ಹಣವನ್ನು ಬ್ಯಾಂಕ್ ಮೂಲಕವಲ್ಲದೆ, ಚೆಕ್ ಮೂಲಕ ಇಲ್ಲವೇ ನಗದಾಗಿ ಪಡೆಯುವ ಅಭ್ಯಾಸವಿದೆ. ಅದೇ ರೀತಿ ಇಲ್ಲೂ ನೇರವಾಗಿ ನಗದುಪಡೆಯಲಾಗಿದೆ.ಇದೆಲ್ಲವೂ ಇದ್ದರೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು , ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದಿದ್ದಾರೆ. ಇನ್ನು ವಿಚಿತ್ರಯೆಂದರೆ ಸಹೋದರ ಗೋಪಾಲ ಜೋಷಿಗೂ ತಮಗೂ ಸಂಬಂಧವೇ ಇಲ್ಲ ಎಂದಿದ್ದಾರೆ. ಹಾಗೆಯೇ ಪ್ರಕರಣದಲ್ಲಿರುವ ವಿಜಯಲಕ್ಷ್ಮಿ ತಮ್ಮ ಸಹೋದರಿಯೇ ಅಲ್ಲ ಎಂದಿದ್ದಾರೆ. ಹಾಗಾದರೆ ಟಿಕೆಟ್ ಕೊಡಿಸುವುದಾಗಿ ಹೇಳಿ ನಡೆಸಿದ ಹಣದ ವಹಿವಾಟಿನ ಚಟುವಟಿಕೆಗಳು ಅವರದೇ ಕಚೇರಿಯಲ್ಲಿ ನಡೆದಿದ್ದು ಯಾಕೆ? ಅದಕ್ಕೆ ಜೋಷಿಯವರು ಉತ್ತರಿಸಲಿ ಎಂದು ಆಗ್ರಹಿಸಿದರು.

Ayanur Manjunath ಬಿಜೆಪಿಯಲ್ಲಿ ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಸಂಸ್ಕೃತಿ ಅಲ್ಲಿ ಹೊಸದಲ್ಲ. ಈ ಹಿಂದೆ ಕುಂದಾಪುರದಲ್ಲೂ ಇಂತಹದೊಂದು ಪ್ರಕರಣ ಸುದ್ದಿ ಆಗಿತ್ತು. ಇನ್ನಷ್ಟು ಪ್ರಕರಣಗಳು ಅವರದೇ ಪಕ್ಷದ ಮುಖಂಡರೇ ಬಹಿರಂಗ ಮಾಡಿದರು. ಮೊನ್ನೆಯಷ್ಟೇ ಅವರದೇ ಪಕ್ಷದ ಮುಖಂಡ ಯತ್ನಾಳ್, ತಮ್ಮಪಕ್ಷದ ನಾಯಕರೊಬ್ಬರು ಒಂದು ಸಾವಿರ ಕೋಟಿ ರೂ. ಇಟ್ಟುಕೊಂಡು ಮುಖ್ಯ ಮಂತ್ರಿಯಾಗಲು ಕಾಯುತ್ತಿದ್ದಾರೆಂದು ಹೇಳಿದ್ದರು. ಇದನ್ನು ಬಿಜೆಪಿಯ ಯಾರು ಕೂಡ ಅಲ್ಲಗಳೆದಿಲ್ಲ. ಅದರರ್ಥವೇನು? ಎಂದು ಆಯನೂರು ಪ್ರಶ್ನಿಸಿದರು.
ಜೋಷಿ ಅವರ ಸಹೋದರ ಗೋಪಾಲ ಜೋಷಿ ಟಿಕೆಟ್ ಕೊಡಿಸುವ ವಿಚಾರದಲ್ಲಿ ಗೃಹ ಸಚಿವರ ಹೆಸರು ಪ್ರಸ್ತಾಪ ವಾಗಿದೆ. ಹಾಗೆಯೇ ಸಚಿವರ ಆಪ್ತ ಕಾರ್ಯದರ್ಶಿ ಹೆಸರು ಪ್ರಸ್ತಾಪಕ್ಕೆ ಬಂದಿದೆ. ಹಾಗಾಗಿ ಜೋಷಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಮುನಿರತ್ನ ಪ್ರಕರಣದಲ್ಲಿ ಬಿಜೆಪಿಯವರ ಧ್ವನಿಯೇ ಇಲ್ಲ. ಹನಿಟ್ರ್ಯಾಪ್ ಮಾಡುವ ಒಬ್ಬ ರಾಜಕಾರಣಿಯ ಬಗ್ಗೆ ಇವರ ಮೌನವೇಕೆ ಎನ್ನುವುದನ್ನು ತಿಳಿಸಲಿ ಎಂದ ಆಯನೂರುಮಂಜುನಾಥ್ ಅವರು ಮನಿಲಾಡ್ರಿಂಗ್ ಅಲ್ಲದ ಜಾಗಕ್ಕೆ ಬರುವ ಇಡಿ , ಕೋವಿಡ್‌ನಲ್ಲಿ ೨೦೦೦ ಕೋಟಿ ಹಗರಣ ನಡೆದಿದೆ ಎಂದು ಯತ್ನಾಳ್ ಹೇಳುವ ವಿಚಾರದಲ್ಲಿ ಯಾಕೆ ಇಡಿ ಬರೋದಿಲ್ಲ ಎಂದು ಪ್ರಶ್ನಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದರೆ, ದುಡ್ಡು ದೋಚುವುದಕ್ಕಾಗಿಯೇ ಬಂದಿದ್ದಾರೆಂದು ಸಿ.ಟಿ.ರವಿ ಟೀಕಿಸುತ್ತಾರೆ. ಸಿ.ಟಿ.ರವಿ ಕೂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಆಗ ಅವರು ಕೂಡ ಬೇರೆಬೇರೆ ರಾಜ್ಯಕ್ಕೆ ಹೋಗುತ್ತಿದ್ದರು. ಹಾಗಾದರೆ ಅವರು ಕೂಡ ಇದೇ ರೀತಿ ಹಣ ದೋಚುವುದಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.

Thirthahalli News ಮನೆಯಲ್ಲಿ ಹೂತಿಟ್ಟ ಕಳ್ಳತನದ ಚಿನ್ನ. ಆರೋಪಿ ಮಾಲು ಸಹಿತ ಬಂಧನ

0

Thirthahalli News ತೀರ್ಥಹಳ್ಳಿ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿ ಹಾಗೆಯೇ ಬೆಂಗಳೂರಿನಲ್ಲಿ ಚಿನ್ನವನ್ನು ಕದ್ದು ತೀರ್ಥಹಳ್ಳಿ ಯಲ್ಲಿ ತಂದಿಟ್ಟಿದ್ದ ಆರೋಪಿಯನ್ನು ಮಾಗಡಿ ಪೊಲೀಸರು ತೀರ್ಥಹಳ್ಳಿಗೆ ಕರೆ ತಂದಿದ್ದ ಘಟನೆ ನಡೆದಿದೆ.
ಹಮೀದ್ ಹಂಜ ಎಂಬ ಆರೋಪಿ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತಮ್ಮ ಮನೆಯಲ್ಲಿ ತಂದು ಹೂತಿಟ್ಟಿದ್ದ. ಆರೋಪಿಯನ್ನು ಕರೆ ತಂದಿದ್ದ ಮಾಗಡಿ ಪೊಲೀಸರು ಸುಮಾರು 1ಕೆಜಿಗೂ ಜಾಸ್ತಿ ಆಗುವಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

Thirthahalli News ಮೂಲತಃ ಆಗುಂಬೆ ಸಮೀಪದ ಗುಡ್ಡೇಕೇರಿಯವನಾದ ಹಂಜನ ಮೇಲೆ 70 ರಿಂದ 80 ಕ್ಕೂ ಹೆಚ್ಚು ಕೇಸ್ ಗಳಿದ್ದು ಆಗುಂಬೆ ಸಮೀಪದಲ್ಲಿ ನಡೆದಿದ್ದ ಹೊಸಳ್ಳಿ ವೆಂಕಟೇಶ್ ಕೊಲೆ ಪ್ರಕರಣದಲ್ಲೂ ಹಂಜ ಭಾಗಿಯಾಗಿದ್ದ.
ಕೊಲೆ, ವಸೂಲಿ, ವಂಚನೆ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತಿಳಿದು ಬಂದಿದೆ. ಹಲವಾರು ಕೇಸ್ ನಲ್ಲಿ ಭಾಗಿಯಾದ್ದ ಹಂಜ ಈಗ ಮಾಗಡಿ ಪೊಲೀಸ್ ಅತಿಥಿಯಾಗಿದ್ದಾನೆ.

Rotary Club Shimoga ಶಿವಮೊಗ್ಗದಲ್ಲಿ ಪ್ರಥಮಬಾರಿಗೆ ವರ್ತಕರ ದಿನಾಚರಣೆ

0

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ದಿಂದ ಪ್ರಥಮ ಬಾರಿಗೆ ಮಥುರ ಪ್ಯಾರಡೈಸ್ ಸಭಾಂಗಣದಲ್ಲಿ ಟ್ರೇಡರ್ಸ್ ಡೇ.. ವರ್ತಕರ ದಿನಾಚರಣೆ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಮಥುರಾ ಪ್ಯಾರಡೈಸ್ ಮಾಲೀಕರಾದ ಎನ್ ಗೋಪಿನಾಥ್ ರವರು ಆಗಮಿಸಿದ್ದರು. ಅಧ್ಯಕ್ಷರಾದ ಕೆ ಸೂರ್ಯನಾರಾಯಣ ಉಡುಪ ಹಾಗೂ ಕಾರ್ಯದರ್ಶಿ ಎನ್ ಜಿ ಉಷಾ ಉಪಸ್ಥಿತರಿದ್ದರು. ಕ್ಲಬ್ ಸದಸ್ಯರೂ ಖ್ಯಾತ ವರ್ತಕರು ಆಗಿರುವ ಟಿ ಆರ್ ಅಶ್ವಥ್ ನಾರಾಯಣಶೆಟ್ಟಿ, ಡಿಎಸ್ ನಟರಾಜ್, ಡಿಪಿ ಮೋಹನ್, ಡಿಎಲ್ ಮಂಜುನಾಥ್, ಹೆಚ್ ಎಸ್ ಮೋಹನ್ ತಮ್ಮ ವ್ಯಾಪಾರ ವ್ಯವಹಾರಗಳ ಅನುಭವದ ಬಗ್ಗೆ ಮಾತನಾಡಿದರು ಇದೇ ಸಂದರ್ಭದಲ್ಲಿ ಕ್ಲಬ್ ನ ವರ್ತಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವೀರಣ್ಣ ಹುಗ್ಗಿ ಯವರು ಪ್ರಾಸ್ತಾವಿಕ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಮಾತನಾಡಿದರು ವಿಜಯಕುಮಾರ್ ವಂದಿಸಿದರು.

Karnataka Rajyotsava ವೈಭವದ ರಾಜ್ಯೋತ್ಸವ. ಪೂರ್ವಭಾವಿ ಸಿದ್ಧತೆ ಬಗ್ಗೆ ಡಿಸಿ ಗುರುದತ್ತ ಹೆಗಡೆ ಸೂಚನೆ

0

Karnataka Rajyotsava ಕನ್ನಡ ರಾಜ್ಯೋತ್ಸವ ಪೂರ್ವಬಾವಿ ಸಭೆ: ಸಕಲ ಸಿದ್ದತೆಗೆ ಡಿಸಿ ಸೂಚನೆ
ಶಿವಮೊಗ್ಗ, ಅಕ್ಟೋಬರ್ ೧೮ (ಕರ್ನಾಟಕ ವಾರ್ತೆ) : ನವೆಂಬರ್ ೧ ರಂದು ನಗರದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಸಮಾರಂಭಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆಗಳನ್ನು ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಸಿದ್ದತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು.
ಅಪರ ಜಿಲ್ಲಾಧಿಕಾರಿಗಳು, ಜಿ.ಪಂ. ಉಪ ಕಾರ್ಯದರ್ಶಿ, ಪಾಲಿಕೆ ಆಯುಕ್ತರು ಹಾಗೂ ಶಿವಮೊಗ್ಗ ತಹಶೀಲ್ದಾರರು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ಮುದ್ರಣಗೊಂಡ ಆಹ್ವಾನ ಪತ್ರಿಕೆಗಳನ್ನು ಸಮಾರಂಭದ ಅತಿಥಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು, ಸಂಘಸAಸ್ಥೆಗಳು, ಕನ್ನಡ ಸಂಘಟನೆಗಳು ಹಾಗೂ ನಾಗರೀಕರಿಗೆ ಜಾರಿ ಮಾಡಲು ಸೂಚಿಸಿದರು.
ನ.೧ ರ ಬೆಳಿಗ್ಗೆ ೮ ಗಂಟೆಯಿAದ ನಗರದ ಸೈನ್ಸ್ ಮೈದಾನದಿಂದ ಮೆರವಣ ಗೆ ಹೊರಡುವುದು. ಮೆರವಣ ಗೆಯಲ್ಲಿ ಪೊಲೀಸ್, ಗೃಹರಕ್ಷಕ ದಳ, ಸೇವಾದಳ, ಎನ್‌ಸಿಸಿ ಬ್ಯಾಂಡ್, ಡೊಳ್ಳುಕುಣ ತ, ವೀರಗಾಸೆ, ಕೋಲಾಟ, ಭಜನೆ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಲು ಸೂಕ್ತ ವ್ಯವಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ತಲಾ ಎರಡು ಕಲಾ ತಂಡಗಳನ್ನು ಕಳುಹಿಸಿಕೊಂಡುವAತೆ ತಿಳಿಸಿದರು.
ಭುವನೇಶ್ವರಿ ದೇವಿ ಪ್ರತಿಮೆ ಅಲಂಕಾರ ಮತ್ತು ವಾಹನ ವ್ಯವಸ್ಥೆಯನ್ನು ಪಾಲಿಕೆ ಆಯುಕ್ತರು ಮಾಡಬೇಕು. ಧ್ವಜಾರೋಹಣಕ್ಕೆ ಅಗತ್ಯ ವ್ಯವಸ್ಥೆಗಳಾದ ಧ್ವಜ, ಧ್ವಜಸ್ತಂಭ, ವೇದಿಕೆ ಅಲಂಕಾರ ಇತ್ಯಾದಿ ವ್ಯವಸ್ಥೆಯನ್ನು ಪಾಲಿಕೆ ಆಯುಕ್ತರು, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ ಕೈಗೊಳ್ಳಬೇಕು. ಸ್ವಾಗತ ಕಮಾನು, ಹೂವಿನ ತೋರಣ, ಅತಿಥಿ ಸತ್ಕಾರ, ಪೂರ್ವ ಸಿದ್ದತೆಯನ್ನು ಸಾರಿಗೆ ಉಪ ಆಯುಕ್ತರು, ನಿರ್ಮಿತಿ ಕೇಂದ್ರ ಮತ್ತು ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯವರು ನಿರ್ವಹಿಸಬೇಕು.
ಕೃಷಿ ಇಲಾಖೆ, ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪ್ರವಾಸೋದ್ಯಮ, ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ, ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ,ಪರಿಶಿಷ್ಟ ವರ್ಗಗಳ ಕಲ್ಯಾಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಕೆಎಸ್‌ಆರ್‌ಟಿಸಿ, ಆರೋಗ್ಯ ಇಲಾಖೆಯವರು ಟ್ಯಾಬ್ಲೋಗಳನ್ನು ತಯಾರಿಸಿ ಪ್ರದರ್ಶಿಸುವಂತೆ ಸೂಚಿಸಿದರು.
ಶಾಲಾ ಮಕ್ಕಳನ್ನು ಮೆರವಣ ಗೆಯಲ್ಲಿ ಕರೆತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ರೂಟ್ ಮ್ಯಾಪ್ ತಯಾರಿಸಿ ನಿರ್ವಹಿಸಬೇಕು. ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಮೈದಾನದಲ್ಲಿ ಷಾಮಿಯಾನ, ಉತ್ತಮ ಸೌಂಡ್ ಸಿಸ್ಟಂ ಇತರೆ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ, ಆಸನ ವ್ಯವಸ್ಥೆಯನ್ನು ತಹಶೀಲ್ದಾರರು, ಪಾಲಿಕೆಯವರು ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪಾಲನೆ ಮತ್ತು ನಿರ್ವಹಣೆ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಿ ಹಂಚಿಕೆಯನ್ನು ಶಿಮುಲ್, ಪಾಲಿಕೆ, ಡಿಡಿಪಿಐ ನೋಡಿಕೊಳ್ಳುವಂತೆ ತಿಳಿಸಿದರು.
Karnataka Rajyotsava ಪ್ರಮುಖ ರಸ್ತೆಯ ವೃತ್ತಗಳಿಗೆ ವಿದ್ಯುತ್ ಅಲಂಕಾರವನ್ನು ಮೆಸ್ಕಾಂ, ಪಾಲಿಕೆ ಆಯುಕ್ತರು, ಸೂಡಾ ಆಯುಕ್ತರು ಹಾಗೂ ಧ್ವನಿ ವರ್ಧಕದ ಮೂಲಕ ಕನ್ನಡ ದೇಶಭಕ್ತಿ ಗೀತೆಗಳನ್ನು ಪ್ರಸಾರ ಮಾಡುವ ವವಸ್ಥೆಯನ್ನು ಅಬಕಾರಿ ಇಲಾಖೆ, ನೋಂದಣ ಹಾಗೂ ವಾಣ ಜ್ಯ ತೆರಿಗೆ ಇಲಾಖೆಯವರು ನೋಡಿಕೊಳ್ಳಬೇಕೆಂದು ತಿಳಿಸಿದರು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕುವೆಂಪು ರಂಗಮAದಿರದಲ್ಲಿ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ, ಪಾಲಿಕೆ ಆಯುಕ್ತರು ನಿರ್ವಹಿಸಬೇಕು. ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನ ವ್ಯವಸ್ಥೆಯನ್ನು ಜಿಲ್ಲಾ ಸರ್ಜನ್‌ರು ಹಾಗೂ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ನಿರ್ವಹಿಸುವಂತೆ ಸೂಚಿಸಿದರು

World Karate Federation ಯಶಸ್ವಿಯಾಗಿ ನಡೆದ ಕರಾಟೆ ತೀರ್ಪುಗಾರರ ಪರೀಕ್ಷಾ ಪ್ರಕ್ರಿಯೆ

0

World Karate Federation ಅಕ್ಟೋಬರ್ 16ರಂದು ಶಿವಮೊಗ್ಗದ ಸರ್ಕಾರಿ ನೌಕರರ ಭವನ ದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ ಕರಾಟೆ ತೀರ್ಪುಗಾರರ ಕಾರ್ಯಗಾರ ಮತ್ತು ಪರೀಕ್ಷೆ ಯಶಸ್ವಿಯಾಗಿ ನಡೆಯಿತು
ವರ್ಲ್ಡ್ ಕರಾಟೆ ಫೆಡರೇಶನ್ ನ ನೂತನ ನಿಯಮಗಳ ಕುರಿತು ಕಾರ್ಯಗಾರದಲ್ಲಿ
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕರಾಟೆ ಇಂಡಿಯಾ ಆರ್ಗನೈಸೇಷನ್ ನ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಶ್ರೀ ಪ್ರೇಮ್ ಜಿತ್ ಸೇನ್ ಭಾಗವಹಿಸಿ ಕರಾಟೆ ತೀರ್ಪುಗಾರರಿಗೆ ನಿಯಮಗಳಲ್ಲಿನ ಬದಲಾವಣೆಗಳ ಕುರಿತು ತಿಳಿಸಿದರು
ಈ ಪರೀಕ್ಷೆಯು ರಾಷ್ಟ್ರೀಯ ಫೆಡರೇಶನ್ ನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಿಂದ 43 ಕರಾಟೆ ತೀರ್ಪುಗಾರರು ಈ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾದರು
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ಭಾರ್ಗವ್ ಮತ್ತು ಹಿರಿಯ ಉಪಾಧ್ಯಕ್ಷ ಅಲ್ತಾಫ್ ಪಾಷಾ
World Karate Federation ಉಪಾಧ್ಯಕ್ಷ ಹಾಗೂ ಆಯೋಜಕ ಶಿವಮೊಗ್ಗ ವಿನೋದ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ಕರಾಟೆ ತೀರ್ಪುಗಾರರಾದ
ಸುಧಾಕರ್ ರಂಗಸ್ವಾಮಿ ಮೊಹಮ್ಮದ್ ಆರಿಫ್ ಸೈಯದ್ ರಿಯಾಜ್ ಬಾಲರಾಜ್ ಪಂಚಪ್ಪ
ಶಿವಕುಮಾರ್ ಕೌಶಿಕ್ ಓಬಲೇಶ್ ಮೀನಾಕ್ಷಿ ಅನೂಪ್ ಶ್ರೇಯಸ್ ಶರವಣ ರಾಜೇಶ್ ಇಂಚನ ರಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು

Tungabhadra Dam ನಿರ್ಮಲ ತುಂಗಭದ್ರಾ ಅಭಿಯಾನ.ಸಚಿವ ಮಧು ಅವರೊಂದಿಗೆ ಶಾಸಕ ಚೆನ್ನಿ ಚರ್ಚೆ

0

Tungabhadra Dam “ನಿರ್ಮಲ ತುಂಗಭದ್ರ ಅಭಿಯಾನ” ದ ಮೂಲಕ ಶೃಂಗೇರಿಯಿಂದ ಕಿಷ್ಕಿಂಧೆ ತನಕ ನದಿಗಳ ಶುಧ್ಧತೆ ಮತ್ತು ಪಾವಿತ್ಯತೆ ಕಾಪಾಡಲು ನಿಟ್ಟಿನಲ್ಲಿ ಇದೇ ನವಂಬರ್ 6 ರಿಂದ 14ರವರೆಗೆ ಹಮ್ಮಿಕೊಂಡಿರುವ “ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ”ಯ ಪೂರ್ವಭಾವಿ ಸಿದ್ಧತಾ ಭಾಗವಾಗಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರನ್ನು ಪರ್ಯಾವರಣ ಟ್ರಸ್ಟ್ ನ ಸದಸ್ಯರೊಂದಿಗೆ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭೇಟಿ ಮಾಡಿ, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಿದರು.

Tungabhadra Dam ತುಂಗಭದ್ರ ನದಿಗಳ ಪಾವಿತ್ರತೆಯನ್ನು ಕಾಪಾಡಲು, ಸಾರ್ವಜನಿಕರಲ್ಲಿ ಜಲ ಜಾಗೃತಿ ಹಾಗೂ ಸ್ವಚ್ಛತಾ ಜಾಗೃತಿಯ ಮೂಡಿಸುವ ಮುಖ್ಯ ಧ್ಯೇಯದೊಂದಿಗೆ ಹಾಗೂ ನದಿಗಳಲ್ಲಿ ನೀರಿನ ಹರಿವು ಸದಾ ಇರುವಂತೆ ಮಾಡಲು ಜಲನಯನ ಪ್ರದೇಶ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದಿರುವುದರಿಂದ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅನೇಕ ವಿಚಾರ ವಿನಿಮಯಗಳನ್ನು ಮಾಡಿಕೊಂಡರು.

Muda scam ಮೂಡಾ ಕಚೇರಿಗೆ “ಇಡಿ” ದಾಳಿ.ದಾಖಲೆಗಳ ಪರಿಶೀಲನೆ

Muda scam ಮುಡಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಇಂದು ಮೈಸೂರಿನ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಸುಮಾರು 20 ಮಂದಿ ಇಡಿ ಅಧಿಕಾರಿಗಳು ಮುಡಾ ಕಚೇರಿಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಹಲವು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ದೂರು ಹಿನ್ನೆಲೆಯಲ್ಲಿ ಇಂದು ಇಡಿ ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.

Muda scam ಮುಡಾದಲ್ಲಿ 5 ಸಾವಿರ ಕೋಟಿ ರೂಪಾಯಿ ಅಕ್ರಮ ನಡೆದಿದೆ. ಸಿಎಂ ಅಧಿಕಾರ ದುರುಪಯೋಗ ಪಡಿಸಿ ಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ಈ ಸಂಬಂಧ ಇದೀಗ ದಾಳಿಯಾಗಿದೆ.
ಭೂಮಾಲೀಕ ಮುಡಾ ಪ್ರಕರಣ 4ನೇ ಆರೋಪಿ ದೇವರಾಜು ಅವರ ಕೇಂಗೇರಿ ನಿವಾಸದ ಮೇಲೂ ಇಡಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ ಎನ್ನಲಾಗಿದೆ.

Nandini Idli Dosa ನಂದಿನಿ ಬ್ರಾಂಡ್ ನಿಂದ ಈಗ ಮಾರುಕಟ್ಟೆಗೆ ದೋಸೆ & ಇಡ್ಲಿ ಮಿಕ್ಸ್

0

Nandini Idli Dosa ರಾಜ್ಯದ ಪ್ರಮುಖ ಸಂಸ್ಥೆ ನಂದಿನಿ ಇದೀಗ ಹಾಲಿನ ಜೊತೆಜೊತೆಗೆ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಮಾರಲು ಆರಂಭಿಸುತ್ತಿದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ KMF ನಂದಿನಿ ಬ್ರಾಂಡ್ ಹೆಸರಿನಲ್ಲಿಯೇ ಇಡ್ಲಿ, ದೋಸೆಯ ಸಿದ್ದ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.

Nandini Idli Dosa ಮುಂದಿನ ಹತ್ತು ದಿನದಲ್ಲಿ ಈ ಪ್ರಾಡಕ್ಟ್‌ ಮಾರುಕಟ್ಟೆಗೆ ಬರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ರೆಡಿಮೆಡ್‌ ಇಡ್ಲಿ ದೋಸೆ ಹಿಟ್ಟಿನ ದರಕ್ಕಿಂತ ಕಡಿಮೆ ರೇಟಿನಲ್ಲಿ ಸಿಗಲಿದೆ ಎನ್ನಲಾಗಿದೆ.
450 ಗ್ರಾಂ ಹಾಗೂ 900 ಗ್ರಾಂ ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಆನಂತರ ರಾಜ್ಯದೆಲ್ಲೆಡೆ ಮಾರಾಟಕ್ಕೆ ನಿರ್ಧರಿಸಲಾಗಿದೆ.

Thirthahalli Accident News ಬೆಜ್ಜುವಳ್ಳಿಯಲ್ಲಿ ಅಪಘಾತ. ವಿದ್ಯಾರ್ಥಿಯ ಸಾವು

Thirthahalli Accident News ತೀರ್ಥಹಳ್ಳಿ ತಾಲೂಕಿನ ಬೆಜ್ಜುವಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್‌ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಾಲೂಕಿನ ತನಿಕಲ್‌ ಸಮೀಪದ ಬಾಂಡ್ಯ ಗ್ರಾಮದ ಪ್ರಥಮ್ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈತ ತೀರ್ಥಹಳ್ಳಿಯಲ್ಲಿ ಡಿಪ್ಲೋಮೋ ಕಾಲೇಜಿಗೆ ತೆರಳುತ್ತಿದ್ದ ಎನ್ನಲಾಗಿದೆ.

ಗೋವಾ ನೋಂದಣಿಯ ಬಸ್ ಮಂಗಳೂರಿನಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಆಗಿದೆ. ಗಂಭೀರ ಗಾಯಗೊಂಡಿದ್ದ ಪ್ರಥಮ್‌ನನ್ನು ಕೂಡಲೇ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸಾಗಿಸಲಾಯಿತಾದರು ಆತ ಮಾರ್ಗ ಮಧ್ಯೆ ಮೃತಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದ್ದಾರೆ.

Thirthahalli Accident News ಅಘಪಾತದ ಭೀಕರ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಬೈಕ್ ಸವಾರ ಏಕಾಏಕಿ ಮುಖ್ಯ ರಸ್ತೆ ಪ್ರವೇಶಿಸಿರುವುದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಬೈಕ್‌ ಸಂಪೂರ್ಣ ಜಖಂಗೊಂಡಿದೆ. ಬಸ್ ನ ಮುಂಭಾಗ ಸಹ ನುಜ್ಜುಗುಜ್ಜಾಗಿದೆ.

ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.