Department of Agriculture ಕೃಷಿ ಇಲಾಖೆಯಿಂದ ಅನುಷ್ಟಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಜಿಲ್ಲಾ ಮಟ್ಟದ ಯೋಜನಾ ನಿರ್ವಹಣಾ ತಂಡದ ಸೇವೆಯನ್ನು ಪಡೆಯಲು ಗುತ್ತಿಗೆ ಆಧಾರದಲ್ಲಿ ಸಲಹೆಗಾರರು ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಸಲಹೆಗಾರರು 01 ಹುದ್ದೆ ವಿದ್ಯಾರ್ಹತೆ ಬಿಎಸ್‌ಸಿ(ಕೃಷಿ) ಪದವಿ ಹಾಗೂ ಸ್ನಾತಕೋತ್ತರ ಪದವಿ, ತಾಂತ್ರಿಕ ಸಹಾಯಕರು 02 ಹುದ್ದೆ ವಿದ್ಯಾರ್ಹತೆ ಬಿ.ಎಸ್.ಸಿ(ಕೃಷಿ) ಪದವಿ, ಉತ್ತಮ ಕಂಪ್ಯೂಟರ್ ಪರಿಣಿತಿ, ಕೃಷಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಅನುಭವ ಉಳ್ಳವರಿಗೆ ಪ್ರಾಶಸ್ತö್ಯ ಕೊಡಲಾಗುವುದು.
Department of Agriculture ಈ ನೇಮಕಾತಿಯು ದಿ: 31-03-2025 ರವರೆಗೆ ಅಥವಾ ಕೃಷಿ ಆಯುಕ್ತಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ. ಅಭ್ಯರ್ಥಿಗಳು ಸರ್ಕಾರಿ ಇಲಾಖೆ/ಸಂಸ್ಥೆಗಳಿAದ ನಿವೃತ್ತಿಯಾಗಿದ್ದಲ್ಲಿ (ಪಿಂಚಣಿ ಪಡೆಯುತ್ತಿದ್ದಲ್ಲಿ) ಈ ನೇಮಕಾತಿಗೆ ಅರ್ಹರಿರುವುದಿಲ್ಲ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ವಿವರಿಸಿರುವ ಹುದ್ದೆಗಳಿಗೆ ಕನಿಷ್ಟ ವಯೋಮಿತಿ 18 ವರ್ಷಗಳು, ಗರಿಷ್ಟ ಸಾಮಾನ್ಯ 35, ಪ.ಜಾತಿ/ಪ.ಪಂ/ಪ್ರವರ್ಗ-1 40 ವರ್ಷಗಳು.
ಆಸಕ್ತರು ಅರ್ಜಿ ನಮೂನೆಯನ್ನು ಜಂಟಿ ನಿರ್ದೇಶಕರ ಕಚೇರಿ ಓ ಟಿ ರಸ್ತೆ ಶಿವಮೊಗ್ಗ ಇಲ್ಲಿಂದ ಅರ್ಜಿಯನ್ನು ಪಡೆದು ನ.05 ರೊಳಗೆ ಸೀಲು ಮಾಡಿದ ಲಕೋಟೆಯಲ್ಲಿ ಮುದ್ದಾಂ/ನೋಂದಣಿ ಅಂಚೆ ಮೂಲಕ ಜಂಟಿ ಕೃಷಿ ನಿರ್ದೇಶಕರು ಶಿವಮೊಗ್ಗ ಇವರಿಗೆ ಸಲ್ಲಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
Department of Agriculture ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನ
Bhadravati Police ಅಪರಿಚಿತ ಮಹಿಳೆ ಶವ ಪತ್ತೆ. ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ಪ್ರಕಟಣೆ
Bhadravati Police ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಣಕಟ್ಟೆ ಚಾನಲ್‌ನಲ್ಲಿ ಸುಮಾರು 70 ವರ್ಷ ವಯಸ್ಸಿನ ಅನಾಮದೇಯ ಮಹಿಳೆಯ ಶವ ಪತ್ತೆಯಾಗಿದ್ದು, ಶವವನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈಕೆಯ ಹೆಸರು, ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.
ಈಕೆಯ ಚಹರೆ 4.10 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಶವವು ಕೊಳೆತ ಸ್ಥಿತಿಯಲ್ಲಿದೆ. ಮೈಮೇಲೆ ಹಳದಿ ಬಣ್ಣದ ಲಂಗ, ಹಸಿರು ಬಣ್ಣದ ರವಿಕೆ, ಸೊಂಟಕ್ಕೆ ಗ್ರೇ ಕಲರ್ ಬೆಲ್ಟ್ ಧರಿಸಿರುತ್ತಾರೆ.
Bhadravati Police ಈ ಮಹಿಳೆಯ ವಾರಸ್ಸುದಾರರು ಪತ್ತೆಯಾದಲ್ಲಿ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Acharya Tulsi College of Commerce Shimoga ತಂಬಾಕು ಮುಕ್ತ ಯುವ ಅಭಿಯಾನ 2.0 ವಿಶೇಷ ಉಪನ್ಯಾಸ
Acharya Tulsi College of Commerce Shimoga ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು ಶಿವಮೊಗ್ಗ ಇಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊಫೆಸರ್ ಮಮತಾ P R ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗು ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಹೇಮಂತ್ ರಾಜ್ ಅರಸ್ K M,ಜಿಲ್ಲಾ ಸಲಹೆಗಾರರು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಆರೋಗ್ಯ Acharya Tulsi College of Commerce Shimoga ಇಲಾಖೆ,ಶಿವಮೊಗ್ಗ ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, COTPA ಕಾಯ್ದೆ, ಟಿ ಸಿ ಸಿ ಹಾಗೂ ತಂಬಾಕು ಮುಕ್ತ ಯುವ ಅಭಿಯಾನ 2.0 ಉದ್ದೇಶಗಳ ಕುರಿತು ಉಪನ್ಯಾಸ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊಫೆಸರ್ ನಾಗರಾಜ್, ರವಿರಾಜ್ ಜಿಕೆ ಶ್ರೀಮತಿ ಮಂಗಳ, ಕಾಲೇಜಿನ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Rotary Club Shivamogga ಗರ್ಭಕಂಠದ ಕ್ಯಾನ್ಸರ್ ಬಗ್ಗೆ ರೋಟರಿ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮ
Rotary Club Shivamogga ರೋಟರಿ ಸಂಸ್ಥೆಯು ಜಗತ್ತಿನ ಅತಿ ದೊಡ್ಡ ಸೇವಾ ಸಂಸ್ಥೆ. ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಎಫ್ ಪಿ ಎ ಐ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಗರ್ಭ ಕಂಠದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ರೋಟರಿ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು.
Rotary Club Shivamogga ರೋಟರಿ ಸಂಸ್ಥೆಯ ಸೇವಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಈಗಾಗಲೇ ಹಲವಾರು ಆರೋಗ್ಯ ಜಾಗೃತಿ ಕಾರ್ಯಕ್ರಮ ಮಾಡಿದ್ದು, ಇನ್ನು ಮುಂದೆಯೂ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಎಫ್ ಪಿ ಎ ಐ ಮೆಡಿಕಲ್ ಆಫೀಸರ್ ಡಾ. ಮೋಕ್ಷಾ ಮಾತನಾಡಿ, ಹೆಣ್ಣು ಮಕ್ಕಳಿಗೆ ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಗರ್ಭಕಂಠದ ಕ್ಯಾನ್ಸರ್ ಈಗ ಅತಿ ಹೆಚ್ಚಿದ್ದು, ವರ್ಷಕ್ಕೆ ಇದರಿಂದ 70,000 ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಗರ್ಭಕಂಠದ ಕ್ಯಾನ್ಸರ್ ಮೊದಲೇ ಗುರುತಿಸಿಕೊಂಡರೆ ಪ್ರಾಥಮಿಕ ಹಂತದಲ್ಲೇ ತಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಡಾ. ಮೋಕ್ಷಾ ಅವರು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಎಫ್ ಪಿ ಎ ಐ ಸಂಸ್ಥೆಯ ಸತೀಶ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಧರ್ಮೇಂದ್ರ ಸಿಂಗ್, ಗುರುರಾಜ್, ದೀಪಾ ಶೆಟ್ಟಿ, ಅನ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್ ಹಾಗೂ ಲತಾ ಸಿದ್ದಿತಾ ಸ್ಯಾರಿ ಸೆಂಟರ್, ಸಂತೋಷ್ ಬಿ.ಎ. ಉಪಸಿತರಿದ್ದರು.
Shimoga Basavakendra ಟೀವಿ ಮಾಧ್ಯಮಗಳ ಜೊತೆ ಇಂದು ಮೊಬೈಲ್ ವಿರುದ್ಧವೂ ಕಂಪನಿ ನಾಟಕಗಳು ಸೆಣೆಸಬೇಕಾಗಿದೆ- ಬಸವರಾಜ ಬೆಂಗೇರಿ
Shimoga Basavakendra ಇಂದಿನ ಮನರಂಜನೆ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಉತ್ತಮ ಅಭಿರುಚಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗದ ಬಸವಕೇಂದ್ರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಿನೆಮಾ, ಟಿವಿ ಮಾಧ್ಯಮಗಳ ಜೊತೆಗೆ ಇಂದು ಮೊಬೈಲ್ ವಿರುದ್ಧವೂ ಕಂಪನಿ ನಾಟಕಗಳು ಸೆಣೆಸಬೇಕಾಗಿದೆ ಎಂದು ಹೇಳಿದರು.
ದ್ವಂದ್ವಾರ್ಥ ಸಂಭಾಷಣೆಗಳಿಂದ ಒಂದು ವರ್ಗದ ಪ್ರೇಕ್ಷಕರನ್ನು ಸೆಳೆದಿದ್ದ ಕಂಪನಿ ನಾಟಕಗಳು ಇದೇ ಸಂದರ್ಭದಲ್ಲಿ ಸದಭಿರುಚಿಯ ಬಹುದೊಡ್ಡ ಪ್ರೇಕ್ಷಕ ವರ್ಗವನ್ನು ಕಳೆದುಕೊಂಡಿದೆ. ಇದನ್ನು ಅರ್ಥ ಮಾಡಿಕೊಂಡ ಕೆಲ ಕಂಪನಿಗಳು ಮರಳಿ ಉತ್ತಮ ಗುಣಮಟ್ಟದ ನಾಟಕಗಳನ್ನು ಪ್ರದರ್ಶಿಸುವ ಕೆಲಸ ಮಾಡುತ್ತಿವೆ ಎಂದರು.
ಎಂ.ಎಂ.ಕಲ್ಬುರ್ಗಿ, ಪಟೀಲ ಪುಟ್ಟಪ್ಪ, ಚನ್ನವೀರ ಕಣವಿ ಮುಂತಾದವರ ಮಾರ್ಗದರ್ಶನದಲ್ಲಿ ಕಟ್ಟಿದ ವಿಶ್ವಭಾರತಿ ಕನ್ನಡ ನಾಟಕ ಕಂಪನಿ ಮೂಲಕ ಸದಭಿರುಚಿಯ ಹಾಗೂ ವಿಶ್ವದಾರ್ಶನಿಕರ ಕತೆಗಳನ್ನು ರಂಗಕ್ಕೆ ತರಲಾಗಿದೆ. ಆದರೆ, ಇಂತ ಮಹತ್ವದ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಕಾಡಿದ್ದು ವಿಪರ್ಯಾಸ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಅಸಭ್ಯ, ಅನೈತಿಕ, ಅನಾರೋಗ್ಯಕರ ವ್ಯಕ್ತಿತ್ವಗಳೇ ಇಂದಿನ ಯುವ ಜನರ ರೋಲ್ ಮಾಡೆಲ್ ಆಗುತ್ತಿರುವುದು ದುರಂತ ಎಂದರು.
ಕೀಳು ಅಭಿರುಚಿಯನ್ನು ಬೆಳೆಸುವುದೇ ಆದರ್ಶ ಎಂದು ಸಿನೆಮಾ-ಟಿವಿಗಳಲ್ಲಿ ತೋರಿಸಲಾಗುತ್ತಿದೆ. ಇಂಥ ಪರಿಸರದಲ್ಲಿ ಸ್ವಸ್ಥ ಸಮಾಜ ಕಟ್ಟುವ ಹೊಣೆ ಎಲ್ಲರ ಮೇಲಿದೆ ಎಂದರು.
Shimoga Basavakendra ನಮ್ಮ ನಡುವೆ ಇರುವ ಯುವ ಜನರ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಅಭಿರುಚಿ ಬೆಳೆಸುವ ಕೆಲಸ ಆಗಬೇಕಿದೆ. ಕಂಪನಿ ನಾಟಕಗಳಲ್ಲಿ ಆದರ್ಶ ವ್ಯಕ್ತಿಗಳ ಕತೆಗಳನ್ನು ರಂಗರೂಪಕ್ಕೆ ತರುವ ಮಾದರಿ ಕೆಲಸ ಆರಂಭದಿಂದಲೂ ಆಗಿದೆ. ಇಂಥ ಕೆಲಸ ಮಾಡಿದ ರಂಗಕರ್ಮಿಗಳು ಆರ್ಥಿಕವಾಗಿ ನಷ್ಟ ಅನುಭವಿಸಿರಬಹುದು. ಆದರೆ, ನೈತಿಕವಾಗಿ ಶ್ರೀಮಂತರಾಗಿದ್ದಾರೆ ಎಂದು ಹೇಳಿದರು.
ಹಿರಿಯ ರಂಗಕರ್ಮಿ ಡಾ.ಸಾಸ್ವೇಹಳ್ಳಿ ಸತೀಶ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಕಾಂತೇಶ್ ಕದರಮಂಡಲಗಿ, ರಂಗ ಸಮಾಜದ ಮಾಜಿ ಸದಸ್ಯರಾದ ಹಾಲಸ್ವಾಮಿ ಆರ್.ಎಸ್. ಹಾಗೂ ಬಸವಕೇಂದ್ರದ ಉಪಾಧ್ಯಕ್ಷರಾದ ಚಂದ್ರಪ್ಪ ವೇದಿಕೆಯಲ್ಲಿ ಇದ್ದರು. ರಂಗಕರ್ಮಿ ಗಣೇಶ್ ಕೆಂಚನಾಲ ನಿರೂಪಸಿದರು. ಡಾ. ಹಿರೇಮಠ ಅವರು ಸನ್ಮಾನ ಪತ್ರ ವಾಚನ ಮಾಡಿದರು.
ಎಂ. ಚನ್ನಪ್ಪ ಮತ್ತು ಕುಟುಂಬ, ಹೊನ್ನಾಳಿ ತಾಲೂಕು ಕುಂದೂರ ಜಿ. ಹನುಮಂತಪ್ಪ ಮತ್ತು ಕುಟುಂಬ, ಪುಷ್ಪಾ ಜಯದೇವಪ್ಪ ನವಾತಿ ಮತ್ತು ಕುಟುಂಬದ ದತ್ತಿಯಡಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಶಿವಮೊಗ್ಗ ಬಸವಕೇಂದ್ರದಲ್ಲಿ ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ರಂಗರ್ಮಿಗಳಾದ ಡಾ. ಸಾಸ್ವೇಹಳ್ಳಿ ಸತೀಶ್, ಡಾ.ಗಣೇಶ್ ಕೆಂಚಾನಾಲ, ಕಾಂತೇಶ್ ಕದರಮಂಡಲಗಿ, ಹಾಲಸ್ವಾಮಿ ಆರ್.ಎಸ್. ಡಾ. ಹಿರೇಮಠ ಹಾಗೂ ಬಸವಕೇಂದ್ರದ ಚಂದ್ರಪ್ಪ ಇದ್ದರು.
Rain In Shivamogga ರಾಜಾಕಾಲುವೆ ನೀರು ಮನೆಗೆ ನುಗ್ಗಿ ಆತಂಕ. ಕುಟುಂಬ ರಕ್ಷಿಸಿದ ಅಗ್ನಿಶಾಮಕ ದಳ
Rain In Shivamogga ಶಿವಮೊಗ್ಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಾರ್ಡ್ ನಂ.01ರ ಗಂಧರ್ವ ನಗರದ ರಾಜಕಾಲುವೆಯ ನೀರು ಮನೆಗೆ ನುಗಿದ್ದು, ಮನೆಯ ಒಳಗೆ ಸಿಲುಕಿಕೊಂಡಿದ್ದ ಕುಟುಂಬವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು.
Rain In Shivamogga ಈ ಸಂದರ್ಭದಲ್ಲಿ ಸ್ಥಳಕ್ಕೆ ಪಾಲಿಕೆ ಮಾಜಿ ಸದಸ್ಯೆ ಆಶಾಚಂದ್ರಪ್ಪ, ಬಿಜೆಪಿ ಮುಖಂಡ ಚಂದ್ರಪ್ಪ, ವಾರ್ಡ್‌ನ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿದ್ದರು.
Friends Centre Shivamogga ಇತಿಹಾಸ, ಸಂಸ್ಕೃತಿ ಅರಿವು ಮೂಡಿಸಲು ಬೊಂಬೆ ಪ್ರದರ್ಶನ ಸಹಕಾರಿ- ವಿ.ನಾಗರಾಜ್
Friends Centre Shivamogga ಜನರ ಜೀವನಶೈಲಿ, ಆಚಾರ-ವಿಚಾರ, ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸುವ ಮತ್ತು ಹಿಂದಿನ ಅನೇಕ ಘಟನೆಗಳ ಬಗ್ಗೆ ಮಾಹಿತಿ ನೀಡಲು ಬೊಂಬೆ ಸಂಸ್ಕೃತಿ ಇಂದಿಗೂ ಪ್ರಸ್ತುತ ಎಂದು ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ, ನೇತ್ರಭಂಡಾರದ ಚೇರ್ಮನ್ ವಿ.ನಾಗರಾಜ್ ಹೇಳಿದರು.
ಶಿವಮೊಗ್ಗ ನಗರದ ನವ್ಯಶ್ರೀ ಸಭಾಂಗಣದಲ್ಲಿ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ನೋಡೋಣ ಬನ್ನಿ ದಸರಾ ಬೊಂಬೆ ಕಾರ್ಯಕ್ರಮದಲ್ಲಿ ಮಾತನಾಡಿ, ಇತಿಹಾಸದ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಹಾಗೂ ಮಕ್ಕಳಿಗೆ ತಿಳಿಸಲು ದಸರಾ ಬೊಂಬೆ ಪ್ರದರ್ಶನ ಹೆಚ್ಚು ಸಹಕಾರಿಯಾಗುತ್ತದೆ. ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ನಮ್ಮ ಮಕ್ಕಳಿಗೆ ಪರಿಚಯಿಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಸಂಸ್ಥೆ ವತಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಸರಾ ಬೊಂಬೆ ಇಟ್ಟಿರುವ ಮನೆಗಳನ್ನು ಭೇಟಿ ಮಾಡಿ ಬೊಂಬೆ ಸಂಸ್ಕೃತಿಯನ್ನು ವೀಕ್ಷಿಸಿ ಅತ್ಯುತ್ತಮವಾಗಿ ಪ್ರದರ್ಶನ ಹಾಗೂ ಸಂಸ್ಕೃತಿ ಬಗ್ಗೆ ವಿವರಿಸಿದ 25 ಜನ ಸ್ಪರ್ಧಾಳುಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫ್ರೆಂಡ್ಸ್ ಸಎಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಮಾತನಾಡಿ, ಕಲೆ ಸಂಸ್ಕೃತಿ ಸಾಹಿತ್ಯವನ್ನು ಉಳಿಸುವಂತಹ ಕೆಲಸಗಳನ್ನು ಸಂಘ ಸಂಸ್ಥೆಗಳು ಮಾಡಬೇಕು. ನಮ್ಮ ಫ್ರೆಂಡ್ಸ್ ಸೆಂಟರ್ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ತಿಳಿಸಿದರು.
Friends Centre Shivamogga ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಶ್ರೀ ರಂಜಿನಿ ದತ್ತಾತ್ರಿ ಅವರು ತೀರ್ಪುಗಾರರ ತಂಡದೊಂದಿಗೆ ಭೇಟಿ ನೀಡಿ ಬೊಂಬೆ ಮನೆಗಳನ್ನು ವೀಕ್ಷಿಸಿ ತೀರ್ಪು ನೀಡಿ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಯು.ರವೀಂದ್ರನಾಥ್ ಐತಾಳ್, ಎಲ್‌ಎಂ.ಮೋಹನ್, ರಮೇಶ್, ಲಕ್ಷ್ಮೀ ಸತ್ಯನ್, ರಜನಿ ಅಶೋಕ್, ಫ್ರೆಂಡ್ಸ್ ಸೆಂಟರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೋಡೋಣ ಬನ್ನಿ ದಸರಾ ಗೊಂಬೆಯಲ್ಲಿ ಒಟ್ಟು 25 ಸ್ಪರ್ಧಿಗಳು ಭಾಗವಹಿಸಿದ್ದರು. ಸುರೇಂದ್ರ, ಸುಧಾ ರಾಮಪ್ರಸಾದ್, ರುಕ್ಮಿಣಿ, ಬೃಂದಾ ಪ್ರಸನ್ನ ಕುಮಾರ್, ದೀಪ ವಿವಿ, ವೀಣಾ ನಾಗರಾಜ್, ಸುಕನ್ಯಾ ನಂಜುಂಡಯ್ಯ, ಶ್ರುತಿ ದೀಕ್ಷಿತ್, ರುಕ್ಕು ಮತ್ತು ನಾಗು, ಕಲಾವತಿ, ಉಮಾ ರವಿಶಂಕರ್, ಶಾಲಿನಿ ರಾಜೀವ್, ದೀಪಾ ರವೀಂದ್ರ, ಸುಜಾತ ಮುರಳೀಧರ್ ಅನಂತಯ್ಯಂಗಾರ್, ಸುಜಾತ ಗಣಪತಿ, ಮಾಲತಿ ಮತ್ತೂರು, ಅನ್ನಪೂರ್ಣ, ನಾಗರಾಜು ಎಚ್ ಎಸ್, ಮೇರಿ ಡಿಸೋಜ, ನೇತ್ರ ನಾಗರಾಜ್, ಜಾನಕಿ ಸುಬ್ರಹ್ಮಣ್ಯ, ಬಿಂದು ಮಾಲಿನಿ, ಪ್ರದೀಪ್ , ಸುಷ್ಮಾ ಸುಧೀರ್ ಇತರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಟ್ಟು 25 ಜನರಿಗೆ ಆಕರ್ಷಕ ಬಹುಮಾನ ನೀಡಲಾಯಿತು.
Shri Kala Skill Development Centre ಅಕ್ಟೋಬರ್ 27. ಸರ್ವ ಜನಾಂಗದ ವಿಧುರ- ವಿಧವೆಯರ ಸಮಾಲೋಚನಾ ಸಭೆ
Shri Kala Skill Development Centre “ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು” ಎಂಬ ತತ್ವಪದದಂತೆ ಶಿವಮೊಗ್ಗದಲ್ಲಿ ಏಳನೆ ಬಾರಿಗೆ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಅ-27 ರಂದು ಭಾನುವಾರ ಸವ೯ ಜಾತಿ-ಜನಾಂಗಗಳಿಗೆ ಸೇರಿದ ವಿಧುರ-ವಿಧವೆ ಸಮಾಲೋಚನೆ ಸಭೆ ಏಪ೯ಡಿಸಲಾಗಿದೆ.
ಇದೊಂದು ಮಾನವೀಯ ಸಂಬಂಧ ಹಾಗು ಸಾಮಾಜಿಕ ಕಳಕಳಿಯ ಹೊಸ ದಿಕ್ಕಿನ ಕಡೆಗಿನ ಪ್ರಯತ್ನವಾಗಿದ್ದು ನಾಡಿನ ನಾನಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅಂದು ಬೆಳಿಗ್ಗೆ 11=00 ಗಂಟೆಗೆ ವಿವಿಧೆಡೆಗಳಿಂದ ವಿಧುರ-ವಿಧವೆ ಹಾಗು ಪರಿತ್ಯಕ್ತರು ಭಾಗವಹಿಸಲಿದ್ದಾರೆ.
Shri Kala Skill Development Centre ಆಸಕ್ತರು ಆರ್.ಟಿ. ನಟರಾಜ್ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೆ ಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಪ್ರೆಸ್ ಕ್ಲಬ್ ಎದುರು, ಆರ್.ಟಿ.ಒ. ಆಫೀಸ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ. ಮೊಬೈಲ್ : 9448143165 ಇವರಲ್ಲಿ ಹೆಸರು ನೊಂದಾಯಿಸಿಕೊಂಡು ಪೋಸ್ಟ್ ಕಾಡ್೯ ಸೈಜ್ ಫೋಟೋ, ಆಧಾರ್ ಕಾಡ್೯, ಇತರೆ ಸಮಂಜಸ ದಾಖಲೆಗಳ ಸಹಿತ ಕಾಯ೯ಕ್ರಮದಲ್ಲಿ ಭಾಗವಹಿಸಬಹುದು.
Inner Wheel Club Shivamogga ಮಹಿಳೆಯರು ಸ್ವಾವಲಂಬಿಗಳಾಗಬೇಕು-ವೈಶಾಲಿ ಕುಡುವ
Inner Wheel Club Shivamogga ಸೇವಾ ಕಾರ್ಯಗಳಲ್ಲಿ ಇನ್ನರ್ ವೀಲ್ ಸಂಸ್ಥೆ ಮುಂಚೂಣಿಯಲ್ಲಿದೆ.
ಸ್ನೇಹ ಪ್ರೀತಿ ಸೇವೆಗಳ ಮುಖಾಂತರ ಜನಮಾನಸವನ್ನು ತಲುಪುತ್ತಿರುವ ಇನ್ನರ್ ವೀಲ್. ಪ್ರಪಂಚಾದ್ಯಂತ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಇನ್ನರ್ ವೀಲ್ ಜಿಲ್ಲಾ ಚೇರ್ಮನ್ ಶ್ರೀಮತಿ ವೈಶಾಲಿ
ಕುಡುವ ನುಡಿದರು. ಅವರು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಅಧಿಕೃತ ಬೇಟಿ ಸಂದರ್ಭದಲ್ಲಿ ಕ್ಲಬ್ಬಿನ ಚಟುವಟಿಕೆಗಳನ್ನು ಗಮನಿಸಿ ಅವರ ಮಾಡಿದ ಸೇವಾ ಕಾರ್ಯಗಳನ್ನು ಗುರುತಿಸಿ.ಈಗಾಗಲೇ ವೀಲ್ ಚೇರ್. ಬೆಂಚ್ ಡೆಸ್ಕ್. ಕಂಪ್ಯೂಟರ್ ನಲಿ ಕಲಿ.ಟೇಬಲ್ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಲವಾರು ಸಮುದಾಯಗಳಲ್ಲಿ ಮಾಡಿರುವ ಸೇವೆಯನ್ನು ಕೊಂಡಾಡಿದರು. ಗೋವುಗಳು ಹಾಗೂ ಪ್ರಾಣಿಗಳ ಬಗ್ಗೆ ತಾವು ಮಾಡುತ್ತಿರುವ ಸೇವೆಯನ್ನು ವಿವರಿಸಿದರು. ಮಹಿಳೆಯರು ಸ್ವಾವಲಂಬಿಗಳಾಗಬೇಕು ತಮ್ಮ ಗಳಿಕೆಯಲ್ಲಿ ಸಮಾಜಕ್ಕೆ ಸ್ವಲ್ಪ ಅರ್ಪಿಸಬೇಕು .ನಾವು ಮಾಡುವ ಸೇವೆ ಎಂದು ಸದಾ ಶಾಶ್ವತ ಈಗಾಗಲೇ ಜಿಲ್ಲೆಯಲ್ಲಿ ಅತ್ಯಂತ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾದ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಇನ್ನು ಅತಿ ಹೆಚ್ಚು ಎತ್ತರಕ್ಕೆ ಬೆಳೆದು ದೊಡ್ಡ ದೊಡ್ಡ ಸೇವಾ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು
Inner Wheel Club Shivamogga ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ
ರೋಟರಿ ಮಾಜಿ ಸಹಾಯಕ ಗವರ್ನರ್. ಜಿ ವಿಜಯಕುಮಾರ್ ಅವರು ಕ್ಲಬ್ಬಿನ ಮುಖವಾಣಿ “ಉಷೆ” ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಇನ್ನರ್ ವೀಲ್ ಸಂಸ್ಥೆ ಯವರು ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ವಿದ್ಯಾಭ್ಯಾಸ ಕೊಡುತ್ತಿರುವುದು ಒಂದು ಒಳ್ಳೆಯ ಮನಕುಲದ ಸೇವೆಯಾಗಿದೆ ಮಹಿಳೆಯರು ಯಾವುದೇ ಸೇವಾ ಕಾರ್ಯಗಳನ್ನು ಮಾಡಿದರು ಜನರನ್ನ ತಲುಪುತ್ತದೆ ಈ ನಿಟ್ಟಿನಲ್ಲಿ ಈಗಾಗಲೇ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯವರು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಉತ್ತಮವಾದ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ ಈ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲಾ ದಾನಿಗಳಿಗೂ ಮತ್ತೊಮ್ಮೆ ಧನ್ಯವಾದಗಳು ಎಂದು ನುಡಿದರು. ಸಮಾರಂಭದಲ್ಲಿ ಕಾರ್ಯದರ್ಶಿ ಲತಾ ಸೋಮಶೇಖರ್. ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್. ಇನ್ನರ್ ವೀಲ್ ಜಿಲ್ಲಾ ಉಪಾಧ್ಯಕ್ಷರಾದ ಶಬರಿ ಕಡಿದಾಳ್. ಮಧುರ ಮಹೇಶ್. ವಾಣಿ ಪ್ರವೀಣ್.. ವೀಣಾ ಸುರೇಶ್. ಗೀತಾ ಬಸವ ಕುಮಾರ್. ವಿಜಯಶ್ರೀ. ಇನ್ನರ್ ವೀಲ್ ಮಾಜಿ ಅಧ್ಯಕ್ಷರುಗಳು ಪದಾಧಿಕಾರಿಗಳು ಸದಸ್ಯರು. ಮಾಜಿ ಜಿಲ್ಲಾ ಚೇರ್ಮನ್ ಗಳು ಉಪಸ್ಥಿತರಿದ್ದರು
Special Olympics Bharat ಬೌದ್ಧಿಕ ಭಿನ್ನ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡೆಗೆ ಬೆನ್ನೆಲುಬಾಗಿ ನಿಲ್ಲಬೇಕು- ಆಯನೂರು ಮಂಜುನಾಥ್
Special Olympics Bharat ಕ್ರೀಡಾಕೂಟವು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಆಯನೂರು ಮಂಜುನಾಥ್ ರವರು “ಬೌದ್ಧಿಕ ಭಿನ್ನ ಸಾಮರ್ಥ್ಯ ಉಳ್ಳ ಮಕ್ಕಳಿಗೂ ಅವಕಾಶ ಕೊಟ್ಟು ತಾಳ್ಮೆ ಹಾಗೂ ಶ್ರದ್ಧೆಯಿಂದ ಅವರಿಗೆ ಕಲಿಸಿದರೆ ಅವರೂ ತಮ್ಮ ಜೀವನದಲ್ಲಿ ಸಾಧನೆ ಮಾಡಬಲ್ಲರು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಪೋಷಕರು, ಶಿಕ್ಷಕರು ಮತ್ತು ಸಮಾಜ ಅವರಿಗೆ ಬೆನ್ನೆಲುಬಾಗಿ ನಿಂತು ಅವರ ಸಾಧನೆಗೆ ಹಾಗೂ ಸಂತೋಷಕ್ಕೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.
ಕ್ರೀಡಾಕೂಟದಲ್ಲಿ 25 ಮೀಟರ್,50 ಮೀಟರ್, 100 ಮೀಟರ್ ಹಾಗೂ 200 ಮೀಟರ್ ಓಟದ ಸ್ಪರ್ಧೆ, ರಿಲೇ, ಗುಂಡು ಎಸೆತ, ಟೆನ್ನಿಸ್ ಬಾಲ್ ಎಸೆತ, ಮೃದು ಬಾಲ್ ಎಸೆತ, ಹೀಗೆ 5 ವಿಧದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. 3 ಜಿಲ್ಲೆಗಳಿಂದ 11 ಶಾಲೆಗಳ ಸುಮಾರು 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಸಂತೋಷವನ್ನು ನೋಡಲು ಸಂಭ್ರಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಬಂದಿದ್ದರು.
ಬೌದ್ಧಿಕ ಭಿನ್ನ ಸಾಮರ್ಥ್ಯ ಇರುವ ವಿಶೇಷ ಮಕ್ಕಳ ಕ್ರೀಡಾಕೂಟ ನಡೆಸಲು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ತನ್ನದೇ ಆದ ಕೆಲವು ನೀತಿ ನಿಯಮಗಳನ್ನು ಅಳವಡಿಸಿಕೊಂಡಿದೆ. ಹಾಗಾಗಿ ಈ ಕ್ರೀಡಾಕೂಟವನ್ನು ನಡೆಸಲು ವಿವಿಧ ಜಿಲ್ಲೆಗಳಿಂದ ವಿಶೇಷ ತರಬೇತಿ ಹೊಂದಿದ 12 ಜನ ಕ್ರೀಡಾ ತರಬೇತಿದಾರರು ಬಂದಿದ್ದರು.
Special Olympics Bharat ಕ್ರೀಡಾಕೂಟವನ್ನು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕದ ಶಿವಮೊಗ್ಗ ಜಿಲ್ಲಾ ಸಮಿತಿ ಆಯೋಜನೆ ಮಾಡಿತ್ತು. ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ ಶಿವಮೊಗ್ಗ, ಚೈತನ್ಯ ವಿಶೇಷ ಶಾಲೆ ಸಾಗರ ಹಾಗೂ ಸಕ್ಷಮ ಸಂಘಟನೆಯವರ ಸಹಯೋಗದೊಂದಿಗೆ ಈ ಕ್ರೀಡಾಕೂಟವು ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಶಿವಮೊಗ್ಗದ ಹೆಸರಾಂತ ಈ ಎನ್ ಟಿ ತಜ್ಞರಾದ ಶ್ರೀಯುತ ಡಾ.ಶ್ರೀಧರ್ ರವರು ಭಾಗವಹಿಸಿದ್ದರು.
ಮತ್ತೋರ್ವ ಅತಿಥಿಗಳಾಗಿ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ ಎ ಪೈ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪೆಷಲ್ ಒಲಂಪಿಕ್ ಭಾರತ್ ಕರ್ನಾಟಕದ ವಲಯಾಧಿಕಾರಿಗಳಾದ ಶ್ರೀಯುತ ಅಮರೇಂದ್ರ ಅಂಜನಪ್ಪನವರು ವಹಿಸಿಕೊಂಡಿದ್ದರು.
ಸ್ಪೆಷಲ್ ಒಲಿಂಪಿಕ್ಸ್ ನ ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷರಾದ ಶಾಂತಲಾ ಸುರೇಶ್ ರವರು ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಕಾರ್ಯದರ್ಶಿಗಳಾದ ಜ್ಯೋತಿ ಅರುಣ್ ಕುಮಾರ್ ರವರು ಸ್ವಾಗತವನ್ನು ಕೋರಿದರು. ಉಪಾಧ್ಯಕ್ಷರಾದ ಕುಮಾರ್ ಶಾಸ್ತ್ರೀಜಿಯವರು ಎಲ್ಲರನ್ನೂ ವಂದಿಸಿದರು. ಮಾಜಿ ಅಂಗವಿಕಲರ ಕಲ್ಯಾಣ
ಣಾಧಿಕಾರಿಗಳಾದ ಚಂದ್ರಪ್ಪಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಯುತ ರೇಖಾ ನಾಯಕ್, ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಮತಿ ಮೇಘ, ಸುಲೇಖಾ, ಸವಿತಾರಾಣಿ, ಶ್ರೀ ಎ.ಮಂಜುನಾಥ್ ರವರು ಉಪಸ್ಥಿತರಿದ್ದರು
