Thursday, March 26, 2026
Thursday, March 26, 2026
Home Blog Page 524

KWJ Voice ನೂತನ ಪತ್ರಕರ್ತರ ಸಂಘ KWJ Voice ಪದಾಧಿಕಾರಿಗಳ ಆಯ್ಕೆ

0

KWJ Voice ಪಧಾದಿಕಾರಿಗಳು:
1)ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಡಿ.ಜಿ.ನಾಗರಾಜ(ರಾಜು),ಸಂಪಾದಕರು, ಹಲೋ ಶಿವಮೊಗ್ಗ ದಿನಪತ್ರಿಕೆ 2)ಉಪಾಧ್ಯಕ್ಷರಾಗಿ ಚಿತ್ರಪ್ಪ ಯರಬಾಳ ವರದಿಗಾರರು ಸುದ್ದಿಸಾರ ದಿನಪತ್ರಿಕೆ ಪ್ರಧಾನ ಕಾರ್ಯದರ್ಶಿಯಾಗಿ 3)ಡಿ.ಪಿ.ಅರವಿಂದ್ ಸಂಪಾದಕರು,ಆಜಾದ್ ಹಿಂದ್ ಪತ್ರಿಕೆ/ F7 ನ್ಯೂಸ್ 4)ಕಾರ್ಯದರ್ಶಿ ಯಾಗಿ ಆರ್.ವಿ.ಕೃಷ್ಣ,ಸಂಪಾದಕರು,
ವಿಜಯ ಸಂಘರ್ಷ ಡಿಜಿಟಲ್ ಮೀಡಿಯಾ 5)ಸಹ ಕಾರ್ಯದರ್ಶಿಯಾಗಿ ಶಿವರಾಜ್ ಬಿ.ಸಿ ಅಗ್ನಿಯುಗ ಪತ್ರಿಕೆ 6)ಸಂಘಟನಾ ಕಾರ್ಯದರ್ಶಿಯಾಗಿ
ಅಣ್ಣಪ್ಪ ಎಂ. ಸಿಟಿ ರೌಂಡ್ಸ್ ಪತ್ರಿಕೆ 7)ಖಜಾಂಚಿಯಾಗಿ ಸತೀಶ್ ಗೌಡ ಕೆ.ಎಂ,ಸಂಪಾದಕರು, ನ್ಯೂ ಡಿಟೆಕ್ಟಿವ್‌ ಪತ್ರಿಕೆ
ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕ ಮಾಡಲಾಗಿದೆ.

ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳು:

1) ಗಣೇಶ್ ಬಿ.ಎಸ್,ಸಂಪಾದಕರು, ಕ್ರಾಂತಿಕಿಡಿ ಪತ್ರಿಕೆ 2)ಭರಧ್ವಾಜ್ ಯು.ಎಸ್.Eedina.com ಡಿಜಿಟಲ್ ಮೀಡಿಯಾ, ಜಿಲ್ಲಾ ವರದಿಗಾರರು 3)ಲಕ್ಷ್ಮಣ್ ಕುಮಾರ್ ಉದಾವತ್,ಸಂಪಾದಕರು, ನಿಮ್ಮ ವರಧಿ ಪತ್ರಿಕೆ 4)ನಂದನ್ ಕುಮಾರ್ ಸಿಂಗ್,ಸಂಪಾದಕರು, ಸಿಂಗ್ ಪತ್ರಿಕೆ 5)ಲೀಯೋಅರೋಜ,ವರದಿಗಾರರು,
ಹಲೋ ಶಿವಮೊಗ್ಗ ದಿನಪತ್ರಿಕೆ 6)B.A.ಸುರೇಶ್,ಸಂಪಾದಕರು, ಮಲೇನಾಡು ಕ್ರೈಮ್ ನ್ಯೂಸ್ ಪತ್ರಿಕೆ
7) ಹೆಚ್.ಎಸ್.ವಿಷ್ಣುಪ್ರಸಾದ್, ಸಂಪಾದಕರು, ಸ್ಟಾರ್ ಆಫ್ ಶಿವಮೊಗ್ಗ ಪತ್ರಿಕೆ
8)ಷಡಾಕ್ಷರಪ್ಪ ಜಿ.ಆರ್, ವಕೀಲರು ಇವರನ್ನು ಸಂಘದ ಕಾನೂನು ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ.

KWJ Voice ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕ ಮಾಡಲಾಯಿತು.

ಶಿವಮೊಗ್ಗದಲ್ಲಿ ನೂತನ ಪತ್ರಕರ್ತರ ಸಂಘ (KWJVoice) ಅಸ್ತಿತ್ವಕ್ಕೆ: ಸದಸ್ಯತ್ವ ಪಡೆಯಲು ಅರ್ಜಿ ಅಹ್ವಾನ

ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ ರಾಜ್ಯಾದ್ಯಕ್ಷರ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕ ಕಾರ್ಯಾಲಯ ಇತ್ತಿಚೆಗೆ ಅಸ್ತಿತ್ವಕ್ಕೆ ಬಂದಿದೆ. ಸಂಘದ ಕಚೇರಿ ಕೂಡ ಶಿವಮೊಗ್ಗದ ದುರ್ಗಿಗುಡಿ,3 ನೇಕ್ರಾಸ್ ಭರಣಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ನೂರಾರು ಸಮಾನ ಮನಸ್ಕ ಪತ್ರಕರ್ತರು ಸೇರಿ ಯಾವುದೇ
ತಾರಮ್ಯವಿಲ್ಲದೇ,ಬೇದಭಾವ ಇಲ್ಲದೇ,ಮಾಧ್ಯಮ ಪಟ್ಟಿ ಮತ್ತು ಮಾಧ್ಯಮ ಪಟ್ಟಿ ಹೊರತುಪಡಿಸಿದ ಎಲ್ಲಾ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಬ್ಲಾಗ್,ವೆಬ್ ಸೈಟ್ ಪತ್ರಕರ್ತರು ಸೇರಿ ಕಟ್ಟಿದ ಸಂಘಟನೆ ಇದಾಗಿದೆ. ಈ ಸಂಘಟನೆಯ ಉದ್ದೇಶ ಯಾವ ಸಂಘಟನೆಯ ವಿರುದ್ದವು ಅಲ್ಲ.

ದಿನಪತ್ರಿಕೆ,ವಾರಪತ್ರಿಕೆ,fortnightly,
ಮಾಸಿಕೆ ಪತ್ರಿಕೆಯ ಪತ್ರಕರ್ತರು ನೂತನ ಪತ್ರಕರ್ತರ ಸಂಘಟನೆಯಲ್ಲಿ ಸೇರ ಬಯಸುವವರು ಸಂಘದ ಕಚೇರಿಯಲ್ಲಿ ಅರ್ಜಿ ಫಾರಂ ಪಡೆದು ಸೂಕ್ತವಾದ ದಾಖಲಾತಿ ಯೊಂಧಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು.

ರಾಜ್ಯಾದ್ಯಕ್ಷರ ಆದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಘಟಕದ ಪಧಾದಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸರ್ವಾನುಮತದಿಂದ ಎಲ್ಲರ ಒಪ್ಪಿಗೆ ಪಡೆದು ಸರ್ವಾನುಮತದಿಂದ ನೇಮಕ ಮಾಡಲಾಗಿದೆ.

ಇದು ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಯಾಗಿದೆ. ರಾಜ್ಯಾದ್ಯಂತ ಈಗಾಗಲೇ 3500 ಸದಸ್ಯರು ಇದ್ದಾರೆ. ಸುಮಾರು ಜಿಲ್ಲೆಗಳಲ್ಲಿ ಸಂಘದ ಜಿಲ್ಲಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕದಲ್ಲಿ ಸಮಾನ ಮನಸ್ಕ ಪ್ರಾಮಾಣಿಕ ಪತ್ರಕರ್ತರು, ನೈಜ ಪತ್ರಕರ್ತರನ್ನು ಈ ಸಂಘಟನೆಯಲ್ಲಿ ತರುವ ಪ್ರಯತ್ನ ನಡೆದಿದೆ.

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಪತ್ರಿಕೆಯ ಸಂಪಾದಕರು ವರದಿಗಾರರು ಹಾಗೂ ಡಿಜಿಟಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತರನ್ನು ಈ ಸಂಘಟನೆಗೆ ಸೇರಿಸುವ ಪ್ರಯತ್ನ ಮುಂದುವರಿದಿದೆ.

ಈಗಾಗಲೇ ಸದರಿ ಸಂಘದ ಸದಸ್ಯರಾಗಲು 100 ಕ್ಕೂ ಹೆಚ್ಚು ಪತ್ರಕರ್ತರು ಸದಸ್ಯತ್ವದ ಅರ್ಜಿ ಫಾರಂ ಪಡೆದಿದ್ದಾರೆ.ಅವರೆಲ್ಲರನ್ನೂ ಅರ್ಜಿಗಳನ್ನು ಪರಿಶೀಲನೆ ಮಾಡಿ ಸಂಘದಲ್ಲಿ ಸೇರಿಸುವ ಪ್ರಯತ್ನ ನಡೆದಿದೆ.ಎಲ್ಲಾ ಅರ್ಜಿಗಳನ್ನು ಅನುಮೋದನೆ ಗಾಗಿ ರಾಜ್ಯ ಅದ್ಯಕ್ಷ ರಿಗೆ ಕಳುಹಿಸಲಾಗುವುದು.ಅನುಮೋದನೆ ಯಾದ ನಂತರ ಅಧಿಕೃತ ಐಡಿ ಕಾರ್ಡ್ ಸದಸ್ಯರಿಗೆ ವಿತರಿಸಲಾಗುತ್ತದೆ.

KWJVOICE ಶಿವಮೊಗ್ಗ ಘಟಕದ ಪತ್ರಿಕಾ ಭವನ:

KWJVOICE ಶಿವಮೊಗ್ಗ ಘಟಕದ ಪತ್ರಿಕಾ ಭವನ ಸಹ ಸಧ್ಯದಲ್ಲಿಯೇ ಶುಭಾರಂಭ ಗೊಳ್ಳಲಿದೆ. ಪ್ರೆಸ್ ಮೀಟ್ ಮಾಡಲು, ಪ್ರೆಸ್ ನೋಟ್ ನೀಡಲು ವ್ಯವಸ್ಥೆ ಮಾಡಲಾಗುವುದು.ಇಲ್ಲಿ ಶಿವಮೊಗ್ಗ ನಗರ/ ಜಿಲ್ಲೆಯ KWJVOICE ಸಂಘಟನೆಯ ಸದಸ್ಯತ್ವ ಹೊಂದಿದ ಪತ್ರಕರ್ತರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗುವುದು.

ಶಿವಮೊಗ್ಗ ಜಿಲ್ಲಾ ಘಟಕದ Karnataka working journalist Voice ಸಂಘಟನೆಯ ಸದಸ್ಯತ್ವದ ಅರ್ಜಿಗಳು ಲಭ್ಯವಿದೆ.ಅರ್ಜಿ ಮತ್ತು ಸದಸ್ಯತ್ವದ ಶುಲ್ಕ ಸೇರಿ ರೂ.500/- ನೀಡಿ ಅರ್ಜಿ ಪಡೆದುಕೊಳ್ಳಬಹುದು. .ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಅರ್ಜಿಯನ್ನು ನೀಡಲಾಗುವುದು.

ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಆತ್ಮೀಯ ಸ್ವಾಗತ.ಬನ್ನಿ ಕೈ ಜೋಡಿಸಿ…

KWJVOICE ಶಿವಮೊಗ್ಗ ಘಟಕದ ಧ್ಯೇಯ ಉದ್ದೇಶ ಏನೇಂದರೇ,ಒಟ್ಟಾಗಿ ಪತ್ರಕರ್ತರ ಶ್ರೇಯೋ ಅಭಿವೃದ್ದಿ,ಹಿತಕಾಯುವ ಕೆಲಸ ಮಾಡೋಣ,ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸೋಣ…ಸರ್ಕಾರದಿಂದ ವಾರ್ತಾ ಇಲಾಖೆಯಿಂದ ಪತ್ರಕರ್ತರಿಗೆ ಸಿಗಬಹುದಾದ ಸೌಲಭ್ಯಗಳು, ನಿವೇಶನ ಇತ್ಯಾದಿ ಪಡೆಯಲು ಹೋರಾಟ,ಪತ್ರಕರ್ತರ ಸಹಕಾರ ಬ್ಯಾಂಕ್ ನಿರ್ಮಾಣ ಮಾಡುವ ಪ್ರಯತ್ನ ಮಾಡೋಣ…ಬನ್ನಿ ಕೈ ಜೋಡಿಸಿ…
ಅರ್ಜಿಯ ಜೊತೆಯಲ್ಲಿ ತಮ್ಮ ಪತ್ರಿಕೆಯ ಒಂದು ಪ್ರತಿ, ಒಂದು ಪಾಸ್ ಪೋರ್ಟ್ ಪೋಟೋ….RNI certificate xerox,ಆದಾರ್ ಕಾರ್ಡ್ ನೀಡತಕ್ಕದ್ದು. ವರದಿಗಾರರು ಮತ್ತು ಪೋಟೋ ಗ್ರಾಫ್ ಗಳು ಆಗಿದ್ದಲ್ಲಿ ಸಂಪಾದಕರಿಂದ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಧೃಡಿಕರಣ ಪತ್ರ ತರತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಘಟಕದ Karnataka working journalist Voice ಸಂಘದ ಜಿಲ್ಲಾ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ (ರಾಜು).ಮೊ.9449063043 ಮತ್ತು ಪ್ರಧಾನ ಕಾರ್ಯದರ್ಶಿಯಾದ ಅರವಿಂದ್.ಮೊ.9481090929 ಇವರನ್ನು ಸಂಪರ್ಕಿಸಲು ಕೋರಿದೆ.

Shivamogga Police ವಿದ್ಯುತ್ ಶಾಕ್ ತಗುಲಿ ಕಟ್ಟಡ ಕಾರ್ಮಿಕ ಸಾವು

0

Shivamogga Police ಆನಂದಪುರ ಸಮೀಪದ ಮಲಂದೂರಿನಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

Shivamogga Police ಶಿವಮೊಗ್ಗ ಪಟ್ಟಣದ ನಿವಾಸಿ ಕೃಷ್ಣಮೂರ್ತಿ (46) ಸಾವಿಗೀಡಾದವರು. ತಕ್ಷಣ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ವರ್ಕ್ ಶಾಪ್ ನೌಕರ ಮಲಂದೂರಿನ ಸಂತೋಷ್ ರವರು ಕಟ್ಟಡವೊಂದರಲ್ಲಿ ವಿದ್ಯುತ್ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರಿಗೆ ವಿದ್ಯುತ್ ಶಾಕ್‌ ಹೊಡೆದಿದೆ.

Union Bank ಬ್ಯಾಂಕ್ ಮಾನೇಜರ್ ಸೋಗಿನ ಮಾತಿಗೆ ಬಲಿ.ಖಾತೆಯಿಂದ ₹9.19 ಲಕ್ಷ ಕಳೆದುಕೊಂಡ ಶಿಕ್ಷಕಿ

0

Union Bank ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ (Bank) ಮ್ಯಾನೇಜರ್‌ ನಂಬರ್‌ ಸರ್ಚ್‌ ಮಾಡಿ ಕರೆ ಮಾಡಿದ್ದ ಮಹಿಳೆಯ ಬ್ಯಾಂಕ್‌‌ ಖಾತೆಯಿಂದ 9.19 ಲಕ್ಷ ರೂ. ಕಣ್ಮರೆಯಾಗಿದೆ.

ಶಿವಮೊಗ್ಗ ಶಿಕ್ಷಕಿಯೊಬ್ಬರು ಹಣ ಕಳೆದುಕೊಂಡು ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
ಬ್ಯಾಂಕಿಂಗ್‌ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಶಿಕ್ಷಕಿಯೊಬ್ಬರು (ಹೆಸರು ಗೌಪ್ಯ) ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಮೊಬೈಲ್‌ ನಂಬರ್‌ ಸರ್ಚ್‌ ಮಾಡಿದ್ದರು. ಅಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮ್ಯಾನೇಜರ್‌ ಸೋಗಿನಲ್ಲಿ ಮಾತನಾಡಿದ್ದ.

ಆತ ಸೂಚಿಸಿದ ಮೊಬೈಲ್‌ ಆ್ಯಪ್ ಅನ್ನು ಶಿಕ್ಷಕಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ಚೆಕ್‌ ಕ್ಲಿಯರೆನ್ಸ್‌ ಆಗಲು 24 ಗಂಟೆ ಸಮಯ ಬೇಕು ಎಂದು ಆತ ತಿಳಿಸಿದ್ದ.

Union Bank 11 ಬಾರಿ ಹಣ ವರ್ಗಾವಣೆ
ಮರು ದಿನ ಅದೇ ನಂಬರ್‌ಗೆ ಶಿಕ್ಷಕಿ ಕರೆ ಮಾಡಿದಾಗ ಇವತ್ತು ನಿಮ್ಮ ಚೆಕ್‌ ಕ್ಲಿಯರೆನ್ಸ್‌ ಆಗಲಿದೆ ಎಂದು ಮ್ಯಾನೇಜರ್‌ ಸೋಗಿನಲ್ಲಿದ್ದಾತ ತಿಳಿಸಿದ್ದ. ಕೆಲವೇ ಹೊತ್ತಿನಲ್ಲಿ ಶಿಕ್ಷಕಿಯ ಬ್ಯಾಂಕ್‌ ಖಾತೆಯಿಂದ 11 ಬಾರಿ ಹಣ ವರ್ಗಾವಣೆಯಾಗಿತ್ತು.

ಒಟ್ಟು 9.19 ಲಕ್ಷ ರೂ. ಹಣ ಬೇರೆಡೆಗೆ ವರ್ಗವಾಗಿತ್ತು.
ಮೋಸ ಹೋಗಿರುವುದು ಗೊತ್ತಾದ ಹಿನ್ನೆಲೆ ಶಿಕ್ಷಕಿ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Shivamogga Police ಸು.₹ 46.30 ಲಕ್ಷ ಮೌಲ್ಯದ ಟವರ್ ಬಿಡಿಭಾಗಗಳ ಕಳವು

0

Shivamogga Police ಖಾಲಿ ಜಾಗದಲ್ಲಿ ಅಳವಡಿಸಿದ್ದ ಮೊಬೈಲ್‌ ಟವರ್‌ ಕಳ್ಳತನವಾಗಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು 2008ರಲ್ಲಿ ಮೊಬೈಲ್‌ ಟವರ್‌ ಅಳವಡಿಸಿತ್ತು.

ಅದೇ ಸಂಸ್ಥೆ ಟವರ್‌ನ ನಿರ್ವಹಣೆ ಮಾಡುತ್ತಿತ್ತು. ಕೋವಿಡ್‌ ಸಂದರ್ಭ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಆ ಬಳಿಕ ಸಂಸ್ಥೆಯವರು ಸ್ಥಳಕ್ಕೆ ಬಂದಾಗ ಮೊಬೈಲ್‌ ಟವರ್‌ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳೆ ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Shivamogga Police ಈ ಸಂಬಂಧ ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟವರ್‌ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ಉಲ್ಲೇಖಿಸಲಾಗಿ

Shimoga District Brahmin Mahasabha ಅ.25 ಶಿವಮೊಗ್ಗದಲ್ಲಿ ಆಚಾರ್ಯತ್ರಯರ ಜಯಂತ್ಯುತ್ಸವ

0

Shimoga District Brahmin Mahasabha ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದಲ್ಲಿ ಆಚಾರ್ಯ ತ್ರಯರ ಜಯಂತಿಯನ್ನು ಅ. 25ರಂದು ಸಂಜೆ 5:30ಕ್ಕೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದದ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ, ಶಂಕರ, ಮಧ್ವ ಮತ್ತು ರಾಮಾನುಜರು
(ಆಚಾರ್ಯತ್ರಯರು) ಪ್ರತಿಪಾದಿಸಿದ ಸಿದ್ಧಾಂತ ಹಾಗೂ ಸಂದೇಶಗಳನ್ನು ಜನ ಮಾನಸಕ್ಕೆ ತಲುಪಿಸಿವ ಸದುದ್ದೇಶದಿಂದ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಳೆದ 5 ವರ್ಷಗಳಿಂದ ಆಚಾರ್ಯ ತ್ರಯರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ ಎಂದರು.

ಅಂದು “ಪ್ರೊ, ಪವನ್ ಕಿರಣ್‌ ಕೆರೆ”, ಉಡುಪಿ ಇವರು ಉಪನ್ಯಾಸ ನೀಡಲಿದ್ದಾರೆ. ಇವರು ಉಡುಪಿಯ ಆಸೆಮ್ಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದು, ಯಕ್ಷಗಾನ ಪ್ರಸಂಗಗಳ ರಚನಾಕಾರರು ಹಾಗೂ ತಾಳ ಮದ್ದಲೆಯಲ್ಲಿ ಅರ್ಥಧಾರಿಗಳಾದ್ದಾರೆ.

Shimoga District Brahmin Mahasabha ಈ ಉಪನ್ಯಾಸ ಕಾರ್ಯಕ್ರಮದ ನಂತರ ನವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಪ್ರ ಮಹಿಳೆಯರಿಗಾಗಿ “ದೇವಿ ಕುರಿತ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಬಿ.ಕೆ. ವೆಂಕಟೇಶಮೂರ್ತಿ, ಕೇಶವಮೂರ್ತಿ, ಪ್ರೊ. ನಾಗಮಣಿ, ಸರಳಾದೇವಿ, ಮೊದಲಾವರು ಹಾಜರಿದ್ದರು.

Department of Kannada and Culture ಕಿತ್ತೂರು ಚೆನ್ನಮ್ಮ ಮಾದರಿ ಅನುಸರಿಸಿ ಮಹಿಳೆಯರು ಸಾಧನೆ ಮಾಡಬೇಕು-ಎಸ್.ಸುಂದರ್

0

Department of Kannada and Culture ನಮ್ಮೆಲ್ಲರ ಸ್ಪೂರ್ತಿ, ಸ್ವಾತಂತ್ರ್ಯ ಹಂಬಲದ ನಿದರ್ಶನ ಹಾಗೂ ಶೌರ್ಯದೊಂದಿಗೆ ಕಾರುಣ್ಯಮೂರ್ತಿಯಾದ ಕಿತ್ತೂರಿನ ರಾಣಿ ಚೆನ್ನಮ್ಮನವರ ಹಾದಿಯಲ್ಲಿ ನಡೆದು ಹೆಣ್ಣುಮಕ್ಕಳು ಸಾಧನೆ ಮಾಡಬೇಕೆಂದು ಸಿರಿಕನ್ನಡ ಪುಸ್ತಕ ಮನೆಯ ಪ್ರಕಾಶಕರಾದ ಎಸ್.ಸುಂದರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ದೇಶ ಬ್ರಿಟಿಷರಿಂದಾಗಿ 200 ವರ್ಷಗಳ ಕಾಲ ಗುಲಾಮಗಿರಿಯಿಂದ ನಲುಗಿದ ಸಂದರ್ಭದಲ್ಲಿ, ಸ್ವಾತಂತ್ರö್ಯ ಸಂಗ್ರಾಮಕ್ಕೂ 33 ವರ್ಷಗಳ ಪೂರ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ತತ್ವ ಪ್ರೇರಣೆಯಿಂದ ಬೆಳೆದು ಬಂದ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸಂಗ್ರಾಮ ಸಾರಿ ದೊಡ್ಡ ಜಯ ಸಾಧಿಸಿ ಕನ್ನಡ ನಾಡಿನಲ್ಲಿ ಹೋರಾಟಕ್ಕೆ ಮುನ್ನುಡಿ ಬರೆದ ದಿನಕ್ಕೆ ಇಂದು 200 ರ ಸಂಭ್ರಮ.

ರಾಣಿ ಚೆನ್ನಮ್ಮ ಮತ್ತೆ ಮತ್ತೆ ನಮ್ಮೆದೆಯಲ್ಲಿ ಸ್ಫೂರ್ತಿಯಾಗಿದ್ದಾರೆ. ಅವರ ಮಾರ್ಗದಲ್ಲಿ ನಡೆದು ನಮ್ಮ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ರಾಜಕೀಯ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ.
ಗಂಡಿಗೆ ಸಮಾನವಾದ ದಕ್ಷತೆ, ಚಾಣಾಕ್ಷತೆ ಮತ್ತು ಜಾಣ್ಮೆಯಿಂದ ಹೋರಾಡಿದ್ದರು ಚೆನ್ನಮ್ಮ. ಅದೇ ದಕ್ಷತೆ, ಜಾಣ್ಮೆ ಪ್ರಸ್ತುತ ನಮ್ಮಲ್ಲಿ, ನಮ್ಮ ಹೆಣ್ಣುಮಕ್ಕಳಲ್ಲಿ ಇದೆಯಾ ಎಂದು ಪ್ರಶ್ನಿಸಿಕೊಳ್ಳುವ, ಪುನರಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ.

ಶೌರ್ಯದ ಜೊತೆ ಕಾರಣ್ಯಮೂರ್ತಿಯಾಗಿದ್ದರು ಚೆನ್ನಮ್ಮ. ಯುದ್ದ ನೈಪುಣ್ಯತೆ ಮತ್ತು ಎಚ್ಚೆತ್ತ ರಾಜಕೀಯ ಪ್ರಜ್ಞೆ ಹೊಂದಿದ್ದ ಆಕೆಯು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದ ಎರಡು ಕಣ್ಣಾಗಿದ್ದು ಯಾವತ್ತೂ ಮಾರ್ಗದರ್ಶಕರಾಗಿದ್ದಾರೆ.

Department of Kannada and Culture ಆಧುನಿಕತೆ, ವಾಣಿಜ್ಯ ಬದುಕಿನಲ್ಲಿ ಪ್ರಸ್ತುತ ಜಾಗತಿಕ ದಾಸ್ಯದಂತಹ ಸಂದರ್ಭ ಸೃಷ್ಟಿಯಾಗಿದ್ದು, ಈ ಕುರಿತು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡು ಉತ್ತರ ಕಂಡುಕೊಳ್ಳದಿದ್ದರೆ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದ ಅವರು ಮುಂದಿನ ಪೀಳಿಗೆಗೆ ಸ್ವಾತಂತ್ರö್ಯ ಹೋರಾಟಗಾರರು ಹಾಗೂ ಮಹನೀಯರ ಭವ್ಯವಾದ ಪರಂಪರೆಯನ್ನು ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಚೆನ್ನಮ್ಮ ಅವರೊಂದು ಶಕ್ತಿ, ಸ್ಪೂರ್ತಿ ಮತ್ತು ನಂಬಿಕೆ. ಇವೆಲ್ಲ ನಮ್ಮೆಲ್ಲರಲ್ಲಿ ಬರಬೇಕು. ಅವರು ಯಾವುದೋ ಒಂದು ಜಾತಿಗೆ ಸೀಮಿತರಲ್ಲ. ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿಯಾಗಿರುವ ಅವರನ್ನು ಎಷ್ಟು ನೆನೆದರೂ, ಹೊಗಳಿದರು ಸಾಲದು.
ಬ್ರಿಟಿಷರ ವಿರುದ್ದ ಚೆನ್ನಮ್ಮ ವಿಜಯ ಸಾಧಿಸಿದ ವಿಜಯೋತ್ಸವ ದಿನ ಇಂದು. ಈ ದಿನವನ್ನು ನಾವು ಇನ್ನೂ ವಿಜೃಂಭಣೆಯಿಂದ ಆಚರಿಸಿ ಅವರ ಕೀರ್ತಿಯನ್ನು ಎತ್ತಿ ಹಿಡಿಯಬೇಕು ಎಂದರು.
ಪಂಚಮಸಾಲಿ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ದೇಶ್ ಬೇಗೂರು ಮಾತನಾಡಿ, ಬ್ರಿಟಿಷರ ವಿರುದ್ದ ಧ್ವನಿಯೆತ್ತಿದ ಪ್ರಥಮ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ. ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸೆಣೆಸಾಡಿ ವಿಜಯ ಸಾಧಿಸಿದ ದಿನವಿಂದು. ಇಂತಹ ವೀರಮಹಿಳೆಯನ್ನು ಯಾವುದೇ ಜಾತಿಗೆ ಸೀಮಿತ ಮಾಡುವುದು ಬೇಡ. ಗಾಂಧಿ ಜಯಂತಿ ಮಾದರಿಯಲ್ಲಿ ಶಾಲಾ-ಕಾಲೇಜು ಸೇರಿದಂತೆ ಎಲ್ಲೆಡೆ ಇವರ ಜಯಂತಿ ಆಚರಣೆ ಆಗಬೇಕು ಎಂದ ಅವರು ಸಮುದಾಯದ ಸಂಘಟನೆ ಹೆಚ್ಚಬೇಕು. ನಗರದಲ್ಲಿ ಒಂದು ಸಮುದಾಯ ಭವನ ನಿರ್ಮಿಸಲು ಜಾಗ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ ಬಸವರಾಜು ಕನಗಲ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬಾಲ್ಯದಲ್ಲಿ ಓದಿನಲ್ಲಿ ಜಾಣೆಯಾಗಿದ್ದು ಕುದರೆ ಸವಾರಿ ಪರಿಣಿತಿ ಹೊಂದಿದ್ದರು. ಅವರು ಜೀವನದಲ್ಲಿನ ಸವಾಲುಗಳನ್ನು ಹೇಗೆಲ್ಲಾ ಎದುರಿಸಿ ನಿಂತು ಹೋರಾಡಿದರೆಂದು ಚೆನ್ನಮ್ಮನ ಜೀವನ ಚರಿತ್ರೆ ಬಗ್ಗೆ ತಿಳಿಸಿದರು.
ಕೊಳಗೇರಿ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಗೀತಾ ರವಿಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಇಂದು ಎಲ್ಲ ಕ್ಷೇತ್ರದಲ್ಲಿ ಇದ್ದರೂ ತಾರತಮ್ಯ ಇದೆ. ಹೆಣ್ಣು ಮಕ್ಕಳಿಗೆ ಮನೆಯಿಂದಲೇ ಸಮಾನತೆ ಶುರು ಆಗಬೇಕು. ವೀರರಾಣಿ ಚೆನ್ನಮ್ಮನಂತಿರಬೇಕೆಂದು ಅವರಲ್ಲಿ ಧೈರ್ಯ ತುಂಬಬೇಕು. ಹೆಣ್ಣು ಮಕ್ಕಳ ಬದುಕು ಇನ್ನೂ ಸುಧಾರಣೆ ಆಗಬೇಕು. ಧೈರ್ಯ ಸ್ಥೈರ್ಯದಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ ಎಂದರು.

ಮುಖಂಡರಾದ ಹೆಚ್.ವಿ.ಮಹೇಶ್ವರಪ್ಪ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಇಡೀ ದೇಶಕ್ಕಾಗಿ ಹೋರಾಡಿದವರು. ಇವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ ವಿಜೃಂಭಣೆಯಿಂದ ಆಚರಿಸುವಂತೆ ಆಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಕಾರ್ಯಕ್ರಮ ನಿರ್ವಹಿಸಿದರು. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಂ.ಕುಮಾರ್ ವಂದಿಸಿದರು.

ಮುಖಂಡರಾದ ಎನ್.ಎಸ್.ಕುಮಾರ್, ಚನ್ನಬಸಪ್ಪ, ಮಾಲತೇಶ, ಮಂಜುನಾಥ, ವೈ.ಹೆಚ್.ನಾಗರಾಜ್ ಶಶಿಕಲ, ಬಸವರಾಜ್, ಇತರರು ಪಾಲ್ಗೊಂಡಿದ್ದರು.

M.B.B.S ನಮ್ಮದೊಂದೇ ಗುರಿ.ಡಾಕ್ಟರಾಗೋದು” ಒಂದೇ ಕುಟುಂಬದ ನಾಲ್ವರು ಸೋದರಿಯರ ದಿಟ್ಟ ನಿರ್ಧಾರ

0

M.B.B.S ಹೆಣ್ಣು ಮಕ್ಕಳಿಗೆ ಶಿಕ್ಷಣದಲ್ಲಿ ಹೆಚ್ಚು ಹೆಚ್ಚು ಅವಕಾಶ ನೀಡಿದಂತೆ ಸಾಧನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಒಂದೇ ಕುಟುಂಬದ ನಾಲ್ವರು ಸಹೋದರಿಯರಿಗೆ MBBS ಸೀಟ್ ಪಡೆದು ವೈದ್ಯರಾಗಲು ಹೊರಟಿದ್ದಾರೆ.

ನಾಲ್ವರು ಸಹೋದರಿಯರು ತಮ್ಮ ಕಠಿಣ ಪರಿಶ್ರಮದ ಮೂಲಕವೇ ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯದ ಡಾಕ್ಟರ್ಸ್ ಆಗಲು ಹೊರಟಿದ್ದಾರೆ. ಇದೀಗ ನಾಲ್ವರು ಸಹೋದರಿಯರ ಸಾಧನೆಯ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಎಂ.ಬಿ.ಬಿ.ಎಸ್ ಓದಿ ಡಾಕ್ಟರ್ಸ್ ಆಗಲು ಕಠಿಣ ಪರಿಶ್ರಮದ ಜೊತೆಗೆ ಹಣವೂ ಇರಬೇಕು . ಯಾಕಂದ್ರೆ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಗುವುದು ಭಾರೀ ಕಷ್ಟದ ಮಾತು ಅಂತಾನೇ ಹೇಳಬಹುದು. ಅಂತಹದರಲ್ಲಿ ಇಲ್ಲೊಂದು ಒಂದೇ ಕುಟುಂಬದ ನಾಲ್ವರು ಮಕ್ಕಳು ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯ ವೈದ್ಯರಾಗಲು ತಯಾರಾಗಿದ್ದಾರೆ.

ತೆಲಂಗಾಣದ ಸಿದ್ದಿಪೇಟೆಯ ನಾಲ್ವರು ಸಹೋದರಿಯರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದುಕೊಂಡು ಪೋಷಕರಿಗೆ ಹೆಮ್ಮೆ ತರುವಂತಹ ಕೆಲಸವನ್ನು ಮಾಡಿದ್ದಾರೆ.
ತಮ್ಮ ನಾಲ್ವರು ಹೆಣ್ಣು ಮಕ್ಕಳ ಈ ಸಾಧನೆಗೆ ಪೋಷಕರಾದ ಕೊಂಕ್ ರಾಮಚಂದ್ರಂ ಮತ್ತು ಶಾರದ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

M.B.B.S ಈ ಪತಿ-ಪತ್ನಿಯರಿಬ್ಬರು ಟೈಲರ್ ಕೆಲಸವನ್ನು ಮಾಡಿ ಕಷ್ಟಪಟ್ಟು ನಾಲ್ವರು ಮಕ್ಕಳನ್ನು ಓದಿಸಿದ್ದು, ಇದೀಗ ಈ ನಾಲ್ವರು ಹೆಣ್ಣು ಮಕ್ಕಳು ತಂದೆ ತಾಯಿ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ.

ಅವರ ಹಿರಿಯ ಮಗಳಾದ ಮಮತಾ 2018 ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆದು ಇತ್ತೀಚಿಗಷ್ಟೇ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾಳೆ.
ಇನ್ನೂ ಅವರ ಮಗಳು ಮಾಧವಿ 2020 ರಲ್ಲಿ ಎಂಬಿಬಿಎಸ್ ಸೀಟ್ ಪಡೆದು ಪ್ರಸ್ತುತ ಅಂತಿಮ ವರ್ಷದ ಎಂಬಿಬಿಎಸ್ ಪದವಿ ಶಿಕ್ಷಣವನ್ನು ಪಡೆದಯುತ್ತಿದ್ದಾಳೆ. ಇದೀಗ ಇವರ ಅವಳಿ ಮಕ್ಕಳಾದ ರೋಹಿಣಿ ಮತ್ತು ರೋಷಿಣಿ ಕೂಡಾ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆಯುವ ಮೂಲಕ ತಂದೆ-ತಾಯಿಗೆ ಹೆಮ್ಮೆ ತರುವಂತಹ ಕಾರ್ಯವನ್ನು ಮಾಡಿದ್ದಾರೆ. ಎಷ್ಟೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ನಮಗೆ ಇಷ್ಟು ಒಳ್ಳೆಯ ಶಿಕ್ಷಣವನ್ನು ನೀಡಿದ ನಮ್ಮ ತಂದೆ-ತಾಯಿಯ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ನಾಲ್ವರು ಪುತ್ರಿಯರು ಹೇಳಿಕೊಂಡಿದ್ದಾರೆ.

Kuvempu University ಕುವೆಂಪು ವಿವಿ ಸ್ನಾತಕ/ ಸ್ನಾತಕೋತ್ತರ ಪದವಿ ಇತ್ಯಾದಿಗಳನ್ನು ಕೋರ್ಸ್ ಗಳಿಗೆ ಈಗ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು‌ ಅವಕಾಶ

0

Kuvempu University ಶಿವಮೊಗ್ಗ ನಗರದ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.25 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆ, ನಾಗಪ್ಪಕೇರಿ, ಉಪ್ಪಾರಕೇರಿ, ತಿರುಪಳಯ್ಯನ ಕೇರಿ, ಸಾವರ್ಕರ್ ನಗರ, ಪೆನ್ಷನ್‌ಮೊಹಲ್ಲಾ, ಲಷ್ಕರ್ Kuvempu University ಮೊಹಲ್ಲಾ, ಓ.ಬಿ.ಎಲ್ ರಸ್ತೆ, ಮಹಾರಾಜ ರಸ್ತೆ, ಅಶೋಕರಸ್ತೆ, ತುಳುಜಾ ಭವಾನಿ ರಸ್ತೆ, ಉರ್ದು ಬಜಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Rain in Shivamogga ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಅವಶೇಷದಡಿ‌‌ ಕಾರ್ಮಿಕರ ಶವ

0

Rain in Shivamogga ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸುತ್ತಿವೆ. ಹೆಣ್ಣೂರಿನ ಬಾಬುಸಾಬ್‌ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿರುವ ಘಟನೆ ನಡೆದಿದೆ.

ಕಾಮಗಾರಿಯ ವೇಳೆಗೆ 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೂಲಿ ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಸುತ್ತಿದ್ದಾರೆ.

Rain in Shivamogga ಕಾರ್ಯಾಚರಣೆ ವೇಳೆ ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಅಲ್ಲದೆ ಸಿಬ್ಬಂದಿ ಮೂವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

World Polio Day ವಿಶ್ವ ಪೊಲಿಯೋ ದಿನಾಚರಣೆಗೆ ರೋಟರಿ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮ

0

World Polio Day ದಿನಾಂಕ 24 ಗುರುವಾರ ಅಕ್ಟೋಬರ್ 2024 ರಂದು ನಗರದ ಗೋಪಿ ಸರ್ಕಲ್ ನಲ್ಲಿ ಬೆಳಿಗ್ಗೆ 9:00ಗೆ “ವಿಶ್ವ ಪೋಲಿಯೋ ದಿನ “ಆಚರಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾಕ್ಟರ್ ಪಿ. ನಾರಾಯಣ್.. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ನಟರಾಜ್. ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್. ಯು ರವೀಂದ್ರನಾಥ್ ಐತಾಳ್. ಐ.ಎಂ.ಎ.ಅಧ್ಯಕ್ಷ ಡಾ. ಶ್ರೀಧರ್. ವಲಯ 10 World Polio Day ಮತ್ತು 11ರ ಸಹಾಯಕ ಗೌರ್ನರ್ಗಳಾದ ಎಸ್ ಆರ್ ನಾಗರಾಜ್. ಎಚ್ ಎಮ್ ಸುರೇಶ್ ಕುಮಾರ್.ಮಾಜಿ ಸಹಾಯಕ ಗೌರ್ನರ್ಗಳಾದ ಜಿ ವಿಜಯಕುಮಾರ್. ಹಾಗೂ ಶಿವಮೊಗ್ಗ ನಗರದ ಎಲ್ಲಾ ಎಂಟು ರೋಟರಿ ಕ್ಲಬ್ ಗಳ ಅಧ್ಯಕ್ಷರು ಕಾರ್ಯದರ್ಶಿಗಳು.. ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿರುವವರು.