Friday, July 24, 2026
Friday, July 24, 2026

Union Bank ಬ್ಯಾಂಕ್ ಮಾನೇಜರ್ ಸೋಗಿನ ಮಾತಿಗೆ ಬಲಿ.ಖಾತೆಯಿಂದ ₹9.19 ಲಕ್ಷ ಕಳೆದುಕೊಂಡ ಶಿಕ್ಷಕಿ

Date:

Union Bank ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ (Bank) ಮ್ಯಾನೇಜರ್‌ ನಂಬರ್‌ ಸರ್ಚ್‌ ಮಾಡಿ ಕರೆ ಮಾಡಿದ್ದ ಮಹಿಳೆಯ ಬ್ಯಾಂಕ್‌‌ ಖಾತೆಯಿಂದ 9.19 ಲಕ್ಷ ರೂ. ಕಣ್ಮರೆಯಾಗಿದೆ.

ಶಿವಮೊಗ್ಗ ಶಿಕ್ಷಕಿಯೊಬ್ಬರು ಹಣ ಕಳೆದುಕೊಂಡು ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
ಬ್ಯಾಂಕಿಂಗ್‌ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಶಿಕ್ಷಕಿಯೊಬ್ಬರು (ಹೆಸರು ಗೌಪ್ಯ) ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಮೊಬೈಲ್‌ ನಂಬರ್‌ ಸರ್ಚ್‌ ಮಾಡಿದ್ದರು. ಅಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮ್ಯಾನೇಜರ್‌ ಸೋಗಿನಲ್ಲಿ ಮಾತನಾಡಿದ್ದ.

ಆತ ಸೂಚಿಸಿದ ಮೊಬೈಲ್‌ ಆ್ಯಪ್ ಅನ್ನು ಶಿಕ್ಷಕಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ಚೆಕ್‌ ಕ್ಲಿಯರೆನ್ಸ್‌ ಆಗಲು 24 ಗಂಟೆ ಸಮಯ ಬೇಕು ಎಂದು ಆತ ತಿಳಿಸಿದ್ದ.

Union Bank 11 ಬಾರಿ ಹಣ ವರ್ಗಾವಣೆ
ಮರು ದಿನ ಅದೇ ನಂಬರ್‌ಗೆ ಶಿಕ್ಷಕಿ ಕರೆ ಮಾಡಿದಾಗ ಇವತ್ತು ನಿಮ್ಮ ಚೆಕ್‌ ಕ್ಲಿಯರೆನ್ಸ್‌ ಆಗಲಿದೆ ಎಂದು ಮ್ಯಾನೇಜರ್‌ ಸೋಗಿನಲ್ಲಿದ್ದಾತ ತಿಳಿಸಿದ್ದ. ಕೆಲವೇ ಹೊತ್ತಿನಲ್ಲಿ ಶಿಕ್ಷಕಿಯ ಬ್ಯಾಂಕ್‌ ಖಾತೆಯಿಂದ 11 ಬಾರಿ ಹಣ ವರ್ಗಾವಣೆಯಾಗಿತ್ತು.

ಒಟ್ಟು 9.19 ಲಕ್ಷ ರೂ. ಹಣ ಬೇರೆಡೆಗೆ ವರ್ಗವಾಗಿತ್ತು.
ಮೋಸ ಹೋಗಿರುವುದು ಗೊತ್ತಾದ ಹಿನ್ನೆಲೆ ಶಿಕ್ಷಕಿ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನೀಟ್ ಗೊಂದಲ, ಪ್ರತಿಭಟನೆ : ರಾಷ್ಟ್ರವಿರೋಧಿ ಶಕ್ತಿಗಳ ಕರಾಳ ತಂತ್ರ- ಎಸ್.ಎನ್.ಚನ್ನಬಸಪ್ಪ

S.N. Channabasappa ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ...

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...