Thursday, March 26, 2026
Thursday, March 26, 2026
Home Blog Page 523

KYC 9 & 10. ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ವಿದ್ಯಾರ್ಥಿಗಳಿಗೆ ಇ- ಕೆವೈಸಿ ಕಡ್ಡಾಯ”

0

2023- 24ನೇ ಸಾಲಿನಲ್ಲಿ ಶಿವಮೊಗ್ಗ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ 9 ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

KYC ಪೋಷಕರ ವಾರ್ಷಿಕ ಆದಾಯ ಮಿತಿ ರೂ.2.50 ಲಕ್ಷದೊಳಗಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಭಾರತ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾAಶದ (SSP portal) ಮೂಲಕ ಆನ್‌ಲೈನ್ ನಲ್ಲಿ ಇಲಾಖಾ ವೆಬ್‌ಸೈಟ್ ವಿಳಾಸ: www.sw.kar.nic.in & https://ssp.postmatric.karnataka.gov.in/homepage.aspx ನಲ್ಲಿ ಅರ್ಜಿಯನ್ನು ಸಲ್ಲಿಸಿ ಎಸ್‌ಎಸ್ ಪಿ ಐಡಿ ಯೊಂದಿಗೆ ಸಮಾಜ ಕಲ್ಯಾಣ ಇಲಾಖಾ ಕಛೇರಿ/ಕರ್ನಾಟಕ ಒನ್/ಗ್ರಾಮ ಒನ್/ ಶಿವಮೊಗ್ಗ ಒನ್ ಹಾಗೂ ಇತರೆ ನಾಗರೀಕ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಕ್ ಇ-ದೃಢೀಕರಣ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.

ವಿದ್ಯಾರ್ಥಿಗಳು ನಾಗರೀಕ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಇ-ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯಾವುದೇ ಹಣ ಪಾವತಿಸುವಂತಿಲ್ಲ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ತಪ್ಪಿದಲ್ಲಿ ವಿದ್ಯಾರ್ಥಿ ವೇತನ ಮಂಜೂರಾಗುವುದಿಲ್ಲ ಎಂದು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ ತಾಲ್ಲೂಕು ಇವರು ತಿಳಿಸಿದ್ದಾರೆ.

Prerana Shivamogga Institute ಕಾಯಿಲೆಯನ್ನು ಪ್ರಾರಂಭದಲ್ಲೇ ಪತ್ತೆಹಚ್ಚಿದರೆ ಮುಂದಾಗುವ ಅನಾಹುತ ತಪ್ಪಿಸಬಹುದು- ಡಿ.ಬಿ.ಗಂಗಪ್ಪ

0

Prerana Shivamogga Institute ಪ್ರತಿಯೊಬ್ಬರೂ ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಡಿ.ಬಿ.ಗಂಗಪ್ಪ ಹೇಳಿದರು.
ಭಾವಸಾರ ವಿಷನ್ ಇಂಡಿಯಾ ಪ್ರೇರಣಾ ಶಿವಮೊಗ್ಗ ಸಂಸ್ಥೆ ಹಾಗೂ ಸಹ್ಯಾದ್ರಿ ನಾರಾಯಣ ಹೃದಯಾಲಯದ ಸಹಯೋಗದಲ್ಲಿ ನ್ಯಾಮತಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ದಂತ ತಪಾಸಣೆ ಹಾಗೂ ಹೃದಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಆರೋಗ್ಯ ಸಂಪತ್ತು ಜೀವನದಲ್ಲಿ ಬಹಳ ಮುಖ್ಯ. ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಾಗ ಮುಂದೆ ಆಗುವ ಅನಾಹುತ ತಪ್ಪಿಸಬಹುದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಪದ್ಧತಿ, ಜೀವನಶೈಲಿ, ಒತ್ತಡ, ಪರಿಸರದ ತಾಪಮಾನ ಏರಿಳಿತದಿಂದ ಕಾಯಿಲೆಗಳು ನಮಗೆ ಗೊತ್ತಿಲ್ಲದ ಹಾಗೆ ಬರುತ್ತವೆ. ಆದ್ದರಿಂದ ನಾವುಗಳು ಆಗಾಗ ಆರೋಗ್ಯವನ್ನು ನುರಿತ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.
ನಾರಾಯಣ ಹೃದಯಾಲಯದ ಡಾ. ನಂದಾ ಮಾತನಾಡಿ, ಮಕ್ಕಳು ಬಾಲ್ಯದಲ್ಲೇ ವಿದ್ಯಾಭ್ಯಾಸದ ಜತೆಗೆ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ದೈಹಿಕ ಚಟುವಟಿಕೆ, ಉತ್ತಮ ಆರೋಗ್ಯ ಸೇವನೆ, ಯೋಗ ಪ್ರಾಣಾಯಾಮ ಧ್ಯಾನದ ಕಡೆ ಗಮನಹರಿಸಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾವಸಾರ ವಿಷನ್ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಉಮಾ ವೆಂಕಟೇಶ್ ಮಾತನಾಡಿ, ಸಂಸ್ಥೆ ವತಿಯಿಂದ ಈಗಾಗಲೇ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಜೊತೆಗೆ ಗ್ರಾಮೀಣ ಪ್ರದೇಶ ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಸಮಾಜಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು. ಸಹ್ಯಾದ್ರಿ ನಾರಾಯಣ ಹೃದಯಾಲಯದ ವೈದ್ಯರ ತಂಡಕ್ಕೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
Prerana Shivamogga Institute ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದ್ದು, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಹಲ್ಲುಗಳನ್ನ ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ಪಡೆದರೆ ಮುಂದೆ ಬರುವ ತೊಂದರೆ ನಿವಾರಿಸಬಹುದು ಎಂದರು.
ಮಕ್ಕಳ ತಜ್ಞ ಡಾ. ನಿತಿನ್, ಹೃದಯರೋಗ ತಜ್ಞ ಡಾ. ಮನೋಹರ್, ಶಿವರಾಜ್ ಹೊಮ್ಮರಡಿ, ರವಿ ತೋಂಟದಾರ್ಯ, ಅರವಿಂದ ಕೋರಿ, ಮಾಲತೇಶ ರೆಟ್ಟಿ, ಎಚ್.ಶಕುಂತಲಾ, ಡಿ.ಶಂಕರಪ್ಪ, ಶೋಭಾ, ಕಾವ್ಯಾ, ಮಾನಸ ಇತರರಿದ್ದರು.

Klive News Special ಅವಧೂತ ಭಾವದ ಅನುಭವ ಯಾವಾಗ ? ಹೇಗೆ? ಚಿಂತನ. ಲೇ:ನಂಜುಂಡ ಪ್ರಸಾದ್ ದಾವಣಗೆರೆ

0

Klive News Special ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ ಅಮೂಲ್ಯ ರತ್ನಗಳ ರತ್ನಾಕರ. ರಾಜಕೀಯ, ಇತಿಹಾಸ, ತರ್ಕ, ಶಾಸ್ತ್ರ, ವೇದ, ಉಪನಿಷತ್ ಹಾಗೆಯೇ ತಾತ್ತ್ವಿಕ ರಾಷ್ಟ್ರ. ಒಮ್ಮೆ ಭಾರತದ ಹಿರಿಮೆಯನ್ನು ಕಂಡು ದೊಡ್ಡ ತಾತ್ವಿಕರಿದ್ದಾರೆ ಎಂದು ಬಂದ ಪರಕೀಯರೊಬ್ಬರು ಯಾವುದೇ ಅಧ್ಯಾತ್ಮ‌ ಸಾಧಕರನ್ನು ಕಾಣದೇ, “shit..! Every begger is the saint in india” ಎಂದು ನಿರಾಶನಾಗಿ, ಹಿಂತಿರುಗುವಾಗ ಮಹರ್ಷಿ ರಮಣರನ್ನು ಕಂಡು, ಅವರ ಆಧ್ಯಾತ್ಮಿಕ ಸಂಪತ್ತನ್ನು ಕಂಡು ವಿದೇಶದಲ್ಲಿ ಭವ್ಯ ಭಾರತದ ಆಧ್ಯಾತ್ಮಿಕ ಹಿರಿಮೆಯನ್ನು ಸಾರಿದೆ.

ಅವನು‌ ಹಾಗೆ ಹೇಳಿದ್ದರಲ್ಲಿ ಅರ್ಥವಿದೆ. ಏಕೆಂದರೆ ಭಾರತವು  ಆಗ ಆರ್ಥಿಕವಾಗಿ ಬಡರಾಷ್ಟ್ರವಾಗಿತ್ತು. ಬಡತನ ಅಧ್ಯಾತ್ಮದ ತವರು ಎಂಬ ನಾಣ್ಣುಡಿಯಿದೆ. ಅದಕ್ಕೆ ಪೂರಕವಾಗಿ ನಮ್ಮಲ್ಲಿ ಹೆಚ್ಚು ಸಾಧು ಸಂತರು ಕೇವಲ ಕಾಷಾಯಧಾರಿಗಳಾಗಿ, ಕೌಪೀನಧಾರಿಗಳಾಗಿ ಕಂಡರೆ ಇನ್ನೂ ಹಲವರು ಹುಚ್ಚರಂತೆ ಎಲ್ಲರಿಗೆ ಬೈಯ್ಯುತ್ತಾ, ಕೆಲವೊಮ್ಮೆ ಮೌನಿಗಳಾಗಿ, ಅರ್ಥವೇ ಆಗದಂತಹ ಅವಧೂತರು ಕಾಣ ಸಿಗುವುದು ಭಾರತದಲ್ಲಿ ಮಾತ್ರ. ಏಕೆಂದರೆ ಅಲೌಕಿಕ ಸಂಪತ್ತಿನ ಅನಾವರಣವಾಗುವುದು ಇಲ್ಲಿಯೇ…. ಸಹಜವಾಗಿ ಮನುಷ್ಯನಿಗೆ ನಿಜವಾದ ಸಂತೋಷ ಕೊಡುವ ವಸ್ತು ಯಾವುದು ಎಂದರೆ ಹಲವು ಉತ್ತರಗಳು ಬರುತ್ತವೆ.‌ದುಡ್ಡು, ಅಂತಸ್ತು,‌ಅಧಿಕಾರ, ಪದವಿ ಹೀಗೆ ಆದರೆ ಒಂದು ರೀತಿಯಲ್ಲಿ ಇದೆಲ್ಲವೂ ಹಂಗು ಹಾಗೂ ಒಮ್ಮೆ ಇಲ್ಲದಂತಾದಾಗ ದುಃಖ ಸಮುದ್ರದ ಅಲೆಯಂತೆ ಅಪ್ಪಳಿಸಿ ನಮ್ಮನ್ನು ಬೀಳಿಸಿಬಿಡುತ್ತದೆ. ಇದಕ್ಕೆ ಭರತನ ಭ್ರಾತೃತ್ವ, ಪಾಂಡವರ ವನವಾಸ, ಹನುಮನ ಭಕ್ತಿ ಎಲ್ಲವೂ ಒಟ್ಟಿಗೆ ಕಂಡು ದತ್ತ ಅವಧೂತನಿಂದ ಪ್ರಾರಂಭವಾಗಿ, ಸಾವಿರಾರು ಕಂಡರಿಯದ, ಕೇಳರಿಯದ ನಿಗೂಢವಾಸದಲ್ಲಿರುವ ಇಂದಿಗೂ ಸಾವಿರಾರು ವರ್ಷಗಳಿಂದ ಬದುಕಿರುವ ಸಾಧನೆ ಮಾಡುತ್ತಿರುವ ಮುನಿಗಳನ್ನು ನಾವು ಹಿಮಾಲಯದ ತಪ್ಪಲಿನಲ್ಲಿ ಕಾಣಬಹುದು… ಆದರೆ ಅವರನ್ನು ಸಂಧಿಸಲು ನಮ್ಮಿಂದ ಅಸಾಧ್ಯ ಎಂಬ ಮಾತೂ ಕೂಡಾ ಹಲವರಿಂದ ಕೇಳಿದ್ದೇನೆ.

ಈ ಅವಧೂತನೆಂದರೆ ಯಾರು ಎಂದು ನೋಡುತ್ತಿರುವಾಗ ಬ್ರಹ್ಮಾನಂದದಲ್ಲಿ ಯಾವಾಗಲೂ ಜ್ಞಾನಸಿಂಧುವಾಗಿ, ಮಾತನಾಡಿದಲ್ಲಿ ಕೇವಲ ತತ್ತ್ವವಿಚಾರ, ಪ್ರತಿಯೊಬ್ಬರೂ ತಲೆಬಾಗಿ ಅವನಲ್ಲಿ‌ ಜಾಗ್ರತರಾಗುವಂತಹ ಹಾಗೂ ಆಧ್ಯಾತ್ಮಿಕತೆಯೆಲ್ಲ ಪೊಳ್ಳು ಎನ್ನುವವರಿಗೆ ಅರೆಹುಚ್ಚರಂತೆ ಕಾಣುವ, ಉಪನಿಷತ್‌ಗಳಲ್ಲಿ ಬ್ರಹ್ಮ ಎಂದರೇನು ಎಂದು ತಿಳಿಸುವ, ಯಾವಾಗಲೂ ಬಾಲ-ಭಾವದಲ್ಲಿರುವ, ತನ್ನ ಮುಗ್ಧ ನಗೆಯಿಂದ ಜಗತ್ತು ಸೆಳೆಯುತ್ತಾ ತಮ್ಮ ದೇಹದ ಅಸ್ತಿತ್ವ ಹೋದ‌ ಮೇಲೆಯೂ ಪ್ರಭಾವ ಬೀರುವವರು.

ಮೊದಲಿನಿಂದ ನನ್ನ ಅಪ್ಪನೊಡನೆ ಬೆಳೆದ ನಾನು ಆಗಾಗ ಅವರು ತಿಳಿಸುತ್ತಿದ್ದ, ಅವರ ಗುರುಗಳ ಬಗ್ಗೆ ಕೇಳಿದ್ದೆ. ಆಗ ನಾನಿನ್ನೂ ಹತ್ತು-ಹನ್ನೆರಡು ವಯಸಿನವನಾದ್ದರಿಂದ ನನಗೆ ಅದರ ಅರ್ಥವಾಗಿರಲಿಲ್ಲ. ಅವರೊಟ್ಟಿಗೆ ಹಸು ಮೇಯಿಸಲು ಹೋಗುತ್ತಿದ್ದುದು ಕೂಡಾ ಅಧ್ಯಾತ್ಮ ಲೋಕದ ಹಲವಾರು ಅಚ್ಚರಿಗಳನ್ನು ತಿಳಿಯಲೇ ಎಂದರೆ ತಪ್ಪಾಗಲಾರದು. ಹೀಗಿರುವಾಗ ಒಮ್ಮೆ ಅವರು ಅವರ ಸ್ನೇಹಿತರಿಗೆ ಅವಧೂತ ಬಿಷ್ಟಪ್ಪಯ್ಯನವರ ಬಗ್ಗೆ ಮಾತನಾಡಿದ್ದು ಕೇಳಿದೆ.

Klive News Special ಈಗಿನ ರಾಯಲ ಸೀಮೆ ಅಥವಾ ಸೀಮಾಂಧ್ರದ ಗಡಿಯ ಹದಿನಾಲ್ಕು ಹಳ್ಳಿಗಳ ಒಡೆಯರಾಗಿದ್ದ ಅವರು. ಜೀವನ ಶೈಲಿಯಲ್ಲಿ ಮಹಾರಾಜನನ್ನೂ ಮೀರಿಸುವವರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರಿಗಿದ್ದ ಆಸ್ತಿಗಳನ್ನು ಕೇಳಿದರೆ ಇಂದಿನ ವಿಶ್ವದ ಬಿಲೇನಿಯರ್ ಕೂಡಾ ಅವರ ಸರಿಸಮಾನವಿಲ್ಲ. ಐದು ಸಾವಿರ ಕುರಿಗಳು, ಒಂದು-ಒಂದೂವರೆ ನೂರು ಹಸುಗಳು, ಸುಮಾರು ಮೂರು ಸಾವಿರ‌ ಎಕರೆ ಭೂಮಿಯ ಒಡೆಯರು. ಮೂರು ಅಂತಸ್ತಿನ ಮಾಳಿಗೆ ಮನೆ, ಹತ್ತಾರು ಆಳುಕಾಳು, ಸುಖವಾದ ಸಂಸಾರ. ಅಷ್ಟೇ ದಾನ-ಧರ್ಮ ಕೂಡಾ ಅಲ್ಲಿ ನಡೆಯುತ್ತಿತ್ತು. ಹೀಗೇ ಅವರ ದರ್ಬಾರ ನಡೆಯುತ್ತಿರಲು ಒಂದು ದಿನ ಇದ್ದಕ್ಕಿದ್ದಂತೆ ಅವರ ಕುರಿ ಮತ್ತು ಹಸುಗಳು ಅಷ್ಟೂ ಸತ್ತು ಹೋಗುತ್ತವೆ. ಇದರ ವ್ಯಾಕುಲತೆಯಲ್ಲಿದ್ದಾಗಲೇ ಅವರ ತೋಟ, ಗದ್ದೆಗಳು ಹಾಳಾಗುತ್ತವೆ.  ಅಂಥ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿ ಊಟ ಮುಗಿಸಿ ಚಿಂತಾಕ್ರಾಂತರಾಗಿ ತೂಗುಯ್ಯಾಲೆಯ ಮೇಲೆ ಕುಳಿತಿದ್ದಾಗ, ಅವರ ಪತ್ನಿ ತಾಂಬೂಲವನ್ನು ಅವರಿಗೆ ನೀಡುತ್ತಿದ್ದರು. ಮಧ್ಯಾಹ್ನ 12-12.30 ರ ಸಮಯ. ಮನೆ ಬಾಗಿಲಿಗೆ ಒಬ್ಬ ದಾಸಯ್ಯ ಬರುತ್ತಾನೆ. ಸಾಮಾನ್ಯವಾಗಿ ಅವರು ಇತ್ತೀಚೆಗೆ ಬರುವುದಿಲ್ಲ. ಹಾಗೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಬಂದ ದಾಸಯ್ಯ ಗೋವಿಂದ ಕೀರ್ತನೆಯನ್ನು ಹಾಡುತ್ತಾನೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು. ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು- ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ಹಾಡಿದ ತಕ್ಷಣ ಬಿಷ್ಟಪ್ಪಯ್ಯನವರು ಎಚ್ಚರಾಗಿ. ಇನ್ನೊಮ್ಮೆ ಹೇಳಲು ದಾಸಯ್ಯ ಹಾಡಿದ ಇದೇ ರೀತಿ ಮೂರು-ನಾಲ್ಕು ಬಾರಿ ಹಾಡಿಸಿ ಪತ್ನಿಗೆ ಹೇಳಿದರು “ಅವನಿಗೆ ಏನಾದರೂ ಕೊಡು” ಐಶ್ವರ್ಯವಂತರಿಗೆ ಬರವೇ…? ಯಥೇಚ್ಚ ಭಿಕ್ಷೆ ನೀಡಿದರು. ಅವನು‌ ಮುಂದೆ ಹೋದ.

ನಂತರ ಇವರು ಒಮ್ಮೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು ” ಎನ್ನುತ್ತಾ ಮನೆಯನ್ನೂ, ಒಡವೆ ವಸ್ತುಗಳನ್ನೂ ನೋಡಿ ತಲೆಕೊಡವಿ ನಕ್ಕು, ಅವರ‌ ಕೈ-ಕೊರಳಿನಲ್ಲಿದ್ದ ಎಲ್ಲ ವಸ್ತುಗಳನ್ನೂ ಬಿಚ್ಚಿಟ್ಟು, ” ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು” ಎನ್ನುತ್ತಾ ಜೇಬಿನಲ್ಲಿದ್ದ ದುಡ್ಡನ್ನು ಕೆಳಗಿಟ್ಟು ” ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ನಾನಸ್ಮರಣೆ ಮಾಡುತ್ತಾ ಹೊರಟು ಹೋದವರು ಮತ್ತೆ ಮನೆಗೆ ಬರಲೇ ಇಲ್ಲ. ದೊಡ್ಡ ಅವಧೂತರಾಗಿ ಹಲವರಿಗೆ ಮನೋಭೀಷ್ಟಗಳನ್ನೀಡೇರಿಸಿದರು.

ಭಾಗವತದಲ್ಲಿ ಉದ್ಧವನಿಗೆ ” ಯಸ್ಯಾನುಗ್ರಹಮಿಚ್ಛಾಮಿ ತಸ್ಯ ಸರ್ವಂ ಹರಾಮ್ಯಮ್ ” ಎಂದು ಕೃಷ್ಣನು ತಿಳಿಸುತ್ತಾನೆ. ಆದ್ದರಿಂದ ಕಷ್ಟಗಳು ಬರುವಾಗ ಭಗವಂತನ ನೆನಪಾಗಬೇಕು, ಅವನಿಗೆ ಹತ್ತಿರವಾಗಬೇಕು ಎಂಬುದು ನಮ್ಮ ಬುದ್ಧಿಗೆ ಗೋಚರವಸಗಬೇಕು. ಅವಧೂತರಲ್ಲಿಯೂ ಹೊಟ್ಟೆಪಾಡಿನವರು ಬಹಳ ಕಾಣಿಸುತ್ತಾರೆ. ಮೋಸ ಹೋಗುವ ಸಾಧ್ಯತೆಯಿರುತ್ತದೆ. ಆದ್ಧರಿಂದ ಅವಧೂತರೆಂದು ನಂಬಿ ಹೋಗುವ ಮೊದಲು ಅವಧೂತರು ಹೇಗಿರುತ್ತಾರೆ ಎಂದು ತಿಳಿದು ನಂತರ ಹೆಜ್ಜೆಯಿಡಬೇಕು.

Karnataka Slum Development Board ಕೊಳೆಗೇರಿಯ 15 ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ಶಾಸಕ ಚೆನ್ನಿ ಪರಿಶೀಲನಾ ಭೇಟಿ

0

Karnataka Slum Development Board ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ವತಿಯಿಂದ ಬಾಕಿ ಇರುವಂತ 15 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಶಿವಮೊಗ್ಗ ನಗರದ ಬಸ್ ಸ್ಟ್ಯಾಂಡ್ ಹಿಂಭಾಗದಲ್ಲಿರುವ ಬುದ್ಧ ನಗರಕ್ಕೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಉಪ ವಿಭಾಗ (AC) ಅಧಿಕಾರಿಯೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Karnataka Slum Development Board ಈ ಸಂದರ್ಭದಲ್ಲಿ ಬಾಕಿ ಇರುವಂತಹ ಫಲಾನುಭವಿಗಳಿಗೆ ಸ್ಪಂದಿಸಿ, ಶೀಘ್ರದಲ್ಲಿ ಹಕ್ಕುಪತ್ರ ವಿತರಿಸುವಂತೆ ಸೂಚಿಸಿದರು.

Hasanamba Temple ವರ್ಷಕ್ಕೊಮ್ಮೆ ಹಾಸನಾಂಬೆ ದರ್ಶನ. ಅಕ್ಟೋಬರ್ 24 ರಿಂದ ದೇಗುಲ ತೆರೆಯಲಾಗಿದೆ

0

Hasanamba Temple ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು ಈ ಬಾರಿ 24 ಗಂಟೆಯೂ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.
ಹಾಸನಾಂಬೆ ದೇಗುಲದ ಗರ್ಭಗುಡಿ ಬಳಿ ಪೂಜೆ ಮಾಡಿ ಅರಸು ಕುಟುಂಬಸ್ಥರು ಬಾಳೆ ಗಿಡ ಕಡಿದ ನಂತರ ದೇಗುಲದ ಬಾಗಿಲು ಓಪನ್ ಮಾಡಲಾಗಿದ್ದು ನಾಳೆಯಿಂದ 9 ದಿನಗಳ ಕಾಲ ನವೆಂಬರ್ 3ರವರೆಗೆ ಹಾಸನಾಂಬೆಯ ದರ್ಶನವಿರಲಿದೆ.

Hasanamba Temple ಈ ಬಾರಿ 24 ಗಂಟೆಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 3 ರವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಕಲ ಸಿದ್ದತೆ ಮಾಡಿಕೊಂಡಿದೆ.
ದೇಗುಲದ ಬಾಗಿಲು ತೆರೆಯುವ ವೇಳೆ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಸಚಿವ ಕೆ.ಎನ್ ರಾಜಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

Mysore Urban Development Authority ಮೂಡಾ ಹಗರಣ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಸಿದ್ಧರಾಮಯ್ಯ ಹೈ. ವಿಭಾಗೀಯ ಪೀಠಕ್ಕೆ ಮೇಲ್ಮನವಿ

0

Mysore Urban Development Authority ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದರು. ಇದನ್ನು ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಸೆಪ್ಟೆಂಬರ್‌ 24ರ ವಜಾಗೊಳಿಸಿತ್ತು.

ಸಿಎಂ ಸಿದ್ದರಾಮಯ್ಯ ಅವರು ಇಂದು ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಏಕಸದಸ್ಯ ಪೀಠದ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಮತ್ತೊಂದು ಕಡೆ ಇಡಿ PMLA ಕಾಯ್ದೆಯಡಿ ECIR ದಾಖಲಿಸಿದೆ.

Mysore Urban Development Authority ಇದು ಇತರ ಕೆಲವು ಬಲವಂತದ ಕ್ರಮಗಳ ಜೊತೆಗೆ ಸಿಎಂ ಮತ್ತು ಅವರ ಕುಟುಂಬಕ್ಕೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ಅಧಿಕಾರ ಇಡಿ ಇದೆ.

ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿಎಂ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Belekeri Adiru ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ. ಕಾಂಗ್ರೆಸ್ ಶಾಸಕ ಸತೀಷ್ ಸೈಲ್ ದೋಷಿ.ಕೋರ್ಟ್ ತೀರ್ಪು

0

Belekeri Adiru ನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ. ಅಲ್ಲದೇ ಎಲ್ಲಾ ಅಪರಾಧಿಗಳನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲೇ ಸಿಬಿಐ ಅಧಿಕಾರಿಗಳು ಸೈಲ್ ರನ್ನು ವಶಕ್ಕೆ ಪಡೆದಿದ್ದಾರೆ.

ಮುಟ್ಟುಗೋಲು ಹಾಕಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಹಾಗೂ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದು ಶಿಕ್ಷೆ ಪ್ರಮಾಣವನ್ನು ನಾಳೆ (ಅಕ್ಟೋಬರ್ 25) ಕಾಯ್ದಿರಿಸಿದ್ದಾರೆ.

Belekeri Adiru ಒಟ್ಟು 6 ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಅಂತಿಮ ಆದೇಶ ಹೊರಡಿಸಿದೆ. ಬೇಲೇಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಸಂಬಂಧ ತನಿಖೆ ನಡೆಸಿದ್ದ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದೀಗ ಕೋರ್ಟ್ ಆವರಣದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.

Yasir Ahmad Khan Pathan ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಪಠಾಣ್ ಆಯ್ಕೆ. ಕಾರ್ಯಕರ್ತರಲ್ಲಿ ಅಸಮಾಧಾನದ ಅಲೆ?

0

Yasir Ahmad Khan Pathan ರಾಜ್ಯದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದ್ದು, ಪಕ್ಷದ ನಾಯಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಆಯ್ಕೆ ಮಾಡಿದೆ. ಇದಕ್ಕೂ ಮೊದಲು ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.

ಕಾಂಗ್ರೆಸ್ನಿಂದ ಯಾಸೀರ್ ಅಹ್ಮದ್ ಖಾನ್ ಪಠಾಣ್ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದ್ದು, ಕಳೆದ ಬಾರಿ ಬಸವರಾಜ್ ಬೊಮ್ಮಾಯಿ ಎದುರು ಅವರು 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.

ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡುವುದಿಲ್ಲ ಎಂದು ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆ ನಡೆದಿತ್ತು. ಅದಾಗ್ಯೂ, ಕೊನೆಗೂ ಯಾಸೀರ್ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿಗ್ಗಾಂವಿ ಉಪ ಚುನಾವಣೆ
ಯಾಸೀರ್ ಅವರು ಎರಡನೇ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

Yasir Ahmad Khan Pathan ಅವರ ತಾಯಿ ಕೂಡ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಮುಸ್ಲಿಮರ ಮತಗಳು ಗಣನೀಯವಾಗಿದ್ದು 30%ಕ್ಕಿಂತ ಹೆಚ್ಚಿವೆ. ಜೊತೆಗೆ ಬೊಮ್ಮಾಯಿ ವಿರುದ್ಧ ಕ್ಷೇತ್ರದಲ್ಲಿ ಅಸಮಾಧಾನ ಹೆಚ್ಚಾಗಿವೆ. ಹಾಗಾಗಿ ಅವರ ಗೆಲುವು ಸುಲಭವಾಗಿರುತ್ತದೆ ಎಂದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲು ಬಯಸಿದ್ದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರಿದ್ದರು ಎಂದು ವರದಿಯಾಗಿತ್ತು. ಒಂದು ವೇಳೆ ಮುಸ್ಲಿಮೇತರರಿಗೆ ಟಿಕೆಟ್ ನೀಡಿದ್ದರೆ ಮುಸ್ಲಿಮರ ಅಸಮಾಧಾನಕ್ಕೂ ಗುರಿಯಾಗುವ ಭಯ ಕಾಂಗ್ರೆಸ್‌ಗೆ ಇತ್ತು.

S.N.Chennabasappa ಜಲಶುದ್ಧೀಕರಣ ಘಟಕಕ್ಕೆ ಶಾಸಕ ಚೆನ್ನಿ ದಿಢೀರ್ ಭೇಟಿ, ಪರಿಶೀಲನೆ ತುರ್ತು ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚನೆ

0

S.N.Chennabasappa ಶುದ್ಧ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ನ್ಯೂ ಮಂಡ್ಲಿಯ ಕೃಷ್ಣರಾಜೇಂದ್ರ ವಾಟರ್ ಪಂಪ್ ಹೌಸ್ ಗೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮತ್ತೊಮ್ಮೆ ದಿಢೀರ್ ಭೇಟಿ ನೀಡಿ, ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಾಯಿತು.

S.N.Chennabasappa ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ತಕ್ಷಣದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು, ಶುದ್ಧ ನೀರಿನ ಪೂರೈಕೆಗೆ ಅಗತ್ಯವಾದ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

Department Of Skill Development ಜಿಲ್ಲೆಯ ಅರ್ಹ ಪ.ಜಾ/ಪ.ಪಂಗಡಗಳ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ ತರಬೇತಿಗೆ ಅರ್ಜಿ ಆಹ್ವಾನ

0

Department Of Skill Development ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್(ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸುವ ಜಿಲ್ಲೆಯ ಪ.ಜಾತಿ/ಪ.ಪಂಗಡದ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ 10 ದಿನಗಳ ಉದ್ಯಮಶೀಲಾಭಿವೃದ್ದಿ ತರಬೇತಿ ಕಾರ್ಯಕ್ರಮನ್ನು ನ.15 ರಿಂದ 26 ರವರೆಗೆ ಆಯೋಜಿಸಲಾಗುವುದು.
ಶಿಬಿರಾರ್ಥಿಗಳಿಗೆ ಉದ್ಯಮ ನಿರ್ವಹಣೆ, ಸರ್ಕಾರದ ಸ್ವಯಂ ಉದ್ಯೋಗ, ಉದ್ಯಮಾವಕಾಶ ಕುರಿತು ಪರಿಣಿತ ಅತಿಥಿ ಬೋಧಕರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು.

ಕೈಗಾರಿಕಾ ಭೇಟಿ ಮಾಡಿಸಲಾಗುವುದು.
18 ರಿಂದ 55 ವಯೋಮಿತಿ ಒಳಗಿನ 10 ನೇ ತರಗತಿ ಪಾಸಾದ ಪ.ಜಾತಿ/ಪ.ಪಂ ಮಹಿಳಾ ಉದ್ಯಮಾಕಾಂಕ್ಷಿಗಳು ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ, ಅವಿನಾಶ್ ಎ, ಸಿಡಾಕ್ ತರಬೇತುದಾರರು ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

Department Of Skill Development ಅರ್ಜಿಯೊಂದಿಗೆ 2 ಪಾಸ್‌ಪೋರ್ಟ್ ಅಳತೆ ಫೋಟೊ ಹಾಗೂ ಆಧಾರ್ ಕಾರ್ಡ್ನ ಪ್ರತಿ ಸಲ್ಲಿಸಬೇಕು. ತರಬೇತಿ ಉಚಿತವಾಗಿದ್ದು ತರಬೇತಿ ವೇಳೆ ಊಟೋಪಚಾರ ಒದಗಿಸಲಾಗುವುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.